ವಿಷಯಕ್ಕೆ ಹೋಗು

ಕರೇ ಹಂಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
black creeper
Ichnocarpus frutescens []
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
I. frutescens
Binomial name
Ichnocarpus frutescens
Black Creeper, in Thrissur, Kerala, India
Flower

ಕರೇ ಹಂಬುಇದು ಸುರುಳಿಬಳ್ಳಿಯಂತೆ ಬೆಳೆಯುವ ಪೊದೆಸಸ್ಯ. ಆಗ್ನೇಯ ಏಷ್ಯ ಮತ್ತು ಆಸ್ಟ್ರೇಲಿಯಗಳಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ. ಸಮುದ್ರ ಮಟ್ಟದಿಂದ 4,000 ಎತ್ತರ ಪ್ರದೇಶಗಳಲ್ಲಿ ವ್ಯಾಪ್ತಿ ಅಧಿಕ.

ವೈಜ್ಞಾನಿಕ ಹೆಸರು

[ಬದಲಾಯಿಸಿ]

ಅಪೋಸೈನೇಸೀ ಕುಟುಂಬದ ಸಸ್ಯ; ಹಾಲು ಗೆಣಸು, ಗೌರಿ ಬಳ್ಳಿ, ಶ್ಯಾಮಲತೆ ಪರ್ಯಾಯ ನಾಮಗಳು (ಇಚಿನೊಕಾರ್ಪಸ್ ಪ್ರುಟೆಸೆನ್ಸ್‌).

ಲಕ್ಷಣಗಳು

[ಬದಲಾಯಿಸಿ]

ಬಳ್ಳಿ ಬಲು ಉದ್ದವಾಗಿ ಬೆಳೆಯುತ್ತದೆ; ಬಣ್ಣ ಸದಾ ಹಚ್ಚಹಸಿರು. ಇದರಲ್ಲಿ ಹಾಲ್ನೊರೆ (ಲೇಟೆಕ್ಸ್‌) ದೊರೆಯುವುದು ಅಭಿಮುಖವಾಗಿ ಸಂಯೋಗಗೊಂಡ ಎಲೆಗಳಿವೆ. ಆಕಾರ ದೀರ್ಘ ವೃತ್ತದಂತೆ; ನಡು ಅಗಲ, ತಲೆ ಈಟಿಯಂತೆ. ಎಳೆ ಎಲೆಗಳು ಚರ್ಮಿಲವೂ ರೋಮಿಲವೂ ಆಗಿವೆ. ಹೂಗಳಿಗೆ ಬಲು ಸುವಾಸನೆ ಇದೆ. ಬಣ್ಣ ಬಿಳಿಹಸಿರು ಅಥವಾ ಊದಾ. ಎಲೆಯ ಕಂಕುಳಲ್ಲಿ ಅಥವಾ ರೆಂಬೆ ಗಳ ತುದಿಯಲ್ಲಿ ಸಂಕೀರ್ಣ ಪುಷ್ಪಗುಚ್ಛಗಳಾಗಿ ಬೆಳೆಯುತ್ತವೆ. ಹಣ್ಣು ಒಡೆಯುವ ಜಾತಿಗೆ ಸೇರಿದೆ. ಇದರ ಹೆಸರು ಫಾಲಿಕಲ್. ಇದು ಉರುಳೆ ಯಾಕಾರದ್ದಾಗಿದ್ದು ಬಹು ನಾಜೂಕಾ ಗಿದೆ. ಸಾಮಾನ್ಯವಾಗಿ ಎರಡು ಹಣ್ಣುಗಳು ಒಟ್ಟಿಗೆ ಒಂದಕ್ಕೊಂದು ಲಂಬವಾಗಿ ಬೆಳೆಯುತ್ತವೆ. ಒಳಗೆ ದುರ್ಬಲವಾದ ಕಪ್ಪು ಬೀಜಗಳಿವೆ. ಉದ್ದ 0.5" - 0.7". ಬೀಜಗಳ ಕೊನೆಯಲ್ಲಿ ರೇಷ್ಮೆಯಂಥ ಸೂಕ್ಷ್ಮತಂತುಗಳ ಗುಚ್ಛವಿದೆ.

ಔಷಧವಾಗಿ

[ಬದಲಾಯಿಸಿ]

ಶಕ್ತಿವರ್ಧಕ ಔಷಧಿಗಳ ತಯಾರಿಕೆಯಲ್ಲಿ ಸೊಗದೆ ಬೇರುಗಳ ಬದಲಾಗಿ ಕರೇಹಂಬಿನ ಬೇರುಗಳನ್ನು ಬಳಸುವುದುಂಟು. ಕೆಲವೊಮ್ಮೆ ಎರಡು ಬೇರುಗಳನ್ನೂ ಒಟ್ಟಿಗೆ ಉಪಯೋಗಿಸುವುದೂ ಉಂಟು. ಇವುಗಳ ಚಿಕಿತ್ಸಕ ಗುಣಗಳು ಬಲು ಪ್ರಚಲಿತವಾಗಿವೆ. ಬೇರಿನ ರುಚಿ ಸಿಹಿ. ಗಾಯಗಳಿಂದಾದ ರಕ್ತ ಸ್ರಾವವನ್ನು ತಡೆಯುವ ಶಕ್ತಿ ಬೇರಿಗಿದೆ. ಸೊಗದೆ ಬೇರಿನ ವಾಸನೆ ಮಾತ್ರ ಇದಕ್ಕೆ ಇಲ್ಲ. ಬೆರನ್ನು ತಾಜಾ ಆಗಿಯೂ ಒಣಗಿಸಿಯೂ ಮಾರುವುದುಂಟು. ತಾಜಾ ಬೇರುಗಳು ಬಲುಮಟ್ಟಿಗೆ ಉಬ್ಬಿಸಿಕೊಂಡಿರುತ್ತವೆ. ಇವನ್ನು ಸ್ವಲ್ಪಗೀರಿದರೆ ಅಥವಾ ಗಾಯಗೊಳಿಸಿದರೆ ಕೆನೆಬಣ್ಣದ ಅಥವಾ ನಸು ಹಳಿದಿ ಬಣ್ಣದ ಹಾಲ್ನೊರೆ ಧಾರಾಳವಾಗಿ ಹೊರಸೂಸುತ್ತದೆ. ತಾಜಾ ಬೇರುಗಳ ಸಿಪ್ಪೆಬಲು ಮಿದು. ಆದ್ದರಿಂದ ಬೇರಿನಿಂದ ಸಿಪ್ಪೆಯನ್ನು ಸುಲಭವಾಗಿ ಸುಲಿದು ಪ್ರತ್ಯೇಕಿಸಬಹುದು. ಒಣಗಿದ ಬೇರಿನಲ್ಲಿ ಸಿಪ್ಪೆ ಗಟ್ಟಿಯಾಗಿ ಅಂಟಿಕೊಂಡಿರುತ್ತದೆ. ಬೇರಿಗೆ ಶಾಮಕ ಗುಣವೂ ಇದೆ; ದೇಹದಲ್ಲಿನ ಪೋಷಣ ವ್ಯಾಪಾರಗಳನ್ನು ಬದಲಾಯಿಸಿ ಅವನ್ನು ಆರೋಗ್ಯಸ್ಥಿತಿಗೆ ತರುವಂಥ ಶಕ್ತಿವರ್ಧಕ ಮಹತ್ತ್ವವಿದೆ. ಇದರ ಇತರ ಉಪಯೋಗಗಳು ಮೂತ್ರವ್ಯಾಧಿಗಳಲ್ಲಿ, ಜ್ವರಗಳಲ್ಲಿ, ಅಜೀರ್ಣ ವ್ಯಾಧಿಗಳಲ್ಲಿ ಮತ್ತು ಚರ್ಮವ್ಯಾಧಿಗಳಲ್ಲಿ. ಸಿಹಿಮೂತ್ರ ರೋಗವಿದ್ದವರಿಗೆ, ಮೂತ್ರಪಿಂಡಗಳಲ್ಲಿ ಕಲ್ಲುಗಳುಂಟಾದವರಿಗೆ ಇದರ ಹುಡಿಯನ್ನು ಹಾಲಿನಲ್ಲಿ ಮಿಶ್ರಿಸಿ ಕುಡಿಯಲು ಕೊಡುತ್ತಾರೆ. ಅಲ್ಲದೆ ರಕ್ತಶುದ್ಧಿಕಾರಕವಾಗಿಯೂ ಇದನ್ನು ಉಪಯೋಗಿಸುತ್ತಾರೆ.

ಉಪಯೋಗಗಳು

[ಬದಲಾಯಿಸಿ]

ಸಣ್ಣಪುಟ್ಟ ರೆಂಬೆಗಳನ್ನು ಮೀನಿನ ಬಲೆಗಳ ತಯಾರಿಕೆಯಲ್ಲಿ ನೊಣಗಂಟು ಹಾಕುವುದಕ್ಕೂ ಬುಟ್ಟಿಗಳನ್ನು ಹೆಣೆಯುವುದಕ್ಕೂ ಉಪಯೋಗಿಸುತ್ತಾರೆ. ಕರೇ ಹಂಬಿನಂತೆಯೇ ಕಾಣುವ ಇನ್ನೆರಡು ಪ್ರಭೇದಗಳಾದ ಇಚಿನೊಕಾರ್ಪಸ್ ವೊಲ್ಯೂಬಿಲಿಸ್, ಇಚಿನೊಕಾರ್ಪಸ್ ಒವೆಟಿಪೊಲಿಯಸ್ ಇವೆರಡೂ ದಾರುಮಯವಾದ ಬಳ್ಳಿಗಳಾಗಿದ್ದು ಹಂಬಿನ ಸ್ವಭಾವ ಹಾಗೂ ಸಾಮ್ಯವುಳ್ಳವಾಗಿವೆ. ಛೋಟಾ ನಾಗಪುರ ಹಾಗೂ ಅಸ್ಸಾಮಿನ ಕೆಲವು ಭಾಗಗಳಲ್ಲಿ ಇವು ಬೆಳೆಯುತ್ತವೆ. ಫಿಲಿಪೀನ್ ದ್ವೀಪಗಳವರು ಹಗ್ಗ ತಯಾರಿಕೆಯಲ್ಲಿ, ಬೇಲಿ ಕಟ್ಟುವುದರಲ್ಲಿ ಹಾಗೂ ಮೀನು ಬಲೆಗಳ ತಯಾರಿಕೆಯಲ್ಲಿ ಇವನ್ನು ಉಪಯೋಗಿಸುತ್ತಾರೆ.

ಉಲ್ಲೇಖಗಳು

[ಬದಲಾಯಿಸಿ]
  1. illustration circa 1880, from Francisco Manuel Blanco (O.S.A.) - Flora de Filipinas
  2. Li, Bingtao; Leeuwenberg, Antony J. M.; Middleton, David J. (2008) [1995]. Wu, Z. Y.; Raven, P. H. (eds.). "Ichnocarpus frutescens, Apocynaceae, Vol. 16". Flora of China. Online access. eFloras.org. St. Louis, MO & Cambridge, MA.: Missouri Botanical Garden Press and Harvard University Herbaria. Retrieved 9 Mar 2013. {{cite web}}: External link in |others= and |work= (help)
  3. ಟೆಂಪ್ಲೇಟು:AustTRFPK6.1