ಉಮರನ ಒಸಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಮರನ ಒಸಗೆ
ಉಮರನ ವಸಗೆಯ ಪರ್ಶಿಯಾದ ಮೂಲಪ್ರತಿ- Rubáiyát, cover
ರುಬಾಯ್ಯತ್ (ರುಬಾಯಿ ಛಂದಸ್ಸಿನ ಚೌಪದಿ)
ಲೇಖಕರುಡಿ.ವಿ.ಗುಂಡಪ್ಪ
ದೇಶಭಾರತ
ಭಾಷೆಕನ್ನಡ
ಪ್ರಕಾಶಕರುಕಾವ್ಯಾಲಯ, ಮೈಸೂರು(ಮೊದಲನೆಉ ಮುದ್ರಣ ೧೯೩೦)

ಉಮರನ ಒಸಗೆ ಖ್ಯಾತ ಸಾಹಿತಿ ಡಿ.ವಿ.ಗುಂಡಪ್ಪನವರು ಬರೆದ ಪುಸ್ತಕ.[೧] ಅದು ಸೂಫಿ ಸಂತ ಉಮರ ಖಯ್ಯಾಮನ ಗೀತೆಗಳು. ಎಡ್‍ವರ್ಡ್ ಫಿಟ್ ಜೆರಾಲ್ಡ್ (Edward FitzGerald(poet))ಇಂಗ್ಲಿಷ್‍ಗೆ ಬಾಷಾಂತರ ಮಾಡಿದುದನ್ನು ಡಿ.ವಿ.ಗುಂಡಪ್ಪನವರು ಕನ್ನಡಕ್ಕೆ ಬಾಷಾಂತರಿಸಿದ್ದಾರೆ.

ಗ್ರಂಥದ ಹಿನ್ನೆಲೆ[ಬದಲಾಯಿಸಿ]

  • ಸೂಫಿ ಸಂತರು ಇಸ್ಲಾಂಧರ್ವಿುಯ ಅನುಭಾವಿಗಳು; ನಿರ್ಮಲ ಮನಸ್ಸುಳ್ಳವರು; ತತ್ತ್ವಜ್ಞಾನಿಗಳು; ದೈವಭಕ್ತರು. ಇಸ್ಲಾಂಧರ್ಮದ ಪ್ರಚಾರಕರೂ ಆದ ಇವರು ಪ್ರಾರಂಭದಲ್ಲಿ ಪರ್ಶಿಯನ್ ಭಾಷೆಯಲ್ಲಿ ಕೃತಿಗಳನ್ನು ರಚಿಸಿದರು. ಅಬು ಸಯದ್ ಇಬ್ನ್ ಅಬಿಲ್ ಖೇರ್, ಫರಿದ್​ದಿನ್ ಅತ್ತರ್, ಹಫಿಜ್, ಜಾಮಿ, ಜಲಾಲುದ್ದೀನ್ ರೂಮಿ, ಉಮರ್ ಖಯ್ಯಾಮ್ ಪ್ರಖ್ಯಾತ ಸೂಫಿಗಳು. ಆತ್ಮ-ಪರಮಾತ್ಮನ ಸಮ್ಮಿಲನವನ್ನು ಭಾವಗೀತೆಗಳ ಮಾದರಿಯಲ್ಲಿ ಹಾಡಿದ ದೈವೋನ್ಮಾದಕರು ಇವರು. ಇವರ ಸಾಹಿತ್ಯನಿರ್ವಿುತಿ ‘ಸೂಫಿಯಿಸಂ’ ಎಂಬ ಶೀರ್ಷಿಕೆಯಡಿ ಸಮಾವೇಶಗೊಂಡಿದೆ.
  • ಸೂಫಿಗಳು ೧೦-೧೧ನೇ ಶತಮಾನಗಳಲ್ಲಿ ವಿಶೇಷವಾಗಿ ಕಾಣಿಸಿಕೊಂಡರು. ಇವರದು ಬರೀ ಸಾಹಿತ್ಯ ಚಳವಳಿ ಮಾತ್ರವಲ್ಲ; ಇವರ ತತ್ತ್ವಗಳು ವಿಶ್ವವಿಶಾಲವಾದವು. ಸೂಫಿಯಿಸಂ ಭಾರತದ ಬೌದ್ಧ ಹಾಗೂ ಕ್ರೖೆಸ್ತಧರ್ಮಗಳಿಂದ ಪ್ರೇರಣೆ ಪಡೆದಿದೆ. ಸೂಫಿಗಳಲ್ಲಿ ಕೆಲವರು ಧ್ಯಾನಯೋಗಕ್ಕೂ ಕೆಲವರು ಉನ್ನತಮಟ್ಟದ ನಡವಳಿಕೆಗಳಿಗೂ ಒತ್ತು ಕೊಟ್ಟಿದ್ದು ಕಂಡುಬರುತ್ತದೆ. ಅದ್ವೈತ ಹಾಗೂ ವಿಶ್ವದೇವತಾತತ್ತ್ವದತ್ತ ಒಲವು ತೋರಿದ ಸೂಫಿ ಮಹಾನುಭಾವರು ಸಾಮಾಜಿಕ ಚಿಂತನೆ ನಡೆಸಿದ್ದೂ ಗಮನಾರ್ಹವಾದ ವಿಚಾರವಾಗಿದೆ. ‘ಅಲ್​ಗಜೆಲ್’ ಈ ಚಳವಳಿಯ ಪ್ರತಿಪಾದಕ. ‘ದರವೇಶ್’ ಎಂಬ ಪಂಗಡದವರು ಸೂಫಿತತ್ತ್ವಗಳ ಪ್ರತಿಪಾದಕರು. ಉಮರ್ ಖಯ್ಯಾಮರ ಒಂದು ರುಬಾಯ್ಯತ್ (ರುಬಾಯಿ ಎಂದರೆ ನಾಲ್ಕು ಸಾಲಿನ ಛಂದಸ್ಸಿನ ಚೌಪದಿ) ಹೀಗಿದೆ:
ಎಡ್ವರ್ಡ್ ಫಿಟ್ಸ್-ಜೆರಾಲ್ಡ್

ಆಡುವವನೆಸೆವಂತೆ ಬೀಳ್ವ ಚೆಂಡಿಗದೇಕೆ
ಎಡಬಲಗಳೆಣಿಕೆ, ಸೋಲ್ ಗೆಲವುಗಳ ಗೋಜು?
ನಿನ್ನನಾರಿತ್ತಲೆಸೆದಿಹನೊ ಬಲ್ಲವನಾತ
ನೆಲ್ಲ ಬಲ್ಲವನವನು – ಬಲ್ಲನೆಲ್ಲವನು
– ಉಮರನ ಒಸಗೆ: 43

(ಇಂಗ್ಲಿಷ್ ಅನುವಾದ: ಎಡ್ವರ್ಡ್ ಫಿಟ್ಸ್-ಜೆರಾಲ್ಡ್-> ಕನ್ನಡ ಅನುವಾದ: ಡಿ.ವಿ. ಗುಂಡಪ್ಪ)
[೨]

ಇಂಗ್ಲಿಷ್ ಮೂಲ[ಬದಲಾಯಿಸಿ]

ಯೌವನದಲ್ಲಿ ಡಿ.ವಿಜಿ.
ಎಡ್ಮಂಡ್ ಜೆ ಸುಲ್ಲಿವಾನ್ ಕೃತಿ; ಟು ದಿ ರುಬೈಯಾತ್ ಆಫ್ ಒಮರ್ ಖಯ್ಯಾಮ್ ಮೊದಲ ಆವೃತ್ತಿ ಕ್ವಾಟ್ರೇನ್- 011
  • 1859 ರಿಂದ ಆರಂಭಗೊಂಡು, ಫಿಟ್ಜ್‌ಜೆರಾಲ್ಡ್ ನಾಲ್ಕು ಆವೃತ್ತಿಗಳನ್ನು (1859, 1868, 1872, 1879) ಅಧಿಕೃತಗೊಳಿಸಲಾಗಿತ್ತು ಮತ್ತು ಐದನೇ ಮರಣೋತ್ತರ ಆವೃತ್ತಿಯನ್ನು (1889) ಹೊಂದಿದ್ದು, ಒಮರ್ ಖಯ್ಯಮ್‌ನ ರುಬಿಯಾಟ್ ಅವರ ಅನುವಾದದ ಮೂರು (ಮೊದಲ, ಎರಡನೆಯ ಮತ್ತು ಐದನೇ) ಗಮನಾರ್ಹವಾಗಿ ಭಿನ್ನವಾಗಿವೆ; ಎರಡನೆಯ ಮತ್ತು ಮೂರನೆಯದು ನಾಲ್ಕನೆಯ ಮತ್ತು ಐದನೆಯಂತೆಯೇ ಬಹುತೇಕ ಒಂದೇ ಆಗಿರುತ್ತವೆ. ಮೊದಲ ಮತ್ತು ಐದನೇ ಆವೃತ್ತಿಗಳು ಬಹುತೇಕ ಸಮಾನವಾಗಿ ಮರುಮುದ್ರಣಗೊಂಡಿವೆ. ಡಿ.ವಿ.ಗುಂಡಪ್ಪನವರು ಅದನ್ನು ಕನ್ನಡಕ್ಕೆ ಬಾಷಾಂತರಿಸಿದ್ದಾರೆ.
  • ಅದರ ಒಂದು ಪದ್ಯ:

A Book of Verses underneath the Bough,
A Jug of Wine, a Loaf of Bread – and Thou
Beside me singing in the Wilderness –
Oh, Wilderness were Paradise enow!

  • ಡಿ,ವಿ.ಜಿ. ಯವರ ಅದರ ಕನ್ನಡ ಅನುವಾದ ಹೀಗಿದೆ:

ಅಲ್ಲಿ ಮರದಡಿಯಲ್ಲಿ ನಲ್ಗಾವ್ಯಮೊಂದಿರಲು,
ರೊಟ್ಟಿಯೊಂದಿನಿಸೊಂದು ಕುಡಿಕೆಯಲಿ ಮಧುವು,
ಮೇಣ್ ಮುಗುದೆ, ನೀನೆನ್ನ ಬಳಿ ಕುಳಿತು ಪಾಡಲಹ!
ಕಾಡಾದೊಡೇನದುವೆ ಸಗ್ಗ ಸುಖವೆನಗೆ.

ಸೂಫಿ[ಬದಲಾಯಿಸಿ]

ಉಮರ ಖಯ್ಯಾಮ್ -033-ಭೂಮಿಗೆ-ಉತ್ತರಿಸಲು ಸಾಧ್ಯವಿಲ್ಲ-ಅಥವಾ-ಸಮುದ್ರಗಳು; ಜೀವನದ ರಹಸ್ಯ- ಮತ್ತು ಸಮಸ್ಯೆ-> ಹಿಂದೊಂದು ಬಾಗಿಲ್,ಆ ಬೀಗಕ್ಕೆ ಕೈ ಇಲ್ಲ; ಮುಂದೆ ತೆರೆ ಅದನೆತ್ತಿ ನೋಡಲಳವಲ್ಲ; ಈ ಯೆಡೆಯೊಳೊಂದೆರಡು ದಿನ ನೀನು ನಾನೆಂದು - ಹರಟುವೆವು; ಬಳಿಕಿಲ್ಲ ನೀನು ನಾನುಗಳು.[೩]
  • ಉಮರ (18-5-1048 - 4 ಡಿಸೆಂ 1131.)ಕಾಲದಲ್ಲಿ ಮಹಮದೀಯ ಮತದಲ್ಲಿ "ಸೂಫಿ" ಎಂಬ ಏಕಾಂತೋಪಾಸನೆಯ ಪಂಥವೊಂದು ಆರಂಭವಾಗಿತ್ತು(ಕ್ರಿ.ಶ.೮೦೦). ಅದರಲ್ಲಿ ಮಹಮದ್ ಗುರುವು ಬೋಧಿಸಿದ್ದ ಧರ್ಮದ ಜೊತೆಗೆ ಕ್ರೈಸ್ತರ ವಿರಕ್ತಿಭಾವವನ್ನೂ ಬೌದ್ಧರ ಆತ್ಮ ಸಂಯಮತತ್ತ್ವವನ್ನೂ ಸೇರಿಸಿಕೊಂಡು ಜೀವಸ್ವರೂಪದ ವಿಚಾರದಲ್ಲಿ ಬೌದ್ಧರ ಮತ್ತು ಗ್ರೀಕರ ಮತಗಳನ್ನು ಮಹಮ್ಮದೀಯ ಮತಗಳೊಡನೆ ಸಮನ್ವಯಗೊಳಿಸಿಕೊಳ್ಳುವ ಪ್ರಯತ್ನದ ಫಲಿತಾಂಶವೇ "ಸೂಫಿ" ಮತವೆಂದು ಕೆಲವರ ಅಭಿಪ್ರಾಯ. ಸೂಫಿ ಸಿದ್ಧಾಂತವು ಹಿಂದೂಮತದ ಅದ್ವೈತ ವೇದಾಂತಕ್ಕೆ ಸರಿ ಹೊಂದುತ್ತದೆ ಎಂದು ಕೆಲವರ ಅಭಿಮತ. ಮನುಷ್ಯ ಜೀವವು ಅಂತರ್‍-ವಿರಕ್ತಿಪೂರ್ವಕವಾದ ಧ್ಯಾನಾನುಸಂಧಾನಗಳ ಮೂಲಕ ಪರವಸ್ತುವಿನಲ್ಲಿ ಒಂದುಗೂಡುತ್ತದೆ ಎಂಬುದು ಸೂಫಿ ಸಿದ್ಧಾಂತದ ಮುಖ್ಯಾಂಶ.[೪]

ಸಂಕೇತ ಭಾಷೆ[ಬದಲಾಯಿಸಿ]

  • ಸೂಫಿಗಳು ಅಂತರ್‍ಅನುಭವಿಗಳು.ಸುರಾಪಾನ ಮೊದಲಾದ ವಚನಗಳು ಅವರ ಉಪಾಸನಾ ವಿಧಾನದ ಸಂಕೇತ ಪದಗಳು. ಹೆಂಡದಂಗಡಿಯೆಂದರೆ ಸಾಧುಜಿಜ್ಞಾಸುಗಳ ಗೋಷ್ಠಿ. ಸಾಕಿ -ಯಾ- ಸಖಿಎಂದರೆ ಜ್ಞಾನವೃದ್ಧರಾದ ತತ್ತ್ವಾಭ್ಯಾಸಿ.ಬಟ್ಟಲೆಂದರೆ ಮನುಷ್ಯನ ಹೃದಯ. ಪ್ರಿಯೆ ಎಂದರೆ ವಿಚಾರದಲ್ಲಿ ಸಹಭಾಗಿಯಾದ ಸ್ನೇಹಿತ. ಗಂಧರ್ವನೆಂದರೆ ದೈವಸಾಕ್ಷಾತ್ಕಾರಪಡೆದ ಸಿದ್ಧ; ಮದ್ಯವೆಂದರೆ ಭಗವದ್ಭಕ್ತಿಯ ಆನಂದ. ಇವು ಅವರ ಜೀವ- ಪರಮಾತ್ಮ ಐಕ್ಯತೆಯ ಪಾರಭಾಷಿಕ ಪದಸರಣಿ. ಉಮರನು ಸ್ವಯಂ ಸೂಫಿ ಮತದವನು ಎಂದು ಕೆಲವರು ಬರೆದಿದ್ದಾರೆ.[೪]

ಉಮರ ಖಯ್ಯಾಮನ ಸ್ವ-ಚರಮಗೀತೆ[ಬದಲಾಯಿಸಿ]

ಓ ದೇವ ನೀನರಿವೆ ನಿನ್ನನಾರಸುತ್ತೆ
ಪಟ್ಟೆಲ್ಲ ಪಾಡುಗಳನಾದನಿತು ಪಟ್ಟೆನ್;
ಎನಗೆ ಬಂದರಿವಿನಾ ಕೊರೆಯ ನೀಂ ಮರೆತುಬಿಡು,
ನಾನರಸಿದವನೆಂದು ಕನಿಕರಿಸಿನೋಡು.

  • (ಓ ದೇವ ನೀನು+ ಅರಿವೆ ನಿನ್ನನು+ ಅರಸುತ್ತೆ ಪಟ್ಟ+ ಎಲ್ಲ ಪಾಡುಗಳನು+ ಆದ+ ಅನಿತು ಪಟ್ಟೆನ್; ಎನಗೆ ಬಂದ+ ಅರಿವಿನ+ ಆ ಕೊರೆಯ ನೀಂ ಮರೆತುಬಿಡು, ನಾನು+ ಅರಸಿದವನು (ದೇವ, ನಾನು ನಿನ್ನನ್ನು ಹುಡುಕಿದವನು)+ ಎಂದು ಕನಿಕರಿಸಿ ನೋಡು.)
  • ಓ ಸ್ವಾಮೀ ನನ್ನ ಸಕ್ತಿಗೆ ಸಾಧ್ಯವಾದಷ್ಟುಮಟ್ಟಿಗೆ ನಿನ್ನನ್ನು ತಿಳಿದುಕೊಳ್ಳಲು ಪ್ರಯತ್ನಿಸಿದ್ದೇನೆ. ನನ್ನನ್ನು ಕ್ಷಮಿಸು. ನಿನ್ನನ್ನು ನಾನು ಕಾಣಲು ಮಾಡಿದ ಪ್ರಯತ್ನವೇನನ್ನ ವಿಷಯದಲ್ಲಿ ನಿನಗೆ ಒಪ್ಪಸಬಹುದಾದ ಸಹಾಯ ವಚನ (ಶಿಪಾರಸು).
  • ಈ ಪ್ರಾರ್ಥನೆಯನ್ನು ಮಾಡಿದ ಮೇಲೆ ಉಮರನು ನೆಲದ ಮೇಲೆ ಮಲಗಿ ಸಂಕಟವಿಲ್ಲದೆ ಯಾತನೆಯ ಸೂಚನೆಯಿಲ್ಲದೆ ದೇಹವನ್ನು ತೊರೆದನು ಎಂದು ಹೇಳುವರು.[೫]

ಎಡ್ವರ್ಡ್ ಫಿಟ್ಜ್‍ ಜೆರಾಲ್ಡ್[ಬದಲಾಯಿಸಿ]

  • 'ಒಮರ್ ಖಯ್ಯಾಮ್‌ನ ರುಬಿಯಾಟ್' ಎಂಬುದು ಎಡ್ವರ್ಡ್ ಫಿಟ್ಜ್‌ಜೆರಾಲ್ಡ್ 1859 ರಲ್ಲಿ ಪರ್ಷಿಯನ್ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಕ್ಕೆ ನೀಡಿದ ತನ್ನ ಚೌಪದಿಗಳ (ರುಬಿಯಾಟ್)ಸಂಗ್ರಹದ ಹೆಸರು. ಅವನ ಪುಸ್ತಕದಲ್ಲಿ ಒಮರ್ ಖಯ್ಯಾಮ್ ಗೆ "ಪರ್ಷಿಯಾದ ಖಗೋಳಶಾಸ್ತ್ರಜ್ಞ-ಕವಿ, ಗಣಿತಜ್ಞ" ಎಂದು ಹೆಸರಿಸಿದ್ದಾನೆ. ಎಡ್ವರ್ಡ್ ಫಿಟ್ಜ್‌ಜೆರಾಲ್ಡ್ (31 ಮಾರ್ಚ್ 1809 - 14 ಜೂನ್ 1883) ಒಬ್ಬ ಇಂಗ್ಲಿಷ್ ಕವಿ ಮತ್ತು ಬರಹಗಾರ, ಇವರನ್ನು ಒಮರ್ ಖಯ್ಯಾಮ್‌ನ ರುಬೈಯಾತ್‌ನ ಮೊದಲ ಮತ್ತು ಅತ್ಯಂತ ಪ್ರಸಿದ್ಧ ಇಂಗ್ಲಿಷ್ ಅನುವಾದದ ಕವಿ ಎಂದು ಕರೆಯಲಾಗುತ್ತದೆ. ಅವರ ಹೆಸರನ್ನು ಫಿಟ್ಜ್‌ಜೆರಾಲ್ಡ್ ಮತ್ತು ಫಿಟ್ಜ್‌ಗೆರಾಲ್ಡ್ ಎಂದು ಬರೆಯುವುದನ್ನು ಕಾಣಬಹುದು. ಫಿಟ್ಜ್‌ಜೆರಾಲ್ಡ್‌ನ ಬಳಕೆಯು ಅವರ ಸ್ವಂತ ಪ್ರಕಟಣೆಗಳು, 'ಕ್ವಿಲ್ಲರ್-ಕೌಚ್‌ನ ಆಕ್ಸ್‌ಫರ್ಡ್ ಬುಕ್ ಆಫ್ ಇಂಗ್ಲಿಷ್' ಪದ್ಯದಂತಹ ಸಂಕಲನಗಳು ಮತ್ತು 1960 ರ ದಶಕದವರೆಗೆ ಅವರ ಪುಸ್ತಕಗಳಿಗೆ ಹೆಚ್ಚಿನ ಉಲ್ಲೇಖಗಳು, ಬೇಡಿಕೆಗಳು ಕಂಡುಬರುತ್ತವೆ.[೬]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಉಮರನ ಒಸಗೆ (Umarana Osage);by ;D.V. Gundappa;liked it 3.00 • Rating details • 1 rating • 1 review
  2. ಸೂಫಿ ತತ್ವ ಮತ್ತು ಮೊಹರಂ
  3. ಉಮರನ ಒಸಗೆ-ಡಿವಿಜಿ - ಪದ್ಯ 33
  4. ೪.೦ ೪.೧ [ಉಮರನ ಒಸಗೆ- ಉಮರ್ ಖಯ್ಯಾಮ್ - ಪುಟ- ೨೫-೨೬-೨೭.]
  5. ಉಮರನ ಒಸಗೆ- ಉಮರ್‍ ಖಯ್ಯಾಮ್-ಡಿ.ವಿ.ಜಿ.-ಪುಟ-೩೦,೩೧
  6. a Gosse, Edmund (1911). "FitzGerald, Edward". In Chisholm, Hugh (ed.)Cambridge University Press. p. 443.