ಅಗಸ್ಟಸ್
ಅಗಸ್ಟಸ್ ಸೀಜರ್ | |
---|---|
ರೋಮ್ ಸಾಮ್ರಾಜ್ಯದ ಚಕ್ರವರ್ತಿ | |
ರಾಜ್ಯಭಾರ | ಜನವರಿ ೧೬, ಕ್ರಿ.ಪೂ. ೨೭ – ಆಗಸ್ಟ್ ೧೯, ಕ್ರಿ.ಶ. ೧೪ |
ಪೂರ್ಣ ಹೆಸರು | ಗಯಸ್ ಜೂಲಿಯಸ್ ಸೀಜರ್ ಆಕ್ಟೇವಿಯಾನಸ್ |
ಹುಟ್ಟು | ಸೆಪ್ಟೆಂಬರ್ ೨೩, ಕ್ರಿ.ಪೂ. ೬೩ |
ಹುಟ್ಟುಸ್ಥಳ | ರೋಮ್, ರೋಮ್ ಗಣರಾಜ್ಯ |
ಸಾವು | ಆಗಸ್ಟ್ ೧೯, ಕ್ರಿ.ಶ. ೧೪ (೭೫ ವರ್ಷ) |
ಸಾವಿನ ಸ್ಥಳ | ನೋಲ, ರೋಮ್ ಸಾಮ್ರಾಜ್ಯ |
ಸಮಾಧಿ ಸ್ಥಳ | ರೋಮ್ |
ಪೂರ್ವಾಧಿಕಾರಿ | ಜೂಲಿಯಸ್ ಸೀಜರ್ |
ಉತ್ತರಾಧಿಕಾರಿ | ಟೈಬೀರಿಯಸ್ (ದತ್ತು ಪುತ್ರ) |
Consort to | ೧) ಕ್ಲೋಡಿಯ ಪುಲ್ಕ್ರ ? – 40 BC ೨) ಸ್ಕ್ರಿಬೋನಿಯ 40 BC – 38 BC ೩) ಲಿವಿಯ ಡ್ರುಸಿಲ್ಲ 38 BC – AD 14 |
ಸಂತತಿ | Julia the Elder; Gaius Caesar (adoptive); Lucius Caesar (adoptive); Tiberius (adoptive) |
ಸಂತತಿ | ಜೂಲಿಯೊ-ಕ್ಲೌಡಿಯನ್ ರಾಜವಂಶ |
ತಂದೆ | ಗಯಸ್ ಆಕ್ಟೇವಿಯಸ್; ಜೂಲಿಯಸ್ ಸೀಜರ್‍ಗೆ ದತ್ತು |
ತಾಯಿ | ಅಟಿಯ ಬಲ್ಬ ಸೇಸೋನಿಯ |
ಅಗಸ್ಟಸ್ (ಲ್ಯಾಟಿನ್: IMPERATOR·CAESAR·DIVI·FILIVS·AVGVSTVS;[೧] ಸೆಪ್ಟೆಂಬರ್ ೨೩, ಕ್ರಿ.ಪೂ. ೬೩ – ಆಗಸ್ಟ್ ೧೯, ಕ್ರಿ.ಶ. ೧೯), ಗಯಸ್ ಆಕ್ಟೇವಿಯಸ್ ಥುರಿನಸ್ ಎಂದು ಜನಿಸಿ ತನ್ನ ದೊಡ್ಡಪ್ಪ ಜೂಲಿಯಸ್ ಸೀಜರ್‍ಗೆ ಗಯಸ್ ಜೂಲಿಯಸ್ ಸೀಜರ್ ಆಕ್ಟೇವಿಯಾನಸ್ ಲ್ಯಾಟಿನ್: GAIVS·IVLIVS·CAESAR·OCTAVIANVS) ಎಂಬ ಹೆಸರಿನಡಿಯಲ್ಲಿ ದತ್ತು ಪುತ್ರನಾಗಿ ಮುಂದೆ ರೋಮ್ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾದವ. ಈತನ ರಾಜ್ಯಭಾರ ಕ್ರಿ.ಪೂ. ೨೭ ರಿಂದ ಕ್ರಿ.ಶ. ೧೪ರವರೆಗೂ ನಡೆಯಿತು.
ಇತಿಹಾಸ
[ಬದಲಾಯಿಸಿ]ರೋಮ್ ಸಾಮ್ರಾಟರಲ್ಲೆಲ್ಲ ಅತ್ಯಂತ ಪ್ರಸಿದ್ಧನೂ ಪ್ರತಿಭಾನ್ವಿತನೂ ಯುಗಸ್ಥಾಪಕನೂ ಆದ ದೊರೆ. ಈತ ಜೂಲಿಯಸ್ ಸೀಸರನ ಮೊಮ್ಮಗ ಹಾಗೂ ದತ್ತುಪುತ್ರ. ಸೀಸರನ ಕೊಲೆಯಾದ ಅನಂತರ ರೋಮ್ ಸಾಮ್ರಾಜ್ಯದಲ್ಲಿ ಅಧಿಕಾರಕ್ಕಾಗಿ ನಡೆದ ಕಚ್ಚಾಟದಲ್ಲಿ ಕೇವಲ ಹದಿನೆಂಟು ವರ್ಷದ ಯುವಕನಾದ ಆಕ್ಟೇವಿಯಸ್ ತನ್ನ ಜಾಣತನ, ಆತ್ಮಸಂಯಮ ಮತ್ತು ಧಾರಣಶಕ್ತಿಯಿಂದ ರೋಮನರ ಮೆಚ್ಚಿಕೆ ಗಳಿಸಿದ. ಪ್ರ.ಶ.ಪು. 44-30ರವರೆಗೆ ಅಂತರ್ಯುದ್ಧಗಳನ್ನಡಗಿಸುವ ಮತ್ತು ರೋಮನ್ ಸಾಮ್ರಾಜ್ಯದ ಪ್ರಾಂತಗಳನ್ನು ತನ್ನ ಅಧಿಕಾರಕ್ಕೊಳಪಡಿಸುವ ಕಾರ್ಯದಲ್ಲಿ ಸಂಪುರ್ಣ ಯಶಸ್ವಿಯಾದ. ಪ್ರ.ಶ.ಪು. 30ರಲ್ಲಿ ಈಜಿಪ್ಟಿನ ಜೈತ್ರಯಾತ್ರೆಯನ್ನು ಮುಗಿಸಿಕೊಂಡು ರೋಮ್ ನಗರಕ್ಕೆ ಹಿಂದಿರುಗಿದ ಆಕ್ಟೇವಿಯಸ್ನನ್ನು ರೋಮನ್ನರು ಸಂಭ್ರಮದಿಂದ ಸ್ವಾಗತಿಸಿ ವಿಜಯೋತ್ಸವವನ್ನು ಆಚರಿಸಿದರು. ಈತ ಪ್ರ.ಶ.ಪು. 27ರಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ಇವನ ಉತ್ಕೃಷ್ಟಸೇವೆಗಾಗಿ ರೋಮನ್ ಸೆನೆಟ್ಟು ಇವನಿಗೆ ಅಗಸ್ಟಸ್ ಎಂಬ ಗೌರವಸೂಚಕಬಿರುದನ್ನು ಕೊಟ್ಟಿತು. ಅಗಸ್ಟಸ್ ತನ್ನ ವೈಯಕ್ತಿಕ ಅಧಿಕಾರವನ್ನು ಪ್ರಜಾಪ್ರಭುತ್ವದ ಮೂಲಸ್ವರೂಪಕ್ಕೆ ಚತುರತೆಯಿಂದ ಸಮನ್ವಯಗೊಳಿಸಿದ. ಇವನ್ನು ಚಕ್ರಾಧಿಪತ್ಯದ ಮುಖ್ಯ ನ್ಯಾಯಾಧೀಶ ಮತ್ತು ಪ್ರಜಾಪ್ರಭುತ್ವದ ಪ್ರಥಮ ನಾಗರಿಕನೆಂದು ಜನ ಪರಿಗಣಿಸಿದರು. ಆದ್ದರಿಂದಲೇ ಇವನ ಆಳ್ವಿಕೆಯನ್ನು ಪ್ರಿನ್ಸಿಪೇಟ್ ಎಂದು ಕರೆಯಲಾಗಿದೆ. ಈತನ ಕಾಲದಲ್ಲಿ ರೋಮನ್ ಸಾಮ್ರಾಜ್ಯ ಯುರೋಪು, ಆಫ್ರಿಕ ಮತ್ತು ಏಷ್ಯ ಖಂಡಗಳ ಅನೇಕ ಭಾಗಗಳನ್ನೊಳಗೊಂಡಿತ್ತು. ಚಕ್ರಾಧಿಪತ್ಯದ ಗಡಿಗಳನ್ನು ನಿಗದಿಮಾಡಿ ಅವುಗಳ ರಕ್ಷಣೆಗಾಗಿ ಸುಸಜ್ಜಿತ ಸೈನ್ಯಗಳನ್ನು ಇಡಲಾಗಿತ್ತು.
ಆಡಳಿತ
[ಬದಲಾಯಿಸಿ]ಅಗಸ್ಟಸ್ ಚಕ್ರವರ್ತಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸುಧಾರಣೆಗಳನ್ನು ಜಾರಿಗೆ ತಂದ. ವಿಶಾಲವಾದ ಸಾಮ್ರಾಜ್ಯವನ್ನು ಆಡಳಿತಕ್ಕನುಗುಣವಾಗಿ ಪ್ರಾಂತ್ಯಗಳನ್ನಾಗಿ ವಿಂಗಡಿಸಿ ದಕ್ಷತೆಯ ಆಧಾರದ ಮೇಲೆ ಪ್ರತಿ ಪ್ರಾಂತ್ಯದಲ್ಲೂ ರೋಮನ್ ಸೈನ್ಯದ ತುಕಡಿಗಳನ್ನಿಡಲಾಯಿತು. ಪ್ರಾಂತ್ಯಾಧಿಕಾರಿಗಳು ರಕ್ಷಣಾಪಡೆಗಳನ್ನು ಚಕ್ರವರ್ತಿಯ ಆಜ್ಞೆ ಪಡೆದು ಮಾತ್ರ ಉಪಯೋಗಿಸಬೇಕಾಗಿತ್ತು. ಅನೇಕ ವರ್ಷಗಳ ಕಾಲ ನಡೆದ ಅಂತರ್ಯುದ್ಧಗಳಿಂದ ಚಕ್ರಾಧಿಪತ್ಯದಲ್ಲಿ ಆರ್ಥಿಕ ಕ್ಷೋಭೆಯುಂಟಾಗಿತ್ತು. ಪರಿಸ್ಥಿತಿಯನ್ನು ಉತ್ತಮಪಡಿಸಲು ಅವನು ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ಸಾಮ್ರಾಜ್ಯದ ಜನಗಣತಿಯನ್ನು ನಡೆಸಿದ. ಚಿಲ್ಲರೆ ತೆರಿಗೆಗಳನ್ನು ರದ್ದುಗೊಳಿಸಿದ. ಕೈಗಾರಿಕೆ ಹಾಗೂ ವ್ಯಾಪಾರದ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದ. ಅನೇಕ ಸೇತುವೆಗಳನ್ನೂ ರಸ್ತೆಗಳನ್ನೂ ಕಾಲುವೆಗಳನ್ನೂ ಕಟ್ಟಿಸಿದ. ಅನೇಕ ಸಮಾಜ ಸುಧಾರಣೆಗಳು ಬಳಕೆಗೆ ಬಂದುವು. ರೋಮನ್ನರ ಉಡಿಗೆತೊಡಿಗೆ ಮತ್ತು ಮತಪದ್ಧತಿಗಳು ಸುಧಾರಿತವಾದವು; ಅನೇಕ ವಿಧವಾದ ಸ್ಪರ್ಧೆಗಳು ಹಾಗೂ ವಿನೋದ ಕ್ರೀಡೆಗಳು ಜಾರಿಗೆ ಬಂದುವು. ಪ್ರಾಚೀನ ದೇವಾಲಯಗಳು ಜೀರ್ಣೋದ್ಧಾರಗೊಂಡುವು. ರೋಮನ್ ಸಾಮ್ರಾಜ್ಯ ಹೆಚ್ಚಾಗಿ ವ್ಯಾಪಿಸಿ ದಂತೆ ಅನೇಕ ಮತಗಳು ರೋಮ್ನಲ್ಲಿ ಆಶ್ರಯಪಡೆದುವು. ರೋಮನ್ನರು ಗ್ರೀಕ್, ಈಜಿಪ್್ಟ ಮತ್ತು ಯಹೂದಿ ಮುಂತಾದ ದೇವತೆಗಳನ್ನು ಆರಾಧಿಸತೊಡಗಿದರು. ಈ ಕಾಲದಲ್ಲಿ ಜನರಲ್ಲಿ ನೈತಿಕಜಾಗೃತಿ ಮೂಡಿತ್ತು; ರೋಮ್ ನಗರ ಸುಂದರವಾದ ರಸ್ತೆಗಳಿಂದಲೂ ಉದ್ಯಾನಗಳಿಂದಲೂ ಮನೋಹರವಾದ ದೇವಾಲಯಗಳಿಂದಲೂ ಭವ್ಯ ಸಾರ್ವಜನಿಕ ಭವನಗಳಿಂದಲೂ ಕಂಗೊಳಿಸಿ ಸರ್ವತೋಮುಖವಾಗಿ ಬೆಳೆಯಿತು. ರೋಮನ್ ಸಾಮ್ರಾಜ್ಯದ ಕ್ಷೇಮ ಹಾಗೂ ಒಳಿತೇ ಆಕ್ಟೇವಿಯಸ್ಸನ ಗುರಿ. ಎಲ್ಲ ವರ್ಗಗಳ ಪ್ರೀತಿ ವಿಶ್ವಾಸವನ್ನು ಆತ ಗಳಿಸಿದ್ದ. ಅವನನ್ನು ರೋಮ್ ಸಾಮ್ರಾಜ್ಯದ ರಕ್ಷಕನೆಂದೂ ಪ್ರತ್ಯಕ್ಷ ದೇವತೆಯೆಂದೂ ಪ್ರಜೆಗಳು ಪುಜಿಸಲಾರಂಭಿಸಿದರು. ವಿಶಾಲಸಾಮ್ರಾಜ್ಯದಲ್ಲಿದ್ದ ಭಿನ್ನ ಭಿನ್ನ ಪಂಗಡ ಮತ್ತು ಮತೀಯರಿಗೆ ಸಮಾನತೆಯ ಆಧಾರದ ಮೇಲೆ ನ್ಯಾಯ ಮತ್ತು ರಕ್ಷಣೆ ದೊರೆಯುವಂತಾಯಿತು. ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತು.
ರಾಜ್ಯ ಗಳಿಕೆ
[ಬದಲಾಯಿಸಿ]ಸೀಸರನ ಕೊಲೆಯಾದ ಅನಂತರ ರೋಮ್ ಸಾಮ್ರಾಜ್ಯದಲ್ಲಿ ಅಧಿಕಾರಕ್ಕಾಗಿ ನಡೆದ ಕಚ್ಚಾಟದಲ್ಲಿ ಕೇವಲ ಹದಿನೆಂಟು ವರ್ಷದ ಯುವಕನಾದ ಆಕ್ಟೇವಿಯಸ್ ತನ್ನ ಜಾಣತನ, ಆತ್ಮಸಂಯಮ ಮತ್ತು ಧಾರಣಶಕ್ತಿಯಿಂದ ರೋಮನರ ಮೆಚ್ಚಿಕೆ ಗಳಿಸಿದ. ಪ್ರ.ಶ.ಪು. 44-30ರವರೆಗೆ ಅಂತರ್ಯುದ್ಧಗಳನ್ನಡಗಿಸುವ ಮತ್ತು ರೋಮನ್ ಸಾಮ್ರಾಜ್ಯದ ಪ್ರಾಂತಗಳನ್ನು ತನ್ನ ಅಧಿಕಾರಕ್ಕೊಳಪಡಿಸುವ ಕಾರ್ಯದಲ್ಲಿ ಸಂಪುರ್ಣ ಯಶಸ್ವಿಯಾದ. ಪ್ರ.ಶ.ಪು. 30ರಲ್ಲಿ ಈಜಿಪ್ಟಿನ ಜೈತ್ರಯಾತ್ರೆಯನ್ನು ಮುಗಿಸಿಕೊಂಡು ರೋಮ್ ನಗರಕ್ಕೆ ಹಿಂದಿರುಗಿದ ಆಕ್ಟೇವಿಯಸ್ನನ್ನು ರೋಮ್ ನ್ನರು ಸಂಭ್ರಮದಿಂದ ಸ್ವಾಗತಿಸಿ ವಿಜಯೋತ್ಸವವನ್ನು ಆಚರಿಸಿದರು.
ಯುಗ ಪ್ರವರ್ಥಕ
[ಬದಲಾಯಿಸಿ]ಈತನ ಆಳ್ವಿಕೆಯನ್ನು ಅಗಸ್ಟಸ್ಯುಗವೆಂದೂ ರೋಮ್ಸಾಮ್ರಾಜ್ಯದ ಸುವರ್ಣಯುಗವೆಂದೂ ಕರೆದಿದ್ದಾರೆ. ಅಗಸ್ಟಸ್ ಚಕ್ರವರ್ತಿ ಸುಪ್ರಸಿದ್ಧ ರಾಜಕೀಯ ನಿಪುಣನೂ ಸುಧಾರಕನೂ ಆಗಿದ್ದುದಲ್ಲದೆ ಕಲೆಯನ್ನೂ ಸಾಹಿತ್ಯವನ್ನೂ ವಿಶೇಷವಾಗಿ ಪ್ರೋತ್ಸಾಹಿಸುವವನೂ ಆಗಿದ್ದ. ಈತನ ಕಾಲದಲ್ಲಿ ಲ್ಯಾಟಿನ್ ಭಾಷೆ ಅತ್ಯಂತ ಉಚ್ಛ್ರಾಯಸ್ಥಿತಿಯನ್ನು ಮುಟ್ಟಿತು. ಆ ಕಾಲದ ಮುಖ್ಯ ಕವಿಗಳಲ್ಲಿ ಈನಿಯಡ್ ಮಹಾಕಾವ್ಯವನ್ನು ರಚಿಸಿದ ವರ್ಜಿಲ್ ಅತ್ಯಂತ ಪ್ರಸಿದ್ಧ. ಓವಿಡ್, ಹೊರೇಸ್ ಮೊದಲಾದವರೂ ಆ ಕಾಲದವರೇ. ಅದೇ ಕಾಲದಲ್ಲಿ ಅನೇಕ ವಿದ್ವಾಂಸರು ವ್ಯಾಕರಣ, ವೈದ್ಯ, ವ್ಯವಸಾಯ, ಚರಿತ್ರೆ ಇತ್ಯಾದಿ ಗ್ರಂಥಗಳನ್ನು ರಚಿಸಿದರು. 44 ವರ್ಷಗಳ ಕಾಲ ಸಾಮ್ರಾಜ್ಯದ ಹಿತಚಿಂತನೆಗಾಗಿ ದುಡಿದು, ಚಕ್ರಾಧಿಪತ್ಯವನ್ನು ವಿಸ್ತರಿಸಿ, ಸುಭದ್ರವಾದ ಆಡಳಿತವನ್ನೂ ಶಾಂತಿಯನ್ನೂ ಸ್ಥಾಪಿಸಿ ಕಲೆಯನ್ನು ವಿಶೇಷವಾಗಿ ಪ್ರೋತ್ಸಾಹಿಸಿ ಅಗಸ್ಟಸ್ ಪ್ರಜೆಗಳಿಂದ ಪ್ರತ್ಯಕ್ಷದೇವನೆಂಬ ಹೆಸರನ್ನು ಪಡೆದ.
ಸುಧಾರಣೆಗಳು
[ಬದಲಾಯಿಸಿ]ಈತ ಪ್ರ.ಶ.ಪು. 27ರಲ್ಲಿ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ಇವನ ಉತ್ಕೃಷ್ಟಸೇವೆಗಾಗಿ ರೋಮನ್ ಸೆನೆಟ್ಟು ಇವನಿಗೆ ಅಗಸ್ಟಸ್ ಎಂಬ ಗೌರವಸೂಚಕಬಿರುದನ್ನು ಕೊಟ್ಟಿತು. ಅಗಸ್ಟಸ್ ತನ್ನ ವೈಯಕ್ತಿಕ ಅಧಿಕಾರವನ್ನು ಪ್ರಜಾಪ್ರಭುತ್ವದ ಮೂಲಸ್ವರೂಪಕ್ಕೆ ಚತುರತೆಯಿಂದ ಸಮನ್ವಯಗೊಳಿಸಿದ. ಇವನ್ನು ಚಕ್ರಾಧಿಪತ್ಯದ ಮುಖ್ಯ ನ್ಯಾಯಾಧೀಶ ಮತ್ತು ಪ್ರಜಾಪ್ರಭುತ್ವದ ಪ್ರಥಮ ನಾಗರಿಕನೆಂದು ಜನ ಪರಿಗಣಿಸಿದರು. ಆದ್ದರಿಂದಲೇ ಇವನ ಆಳ್ವಿಕೆಯನ್ನು ಪ್ರಿನ್ಸಿಪೇಟ್ ಎಂದು ಕರೆಯಲಾಗಿದೆ. ಈತನ ಕಾಲದಲ್ಲಿ ರೋಮನ್ ಸಾಮ್ರಾಜ್ಯಯುರೋಪ್, ಆಫ್ರಿಕ ಮತ್ತು ಏಷ್ಯ ಖಂಡಗಳ ಅನೇಕ ಭಾಗಗಳನ್ನೊಳಗೊಂಡಿತ್ತು. ಚಕ್ರಾಧಿಪತ್ಯದ ಗಡಿಗಳನ್ನು ನಿಗದಿಮಾಡಿ ಅವುಗಳ ರಕ್ಷಣೆಗಾಗಿ ಸುಸಜ್ಜಿತ ಸೈನ್ಯಗಳನ್ನು ಇಡಲಾಗಿತ್ತು. ಅಗಸ್ಟಸ್ ಚಕ್ರವರ್ತಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸುಧಾರಣೆಗಳನ್ನು ಜಾರಿಗೆ ತಂದ. ವಿಶಾಲವಾದ ಸಾಮ್ರಾಜ್ಯವನ್ನು ಆಡಳಿತಕ್ಕನುಗುಣವಾಗಿ ಪ್ರಾಂತ್ಯಗಳನ್ನಾಗಿ ವಿಂಗಡಿಸಿ ದಕ್ಷತೆಯ ಆಧಾರದ ಮೇಲೆ ಪ್ರತಿ ಪ್ರಾಂತ್ಯದಲ್ಲೂ ರೋಮನ್ ಸೈನ್ಯದ ತುಕಡಿಗಳನ್ನಿಡಲಾಯಿತು. ಪ್ರಾಂತ್ಯಾಧಿಕಾರಿಗಳು ರಕ್ಷಣಾಪಡೆಗಳನ್ನು ಚಕ್ರವರ್ತಿಯ ಆಜ್ಞೆ ಪಡೆದು ಮಾತ್ರ ಉಪಯೋಗಿಸಬೇಕಾಗಿತ್ತು. ಅನೇಕ ವರ್ಷಗಳ ಕಾಲ ನಡೆದ ಅಂತರ್ಯುದ್ಧಗಳಿಂದ ಚಕ್ರಾಧಿಪತ್ಯದಲ್ಲಿ ಆರ್ಥಿಕ ಕ್ಷೋಭೆಯುಂಟಾಗಿತ್ತು. ಪರಿಸ್ಥಿತಿಯನ್ನು ಉತ್ತಮಪಡಿಸಲು ಅವನು ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ಸಾಮ್ರಾಜ್ಯದ ಜನಗಣತಿಯನ್ನು ನಡೆಸಿದ. ಚಿಲ್ಲರೆ ತೆರಿಗೆಗಳನ್ನು ರದ್ದುಗೊಳಿಸಿದ. ಕೈಗಾರಿಕೆ ಹಾಗೂ ವ್ಯಾಪಾರದ ಮೇಲಿನ ನಿರ್ಬಂಧವನ್ನು ತೆಗೆದುಹಾಕಿದ. ಅನೇಕ ಸೇತುವೆಗಳನ್ನೂ ರಸ್ತೆಗಳನ್ನೂ ಕಾಲುವೆಗಳನ್ನೂ ಕಟ್ಟಿಸಿದ. ಅನೇಕ ಸಮಾಜ ಸುಧಾರಣೆಗಳು ಬಳಕೆಗೆ ಬಂದುವು. ರೋಮನ್ನರ ಉಡಿಗೆತೊಡಿಗೆ ಮತ್ತು ಮತಪದ್ಧತಿಗಳು ಸುಧಾರಿತವಾದವು; ಅನೇಕ ವಿಧವಾದ ಸ್ಪರ್ಧೆಗಳು ಹಾಗೂ ವಿನೋದ ಕ್ರೀಡೆಗಳು ಜಾರಿಗೆ ಬಂದುವು. ಪ್ರಾಚೀನ ದೇವಾಲಯಗಳು ಜೀರ್ಣೋದ್ಧಾರಗೊಂಡುವು. ರೋಮನ್ ಸಾಮ್ರಾಜ್ಯ ಹೆಚ್ಚಾಗಿ ವ್ಯಾಪಿಸಿದಂತೆ ಅನೇಕ ಮತಗಳು ರೋಮ್ನಲ್ಲಿ ಆಶ್ರಯಪಡೆದುವು. ರೋಮನ್ನರು ಗ್ರೀಕ್, ಈಜಿಪ್್ಟ ಮತ್ತು ಯಹೂದಿ ಮುಂತಾದ ದೇವತೆಗಳನ್ನು ಆರಾಧಿಸತೊಡಗಿದರು. ಈ ಕಾಲದಲ್ಲಿ ಜನರಲ್ಲಿ ನೈತಿಕ ಜಾಗೃತಿ ಮೂಡಿತ್ತು; ರೋಮ್ ನಗರ ಸುಂದರವಾದ ರಸ್ತೆಗಳಿಂದಲೂ ಉದ್ಯಾನಗಳಿಂದಲೂ ಮನೋಹರವಾದ ದೇವಾಲಯಗಳಿಂದಲೂ ಭವ್ಯ ಸಾರ್ವಜನಿಕ ಭವನಗಳಿಂದಲೂ ಕಂಗೊಳಿಸಿ ಸರ್ವತೋಮುಖವಾಗಿ ಬೆಳೆಯಿತು.
ಹಿರಿಮೆ
[ಬದಲಾಯಿಸಿ]ರೋಮನ್ ಸಾಮ್ರಾಜ್ಯದ ಕ್ಷೇಮ ಹಾಗೂ ಒಳಿತೇ ಆಕ್ಟೇವಿಯಸ್ಸನ ಗುರಿ. ಎಲ್ಲ ವರ್ಗಗಳ ಪ್ರೀತಿ ವಿಶ್ವಾಸವನ್ನು ಆತ ಗಳಿಸಿದ್ದ. ಅವನನ್ನು ರೋಮ್ ಸಾಮ್ರಾಜ್ಯದ ರಕ್ಷಕನೆಂದೂ ಪ್ರತ್ಯಕ್ಷ ದೇವತೆಯೆಂದೂ ಪ್ರಜೆಗಳು ಪುಜಿಸಲಾರಂಭಿಸಿದರು. ವಿಶಾಲಸಾಮ್ರಾಜ್ಯದಲ್ಲಿದ್ದ ಭಿನ್ನ ಭಿನ್ನ ಪಂಗಡ ಮತ್ತು ಮತೀಯರಿಗೆ ಸಮಾನತೆಯ ಆಧಾರದ ಮೇಲೆ ನ್ಯಾಯ ಮತ್ತು ರಕ್ಷಣೆ ದೊರೆಯುವಂತಾಯಿತು. ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತು.
ಸುವರ್ಣಯುಗ
[ಬದಲಾಯಿಸಿ]ಈತನ ಆಳ್ವಿಕೆಯನ್ನು ಅಗಸ್ಟಸ್ಯುಗವೆಂದೂ ರೋಮ್ಸಾಮ್ರಾಜ್ಯದ ಸುವರ್ಣಯುಗವೆಂದೂ ಕರೆದಿದ್ದಾರೆ. ಅಗಸ್ಟಸ್ ಚಕ್ರವರ್ತಿ ಸುಪ್ರಸಿದ್ಧ ರಾಜಕೀಯ ನಿಪುಣನೂ ಸುಧಾರಕನೂ ಆಗಿದ್ದುದಲ್ಲದೆ ಕಲೆಯನ್ನೂ ಸಾಹಿತ್ಯವನ್ನೂ ವಿಶೇಷವಾಗಿ ಪ್ರೋತ್ಸಾಹಿಸುವವನೂ ಆಗಿದ್ದ. ಈತನ ಕಾಲದಲ್ಲಿ ಲ್ಯಾಟಿನ್ ಭಾಷೆ ಅತ್ಯಂತ ಉಚ್ಛ್ರಾಯಸ್ಥಿತಿಯನ್ನು ಮುಟ್ಟಿತು. ಆ ಕಾಲದ ಮುಖ್ಯ ಕವಿಗಳಲ್ಲಿ ಈನಿಯಡ್ ಮಹಾಕಾವ್ಯವನ್ನು ರಚಿಸಿದ ವರ್ಜಿಲ್ ಅತ್ಯಂತ ಪ್ರಸಿದ್ಧ. ಓವಿಡ್, ಹೊರೇಸ್ ಮೊದಲಾದವರೂ ಆ ಕಾಲದವರೇ. ಅದೇ ಕಾಲದಲ್ಲಿ ಅನೇಕ ವಿದ್ವಾಂಸರು ವ್ಯಾಕರಣ, ವೈದ್ಯ, ವ್ಯವಸಾಯ, ಚರಿತ್ರೆ ಇತ್ಯಾದಿ ಗ್ರಂಥಗಳನ್ನು ರಚಿಸಿದರು. 44 ವರ್ಷಗಳ ಕಾಲ ಸಾಮ್ರಾಜ್ಯದ ಹಿತಚಿಂತನೆಗಾಗಿ ದುಡಿದು, ಚಕ್ರಾಧಿಪತ್ಯವನ್ನು ವಿಸ್ತರಿಸಿ, ಸುಭದ್ರವಾದ ಆಡಳಿತವನ್ನೂ ಶಾಂತಿಯನ್ನೂ ಸ್ಥಾಪಿಸಿ ಕಲೆಯನ್ನು ವಿಶೇಷವಾಗಿ ಪ್ರೋತ್ಸಾಹಿಸಿ ಅಗಸ್ಟಸ್ ಪ್ರಜೆಗಳಿಂದ ಪ್ರತ್ಯಕ್ಷದೇವನೆಂಬ ಹೆಸರನ್ನು ಪಡೆದ.
ಮೂಲಗಳು
[ಬದಲಾಯಿಸಿ]ಬಾಹ್ಯಸಂಪರ್ಕಗಳು
[ಬದಲಾಯಿಸಿ]- Primary sources
- Cassius Dio's Roman History: Books 45–56, English translation
- Gallery of the Ancient Art: August
- Humor of Augustus Archived 2007-09-27 ವೇಬ್ಯಾಕ್ ಮೆಷಿನ್ ನಲ್ಲಿ.
- Life of Augustus by Nicolaus of Damascus, English translation
- Suetonius' biography of Augustus, Latin text with English translation
- The Res Gestae Divi Augusti (The Deeds of Augustus, his own account: complete Latin and Greek texts with facing English translation)
- The Via Iulia Augusta: road built by the Romans; constructed on the orders of Augustus between the 13–12 B.C. Archived 2006-11-17 ವೇಬ್ಯಾಕ್ ಮೆಷಿನ್ ನಲ್ಲಿ.
- Secondary source material
- Augustan Legionaries Archived 2014-03-25 at Archive.is - Augustus' legions and legionaries
- Augustus—short biography at the BBC
- Brown, F. The Achievements of Augustus Caesar Archived 2017-08-14 ವೇಬ್ಯಾಕ್ ಮೆಷಿನ್ ನಲ್ಲಿ., Clio History Journal, 2009.
- "Augustus Caesar and the Pax Romana"—essay by Steven Kreis about Augustus's legacy
- "De Imperatoribus Romanis"—article about Augustus at Garrett G. Fagan's online encyclopedia of Roman Emperors
- Octavian / Augustus Archived 2007-09-12 ವೇಬ್ಯಾಕ್ ಮೆಷಿನ್ ನಲ್ಲಿ.—pages by Yong-Ling Ow
- Augustus Archived 2016-04-06 ವೇಬ್ಯಾಕ್ ಮೆಷಿನ್ ನಲ್ಲಿ. Why he is important - his place in world history