ಉಪಗ್ರಹ ವಾಹಕ
ಗೋಚರ
ಉಪಗ್ರಹ ವಾಹಕವೆಂದರೆ ಉಪಗ್ರಹವನ್ನು ಅಂತರಿಕ್ಷಕ್ಕೆ ಉಡ್ಡಯಣ (ಹೊತ್ತಯ್ಯುವ) ವಾಹಕ ರಾಕೆಟ್ ಎಂದರ್ಥ. ಪ್ರಪಂಚದಲ್ಲಿ ಅಮೇರಿಕ, ರಷ್ಯಾ, ಫ್ರಾನ್ಸ್,ಚೀನಾ,ಜಪಾನ್ ಮತ್ತು ಭಾರತ ದೇಶಗಳು ಮಾತ್ರ ಉಪಗ್ರಹ ಉಡ್ಡಯಣ ವಾಹಕಗಳನ್ನು ಹೊಂದಿವೆ. ಇವುಗಳ ಸಾಮರ್ಥ್ಯ ಹೆಚ್ಚು-ಕಮ್ಮಿ ಯಿರುತ್ತವೆ. ಸಾಮರ್ಥ್ಯವೆಂದರೆ ಕೊಂಡೊಯ್ಯಬಲ್ಲ ಉಪಗ್ರಹದ ತೂಕ ಮತ್ತು ಕಕ್ಷೆ .ಸಾಮರ್ಥ್ಯದ ಆಧಾರದ ಮೇಲೆ ಉಡ್ಡಯಣ ವಾಹಕಗಳನ್ನು ವಿಂಗಡಿಸಬಹುದು. [೧]
ಭಾರತದ ಉಡ್ಡಯಣ ವಾಹಕ ಗಳು
[ಬದಲಾಯಿಸಿ]- ೧. ಎಸ್.ಎಲ್.ವಿ.(SLV-Satellite Lauch Vehicle)
- ೨. ಎ.ಎಸ್.ಎಲ್.ವಿ.(ASLV-Augmented Satellite Launch Vehicle)
- ೩. ಪಿ.ಎಸ್.ಎಲ್.ವಿ.(PSLV-Polar Satellite Launch Vehicle)
- ೪. ಜಿ.ಎಸ್.ಎಲ್.ವಿ.(GSLV-Geosynchronous Satellite Launch Vehicle)
- ೫. ಜಿ.ಎಸ್.ಎಲ್.ವಿ ಮಾರ್ಕ್-೩ (GSLV-Mark-3)
- ಈಗ ಎಸ್.ಎಲ್.ವಿ., ಮತ್ತು ಎ.ಎಸ್.ಎಲ್.ವಿ., ಉಡ್ಡಯಣ ವಾಹಕಗಳು ಚಾಲ್ತಿಯಲ್ಲಿಲ್ಲ. ಇಸ್ರೋ ಸಂಸ್ಥೆಯು ಜಿ.ಎಸ್.ಎಲ್.ವಿ.- ಮಾರ್ಕ್-೩ ಉಡ್ಡಯಣ ವಾಹಕವನ್ನು ಇನ್ನೂ ಅಭಿವೃದ್ದಿಪಡಿಸುತ್ತಲಿದೆ.
ಇಂಧನ
[ಬದಲಾಯಿಸಿ]ಇಸ್ರೋ ಸಂಸ್ಥೆಯು ಅಭಿವೃದ್ದಿಪಡಿಸಿರುವ ಉಡ್ಡಯಣ ವಾಹಕಗಳಲ್ಲಿ ಘನ ಮತ್ತು ದ್ರವ ಇಂಧನಗಳನ್ನು ಬಳಸುವ ವಿವಿಧ ತಂತ್ರಜ್ಞಾನಗಳನ್ನೊಳಗೊಂಡಿವೆ. ತಾನು ಅಭಿವೃದ್ದಿಪಡಿಸಿರುವ ದ್ರವ ಇಂಧನ ಬಳಸುವ ಇಂಜಿನ್ಗೆ (ಯಂತ್ರಕ್ಕೆ) ವಿಕಾಸ್ ಇಂಜಿನ್ ಎಂದು ಹೆಸರಿಸಿದೆ. ಇದು UDMH/UH-25 ಇಂದನವನ್ನು ಮತ್ತು N2O4 (ಸಾರಜನಕದ ಟೆಟ್ರಾ ಆಕ್ಸ್ಯ್ ಡ್) ದಹಕ (ಆಮ್ಲಜನಕವನ್ನು ಹೊಂದಿರುವ ವಸ್ತು) ವನ್ನು ಉಪಯೋಗಿಸುತ್ತದೆ. ಈ ಎರಡೂ ಇಂಧನಗಳು ವಿಷಯುಕ್ತ ರಾಸಾಯನಿಕಗಳಾಗಿವೆ. ಇವುಗಳನ್ನು ಬಹಳ ಜಾಗರುಕತೆಯಿಂದ ಉಪಯೋಗಿಸಲಾಗುತ್ತದೆ.[೨]
ಪ್ರಪಂಚದಲ್ಲಿ ಚಾಲ್ತಿಯಲ್ಲಿರು ಪ್ರಮುಖ ರಾಕೇಟ್ ಗಳು
[ಬದಲಾಯಿಸಿ]ದೇಶ | ರಾಕೇಟ್ |
---|---|
ಪ್ರಾನ್ಸ್ | ಏರಿಯನ್-೫ |
ಅಮೇರಿಕ | ಡೆಲ್ಟಾ |
ಚೀನಾ | ಲಾಂಗ್ ಮಾರ್ಚ್ |
ರಷ್ಯಾ | ಪ್ರೋಟಾನ್ |
ನೋಡಿ
[ಬದಲಾಯಿಸಿ]- ಪೋಲಾರ್ ಉಪಗ್ರಹ ಉಡಾವಣಾ ವಾಹನ ಸಿ 34 (ಪಿಎಸ್ಎಲ್ವಿ)
- ಪಿಎಸ್ಎಲ್ವಿ–ಸಿ38 - ಕಾರ್ಟೊಸ್ಯಾಟ್ 2
- ಪೋಲಾರ್ ಉಪಗ್ರಹ ಉಡಾವಣಾ ವಾಹನ (ಪಿಎಸ್ಎಲ್ವಿ)ಸಿ-37
- ಮಂಗಳಯಾನ
- ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ
ಉಲ್ಲೇಖ
[ಬದಲಾಯಿಸಿ]- ↑ Launch Vehicles
- ↑ TS Subramanian. "Silver jubilee of the first successful SLV-3". Frontiline. Archived from the original on 8 February 2018
- ↑ "Department of Space, Indian Space Research Organisation". Archived from the original on 2019-12-11. Retrieved 2019-12-29.