ವಿಷಯಕ್ಕೆ ಹೋಗು

ಇಂಪ್ರೆಷನಿಸಮ್(ಚಿತ್ತಪ್ರಭಾವ ನಿರೂಪಣ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕ್ಲಾಡೆ ಮೊನೆಟ್‌ನ ಇಂಪ್ರೆಷನ್, ಸೊಲೈಲ್ ಲೆವಂಟ್ (ಇಂಪ್ರೆಷನ್ಸ ಸನ್‌ರೈಸ್), 1872, ತೈಲಚಿತ್ರ, ಮ್ಯೂಸೀ ಮಾರ್ಮೊಟ್ಟನ್

ಇಂಪ್ರೆಷನಿಸಮ್(ಚಿತ್ತಪ್ರಭಾವ ನಿರೂಪಣ) ಎಂದರೆ 19ನೇ ಶತಮಾನದ ಒಂದು ಕಲಾ ಚಳವಳಿ, ಇದು ಪ್ಯಾರಿಸ್ ಮೂಲದ ವರ್ಣಚಿತ್ರ ಕಲಾವಿದರ ಮುಕ್ತ ಸಂಘಟನೆಯಾಗಿ ಆರಂಭವಾಯಿತು. ಅವರ ಸ್ವತಂತ್ರ ಪ್ರದರ್ಶನಗಳು 1870 ಮತ್ತು 1880ರ ದಶಕದಲ್ಲಿ ಅವರಿಗೆ ಪ್ರಾಮುಖ್ಯತೆಯನ್ನು ತಂದುಕೊಟ್ಟವು. ಈ ಚಳವಳಿಯ ಹೆಸರನ್ನು ಕ್ಲಾಡೆ ಮೊನೆಟ್‌ನ ಕೃತಿ ಇಂಪ್ರೆಷನ್, ಸನ್‌ರೈಸ್ (ಇಂಪ್ರೆಷನ್, ಸೊಲೈಲ್ ಲೆವಂಟ್) ನಿಂದ ಪಡೆಯಲಾಗಿದೆ. ಇದು ವಿಮರ್ಶಕ ಲೂಯಿಸ್ ಲೆರಾಯ್‌‌ಗೆ ಲಿ ಚ್ಯಾರಿವರಿ ಯಲ್ಲಿ ಪ್ರಕಟವಾದ ಒಂದು ವಿಡಂಬನಾ ವಿಮರ್ಶೆಯಲ್ಲಿ ಈ ಪದವನ್ನು ಸೃಷ್ಟಿಸಲು ಉತ್ತೇಜಿಸಿತು. ಚಿತ್ತಪ್ರಭಾವ ನಿರೂಪಣವಾದಿ(ಇಂಪ್ರೆಷನಿಸ್ಟ್) ವರ್ಣಚಿತ್ರಗಳ ವಿಶೇಷ ಲಕ್ಷಣಗಳೆಂದರೆ ಹೆಚ್ಚುಕಡಿಮೆ ಸಣ್ಣ, ತೆಳ್ಳಗಿನ ಆದರೂ ಗೋಚರಿಸುವ ಕುಂಚ ರೇಖೆಗಳು, ತೆರೆದ ಸಂಯೋಜನೆ, ಬದಲಾಗುವ ಗುಣಗಳಲ್ಲಿಯೂ ಬೆಳಕಿನ ನಿಖರವಾದ ಚಿತ್ರಣ (ಹೆಚ್ಚಾಗಿ ಸಮಯ ಕಳೆಯುವುದರ ಪರಿಣಾಮಗಳನ್ನು ಒತ್ತಿ ಹೇಳುತ್ತದೆ), ಸಾಮಾನ್ಯ ವಿಷಯ, ಮಾನವನ ಗ್ರಹಿಕೆ ಮತ್ತು ಅನುಭವದ ಬಹುಮುಖ್ಯ ಅಂಶವಾಗಿ ಚಳವಳಿ ಯ ಸೇರಿಸುವಿಕೆ ಹಾಗೂ ಅಸಾಮಾನ್ಯ ವೀಕ್ಷಣ ದೃಷ್ಟಿಕೋನಗಳು. ದೃಶ್ಯ ಕಲೆಗಳಲ್ಲಿ ಚಿತ್ತಪ್ರಭಾವ ನಿರೂಪಣದ ಬೆಳವಣಿಗೆಯ ನಂತರ ಅತಿ ಶೀಘ್ರದಲ್ಲಿ ಇತರ ಮಾಧ್ಯಮದಲ್ಲಿ ಸದೃಶ ಚಳವಳಿಗಳು ಆರಂಭವಾದವು, ಇವು ಚಿತ್ತಪ್ರಭಾವ ನಿರೂಪಣವಾದಿ ಸಂಗೀತ ಮತ್ತು ಚಿತ್ತಪ್ರಭಾವ ನಿರೂಪಣವಾದಿ ಸಾಹಿತ್ಯ ಎಂದು ಪ್ರಸಿದ್ಧಿಯಾದವು. ಚಿತ್ತಪ್ರಭಾವ ನಿರೂಪಣವು ಈ ಶೈಲಿಯಲ್ಲಿ ರಚಿತವಾದ ಕಲೆಯನ್ನೂ, ಆದರೆ 19ನೇ ಶತಮಾನದ ಉತ್ತರಾರ್ಧದ ನಂತರ, ವಿವರಿಸುತ್ತದೆ.

ಸ್ಥೂಲ ಅವಲೋಕನ

[ಬದಲಾಯಿಸಿ]
ಆಲ್ಫ್ರೆಡ್ ಸಿಸ್ಲೆಯ ಬ್ರಿಡ್ಜ್ ಅಟ್ ವಿಲ್ಲೆನ್ಯೂವೆ-ಲಾ-ಗ್ಯಾರೆನ್ನೆ, 1872, ಮೆಟ್ರೊಪೊಲಿಟನ್ ಮ್ಯೂಸಿಯಂ ಆಫ್ ಆರ್ಟ್

ಮೊದಮೊದಲ ಚಿತ್ತಪ್ರಭಾವ ನಿರೂಪಣವಾದಿಗಳು ತೀವ್ರಗಾಮಿಗಳಾಗಿದ್ದು ಸಾಂಪ್ರದಾಯಿಕ ವರ್ಣಚಿತ್ರದ ನಿಯಮಗಳನ್ನು ಮುರಿದರು. ಯುಜೀನ್ ಡೆಕ್ಲಾಕ್ರೊಯಕ್ಸ್ ಮೊದಲಾದ ವರ್ಣಚಿತ್ರಕಾರರ ಕೆಲಸಗಳಿಂದ ಸ್ಫೂರ್ತಿ ಪಡೆದ ಅವರು ಬಣ್ಣಗಳನ್ನು ನೀಡಲು, ಸ್ವತಂತ್ರವಾಗಿ ಕುಂಚದಿಂದ ರಚಿಸಲು, ಗೆರೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲು ಆರಂಭಿಸಿದರು. ಸ್ಟುಡಿಯೊದಿಂದ ಹೊರಗೆ ಮತ್ತು ಆಧುನಿಕ ಜಗತ್ತಿನಲ್ಲಿ ವರ್ಣಚಿತ್ರ ರಚಿಸುವ ಕಾರ್ಯವನ್ನು ಕೈಗೊಂಡರು. ಹಿಂದೆ ಒಳಾಂಗಣದಲ್ಲಿ ಸಾಮಾನ್ಯವಾಗಿ ಪ್ರಸ್ತುತದ ಜೀವನ, ಭಾವಚಿತ್ರಗಳು ಮತ್ತು ಭೂದೃಶ್ಯಗಳ ವರ್ಣಚಿತ್ರ ರಚಿಸಲಾಗುತ್ತಿತ್ತು.[] ಈ ಚಿತ್ತಪ್ರಭಾವ ನಿರೂಪಣವಾದಿಗಳು ಎನ್ ಪ್ಲೇನ್ ಏರ್ ‌ನ ವರ್ಣಚಿತ್ರ-ರಚಿಸುವ ಮೂಲಕ ಸೂರ್ಯನ ಬೆಳಕಿನ ಕ್ಷಣಿಕ ಮತ್ತು ಅಸ್ಥಿರ ಪ್ರಭಾವಗಳನ್ನು ಸೆರೆಹಿಡಿಯಬಹುದೆಂದು ಕಂಡುಕೊಂಡರು. ಆಧುನಿಕ ಜೀವನದ ನೈಜ ದೃಶ್ಯಗಳ ವರ್ಣಚಿತ್ರ ರಚಿಸುವ ಮೂಲಕ ಅವರು ವಿವರಗಳ ಬದಲಿಗೆ ಸಂಪೂರ್ಣ ಸದೃಶ್ಯ ಪ್ರಭಾವಗಳನ್ನು ಚಿತ್ರಿಸಿದರು. ತೀವ್ರ ಬಣ್ಣದ ಪ್ರಭಾವವನ್ನು ಪಡೆಯಲು ಅವರು ಮಿಶ್ರ ಮತ್ತು ಹದವಾಗಿ ಬೆರೆಸಿಲ್ಲದ ಅಥವಾ ಮಾರ್ಪಡಿಸಿಲ್ಲದ ಶುದ್ಧ ಬಣ್ಣದ ಸಣ್ಣ 'ಒಡೆದ' ಕುಂಚ ರೇಖೆಗಳನ್ನು ಬಳಸಿದರು. ಫ್ರಾನ್ಸಿನಲ್ಲಿ ಚಿತ್ತಪ್ರಭಾವ ನಿರೂಪಣದ ಬೆಳವಣಿಗೆಯು ಮ್ಯಾಚಿಯೋಲಿ ಎಂಬ ಇಟಲಿಯ ವರ್ಣಚಿತ್ರಕಲಾವಿದರು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದ ವಿನ್ಸ್ಲೊ ಹೋಮರ್ ಮೊದಲಾದವರನ್ನೂ ಒಳಗೊಂಡಂತೆ ಅಸಂಖ್ಯಾತ ಇತರ ವರ್ಣಚಿತ್ರಕಾರರು ಈ ಚಳವಳಿಗೆ ವಿಶಿಷ್ಟವಾದ ಚಿತ್ತಪ್ರಭಾವ ನಿರೂಪಣವಾದಿಗಳು ಅಭಿವೃದ್ಧಿಪಡಿಸಿದ ಹೊಸ ವಿಧಾನ ಪ್ಲೇನ್ ಏರ್ ವರ್ಣಚಿತ್ರ-ರಚನೆಯನ್ನು ಆರಂಭಿಸಿದಾಗ ಸಂಭವಿಸಿತು. ಇದರ ಬೆಂಬಲಿಗರು ಒಂದು ಭಿನ್ನ ದೃಷ್ಟಿಕೋನದಲ್ಲಿ ವಾದಿಸುತ್ತಾ, ಇದು ನೇರ ಭಂಗಿ ಮತ್ತು ಸಂಯೋಜನೆಯ, ಗಾಢ ಮತ್ತು ವಿವಿಧ ಬಣ್ಣಗಳಲ್ಲಿ ವ್ಯಕ್ತಪಡಿಸಿದ ಬೆಳಕಿನ ಪಾತ್ರದ ಒಂದು ಪ್ರತ್ಯಕ್ಷತೆ ಮತ್ತು ಚಳವಳಿಯ ಕಲೆಯಾಗಿದೆ ಎಂದು ಹೇಳಿದ್ದಾರೆ. ಮೊದಲು ವಿರೋಧ ವ್ಯಕ್ತಪಡಿಸಿದ ಮಂದಿ ಕ್ರಮೇಣ ಚಿತ್ತಪ್ರಭಾವ ನಿರೂಪಣವಾದಿಗಳು ತಾಜಾ ಮತ್ತು ಮೂಲಭೂತ ದೃಶ್ಯವನ್ನು ಸೆರೆಹಿಡಿದಿದ್ದಾರೆಂದು ನಂಬಲು ಆರಂಭಿಸಿದರು, ಆದರೂ ಇದು ಕಲಾ ವಿಮರ್ಶಕರು ಮತ್ತು ಸಂಘಟನೆಗಳಿಂದ ಅನುಮೋದನೆಯನ್ನು ಪಡೆಯಲಿಲ್ಲ. ವಸ್ತುವನ್ನು ಪುನಃ ರಚಿಸುವ ಬದಲಿಗೆ ಆ ವಸ್ತುವನ್ನು ನೋಡುವ ಕಣ್ಣಿನ ಸಂವೇದನೆಯನ್ನು ಪುನಃರೂಪಿಸುವ ಮೂಲಕ ಮತ್ತು ಭಾರಿ ವಿಧಾನಗಳು ಮತ್ತು ಪ್ರಕಾರಗಳನ್ನು ರಚಿಸುವ ಮೂಲಕ ಚಿತ್ತಪ್ರಭಾವ ನಿರೂಪಣವು ವರ್ಣಚಿತ್ರದ ವಿವಿಧ ಚಳವಳಿಗಳಿಗೆ ಒಂದು ಪೂರ್ವಗಾಮಿ ಮೂಲವಾಯಿತು, ಇದನ್ನು ನಿಯೊ-ಚಿತ್ತಪ್ರಭಾವ ನಿರೂಪಣ, ನಂತರದ-ಚಿತ್ತಪ್ರಭಾವ ನಿರೂಪಣ, ಉಜ್ವಲ ವರ್ಣಚಿತ್ರಣ ಮತ್ತು ಘನಾಕೃತಿಕಲೆ ಮೊದಲಾದವು ಅನುಸರಿಸಿದವು.

ಪ್ರಾರಂಭದ ದಿನಗಳು

[ಬದಲಾಯಿಸಿ]
ಪಿಯೆರ್ರೆ-ಆಗಸ್ಟೆ ರೆನಾಯರ್‌ನ ಡ್ಯಾನ್ಸ್ ಅಟ್ ಲೆ ಮೌಲಿನ್ ಡಿ ಲಾಗ್ಯಾಲೆಟ್ಟೆ (ಬಾಲ್ ಡ್ಯು ಮೌಲಿನ್ ಡಿ ಲಾ ಗ್ಯಾಲೆಟ್ಟೆ), ಮ್ಯೂಸೀ ಡಿ ಆರ್ಸೆ, 1876

ಚಕ್ರವರ್ತಿ ನೆಪೋಲಿಯನ್ III ಪ್ಯಾರಿಸ್ಅನ್ನು ಪುನಃರಚಿಸಿದರಿಂದ ಮತ್ತು ಯುದ್ಧವನ್ನು ನಡೆಸಿದರಿಂದ ಬದಲಾದ ಪರಿಸರದಲ್ಲಿ 19ನೇ ಶತಮಾನದ ಮಧ್ಯಾವಧಿಯಲ್ಲಿ ಅಕಾಡೆಮೀ ಡೆಸ್ ಬಿಯಾಕ್ಸ್-ಆರ್ಟ್ಸ್ ಫ್ರೆಂಚ್ ಕಲೆಯಲ್ಲಿ ಪ್ರಬಲವಾಯಿತು. ಅಕಾಡೆಮೀಯು ವಿಷಯ ಮತ್ತು ಶೈಲಿಗಳೆರಡಲ್ಲೂ ಫ್ರೆಂಚ್ ವರ್ಣಚಿತ್ರದ ಸಾಂಪ್ರದಾಯಿಕ ಪ್ರಮಾಣಕಗಳ ಬೆಂಬಲಿಗವಾಗಿತ್ತು. ಐತಿಹಾಸಿಕ ವಿಷಯಗಳು, ಧಾರ್ಮಿಕ ಅಂಶಗಳು ಮತ್ತು ಭಾವಚಿತ್ರಗಳಿಗೆ (ಭೂದೃಶ್ಯ ಮತ್ತು ಪ್ರಸ್ತುತದ ಜೀವನವು ಇರಲಿಲ್ಲ) ಮಹತ್ವ ಕೊಡಲಾಯಿತು ಹಾಗೂ ಅಕಾಡೆಮೀ ಎಚ್ಚರಿಕೆಯಿಂದ ಪೂರ್ಣಗೊಳಿಸಿದ ಚಿತ್ರಗಳನ್ನು ರಚಿಸಿತು, ಅವನ್ನು ಹತ್ತಿರದಿಂದ ವೀಕ್ಷಿಸಿದಾಗ ನೈಜತೆಯನ್ನು ಪ್ರತಿಬಿಂಬಿಸುತ್ತಿದ್ದವು. ಬಣ್ಣವನ್ನು ಮಬ್ಬಾಗಿ ಮಿತವಾಗಿ ಬಳಸಲಾಗಿತ್ತು ಹಾಗೂ ಕುಂಚ ರೇಖೆಗಳನ್ನು ಕಾಣಿಸದಂತೆ ರಚಿಸಲಾಗಿತ್ತು, ಇವು ವರ್ಣಚಿತ್ರಕಾರರ ವ್ಯಕ್ತಿತ್ವ, ಭಾವನೆಗಳು ಮತ್ತು ಕೆಲಸ ಮಾಡುವ ವಿಧಾನಗಳನ್ನು ವ್ಯಕ್ತಪಡಿಸದೆ ನೈಜತೆಯನ್ನು ತೋರುತ್ತಿದ್ದವು.

ಪಿಯೆರ್ರೆ-ಆಗಸ್ಟೆ ರೆನಾಯರ್‌ನ ಗರ್ಲ್ ವಿದ್ ಎ ಹೂಪ್, 1885

ಅಕಾಡೆಮೀಯು ವಾರ್ಷಿಕವಾಗಿ ನಿರ್ಣಯಕಾರರ ಮಂಡಲಿಯಿರುವ ಕಲಾ ಪ್ರದರ್ಶನ ಸ್ಯಾಲನ್ ಡಿ ಪ್ಯಾರಿಸ್ಅನ್ನು ನಡೆಸುತ್ತಿತ್ತು. ಈ ಪ್ರದರ್ಶನದಲ್ಲಿ ಪ್ರದರ್ಶಿಸಲ್ಪಟ್ಟ ಚಿತ್ರಗಳ ಕಲಾವಿದರು ಬಹುಮಾನಗಳನ್ನು ಗೆದ್ದುಕೊಂಡರು, ಕಮೀಷನ್‌ಗಳನ್ನು ಪಡೆದರು ಮತ್ತು ಅವರ ಹಿರಿಮೆಯನ್ನು ಹೆಚ್ಚಿಸಿಕೊಂಡರು. ಈ ನಿರ್ಣಯಕಾರರ ಮಂಡಲಿಯ ಪ್ರಮಾಣಕಗಳು ಜೀನ್-ಲಿಯಾನ್ ಗೆರೋಮೆ ಮತ್ತು ಅಲೆಕ್ಸಾಂಡ್ರೆ ಕ್ಯಾಬನೆಲ್ ಮೊದಲಾದ ವರ್ಣಚಿತ್ರಕಾರರ ಹೆಚ್ಚು ಪರಿಷ್ಕೃತ ವರ್ಣಚಿತ್ರಗಳಿಂದ ಸೂಚಿಸಲ್ಪಟ್ಟ ಅಕಾಡೆಮೀಯ ಮೌಲ್ಯಗಳನ್ನು ಪ್ರತಿಬಿಂಬಿಸಿದವು. ಕೆಲವು ಕಿರಿಯ ವರ್ಣಚಿತ್ರಕಾರರು ಮುಂಚಿನ ಪೀಳಿಗೆಯವರಿಗಿಂತ ತಿಳಿಯಾದ ನಸುಬಣ್ಣದಿಂದ ವರ್ಣಚಿತ್ರ ರಚಿಸಿದರು, ಆ ಮೂಲಕ ಗುಸ್ಟಾನ್ ಕರ್ಬೆಟ್ ಮತ್ತು ಬಾರ್ಬಿಜಾನ್ ಶಾಲೆಯ ನೈಜತೆಯನ್ನು ಇನ್ನಷ್ಟು ವಿಸ್ತರಿಸಿದರು. ಅವರು ಇತಿಹಾಸದ ದೃಶ್ಯಗಳನ್ನು ಪುನಃರಚಿಸುವ ಬದಲಿಗೆ ಭೂದೃಶ್ಯ ಮತ್ತು ಆಧುನಿಕ ಜೀವನದ ವರ್ಣಚಿತ್ರ ರಚಿಸುವಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ನಿರ್ಣಾಯಕಾರರ ಮಂಡಲಿಗಳು ಅಂಗೀಕೃತ ಶೈಲಿಯಲ್ಲಿ ವರ್ಣಚಿತ್ರ ರಚಿಸುವ ಕಲಾವಿದರ ರೂಢಿಯ-ವರ್ಣಚಿತ್ರಗಳಿಗೆ ಒತ್ತುನೀಡಿ ತಮ್ಮ ಉತ್ತಮ ಪ್ರಯತ್ನಗಳನ್ನು ನಿರಾಕರಿಸುತ್ತವೆಯೇ ಎಂದು ನೋಡಲು ಪ್ರತಿ ವರ್ಷ ಅವರು ತಮ್ಮ ವರ್ಣಚಿತ್ರಗಳನ್ನು ಸ್ಯಾಲನ್‌ಗೆ ಸಲ್ಲಿಸುತ್ತಿದ್ದರು. ಚಾರ್ಲ್ಸ್ ಗ್ಲೆಯ್ರೆಯಡಿಯಲ್ಲಿ ಅಧ್ಯಯನ ಮಾಡಿದ ಕ್ಲಾಡೆ ಮೊನೆಟ್, ಪಿಯೆರ್ರೆ-ಆಗಸ್ಟೆ ರಿನೋಯರ್, ಆಲ್ಫ್ರೆಡ್ ಸಿಸ್ಲೆ ಮತ್ತು ಪ್ರೆಡೆರಿಕ್ ಬ್ಯಾಜಿಲ್ಲೆ ಮೊದಲಾದ ಯುವ ಕಲಾವಿದರ ಒಂದು ಗುಂಪು ಪರಸ್ಪರ ಸ್ನೇಹಿತರಾದರು ಮತ್ತು ಹೆಚ್ಚಾಗಿ ಒಟ್ಟಿಗೆ ವರ್ಣಚಿತ್ರಗಳನ್ನು ರಚಿಸಿದರು. ಅವರೊಂದಿಗೆ ಶೀಘ್ರದಲ್ಲಿ ಕ್ಯಾಮಿಲ್ಲೆ ಪಿಸ್ಸಾರ್ರೊ, ಪಾಲ್ ಸೆಜಾನ್ನೆ ಮತ್ತು ಅರ್ಮಾಂಡ್ ಗ್ಯುಲ್ಲಾಮಿನ್ ಮೊದಲಾದವರೂ ಸೇರಿಕೊಂಡರು.[]

ಪಿಯೆರ್ರೆ-ಆಗಸ್ಟೆ ರೆನಾಯರ್‌ನ ಆನ್ ದಿ ಟೆರ್ರೇಸ್, ತೈಲಚಿತ್ರ, 1881, ಆರ್ಟ್ ಇನ್‌ಸ್ಟಿಟ್ಯೂಟ್ ಆಫ್ ಚಿಕಾಗೊ
ಕ್ಲಾಡೆ ಮೊನೆಟ್‌ನ ವುಮನ್ ವಿದ್ ಎ ಪ್ಯಾರಸಾಲ್ (ಕ್ಯಾಮಿಲ್ಲೆ ಆಂಡ್ ಜೀನ್ ಮೋನೆಟ್), 1875, ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್, ವಾಷಿಂಗ್ಟನ್ ಡಿ.ಸಿ.

1863ರಲ್ಲಿ, ಆ ನಿರ್ಣಾಯಕಾರರ ಮಂಡಲಿಯು ಮೊದಲು ಎಡೋವರ್ಡ್ ಮ್ಯಾನೆಟ್‌ರ ದಿ ಲಂಚಿಯಾನ್ ಆನ್ ದಿ ಗ್ರಾಸ್ (ಲಿ ಡೆಜ್ಯೂನರ್ ಸುರ್ ಐಹರ್ಬ್) ಅನ್ನು ತಿರಸ್ಕರಿಸಿತು ಏಕೆಂದರೆ ಅದು ಪಿಕ್‌ನಿಕ್‌ ಒಂದರಲ್ಲಿ ಉಡುಪು ಧರಿಸಿದ ಇಬ್ಬರು ಗಂಡಸರೊಂದಿಗೆ ಒಬ್ಬ ನಗ್ನ ಮಹಿಳೆಯಿರುವುದನ್ನು ಚಿತ್ರಿಸುತ್ತಿತ್ತು. ಸ್ಯಾಲನ್ ಐತಿಹಾಸಿಕ ಮತ್ತು ಒಳಾರ್ಥದ ವರ್ಣಚಿತ್ರಗಳಲ್ಲಿ ಚಿತ್ರಿಸಿದ ನಗ್ನತೆಗಳನ್ನು ರೂಢಿಯಂತೆ ಸ್ವೀಕರಿಸಿದರೂ, ನಿರ್ಣಯಕಾರರ ಮಂಡಲಿಯು ಆಧುನಿಕ ಚಿತ್ರದಲ್ಲಿ ನೈಜ ನಗ್ನತೆಯನ್ನು ಚಿತ್ರಿಸಿದುದಕ್ಕಾಗಿ ಮ್ಯಾನೆಟ್‌‌ನನ್ನು ದೂಷಿಸಿತು.[] ನಿರ್ಣಯಕಾರರ ಮಂಡಲಿಯು ತಿರಸ್ಕರಿಸಿದ ಮ್ಯಾನೆಟ್‌ನ ವರ್ಣಚಿತ್ರ ಮತ್ತು ಆ ವರ್ಷದಲ್ಲಿ ನಿರಾಕರಿಸಲ್ಪಟ್ಟ ಅನೇಕ ವರ್ಣಚಿತ್ರಗಳು ಫ್ರೆಂಚ್ ಕಲಾವಿದರಲ್ಲಿ ಒಂದು ಬಿರುಗಾಳಿಯನ್ನು ಎಬ್ಬಿಸಿತು. ಮ್ಯಾನೆಟ್‌ನನ್ನು ಮೋನೆಟ್ ಮತ್ತು ಅವರ ಸ್ನೇಹಿತರು ಹೊಗಳಿದರು ಮತ್ತು ಅವರು ಕೇಫ್ ಗ್ಯುರ್ಬೋಯಿಸ್‌ನಲ್ಲಿ ಚರ್ಚೆಗಳನ್ನು ನಡೆಸಿದರು, ಇಲ್ಲಿ ವರ್ಣಚಿತ್ರಕಾರರ ಗುಂಪು ಮಾಮೂಲಾಗಿ ಭೇಟಿಯಾಗುತ್ತಿತ್ತು. 1863ರಲ್ಲಿ ನಿರಾಕರಿಸಿದ ಚಿತ್ರಗಳನ್ನು ಗಮನಿಸಿದ ಚಕ್ರವರ್ತಿ ನೆಪೋಲಿಯನ್ III, ಸಾರ್ವಜನಿಕರೇ ಚಿತ್ರದ ಬಗ್ಗೆ ನಿರ್ಣಯ ಸೂಚಿಸುವ ಅವಕಾಶ ನೀಡಬೇಕೆಂಬ ಶಾಸನ ಮಾಡಿದನು ಮತ್ತು ಸ್ಯಾಲನ್ ಡೆಸ್ ರೆಫ್ಯೂಸಸ್ಅನ್ನು ಆಯೋಜಿಸಲಾಯಿತು. ಹೆಚ್ಚಿನ ವಿಮರ್ಶಕರು ಕೇವಲ ನೋಡಿ ಗೇಲಿ ಮಾಡಲು ಬರುತ್ತಿದ್ದುದರಿಂದ, ಸ್ಯಾಲನ್ ಡೆಸ್ ರೆಫ್ಯೂಸಸ್ ಕಲೆಯ ಹೊಸ ಶೈಲಿಯ ಅಸ್ತಿತ್ವದೆಡೆಗೆ ಗಮನವನ್ನು ಸೆಳೆಯಿತು ಮತ್ತು ನಿಯತ ಸ್ಯಾಲನ್‌ಗಿಂತ ಹೆಚ್ಚಿನ ಸಂದರ್ಶಕರನ್ನು ಆಕರ್ಷಿಸಿತು.[] ವರ್ಣಚಿತ್ರಕಾರರು 1867ರಲ್ಲಿ ಮತ್ತು 1872ರಲ್ಲಿ ಮತ್ತೊಮ್ಮೆ ಹೊಸ ಸ್ಯಾಲನ್ ಡೆಸ್ ರೆಫ್ಯೂಸಸ್ಅನ್ನು ರಚಿಸಬೇಕೆಂದು ವಿನಂತಿಸಿದ ಕೋರಿಕೆಯು ನಿರಾಕರಿಸಲ್ಪಟ್ಟಿತು. 1873ರ ಉತ್ತರಾರ್ಧದಲ್ಲಿ, ಮೋನೆಟ್, ರೆನಾಯರ್, ಪಿಸ್ಸಾರ್ರೊ ಮತ್ತು ಸಿಸ್ಲೆ ಮೊದಲಾದವರು ತಮ್ಮ ಕಲಾಕೃತಿಗಳನ್ನು ಸ್ವತಂತ್ರವಾಗಿ ಪ್ರದರ್ಶಿಸುವ ಉದ್ದೇಶದಿಂದ ಸೊಸೈಟೆ ಅನಾನಿಮ್ ಕೂಪರೇಟಿವ್ ಡೆಸ್ ಆರ್ಟಿಸ್ಟೆಸ್ ಪೈಂಟ್ರೆಸ್ ("ವರ್ಣಚಿತ್ರಕಾರರ, ಶಿಲ್ಪಿಗಳ ಮತ್ತು ಕೆತ್ತನೆಗಾರರ ಸಹಕಾರಿ ಮತ್ತು ಅನಾಮಕ ಸಂಘಟನೆ")ಅನ್ನು ಆಯೋಜಿಸಿದರು. ಅತಿ ಶೀಘ್ರದಲ್ಲಿ ಸೆಜಾನ್ನೆ, ಬರ್ತ್ ಮೋರಿಸಾಟ್ ಮತ್ತು ಎಡ್ಗಾರ್ ಡೆಗಾಸ್ ಮೊದಲಾದವರನ್ನು ಒಳಗೊಂಡ ಈ ಸಂಘಟನೆಯ ಸದಸ್ಯರು ಸ್ಯಾಲನ್‌ನಲ್ಲಿನ ಭಾಗವಹಿಸುವಿಕೆಯನ್ನು ತ್ಯಜಿಸಲು ನಿರ್ಧರಿಸುತ್ತಾರೆ. ಆಯೋಜಕರು ಅವರ ಆರಂಭಿಕ ಪ್ರದರ್ಶನದಲ್ಲಿ ಅವರೊಂದಿಗೆ ಸೇರಿಕೊಳ್ಳಲು ಅನೇಕ ಇತರ ಪ್ರಗತಿಶೀಲ ಕಲಾವಿದರನ್ನು ಆಹ್ವಾನಿಸಿದರು, ಹಿಂದಿನ ಯುಜೀನ್ ಬೌಡಿನ್‌ರನ್ನೂ ಸೇರಿಸಿಕೊಂಡರು, ಈತ ಕೆಲವು ವರ್ಷಗಳ ಹಿಂದೆ ಪ್ಲೇನ್ ಏರ್ ಚಿತ್ರವನ್ನು ತೆಗೆದುಕೊಳ್ಳುವಂತೆ ಮೊದಲು ಮೋನೆಟ್‌ನ ಮನವೊಪ್ಪಿಸಿದ್ದರು.[] ಮೋನೆಟ್ ಮತ್ತು ಆತನ ಸ್ನೇಹಿತರನ್ನು ಹೆಚ್ಚಾಗಿ ಪ್ರಭಾವಿಸಿದ ಮತ್ತೊಬ್ಬ ವರ್ಣಚಿತ್ರಕಾರ ಜೊಹಾನ್ ಜಾಂಗ್‌ಕಿಂಡ್ ಮ್ಯಾನೆಟ್‌ನಂತೆ ಇದರಲ್ಲಿ ಭಾಗವಹಿಸಲು ನಿರಾಕರಿಸಿದರು. ಒಟ್ಟಾಗಿ ಮೂವತ್ತು ಕಲಾವಿದರು 1874ರ ಎಪ್ರಿಲ್‌ನಲ್ಲಿ ಛಾಯಾಚಿತ್ರಕಾರ ನಡಾರ್‌ನ ಸ್ಟುಡಿಯೊದಲ್ಲಿ ನಡೆಸಲಾದ ಅವರ ಮೊದಲ ಪ್ರದರ್ಶನದಲ್ಲಿ ಪಾಲ್ಗೊಂಡರು.

ಕ್ಲಾಡೆ ಮೊನೆಟ್‌ನ ದಿ ಕ್ಲಿಫ್ ಅಟ್ ಎಟ್ರಿಟ್ಯಾಟ್ ಆಫ್ಟರ್ ದಿ ಸ್ಟೋರ್ಮ್, 1885, ಕ್ಲಾರ್ಕ್ ಆರ್ಟ್ ಇನ್‌ಸ್ಟಿಟ್ಯೂಟ್, ವಿಲಿಯಮ್‌ಸ್ಟೌನ್, ಮಸ್ಸಾಚ್ಯುಸೆಟ್ಸ್

ಇದು ಮಿಶ್ರ ಪ್ರತಿಕ್ರಿಯೆಯನ್ನು ಪಡೆಯಿತು, ಮೋನೆಟ್ ಮತ್ತು ಸೆಜಾನ್ನೆ ಕಟುವಾದ ಟೀಕೆಗೆ ಒಳಗಾದರು. ವಿಮರ್ಶಕ ಮತ್ತು ಹಾಸ್ಯಲೇಖಕ ಲೂಯಿಸ್ ಲೆರಾಯ್‌ ಲಿ ಚ್ಯಾರಿವರಿ ಸುದ್ದಿಪತ್ರಿಕೆಯಲ್ಲಿ ಒಂದು ಕಟುಟೀಕೆಯ ವಿಮರ್ಶೆಯನ್ನು ಬರೆದರು, ಅದರಲ್ಲಿ ಅವರು ಕ್ಲಾಡೆ ಮೊನೆಟ್‌ನ ಇಂಪ್ರೆಷನಿಸಮ್, ಸನ್‌ರೈಸ್ (ಇಂಪ್ರೆಷನ್, ಸೊಲೈಲ್ ಲೆವಂಟ್) ಶೀರ್ಷಿಕೆಯೊಂದಿಗೆ ಶಬ್ದ ಚಮತ್ಕಾರ ಮಾಡುತ್ತಾ, ಕಲಾವಿದರಿಗೆ ಅವರು ಮುಂದೆ ಪ್ರಸಿದ್ಧವಾಗಬಹುದಾದ ಹೆಸರನ್ನು ನೀಡಿದರು. ತನ್ನ ಲೇಖನಕ್ಕೆ ಅಣಕಿಸುವಂತೆ ದಿ ಎಕ್ಸಿಬಿಷನ್ ಆಫ್ ದಿ ಇಂಪ್ರೆಷನಿಸ್ಟ್ಸ್ ಎಂಬ ಶೀರ್ಷಿಕೆಯನ್ನು ನೀಡಿ ಲೆರಾಯ್, ಮೋನೆಟ್‌ನ ವರ್ಣಚಿತ್ರವು ಹೆಚ್ಚೆಂದರೆ ಒಂದು ಸ್ಥೂಲಚಿತ್ರವಾಗಿದೆ ಮತ್ತು ಅದನ್ನು ಕಷ್ಟದಿಂದ ಪೂರ್ಣಗೊಂಡ ಕೃತಿಯೆಂದು ಹೇಳಬಹುದೆಂದು ಸೂಚಿಸಿದರು. ಅವರು ವಿಮರ್ಶಕರ ನಡುವಿನ ಸಂಭಾಷಣೆಯ ರೀತಿಯಲ್ಲಿ ಹೀಗೆಂದು ಬರೆದಿದ್ದಾರೆ -

ಪ್ರಭಾವ - ನಾನು ಇದರ ಬಗ್ಗೆ ಖಾತ್ರಿಯಾಗಿದ್ದೆ. ನಾನು ನನ್ನಷ್ಟಕ್ಕೆ ಹೇಳುತ್ತಿದ್ದುದೇನೆಂದರೆ ನಾನು ಪ್ರಭಾವಕ್ಕೆ ಒಳಗಾಗಿದ್ದುದರಿಂದ ಅದರಲ್ಲಿ ಏನಾದರೂ ಪ್ರಭಾವವಿರಬೇಕಾಗಿತ್ತು ಹಾಗೂ ಸ್ವಾತಂತ್ರ ಎಂದರೆ ಏನು ಮತ್ತು ಕಾರ್ಯಕೌಶಲದ ಸುಗಮತೆ ಎಂದರೆ ಏನು

! ಅದರ ಮೂಲಾವಸ್ಥೆಯಲ್ಲಿರುವ ವಾಲ್‌ಪೇಪರ್ ಅದರ ಸಮುದ್ರದೃಶ್ಯಕ್ಕಿಂತ ಹೆಚ್ಚು ಪೂರ್ಣಗೊಂಡಿದೆ.[]

ಕ್ಲಾಡೆ ಮೊನೆಟ್‌ನ ಹೇಸ್ಟಾಕ್ಸ್, (ಸನ್‌ಸೆಟ್), 1890–1891, ಮ್ಯೂಸಿಯಂ ಆಫ್ ಫೈನ್ ಆರ್ಟ್ಸ್, ಬೋಸ್ಟನ್

"ಚಿತ್ತಪ್ರಭಾವ ನಿರೂಪಣವಾದಿ" ಎಂಬ ಪದವು ಅತಿ ಶೀಘ್ರದಲ್ಲಿ ಸಾರ್ವಜನಿಕವಾಗಿ ಪ್ರಸಿದ್ಧಿಯನ್ನು ಪಡೆಯಿತು. ಇದು ಶೈಲಿ ಮತ್ತು ಮನೋಧರ್ಮದಲ್ಲಿ ಬೇರೆ ಬೇರೆ ಗುಂಪಾಗಿದ್ದರೂ ಪ್ರಾಥಮಿಕವಾಗಿ ಅವರ ಸ್ವಾತಂತ್ರ್ಯ ಮತ್ತು ಪ್ರತಿಭಟನೆಯ ಹುರುಪಿನಿಂದ ಒಂದುಗೂಡಿದ ಕಲಾವಿದರಿಂದಲೂ ಸ್ವೀಕರಿಸಲ್ಪಟ್ಟಿತು. ಅವರು ಒಟ್ಟಿಗೆ- ಆದರೂ ಬದಲಾಗುವ ಸದಸ್ಯತ್ವದೊಂದಿಗೆ- 1874 ಮತ್ತು 1886ರಲ್ಲಿ ಎಂಟು ಬಾರಿ ಪ್ರದರ್ಶಿಸಿದರು. ಮೋನೆಟ್, ಸಿಸ್ಲೆ, ಮೋರಿಸಾಟ್ ಮತ್ತು ಪಿಸ್ಸಾರ್ರೊ ಮೊದಲಾದವರನ್ನು ಸ್ವಾಭಾವಿಕತೆ, ಸೂರ್ಯನ ಬೆಳಕು ಮತ್ತು ಬಣ್ಣದ ಕಲೆಯ ಅವರ ಸ್ಥಿರ ಹವ್ಯಾಸದಲ್ಲಿ 'ಅಪ್ಪಟ' ಚಿತ್ತಪ್ರಭಾವ ನಿರೂಪಣವಾದಿಗಳೆಂದು ಪರಿಗಣಿಸಲಾಗುತ್ತದೆ. ದೆಗಾಸ್ ಬಣ್ಣದಿಂದ ಚಿತ್ರಬಿಡಿಸುವುದರ ಪ್ರಾಮುಖ್ಯತೆಯನ್ನು ನಂಬಿದ್ದರಿಂದ ಮತ್ತು ಹೊರಾಂಗಣದಲ್ಲಿ ಚಿತ್ರ ಬಿಡಿಸುವ ಅಭ್ಯಾಸವನ್ನು ಕಡೆಗಣಿಸಿದರಿಂದ ಇದನ್ನು ಅಲ್ಲಗಳೆದರು.[] ರೆನಾಯರ್ 1880ರ ದಶಕದಲ್ಲಿ ಚಿತ್ತಪ್ರಭಾವ ನಿರೂಪಣದ ವಿರುದ್ಧ ತಿರುಗಿಬಿದ್ದರು ಮತ್ತು ಇದರ ಕಲ್ಪನೆಗೆ ಅವರ ಕಟ್ಟುಬೀಳುವಿಕೆಯು ಸಂಪೂರ್ಣವಾಗಿ ಪುನಃಚೇತರಿಸಿಕೊಳ್ಳಲಿಲ್ಲ. ಎಡೋವರ್ಡ್ ಮ್ಯಾನೆಟ್ ಗುಂಪಿಗೆ ಮುಖಂಡರಾಗಿದ್ದರೂ ಹೆಚ್ಚಾಗಿ ಕಪ್ಪನ್ನು ಬಣ್ಣವಾಗಿ ಬಳಸುತ್ತಿದ್ದುದನ್ನು ತ್ಯಜಿಸಲಿಲ್ಲ ಮತ್ತು ಚಿತ್ತಪ್ರಭಾವ ನಿರೂಪಣವಾದಿ ಪ್ರದರ್ಶನಗಳಲ್ಲಿ ಪಾಲ್ಗೊಳ್ಳಲಿಲ್ಲ. ಅವರು ಸ್ಯಾಲನ್‌ಗೆ ತನ್ನ ವರ್ಣಚಿತ್ರಗಳನ್ನು ಸಲ್ಲಿಸುವುದನ್ನು ಮುಂದುವರಿಸಿದರು, 1861ರಲ್ಲಿ ಅವರ ಸ್ಪ್ಯಾನಿಶ್ ಸಿಂಗರ್ 2ನೇ ದರ್ಜೆಯ ಪದಕವನ್ನು ಗೆದ್ದುಕೊಂಡಿತು. ಅವರು ಇತರರೂ ಹಾಗೆ ಮಾಡುವಂತೆ ಪ್ರೇರೇಪಿಸುತ್ತಾ, 'ಸ್ಯಾಲನ್‌ ಒಂದು ಪೈಪೋಟಿಯ ನಿಜವಾದ ರಂಗ ಮತ್ತು ಇದರಲ್ಲಿ ಪ್ರಸಿದ್ಧಿಯನ್ನು ಗಳಿಸಬಹುದು' ಎಂದು ಹೇಳಿದರು.[]

ಕ್ಯಾಮಿಲ್ಲೆ ಪಿಸ್ಸಾರ್ರೊನ ಬೌಲೆವಾರ್ಡ್ ಮೋಂಟ್‌ಮಾರ್ಟ್ರೆ, 1897, ಹರ್ಮಿಟೇಜ್, ಸೇಂಟ್ ಪೀಟರ್ಸ್‌ಬರ್ಗ್

ಗುಂಪಿನ ವರ್ಣಚಿತ್ರಕಾರರಲ್ಲಿ (ಬ್ಯಾಜಿಲ್ಲೆಯನ್ನು ಹೊರತುಪಡಿಸಿ, ಈತನು 1870ರ ಫ್ರಾನ್ಕೊ-ಪ್ರಷ್ಯಿಯನ್ ಯುದ್ಧದಲ್ಲಿ ಸಾವಪ್ಪುತ್ತಾರೆ) ಸೆಜಾನ್ನೆ, ನಂತರ ರಿನೋಯರ್, ಸಿಸ್ಲೆ ಮತ್ತು ಮೋನೆಟ್ ಮೊದಲಾದವರು ತಮ್ಮ ಕೃತಿಗಳನ್ನು ಸ್ಯಾಲನ್‌ಗೆ ಸಲ್ಲಿಸುವುದಕ್ಕಾಗಿ ಗುಂಪಿನ ಪ್ರದರ್ಶನಗಳನ್ನು ತ್ಯಜಿಸಿದರು. ಗ್ಯುಲ್ಲಾಮಿನ್‌ನನ್ನು ಅನರ್ಹನೆಂದು ತಿಳಿದ ಮೋನೆಟ್ ಮತ್ತು ದೆಗಾಸ್‌ರ ವಿರೋಧದಲ್ಲಿಯೂ, ಪಿಸ್ಸಾರ್ರೊ ಮತ್ತು ಸೆಜಾನ್ನೆ ಅಧ್ಯಕ್ಷತೆಯ ಗುಂಪಿನಲ್ಲಿ ಆತನು ಸದಸ್ಯತ್ವವನ್ನು ಹೊಂದಿದ್ದಂತಹ ಸಮಸ್ಯೆಗಳಿಂದ ಭಿನ್ನತೆಗಳು ಎದ್ದವು.[] ದೆಗಾಸ್ 1879ರ ಪ್ರದರ್ಶನದಲ್ಲಿ ಮೇರಿ ಕ್ಯಾಸಟ್ಟ್ರ ಕೃತಿಯನ್ನು ಪ್ರದರ್ಶಿಸುವಂತೆ ಆಕೆಯನ್ನು ಆಹ್ವಾನಿಸಿದರು. ಆದರೆ ಅವರು ಚಿತ್ತಪ್ರಭಾವ ನಿರೂಪಣವಾದಿ ಅಭ್ಯಾಸಗಳನ್ನು ಪ್ರತಿನಿಧಿಸದ ಜೀನ್-ಫ್ರಾಂಕೋಯಿಸ್ ರಫೇಲ್ಲಿ, ಲುಡೋವಿಕ್ ಲೆಪಿಕ್ ಮತ್ತು ಇತರ ವಾಸ್ತವವಾದಿಗಳ ಸೇರಿಸುವಿಕೆಯನ್ನು ಸೂಚಿಸುವ ಮೂಲಕ ಭಿನ್ನಾಭಿಪ್ರಾಯಕ್ಕೆ ಎಡೆಮಾಡಿಕೊಟ್ಟರು. ಇದರಿಂದಾಗಿ 1880ರಲ್ಲಿ ಮೋನೆಟ್ ಚಿತ್ತಪ್ರಭಾವ ನಿರೂಪಣವಾದಿಗಳು 'ಮೊದಲು ಬಂದ ಅಕುಶಲ ಚಿತ್ರಕಾರರಿಗೆ ಒಳಬರಲು ಅವಕಾಶ ನೀಡಿದ ಪ್ರವೇಶದ್ವಾರಗಳಾಗಿದ್ದಾರೆಂದು' ದೂಷಿಸಿದರು.[೧೦] ಆ ಗುಂಪು ಸಿಗ್ನ್ಯಾಕ್ ಮತ್ತು ಸೆರಾಟ್ 1886ರಲ್ಲಿ ಅವರೊಂದಿಗೆ ಪ್ರದರ್ಶಿಸುವಂತೆ ನೀಡಿದ ಆಹ್ವಾನದ ಆಧಾರದಲ್ಲಿ ವಿಂಗಡಿಸಲ್ಪಟ್ಟಿತು. ಪಿಸ್ಸಾರ್ರೊ ಎಲ್ಲಾ ಎಂಟು ಚಿತ್ತಪ್ರಭಾವ ನಿರೂಪಣವಾದಿ ಪ್ರದರ್ಶನಗಳಲ್ಲಿ ಪ್ರದರ್ಶಿಸಿದ ಏಕೈಕ ಕಲಾವಿದರಾಗಿದ್ದರು. ವೈಯಕ್ತಿಕ ಕಲಾವಿದರು ಚಿತ್ತಪ್ರಭಾವ ನಿರೂಪಣವಾದಿ ಪ್ರದರ್ಶನಗಳಿಂದ ಕೆಲವು ಹಣಕಾಸಿನ ಪ್ರಶಸ್ತಿಗಳನ್ನು ಪಡೆದರು. ಆದರೆ ಅವರ ಕಲೆಯು ಕ್ರಮೇಣ ಸಾರ್ವಜನಿಕ ಮೆಚ್ಚಿಕೆ ಮತ್ತು ಬೆಂಬಲವನ್ನು ಗೆದ್ದುಕೊಂಡಿತು. ಅವರ ಡೀಲರ್ ಡ್ಯುರಾಂಡ್-ರುಯೆಲ್ ಇದರಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ, ಈತ ಅವರ ಕೃತಿಗಳನ್ನು ಸಾರ್ವಜನಿಕರ ಗಮನಕ್ಕೆ ತಂದರು ಹಾಗೂ ಲಂಡನ್ ಮತ್ತು ನ್ಯೂಯಾರ್ಕ್‌ನಲ್ಲಿ ಅವರಿಗಾಗಿ ಪ್ರದರ್ಶನಗಳನ್ನು ವ್ಯವಸ್ಥೆಗೊಳಿಸಿದರು. ಸಿಸ್ಲೆಯು 1899ರಲ್ಲಿ ಬಡತನದಿಂದಾಗಿ ಸಾವನ್ನಪ್ಪಿದರೂ, ರೆನಾಯರ್ ಮಾತ್ರ 1879ರಲ್ಲಿ ಸ್ಯಾಲನ್‌ನಲ್ಲಿ ಭಾರಿ ಯಶಸ್ಸು ಕಂಡರು. ಹಣಕಾಸಿನ ಭದ್ರತೆಯು ಮೋನೆಟ್‌ಗೆ 1880ರ ದಶಕದಲ್ಲಿ ಮತ್ತು ಪಿಸ್ಸಾರ್ರೊಗೆ 1890ರ ದಶಕದಲ್ಲಿ ಬಂದಿತು. ಈ ಸಂದರ್ಭದಲ್ಲಿ ಚಿತ್ತಪ್ರಭಾವ ನಿರೂಪಣವಾದಿ ವರ್ಣಚಿತ್ರಗಳ ವಿಧಾನಗಳು ಸ್ಯಾಲನ್ ಕಲೆಯಲ್ಲಿ ಸಾಧಾರಣ ವಿಷಯವಾದವು.[೧೧]

ಚಿತ್ತಪ್ರಭಾವ ನಿರೂಪಣವಾದಿ ಕೌಶಲಗಳು

[ಬದಲಾಯಿಸಿ]
ಬರ್ತ್ ಮೋರಿಸಾಟ್‌ನ ದಿ ಕ್ರ್ಯಾಡಲ್, 1872, ಮ್ಯೂಸೀ ಡಿಆರ್ಸೆ
  • ವಸ್ತುವಿನ ವಿವರಗಳ ಬದಲಿಗೆ ಅದರ ಅಸ್ತಿತ್ವವನ್ನು ಶೀಘ್ರದಲ್ಲಿ ಸೆರೆಹಿಡಿಯಲು ಸಣ್ಣ ಮತ್ತು ಗಾಢವಾದ ಬಣ್ಣದ ಗೆರೆಗಳನ್ನು ಬಳಸಲಾಗುತ್ತಿತ್ತು. ಬಣ್ಣವನ್ನು ಹೆಚ್ಚಾಗಿ ದಪ್ಪವಾಗಿ ಬಳಿಯಲಾಗುತ್ತಿತ್ತು.
  • ಬಣ್ಣಗಳನ್ನು ಸಾಧ್ಯವಾದಷ್ಟು ಕಡಿಮೆ ಮಿಶ್ರಣದೊಂದಿಗೆ ಪಕ್ಕಪಕ್ಕದಲ್ಲಿ ಬಳಿಯಲಾಗುತ್ತಿತ್ತು, ಇದು ರೋಮಾಂಚಕ ಮೇಲ್ಮೈಯನ್ನು ರಚಿಸುತ್ತದೆ. ಬಣ್ಣಗಳ ಬೆಳಕಿನ ಮಿಶ್ರಣವು ವೀಕ್ಷಿಸುವವರ ಕಣ್ಣಿನಲ್ಲಿ ನಡೆಯುತ್ತದೆ.
  • ಪೂರಕ ವರ್ಣಗಳನ್ನು ಮಿಶ್ರಮಾಡುವ ಮೂಲಕ ಬೂದು ಮತ್ತು ಗಾಢ ಬಣ್ಣಗಳನ್ನು ಉಂಟುಮಾಡಲಾಗುತ್ತಿತ್ತು. ಶುದ್ಧ ಚಿತ್ತಪ್ರಭಾವ ನಿರೂಪಣದಲ್ಲಿ ಕಪ್ಪು ಬಣ್ಣದ ಬಳಕೆಯು ನಿರ್ಬಂಧಿಸಲ್ಪಟ್ಟಿದೆ.
  • ಒಣಗಲು ಯಾವುದೇ ಲೇಪನಗಳನ್ನು ಬಳಸದೆ ತೇವವಾದ ವರ್ಣಚಿತ್ರದಲ್ಲಿ ತೇವವಾದ ಬಣ್ಣವನ್ನು ಉಪಯೋಗಿಸಲಾಗುತ್ತಿತ್ತು, ಇದು ಮೃದುವಾದ ತೀಕ್ಷ್ಣತೆಯನ್ನು ಮತ್ತು ಬಣ್ಣದ ಮಿಶ್ರಣವನ್ನು ಉಂಟುಮಾಡುತ್ತದೆ.
  • ಇಫೆಕ್ಟ್ಸ್ ಡಿ ಸೋಯರ್ ಅನ್ನು ಪಡೆಯಲು ಸಂಜೆ ಸಮಯದಲ್ಲಿ ವರ್ಣಚಿತ್ರ ರಚಿಸಲಾಗುತ್ತಿತ್ತು, ಇಫೆಕ್ಟ್ಸ್ ಡಿ ಸೋಯರ್ ಅಂದರೆ ಸಂಜೆಯ ಹೊತ್ತು ಅಥವಾ ಮಂದಪ್ರಕಾಶದ ಸಮಯದಲ್ಲಿನ ಬೆಳಕಿನ ಮಸುಕಾದ ಪ್ರಭಾವವಾಗಿದೆ.
  • ಚಿತ್ತಪ್ರಭಾವ ನಿರೂಪಣವಾದಿ ವರ್ಣಚಿತ್ರಗಳು ತೆಳುವಾದ ಬಣ್ಣದ ಫಿಲಮ್‌ಗಳ (ಗ್ಲೇಸುಗಳು) ಪಾರದರ್ಶಕತೆಯನ್ನು ಬಳಸಿಕೊಳ್ಳುವುದಿಲ್ಲ, ಇವನ್ನು ಹಿಂದಿನ ವರ್ಣಚಿತ್ರಕಾರರು ಪ್ರಭಾವಗಳನ್ನು ಉಂಟುಮಾಡಲು ಜಾಗರೂಕತೆಯಿಂದ ರಚಿಸಿದ್ದರು. ಚಿತ್ತಪ್ರಭಾವ ನಿರೂಪಣವಾದಿ ವರ್ಣಚಿತ್ರದ ಮೇಲ್ಮೈ ವಿಶಿಷ್ಟವಾಗಿ ಅಪಾರದರ್ಶಕವಾಗಿರುತ್ತದೆ.
  • ನೈಸರ್ಗಿಕ ಬೆಳಕಿನ ಪಾತ್ರಕ್ಕೆ ಹೆಚ್ಚಿನ ಮಹತ್ವ ಕೊಡಲಾಗುತ್ತಿತ್ತು. ವಸ್ತುವಿನಿಂದ ವಸ್ತುವಿಗೆ ಬಣ್ಣಗಳನ್ನು ಪ್ರತಿಬಿಂಬಿಸಲು ವಿಶೇಷ ಗಮನವನ್ನು ನೀಡಲಾಗುತ್ತಿತ್ತು.
  • ಎನ್ ಪ್ಲೇನ್ ಏರ್ (ಹೊರಾಂಗಣ)ನಲ್ಲಿ ರಚಿಸಿದ ವರ್ಣಚಿತ್ರಗಳಲ್ಲಿ, ಛಾಯಾದ್ರವ್ಯಗಳನ್ನು ಆಕಾಶ ನೀಲಿಯೊಂದಿಗೆ ಅದು ಮೇಲ್ಮೆಗಳಲ್ಲಿ ಪ್ರತಿಬಿಂಬಿಸುವಂತೆ ಸ್ಫುಟವಾಗಿ ಚಿತ್ರಿಸಲಾಗುತ್ತಿತ್ತು, ಇದು ಹಿಂದಿನ ವರ್ಣಚಿತ್ರಗಳಲ್ಲಿ ಸೆರೆಹಿಡಿಯದಿದ್ದ ತಾಜಾತನ ಮತ್ತು ನೈಜತೆಯ ಸಂವೇದನೆಯನ್ನು ನೀಡುತ್ತದೆ. (ಮಂಜಿನ ಮೇಲಿನ ನೀಲಿ ಛಾಯೆಯು ಈ ವಿಧಾನಕ್ಕೆ ಸ್ಫೂರ್ತಿಯನ್ನು ನೀಡಿತು.)
ಮೇರಿ ಕ್ಯಾಸ್ಸಟ್ಟ್‌ನ ಲಿಡಿಯಾ ಲೀನಿಂಗ್ ಆನ್ ಹರ್ ಆರ್ಮ್ಸ್ (ಥಿಯೇಟರ್ ಪೆಟ್ಟಿಗೆಯಲ್ಲಿ), 1879

ಇತಿಹಾಸದಾದ್ಯಂತದ ವರ್ಣಚಿತ್ರಗಳು ಈ ವಿಧಾನಗಳನ್ನು ಸಂದರ್ಭಾನುಸಾರವಾಗಿ ಬಳಸಿದರು. ಆದರೆ ಚಿತ್ತಪ್ರಭಾವ ನಿರೂಪಣವಾದಿಗಳು ಇವನ್ನು ಒಟ್ಟಿಗೆ ಮತ್ತು ಸ್ಫುಟತೆಯೊಂದಿಗೆ ಬಳಸಿದ ಮೊದಲಿಗರಾಗಿದ್ದಾರೆ. ಈ ವಿಧಾನಗಳನ್ನು ಪ್ರಕಟಿಸುವ ವರ್ಣಚಿತ್ರಗಳನ್ನು ಬರೆದ ಹಿಂದಿನ ಕಲಾವಿದರೆಂದರೆ ಫ್ರಾನ್ಸ್ ಹಾಲ್ಸ್, ಡೈಗೊ ವೆಲಾಜ್‌ಕ್ವೆಜ್, ಪೀಟರ್ ಪಾಲ್ ರುಬೆನ್ಸ್, ಜಾನ್ ಕಾಂಸ್ಟೇಬಲ್ ಮತ್ತು ಜೆ. ಎಮ್. ಡಬ್ಲ್ಯೂ. ಟರ್ನರ್. ಚಿತ್ತಪ್ರಭಾವ ನಿರೂಪಣಕ್ಕೆ ಮಾರ್ಗವನ್ನು ರೂಪಿಸಿದ ಫ್ರೆಂಚ್ ವರ್ಣಚಿತ್ರಕಾರರೆಂದರೆ ರೊಮ್ಯಾಂಟಿಕ್ ವರ್ಣಚಿತ್ರಕಾರ ಯೂಜೀನ್ ಡೆಲಾಕ್ರೋಯಕ್ಸ್, ವಾಸ್ತವವಾದಿಗಳ ಮುಖಂಡ ಗುಸ್ಟೇವ್ ಕರ್ಬೆಟ್ ಹಾಗೂ ಬಾರ್ಬಿಜಾನ್ ಶಾಲೆಯ ವರ್ಣಚಿತ್ರಕಾರ ಥಿಯೊಡೋರ್ ರಸ್ಸಿ. ಈ ಚಿತ್ತಪ್ರಭಾವ ನಿರೂಪಣವಾದಿಗಳು ಜೀನ್-ಬ್ಯಾಪ್ಟಿಸ್ಟೆ-ಕ್ಯಾಮಿಲ್ಲೆ ಕೊರೊಟ್ ಮತ್ತು ಯೂಜೀನ್ ಬೌಡಿನ್‌ರ ಕೃತಿಗಳಿಂದ ಹೆಚ್ಚಿಗೆ ತಿಳಿದುಕೊಂಡರು, ಇವರು ಚಿತ್ತಪ್ರಭಾವ ನಿರೂಪಣಕ್ಕೆ ಹತ್ತಿರವಾದ ಶೈಲಿಯಲ್ಲಿ ನಿಸರ್ಗ ಚಿತ್ರವನ್ನು ಬರೆದರು ಮತ್ತು ಕಿರಿಯ ಕಲಾವಿದರಿಗೆ ಸ್ನೇಹಿತರಾದರು ಮತ್ತು ಸಲಹೆ ಸೂಚನೆಗಳನ್ನು ನೀಡಿದರು. ಚಿತ್ತಪ್ರಭಾವ ನಿರೂಪಣವಾದಿಗಳು ಮಧ್ಯ-ಶತಮಾನದಲ್ಲಿ ಬಳಕೆಗೆ ಬಂದ ಸೀಸದ ಕೊಳವೆಗಳಲ್ಲಿ (ಆಧುನಿಕ ಹಲ್ಲುಜ್ಜುವ ಪೇಸ್ಟಿನ ಕೊಳವೆಗಳನ್ನು ಹೋಲುವ) ಮಿಶ್ರ ಬಣ್ಣಗಳನ್ನು ಉಪಯೋಗಿಸುವ ವಿಧಾನದ ಪ್ರಯೋಜನವನ್ನು ಪಡೆದುಕೊಂಡರು. ಇದು ವರ್ಣಚಿತ್ರಕಾರರಿಗೆ ಹೊರಾಂಗಣ ಮತ್ತು ಒಳಾಂಗಣಗಳೆರಡಲ್ಲೂ ಹೆಚ್ಚು ಸಹಜವಾಗಿ ಕೆಲಸ ಮಾಡುವ ಅವಕಾಶವನ್ನು ನೀಡಿತು. ಹಿಂದೆ ವರ್ಣಚಿತ್ರಕಾರರು ತಮ್ಮ ಬಣ್ಣಗಳನ್ನು ತಾವೇ ತಯಾರಿಸಿಕೊಳ್ಳುತ್ತಿದ್ದರು, ಒಣಗಿದ ಬಣ್ಣದ ಹುಡಿಗಳನ್ನು ಪುಡಿಮಾಡಿ ನಾರಗಸೆಯೆಣ್ಣಯೊಂದಿಗೆ ಮಿಶ್ರಮಾಡುತ್ತಿದ್ದರು, ನಂತರ ಅವನ್ನು ಪ್ರಾಣಿ-ಚರ್ಮದ ಚೀಲಗಳಲ್ಲಿ ಸಂಗ್ರಹಿಸಿಡುತ್ತಿದ್ದರು.[೧೨]

ವಿಷಯ ಮತ್ತು ಸಂಯೋಜನೆ

[ಬದಲಾಯಿಸಿ]
ಕ್ಯಾಮಿಲ್ಲೆ ಪಿಸ್ಸಾರ್ರೊನ ಹೇ ಹಾರ್ವೆಸ್ಟ್ ಅಟ್ ಎರಾಗ್ನಿ, 1901, ನ್ಯಾಷನಲ್ ಗ್ಯಾಲರಿ ಆಫ್ ಕೆನಡಾ, ಒಂಟಾರಿಯೊ

ಚಿತ್ತಪ್ರಭಾವ ನಿರೂಪಣವಾದಿಗಳಿಗಿಂತ ಹಿಂದಿನ ಇತರ ವರ್ಣಚಿತ್ರಕಾರರು, ಮುಖ್ಯವಾಗಿ ಜಾನ್ ಸ್ಟೀನ್ ಮೊದಲಾದ 17ನೇ ಶತಮಾನದ ಡಚ್ ವರ್ಣಚಿತ್ರಕಾರರು, ಸಾಮಾನ್ಯ ವಿಷಯಗಳನ್ನು ಕೇಂದ್ರೀಕರಿಸಿದ್ದರು, ಆದರೆ ಅವರ ಸಂಯೋಜನೆ ಮಾರ್ಗವು ಸಾಂಪ್ರದಾಯಿಕವಾಗಿತ್ತು. ಮುಖ್ಯ ವಿಷವು ವೀಕ್ಷಿಸುವವರ ಗಮನವನ್ನು ಸೆಳೆಯುವಂತೆ ಅವರು ತಮ್ಮ ಸಂಯೋಜನೆಗಳನ್ನು ವ್ಯವಸ್ಥೆಗೊಳಿಸಿದರು. ಚಿತ್ತಪ್ರಭಾವ ನಿರೂಪಣವಾದಿಗಳು ವಿಷಯ ಮತ್ತು ಹಿನ್ನೆಲೆಯ ನಡುವಿನ ಎಲ್ಲೆಯನ್ನು ಕಡಿಮೆಗೊಳಿಸುವ ಮೂಲಕ ಚಿತ್ತಪ್ರಭಾವ ನಿರೂಪಣವಾದಿ ವರ್ಣಚಿತ್ರಗಳ ಪ್ರಭಾವವು ಹೆಚ್ಚಾಗಿ ಒಂದು ಸರಕ್ಕನೆ ತೆಗೆದ ಚಿತ್ರವನ್ನು ಹೋಲುವಂತೆ ಮಾಡುತ್ತಿದ್ದರು.[೧೩] ಛಾಯಾಚಿತ್ರ ಗ್ರಹಣವು ಜನಪ್ರಿಯತೆಯನ್ನು ಗಳಿಸುತ್ತಿತ್ತು ಮತ್ತು ಕ್ಯಾಮೆರಾಗಳು ಸುಲಭವಾಗಿ ಒಯ್ಯಬಹುದಾದ ಸಾಧನಗಳಾದುದರಿಂದ ಛಾಯಾಚಿತ್ರಗಳು ಹೆಚ್ಚು ಸಾಧಾರಣವಾಯಿತು. ಛಾಯಾಚಿತ್ರ ಗ್ರಹಣವು ಚಿತ್ತಪ್ರಭಾವ ನಿರೂಪಣವಾದಿಗಳಿಗೆ ಭೂದೃಶ್ಯದ ಕ್ಷಣ ಮಾತ್ರದಲ್ಲಿ ಮರೆಯಾಗುವ ಬೆಳಕಿನಲ್ಲಿ ಮಾತ್ರವಲ್ಲದೆ ದಿನನಿತ್ಯದ ಜನರ ಜೀವನದಲ್ಲೂ ಕ್ಷಣವನ್ನು ಸೆರೆಹಿಡಿಯಲು ಸ್ಫೂರ್ತಿಯನ್ನು ನೀಡಿತು.

ಬರ್ತೆ ಮೋರಿಸಾಟ್‌ನ ರೀಡಿಂಗ್ ವುಮನ್, 1873, ಕ್ಲೆವೆಲ್ಯಾಂಡ್ ಮ್ಯೂಸಿಯಂ ಆಫ್ ಆರ್ಟ್

ಚಿತ್ತಪ್ರಭಾವ ನಿರೂಪಣವಾದಿ ಚಳವಳಿಯ ಬೆಳವಣಿಗೆಯನ್ನು ಭಾಗಶಃ ಹೊಸದಾಗಿ ಸ್ಥಾಪಿತವಾದ ಮಾಧ್ಯಮ ಛಾಯಾಚಿತ್ರ ಗ್ರಹಣಕ್ಕೆ ವರ್ಣಚಿತ್ರಕಾರರ ಪ್ರತಿಕ್ರಿಯೆಯೆಂಬುದಾಗಿ ತಿಳಿಯಬಹುದು. ಸ್ಥಿರ ಅಥವಾ ಸ್ತಬ್ಧ ಚಿತ್ರಗಳನ್ನು ತೆಗೆಯುವುದು, ನೈಜತೆಯನ್ನು ಸೆರೆಹಿಡಿಯುವ ಹೊಸ ಮಾಧ್ಯಮವನ್ನು ಒದಗಿಸುವ ಮೂಲಕ ವರ್ಣಚಿತ್ರಕಾರರಿಗೆ ಸವಾಲನ್ನು ಒಡ್ಡಿತು. ಆರಂಭದಲ್ಲಿ ಛಾಯಾಚಿತ್ರ ಗ್ರಹಣದ ಅಸ್ತಿತ್ವವು ವರ್ಣಚಿತ್ರಕಾರರ ನಿಸರ್ಗದ ಚಿತ್ರ ಮತ್ತು ನೈಜತೆಯನ್ನು ಪ್ರತಿಬಿಂಬಿಸುವ ಅವರ ಸಾಮರ್ಥ್ಯವನ್ನು ಕುಗ್ಗಿಸಿತು. ಛಾಯಾಚಿತ್ರ ಗ್ರಹಣವು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಖಾತರಿಯಾಗಿ ಜೀವಸದೃಶ ಚಿತ್ರಗಳನ್ನು ಸೃಷ್ಟಿಸಿದರಿಂದ ಭಾವಚಿತ್ರ ಮತ್ತು ಭೂದೃಶ್ಯ ವರ್ಣಚಿತ್ರಗಳಲ್ಲಿ ನೈಜತೆಯ ಕೊರತೆಯಿದೆಯೆಂದು ಭಾವಿಸಿಲಾಯಿತು.[೧೪]

ಆಲ್ಫ್ರೆಡ್ ಸಿಸ್ಲೆಯ ವ್ಯೂ ಆಫ್ ದಿ ಸೈಂಟ್-ಮಾರ್ಟಿನ್ ಕೆನಾಲ್, ಪ್ಯಾರಿಸ್, 1870, ಮ್ಯೂಸೀ ಡಿ ಆರ್ಸೆ

ಆದರೂ, ಛಾಯಾಚಿತ್ರ ಗ್ರಹಣವು ನಿಜವಾಗಿ ವರ್ಣಚಿತ್ರಕಾರರಿಗೆ ಕಲಾತ್ಮಕ ಅಭಿವ್ಯಕ್ತಿಯ ಇತರ ಮಾರ್ಗವನ್ನು ಅನುಸರಿಸಲು ಸ್ಫೂರ್ತಿಯನ್ನು ನೀಡಿತು. ನೈಜತೆಗಾಗಿ ಛಾಯಾಚಿತ್ರ ಗ್ರಹಣದೊಂದಿಗೆ ಪೈಪೋಟಿ ನಡೆಸುವ ಬದಲಿಗೆ, ವರ್ಣಚಿತ್ರಕಾರರು ಛಾಯಾಚಿತ್ರಕ್ಕಿಂತ ಉತ್ತಮವಾಗಿ ಚಿತ್ರ ಬಿಡಿಸಬಹುದಾದ ಮಾರ್ಗಕ್ಕೆ ಹೆಚ್ಚು ಗಮನ ಹರಿಸಿದರು, ಅದಕ್ಕಾಗಿ ಅವರು ಚಿತ್ರದ ಕಲ್ಪನೆಯಲ್ಲಿ ಹೆಚ್ಚು ವ್ಯಕ್ತಿನಿಷ್ಠವಾಗಿರುವ ಒಂದು ಕಲೆಯ ರೂಪವನ್ನು ಅಭಿವೃದ್ಧಿಪಡಿಸಿದರು, ಛಾಯಾಚಿತ್ರ ಗ್ರಹಣವು ಈ ವ್ಯಕ್ತಿನಿಷ್ಠತೆಯನ್ನು ಕಡೆಗಣಿಸಿತ್ತು.[೧೪] ಚಿತ್ತಪ್ರಭಾವ ನಿರೂಪಣವಾದಿಗಳು ಪ್ರಪಂಚದ ಪ್ರತಿಬಿಂಬಕ ಚಿತ್ರಗಳು ಅಥವಾ ನಿಖರವಾದ ಪ್ರತಿಬಿಂಬವನ್ನು ರಚಿಸುವ ಬದಲಿಗೆ ತಮ್ಮ ನಿಸರ್ಗದ ಗ್ರಹಿಕೆಯನ್ನು ವ್ಯಕ್ತಪಡಿಸಲು ಪ್ರಯತ್ನಿಸಿದರು. ಇದು ವರ್ಣಚಿತ್ರಕಾರರಿಗೆ 'ತಮ್ಮ ಆಸಕ್ತಿ ಮತ್ತು ಮನಸ್ಸಾಕ್ಷಿಯ ಅನುಕ್ತ ನಿಯಮಗಳೊಂದಿಗೆ ತಾವು ಕಂಡಿದುದನ್ನು' ವ್ಯಕ್ತಿನಿಷ್ಠವಾಗಿ ಚಿತ್ರ ಬಿಡಿಸಲು ಅವಕಾಶ ಮಾಡಿಕೊಟ್ಟಿತು.[೧೫] ಛಾಯಾಚಿತ್ರ ಗ್ರಹಣವು ಅದು ಆಗ ಹೊಂದಿರದಿದ್ದ ಬಣ್ಣ ಮೊದಲಾದ ಚಿತ್ರಬಿಡಿಸುವ ಮಾಧ್ಯಮದ ಅಂಶಗಳನ್ನು ಬಳಸಿಕೊಳ್ಳುವಂತೆ ವರ್ಣಚಿತ್ರಕಾರರನ್ನು ಪ್ರೋತ್ಸಾಹಿಸಿತು. 'ಚಿತ್ತಪ್ರಭಾವ ನಿರೂಪಣವಾದಿಗಳು ಛಾಯಾಚಿತ್ರ ಗ್ರಹಣಕ್ಕೆ ಒಂದು ವ್ಯಕ್ತಿನಿಷ್ಠ ಪರ್ಯಾಯವನ್ನು ಪ್ರಜ್ಞಾಪೂರ್ವಕವಾಗಿ ಒದಗಿಸಿದ ಮೊದಲಿಗರಾಗಿದ್ದಾರೆ'.[೧೪] ಮತ್ತೊಂದು ಪ್ರಮುಖ ಪ್ರಭಾವವೆಂದರೆ ಜಪಾನಿನ ಕಲಾ ಚಿತ್ರಗಳು (ಜಾಪೋನಿಸಮ್), ಇದು ಮೂಲತಃ ಫ್ರಾನ್ಸಿಗೆ ಆಮದುಗೊಂಡ ಸರಕುಗಳ ಹೊದಿಕೆ ಕಾಗದವಾಗಿ ಬಂದಿತು. ಈ ಚಿತ್ರಗಳ ಕಲೆಯು 'ಸ್ನ್ಯಾಪ್‌ಶಾಪ್' ಆಯಾಮಗಳಿಗೆ ಮತ್ತು ಚಳವಳಿಯ ವಿಶಿಷ್ಟ ಲಕ್ಷಣವಾದ ಅಸಾಂಪ್ರದಾಯಿಕ ಸಂಯೋಜನೆಗಳಿಗೆ ಗಮನಾರ್ಹ ಕೊಡುಗೆಯನ್ನು ನೀಡಿತು. ಎದ್ಗಾರ್ ದೆಗಾಸ್ ಒಬ್ಬ ಹುರುಪಿನ ಛಾಯಾಚಿತ್ರ ಗ್ರಾಹಕ ಮತ್ತು ಜಪಾನೀಸ್ ಚಿತ್ರ ಸಂಗ್ರಾಹಕ.[೧೬] 1874ರ ಆತನ ದಿ ಡ್ಯಾನ್ಸ್ ಕ್ಲಾಸ್ (ಲಾ ಕ್ಲಾಸ್ಸೆ ಡಿ ಡ್ಯಾನ್ಸೆ) ಅದರ ವಿಷಮಪಾರ್ಶ್ವದ ಸಂಯೋಜನೆಯಲ್ಲಿ ಇವೆರಡರ ಪ್ರಭಾವಗಳನ್ನೂ ತೋರಿಸುತ್ತದೆ. ಈ ಚಿತ್ರದಲ್ಲಿ ಕೆಳಗಿನ ಬಲ ಕಾಲುಭಾಗದಲ್ಲಿ ವಿಶಾಲವಾದ ಖಾಲಿ ಸಮತಲ ಪ್ರದೇಶವನ್ನು ಬಿಟ್ಟುಬಿಟ್ಟು ನರ್ತಕರು ವಿವಿಧ ಚಂದವಿಲ್ಲದ ಭಂಗಿಗಳಲ್ಲಿರುವುದನ್ನು ಗಮನಿಸಬಹುದು. ಈ ನರ್ತಕರನ್ನು ದಿ ಲಿಟಲ್ ಫೊರ್ಟೀನ್-ಯಿಯರ್-ಓಲ್ಡ್ ಡ್ಯಾನ್ಸರ್ ‌ನಂತಹ ಶಿಲ್ಪಕೃತಿಯಲ್ಲೂ ಸೆರೆಹಿಡಿಯಲಾಗಿದೆ.

ಪ್ರಮುಖ ಚಿತ್ತಪ್ರಭಾವ ನಿರೂಪಣವಾದಿಗಳು

[ಬದಲಾಯಿಸಿ]
ಕ್ಯಾಮಿಲ್ಲೆ ಪಿಸ್ಸಾರ್ರೊನ ಹೋರ್‌ಫ್ರೋಸ್ಟ್, 1873, ಮ್ಯೂಸೀ ಡಿಆರ್ಸೆ, ಪ್ಯಾರಿಸ್
ಬರ್ತೆ ಮೋರಿಸೋಟ್‌ನ ದಿ ಹಾರ್ಬರ್ ಅಟ್ ಲೋರಿಯಂಟ್, 1869, ನ್ಯಾಷನಲ್ ಗ್ಯಾಲರಿ ಆಫ್ ಆರ್ಟ್, ವಾಷಿಂಗ್ಟನ್, ಡಿ. ಸಿ.

ಫ್ರಾನ್ಸಿನ ಚಿತ್ತಪ್ರಭಾವ ನಿರೂಪಣ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ ವ್ಯಕ್ತಿಗಳನ್ನು ಈ ಕೆಳಗೆ ಪಟ್ಟಿಮಾಡಲಾಗಿದೆ:

  • ಫ್ರೆಡೆರಿಕ್ ಬ್ಯಾಜಿಲ್ಲೆ (1841–1870)
  • ಗುಸ್ಟೇವ್ ಕೈಲ್ಲೆಬೊಟ್ಟೆ (ಉಳಿದವರಿಗಿಂತ ಕಿರಿಯವರಾದ ಇವರು 1870ರ ದಶಕದಲ್ಲಿ ಅವರೊಂದಿಗೆ ಸೇರಿಕೊಂಡರು) (1848–1894)
  • ಮೇರಿ ಕ್ಯಾಸ್ಸಟ್ (ಅಮೇರಿಕ-ಮೂಲದ ಈಕೆ ಪ್ಯಾರಿಸ್‌ನಲ್ಲಿ ವಾಸಿಸುತ್ತಿದ್ದರು ಮತ್ತು ನಾಲ್ಕು ಚಿತ್ತಪ್ರಭಾವ ನಿರೂಪಣವಾದಿ ಪ್ರದರ್ಶನಗಳಲ್ಲಿ ಭಾಗವಹಿಸಿದರು) (1844–1926)
  • ಪಾಲ್ ಸೆಜಾನ್ನೆ (ಈತ ನಂತರ ಚಿತ್ತಪ್ರಭಾವ ನಿರೂಪಣವಾದಿಗಳಿಂದ ಬೇರ್ಪಟ್ಟರು) (1839–1906)
  • ಎದ್ಗಾರ್ ದೆಗಾಸ್ (ಚಿತ್ತಪ್ರಭಾವ ನಿರೂಪಣವಾದಿ ಪದವನ್ನು ಉಪೇಕ್ಷಿಸಿದ ಒಬ್ಬ ವಾಸ್ತವವಾದಿ, ಆದರೆ ಗುಂಪಿಗೆ ತೋರಿಸಿದ ನಿಯತ್ತಿನಿಂದಾಗಿ ಈತನನ್ನು ಒಬ್ಬ ಸದಸ್ಯನೆಂದು ಪರಿಗಣಿಸಲಾಗುತ್ತದೆ) (1834–1917)
  • ಅರ್ಮಂಡ್ ಗ್ಯುಲ್ಲಾಮಿನ್ (1841–1927)
  • ಎಡೋವರ್ಡ್ ಮ್ಯಾನೆಟ್ (ಈತ ತನನ್ನು ಒಬ್ಬ ಚಿತ್ತಪ್ರಭಾವ ನಿರೂಪಣವಾದಿಯೆಂದು ಪರಿಗಣಿಸಲಿಲ್ಲ, ಆದರೆ ಈತ ತನ್ನ ಕೃತಿಗಳನ್ನು ಅವರೊಂದಿಗೆ ಪ್ರದರ್ಶಿಸಿದರು ಮತ್ತು ಅವರ ಮೇಲೆ ಹೆಚ್ಚಿನ ಪ್ರಭಾವ ಬೀರಿದರು), (1832–1883)
  • ಕ್ಲಾಡೆ ಮೊನೆಟ್ (ಈತ ಚಿತ್ತಪ್ರಭಾವ ನಿರೂಪಣವಾದಿಗಳಲ್ಲಿ ಪ್ರಮುಖವಾದವರು ಮತ್ತು ತಮ್ಮ ಕಲಾಮೀಮಾಂಸೆಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸುವವರಲ್ಲಿ ಒಬ್ಬರಾಗಿದ್ದಾರೆ)[೧೭] (1840–1926)
  • ಬರ್ತೆ ಮೋರಿಸಾಟ್ (1841–1895)
  • ಕ್ಯಾಮಿಲ್ಲೆ ಪಿಸ್ಸಾರ್ರೊ (1830–1903)
  • ಪಿಯೆರ್ರೆ-ಆಗಸ್ಟೆ ರೆನಾಯರ್ (1841–1919)
  • ಆಲ್ಫ್ರೆಡ್ ಸಿಸ್ಲೆ (1839–1899)

ಚಿತ್ರಸಂಪುಟ

[ಬದಲಾಯಿಸಿ]
ಸಮಯ: ಚಿತ್ತಪ್ರಭಾವ ನಿರೂಪಣವಾದಿಗಳ ಜೀವನ
[ಬದಲಾಯಿಸಿ]

ಚಿತ್ತಪ್ರಭಾವ ನಿರೂಪಣವಾದಿಗಳು

ಸಂಬಂಧಿಸಿದವರು ಮತ್ತು ಪ್ರಭಾವ ಬೀರಿದ ಕಲಾವಿದರು

[ಬದಲಾಯಿಸಿ]
ಜೇಮ್ಸ್ ಅಬೋಟ್ಟ್ ಮ್ಯಾಕ್‌ನೈಲ್ ವಿಸ್ಲರ್‌‌ನ [20] (1874), ಡೆಟ್ರಾಯಿಟ್ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್

ಚಿತ್ತಪ್ರಭಾವ ನಿರೂಪಣವಾದಿಗಳಿಗೆ ಹತ್ತಿರದಿಂದ ಸಂಬಂಧಿಸಿದವರಲ್ಲಿ ಕೆಲವು ವರ್ಣಚಿತ್ರಕಾರರು ತಮ್ಮ ವಿಧಾನಗಳನ್ನು ಕೆಲವು ಹಂತಕ್ಕೆ ಅನುಮೋದಿಸಿದರು. ಇವರಲ್ಲಿ ಗಿಯುಸೆಪ್ಪೆ ಡಿ ನಿಟ್ಟಿಸ್ ಸಹ ಸೇರಿದ್ದಾರೆ, ಈತ ಪ್ಯಾರಿಸ್‌ನಲ್ಲಿ ವಾಸಿಸುತ್ತಿದ್ದ ಒಬ್ಬ ಇಟಲಿಯನ್ ಕಲಾವಿದನಾಗಿದ್ದು ದೆಗಾಸ್‌ನ ಆಹ್ವಾನದ ಮೇರೆಗೆ ಮೊದಲ ಚಿತ್ತಪ್ರಭಾವ ನಿರೂಪಣವಾದಿ ಪ್ರದಶನದಲ್ಲಿ ಭಾಗವಹಿಸಿದರು, ಆದರೂ ಇತರ ಚಿತ್ತಪ್ರಭಾವ ನಿರೂಪಣವಾದಿಗಳು ಈತನ ಕೃತಿಯನ್ನು ಅಲ್ಲಗಳೆದರು.[೧೮] ಫೆಡೆರಿಕೊ ಜಾಂಡೊಮೆನೆಘಿ ಚಿತ್ತಪ್ರಭಾವ ನಿರೂಪಣವಾದಿಗಳೊಂದಿಗೆ ಸೇರಿಕೊಂಡ ದೆಗಾಸ್‌ನ ಮತ್ತೊಬ್ಬ ಇಟಲಿಯನ್ ಸ್ನೇಹಿತ. ಈವ ಗೊಂಜೇಲ್ಸ್ ಮ್ಯಾನೆಟ್‌ನ ಅನುಯಾಯಿಯಾಗಿದ್ದು, ಈತ ತನ್ನ ವರ್ಣಚಿತ್ರಗಳನ್ನು ಗುಂಪಿನೊಂದಿಗೆ ಪ್ರದರ್ಶಿಸಲಿಲ್ಲ. ಜೇಮ್ಸ್ ಅಬ್ಬಾಟ್ಟ್ ಮ್ಯಾಕ್‌ನೈಲ್ ವಿಸ್ಲರ್ ಒಬ್ಬ ಅಮೆರಿಕನ್-ಮೂಲದ ವರ್ಣಚಿತ್ರಕಾರ, ಈತ ಚಿತ್ತಪ್ರಭಾವ ನಿರೂಪಣ ಚಳವಳಿಯಲ್ಲಿ ಭಾಗವಹಿಸಿದರು. ಆದರೆ ಈತ ಗುಂಪನ್ನು ಸೇರಿಕೊಳ್ಳಲಿಲ್ಲ ಮತ್ತು ಬೂದುಗೊಳಿಸಿದ ಬಣ್ಣಗಳಿಗೆ ಆದ್ಯತೆ ನೀಡಿದರು. ಇಂಗ್ಲಿಷ್ ವರ್ಣಚಿತ್ರಕಾರ ವಾಲ್ಟರ್ ಸಿಕರ್ಟ್ ಆರಂಭದಲ್ಲಿ ವಿಸ್ಲರ್‌ನ ಅನುಚರರಾಗಿದ್ದರು ಮತ್ತು ನಂತರ ದೆಗಾಸ್‌ನ ಮುಖ್ಯ ಅನುಯಾಯಿಯಾದರು. ಅವರು ಚಿತ್ತಪ್ರಭಾವ ನಿರೂಪಣವಾದಿಗಳೊಂದಿಗೆ ಪ್ರದರ್ಶನ ಮಾಡಲಿಲ್ಲ. 1904ರಲ್ಲಿ ವರ್ಣಚಿತ್ರಕಾರ ಮತ್ತು ಬರಹಗಾರ ವಿನ್ಫಾರ್ಡ್ ಡ್ಯೂಹರ್ಸ್ಟ್ ಫ್ರೆಂಚ್ ವರ್ಣಚಿತ್ರಕಾರರದ ಬಗ್ಗೆ ಮೊದಲ ಪ್ರಮುಖ ಅಧ್ಯಯನವನ್ನು ಬರೆದರು, ಇಂಪ್ರೆಷನಿಸ್ಟ್ ಪೈಂಟಿಂಗ್: ಇಟ್ಸ್ ಜೆನೆಸಿಸ್ ಆಂಡ್ ಡೆವಲಪ್ಮೆಂಟ್ ಎಂಬ ಶೀರ್ಷಿಕೆಯ ಇದು ಇಂಗ್ಲಿಷ್‌ನಲ್ಲಿ ಪ್ರಕಟವಾಯಿತು. ಇದು ಗ್ರೇಟ್ ಬ್ರಿಟನ್‌ನಲ್ಲಿ ಚಿತ್ತಪ್ರಭಾವ ನಿರೂಪಣವನ್ನು ಹೆಚ್ಚು ಜನಪ್ರಿಯಗೊಳಿಸಿತು. 1880ರ ದಶಕದ ಆರಂಭದಲ್ಲಿ, ಚಿತ್ತಪ್ರಭಾವ ನಿರೂಪಣವಾದಿ ವಿಧಾನಗಳು ಕೇವಲ ತೋರ್ಕೆಗೆ ಸ್ಯಾಲನ್‌ನ ಕಲೆಯ ಮೇಲೆ ಪ್ರಭಾವ ಬೀರುತ್ತಿದ್ದವು. ಜೀನ್ ಬೆರಾಡ್ ಮತ್ತು ಹೆನ್ರಿ ಗರ್ವೆಕ್ಸ್ ಮೊದಲಾದ ಫ್ಯಾಷನ್‌ಗಾರಿಕೆಯ ವರ್ಣಚಿತ್ರಕಾರರು ಸ್ಯಾಲನ್ ಕಲೆಯ ಸೂಕ್ಷ್ಮ ಮುಕ್ತಾಯದ ಕೆಲಸವನ್ನು ಉಳಿಸಿಕೊಂಡು ತಮ್ಮ ವರ್ಣಫಲಕಗಳಿಗೆ ಹೊಳಪುಕೊಡುವ ಮೂಲಕ ವಿಮರ್ಶಾತ್ಮಕ ಮತ್ತು ಹಣಕಾಸಿನ ಯಶಸ್ಸು ಕಂಡರು.[೧೯] ಈ ಕಲಾವಿದರು ಚಿತ್ತಪ್ರಭಾವ ನಿರೂಪಣವಾದಿ ಅಭ್ಯಾಸದಿಂದ ದೂರವಿದ್ದರೂ, ಅವರ ಕೃತಿಗಳನ್ನು ಕೆಲವೊಮ್ಮೆ ಸಾಂದರ್ಭಿಕವಾಗಿ ಚಿತ್ತಪ್ರಭಾವ ನಿರೂಪಣವೆಂದು ಸೂಚಿಸಲಾಗುತ್ತದೆ.

ಫ್ರಾನ್ಸಿನಿಂದ ಆಚೆಗೆ

[ಬದಲಾಯಿಸಿ]
ಮೇರಿ ಕ್ಯಾಸಟ್‌ರ ದಿ ಚೈಲ್ಡ್ಸ್ ಬಾತ್ (ದಿ ಬಾತ್), 1893, ತೈಲಚಿತ್ರ, ಆರ್ಟ್ ಇನ್‌ಸ್ಟಿಟ್ಯೂಟ್ ಆಫ್ ಚಿಕಾಗೊ

ಚಿತ್ತಪ್ರಭಾವ ನಿರೂಪಣದ ಪ್ರಭಾವವು ಫ್ರಾನ್ಸಿನಿಂದ ಆಚೆಗೆ ಹರಡಿದಂತೆ, ಅನೇಕ ವರ್ಣಚಿತ್ರಕಾರರು ಹೊಸ ಶೈಲಿಯ ವೃತ್ತಿಗಾರರೆಂದು ಗುರುತಿಸಲ್ಪಟ್ಟರು. ಕೆಲವು ಪ್ರಮುಖ ಉದಾಹರಣೆಗಳೆಂದರೆ:

  • ಅಮೆರಿಕಾದ ಚಿತ್ತಪ್ರಭಾವ ನಿರೂಪಣವಾದಿಗಳು - ಮೇರಿ ಕಸ್ಸಾಟ್ಟ್, ವಿಲಿಯಂ ಮೆರಿಟ್ಟ್ ಚೇಸ್, ಫ್ರೆಡೆರಿಕ್ ಕಾರ್ಲ್ ಫ್ರೈಸೆಕೆ, ಚಿಲ್ಡೆ ಹಸ್ಸಾಮ್, ವಿಲ್ಲಾರ್ಡ್ ಮೆಟ್ಕಾಲ್ಫ್, ಲಿಲ್ಲಾ ಕ್ಯಾಬಟ್ ಪೆರ್ರಿ, ಥಿಯೋಡೊರೆ ರಾಬಿನ್ಸನ್, ಎಡ್ಮಂಡ್ ಚಾರ್ಲ್ಸ್ ಟಾರ್ಬೆಲ್, ಜಾನ್ ಹೆನ್ರಿ ಟ್ವಾಚ್ಟ್‌ಮ್ಯಾನ್ ಮತ್ತು ಜೆ. ಆಲ್ಡೆನ್ ವೈರ್.
  • ಬೆಲ್ಜಿಯಂನ ಚಿತ್ತಪ್ರಭಾವ ನಿರೂಪಣವಾದಿ ವರ್ಣಚಿತ್ರಕಾರರಾದ ಥಿಯೊ ವ್ಯಾನ್ ರಿಸ್ಸೆಲ್‌ಬರ್ಘೆ, ಅನ್ನಾ ಬಾಚ್, ವಿನ್ಸೆಂಟ್ ವ್ಯಾನ್ ಗೋಘ್‌ನ ಸ್ನೇಹಿತ ಯೂಜೀನ್ ಬಾಚ್ ಮತ್ತು ಗಾರ್ಗೆಸ್ ಲೆಮ್ಮೆನ್.
  • ವಾಲ್ಟರ್ ರಿಚಾರ್ಡ್ ಸಿಕರ್ಟ್ ಮತ್ತು ಫಿಲಿಪ್ ವಿಲ್ಸನ್ ಸ್ಟೀರ್ ಮೊದಲಾದವರು ಯುನೈಟೆಡ್ ಕಿಂಗ್ಡಮ್‌ನ ಪ್ರಸಿದ್ಧ ಚಿತ್ತಪ್ರಭಾವ ನಿರೂಪಣವಾದಿ ವರ್ಣಚಿತ್ರಕಾರರಾಗಿದ್ದಾರು.
  • ಆಸ್ಟ್ರೇಲಿಯಾದ ಚಿತ್ತಪ್ರಭಾವ ನಿರೂಪಣವಾದಿಗಳು - ಫ್ರೆಡೆರಿಕ್ ಮ್ಯಾಕ್‌ಕುಬ್ಬಿನ್ ಮತ್ತು ಟಾಮ್ ರಾಬರ್ಟ್ಸ್ ಹೈಡೆಲ್‌ಬರ್ಗ್ ಶಾಲೆಯ ಜನಪ್ರಿಯ ಸದಸ್ಯರಾಗಿದ್ದರು, ರೋಡಿನ್, ಮೋನೆಟ್, ಮ್ಯಾಟಿಸ್ಸೆ ಮತ್ತು ವ್ಯಾನ್ ಗಾಘ್‌ನ ಸ್ನೇಹಿತ ಜಾನ್ ಪೀಟರ್ ರಸ್ಸೆಲ್, ರುಪರ್ಟ್ ಬನ್ನಿ, ಆಗ್ನೆಸ್ ಗುಡ್ಸರ್ ಮತ್ತು ಹಘ್ ರಾಮ್ಸೆ.
  • ಜರ್ಮನಿಯ ಲೋವಿಸ್ ಕೊರಿಂತ್, ಮ್ಯಾಕ್ಸ್ ಲೈಬರ್‌ಮ್ಯಾನ್ ಮತ್ತು ಮ್ಯಾಕ್ಸ್ ಸ್ಲೆವೋಗ್ಟ್
  • ಹಂಗೇರಿಯಾದ ಲಾಜ್ಲೊ ಮೆಡ್ನಿಯಾಂಸ್ಜ್ಕಿ
  • ಐರ್ಲೆಂಡ್‌ನ ರೊಡೆರಿಕ್ ಒಕೊನರ್ ಮತ್ತು ವಾಲ್ಟರ್ ಓಸ್ಬರ್ನೆ
  • ರಷ್ಯಾದ ಕಾಂಸ್ಟಾಂಟಿನ್ ಕೊರೋವಿನ್ ಮತ್ತು ವ್ಯಾಲೆಂಟಿನ್ ಸೆರೋವ್
  • ಪ್ಯುಯೆರ್ಟೊ ರಿಕೊದ ನಿವಾಸಿ ಹಾಗೂ ಪಿಸ್ಸಾರ್ರೊ ಮತ್ತು ಸೆಜಾನ್ನೆಯ ಸ್ನೇಹಿತ ಫ್ರಾನ್ಸಿಸ್ಕೊ ಒಲ್ಲರ್ ವೈ ಸೆಸ್ಟೆರೊ
  • ಸ್ಕಾಟ್‌ಲ್ಯಾಂಡ್‌ನ ವಿಲಿಯಂ ಮ್ಯಾಕ್‌ಟ್ಯಾಗರ್ಟ್.
  • ಕೆನಡಿಯನ್ ವರ್ಣಚಿತ್ರಕಾರ ಲಾರ ಮುಂಟ್ಜ್ ಲ್ಯಾಲ್
  • ಪೋಲಿಷ್ ಚಿತ್ತಪ್ರಭಾವ ನಿರೂಪಣವಾದಿ ಮತ್ತು ಸಿಂಪೋಬಲಿಸ್ಟ್ ವ್ಲಾಡಿಸ್ಲಾ ಪೊಡ್ಕೊವಿಂಸ್ಕಿ
  • ಟರ್ಕಿಗೆ ಚಿತ್ತಪ್ರಭಾವ ನಿರೂಪಣವನ್ನು ತಂದ ನಾಜ್ಮಿ ಜಿಯಾ ಗ್ಯುರಾನ್
  • ಈಜಿಪ್ಟಿನ ಚಾಫಿಕ್ ಚಾರೋಬಿಮ್
  • ಬ್ರೆಜಿಲ್‌ನ ಎಲಿಸ್ಯೂ ವಿಸ್ಕಾಂಟಿ
  • ಜರ್ಮನಿ, ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಲಾತ್ವಿಯಾದ ಮಾರ್ಟಿನ್ಸ್ ಕ್ರುಮಿನ್ಸ್.
  • ಸ್ಪೇನ್‌ನ ಜೊಯಾಕ್ವಿನ್ ಸೊರೋಲ್ಲಾ
  • ಅರ್ಜೆಂಟೈನಾ‌ದ ಫೆರ್ನಾಂಡೊ ಫೇಡರ್, ಮಾರ್ಟಿನ್ ಮಲ್ಹಾರ್ರೊ, ರಾಮನ್ ಸಿಲ್ವಾ

ಶಿಲ್ಪ, ಛಾಯಾಚಿತ್ರ ಗ್ರಹಣ ಮತ್ತು ಚಲನಚಿತ್ರ

[ಬದಲಾಯಿಸಿ]

ಕ್ಷಣಿಕ ಬೆಳಕಿನ ಪ್ರಭಾವಗಳನ್ನು ಸೂಚಿಸಲು ಒರಟಾದ ಮೇಲ್ಮೆ‌ಗಳನ್ನು ಬಳಸಿದ ಮಾರ್ಗಕ್ಕಾಗಿ ಶಿಲ್ಪಿ ಆಗಸ್ಟೆ ರೋಡಿನ್‌ನನ್ನು ಕೆಲವೊಮ್ಮೆ ಚಿತ್ತಪ್ರಭಾವ ನಿರೂಪಣವಾದಿ ಎಂದು ಕರೆಯಲಾಗುತ್ತದೆ. ಸೂಕ್ಷ್ಮ ಗಮನ ಮತ್ತು ಪರಿಸರ ಪ್ರಭಾವಗಳಿಂದ ವೈಶಿಷ್ಟ್ಯಗೊಂಡ ವರ್ಣಚಿತ್ರಗಳನ್ನು ಚಿತ್ರಿಸಿದ ಸಚಿತ್ರ ಛಾಯಾಚಿತ್ರಗ್ರಾಹಕರನ್ನೂ ಸಹ ಚಿತ್ತಪ್ರಭಾವ ನಿರೂಪಣವಾದಿಗಳೆಂದು ಕರೆಯಲಾಗುತ್ತಿತ್ತು. ಫ್ರೆಂಚ್ ಚಿತ್ತಪ್ರಭಾವ ನಿರೂಪಣವಾದಿ ಸಿನೆಮಾ ಎಂಬುದು 1919–1929ರಲ್ಲಿ ಫ್ರಾನ್ಸಿನಲ್ಲಿ ಲಕ್ಷ್ಯವಿಲ್ಲದೆ ನಿರೂಪಿಸಿದ ಚಲನಚಿತ್ರಗಳು ಮತ್ತು ಚಲನಚಿತ್ರ ನಿರ್ಮಾಪಕರ ಗುಂಪಿಗೆ ಬಳಸಿದೆ ಪದವಾಗಿದೆ. ಫ್ರೆಂಚ್ ಚಿತ್ತಪ್ರಭಾವ ನಿರೂಪಣವಾದಿ ಚಲನಚಿತ್ರ ನಿರ್ಮಾಪಕರೆಂದರೆ ಅಬೆಲ್ ಗ್ಯಾನ್ಸ್, ಜೀನ್ ಎಪ್ಸ್ಟೈನ್, ಜರ್ಮೈನೆ ದುಲಕ್, ಮಾರ್ಸೆಲ್ ಎಲ್‌ಹರ್ಬೈರ್, ಲೂಯಿಸ್ ದೆಲ್ಲುಕ್ ಮತ್ತು ಡ್ಮಿಟ್ರಿ ಕಿರ್ಸನೋಫ್.

ಸಂಗೀತ ಮತ್ತು ಸಾಹಿತ್ಯ

[ಬದಲಾಯಿಸಿ]
ಕ್ಲಾಡೆ ಮೊನೆಟ್‌ರ ವಾಟರ್ ಲಿಲೀಸ್, 1916, ದಿ ನ್ಯಾಷನಲ್ ಮ್ಯೂಸಿಯಂ ಆಫ್ ವೆಸ್ಟರ್ನ್ ಆರ್ಟ್, ಟೋಕಿಯೊ

ಸಂಗೀತ ಚಿತ್ತಪ್ರಭಾವ ನಿರೂಪಣ ಎಂಬುದು 19ನೇ ಶತಮಾನದ ಉತ್ತರಾರ್ಧದಲ್ಲಿ ಆರಂಭವಾಗಿ 20ನೇ ಶತಮಾನದ ಮಧ್ಯಾವಧಿಯವರೆಗೆ ಮುಂದುವರಿದ ಯುರೋಪಿಯನ್ ಶಾಸ್ತ್ರೀಯ ಸಂಗೀತ ಚಳವಳಿಗೆ ನೀಡಿದ ಹೆಸರಾಗಿದೆ. ಫ್ರಾನ್ಸಿನಲ್ಲಿ ಹುಟ್ಟಿಕೊಂಡ ಸಂಗೀತ ಚಿತ್ತಪ್ರಭಾವ ನಿರೂಪಣ ಚಳವಳಿಯು ಧ್ವನಿ ಮತ್ತು ಭಾವದಿಂದ ವೈಶಿಷ್ಟ್ಯವಾಗಿತ್ತು ಹಾಗೂ ರೊಮ್ಯಾಂಟಿಕ್ ಯುಗದ ಭಾವನಾತ್ಮಕ ಅತಿರೇಕವನ್ನು ದೂರಮಾಡಿತು. ಚಿತ್ತಪ್ರಭಾವ ನಿರೂಪಣವಾದಿ ಸಂಯೋಜಕರು ಸ್ವಪ್ನಮಯವಾದ ಹಾಡು, ಅರಬ್ಬಿ ಸಂಗೀತ ಕೃತಿ ಮತ್ತು ಪ್ರಾಸ್ತಾವಿಕ ರಾಗಾಲಾಪನೆ ಇತ್ಯಾದಿ ಕಿರು ರಚನೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರು ಹಾಗೂ ಸಂಪೂರ್ಣ ಸಂಗೀತ ಸ್ವರ-ಶ್ರೇಣಿಯಂತಹ ಅಸಾಮಾನ್ಯ ಸ್ವರಗಳ ಜೋಡಣೆಯನ್ನು ಚಾಲ್ತಿಗೆ ತಂದರು. ಚಿತ್ತಪ್ರಭಾವ ನಿರೂಪಣವಾದಿ ಸಂಯೋಜಕರು ಮಾಡಿದ ಹೆಚ್ಚು ಗಮನಾರ್ಹ ಹೊಸ ಬದಲಾವಣೆಗಳೆಂದರೆ ಪ್ರಮುಖ 7ನೇ ಸ್ವರಮೇಳಗಳ ಮೊದಲ ಬಳಕೆ ಮತ್ತು 3ರಿಂದ ಐದು ಮತ್ತು ಆರು ಭಾಗದ ಹಾರ್ಮನಿ(ಏಕಕಾಲದಲ್ಲಿ ವಿವಿಧ ಸ್ವರಗಳನ್ನು ಸಂಯೋಜಿಸಿ ಸೃಷ್ಟಿಸಿದ ಸ್ವರಮೇಳ)ಗಳಲ್ಲಿನ ಸ್ವರಮೇಳ ರಚನೆಗಳ ವಿಸ್ತರಣೆ. ಸಂಗೀತ ಚಿತ್ತಪ್ರಭಾವ ನಿರೂಪಣದ ಮೇಲಿನ ದೃಶ್ಯ ಚಿತ್ತಪ್ರಭಾವ ನಿರೂಪಣದ ಪ್ರಭಾವವು ವಿವಾದಾಸ್ಪದವಾಗಿದೆ. ಕ್ಲಾಡೆ ಡಿಬಸ್ಸಿ ಮತ್ತು ಮಾರಿಸ್ ರಾವೆಲ್‌ರನ್ನು ಸಾಮಾನ್ಯವಾಗಿ ಚಿತ್ತಪ್ರಭಾವ ನಿರೂಪಣವಾದಿ ಸಂಯೋಜಕರೆಂದು ಪರಿಗಣಿಸಲಾಗುತ್ತದೆ. ಆದರೆ ಡಿಬಸ್ಸಿ ಈ ಪದವನ್ನು ಅಲ್ಲಗಳೆದು ಇದನ್ನು ವಿಮರ್ಶಕರ ನೂತನ ಸೃಷ್ಟಿಯೆಂದು ಕರೆದರು. ಎರಿಕ್ ಸ್ಯಾಟಿಯೂ ಸಹ ಈ ವರ್ಗದಲ್ಲಿದ್ದರೆಂದು ತಿಳಿಯಲಾಗುತ್ತದೆ, ಆದರೆ ಅವರ ಸಾಧನೆಯು ಮುಖ್ಯವಾಗಿ ಸಂಗೀತ ನವೀನತೆಯಲ್ಲಿ ಕಡಿಮೆ ಪ್ರಾಮುಖ್ಯತೆಯನ್ನು ಹೊಂದಿತ್ತೆಂದು ಭಾವಿಸಲಾಗುತ್ತದೆ. ಪಾಲ್ ಡುಕಾಸ್ ಮತ್ತೊಬ್ಬ ಫ್ರೆಂಚ್ ಸಂಯೋಜಕ, ಇವರನ್ನು ಕೆಲವೊಮ್ಮೆ ಚಿತ್ತಪ್ರಭಾವ ನಿರೂಪಣವಾದಿಯೆಂದು ಪರಿಗಣಿಸಲಾಗುತ್ತದೆ ಆದರೆ ಈತನ ಶೈಲಿಯು ಹಿಂದಿನ ರೊಮ್ಯಾಂಟಿಕ್‌ವಾದಿಗೆ ಹೆಚ್ಚು ಹತ್ತಿರದಿಂದ ಜತೆಗೂಡಿತ್ತು. ಫ್ರಾನ್ಸಿನಿಂದ ಹೊರಗಿನ ಸಂಗೀತ ಚಿತ್ತಪ್ರಭಾವ ನಿರೂಪಣವು ರಾಲ್ಫ್ ವಾಘನ್ ವಿಲಿಯಮ್ಸ್ , ಒಟ್ಟೋರಿನೊ ರೆಸ್ಪಿಘಿ (ಇಟಲಿ) ಮತ್ತು ಅಲ್ಲನ್ ವಿಲ್ಕಾಕ್ಸ್, ಸಿರಿಲ್ ಸ್ಕಾಟ್ ಮತ್ತು ಜಾನ್ ಐರ್ಲೆಂಡ್ (ಇಂಗ್ಲೆಂಡ್) ಮೊದಲಾದ ಸಂಯೋಜಕರ ಕಾರ್ಯವನ್ನು ಒಳಗೊಳ್ಳುತ್ತದೆ. ಚಿತ್ತಪ್ರಭಾವ ನಿರೂಪಣ ಪದವನ್ನು ಒಂದು ಘಟನೆ ಅಥವಾ ದೃಶ್ಯದ ಸಂವೇದನ ಅಭಿವ್ಯಕ್ತಿಗಳನ್ನು ತಿಳಿಸಲು ಕೆಲವು ಆಯ್ದ ವಿವರಗಳು ಅಗತ್ಯವನ್ನು ಪೂರೈಸುವ ಸಾಹಿತ್ಯದ ಕಾರ್ಯ ವಿವರಿಸಲೂ ಬಳಸಲಾಯಿತು. ಚಿತ್ತಪ್ರಭಾವ ನಿರೂಪಣವಾದಿ ಸಾಹಿತ್ಯವು ಪ್ರತಿಮಾಪಂಥಕ್ಕೆ ಹತ್ತಿರದಿಂದ ಸಂಬಂಧಿಸಿದೆ, ಅದರ ಪ್ರಮುಖ ಮಾದರಿಗಳೆಂದರೆ ಬಾಡೆಲೇರ್, ಮಲ್ಲಾರ್ಮ್, ರಿಮ್‌ಬಾಡ್ ಮತ್ತು ವರ್ಲೇನ್. ವರ್ಜಿನಿಯಾ ವೂಲ್ಫ್ ಮತ್ತು ಜೋಸೆಫ್ ಕೊನ್ರ್ಯಾಡ್ ಮೊದಲಾದ ಲೇಖಕರು ಚಿತ್ತಪ್ರಭಾವ ನಿರೂಪಣವಾದಿ ಕೃತಿಗಳನ್ನು ರಚಿಸಿದರು, ಅದರಲ್ಲಿ ಅವರು ವ್ಯಕ್ತಿಯೊಬ್ಬನ ಮಾನಸಿಕ ಜೀವನವನ್ನು ಒಳಗೊಳ್ಳುವ ಅನಿಸಿಕೆ, ಸಂವೇದನೆ ಮತ್ತು ಭಾವನೆಗಳನ್ನು ವಿವರಿಸಿದರು.

ಪೋಸ್ಟ್-ಇಂಪ್ರೆಷನಿಸಮ್ (ಚಿತ್ತಪ್ರಭಾವ ನಿರೂಪಣದ ನಂತರ)

[ಬದಲಾಯಿಸಿ]
ಕ್ಯಾಮಿಲ್ಲೆ ಪಿಸ್ಸಾರ್ರೊರ ಚಿಲ್ಡ್ರನ್ ಆನ್ ಎ ಫಾರ್ಮ್, 1887

ಪೋಸ್ಟ್-ಇಂಪ್ರೆಷನಿಸಮ್ ಚಿತ್ತಪ್ರಭಾವ ನಿರೂಪಣದಿಂದ ಅಭಿವೃದ್ಧಿ ಹೊಂದಿತು. 1880ರ ದಶಕದಲ್ಲಿ ಅನೇಕ ವರ್ಣಚಿತ್ರಕಾರರು ಚಿತ್ತಪ್ರಭಾವ ನಿರೂಪಣವಾದಿ ಉದಾಹರಣೆಯಿಂದ ಪಡೆದ ಬಣ್ಣ, ವಿನ್ಯಾಸ, ರೂಪ ಮತ್ತು ಗೆರೆಗಳ ಬಳಕೆಗೆ ವಿವಿಧ ಆಚಾರ ಸೂತ್ರಗಳನ್ನು ಅಭಿವೃದ್ಧಿಪಡಿಸಲು ಆರಂಭಿಸಿದರು: ವಿನ್ಸೆಂಟ್ ವ್ಯಾನ್ ಗೋಘ್, ಪಾಲ್ ಗಾಗ್ವಿನ್, ಜಾರ್ಜಸ್ ಸೆರಾಟ್ ಮತ್ತು ಹೆನ್ರಿ ಡಿ ಟೌಲೌಸ್-ಲಾಟ್ರೆಸ್. ಈ ವರ್ಣಚಿತ್ರಕಾರರು ಚಿತ್ತಪ್ರಭಾವ ನಿರೂಪಣವಾದಿಗಳಿಂದ ಸ್ವಲ್ಪ ಕಿರಿಯವರಾಗಿದ್ದರು ಮತ್ತು ಅವರ ಕೆಲಸವನ್ನು ಪೋಸ್ಟ್-ಇಂಪ್ರೆಷನಿಸಮ್ ಎಂದು ತಿಳಿಯಲಾಗಿದೆ. ಕೆಲವು ಮೂಲತಃ ಚಿತ್ತಪ್ರಭಾವ ನಿರೂಪಣವಾದಿ ವರ್ಣಚಿತ್ರಕಾರರೂ ಸಹ ಈ ಹೊಸ ಕ್ಷೇತ್ರದಲ್ಲಿ ತೊಡಗಿದರು; ಕ್ಯಾಮಿಲ್ಲೆ ಪಿಸ್ಸಾರ್ರೊ, ಈತ ಬಿಂದುಚಿತ್ರಕಾರನ ರೀತಿಯಲ್ಲಿ ಚಿತ್ರಬಿಡಿಸಿದರು ಮತ್ತು ಮೋನೆಟ್ ಪರಿಶುದ್ಧ ಪ್ಲೇನ್ ಏರ್ ವರ್ಣಚಿತ್ರವನ್ನು ತ್ಯಜಿಸಿದರು. ಮೊದಲ ಮತ್ತು ಮೂರನೇ ಚಿತ್ತಪ್ರಭಾವ ನಿರೂಪಣವಾದಿ ಪ್ರದರ್ಶನಗಳಲ್ಲಿ ಭಾಗವಹಿಸಿದ ಪಾಲ್ ಸೆಜಾನ್ನೆ ವೈಯಕ್ತಿಕ ದೃಶ್ಯಕ್ಕೆ ಮಹತ್ವನೀಡುವ ಚಿತ್ರ ರಚನೆಯನ್ನು ಅಭಿವೃದ್ಧಿಪಡಿಸಿದರು ಮತ್ತು ಆತನನ್ನು ಹೆಚ್ಚಾಗಿ ಒಬ್ಬ ಪೋಸ್ಟ್-ಇಂಪ್ರೆಷನಿಸ್ಟ್ ಎಂದು ಕರೆಯಲಾಗುತ್ತದೆ. ಈ ಉದಾಹರಣೆಗಳು ಹೆಸರು-ಪಟ್ಟಿಯನ್ನು ನೀಡುವಲ್ಲಿನ ಕಷ್ಟವನ್ನು ಸೂಚಿಸಿದರೂ, ಮೂಲತಃ ಚಿತ್ತಪ್ರಭಾವ ನಿರೂಪಣವಾದಿ ವರ್ಣಚಿತ್ರಕಾರರ ಕೃತಿಗಳನ್ನು ಅರ್ಥನಿರೂಪಣೆಯಿಂದ ಚಿತ್ತಪ್ರಭಾವ ನಿರೂಪಣವೆಂದು ವರ್ಗೀಕರಿಸಬಹುದು.

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ಕಲಾ ಅವಧಿಗಳು
  • ಅಭಿವ್ಯಕ್ತಿವಾದ (ಚಿತ್ತಪ್ರಭಾವ ನಿರೂಪಣಕ್ಕೆ ಪ್ರತಿಯಾಗಿ)
  • ಲೆಸ್ XX
  • ಪಿಕ್ಟೋರಿಯಲಿಸಮ್

ಟಿಪ್ಪಣಿಗಳು

[ಬದಲಾಯಿಸಿ]
  1. ಹೊರಗೆ ಚಿತ್ರಿಸಿದ ಮತ್ತು ಕ್ಯಾಮೆರಾ ಅಬ್ಸ್‌ಕ್ಯುರಾವನ್ನು ಬಳಸಿದ ಕ್ಯಾನಲೆಟ್ಟೊವನ್ನು ಹೊರತುಪಡಿಸಿ.
  2. "ವಿನ್ಸೆಂಟ್ ವ್ಯಾನ್ ಗೋಘ್" ಆಕ್ಸ್‌ಫರ್ಡ್ ಆರ್ಟ್ ಆನ್‌ಲೈನ್
  3. ಡೆನ್ವಿರ್(1990), ಪುಟ 133.
  4. ಡೆನ್ವಿರ್ (1990), ಪುಟ194.
  5. ಡೆನ್ವಿರ್ (1990), ಪುಟ 32.
  6. ರೆವಾಲ್ಡ್ (1973), ಪುಟ 23.
  7. ಗೋರ್ಡನ್ ; ಫೋರ್ಜ್ (1988), ಪುಟ 11–12.
  8. ರಿಚರ್ಡ್ಸನ್ (2002), ಪುಟ 36.
  9. ಡೆನ್ವಿರ್ (1990), ಪುಟ 105.
  10. ರೆವಾಲ್ಡ್ (1973), ಪುಟ 603.
  11. ರೆವಾಲ್ಡ್, (1973), ಪುಟ 475–476.
  12. "ರೆನಾಯರ್ ಆಂಡ್ ದಿ ಇಂಪ್ರೆಷನಿಸ್ಟ್ ಪ್ರಾಸೆಸ್, ದಿ ಫಿಲಿಪ್ಸ್ ಕಲೆಕ್ಷನ್" (PDF). Archived from the original (PDF) on 2011-01-05. Retrieved 2011-03-14.
  13. ರೋಸೆನ್‌ಬ್ಲಮ್ (1989), ಪುಟ 228.
  14. ೧೪.೦ ೧೪.೧ ೧೪.೨ ಲೆವಿನ್ಸನ್, ಪಾಲ್ (1997) ದಿ ಸಾಫ್ಟ್ ಎಡ್ಜ್; ಎ ನ್ಯಾಚುರಲ್ ಹಿಸ್ಟರಿ ಆಂಡ್ ಫ್ಯೂಚರ್ ಆಫ್ ದಿ ಇನ್ಫರ್ಮೇಶನ್ ರೆವಲ್ಯೂಷನ್ , ರೌಟ್ಲೆಡ್ಜ್, ಲಂಡನ್ ಮತ್ತು ನ್ಯೂಯಾರ್ಕ್
  15. ಸೊಂಟ್ಯಾಗ್, ಸುಸಾನ್ (1977) ಆನ್ ಫೋಟೋಗ್ರಫಿ, ಪೆಂಗ್ಯುಯಿನ್, ಲಂಡನ್
  16. ಬಾಮ್ಯಾನ್; ಕ್ಯಾರಬೆಲ್ನಿಕ್ ಮತ್ತು ಇತರರು (1994), ಪುಟ 112.
  17. ಡೆನ್ವಿರ್ (1990), ಪುಟ 140.
  18. ಡೆನ್ವಿರ್ (1990), ಪುಟ 152.
  19. ರೆವಾಲ್ಡ್ (1973), ಪುಟ 476–477.


ಉಲ್ಲೇಖಗಳು‌

[ಬದಲಾಯಿಸಿ]
  • ಬಾಮ್ಯಾನ್, ಫೆಲಿಕ್ಸ್; ಕ್ಯಾರಬೆಲ್ನಿಕ್, ಮೇರಿಯಾನ್ನೆ ಮತ್ತು ಇತರರು. (1994). ದೆಗಾಸ್ ಪೋರ್ಟ್ರೇಟ್ಸ್ . ಲಂಡನ್: ಮೆರ್ರೆಲ್ ಹಾಲ್ಬರ್ಟನ್. ISBN 1-85894-014-1
  • ದೆನ್ವಿರ್, ಬರ್ನಾರ್ಡ್ (1990). ದಿ ಥೇಮ್ಸ್ ಆಂಡ್ ಹಡ್ಸನ್ ಎನ್‌ಸೈಕ್ಲೊಪೀಡಿಯಾ ಆಫ್ ಇಂಪ್ರೆಶನಿಸಮ್ . ಲಂಡನ್: ಥೇಮ್ಸ್ ಮ್ತತು ಹಡ್ಸನ್. ISBN 0-500-20239-7
  • ಗೋರ್ಡನ್, ರಾಬರ್ಟ್; ಫೋರ್ಜೆ, ಆಂಡ್ರಿವ್ (1988). ದೆಗಾಸ್ . ನ್ಯೂಯಾರ್ಕ್: ಹ್ಯಾರಿ ಎನ್. ಅಬ್ರಾಮ್ಸ್. ISBN 0-8109-1142-6
  • ಗೋವಿಂಗ್, ಲಾರೆನ್ಸ್, ಅಡ್ರಿಯಾನಿ ಒಂದಿಗೆ, ಗೋಟ್ಜ್, ಕ್ರುಮ್ರೈನ್, ಮೇರಿ ಲೂಯಿಸ್; ಲೆವಿಸ್, ಮೇರಿ ಟಾಂಪ್ಕಿನ್ಸ್; ಪ್ಯಾಟಿನ್, ಸಿಲ್ವೀ; ರೆವಾಲ್ಡ್, ಜಾನ್ (1988). ಸೆಜಾನ್ನೆ: ದಿ ಅರ್ಲಿ ಯಿಯರ್ಸ್ 1859-1872 . ನ್ಯೂಯಾರ್ಕ್: ಹ್ಯಾರಿ ಎನ್. ಅಬ್ರಾಮ್ಸ್.
  • ಮೋಸ್ಕೋವಿಟ್ಜ್, ಇರಾ; ಸೆರುಲ್ಲಾಜ್, ಮಾರಿಸ್ (1962). ಫ್ರೆಂಚ್ ಇಂಪ್ರೆಷನಿಸ್ಟ್ಸ್: ಎ ಸೆಲೆಕ್ಷನ್ ಆಫ್ ಡ್ರಾಯಿಂಗ್ಸ್ ಆಫ್ ದಿ ಫ್ರೆಂಚ್ 19ತ್ ಸೆಂಚುರಿ . ಬೋಸ್ಟನ್ ಆಂಡ್ ಟೊರೊಂಟೊ: ಲಿಟಲ್, ಬ್ರೌನ್ ಆಂಡ್ ಕಂಪನಿ. ISBN 0-316-58560-2
  • ರೆವಾಲ್ಡ್, ಜಾನ್ (1973). ದಿ ಹಿಸ್ಟರಿ ಆಫ್ ಇಂಪ್ರೆಶನಿಸಮ್ (4ನೇ ಪರಿಷ್ಕೃತ ಆವೃತ್ತಿ). ನ್ಯೂಯಾರ್ಕ್: ದಿ ಮ್ಯೂಸಿಯಂ ಆಫ್ ಮಾಡರ್ನ್ ಆರ್ಟ್. ISBN 0-87070-360-9
  • ರಿಚಾರ್ಡ್ಸನ್, ಜಾನ್ (1976). ಮ್ಯಾನೆಟ್ (3ನೇ ಆವೃತ್ತಿ). ಆಕ್ಸ್‌ಫರ್ಡ್: ಫೈಡನ್ ಪ್ರೆಸ್ ಲಿಮಿಟೆಡ್. ISBN 0-7148-1743-0
  • ರೋಸೆಂಬ್ಲಮ್, ರಾಬರ್ಟ್ (1989). ಪೈಂಟಿಂಗ್ಸ್ ಇನ್ ದಿ ಮ್ಯೂಸೀ ಡಿ ಆರ್ಸೆ . ನ್ಯೂಯಾರ್ಕ್: ಸ್ಟೆವಾರ್ಟ್, ಟೊಬೊರಿ ಮತ್ತು ಚಾಂಗ್. ISBN 1-55670-099-7

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]

ಟೆಂಪ್ಲೇಟು:Impressionists

ಟೆಂಪ್ಲೇಟು:Westernart