ವಿಷಯಕ್ಕೆ ಹೋಗು

ಅದಮ್ಯ ಚೇತನ ಫೌಂಡೇಶನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅದಮ್ಯ ಚೇತನ
ಅದಮ್ಯ ಚೇತನ ಶ್ರಿಮತಿ ಗಿರಿಜಾ ಶಾಸ್ತ್ರಿ ಸ್ಮಾರಕ ಸಂಸ್ಥೆ (ರಿ)
ಅನ್ನ-ಅಕ್ಷರ-ಆರೋಗ್ಯ-ಪ್ರಕೃತಿ-ಸಂಸ್ಕೃತಿ
ಸ್ಥಾಪನೆ1997
ಸ್ಥಾಪಿಸಿದವರುಶ್ರೀ ಅನಂತಕುಮಾರ್
ಶೈಲಿಸರ್ಕಾರೇತರ ಸಂಸ್ಥೆ
Purposeಅನ್ನ, ಅಕ್ಷರ, ಆರೋಗ್ಯ, ಪ್ರಕೃತಿ, ಸಂಸ್ಕೃತಿ
ಪ್ರಧಾನ ಕಚೇರಿಬೆಂಗಳೂರು
ಪ್ರದೇಶ
ಭಾರತ

ಅದಮ್ಯ ಚೇತನ ಇದು ಭಾರತಬೆಂಗಳೂರಿನಲ್ಲಿ ನೆಲೆಗೊಂಡಿರುವ ಲಾಭರಹಿತ ಸರ್ಕಾರೇತರ ಸಂಸ್ಥೆಯಾಗಿದ್ದು, ಶಿಕ್ಷಣ ಮತ್ತು ಸಾಮಜಿಕ ಕ್ಷೇತ್ರಗಳಲ್ಲಿ ಅನ್ನ-ಅಕ್ಷರ-ಆರೋಗ್ಯ-ಪ್ರಕೃತಿ-ಸಂಸ್ಕೃತಿ ಎಂಬ ಪ್ರಮುಖ ಕ್ಷೇತ್ರಗಳಲ್ಲಿ ವಿವಿಧ ಪ್ರಕಲ್ಪಗಳ ಮೂಲಕ ಸೇವಾನಿರತವಾಗಿದೆ. 1997 ರಲ್ಲಿ ಭಾರತದ ಪ್ರಮುಖ ರಾಜಕಾರಣಿ ದಿವಂಗತ ಅನಂತ್ ಕುಮಾರ್ ರವರು ತಮ್ಮ ತಾಯಿಯವರಾದ ಶ್ರಿಮತಿ ಗಿರಿಜಾ ಶಾಸ್ತ್ರಿಯವರ ಸ್ಮರಣಾರ್ಥ ಸ್ಥಾಪಿಸಿದ ಸಂಸ್ಥೆ. ಸಂಸ್ಥೆಯು ವಿವಿಧ ಸಾಮಾಜಿಕ ಕಲ್ಯಾಣ ಚಟುವಟಿಕೆಗಳ ಮೇಲೆ ಕೇಂದ್ರೀಕರಿಸುತ್ತದೆ. ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಪ್ರಾರಂಭದ ದಿನದಿಂದ ಕಾರ್ಯನಿರ್ವಾಹಕ ಟ್ರಸ್ಟಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ[].

ಸಂಸ್ಥಾಪಕರು

[ಬದಲಾಯಿಸಿ]

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸತತವಾಗಿ 6 ಬಾರಿ ಆಯ್ಕೆಯಾಗಿ, ಶ್ರೀ ಅಟಲ್ ಬಿಹಾರಿ ವಾಜಪೇಯಿ ಮತ್ತು ಶ್ರೀ ನರೇಂದ್ರ ಮೋದಿಯವರ ಸಂಪುಟದಲ್ಲಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ[] ಸೇವೆ ಸಲ್ಲಿಸಿದ ಶ್ರೀ ಅನಂತಕುಮಾರ್ ರವರು ತಮ್ಮ ತಾಯಿಯವರಾದ ಶ್ರೀಮತಿ ಗಿರಿಜಾ ಶಾಸ್ತ್ರಿಯವರ ಸ್ಮರಣಾರ್ಥ “ಅದಮ್ಯ ಚೇತನ” ಸಂಸ್ಥೆಯನ್ನು 1997 ರಲ್ಲಿ ಸ್ಥಾಪಿಸಿದರು.

ಅನ್ನಪೂರ್ಣ

[ಬದಲಾಯಿಸಿ]

೨೦೦೩ರಲ್ಲಿ ಪ್ರಾರಂಭವಾದ ಅನ್ನಪೂರ್ಣ ಯೋಜನೆಯಡಿಯಲ್ಲಿ ಕೇಂದ್ರ  ಹಾಗು ರಾಜ್ಯ ಸರ್ಕಾರದ ಸಹಯೋಗದಲ್ಲಿ ಪ್ರತಿನಿತ್ಯ ಬೆಂಗಳೂರು, ಹುಬ್ಬಳ್ಳಿ, ಕಲಬುರಗಿ ಮತ್ತು ರಾಜಸ್ಥಾನದ ಜೋಧಪುರ್ ಅಡುಗೆ ಕೇಂದ್ರಗಳಿಂದ್ ಒಟ್ಟು ೧,೬೦,೦೦ ಮಕ್ಕಳಿಗೆ ಪ್ರತಿ ಮಧ್ಯಾಹ್ನ ಶುಚಿರುಚಿಯೆಯಾದ ಪೌಷ್ಟಿಕ ಬಿಸುಯೂಟವನ್ನು  ಸರಬರಾಜು ಮಾಡುತ್ತಿದೆ[].  ಈ ಯೋಜನೆಯಿಂದಾಗಿ ಶಾಲೆಗಳಲ್ಲಿ ಹಾಜರಾತಿ ಹೆಚ್ಚಿದ್ದು ಮಕ್ಕಳ ಆರೋಗ್ಯದಲ್ಲಿ ಮತ್ತು ಕಲಿಕೆಯ ಗುಣಮಟ್ಟದಲ್ಲಿ ಗಣನೀಯ ಸುಧಾರಣೆ ಕಂಡು ಬಂದಿದೆ[]. ಸಂಸ್ಥೆಯು ಬೆಂಗಳೂರು ಮತ್ತು ಕರ್ನಾಟಕದ ಇತರ ಭಾಗಗಳಲ್ಲಿನ ವಿವಿಧ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಊಟವನ್ನು ಒದಗಿಸುತ್ತದೆ.[]

ಸುಸ್ಥಿರ ಉಪಕ್ರಮಗಳು

[ಬದಲಾಯಿಸಿ]

ಅನ್ನಪೂರ್ಣ ಅಡುಗೆ ಕೇಂದ್ರದಲ್ಲಿ ಪಳಿಯುಳಿಕೆ ಇಂಧನದ ಬಳಕೆಯನ್ನು ಸಂಪೂರಿತವಾಗಿ ನಿಷೇದಿಸಿದ್ದು, ೨೦೦೮ ರಿಂದ ಪ್ರತಿದಿನ ೬೦ ಸಿಲೆಂಡರ್/೩೦ ಲೀ ನಷ್ಟು ಡೀಸೆಲ್/ಪೆಟ್ರೋಲ್ ಉಪಯೋಗವನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ.  ಕಸವನ್ನೇ ಇಂಧನವನ್ನಾಗಿ ಬಳಸುತ್ತಾ, ಪೂರ್ತಿಯಾಗಿ ಮರು ಉತ್ಪಾದಿಸಬಲ್ಲ(ನವೀಕರಿಸಬಹುದಾದ) ಪಳಿಯುಳಿಕೆ ರಹಿತ (ಫಾಸಿಲ್ ಫ್ರೀ ) ಇಂಧನದಿಂದ ಅಡುಗೆ ತಯಾರಿಸಲಾಗುತ್ತಿದೆ[].

ಕಸರಹಿತ ಅಡುಗೆ ಮನೆ: ೨೦೧೦ ರಿಂಡ್ ಯಾವುದೇ ಕಸವನ್ನು ಮಹಾನಗರ ಪಾಲಿಕೆಗೆ ಕೊಡದೆ, ಸಂಪೂರ್ಣ ಕಸರಹಿತ ಅಡುಗೆಮನೆಯಾಗಿರುವದು ಅದಮ್ಯ ಚೇತನದ ಹೆಗ್ಗಳಿಕೆ.  ಯಶಸ್ಸಿ ಶೂನ್ಯ ರಹಿತ, ತ್ಯಾಜ್ಯ ಅಡುಗೆ ಮನೆಯ ಪ್ರಯೋಗದಿಂದಾಗಿ, ಬೆಂಗಳೂರಿನಲ್ಲಿ ನೂರಾರು ಅಡುಗೆ ಮನೆಗಳನ್ನು ಶೂನ್ಯ ತ್ಯಾಜ್ಯ ಅಡುಗೆ ಮನೆಯನ್ನಾಗಿಸಲು ಸಾಧ್ಯವಾಗಿದೆ. ಅಕ್ಕಿ ತೊಳೆದ ನೀರನ್ನು ಹಾಳು ಮಾಡದೆ ಅದನ್ನ ಗಿಡಗಳಿಗೆ ಹಾಕಲಾಗುತ್ತದೆ. ಇದಕ್ಕೆ ಒಂದು ವಾಹನವನ್ನೆ ಮೀಸಲಾಗಿಟ್ಟುಕೋಳ್ಳಲಾಗಿದೆ. ಇದಲ್ಲದೆ ಮರಗಳನ್ನು ನೆಡುವುದು, ಸಾವಯವ ಕೃಷಿಯನ್ನು ಉತ್ತೇಜಿಸುವುದು ಮತ್ತು ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆಯನ್ನು ಉತ್ತೇಜಿಸುತ್ತದೆ.

ಆರೋಗ್ಯ

[ಬದಲಾಯಿಸಿ]

ಸಂಸ್ಥೆಯು ಆರೋಗ್ಯ ಶಿಬಿರಗಳನ್ನು ನಡೆಸುತ್ತದೆ ಮತ್ತು ಹಿಂದುಳಿದ ಸಮುದಾಯಗಳಿಗೆ ವೈದ್ಯಕೀಯ ನೆರವು ನೀಡುತ್ತದೆ[]. ಉಚಿತ ಆರೋಗ್ಯ ತಪಾಸಣೆಗಳನ್ನು ನೀಡುತ್ತಾರೆ, ಔಷಧಿಗಳನ್ನು ವಿತರಿಸುತ್ತಾರೆ ಮತ್ತು ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುತ್ತಾರೆ. ಮನುಕುಲವನ್ನೇ ಬೆಚ್ಚಿಬೀಳಿಸಿದಂತಹ ಮಹಾಮಾರಿ ಕೋವಿಡ್ ಅಲೆಯ ಸಂಧರ್ಭದಲ್ಲಿ ಸಂಸ್ಥೆಯು ತನ್ನ ಸಾಮಾಜಿಕ ಜವಾಬ್ದರಿಯನು ನಿರ್ವಹಿಸಿತು.  ಕೋವಿಡ್ ಹಂತದ ಮೊದಲ ಅಲೆಯ ಲಾಕ್ ಡೌನ್ ಕಠಿಣ ಸಂಧರ್ಭದ್ಲಲಿ ಸ್ವಯಂ ಸೇವಕರೇ ಅಡುಗೆ ಮನೆಯನ್ನು ನಿರ್ವಹಿಸಿದರು.  ಪ್ರತಿದಿನ ೨೦,೦೦೦ ಆಹಾರ ಪೊಟ್ಟಣ ಮಾಡಿ ಬೆಂಗಳೂರು ಜನತೆಗೆ ವಿತರಿಸಲಾಯಿತು. ೨೮,೦೦೦ ಆಹಾರ ಪೊಟ್ಟಣಗಳನ್ನೂ ವಿತರಿಸಿದಲ್ಲದೆ ೭,೦೦,೦೦೦ಕ್ಕೂ ಅಧಿಕ ಊಟವನ್ನು ಒದಗಿಸಿತು. ವಿಶೇಷವಾಗಿ ವಸತಿರಹಿತ ಕಾರ್ಮಿಕರಿಗೆ ಮತ್ತು ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಈ ಆಹಾರ ವಿತರಿಸಲಾಯಿತು.  ಕೋವಿಡ್ ಎರಡನೇ ಅಲೆಯ ಸಮಯದಲ್ಲಿ ೧೬,೦೦ ಆಹಾರ ಪೊಟ್ಟಣ ಮತ್ತು ೪೦ ದಿನಗಳವರೆಗೆ ಪ್ರತಿ ದಿನ ೭೦,೦೦೦ ಜನರಿಗೆ ಊಟವನ್ನು ಒದಗಿಸಿದೆ.  ಕೋವಿಡ್ ಸೇನಾನಿಗಳಾದ ವೈದ್ಯರು, ದಾದಿಯರು, ಆರಕ್ಷಕರು, ರುದ್ರಭೂಮಿ ಸೇವಾಕರ್ತರಿಗೆ ಮತ್ತು ಕೋವಿಡ್ ಸಂತ್ರಸ್ತರಿಗೆ ಊಟವನ್ನು ಅವರಿರುವ ಸ್ಥಳದಲ್ಲೇ ತಲುಪಿಸಲಾಯಿತು. ೪೦ ದಿನಗಳ ಕಾಲ ಸತತವಾಗಿ ೬,೫೦೦ ಊಟವನ್ನು ಒದಗಿಸಲಾಯಿತು[][][೧೦][೧೧][೧]

ಶಿಕ್ಷಣ

[ಬದಲಾಯಿಸಿ]

ಅದಮ್ಯ ಚೇತನವು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿಗಳು, ವಿದ್ಯಾರ್ಥಿವೇತನಗಳು ಮತ್ತು ಕಲಿಕಾ ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಶಿಕ್ಷಣವನ್ನು ಬೆಂಬಲಿಸುತ್ತದೆ[೧೨]. ವಿದ್ಯಾರ್ಥಿಗಳ ಶೈಕ್ಷಣಿಕ ಫಲಿತಾಂಶಗಳನ್ನು ಹೆಚ್ಚಿಸಲು ಕೋಚಿಂಗ್ ತರಗತಿಗಳು ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಹ ನಡೆಸುತ್ತಾರೆ[೧೩][೧೪].

ಮಹಿಳಾ ಸಬಲೀಕರಣ

[ಬದಲಾಯಿಸಿ]

ಸಂಸ್ಥೆಯು ವೃತ್ತಿಪರ ತರಬೇತಿ, ಸ್ವ-ಸಹಾಯ ಗುಂಪುಗಳು ಮತ್ತು ಆರೋಗ್ಯ ಮತ್ತು ಹಕ್ಕುಗಳ ಕುರಿತು ಜಾಗೃತಿ ಕಾರ್ಯಕ್ರಮಗಳಂತಹ ವಿವಿಧ ಉಪಕ್ರಮಗಳ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವತ್ತ ಗಮನಹರಿಸುತ್ತದೆ[೧೫].

ಪ್ಲೇಟ್ ಬ್ಯಾಂಕ್

[ಬದಲಾಯಿಸಿ]

ಇತ್ತೀಚಿನ ದಿನಗಳಲ್ಲಿ ಬಹುತೇಕ ಸಭೆ ಸಮಾರಂಭಗಳಲ್ಲಿ ಊಟ ತಿಂಡಿಗೆ ಪ್ಲಾಸ್ಟಿಕ್ ಲೋಟ – ತಟ್ಟೆಗಳನ್ನು ಬಳಸಲಾಗುತ್ತಿದೆ, ಕೆಲವೆಡೆ ಅಡಿಕೆ ತಟ್ಟೆಗಳನ್ನು ಬಳಸುತ್ತಾರೆ. ಆದರೆ ಇವುಗಳಿಂದಾಗಿ ಕಸದ ಪ್ರಮಾಣ ಹೆಚ್ಚುತ್ತಿದೆ. ಇವುಗಳು ಸರಿಯಾದ ರೀತಿಯಲ್ಲಿ ಮರುಬಳಕೆಯಾಗದೆ ನಗರದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಇದಕ್ಕೆ ಪರ್ಯಾಯವಾಗಿ ಅದಮ್ಯ ಚೇತನ ಸಂಸ್ಥೆಯಲ್ಲಿ ಸುಮಾರು ೧೦,೦೦೦ ಸ್ಟೀಲ್ ತಟ್ಟೆಗಳು, ಚಮಚಗಳು, ಲೋಟಗಳನ್ನು ಖರೀದಿಸಿ ಸಂಗ್ರಹಿಸಲಾಗಿದೆ. ನಗರದಲ್ಲಿ ನಡೆಯುವ ಯಾವುದೇ ಸಭೆ ಸಮಾರಂಭಗಳ ಊಟದ ಉಪಯೋಗಕ್ಕಾಗಿ ಈ ಸ್ಟೀಲ್ ತಟ್ಟೆಗಳನ್ನು ನಿಃಶುಲ್ಕವಾಗಿ ನೀಡಲಾಗುವುದು. ಮಿತ ಬಳಕೆ – ಮರುಬಳಕೆ ಅದಮ್ಯ ಚೇತನದ ಮಂತ್ರ[೧೬].

ಸಾಧನೆಗಳು

[ಬದಲಾಯಿಸಿ]

ಅದಮ್ಯ ಚೇತನ ಸಮುದಾಯದಲ್ಲಿ ವಿಶೇಷವಾಗಿ ಮಧ್ಯಾಹ್ನದ ಊಟ ಕಾರ್ಯಕ್ರಮದ ಯಶಸ್ವಿ ಅನುಷ್ಠಾನದಲ್ಲಿ ಅದರ ಪ್ರಭಾವಶಾಲಿ ಕೆಲಸಕ್ಕಾಗಿ ಗುರುತಿಸಲ್ಪಟ್ಟಿದೆ.

ಸಂಸ್ಥೆಯು ಪ್ರತಿದಿನ ಹತ್ತಾರು ಸಾವಿರ ಮಕ್ಕಳಿಗೆ ಊಟ ಬಡಿಸಲು ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ, ಅವರ ಪೌಷ್ಟಿಕಾಂಶದ ಅಗತ್ಯತೆಗಳು ಮತ್ತು ಶಿಕ್ಷಣಕ್ಕೆ ಗಣನೀಯ ಕೊಡುಗೆ ನೀಡಿದೆ.

ಸಂಸ್ಥೆಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ ನೀಡಿ ಕರ್ನಾಟಕ ಸರ್ಕಾರ ಗೌರವಿಸಿದೆ[೧೭]

ಅನ್ನದಾನ, ಆರೋಗ್ಯಸೇವೆ ಶ್ರೇಷ್ಠ ಕಾರ್ಯ: ರಾಷ್ಟ್ರಪತಿ[೧೮]


ನಿತ್ಯ ಅನ್ನದಾನ
ಅಡುಗೆ ಕೆಲಸದಲ್ಲಿ ನಿರತರಾದ ಕಾರ್ಮಿಕರು







ಉಲ್ಲೇಖಗಳು

[ಬದಲಾಯಿಸಿ]
  1. https://www.adamyachetana.org/about-us/
  2. https://www.thehindu.com/news/national/ananth-kumar-parliamentary-affairs-minister-passes-away-at-59/article62026920.ece
  3. https://bpac.in/field-visit-to-adamya-chetana-trust/
  4. https://issuu.com/renure/docs/20171102_mhrd_compendium_v029/s/10635277
  5. https://www.youtube.com/watch?v=5-qkmYkTg_E
  6. https://www.thenewsminute.com/blog/adamya-chetana-go-green-bengaluru-initiative-beginning-kitchen-43546
  7. https://www.chetanasociety.in/covid-vaccination-at-adamya-chetana/
  8. https://www.youthforseva.org/COVID-19-Relief-Activities
  9. https://annapoorna.org.in/2021/06/02/annapoorna-adamya-chetana-cooked-meals/
  10. https://annapoorna.org.in/2021/06/23/impact-cooked-meals-to-medical-staff-40-hospitals-bangalore/
  11. https://www.newstrailindia.com/inner.php?id=1826
  12. https://oaksys.net/about-us/our-csr-initiatives/#:~:text=Adamya%20Chetana%20is%20a%20voluntary,started%20in%20the%20year%201997.
  13. https://bpac.in/field-visit-to-adamya-chetana-trust/
  14. https://www.kannadaprabha.com/districts/bangalore/2013/Nov/10/%E0%B2%A8%E0%B2%BE%E0%B2%A1%E0%B2%BF%E0%B2%A8-%E0%B2%B0%E0%B2%95%E0%B3%8D%E0%B2%B7%E0%B2%A3%E0%B3%86%E0%B2%97%E0%B3%86-%E0%B2%85%E0%B2%A6%E0%B2%AE%E0%B3%8D%E0%B2%AF-%E0%B2%9A%E0%B3%87%E0%B2%A4%E0%B2%A8-%E0%B2%89%E0%B2%A4%E0%B3%8D%E0%B2%B8%E0%B2%B5-133997.html
  15. https://www.dailypioneer.com/2024/columnists/the-indomitable-spirit-of-indian-women.html
  16. https://timesofindia.indiatimes.com/city/bengaluru/a-plate-and-tumbler-bank/articleshow/53791011.cms
  17. https://www.newindianexpress.com/states/karnataka/2021/Nov/01/dr-sudarshan-adamya-chetana-among-66chosen-for-awards-2378157.html
  18. https://vijaykarnataka.com/news/karnataka/adamya-chethana-programme-inaugurated/articleshow/56259826.cms