ವಿಷಯಕ್ಕೆ ಹೋಗು

ಕಾಡುಮಲ್ಲಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Wild jasmine
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ಆಸ್ಟರಿಡ್ಸ್
ಗಣ: ಲ್ಯಾಮಿಯೇಲ್ಸ್
ಕುಟುಂಬ: ಓಲಿಯೇಸೀ
ಕುಲ: ಜಾಸ್ಮಿನಮ್
ಪ್ರಜಾತಿ:
J. angustifolium
Binomial name
Jasminum angustifolium
Synonyms[]
  • Nyctanthes angustifolia L.

ಕಾಡುಮಲ್ಲಿಗೆ (ವೈಲ್ಡ್ ಜಾಸ್ಮಿನ್[]) ಜಾಸ್ಮಿನಮ್ ಆಂಗಸ್ಟಿಫೋಲಿಯಮ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನುಳ್ಳ ಒಂದು ಹೂಬಿಡುವ ಸಸ್ಯ. ವನಮಲ್ಲಿಗೆ ಪರ್ಯಾಯನಾಮ.

ಇದು ಭಾರತ, ಶ್ರೀಲಂಕಾ ಮತ್ತು ಅಂಡಮಾನ್ ದ್ವೀಪಗಳಿಗೆ ಸ್ಥಳೀಯವಾದ ಮಲ್ಲಿಗೆಯ ಒಂದು ಪ್ರಭೇದ.[] ದಕ್ಷಿಣ ಭಾರತದ ಕೆಳಎತ್ತರದ ಗುಡ್ಡ ಪ್ರದೇಶಗಳಲ್ಲೆಲ್ಲ ಬೆಳೆಯುವ ಕಾಡುಜಾತಿ ಮಲ್ಲಿಗೆ. ಕೃಷಿ ಮಾಡಿ ಕೂಡ ಬೆಳೆಸಬಹುದು. ಎಂಥ ಮಣ್ಣಿನಲ್ಲಾದರೂ ಬೆಳೆಯುತ್ತದೆ.

ವಿವರಣೆ

[ಬದಲಾಯಿಸಿ]

ಹಚ್ಚ ಹಸುರಾದ ಎಲೆಗಳು, ಸಮೃದ್ಧವಾಗಿ ಅರಳುವ ಹೂಗಳಿಂದಾಗಿ ಇದು ಕಿಟಕಿ, ಚೌಕಟ್ಟು ಮುಂತಾದೆಡೆ ಹಬ್ಬಿಸಿ ಬೆಳೆಸಲು ಉತ್ತಮ ಬಗೆಯದೆನಿಸಿದೆ. ಎಲೆಗಳು ಸರಳರೀತಿಯವು. ಹೂ ಬಿಳಿ ಬಣ್ಣದವು, ನಕ್ಷತ್ರದಾಕಾರವುಳ್ಳವು. ಒಂಟಿಯಾಗಿ ಅಥವಾ ತಲಾ ಮೂರು ಹೂವುಳ್ಳ ಮಂಜರಿಗಳಲ್ಲಿ ಅರಳುವುವು.

ಉಪಯೋಗಗಳು

[ಬದಲಾಯಿಸಿ]

ಈ ಸಸ್ಯದ ಬೇರನ್ನು ಔಷಧೀಯ ಗುಣಗಳಿರುವುದಕ್ಕೆ ಬಳಸಲಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ಟೆಂಪ್ಲೇಟು:WCSP
  2. "Wild Jasmine". Flowers of India. Retrieved 28 August 2016.
  3. Watt, George (2014). A Dictionary of the Economic Products of India. Cambridge University Press. ISBN 9781108068765.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: