ಆಟಿ ಅಮವಾಸ್ಯೆಯ ತೀರ್ಥ ಸ್ನಾನ
ಆಟಿ ಅಮವಾಸ್ಯೆಯ ತೀರ್ಥ ಸ್ನಾನ
ಆಟಿ ಅಮವಾಸ್ಯೆ
[ಬದಲಾಯಿಸಿ]ಆಟಿಯ ಅಮಾವಾಸ್ಯೆ ಅಥಾವ ಆಟಿ ಅಮಾಸೆ ತುಳುನಾಡಿನ ಆಟಿ ತಿಂಗಳಲ್ಲಿ ಆಚರಣೆ ಮಾಡುವ ಒಂದು ಹಬ್ಬ. ಈ ಅಮಾವಾಸ್ಯೆ ಆಷಾಡ ಅಮಾಸೆ ಅಥಾವ ಭೀಮನ ಅಮಾವಾಸ್ಯೆ ಎಂದೂ ಕರೆಯುತ್ತಾರೆ. ಆಟಿ ತಿಂಗಳಲ್ಲಿ ಬರುವ ಈ ಅಮಾವಾಸ್ಯೆ ತುಳುನಾಡಿನ ಜನರಿಗೆ ಬಹು ವಿಶೇಷವಾದ ದಿನ ಮತ್ತು ಇದು ಹಿಂದಿನ ಕಾಲದಿಂದಲೂ ಆಚರಣೆ ಮಾಡಿ ಬರುತ್ತಿದ್ದ ಒಂದು ಹಬ್ಬ.[೧]
ತೀರ್ಥ ಸ್ನಾನ
[ಬದಲಾಯಿಸಿ]ಆಟಿ ತಿಂಗಳಿನ ಅಮಾವಾಸ್ಯೆಯ ದಿನ ಕರಾವಳಿಯ ಬೇರೆ ಬೇರೆ ಶಿವ ಕ್ಷೇತ್ರಗಳಲ್ಲಿ ಆಟಿಯ ಅಮಾವಾಸ್ಯೆಯ ದಿನ ತೀರ್ಥ ಸ್ನಾನ ದ ಸಂಭ್ರಮ ಜರಗುತ್ತದೆ. ಅದರಲ್ಲೂ ಐತಿಹಾಸಿಕ ಹಿನ್ನೆಲೆ ಇರುವ ಮಹತೋಭಾರ ಕಾರಿಂಜ ಶ್ರೀಕಾರಿಂಜೇಶ್ವರ ದೇವಸ್ಥಾನ ಮತ್ತು ನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯುವ ತೀರ್ಥಸ್ನಾನ ಭಾರೀ ವಿಶೇಷ ಸ್ಥಾನ ಪಡೆದಿದೆ. ಆಟಿಯ ಅಮಾವಾಸ್ಯೆಯ ದಿನ ತುಳುನಾಡಿನ ಜನರು ಬೆಳ್ಳಗೆ ಬೇಗನೇ ಎದ್ದು , ಹಾಲೆಯ ಮರದ ಕೆತ್ತೆಯನ್ನು ಕಲ್ಲಿನಲ್ಲಿ ಜಜ್ಜಿ ತಂದು, ಕಶಾಯ ಮಾಡಿ, ಸ್ನಾನ ಮಾಡಿ, ಕಶಾಯವನ್ನು ಕುಡಿದು. ಈಶ್ವರ ದೇವೆರ ದೇವಸ್ಥಾನಕ್ಕೆ ಅಥಾವ ವಿಶ್ಣು ದೇವರ ದೇವಸ್ಥಾನಕ್ಕೆ ಹೋಗಿ ತೀರ್ಥಸ್ನಾನ ಮಾಡುತ್ತಾರೆ.[೨]
ತೀರ್ಥ ಸ್ನಾನ ಜರಗುವ ಈಶ್ವರ ದೇವರ ದೇವಾಸ್ಥಾನಗಳು
[ಬದಲಾಯಿಸಿ]ಕಾರಿಂಜ ಶ್ರೀಕಾರಿಂಜೇಶ್ವರ ದೇವಸ್ಥಾನ ಮತ್ತು ಶ್ರೀನರಹರಿ ಪರ್ವತ ಶ್ರೀ ಸದಾಶಿವ ದೇವಸ್ಥಾನದಲ್ಲಿ ಇರುವ ತೀರ್ಥದ ಬಾವಿಗಳಲ್ಲಿ ಅಥಾವ ಕೆರೆಗಳಲ್ಲಿ ತುಳುನಾಡಿನ ಜನರು ಪ್ರತಿಯೊಂದು ಕಡೆಗಳಿಂದ ಬಂದು ತೀರ್ಥ ಸ್ನಾನ ಮಾಡುತ್ತಾರೆ.[೨]
ತೀರ್ಥ ಸ್ನಾನದ ಫಲ
[ಬದಲಾಯಿಸಿ]ತೀರ್ಥ ಸ್ನಾನ ಮಾಡಿದರೆ ಸಕಲ ಇಷ್ಟಾರ್ಥಾಗಳು ಸುಲಭವಾಗಿ ನೆರವೇರುತ್ತದೆ ಅನ್ನುವ ಪ್ರತೀತಿ ಇದೆ.ಪಾಪ ಪರಿಹಾರಕ್ಕಾಗಿ ಇಲ್ಲಿಯ ಬಾವಿ ಅಥಾವ ಕೆರೆಗಳಲ್ಲಿ ಮಹಾಭಾರತದ ಪಾಂಡವರೂ ಬಂದು ಸ್ನಾನ ಮಾಡಿ ಅವರಿಗೆ ಅಂಟಿದ ಪಾಪವನ್ನು ಕೂಡಾ ಪರಿಹಾರ ಮಾಡಿದ್ದರು ಅನ್ನುವ ಐತಿಹ್ಯ ಕೂಡಾ ಇದೆ.[೨]
ಉಲ್ಲೇಖಗಳು
[ಬದಲಾಯಿಸಿ]- ↑ "Udupi: Aati Amavasya – Facts on tradition of 'Paleda Kashaya' consumption". Daijiworld.com. 2019-08-01. Retrieved 2020-10-20.
- ↑ ೨.೦ ೨.೧ ೨.೨ https://nammakudlanews.com/bantwala-tirtha-snana-on-aati-amavasya-at-narahari-mountain/