ವಿಷಯಕ್ಕೆ ಹೋಗು

ಗ್ರಹ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೌರವ್ಯೂಹದೊಳಗೆ ಇರುವ ಗ್ರಹಗಳು ಮತ್ತು ಕುಬ್ಜಗ್ರಹಗಳು(ಗಾತ್ರಗಳು ತುಲನಾತ್ಮಕ ದೂರವಲ್ಲ)
ಒಳ ಸುತ್ತಿನ ಗ್ರಹಗಳು.ಎಡದಿಂದ ಬಲಕ್ಕೆ: ಬುಧಗ್ರಹ, ಶುಕ್ರ, ಭೂಮಿಮತ್ತು ಮಂಗಳ ವಾಸ್ತವಿಕೆ ಬಣ್ಣದಲ್ಲಿ. (ಗಾತ್ರಗಳು ತುಲನಾತ್ಮಕವಾಗಿವೆ,ದೂರಗಳಲ್ಲ)
ಸೂರ್ಯನ ಹಿನ್ನಲೆಯಲ್ಲಿ ನಾಲ್ಕು ಅನಿಲ ದೈತ್ಯರು:ಗುರು ಶನಿ,ಯುರೇನಸ್ ಮತ್ತು ನೆಪ್ಚೂನ್ (ಗಾತ್ರಗಳು ತುಲನಾತ್ಮಕ, ದೂರವಲ್ಲ)

ಗ್ರಹ ಯಾವುದೇನಕ್ಷತ್ರ ಕ್ಷೇತ್ರ ದೊಳಗೆ ಆ ನಕ್ಷತ್ರವನ್ನು ಪರಿಭ್ರಮಿಸುತ್ತಿರುವ ಒಂದು ಘನಕಾಯ. ಪ್ರತಿಯೊಂದು ಗ್ರಹವೂ ಮಾತೃ ನಕ್ಷತ್ರದಿಂದ ತನ್ನ ಮೇಲೆ ಬೀಳುವ ವಿಕಿರಣವನ್ನು ಪ್ರತಿಫಲಿಸಿ ತನ್ನ ಇರುವನ್ನು ಪ್ರಕಟಿಸುತ್ತದೆ. ಸೂರ್ಯನಿಗೆ ಎಂಟು ಗ್ರಹಗಳಿವೆ. ಸೂರ್ಯನಿಂದ ಅವುಗಳು ಇರುವ ದೂರಾನುಸಾರ ಇವು: ಬುಧ,ಶುಕ್ರ,ಭೂಮಿ,ಮಂಗಳ,ಗುರು,ಶನಿ,ಯುರೇನಸ್ ಮತ್ತು ನೆಪ್ಚೂನ್. ಪ್ಲುಟೋ ಸೇರಿದರೆ ಒಂಭತ್ತು ಗ್ರಹಗಳಾಗುವುವು.

ಸೌರಮಂಡಲದ ಹೊರಗಿನ ಗ್ರಹ

[ಬದಲಾಯಿಸಿ]
  • ಹೊಸ ಸಂಶೋಧನೆ :2022
  • ವಾಷಿಂಗ್ಟನ್‌ನಿಂದ ಬಂದ ವರದಿಯಂತೆ, ಮೂರು ಸೂರ್ಯರ (ನಕ್ಷತ್ರಗಳ) ಸುತ್ತ ತಿರುಗುತ್ತಿರುವ ಬೃಹತ್‌ ಗ್ರಹವೊಂದನ್ನು ಖಗೋಳ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ವಿಶೇಷ ಎಂದರೆ ಈ ಗ್ರಹದಲ್ಲಿ ಪ್ರತಿ ದಿನ ತಲಾ ಮೂರು ಸಲ ಸೂರ್ಯೋದಯ ಮತ್ತು ಸೂರ್ಯಾಸ್ತ ಸಂಭವಿಸುತ್ತವೆ! ಭೂಮಿಯಿಂದ 340 ಜ್ಯೋತಿರ್‌ವರ್ಷಗಳಷ್ಟು ದೂರ ಇರುವ ಈ ಗ್ರಹವು ಗಾತ್ರದಲ್ಲಿ ಗುರುಗ್ರಹಕ್ಕಿಂತ ನಾಲ್ಕು ಪಟ್ಟು ದೊಡ್ಡದಾಗಿದೆ ಮತ್ತು ನಾಲ್ಕು ಪಟ್ಟು ಹೆಚ್ಚು ದ್ರವ್ಯರಾಶಿ ಹೊಂದಿದೆ. ಸೆಂಟೌರಸ್‌ ತಾರಾ ಪುಂಜದಲ್ಲಿರುವ ಈ ಗ್ರಹಕ್ಕೆ ‘ಎಚ್‌ಡಿ 131399ಎಬಿ’ ಎಂದು ಹೆಸರಿಡಲಾಗಿದೆ.
  • ಇದು 1.6 ಕೋಟಿ ವರ್ಷಗಳ ಹಿಂದೆ ಸೃಷ್ಟಿಯಾಗಿರಬಹುದು ಎಂಬುದು ವಿಜ್ಞಾನಿಗಳ ಊಹೆ. ಇದು ಸೌರ ಮಂಡಲದ ಹೊರಗೆ ಪತ್ತೆಯಾದ ಯುವ ಗ್ರಹಗಳಲ್ಲಿ ಒಂದು. ಅಲ್ಲದೇ ಭೂಮಿಯಿಂದ ನೇರವಾಗಿ ಚಿತ್ರ ಸೆರೆಹಿಡಿಯಲು ಸಾಧ್ಯವಾದ ಕೆಲವೇ ಕೆಲವು ಗ್ರಹಗಳಲ್ಲೂ ಒಂದಾಗಿದೆ. ಇದರ ವಾತಾವರಣದ ಉಷ್ಣತೆ 580 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಮೆರಿಕದ ಅರಿಜೋನಾ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡೇನಿಯಲ್‌ ಅಪೈ ಅವರ ಅಧ್ಯಯನ ತಂಡದಲ್ಲಿರುವ ಪಿಎಚ್‌.ಡಿ ವಿದ್ಯಾರ್ಥಿ ಕೆವಿನ್‌ ವಾಗ್ನರ್‌ ಈ ಗ್ರಹವನ್ನು ಪತ್ತೆ ಹಚ್ಚಿದ್ದಾರೆ.
  • ‘ಗ್ರಹವು ಮೂರು ನಕ್ಷತ್ರಗಳ ಸುತ್ತ ಸುತ್ತುತ್ತಿದೆ. ಅವುಗಳಲ್ಲಿ ಎರಡು ನಕ್ಷತ್ರಗಳು ತುಂಬಾ ಸನಿಹದಲ್ಲಿದ್ದು, ಪರಸ್ಪರ ಗಿರಕಿ ಹೊಡೆಯುತ್ತ ಪ್ರಧಾನ ಮತ್ತು ದೊಡ್ಡ ನಕ್ಷತ್ರದ ಸುತ್ತ ತಿರುಗುತ್ತಿವೆ. ಪ್ರತಿ ದಿನ ಅಲ್ಲಿ ಮೂರು ಬಾರಿ ಸೂರ್ಯಾಸ್ತ, ಸೂರ್ಯೋದಯ ಆಗುತ್ತವೆ’ ಎಂದು ವಾಗ್ನರ್‌ ಹೇಳಿದ್ದಾರೆ.
  • ಪತ್ತೆ ಹಚ್ಚಲಾಗಿರುವ ಹೊಸ ಗ್ರಹೀಯ ವ್ಯವಸ್ಥೆಯಲ್ಲಿರುವ ಮೂರು ನಕ್ಷತ್ರಗಳನ್ನು ಎಚ್‌ಡಿ 131399ಎ, ಎಚ್‌ಡಿ 131399ಬಿ ಮತ್ತು ಎಚ್‌ಡಿ 131399ಎ ಎಂದು ಗುರುತಿಸಲಾಗಿದೆ. ಇವುಗಳಲ್ಲಿ ಎಚ್‌ಡಿ 131399ಎ ಪ್ರಧಾನ ನಕ್ಷತ್ರ. ಇದು ನಮ್ಮ ಸೂರ್ಯನಿಗಿಂತ ಶೇ 80 ರಷ್ಟು ದೊಡ್ಡದಾಗಿದೆ ಎಂದು ಅಂದಾಜಿಸಲಾಗಿದೆ. 131399ಬಿ ಮತ್ತು 131399ಸಿ ನಕ್ಷತ್ರಗಳ ನಡುವೆ, ಸರಿ ಸುಮಾರು ನಮ್ಮ ಸೂರ್ಯ ಮತ್ತು ಶನಿ ಗ್ರಹದ ನಡುವೆ ಇರುವಷ್ಟು ಅಂತರವಿದೆ. ಈ ಎರಡೂ ನಕ್ಷತ್ರಗಳು ತಮ್ಮ ಕಕ್ಷೆಯಲ್ಲಿ ಸುತ್ತುತ್ತಾ ಪರಸ್ಪರ ಗಿರಕಿ ಹೊಡೆಯುತ್ತಾ ಪ್ರಧಾನ ನಕ್ಷತ್ರವನ್ನು ಸುತ್ತು ಹಾಕುತ್ತಿವೆ. ಹೊಸ ಗ್ರಹವು 131399ಎ ಸುತ್ತ ಸುತ್ತುತ್ತಿದೆ. ನಮ್ಮ ಸೌರವ್ಯೂಹಕ್ಕೆ ಹೋಲಿಸಿದರೆ, ಇದರ ಕಕ್ಷೆಯು ಪ್ಲೂಟೊ ಹೊಂದಿರುವ ಕಕ್ಷೆಯ ಎರಡು ಪಟ್ಟು ಇದೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
ಪತ್ತೆ ವಿಧಾನ
  • ಸೌರವ್ಯೂಹದಾಚೆಗಿನ ಗ್ರಹಗಳನ್ನು ಪತ್ತೆ ಹಚ್ಚುವುದಕ್ಕಾಗಿಯೇ ರೂಪಿಸಲಾಗಿರುವ ಅತ್ಯಾಧುನಿಕ ಸಾಧನ ‘ಸ್ಪಿಯರ್‌’ನಲ್ಲಿ (ಸ್ಪೆಕ್ಟ್ರೊ ಪೊಲಾರಿಮೆಟ್ರಿಕ್‌ ಹೈ ಕಾಂಟ್ರಾಸ್ಟ್‌ ರಿಸರ್ಚ್‌ ಇನ್‌ಸ್ಟ್ರ್ಯುಮೆಂಟ್‌) ಇದು ಗೋಚರವಾಗಿದೆ. ಈ ಸಾಧನವು ಯೂರೋಪಿಯನ್‌ ಸದರ್ನ್‌ ಅಬ್ಸರ್ವೇಟರಿ (ಇಎಸ್‌ಒ) ನಿರ್ವಹಿಸುತ್ತಿರುವ, ಚಿಲಿಯಲ್ಲಿರುವ ದೊಡ್ಡ ದೂರದರ್ಶಕದ ಭಾಗವಾಗಿದೆ.[]

ಹೊಸ ಗ್ರಹಗಳು

[ಬದಲಾಯಿಸಿ]

18/11/2018

  1. ಗ್ರಹಗಳು ಅವುಗಳ ರಿಂಗ್ಸ್ ಗಳಿಂದ ತುಂಬಾ ಸುಂದರವಾಗಿ ಕಾಣುತ್ತದೆ ನಮ್ಮ ಸೌರವ್ಯೂಹದ ಗ್ರಹಗಳಾದ ಸ್ಯಾಟ್ರನ್ (ಶನಿಗ್ರಹ) ಯುರೇನಸ್, ನೆಪ್ಚೂನ್, ಜುಪಿಟರ್, ಗಳಲ್ಲಿ ಇಂತಹ ರಿಂಗ್ಸ್ ಗಳಿಸಿವೆ. ಅವುಗಳಲ್ಲಿ ಶನಿ ಗ್ರಹದ ರಿಂಗ್ಸ್ ಬಹಳ ದೂಡ್ಡದು.ನಮ್ಮ ಸೌರಮಂಡಲದ ಹೂರಗೆ ಹೋಸದಾಗಿ ಕಂಡುಹಿಡಿದ J1407B ಎಂಬ ಗ್ರಹದ ಮುಂದೆ ಶನಿಗ್ರಹ (ಸ್ಯಾಟ್ರನ್) ಮಂಕಾಗಿ ಕಾಣುತ್ತದೆ.ಈ J1407B ಗ್ರಹವು ಭೂಮಿಯಿಂದ 434 ಜ್ಯೋರ್ತಿರವರ್ಷಗಳಷ್ಟು ದೊರದಲ್ಲಿದೆ.ನಮ್ಮ ಜುಪಿಟರ್, ಸ್ಯಾಟ್ರನ್ (ಶನಿಗ್ರಹ) ಗಳಿಗಿಂತಲೂ ದೊಡ್ಡದಿದೆ. ಮತ್ತು ಶನಿಗ್ರಹದ ರಿಂಗ್ಸ್ ಗಳಿಗಿಂತಲೂ J1407B ಗ್ರಹದ ರಿಂಗ್ಸ್ ,200 ಪಟ್ಟು ಜಾಸ್ತಿ ಇದೆ.ಈ ಗ್ರಹವನ್ನು ವ್ಯಾಕ್ಸ ಪ್ರೋಗ್ರಾಂಮಿಂಗ್ಅಂತರಿಕ್ಷದಲ್ಲಿ ಅಲ್ಲದೆ ಭೂಮಿಯ ಮೇಲಿನ ಟೆಲಿಸ್ಕೋಪಿಕ್ ಸೆಂಟರ್ ನಿಂದು ಪತ್ತೆ ಹಚ್ಚಲಾಗಿದೆ. ಈ ಗ್ರಹದ ರಿಂಗ್ಸ್ ಗಳು ಮೇಲೆ ಭೂಮಿಗಿಂತ ಲೂ,ಅಥವಾ ಮಂಗಳ ಗ್ರಹಕ್ಕಿಂತಲೂ ದೂಡ್ಡದಾದ ಚಂದ್ರ ಇರಬಹುದು, ಅಷ್ಟಕ್ಕೂ ಈ ಗ್ರಹದ ಮೇಲೆ ಇಂತಹ ವಿಶಾಲವಾದ  ರಿಂಗ್ಸ್ ಗಳು ಹೇಗೆ ಉತ್ಪತ್ತಿಯಾದ ವೆಂದು ವಿಜ್ಞಾನಿಗಳಿಗೂ ಇದುವರೆಗೆ ತಿಳಿದಿಲ್ಲ.

ಲಿಂಡೆನ್ ಅಬಜರವೇಟೆರೆಯಾ ಖಗೋಳತಜ್ಜ ಮ್ಯಾಥ್ಯೂ ಕೆವಾ ಪ್ರಕಾರ ಈ J1407B ಗ್ರಹದ ರಿಂಗ್ಸ್ ಗಳು ಎಷ್ಟು ದೊಡ್ಡದಿವೆ ಎಂದರೆ ಒಂದು ವೇಳೆ ಈ ಗ್ರಹದ ರಿಂಗ್ಸ್ ಗಳು ನಮ್ಮ ಸೌರಮಂಡಳದ ಶನಿಗ್ರಹದ(ಸ್ಯಾಟ್ರನ್) ಸ್ಥಳದಲ್ಲಿ ಇರುತ್ತಿದ್ದರೆ ಆದರೆ ರಿಂಗ್ಸ್ ಗಳನ್ನು ಭೂಮಿಯಿಂದ ನಾವು ಬರಿಗಣ್ಣಿನಿಂದ ನೋಡಬಹುದ್ದಿತ್ತು. ಮತ್ತು ಈ ರಿಂಗ್ಸ್ ಗಳು ಚಂದ್ರನಿಗಿಂತ ಪ್ರಕಾಶಮಾನವಾಗಿರುತ್ತಿದ್ದವು.

2] HD188753PLANET

[ಬದಲಾಯಿಸಿ]

ಭೂಮಿಯು ಒಂದು ನಿಗದಿತ ದೂರದಲ್ಲಿ ಸೂರ್ಯನ ಸುತ್ತ ಪರೀಭ್ರಮಣೆ ಮಾಡುವುದ್ದರಿಂದ ದಿನದಲ್ಲಿ ನಮ್ಮಗೆ ಒಂದು ಸಲ ಸೂರ್ಯೂದಯ ಒಂದು ಸಲ ಸೂರ್ಯಾಸ್ತ ಸಂಭವಿಸುತ್ತದೆ. ಆದರೆ ದಿನದಲ್ಲಿ ಮೂರು ಸಲ ಸೂರ್ಯೂದಯ ಮತ್ತು ಸೂರ್ಯಾಸ್ತ ಆಗುವ ಗ್ರಹವೆಂದರೆ ಅದೆ HD188753PLANET ಇದು ತ್ರಿಬಲ್ ಸ್ಟಾರ್ ಸಿಸ್ಟಮ್ ಅನ್ನು ಹೂಂದಿದ್ದು ಭೂಮಿಯಿಂದ 150 ಜ್ಯೋತಿರ್ಲಿಂಗ ವರ್ಷಗಳಷ್ಟು ದೂರದಲ್ಲಿದೆ.ಒಂದು ತ್ರಿಬಲ್ ಸ್ಟಾರ್ ಸಿಸ್ಟಮ್ ನಲ್ಲಿ ಮೂರು ನಕ್ಷತ್ರಗಳು ಇರುತ್ತವೆ. HD188753 PLANET ಕೂಡಾ ಮೂರು ನಕ್ಷತ್ರಗಳಿಂದ ಕೂಡಿದ ಸಮೂಹವಾಗಿದೆ.ಇದರಲ್ಲಿ ಒಂದು ಮುಖ್ಯ ನಕ್ಷತ್ರ ಕೇಂದ್ರದಲ್ಲಿದು ಉಳಿದ್ದ ಎರಡು ನಕ್ಷತ್ರಗಳು ಮುಖ್ಯ ನಕ್ಷತ್ರವನ್ನು ಪರಿಭ್ರಮಣೆಯನ್ನು ಮಾಡುತ್ತಿರುತ್ತೇವೆ. HD188753 ಗ್ರಹವು ಕೂಡಾ ಈ ಮುಖ್ಯ ನಕ್ಷತ್ರವನ್ನು ಪರಿಭ್ರಮಣೆ ಮಾಡುತ್ತಿರುತ್ತದೆ.ಹೀಗೆ ತನ್ನ ಸುತ್ತ ಇರುವ ಈ ಮೂರು ನಕ್ಷತ್ರಗಳಿಂದ ಈ ಗ್ರಹವು ವಿಶಿಷ್ಟವಾಗಿದೆ. ಹೀಗಾಗಿ ಈ ಗ್ರಹದಲ್ಲಿ ಹಗಲು ಹೊತ್ತು ಮೂರು ಸೂರ್ಯ ಕಾಣಿಸುತ್ತದೆ.ಹಾಗಾಗಿ ಈ ಗ್ರಹದಲ್ಲಿ ಮೂರು ಸಲ ಸೂರ್ಯೂದಯ ಮೂರು ಸಲ ಸೂರ್ಯಾಸ್ತ ಆಗುತ್ತದೆ.

3]THE lONELIES PLANET

[ಬದಲಾಯಿಸಿ]

ಅಥವಾ ಒಂಬಟ್ಟಿ ಗ್ರಹ

[ಬದಲಾಯಿಸಿ]

ಭೂಮಿಯಿಂದ 78 ಜ್ಯೋರ್ತೀರ್ ವರ್ಷ ದೊರದಲ್ಲಿರುವ ಈ ಗ್ರಹವನ್ನು ಒಬಂಟ್ಟಿ ಗ್ರಹ ಎಂದು ಕರೆಯಬಹುದು.ಈ ಗ್ರಹ ರೆಡರಾಕ್ ನಕ್ಷತ್ರ TYC94869271 ನನ್ನು ಪರಿಭ್ರಮಣೆ ಮಾಡುತ್ತದೆ. ಈ ಗ್ರಹವನ್ನು ವೈಜ್ಞಾನಿಕವಾಗಿ J2126 ಎಂದು ಕರೆಯಲಾಗುತ್ತದೆ. ಈ ಗ್ರಹವು ತನ್ನ ಸೂರ್ಯನಿಂದ ತುಂಬಾ ದೂರದಲ್ಲಿರುವುದರಿಂದ  ಇದನ್ನು ಒಬಂಟ್ಟಿ ಗ್ರಹ ಎಂದು ಕರೆಯಲ್ಪಡುತ್ತದೆ. ಈ ಗ್ರಹವನ್ನು ನಮ್ಮ ಸೌರಮಂಡಳಕ್ಕೆ ಹೋಲಿಸಿದರೆ ಈ ಗ್ರಹ ತನ್ನ ಸೂರ್ಯನಿಂದ ಇರುವ ದೂರವು ನಮ್ಮ ಸೌರಮಂಡಳದ ಸೂರ್ಯನಿಂದ ಪ್ಲೋಟೋ ಗ್ರಹಕ್ಕೆ ಇರುವ ದೂರದ 140 ಪಟ್ಟು ಹೆಚ್ಚಾಗಿದೆ. ಈ J2126 ಗ್ರಹವು ತನ್ನ ಸೂರ್ಯನಿಂದ ಇರುವ ದೂರವನ್ನು ಹೀಗೂ ಅಂದಾಜಿಸಬಹುದು.ಅದು ಹೇಗೆಂದರೆ ಈ ಗ್ರಹದ ಮೇಲೆ ಸೂರ್ಯನ ಬೆಳಕು ತಲುಪಲು 1 ತಿಂಗಳು ಸಮಯ ತಗಲುತ್ತದೆ.ಮತ್ತು ಈ ಗ್ರಹವು ತನ್ನ ಸೂರ್ಯನನ್ನು ಒಂದು ಸುತ್ತು ಹಾಕಲು 9 ಲಕ್ಷ ವರ್ಷಗಳು ಬೇಕಾಗುತ್ತದೆ.

3] THE HOTTEST PLANETARIUM

[ಬದಲಾಯಿಸಿ]

ಇದುವರೆಗೆ ಕಂಡುಹಿಡಿದ ಗ್ರಹಗಳಲ್ಲಿ ಅತ್ಯಂತ ಬಿಸಿಯಾದ(HOTTEST) ಗ್ರಹ ಎಂದರೆ ವಾಲ್ಸ್ 38B ಇದು ಭೂಮಿಯಿಂದ 380 ಜ್ಯೋರ್ತಿರ್ ವರ್ಷ ದೂರದಲ್ಲಿರುವ ಎಂಡ್ರೋಮೀಡಾ ತಾರಾಮಂಡಲದಲ್ಲಿದೆ.ಈ ಗ್ರಹ ಜುಪೀಟರ್ ಗ್ರಹದ ಗಾತ್ರಕ್ಕಿಂತ 4 ಪಟ್ಟು ದೂಡ್ಡದಾಗಿದೆ.ಈ ಗ್ರಹವು ತನ್ನ ನಕ್ಷತ್ರದಿಂದ ಅತಿ ಕಡಿಮೆ ದೂರದಲ್ಲಿದೆ. ಇದೆ ಕಾರಣಕ್ಕೆ ಈ ಗ್ರಹ ಅತಿ ಹೆಚ್ಚು 32000 ಸೆಲ್ಸಿಯಸ್ ತಾಪಮಾನ ಹೂಂದಿರುವ ಗ್ರಹವಾಗಿದೆ.

  • 21 Jun, 2017
  • ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ನಾಸಾ) ಕೆಪ್ಲರ್‌ ದೂರದರ್ಶಕ ಹೊಸದಾಗಿ 219 ಗ್ರಹಗಳನ್ನು ಪತ್ತೆ ಮಾಡಿದೆ. ಇವುಗಳಲ್ಲಿ ಕನಿಷ್ಠ 10 ಗ್ರಹಗಳು ಭೂಮಿಯ ಗಾತ್ರದಲ್ಲಿದ್ದು, ಜೀವಿಗಳು ವಾಸಿಸಲು ಅನುಕೂಲಕರ ವಾತಾವರಣವಿದೆ.
  • ಇಲ್ಲಿಯವರೆಗೆ ಕೆಪ್ಲರ್‌ ದೂರದರ್ಶಕ 4,034 ಗ್ರಹಗಳನ್ನು ಪತ್ತೆ ಮಾಡಿದೆ. ಇವುಗಳಲ್ಲಿ 2,335 ಗ್ರಹಗಳನ್ನು ಸೌರಮಂಡಲದಾಚೆ ಇರುವ ಇನ್ನೊಂದು ಸೌರಮಂಡಲದಲ್ಲಿರುವ ಗ್ರಹಗಳೆಂದು ಪರಿಗಣಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಕೆಪ್ಲರ್‌ ದೂರದರ್ಶಕದಿಂದ ಸದ್ಯ ದೊರೆತಿರುವ ಮಾಹಿತಿಯು ಸೌರಮಂಡಲದಾಚೆ ಇರುವ ಗ್ರಹಗಳ ಬಗ್ಗೆ ಸಮಗ್ರ ಅಂಶಗಳನ್ನು ಒಳಗೊಂಡಿದೆ. ಗ್ರಹಗಳ ಸಂಖ್ಯೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.[]

ಇವನ್ನೂ ನೋಡಿ

[ಬದಲಾಯಿಸಿ]

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]

Suryana sutta nidhanavagi chalisuva graha

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಗ್ರಹ&oldid=1250448" ಇಂದ ಪಡೆಯಲ್ಪಟ್ಟಿದೆ