ವಿಷಯಕ್ಕೆ ಹೋಗು

ಉಪಗ್ರಹ ವಾಹಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪೋಲಾರ್ ಉಪಗ್ರಹ ಉಡಾವಣಾ ವಾಹನ ಸಿ 34; ಉಪಗ್ರಹ ಉಡ್ಡಯನ ವಾಹನ

ಉಪಗ್ರಹ ವಾಹಕವೆಂದರೆ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡ್ಡಯಣ (ಹೊತ್ತಯ್ಯುವ) ವಾಹಕ ರಾಕೆಟ್ ಎಂದರ್ಥ. ಪ್ರಪಂಚದಲ್ಲಿ ಅಮೇರಿಕ, ರಷ್ಯಾ, ಫ್ರಾನ್ಸ್,ಚೀನಾ,ಜಪಾನ್ ಮತ್ತು ಭಾರತ ದೇಶಗಳು ಮಾತ್ರ ಉಪಗ್ರಹ ಉಡ್ಡಯಣ ವಾಹಕಗಳನ್ನು ಹೊಂದಿವೆ. ಇವುಗಳ ಸಾಮರ್ಥ್ಯ ಹೆಚ್ಚು-ಕಮ್ಮಿ ಯಿರುತ್ತವೆ. ಸಾಮರ್ಥ್ಯವೆಂದರೆ ಕೊಂಡೊಯ್ಯಬಲ್ಲ ಉಪಗ್ರಹದ ತೂಕ ಮತ್ತು ಕಕ್ಷೆ .ಸಾಮರ್ಥ್ಯದ ಆಧಾರದ ಮೇಲೆ ಉಡ್ಡಯಣ ವಾಹಕಗಳನ್ನು ವಿಂಗಡಿಸಬಹುದು. []

ಭಾರತದ ಉಡ್ಡಯಣ ವಾಹಕ ಗಳು

[ಬದಲಾಯಿಸಿ]
  • ೧. ಎಸ್.ಎಲ್.ವಿ.(SLV-Satellite Lauch Vehicle)
  • ೨. ಎ.ಎಸ್.ಎಲ್.ವಿ.(ASLV-Augmented Satellite Launch Vehicle)
  • ೩. ಪಿ.ಎಸ್.ಎಲ್.ವಿ.(PSLV-Polar Satellite Launch Vehicle)
  • ೪. ಜಿ.ಎಸ್.ಎಲ್.ವಿ.(GSLV-Geosynchronous Satellite Launch Vehicle)
  • ೫. ಜಿ.ಎಸ್.ಎಲ್.ವಿ ಮಾರ್ಕ್-೩ (GSLV-Mark-3)
  • ಈಗ ಎಸ್.ಎಲ್.ವಿ., ಮತ್ತು ಎ.ಎಸ್.ಎಲ್.ವಿ., ಉಡ್ಡಯಣ ವಾಹಕಗಳು ಚಾಲ್ತಿಯಲ್ಲಿಲ್ಲ. ಇಸ್ರೋ ಸಂಸ್ಥೆಯು ಜಿ.ಎಸ್.ಎಲ್.ವಿ.- ಮಾರ್ಕ್-೩ ಉಡ್ಡಯಣ ವಾಹಕವನ್ನು ಇನ್ನೂ ಅಭಿವೃದ್ದಿಪಡಿಸುತ್ತಲಿದೆ.

ಇಸ್ರೋ ಸಂಸ್ಥೆಯು ಅಭಿವೃದ್ದಿಪಡಿಸಿರುವ ಉಡ್ಡಯಣ ವಾಹಕಗಳಲ್ಲಿ ಘನ ಮತ್ತು ದ್ರವ ಇಂಧನಗಳನ್ನು ಬಳಸುವ ವಿವಿಧ ತಂತ್ರಜ್ಞಾನಗಳನ್ನೊಳಗೊಂಡಿವೆ. ತಾನು ಅಭಿವೃದ್ದಿಪಡಿಸಿರುವ ದ್ರವ ಇಂಧನ ಬಳಸುವ ಇಂಜಿನ್ಗೆ (ಯಂತ್ರಕ್ಕೆ) ವಿಕಾಸ್ ಇಂಜಿನ್ ಎಂದು ಹೆಸರಿಸಿದೆ. ಇದು UDMH/UH-25 ಇಂದನವನ್ನು ಮತ್ತು N2O4 (ಸಾರಜನಕದ ಟೆಟ್ರಾ ಆಕ್ಸ್ಯ್ ಡ್) ದಹಕ (ಆಮ್ಲಜನಕವನ್ನು ಹೊಂದಿರುವ ವಸ್ತು) ವನ್ನು ಉಪಯೋಗಿಸುತ್ತದೆ. ಈ ಎರಡೂ ಇಂಧನಗಳು ವಿಷಯುಕ್ತ ರಾಸಾಯನಿಕಗಳಾಗಿವೆ. ಇವುಗಳನ್ನು ಬಹಳ ಜಾಗರುಕತೆಯಿಂದ ಉಪಯೋಗಿಸಲಾಗುತ್ತದೆ.[]

ಪ್ರಪಂಚದಲ್ಲಿ ಚಾಲ್ತಿಯಲ್ಲಿರು ಪ್ರಮುಖ ರಾಕೇಟ್ ಗಳು

[ಬದಲಾಯಿಸಿ]
ದೇಶ ರಾಕೇಟ್
ಪ್ರಾನ್ಸ್ ಏರಿಯನ್-೫
ಅಮೇರಿಕ ಡೆಲ್ಟಾ
ಚೀನಾ ಲಾಂಗ್ ಮಾರ್ಚ್
ರಷ್ಯಾ ಪ್ರೋಟಾನ್

[]

ಉಲ್ಲೇಖ

[ಬದಲಾಯಿಸಿ]
  1. Launch Vehicles
  2. TS Subramanian. "Silver jubilee of the first successful SLV-3". Frontiline. Archived from the original on 8 February 2018
  3. "Department of Space, Indian Space Research Organisation". Archived from the original on 2019-12-11. Retrieved 2019-12-29.