ವಿಷಯಕ್ಕೆ ಹೋಗು

ಕನಕಗಿರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕನಕಗಿರಿ
ಸುವರ್ಣಗಿರಿ
ಪಟ್ಟಣ
ಕನಕಚಲಾಪತಿ ದೇವಾಸ್ಥಾನ
ಕನಕಚಲಾಪತಿ ದೇವಾಸ್ಥಾನ

ಕನಕಗಿರಿ (ಸುವರ್ಣಗಿರಿ ಎಂದೂ ಕರೆಯುತ್ತಾರೆ) ಇದು ಕರ್ನಾಟಕ ರಾಜ್ಯದ ಒಂದು ಪಟ್ಟಣ. ಮೌರ್ಯ ಸಾಮ್ರಾಜ್ಯದ ಪ್ರಾಂತೀಯ ರಾಜಧಾನಿಯಾಗಿತ್ತು ಮತ್ತು ನಂತರ ವಿಜಯನಗರ ಸಾಮ್ರಾಜ್ಯದ ಪಾಳೇಗರ (ಸಾಮಂತ) ನಾಯಕ ರಾಜವಂಶದ ರಾಜಧಾನಿಯಾಯಿತು.[][] ಇದು ಐತಿಹಾಸಿಕ ತಾಣವಾದ ಕನಕಾಚಲಪತಿ ದೇವಸ್ಥಾನದ (ಕನಕಾಚಲಪತಿ ಮಂದಿರ) ಸ್ಥಳವಾಗಿದೆ.

ಭೂಗೋಳ

[ಬದಲಾಯಿಸಿ]

ಕನಕಗಿರಿಯು ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಗಂಗಾವತಿ ಪಟ್ಟಣದಿಂದ ವಾಯುವ್ಯಕ್ಕೆ ೨೦ಕಿಮೀ ದೂರದಲ್ಲಿದೆ.[]

ದೇವಾಲಯ

[ಬದಲಾಯಿಸಿ]
ವೆಂಕಟಪ್ಪ ನಾಯ್ಕ್ ರಾಜ ಸ್ನಾನ ಕನಕಗಿರಿ

ಕನಕಗಿರಿಯ ನಾಯಕರು ಕನಕಾಚಲಪತಿ ದೇವಸ್ಥಾನವನ್ನು ನಿರ್ಮಿಸಿದರು.[] ಇದರ ಸಭಾಂಗಣಗಳು ಮತ್ತು ಕಂಬಗಳು ವಿಜಯನಗರ ಕಾಲದ ದಕ್ಷಿಣ ಭಾರತದ ವಾಸ್ತುಶಿಲ್ಪಕ್ಕೆ ವಿಶಿಷ್ಟ ಉದಾಹರಣೆಯಾಗಿದೆ. ಗೋಪುರಗಳು ಮತ್ತು ಗೋಡೆಗಳು ಶಿಲ್ಪಕಲೆಗಳಿಂದ ಅಲಂಕರಿಸಲ್ಪಟ್ಟಿವೆ. ಇಲ್ಲಿ ಕಪ್ಪು ಪಾಲಿಶ್ ಮಾಡಿದ ಕಲ್ಲಿನಲ್ಲಿರುವ ರಾಜಸ್, ರಾಣಿಗಳ ಪ್ರತಿಮೆಗಳು ಮತ್ತು ಪೌರಾಣಿಕ ವ್ಯಕ್ತಿಗಳ ಮರದ ಪ್ರತಿಮೆಗಳು ಇವೆ.[]

ಕನಕಗಿರಿ ಜೈನ ತೀರ್ಥವು ೫ ಅಥವಾ ೬ ನೇ ಶತಮಾನದಲ್ಲಿ ಪಶ್ಚಿಮ ಗಂಗ ರಾಜವಂಶದಿಂದ ನಿರ್ಮಿಸಲ್ಪಟ್ಟ ಜೈನ ದೇವಾಲಯದ ಸಂಕೀರ್ಣವಾಗಿದೆ.

೧೫೮೬ರಲ್ಲಿ ಕನಕಗಿರಿಯ ಹೊರವಲಯದಲ್ಲಿ ರಾಜಾ ವೆಂಕಟಪ್ಪನಾಯಕ ನಿರ್ಮಿಸಿದ ರಾಜ ಸ್ನಾನಗೃಹವಿದೆ.[]

ಹೇಮಗುಡ್ಡ ಕೋಟೆ, ಕನಕಗಿರಿಯಿಂದ ಸುಮಾರು ೨೦ಕಿಮೀ ದೂರದಲ್ಲಿದೆ.[] ಇದು "ಗಂಡುಗಲಿ ಕುಮಾರ ರಾಮನ" ಕಮ್ಮಟದುರ್ಗ ಕೋಟೆಯ ಪಕ್ಕದಲ್ಲಿದೆ. ಕೋಟೆಯನ್ನು ೧೪ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಕೋಟೆಯು ದಸರಾವನ್ನು ಆಚರಿಸುವ ದುರ್ಗಾದೇವಿ ದೇವಾಲಯವನ್ನು ಹೊಂದಿದೆ.

ಉತ್ಸವ

[ಬದಲಾಯಿಸಿ]

ಕನಕಗಿರಿ ಉತ್ಸವವು ಫಾಲ್ಗುಣ ಸಮಯದಲ್ಲಿ ಕನಕಾಚಲಪತಿ ದೇವಸ್ಥಾನಕ್ಕೆ ಸಂಬಂಧಿಸಿದ ವಾರ್ಷಿಕ ಜಾತ್ರೆಯಾಗಿದೆ.

ಗ್ಯಾಲರಿ

[ಬದಲಾಯಿಸಿ]

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. Rao B V, Thukaram (18 August 2015). "Piety with Beauty". Deccan Herald. Retrieved 20 September 2022.
  2. ೨.೦ ೨.೧ ೨.೨ Pyati, Ananda Teertha (29 May 2012). "Who cares for Kanakagiri". Deccan Herald. Retrieved 20 September 2022.
  3. "Who cares for Kanakagiri..." Retrieved 2012-09-10.
  4. "Tourism, Kanakagiri". Archived from the original on 4 July 2013. Retrieved 2012-09-10.
  5. "Safe sanctuary". Archived from the original on 2014-02-22. Retrieved 2012-09-10.
"https://kn.wikipedia.org/w/index.php?title=ಕನಕಗಿರಿ&oldid=1249885" ಇಂದ ಪಡೆಯಲ್ಪಟ್ಟಿದೆ