ಕಿಲಾ ಮುಬಾರಕ್, ಪಟಿಯಾಲಾ
ಕಿಲಾ ಮುಬಾರಕ್ | |
---|---|
ನಮೂನೆ | ರಾಜರ ಅರಮನೆ |
ಸ್ಥಳ | ಪಟಿಯಾಲಾ, ಪಂಜಾಬ್, ಭಾರತ |
ಕಿಲಾ ಮುಬಾರಕ್ (ಪಂಜಾಬಿ:ਕ਼ਿਲਾ ਮੁਬਾਰਕ) ಭಾರತದ ಪಟಿಯಾಲದಲ್ಲಿರುವ ಸಿಖ್ ವಾಸ್ತುಶಿಲ್ಪದ ಪ್ರಾಚೀನ ಕೋಟೆಯಾಗಿದೆ.[೧]
ಇತಿಹಾಸ
[ಬದಲಾಯಿಸಿ]ಕಿಲಾ ಮುಬಾರಕ್‍ನ್ನು 1763 ರಲ್ಲಿ ಸಿಧು ಜಾಟ್ ದೊರೆ ಬಾಬಾ ಆಲಾ ಸಿಂಗ್ ಅವರು ಮೊದಲು 'ಕಚಿಗರ್ಹಿ' (ಮಣ್ಣಿನ ಕೋಟೆ) ಯಾಗಿ ನಿರ್ಮಿಸಿದರು.[೨] ಇವರು ಪಟಿಯಾಲ ರಾಜವಂಶದ ಸ್ಥಾಪಕರಾಗಿದ್ದರು. ನಂತರ, ಇದನ್ನು ಬೇಕ್ ಮಾಡಿದ ಇಟ್ಟಿಗೆಗಳಲ್ಲಿ ಪುನರ್ನಿರ್ಮಿಸಲಾಯಿತು. ಕಿಲಾ ಅಂದ್ರೂನ್ ಎಂದು ಕರೆಯಲ್ಪಡುವ ಕಿಲಾದ ಆಂತರಿಕ ಭಾಗವನ್ನು ಮಹಾರಾಜ ಅಮರ್ ಸಿಂಗ್ ನಿರ್ಮಿಸಿದ್ದಾರೆ.[೩]
ಕಿಲಾ ಮುಬಾರಕ್ ಸಂಕೀರ್ಣ
[ಬದಲಾಯಿಸಿ]ಪಟಿಯಾಲಾದ ರಾಜ ಮನೆತನದ ನಿವಾಸದ ಅರಮನೆಯಾದ ಕಿಲಾ ಮುಬಾರಕ್ ಸಂಕೀರ್ಣವನ್ನು ೧೦ ಎಕರೆ ಮೈದಾನದಲ್ಲಿ ನಗರದ ಹೃದಯಭಾಗದಲ್ಲಿ ನಿರ್ಮಿಸಲಾಗಿದೆ. ಸಂಪೂರ್ಣ ಸಂಕೀರ್ಣವು ರಣ್ ಬಾಸ್ (ಅತಿಥಿ ಮನೆ ) ಮತ್ತು ದರ್ಬಾರ್ ಹಾಲ್ (ದಿವಾನ್ ಖಾನೆ) ಅನ್ನು ಹೊಂದಿದೆ.[೪] ಜೊತೆಗೆ ಕಿಲಾ ಅಂದ್ರೂನ್ ಇದೆ. ಕಿಲಾದಲ್ಲಿ ಭೂಗತ ಒಳಚರಂಡಿ ವ್ಯವಸ್ಥೆಯೂ ಇದೆ.[೫]
ಕಿಲಾ ಅಂದ್ರೂನ್
[ಬದಲಾಯಿಸಿ]ಕಿಲಾ ಅಂದ್ರೂನ್ 13 ಅರಸರ ಕೋಣೆಗಳನ್ನು ಹೊಂದಿದ್ದು ಇವುಗಳಲ್ಲಿ ಹಿಂದೂ ಪುರಾಣದ ದೃಶ್ಯಗಳನ್ನು ಪಟಿಯಾಲ ಕಲಾ ಶೈಲಿಯಲ್ಲಿ ಚಿತ್ರಿಸಲಾಗಿದೆ.[೬]
ಶಸ್ತ್ರಗಳು ಮತ್ತು ದೀಪಗುಚ್ಛದ ಸಂಗ್ರಹಾಲಯ
[ಬದಲಾಯಿಸಿ]ದರ್ಬಾರ್ ಹಾಲ್ ನಲ್ಲಿ ಗುರು ಗೋವಿಂದ್ ಸಿಂಗ್‍ರ ಅಪರೂಪದ ಫಿರಂಗಿಗಳು, ಖಡ್ಗಗಳು, ಗುರಾಣಿಗಳು ಮತ್ತು ಗದೆಗಳು, ಕಠಾರಿಗಳು ಮತ್ತು ನಾದಿರ್ ಶಾನ ಖಡ್ಗವಿದೆ.[೭]
ಪುನಃಸ್ಥಾಪನೆಯ ಕೆಲಸ
[ಬದಲಾಯಿಸಿ]300 ವರ್ಷಗಳಷ್ಟು ಹಳೆಯದಾದ ಕಟ್ಟಡವಾದ[೮] ಕಿಲಾ 'ಕೆಟ್ಟ ಸ್ಥಿತಿಯಲ್ಲಿ'ದೆ[೯] ಎಂದು ವಿವರಿಸಲಾಗಿದೆ ಮತ್ತು ವ್ಯಾಪಕವಾಗಿ ಹಾನಿಗೊಳಗಾಗಿದೆ.[೧೦] ಕೋಟೆಯನ್ನು ವಿಶ್ವ ಸ್ಮಾರಕಗಳ ನಿಧಿಯು 2004 ರಲ್ಲಿ ವಿಶ್ವದ 100 "ಅತ್ಯಂತ ಅಪಾಯದ ಸ್ಮಾರಕಗಳಲ್ಲಿ" ಒಂದು ಎಂದು ವಿವರಿಸಿದೆ.[೮]
ಭಾರತದ ಕಲೆ ಹಾಗೂ ಸಾಂಸ್ಕೃತಿಕ ಪರಂಪರೆಯ ರಾಷ್ಟ್ರೀಯ ನ್ಯಾಸವು ಕಿಲಾದ ಮರುಸ್ಥಾಪನೆ ಕಾರ್ಯವನ್ನು ಕೈಗೊಂಡಿದೆ. ಇದಕ್ಕೆ ರಾಜ್ಯ ಮತ್ತು ರಾಷ್ಟ್ರೀಯ ಸರ್ಕಾರಗಳ ಭಾರತೀಯ ಪುರಾತತ್ವ ಸರ್ವೇಕ್ಷಣೆಯು ಆರ್ಥಿಕ ಸಹಾಯವನ್ನು ನೀಡಿದೆ.[೧೧][೧೨] ಇದರ ಸಂರಕ್ಷಣೆಗೆ ವಿಶ್ವ ಸ್ಮಾರಕಗಳ ವೀಕ್ಷಣಾ ಸಂಸ್ಥೆ ಕೂಡ ಧನಸಹಾಯ ನೀಡಿದೆ.[೧೩][೧೪][೧೫]
ಉಲ್ಲೇಖಗಳು
[ಬದಲಾಯಿಸಿ]
- ↑ 4 heritage sites find saviour in Monument Fund
- ↑ "Archived copy". Archived from the original on 18 January 2010. Retrieved 25 March 2010.
{{cite web}}
: CS1 maint: archived copy as title (link) - ↑ The Sunday Tribune - Spectrum - Lead Article
- ↑ "Archived copy". Archived from the original on 28 July 2010. Retrieved 25 March 2010.
{{cite web}}
: CS1 maint: archived copy as title (link) - ↑ "Archived copy". Archived from the original on 2 August 2009. Retrieved 25 March 2010.
{{cite web}}
: CS1 maint: archived copy as title (link) - ↑ Mighty edifice : Simply Punjabi - India Today
- ↑ "Archived copy". Archived from the original on 10 April 2010. Retrieved 25 March 2010.
{{cite web}}
: CS1 maint: archived copy as title (link) - ↑ ೮.೦ ೮.೧ The Tribune, Chandigarh, India - Nation
- ↑ "India Today". Archived from the original on 2015-09-24. Retrieved 2021-09-03.
- ↑ "Archived copy". Archived from the original on 11 April 2010. Retrieved 25 March 2010.
{{cite web}}
: CS1 maint: archived copy as title (link) - ↑ The Tribune, Chandigarh, India - Punjab
- ↑ The Tribune, Chandigarh, India - Punjab
- ↑ Madra, Amandeep (27 March 2006). "Patiala fort to regain regal bearing". UK Punjab Heritage Association. Archived from the original on 21 ಮಾರ್ಚ್ 2018. Retrieved 20 March 2018.
- ↑ "Patiala's Qila Mubarak rises to former glory with Panorama Punjab festival". Architectural Design | Interior Design | Home Decoration Magazine | AD India (in ಅಮೆರಿಕನ್ ಇಂಗ್ಲಿಷ್). 2018-01-11. Retrieved 2018-12-30.
- ↑ Sirhindi, Manish (2017-04-30). "The dust settles at Qila Mubarak - Times of India". The Times of India. Retrieved 2018-12-30.