ಕನಕಗಿರಿ
ಕನಕಗಿರಿ
ಸುವರ್ಣಗಿರಿ | |
---|---|
ಪಟ್ಟಣ | |
ಕನಕಗಿರಿ (ಸುವರ್ಣಗಿರಿ ಎಂದೂ ಕರೆಯುತ್ತಾರೆ) ಇದು ಕರ್ನಾಟಕ ರಾಜ್ಯದ ಒಂದು ಪಟ್ಟಣ. ಮೌರ್ಯ ಸಾಮ್ರಾಜ್ಯದ ಪ್ರಾಂತೀಯ ರಾಜಧಾನಿಯಾಗಿತ್ತು ಮತ್ತು ನಂತರ ವಿಜಯನಗರ ಸಾಮ್ರಾಜ್ಯದ ಪಾಳೇಗರ (ಸಾಮಂತ) ನಾಯಕ ರಾಜವಂಶದ ರಾಜಧಾನಿಯಾಯಿತು.[೧][೨] ಇದು ಐತಿಹಾಸಿಕ ತಾಣವಾದ ಕನಕಾಚಲಪತಿ ದೇವಸ್ಥಾನದ (ಕನಕಾಚಲಪತಿ ಮಂದಿರ) ಸ್ಥಳವಾಗಿದೆ.
ಭೂಗೋಳ
[ಬದಲಾಯಿಸಿ]ಕನಕಗಿರಿಯು ಕರ್ನಾಟಕ ರಾಜ್ಯದ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಿಂದ ವಾಯುವ್ಯಕ್ಕೆ ೨೦ಕಿಮೀ ದೂರದಲ್ಲಿದೆ.[೩]
ದೇವಾಲಯ
[ಬದಲಾಯಿಸಿ]ಕನಕಗಿರಿಯ ನಾಯಕರು ಕನಕಾಚಲಪತಿ ದೇವಸ್ಥಾನವನ್ನು ನಿರ್ಮಿಸಿದರು.[೪] ಇದರ ಸಭಾಂಗಣಗಳು ಮತ್ತು ಕಂಬಗಳು ವಿಜಯನಗರ ಕಾಲದ ದಕ್ಷಿಣ ಭಾರತದ ವಾಸ್ತುಶಿಲ್ಪಕ್ಕೆ ವಿಶಿಷ್ಟ ಉದಾಹರಣೆಯಾಗಿದೆ. ಗೋಪುರಗಳು ಮತ್ತು ಗೋಡೆಗಳು ಶಿಲ್ಪಕಲೆಗಳಿಂದ ಅಲಂಕರಿಸಲ್ಪಟ್ಟಿವೆ. ಇಲ್ಲಿ ಕಪ್ಪು ಪಾಲಿಶ್ ಮಾಡಿದ ಕಲ್ಲಿನಲ್ಲಿರುವ ರಾಜಸ್, ರಾಣಿಗಳ ಪ್ರತಿಮೆಗಳು ಮತ್ತು ಪೌರಾಣಿಕ ವ್ಯಕ್ತಿಗಳ ಮರದ ಪ್ರತಿಮೆಗಳು ಇವೆ.[೨]
ಕನಕಗಿರಿ ಜೈನ ತೀರ್ಥವು ೫ ಅಥವಾ ೬ ನೇ ಶತಮಾನದಲ್ಲಿ ಪಶ್ಚಿಮ ಗಂಗ ರಾಜವಂಶದಿಂದ ನಿರ್ಮಿಸಲ್ಪಟ್ಟ ಜೈನ ದೇವಾಲಯದ ಸಂಕೀರ್ಣವಾಗಿದೆ.
೧೫೮೬ರಲ್ಲಿ ಕನಕಗಿರಿಯ ಹೊರವಲಯದಲ್ಲಿ ರಾಜಾ ವೆಂಕಟಪ್ಪನಾಯಕ ನಿರ್ಮಿಸಿದ ರಾಜ ಸ್ನಾನಗೃಹವಿದೆ.[೨]
ಕೋಟೆ
[ಬದಲಾಯಿಸಿ]ಹೇಮಗುಡ್ಡ ಕೋಟೆ, ಕನಕಗಿರಿಯಿಂದ ಸುಮಾರು ೨೦ಕಿಮೀ ದೂರದಲ್ಲಿದೆ.[೫] ಇದು "ಗಂಡುಗಲಿ ಕುಮಾರ ರಾಮನ" ಕಮ್ಮಟದುರ್ಗ ಕೋಟೆಯ ಪಕ್ಕದಲ್ಲಿದೆ. ಕೋಟೆಯನ್ನು ೧೪ನೇ ಶತಮಾನದಲ್ಲಿ ನಿರ್ಮಿಸಲಾಯಿತು. ಕೋಟೆಯು ದಸರಾವನ್ನು ಆಚರಿಸುವ ದುರ್ಗಾದೇವಿ ದೇವಾಲಯವನ್ನು ಹೊಂದಿದೆ.
ಉತ್ಸವ
[ಬದಲಾಯಿಸಿ]ಕನಕಗಿರಿ ಉತ್ಸವವು ಫಾಲ್ಗುಣ ಸಮಯದಲ್ಲಿ ಕನಕಾಚಲಪತಿ ದೇವಸ್ಥಾನಕ್ಕೆ ಸಂಬಂಧಿಸಿದ ವಾರ್ಷಿಕ ಜಾತ್ರೆಯಾಗಿದೆ.
ಗ್ಯಾಲರ
[ಬದಲಾಯಿಸಿ]-
ಕನಕಗಿರಿ ಕನಕಾಚಲಪತಿ ದೇವಸ್ಥಾನ
-
ವೆಂಕಟಪ್ಪ ನಾಯ್ಕ್ ರಾಜ ಸ್ನಾನ ಕನಕಗಿರಿ
-
ವೆಂಕಟಪ್ಪ ನಾಯ್ಕ್ ರಾಜ ಸ್ನಾನ ಕನಕಗಿರಿ
-
ವೆಂಕಟಪ್ಪ ನಾಯ್ಕ್ ರಾಜ ಸ್ನಾನ ಕನಕಗಿರಿ
ಸೋಮಸಾಗರ
[ಬದಲಾಯಿಸಿ]ಶ್ರೀ ಹುಲಿಗೆಮ್ಮ ದೇವಿ ದೇವಾಲಯ
ತಳವಾರ್ ಎಂಬ ಮನೆತನದಲ್ಲಿ ಭೀಮಣ್ಣ ಎಂಬ ಒಬ್ಬ ಮನುಷ್ಯನಿಗೆ ತನ್ನ ಮೈಯಲ್ಲಿ ಏನೋ ಬಂದಂತೆ ಅನಿಸುತ್ತೆ. ಅವರಿಗೆ ಊರಿನ ಜನ ಭೀಮಣ್ಣನ ಆಹ್ವಾನಿಸಿರುವುದು ದೆವ್ವ ಎಂದು ಕೆಲವು ಜನ ಹೇಳುತ್ತಿದ್ದರು. ಮತ್ತೊಂದಿಷ್ಟು ಜನ ಅವನ ಮೈ ಮೇಲೆ ಬಂದಿರುವುದು ದೇವರು ಎಂದು ಹೇಳುತ್ತಿದ್ದರು ತಳವಾರ್ ಭೀಮಣ್ಣನನ್ನು ಕರೆದುಕೊಂಡು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಲೇಬಗಿರಿ ಎಂಬ ಮಠದ ಸ್ವಾಮೀಜಿ ಹತ್ತಿರ ಕರೆದುಕೊಂಡು ಹೋದರು. ಲೇಬಗಿರಿ ಮಠದ ಸ್ವಾಮಿಗಳು ಭೀಮಣ್ಣನ ಬಂದಿರುವುದು ದೆವ್ವ ಅಲ್ಲ ದೇವರು ಎಂದು ಹೇಳಿದರು. ಅದು ಯಾವ ದೇವರು ಎಂದರೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಸೋಮಸಾಗರ ಗ್ರಾಮದ ಶ್ರೀ ಹುಲಿಗೆಮ್ಮ ದೇವಿ ಎಂದು ಹೇಳಿದರು. ಭೀಮಣ್ಣನಿಗೆ ಅವಾನಿಸಿರುವ ದೇವಿಯನ್ನು ಶಾಂತ ಗೊಳಿಸಲು ಏನು ಮಾಡಬೇಕು ಎಂದು ಲೇಬಗಿರಿಯ ಸ್ವಾಮಿಗಳನ್ನು ಸೋಮಸಾಗರದ ಜನರು ಕೇಳಿದರು ಅದಕ್ಕೆ ಲೇಬಗಿರಿ ಮಠದ ಸ್ವಾಮಿಗಳು ಸೋಮಸಾಗರ ಗ್ರಾಮದ ಜನರಿಗೆ ಹೇಳಿದ್ದು ಇಷ್ಟೇ, ಭೀಮಣ್ಣನನ್ನು ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲೂಕಿನ ಹುಲಿಗಿ ಎಂಬ ಗ್ರಾಮಕ್ಕೆ ಕರೆದುಕೊಂಡು ಹೋಗಿ ಎಂದು ಲೆಬಗಿರಿ ಮಠದ ಸ್ವಾಮಿಗಳು ಸೋಮಸಾಗರ ಗ್ರಾಮದ ಜನರಿಗೆ ಹೇಳಿದರು. ಅದಕ್ಕೆ ಊರಿನ ಜನರು ಒಪ್ಪಿಕೊಂಡರು. [೬]
ಈ ದೇವಿಯ ಜಾತ್ರೆ ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುತ್ತದೆ. ದೇವಸ್ಥಾನದಿಂದ ಒಂದು ಕಿಲೋಮೀಟರ್ ದೂರದಲ್ಲಿರುವ ಬಾವಿಗೆ ಹೋಗಿ ದೇವಿಯನ್ನು ಸ್ನಾನ ಮಾಡಿಸಿ ಮರಳಿ ದೇವಸ್ಥಾನಕ್ಕೆ ಬಂದು
ಹೊರಬಂದ ನಂತರ ಕು ದಿಯುತ್ತಿರುವ ಪಾಯಸದ ಪಡಗದಲ್ಲಿ ಇರುವ ಬಿಸಿ ಅನ್ನವನ್ನು ತೆಗೆದು ಮೇಲಕ್ಕೆ ಎತ್ತಿ ಅಲ್ಲಿಕೊಂಡವನು ನೋಡಲು ನೆಲೆಸಿರುವ ಜನರಿಗೆ ತೋರಿಸುತ್ತಾರೆ ಹೀಗೆ ಜಾತ್ರೆಯ ಎಲ್ಲ ಕಾರ್ಯವನ್ನು ಮಾಡಿದರು . ಕೆಲವು ವರ್ಷಗಳ ನಂತರ ಭೀಮಣ್ಣವೆಂಬ ಪೂಜಾರಿ ತೀರಿಕೊಂಡರು ಊರಿನ ಜನರು ಭೀಮಣ್ಣನ ಶವಕ್ಕೆ ಮಾಡುವ ಎಲ್ಲಾ ಕಾರ್ಯವನ್ನು ಮುಗಿಸಿ ಶ್ರೀ ಹುಲಿಗೆಮ್ಮ ದೇವಿಯ ಗುಡಿಯ ಪಕ್ಕದಲ್ಲಿ ಆತನನ್ನು ಮಣ್ಣು ಮಾಡಿದರು. ಊರಿನ ಜನರು ಆತನ ಸಮಾಧಿಯನ್ನು ಕಟ್ಟಿ ರೂಪದಲ್ಲಿ ಕಟ್ಟಿ ಆತನ ಕಟ್ಟೆಗೂ ಸಹ ದೇವಿಗೆ ಮಾಡುವ ಪೂಜೆಯ ರೀತಿ ಭೀಮಣ್ಣನ ಕಟ್ಟೆಗೂ ಮಾಡುತ್ತಾರೆ ಆ ಕಟ್ಟೆಯಲ್ಲಿ ಒಂದು ಬೇವಿನ ಗಿಡ ಇದೆ, ಊರಿನ ಜನರಿಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದಾಗ ಆ ಬೇವಿನ ಎಲೆಯನ್ನು ಹೊಟ್ಟೆಯಲ್ಲಿ ಒಳಗೆ ತೆಗೆದುಕೊಂಡಾಗ ಅದು ಎಲ್ಲ ರೋಗವನ್ನು ಹೋಗಲಾಡಿಸುತ್ತದೆ ಮತ್ತೊಂದು ವಿಷಯ ಎಂದರೆ ಭೀಮಣ್ಣ ತೀರಿಕೊಂಡ ನಂತರ ದೇವಿಯ ಪೂಜೆ ಮಾಡಲು ಮಾನಪ್ಪ ಎಂಬುವರಿಗೆ ಹಸ್ತಾಂತರಿಸಿದರು. ಮಾನಪ್ಪ ತೀರಿಕೊಂಡ ನಂತರ ಇದೀಗ ಮಾನಪ್ಪ ಎಂಬುವರ ಪುತ್ರ ವಿರುಪಾಕ್ಷಪ್ಪ ಎಂಬವರು ಪೂಜೆಯನ್ನು ನೆರೆವೇರಿಸುತ್ತಿದ್ದಾರೆ. ಇದು ನಮ್ಮ ಸೋಮಸಾಗರ ಗ್ರಾಮದ ಶ್ರೀ ಹುಲಿಗೆಮ್ಮ ದೇವಿಯ ಮಹಿಮೆ ಎಂದು ಹೇಳಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Rao B V, Thukaram (18 August 2015). "Piety with Beauty". Deccan Herald. Retrieved 20 September 2022.
- ↑ ೨.೦ ೨.೧ ೨.೨ Pyati, Ananda Teertha (29 May 2012). "Who cares for Kanakagiri". Deccan Herald. Retrieved 20 September 2022.
- ↑ "Who cares for Kanakagiri..." Retrieved 2012-09-10.
- ↑ "Tourism, Kanakagiri". Archived from the original on 4 July 2013. Retrieved 2012-09-10.
- ↑ "Safe sanctuary". Archived from the original on 2014-02-22. Retrieved 2012-09-10.
- ↑ ಸ್ವಸಂಪಾದನೆ
- Pages using the JsonConfig extension
- Short description is different from Wikidata
- Pages using infobox settlement with bad settlement type
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ಕೊಪ್ಪಳ ಜಿಲ್ಲೆಯ ತಾಲೂಕುಗಳು
- ಕೊಪ್ಪಳ ಜಿಲ್ಲೆಯ ಪ್ರವಾಸಿ ತಾಣಗಳು
- ಕನ್ನಡ ವಿಕಿಪೀಡಿಯ ಗುಣಮಟ್ಟ ಸುಧಾರಣೆ