ವಿಷಯಕ್ಕೆ ಹೋಗು

ZIP ಸಂಕೇತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

'

ಚಿತ್ರ:Mr. ZIP.png
1960ರ ಮತ್ತು 1970ರ ದಶಕಗಳ ಅವಧಿಯಲ್ಲಿ USPSಗೆ ಸಂಬಂಧಿಸಿದಂತಿರುವ ZIP ಸಂಕೇತಗಳ ಬಳಕೆಯನ್ನು ಮಿ. ZIP ಉತ್ತೇಜಿಸಿದ.

ZIP ಸಂಕೇತಗಳು 1963ರಿಂದಲೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಅಂಚೆ ಸೇವೆಯಿಂದ (ಯುನೈಟೆಡ್‌ ಸ್ಟೇಟ್ಸ್‌ ಪೋಸ್ಟಲ್‌ ಸರ್ವೀಸ್‌-USPS) ಬಳಸಲ್ಪಡುತ್ತಿರುವ ಅಂಚೆ ಸಂಕೇತಗಳ ಒಂದು ಪದ್ಧತಿಯಾಗಿದೆ. ZIP ಎಂಬ ಶಬ್ದವು ಝೋನಲ್‌ ಇಂಪ್ರೂವ್‌ಮೆಂಟ್‌ ಪ್ಲಾನ್‌ [] ಎಂಬುದಕ್ಕೆ ಸಂಬಂಧಿಸಿದ ಒಂದು ಪ್ರಥಮಾಕ್ಷರಿಯಾಗಿದ್ದು, ದೊಡ್ಡಕ್ಷರಗಳಲ್ಲಿ ಸೂಕ್ತವಾಗಿ ಬರೆಯಲ್ಪಟ್ಟಿದೆ. ರವಾನೆಗಾರರು ಅಂಚೆ ವಿಳಾಸದಲ್ಲಿ ಸಂಕೇತವನ್ನು ಬಳಸಿದಾಗ, ಟಪಾಲು ಹೆಚ್ಚು ಪರಿಣಾಮಕಾರಿಯಾಗಿ, ಮತ್ತು ಇದರಿಂದಾಗಿ ಹೆಚ್ಚು ಕ್ಷಿಪ್ರವಾಗಿ ಪ್ರಯಾಣಿಸುತ್ತದೆ ಎಂಬುದನ್ನು ಸೂಚಿಸಲು ಇದನ್ನು ಆಯ್ಕೆಮಾಡಿಕೊಳ್ಳಲಾಯಿತು. ಮೂಲಭೂತ ಸ್ವರೂಪವು ಐದು ದಶಮಾಂಶದ ಸಂಖ್ಯಾತ್ಮಕ ಅಂಕೆಗಳನ್ನು ಒಳಗೊಂಡಿದೆ. 1980ರ ದಶಕದಲ್ಲಿ ಪರಿಚಯಿಸಲ್ಪಟ್ಟ ಒಂದು ವಿಸ್ತರಿತ ZIP+4 ಸಂಕೇತವು ZIP ಸಂಕೇತದ ಐದು ಅಂಕೆಗಳು, ಒಂದು ಅಡ್ಡಗೆರೆ, ಮತ್ತು ZIP ಸಂಕೇತ ಒಂದೇ ಸೂಚಿಸುವುದಕ್ಕಿಂತ ಹೆಚ್ಚಾಗಿ ಒಂದು ಹೆಚ್ಚು ಕರಾರುವಾಕ್ಕಾದ ತಾಣವನ್ನು ನಿರ್ಣಯಿಸುವ ನಾಲ್ಕು ಹೆಚ್ಚು ಅಂಕೆಗಳನ್ನು ಒಳಗೊಳ್ಳುತ್ತದೆ. ZIP ಸಂಕೇತ ಎಂಬ ಶಬ್ದವು U.S. ಅಂಚೆಯ ಸೇವೆಯಿಂದ ಮೂಲತಃ ಒಂದು ಸೇವಾಮುದ್ರೆಯಾಗಿ (ಸರಕುಮುದ್ರೆಯ ಒಂದು ಬಗೆ) ನೋಂದಾಯಿಸಲ್ಪಟ್ಟಿತಾದರೂ, ಅಲ್ಲಿಂದ ಅದರ ನೋಂದಣಿಯ ಅವಧಿಯು ಮುಗಿದಿದೆ.[]

ಹಿನ್ನೆಲೆ

[ಬದಲಾಯಿಸಿ]
ZIP ಸಂಕೇತಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿರುವ 1963ರ ಒಂದು U.S. ಅಂಚೆ ಕಚೇರಿಯ ಚಿಹ್ನೆ
"ZIP ಸಂಕೇತವನ್ನು ಬಳಸಿ" ಎಂದು ಸಾರುವ ಪಟ್ಟಿಗಳನ್ನು ZIP ಸಂಕೇತವೊಂದರ ಬಳಕೆಯನ್ನು ಉತ್ತೇಜಿಸಲೂ ಸಹ ಉಪಯೋಗಿಸಲಾಯಿತು.

ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಅಂಚೆ ಕಚೇರಿ ಇಲಾಖೆಯು (ಯುನೈಟೆಡ್‌ ಸ್ಟೇಟ್ಸ್‌ ಪೋಸ್ಟ್‌ ಆಫೀಸ್‌ ಡಿಪಾರ್ಟ್‌ಮೆಂಟ್‌-USPOD) ಬೃಹತ್‌ ನಗರಗಳಿಗೆ ಸಂಬಂಧಿಸಿದಂತೆ 1943ರಲ್ಲಿ ಅಂಚೆಯ ವಲಯಗಳನ್ನು ಕಾರ್ಯಗತಗೊಳಿಸಿತು. ಉದಾಹರಣೆಗೆ:

ಮಿ. ಜಾನ್‌ ಸ್ಮಿತ್‌‌
3256 ಎಪಿಫೆನಾಮೆನಲ್‌ ಅವೆನ್ಯೂ
ಮಿನ್ನೆಯಾಪೊಲಿಸ್‌ 16 , ಮಿನ್ನೆಸೊಟಾ

"16" ಎಂಬುದು ನಗರದೊಳಗಡೆ ಇರುವ ಅಂಚೆಯ ವಲಯದ ಸಂಖ್ಯೆಯಾಗಿದೆ. 1960ರ ದಶಕದ ಆರಂಭದ ವೇಳೆಗೆ ಒಂದು ಹೆಚ್ಚು ಸಾಮಾನ್ಯ ಪದ್ಧತಿಯ ಅಗತ್ಯ ಕಂಡುಬಂತು, ಮತ್ತು 1963ರ ಜುಲೈ 1ರಂದು ಇಡೀ ದೇಶಕ್ಕೆ ಸಂಬಂಧಿಸಿದಂತೆ ಕಡ್ಡಾಯವಲ್ಲದ ZIP ಸಂಕೇತಗಳನ್ನು ಘೋಷಿಸಲಾಯಿತು. ಅಂಚೆ ಕಚೇರಿಯ ಓರ್ವ ಉದ್ಯೋಗಿಯಾಗಿದ್ದ ರಾಬರ್ಟ್‌ ಮೂನ್ ಎಂಬಾತ ZIP ಸಂಕೇತದ ಜನಕ ಎಂದು ಪರಿಗಣಿಸಲ್ಪಟ್ಟಿದ್ದಾನೆ; 1944ರಲ್ಲಿ ಓರ್ವ ಅಂಚೆಯ ಇನ್ಸ್‌ಪೆಕ್ಟರ್‌‌ ಆಗಿ ಕಾರ್ಯನಿರ್ವಹಿಸುತ್ತಿದ್ದಾಗ, ಆತ ತನ್ನ ಪ್ರಸ್ತಾವನೆಯನ್ನು ಸಲ್ಲಿಸಿದ.[ಸೂಕ್ತ ಉಲ್ಲೇಖನ ಬೇಕು] ವಿಭಾಗೀಯ ಕೇಂದ್ರದ ಸೌಲಭ್ಯ (ಸೆಕ್ಷನಲ್‌ ಸೆಂಟರ್‌ ಫೆಸಿಲಿಟಿ-SCF) ಅಥವಾ "ಸೆಕ್‌ ಸೆಂಟರ್‌" ಎಂಬುದನ್ನು ವಿವರಿಸುವ ZIP ಸಂಕೇತದ ಮೊದಲ ಮೂರು ಅಂಕೆಗಳಿಗೆ ಸಂಬಂಧಿಸಿದಂತೆ ಮಾತ್ರವೇ ಅಂಚೆ ಕಚೇರಿಯು ಮೂನ್‌ಗೆ ಮನ್ನಣೆಯನ್ನು ನೀಡುತ್ತದೆ. ಒಂದು SCF ಎಂಬುದು ಆ ಮೂರು ಅಂಕೆಗಳೊಂದಿಗಿನ ಒಂದು ಕೇಂದ್ರೀಯ ಟಪಾಲು ಪರಿಷ್ಕರಣಾ ಸೌಕರ್ಯವಾಗಿದೆ. ಟಪಾಲುಗಳ ZIP ಸಂಕೇತಗಳಲ್ಲಿರುವ ಆ ಮೊದಲ ಮೂರು ಅಂಕೆಗಳ ನೆರವಿನೊಂದಿಗೆ SCF ಟಪಾಲನ್ನು ಎಲ್ಲಾ ಅಂಚೆ ಕಚೇರಿಗಳಿಗೆ ವಿಂಗಡಿಸುತ್ತದೆ. ZIP ಸಂಕೇತದ ಕೊನೆಯ ಎರಡು ಅಂಕೆಗಳಿಗೆ ಅನುಸಾರವಾಗಿ ಟಪಾಲು ವಿಂಗಡಿಸಲ್ಪಡುತ್ತದೆ ಮತ್ತು ಸಂಬಂಧಪಟ್ಟ ಅಂಚೆ ಕಚೇರಿಗಳಿಗೆ ಮುಂಜಾನೆಯೇ ಕಳಿಸಲ್ಪಡುತ್ತದೆ. ವಿಭಾಗೀಯ ಕೇಂದ್ರಗಳು ಟಪಾಲನ್ನು ಬಟವಾಡೆ ಮಾಡುವುದಿಲ್ಲ ಮತ್ತು ಸಾರ್ವಜನಿಕರಿಗೆ ಅವು ತೆರೆದಿರುವುದಿಲ್ಲ (ಆದರೂ, ಸಾರ್ವಜನಿಕರಿಗೆ ತೆರೆದಿರುವ ಅಂಚೆ ಕಚೇರಿಯೊಂದನ್ನು ಆ ಕಟ್ಟಡವು ಒಳಗೊಳ್ಳಬಹುದು), ಮತ್ತು ಬಹುಪಾಲು ಕೆಲಸಗಾರರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ನೇಮಿಸಲ್ಪಟ್ಟಿರುತ್ತಾರೆ. ಅಂಚೆ ಕಚೇರಿಗಳಲ್ಲಿ ಎತ್ತಿಕೊಳ್ಳಲಾದ ಟಪಾಲನ್ನು ಅಪರಾಹ್ನದಲ್ಲಿ ಅವುಗಳದ್ದೇ ಆದ SCFಗೆ ಕಳಿಸಲಾಗುತ್ತದೆ, ಅಲ್ಲಿ ಟಪಾಲು ಒಂದೇ ರಾತ್ರಿಯಲ್ಲಿ ವಿಂಗಡಿಸಲ್ಪಡುತ್ತದೆ. ಬೃಹತ್‌ ನಗರಗಳ ನಿದರ್ಶನಗಳಲ್ಲಿ, ಕೊನೆಯ ಎರಡು ಅಂಕೆಗಳು ಹಳೆಯ ಅಂಚೆಯ ವಲಯದ ಸಂಖ್ಯೆಯೊಂದಿಗೆ[ಸೂಕ್ತ ಉಲ್ಲೇಖನ ಬೇಕು] ಏಕಕಾಲಿಕವಾಗುತ್ತದೆ. ಅದರ ಕ್ರಮವು ಹೀಗಿರುತ್ತದೆ:

ಮಿ. ಜಾನ್‌ ಸ್ಮಿತ್‌‌
3256 ಎಪಿಫೆನಾಮೆನಲ್‌ ಅವೆನ್ಯೂ
ಮಿನ್ನೆಯಾಪೊಲಿಸ್‌, ಮಿನ್ನೆಸೊಟಾ 55416

1967ರಲ್ಲಿ, ಎರಡನೇ- ಮತ್ತು ಮೂರನೇ-ದರ್ಜೆಯ ಸಗಟು ಟಪಾಲುದಾರರಿಗೆ ಸಂಬಂಧಿಸಿದಂತೆ ಇವನ್ನು ಕಡ್ಡಾಯಗೊಳಿಸಲಾಯಿತು, ಮತ್ತು ಈ ಪದ್ಧತಿಯು ಕೆಲವೇ ದಿನಗಳಲ್ಲಿ ಸಾರ್ವತ್ರಿಕವಾಗಿ ಅಳವಡಿಸಲ್ಪಟ್ಟಿತು. ZIP ಸಂಕೇತದ ಬಳಕೆಯನ್ನು ಉತ್ತೇಜಿಸಲು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಅಂಚೆ ಕಚೇರಿಯು ಮಿ. ZIP ಎಂಬ ಒಂದು ವ್ಯಂಗ್ಯಚಿತ್ರ ಪಾತ್ರವನ್ನು ಬಳಸಿಕೊಂಡಿತು. "USE ZIP CODE" ಎಂಬಂಥ ಒಂದು ಶಿರೋನಾಮೆಯೊಂದಿಗೆ ಅವನು ಅನೇಕವೇಳೆ ಚಿತ್ರಿಸಲ್ಪಟ್ಟಿದ್ದ. ಅಂಚೆ ಚೀಟಿಗಳ ಚೌಕುಳಿಗಳ ಅಂಚುಪಟ್ಟಿಯಲ್ಲಿ ಅಥವಾ ಅದನ್ನು ಒಳಗೊಂಡಿರುವ ಪಟ್ಟಿಗಳ ಮೇಲೆ, ಅಥವಾ ಲಕೋಟೆಗಳ ಮೇಲೆ, ಅಂಚೆ ಚೀಟಿಗಳ ಪುಸ್ತಿಕೆ ಚೌಕುಳಿಗಳ ಮೇಲೆ ಸದರಿ ವ್ಯಂಗ್ಯಚಿತ್ರ ಪಾತ್ರವು ಚಿತ್ರಿಸಲ್ಪಟ್ಟಿರುತ್ತಿತ್ತು. ಸಾಕಷ್ಟು ಕುತೂಹಲಕರವಾಗಿದ್ದ ಅಂಶವೆಂದರೆ, 1974ರಲ್ಲಿ ZIP ಸಂಕೇತವನ್ನು ಪ್ರವರ್ತಿಸುವಾಗ ಅಂಚೆಯ ಸೇವೆಯು ಜಾರಿಮಾಡಿದ್ದ ಒಂದು ಅಂಚೆ ಚೀಟಿಯಲ್ಲಿ ಅದೊಂದು ಬಾರಿ ಮಾತ್ರ ಮಿ. ZIP ಚಿತ್ರಿಸಲ್ಪಟ್ಟಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು]

1983ರಲ್ಲಿ, U.S. ಅಂಚೆಯ ಸೇವೆಯು "ZIP+4" ಎಂದು ಕರೆಯಲ್ಪಡುವ ಒಂದು ವಿಸ್ತರಿತ ZIP ಸಂಕೇತ ಪದ್ಧತಿಯ ಬಳಕೆಯನ್ನು ಪ್ರಾರಂಭಿಸಿತು. ಇದನ್ನು "ಪ್ಲಸ್‌-ಫೋರ್‌ ಕೋಡ್ಸ್‌‌", "ಆಡ್‌-ಆನ್‌ ಕೋಡ್ಸ್‌" ಅಥವಾ "ಆಡ್‌ ಆನ್ಸ್‌" ಎಂದೂ ಸಹ ಅನೇಕವೇಳೆ ಕರೆಯಲಾಗುತ್ತದೆ. ಐದು-ಅಂಕೆಯ ಬಟವಾಡೆ ಮಾಡುವ ಪ್ರದೇಶದೊಳಗಡೆ ಇರುವ ಒಂದು ಭೌಗೋಳಿಕ ಭಾಗವನ್ನು ಗುರುತಿಸಲು, ಮೂಲಭೂತವಾದ ಐದು-ಅಂಕೆಯ ಸಂಕೇತದ ಜೊತೆಗೆ ನಾಲ್ಕು ಹೆಚ್ಚುವರಿ ಅಂಕೆಗಳನ್ನು ಒಂದು ZIP+4 ಸಂಕೇತವು ಬಳಸಿಕೊಳ್ಳುತ್ತದೆ. ಅಂದರೆ, ಒಂದು ನಗರ ವಿಭಾಗ, ಗೃಹಸ್ತೋಮಗಳ ಒಂದು ಸಮೂಹ, ಹೆಚ್ಚು-ಪ್ರಮಾಣದಲ್ಲಿ ಟಪಾಲನ್ನು ಸ್ವೀಕರಿಸುವ ಓರ್ವ ಪ್ರತ್ಯೇಕವಾದ ಗ್ರಾಹಕ ಇವು ಇಂಥ ಬಟವಾಡೆ ಮಾಡುವ ಪ್ರದೇಶಗಳಲ್ಲಿ ಬರುತ್ತವೆ. ಅಷ್ಟೇ ಅಲ್ಲ, ಪರಿಣಾಮಕಾರಿಯಾದ ಟಪಾಲು ವಿಂಗಡಿಸುವಿಕೆ ಮತ್ತು ಬಟವಾಡೆ ಮಾಡುವಿಕೆಯಲ್ಲಿ ನೆರವಾಗಲು ಒಂದು ಹೆಚ್ಚುವರಿ ಗುರುತುಕಾರಕವನ್ನು ಬಳಸುವ ಇತರ ಯಾವುದೇ ಘಟಕವೂ ಈ ವ್ಯಾಪ್ತಿಯಲ್ಲಿ ಬರುತ್ತದೆ. ಹೊಸ ಸ್ವರೂಪದ ಸಾರ್ವತ್ರಿಕ ಬಳಕೆಯನ್ನು ಉತ್ತೇಜಿಸುವಲ್ಲಿನ ಆರಂಭಿಕ ಪ್ರಯತ್ನಗಳಿಗೆ ಸಾರ್ವಜನಿಕರಿಂದ ಪ್ರತಿರೋಧವು[ಸೂಕ್ತ ಉಲ್ಲೇಖನ ಬೇಕು] ವ್ಯಕ್ತವಾಯಿತು ಮತ್ತು ಇಂದು ಪ್ಲಸ್‌-ಫೋರ್‌ ಸಂಕೇತದ ಅಗತ್ಯವು ಕಂಡುಬರುತ್ತಿಲ್ಲ. ಸಾಮಾನ್ಯವಾಗಿ ಹೇಳುವುದಾದರೆ, ಒಂದು ಮಲ್ಟಿಪಲ್‌ ಆಪ್ಟಿಕಲ್‌ ಕ್ಯಾರಕ್ಟರ್‌ ರೀಡರ್‌‌‌ನಿಂದ (MLOCR) ಟಪಾಲು ಓದಲ್ಪಡುತ್ತದೆ. ಇದು ವಿಳಾಸದ ನೆರವಿನೊಂದಿಗೆ ಸರಿಯಾದ ZIP+4 ಸಂಕೇತವನ್ನು ಹೆಚ್ಚೂಕಮ್ಮಿ ತತ್‌ಕ್ಷಣವೇ ನಿರ್ಣಯಿಸುತ್ತದೆ ಮತ್ತು- ಇನ್ನೂ ಹೆಚ್ಚು ನಿರ್ದಿಷ್ಟವಾದ ಬಟವಾಡೆ ಮಾಡುವ ಸ್ಥಳದ ನೆರವಿನೊಂದಿಗೆ- 9 ಅಂಕೆಗಳಿಗೆ ಸಂಬಂಧಪಡುವ ಒಂದು ಪೋಸ್ಟ್‌ನೆಟ್‌ ಬಾರ್‌‌ಸಂಕೇತವನ್ನು ಟಪಾಲು ತುಣುಕಿನ ಮುಖಭಾಗದ ಮೇಲೆ ಅದು ಸಿಂಪಡಿಸುತ್ತದೆ. ಪ್ರತಿ ಪೆಟ್ಟಿಗೆಯೂ ತನ್ನದೇ ಆದ ZIP+4 ಸಂಕೇತವನ್ನು ಹೊಂದಿರುವುದು ಅಂಚೆ-ಕಚೇರಿ ಪೆಟ್ಟಿಗೆಗಳಿಗೆ ಸಂಬಂಧಿಸಿದಂತಿರುವ ಸಾಮಾನ್ಯವಾದ (ಆದರೆ ಸ್ಥಿರವಾಗಿರುವಂಥದ್ದಲ್ಲದ) ನಿಯಮವಾಗಿದೆ. ಆಡ್‌-ಆನ್‌ ಸಂಕೇತ ಎಂಬುದು ಅನೇಕವೇಳೆ ಈ ಮುಂದೆ ನೀಡಿರುವುದರ ಪೈಕಿ ಒಂದಾಗಿರುತ್ತದೆ: ಪೆಟ್ಟಿಗೆ ಸಂಖ್ಯೆಯ ಕೊನೆಯ ನಾಲ್ಕು ಅಂಕೆಗಳು (ಉದಾಹರಣೆಗೆ PO ಪೆಟ್ಟಿಗೆ 58001, ವಾಷಿಂಗ್ಟನ್‌ DC 20037-8001), ಶೂನ್ಯದ ಜೊತೆಗೆ ಪೆಟ್ಟಿಗೆ ಸಂಖ್ಯೆಯ ಕೊನೆಯ ಮೂರು ಅಂಕೆಗಳು (ಉದಾಹರಣೆಗೆ, PO ಪೆಟ್ಟಿಗೆ 12344, ಚಿಕಾಗೊ IL 60612-0344), ಅಥವಾ, ಒಂದು ವೇಳೆ ಪೆಟ್ಟಿಗೆ ಸಂಖ್ಯೆಯು ನಾಲ್ಕು ಅಂಕೆಗಳಿಗಿಂತ ಕಡಿಮೆಯಿರುವ ಅಂಕಿಗಳನ್ನು ಒಳಗೊಂಡಿದ್ದರೆ, ಒಂದು ನಾಲ್ಕು-ಅಂಕೆಯ ಸಂಖ್ಯೆಯನ್ನು ರೂಪಿಸುವ ಸಲುವಾಗಿ ಪೆಟ್ಟಿಗೆ ಸಂಖ್ಯೆಯ ಮುಂಭಾಗಕ್ಕೆ ಸಾಕಷ್ಟು ಶೂನ್ಯಗಳನ್ನು ಪೂರ್ವಭಾವಿಯಾಗಿ ಸೇರಿಸಲಾಗುತ್ತದೆ (ಉದಾಹರಣೆಗೆ, PO ಪೆಟ್ಟಿಗೆ 52, ಗ್ಯಾರೆಟ್‌ ಪಾರ್ಕ್‌ MD 20896-0052). ಆದಾಗ್ಯೂ, ಇಲ್ಲಿ ಏಕರೂಪದ ನಿಯಮವಿಲ್ಲವಾದ್ದರಿಂದ, ZIP+4 ಸಂಕೇತವನ್ನು ಪ್ರತಿಗೆ ಪೆಟ್ಟಿಗೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ನೋಡಬೇಕಾಗುತ್ತದೆ. ಅಂಚೆಮಾಸ್ತರರಿಗೆ ಉದ್ದೇಶಿಸಿ ಬರೆಯಲಾಗಿರುವ (ಇದಕ್ಕೆ ಸಂಬಂಧಿಸಿದಂತೆ ಚಿತ್ರಾತ್ಮಕ ರದ್ದತಿಗಳಿಗಾಗಿರುವ ಮನವಿಗಳನ್ನು ಸಾಮಾನ್ಯವಾಗಿ ತಿಳಿಸಲಾಗುತ್ತದೆ) ಟಪಾಲಿಗೆ ಸಂಬಂಧಿಸಿದಂತೆ ಆಡ್‌-ಆನ್‌ ಸಂಕೇತ 9998ನ್ನು ಬಳಸುವುದು, ಸಾಮಾನ್ಯ ಬಟವಾಡೆಗೆ ಸಂಬಂಧಿಸಿದಂತೆ ಆಡ್‌-ಆನ್‌ ಸಂಕೇತ 9999ನ್ನು ಬಳಸುವುದು ಹಾಗೂ ವ್ಯವಹಾರದ ಜವಾಬಿನ ಟಪಾಲಿಗೆ ಸಂಬಂಧಿಸಿದಂತೆ ಇತರ ಉನ್ನತ-ಸಂಖ್ಯೆಯನ್ನು ಒಳಗೊಂಡ ಆಡ್‌-ಆನ್‌ ಸಂಕೇತಗಳನ್ನು ಬಳಸುವುದು ಸಾಮಾನ್ಯವಾಗಿದೆ.[ಸೂಕ್ತ ಉಲ್ಲೇಖನ ಬೇಕು] ಒಂದು ಅನನ್ಯ ZIP ಸಂಕೇತಕ್ಕಾಗಿ (ಕೆಳಗೆ ವಿವರಿಸಲಾಗಿದೆ), 0001 ಎಂಬುದು ವಿಶಿಷ್ಟವಾದ ರೀತಿಯಲ್ಲಿ ಆಡ್‌-ಆನ್‌ ಸಂಕೇತವಾಗಿರುತ್ತದೆ.

ಅಂಚೆಯ ಬಾರ್‌‌ ಸಂಕೇತ

[ಬದಲಾಯಿಸಿ]
ಐದು-ಅಂಕೆಯ ZIP ಸಂಕೇತ 55416ಕ್ಕೆ ಸಂಬಂಧಿಸಿದಂತೆ ಪೋಸ್ಟ್‌ನೆಟ್‌ ಬಾರ್‌‌ ಸಂಕೇತದೊಂದಿಗೆ ಪಠ್ಯದಲ್ಲಿ ತೋರಿಸಲಾದ ವಿಳಾಸವಿದು.
ಒಂಬತ್ತು-ಅಂಕೆಯ ZIP+4 ಸಂಕೇತ 33701-4313ಕ್ಕೆ ಸಂಬಂಧಿಸಿದಂತೆ ಪೋಸ್ಟ್‌ನೆಟ್‌ ಬಾರ್‌‌ ಸಂಕೇತದೊಂದಿಗೆ ಪಠ್ಯದಲ್ಲಿ ತೋರಿಸಲಾದ ವಿಳಾಸವಿದು.

ZIP ಸಂಕೇತವನ್ನು ಪೋಸ್ಟ್‌ನೆಟ್‌ ಎಂದು ಕರೆಯಲ್ಪಡುವ ಒಂದು ಬಾರ್‌‌ಸಂಕೇತವಾಗಿ ಅನೇಕವೇಳೆ ಪರಿವರ್ತಿಸಲಾಗುತ್ತದೆ. ಸ್ವಯಂಚಾಲಿತ ಯಂತ್ರಗಳು ವಿಂಗಡಿಸುವಿಕೆಯನ್ನು ಸುಲಭವಾಗಿ ಕೈಗೊಳ್ಳುವುದಕ್ಕೆ ನೆರವಾಗಲು ಟಪಾಲು ತುಣುಕಿನ ಮೇಲೆ ಇದನ್ನು ಮುದ್ರಿಸಲಾಗಿರುತ್ತದೆ. ಬಹುತೇಕ ಬಾರ್‌‌ಸಂಕೇತದ ಸಂಕೇತ ವಿವರಣೆಗಳಿಗಿಂತ ಭಿನ್ನವಾಗಿರುವ ಪೋಸ್ಟ್‌ನೆಟ್‌, ಉದ್ದನೆಯ ಮತ್ತು ಗಿಡ್ಡನೆಯ ಪಟ್ಟೆಗಳನ್ನು ಬಳಸುತ್ತದೆಯೇ ಹೊರತು, ತೆಳುವಾದ ಮತ್ತು ದಪ್ಪನೆಯ ಪಟ್ಟೆಗಳನ್ನಲ್ಲ. ಟಪಾಲನ್ನು ಯಾರು ಕಳಿಸುತ್ತಾರೋ ಆ ವ್ಯಕ್ತಿಯಿಂದಲೇ ಬಾರ್‌‌ಸಂಕೇತವು ಮುದ್ರಿಸಲ್ಪಡಬಹುದಾಗಿದೆ (ವರ್ಡ್‌ಪರ್ಫೆಕ್ಟ್‌[] ಮತ್ತು ಮೈಕ್ರೋಸಾಫ್ಟ್‌ ವರ್ಡ್‌[] ಥರದ ಕೆಲವೊಂದು ವರ್ಡ್‌-ಪ್ರೊಸೆಸಿಂಗ್‌‌ ಕಾರ್ಯಸೂಚಿಗಳು ಈ ಲಕ್ಷಣವನ್ನು ಒಳಗೊಂಡಿವೆ), ಅಥವಾ ಇಂಥದೊಂದು ಟಪಾಲಿನ ತುಣುಕನ್ನು ಸಂಸ್ಕರಿಸುವಾಗ ಸ್ವತಃ ಅಂಚೆ ಕಚೇರಿಯೇ ಇಂಥ ಬಾರ್‌ಸಂಕೇತವನ್ನು ಮುದ್ರಿಸುತ್ತದೆ. ಅಂಚೆ ಕಚೇರಿಯು ಸಾಮಾನ್ಯವಾಗಿ OCR ತಂತ್ರಜ್ಞಾನವನ್ನು ಬಳಸುತ್ತದೆಯಾದರೂ, ಒಂದು ವೇಳೆ ಸಂಪೂರ್ಣವಾಗಿ ಅಗತ್ಯವೆಂದು ಕಂಡುಬಂದಲ್ಲಿ ಓರ್ವ ವ್ಯಕ್ತಿಯು ವಿಳಾಸವನ್ನು ಓದಬೇಕಾಗಿ ಬರಬಹುದು. ಸಗಟು ಟಪಾಲನ್ನು ಕಳಿಸುವ ಜನರು ಒಂದು ವೇಳೆ ಅವರೇ ಸ್ವತಃ ಬಾರ್‌‌ಸಂಕೇತವನ್ನು ಮುದ್ರಿಸಿದ್ದರೆ, ಅಂಚೆಯ ವೆಚ್ಚದ ಮೇಲೆ ಒಂದು ರಿಯಾಯಿತಿಯನ್ನು ಅವರು ಪಡೆಯಲು ಅವಕಾಶವಿದೆ. ಒಂದು ಸರಳ ಅಕ್ಷರ ಮಾದರಿಗಿಂತ ಸ್ವಲ್ಪವೇ ಹೆಚ್ಚಿನದನ್ನು ಇದು ಬಯಸುತ್ತದೆ; ಒಂದು ಪೂರ್ಣವಾದ, ಸರಿಯಾದ ZIP+4 ಸಂಕೇತವನ್ನು ಸೇರಿಸಿ ಪರಿಶೀಲನೆ ನಡೆಸುವ, ಪರಿಷ್ಕೃತ CASS ಪ್ರಮಾಣಿತ ತಂತ್ರಾಂಶದೊಂದಿಗೆ ಅಂಚೆಪಟ್ಟಿಗಳು ಪ್ರಮಾಣಕವಾಗಿಸಲ್ಪಟ್ಟಿರಬೇಕು ಮತ್ತು ನಿಖರವಾದ ಬಟವಾಡೆ ಮಾಡುವ ಸ್ಥಳವನ್ನು ಪ್ರತಿನಿಧಿಸುವ ಒಂದು ಹೆಚ್ಚುವರಿಯಾದ ಎರಡು ಅಂಕೆಗಳು ಅದರಲ್ಲಿಬೇಕು.[ಸೂಕ್ತ ಉಲ್ಲೇಖನ ಬೇಕು] ಇಷ್ಟೇ ಅಲ್ಲದೇ, ಒಂದು ನಿರ್ದಿಷ್ಟ ಪದ್ಧತಿಯಲ್ಲಿ ಟಪಾಲನ್ನು ವಿಂಗಡಿಸಬೇಕಾಗುತ್ತದೆ ಮತ್ತು ಇದನ್ನು ಪರಿಶೀಲಿಸುವಾಗ ಅದರೊಂದಿಗೆ ದಾಖಲೆಯ ಪುರಾವೆಯೂ ಇರಬೇಕಾಗುತ್ತದೆ.

ಬಾರ್‌‌ಸಂಕೇತವನ್ನೊಳಗೊಂಡ ವಿಳಾಸ ಪಟ್ಟಿಗಳು ಮತ್ತು ಬಾರ್‌‌ಸಂಕೇತವನ್ನೊಳಗೊಂಡ ಚೀಲ ಅಥವಾ ತಟ್ಟೆಯ ನಮೂದುಪಟ್ಟಿಗಳನ್ನೂ ಮುದ್ರಿಸುವ PAVE-ಪ್ರಮಾಣಿತ ತಂತ್ರಾಂಶದೊಂದಿಗೆ ಈ ಹಂತಗಳನ್ನು ಸಾಮಾನ್ಯವಾಗಿ ನೆರವೇರಿಸಲಾಗುತ್ತದೆ.

ಅಂದರೆ, ದೇಶದಲ್ಲಿನ ಪ್ರತಿಯೊಂದು ಏಕ ಅಂಚೆಯೋಗ್ಯ ತಾಣವೂ, ತನ್ನದೇ ಆದ 12-ಅಂಕೆಯ ಸಂಖ್ಯೆಯನ್ನು (ಕಡೇಪಕ್ಷ ಸಿದ್ಧಾಂತದಲ್ಲಿ) ಹೊಂದಿದೆ ಎಂಬುದು ಇದರರ್ಥ. ಬಟವಾಡೆ ಮಾಡುವ-ತಾಣದ ಅಂಕೆಗಳನ್ನು (10ನೇ ಮತ್ತು 11ನೇ ಅಂಕೆಗಳು) ವಿಳಾಸದ ಪ್ರಾಥಮಿಕ ಅಥವಾ ದ್ವಿತೀಯಕ ಸಂಖ್ಯೆಯನ್ನು ಆಧರಿಸಿ ಲೆಕ್ಕಾಚಾರ ಹಾಕಲಾಗುತ್ತದೆ. CASS ತಾಂತ್ರಿಕ ಮಾರ್ಗದರ್ಶಿ ಎಂದು ಕರೆಯಲ್ಪಡುವ ಒಂದು ದಸ್ತಾವೇಜಿನಲ್ಲಿ ಬಟವಾಡೆ ಮಾಡುವ ಸ್ಥಳವನ್ನು ಲೆಕ್ಕಾಚಾರ ಹಾಕುವುದಕ್ಕೆ ಸಂಬಂಧಿಸಿದ ನಿಯಮಗಳನ್ನು USPS ಪ್ರಕಟಿಸುತ್ತದೆ.[] ಕೊನೆಯ ಅಂಕೆಯು ಯಾವಾಗಲೂ ಒಂದು ತಾಳೆ ಅಂಕೆಯಾಗಿದ್ದು, ಎಲ್ಲಾ 5, 9 ಅಥವಾ 11 ಅಂಕೆಗಳನ್ನು ಕೂಡಿಸಿ, ಈ ಮೊತ್ತದ ಶೇಷ ಮಾಡ್ಯುಲೊ 10ನ್ನು (ಅಂದರೆ, 10ರಿಂದ ಭಾಗಿಸಿದ ನಂತರ ಬರುವ ಶೇಷ) ತೆಗೆದುಕೊಂಡು ಮತ್ತು ಇದನ್ನು ಅಂತಿಮವಾಗಿ 10ರಿಂದ ಕಳೆಯುವ ಮೂಲಕ ಸದರಿ ತಾಳೆ ಅಂಕೆಯನ್ನು ಪಡೆಯಲಾಗುತ್ತದೆ. (ಈ ರೀತಿಯಲ್ಲಿ, 10001-0001 00ಗೆ ಸಂಬಂಧಿಸಿರುವ ತಾಳೆ ಅಂಕೆಯು 7 ಆಗಿರುತ್ತದೆ, ಏಕೆಂದರೆ 1+1+1=3, 3≡3(ಮಾಡ್ಯುಲೊ 10) ಮತ್ತು 10–3=7.) ಒಂದು ಕ್ರಮಬದ್ಧವಾದ ಬಾರ್‌‌ಸಂಕೇತವನ್ನು ಸೃಷ್ಟಿಸಲು, 12-ಅಂಶದ ಪೋಸ್ಟ್‌ನೆಟ್‌ ಅಕ್ಷರ ಮಾದರಿಯಲ್ಲಿ /100010001007/ ಎಂಬ ರೀತಿಯಲ್ಲಿ ಇರುವಂಥದನ್ನು ಮಾತ್ರವೇ ಒಂದು ಅನ್ವಯಿಕೆಯು ಮುದ್ರಿಸುವುದು ಅಗತ್ಯವಾಗಿರುತ್ತದೆ. "/" ರೀತಿಯ ಓರೆಗೆರೆಗಳು ಆರಂಭ/ನಿಲುಗಡೆಯ ಅಕ್ಷರಗಳಾಗಿ ಪರಿವರ್ತಿಸಲ್ಪಡುತ್ತವೆ (ಒಂದು ಉದ್ದನೆಯ ಪಟ್ಟೆ), ಮತ್ತು ಪ್ರತಿ ಅಂಕೆಯೂ ಎರಡು ಉದ್ದನೆಯ ಪಟ್ಟೆಗಳು ಹಾಗೂ ಮೂರು ಗಿಡ್ಡನೆಯ ಪಟ್ಟೆಗಳ ಒಂದು ಸರಣಿಯಾಗಿ ಪರಿವರ್ತಿಸಲ್ಪಡುತ್ತದೆ. ವ್ಯವಹಾರದ-ಜವಾಬಿನ ಟಪಾಲಿನ ಮೇಲೆ, ಟಪಾಲು ತುಣುಕಿನ ನೆಲೆಸೂಚನೆಯನ್ನು (ತಿರುಗಿಸುವಿಕೆ) FIM ಸಂಕೇತವು ಪ್ರಧಾನವಾಗಿ ಸೂಚಿಸುತ್ತದೆ, ಏಕೆಂದರೆ ಪ್ರತಿದೀಪಕ ಶಾಯಿಯನ್ನು (ಟಪಾಲಿನ ದಿಕ್ಕುಸೂಚಿಸಲು ಇದು ಸಾಮಾನ್ಯವಾಗಿ ತಿರುಗಿಸುವಿಕೆಯ ಯಂತ್ರದಿಂದ ಬಳಸಲ್ಪಡುತ್ತದೆ) ಒಳಗೊಂಡಿರುವ ಒಂದು ಅಂಚೆ ಚೀಟಿ ಅಥವಾ ಅಂಚೆಯ ವೆಚ್ಚ ಮಾಪಕ ಮುದ್ರೆಯು ಸಾಮಾನ್ಯವಾಗಿ ಅಲ್ಲಿರುವುದಿಲ್ಲ.[ಸೂಕ್ತ ಉಲ್ಲೇಖನ ಬೇಕು] ಇದರ ಜೊತೆಗೆ, FIM ಸಂಕೇತಗಳಾದ A ಮತ್ತು C ಒಂದು ಪೋಸ್ಟ್‌ನೆಟ್‌ ಬಾರ್‌‌ ಸಂಕೇತವು ಇದೆ ಎಂಬುದನ್ನು ಸೂಚಿಸುತ್ತವೆ; ಇದರಿಂದಾಗಿ ಟಪಾಲು MOCRನ್ನು ದಾಟಿಕೊಂಡು ಹೋಗಲು ಮತ್ತು ಬಾರ್‌‌ಸಂಕೇತವನ್ನು ಸ್ಕ್ಯಾನ್‌ ಮಾಡುವ ಯಂತ್ರವೊಂದರ ಬಳಿಗೆ ನೇರವಾಗಿ ಸಾಗಲು ಅವಕಾಶ ಸಿಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಆ ಕಾರಣಕ್ಕಾಗಿ, ಸೌಜನ್ಯದ ಜವಾಬಿನ ಟಪಾಲು ಹಾಗೂ ಶುಲ್ಕವಿಧಿಸಿದ ಜವಾಬಿನ ಟಪಾಲುಗಳು ಒಂದು ಅಂಚೆ ಚೀಟಿಯೊಂದಿಗೆ ಅಥವಾ ಒಂದು ಅಂಚೆಯ ವೆಚ್ಚದ-ಮಾಪಕದ ಮುದ್ರೆಯೊಂದಿಗೆ ಟಪಾಲು ಮೂಲಕ ಕಳಿಸಲ್ಪಟ್ಟಿದ್ದರೂ ಸಹ, ಪೋಸ್ಟ್‌ನೆಟ್‌ ಬಾರ್‌‌ ಸಂಕೇತವು ಹಾಜರಿದೆ ಎಂಬುದನ್ನು ಸೂಚಿಸಲು FIM A ಎಂಬ ಹೆಸರಿನ ಒಂದು FIM ಸಂಕೇತವನ್ನು ಅವು ವಿಶಿಷ್ಟವಾಗಿ ಹೊತ್ತೊಯ್ಯುತ್ತವೆ. FIM D ಬಾರ್‌‌ಸಂಕೇತವು ಆನ್‌ಲೈನ್‌ ಅಂಚೆಯ ವೆಚ್ಚ ಮಾಪಕಗಳಿಂದ ಬಂದ ಕಂಪ್ಯೂಟರ್‌ನಿಂದ-ಸೃಷ್ಟಿಸಲ್ಪಟ್ಟ ಅಂಚೆಠಸ್ಸೆಗಳಿಗೆ ಸಂಬಂಧಿಸಿದಂತೆ ಬಳಸಲ್ಪಡುತ್ತದೆ.

ರಚನೆ ಮತ್ತು ಹಂಚಿಕೆ

[ಬದಲಾಯಿಸಿ]

ಬಗೆ/ಉಪಯೋಗದ ಆಧಾರದ ಮೇಲೆ

[ಬದಲಾಯಿಸಿ]

ನಾಲ್ಕು ಬಗೆಯ ZIP ಸಂಕೇತಗಳು ಅಸ್ತಿತ್ವದಲ್ಲಿವೆ. ಅವುಗಳೆಂದರೆ: ಅನನ್ಯ ಸಂಕೇತ (ಒಂದು ಏಕ ಉನ್ನತ-ಪ್ರಮಾಣದ ವಿಳಾಸಕ್ಕಾಗಿ ಮೀಸಲಿಟ್ಟಿರುವುದು), P.O.-ಪೆಟ್ಟಿಗೆಗೆ ಮಾತ್ರ ಮೀಸಲಾದ ಸಂಕೇತ (ಒಂದು ನಿರ್ದಿಷ್ಟ ಅಥವಾ ತಿಳಿದ ಸೌಕರ್ಯದಲ್ಲಿರುವ P.O. ಪೆಟ್ಟಿಗೆಗಳಿಗೆ ಸಂಬಂಧಿಸಿದಂತೆ ಮಾತ್ರವೇ ಇದನ್ನು ಬಳಸಲಾಗುತ್ತದೆ, ಬೇರಾವುದೇ ಬಗೆಯ ಬಟವಾಡೆ ಮಾಡುವಿಕೆಗೆ ಇದನ್ನು ಬಳಸಲಾಗುವುದಿಲ್ಲ), ಸೇನಾ ಸಂಕೇತ (U.S. ಸೇನೆಗೆ ಸಂಬಂಧಿಸಿದಂತಿರುವ ಟಪಾಲಿನ ಮಾರ್ಗಸೂಚನೆಗಾಗಿ ಬಳಸಲಾಗುತ್ತದೆ) ಹಾಗೂ ಪ್ರಮಾಣಕ ಸಂಕೇತ (ಇತರೆಲ್ಲಾ ZIP ಸಂಕೇತಗಳಿಗಾಗಿ ಬಳಸಲಾಗುತ್ತದೆ). ಅನನ್ಯ ZIP ಸಂಕೇತಗಳ ಉದಾಹರಣೆಗಳಾಗಿ, ಹೆಚ್ಚಿನ ಪ್ರಮಾಣಗಳಲ್ಲಿ ಟಪಾಲು ಸ್ವೀಕರಿಸುವ ನಿರ್ದಿಷ್ಟ ಸರ್ಕಾರೀ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ವ್ಯವಹಾರಗಳು ಅಥವಾ ಕಟ್ಟಡಗಳು ತಮ್ಮದೇ ಆದ ZIP ಸಂಕೇತಗಳನ್ನು ಹೊಂದಿದ್ದು, ಅವುಗಳ ವಿವರ ಹೀಗಿದೆ: ಕೊಲೊರೆಡೋದ ಪ್ಯೂಬ್ಲೊನಲ್ಲಿರುವ U.S. ಜನರಲ್‌ ಸರ್ವೀಸಸ್‌ ಅಡ್ಮಿನಿಸ್ಟ್ರೇಷನ್‌‌‌‌ನ (GSA)[] ಫೆಡರಲ್‌ ಸಿಟಿಜನ್‌ ಇನ್ಫರ್ಮೇಷನ್‌ ಸೆಂಟರ್‌‌‌‌ಗೆ ಸಂಬಂಧಿಸಿರುವ 81009 ಎಂಬ ZIP ಸಂಕೇತ; ಅಟ್ಲಾಂಟಾದಲ್ಲಿರುವ ಬೆಲ್‌ಸೌತ್‌‌‌ಗೆ ಸಂಬಂಧಿಸಿರುವ 30385 ಎಂಬ ZIP ಸಂಕೇತ; ಹಾಗೂ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನೌಕಾ ಅಕಾಡೆಮಿಯಲ್ಲಿರುವ ನೌಕಾಸೇನಾ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಲಯವಾದ ಬ್ಯಾಂಕ್ರಾಫ್ಟ್‌ ಹಾಲ್‌‌‌‌ಗೆ ಸಂಬಂಧಿಸಿರುವ 21412 ಎಂಬ ZIP ಸಂಕೇತ. 22313 ಎಂಬುದು P.O.-ಪೆಟ್ಟಿಗೆಗೆ-ಮಾತ್ರವೇ ಮೀಸಲಾಗಿರುವ ZIP ಸಂಕೇತದ ಒಂದು ಉದಾಹರಣೆಯಾಗಿದ್ದು, ವರ್ಜೀನಿಯಾದ ಅಲೆಕ್ಸಾಂಡ್ರಿಯಾದಲ್ಲಿನ ಮುಖ್ಯ ಅಂಚೆ ಕಚೇರಿಯಲ್ಲಿರುವ P.O. ಪೆಟ್ಟಿಗೆಗಳಿಗಾಗಿಯಷ್ಟೇ ಅಲ್ಲದೇ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸ್ವಾಮ್ಯದ ಸನ್ನದು ಹಾಗೂ ಸರಕುಮುದ್ರೆ ಕಚೇರಿಗೆ ಸಂಬಂಧಿಸಿದಂತೆ ಅದು ಬಳಸಲ್ಪಡುತ್ತದೆ. ಆ ಅಂಚೆ ಕಚೇರಿಯನ್ನು ಸುತ್ತುವರೆದಿರುವ ಪ್ರದೇಶದಲ್ಲಿ, ಮನೆಯ ಹಾಗೂ ವ್ಯವಹಾರದ ಟಪಾಲು ಬಟವಾಡೆಯ ವಿಳಾಸಗಳು ZIP ಸಂಕೇತ 22314ನ್ನು ಬಳಸುತ್ತವೆ, ಹೀಗಾಗಿ ಅದೊಂದು ಪ್ರಮಾಣಕ ZIP ಸಂಕೇತವಾಗಿದೆ. ನ್ಯೂಜರ್ಸಿಯ ಪ್ರಿನ್ಸ್‌ಟನ್‌‌‌ನಲ್ಲಿನ ZIP ಸಂಕೇತಗಳ ಹಂಚಿಕೆಯನ್ನು ಅವಲೋಕಿಸುವ ಮೂಲಕ, ಮೇಲಿನ ನಿದರ್ಶನವನ್ನು ಹೆಚ್ಚು ನಿಚ್ಚಳವಾಗಿಸಬಹುದು:

  • 08540 - ಪ್ರಮಾಣಕ ಸಂಕೇತ (ಬಹುಪಾಲು ಪ್ರಿನ್ಸ್‌ಟನ್‌ ಅಂಚೆಯ ಪ್ರದೇಶದಲ್ಲಿನ ಬಟವಾಡೆಗಳು)
  • 08541 - ಅನನ್ಯ ಸಂಕೇತ (ಶೈಕ್ಷಣಿಕ ಪರೀಕ್ಷಾ ಸೇವೆ)
  • 08542 - ಪ್ರಮಾಣಕ ಸಂಕೇತ (ಪ್ರಿನ್ಸ್‌ಟನ್ ಪ್ರಾಂತ್ಯದ ‌ಕೇಂದ್ರೀಯ ಪ್ರದೇಶದಲ್ಲಿನ ಬಟವಾಡೆಗಳು, ಹಾಗೂ ಕೆಲವೊಂದು PO ಪೆಟ್ಟಿಗೆಗಳು ಕೂಡಾ)
  • 08543 - PO ಪೆಟ್ಟಿಗೆಗೆ ಮಾತ್ರ ಮೀಸಲಾದ ಸಂಕೇತ (ಮುಖ್ಯ ಅಂಚೆ ಕಚೇರಿಯಲ್ಲಿನ PO ಪೆಟ್ಟಿಗೆಗಳು)
  • 08544 - ಅನನ್ಯ ಸಂಕೇತ (ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯ).

ಭೌಗೋಳಿಕ ಸ್ವರೂಪದ ಆಧಾರದ ಮೇಲೆ

[ಬದಲಾಯಿಸಿ]

ZIP ಸಂಕೇತಗಳಲ್ಲಿನ ಮೊದಲ ಅಂಕೆಯು U.S. ಸಂಸ್ಥಾನಗಳ ಒಂದು ನಿರ್ದಿಷ್ಟ ಸಮೂಹವನ್ನು ಪ್ರತಿನಿಧಿಸುತ್ತಿರುವಂತೆ, ಎರಡನೇ ಮತ್ತು ಮೂರನೇ ಅಂಕೆಗಳು ಆ ಸಮೂಹದಲ್ಲಿನ (ಅಥವಾ ಪ್ರಾಯಶಃ ಒಂದು ಬೃಹತ್‌ ನಗರದಲ್ಲಿನ) ಒಂದು ಪ್ರದೇಶವನ್ನು ಒಟ್ಟಾಗಿ ಪ್ರತಿನಿಧಿಸುತ್ತಿರುವಂತೆ ಮತ್ತು ನಾಲ್ಕನೇ ಹಾಗೂ ಐದನೇ ಅಂಕೆಗಳು ಆ ಪ್ರದೇಶದೊಳಗಡೆ ಇರುವ ಬಟವಾಡೆ ಮಾಡುವ ವಿಳಾಸಗಳ ಒಂದು ಸಮೂಹವನ್ನು ಪ್ರತಿನಿಧಿಸುತ್ತಿರುವಂತೆ ZIP ಸಂಕೇತಗಳಲ್ಲಿ ಸಂಖ್ಯೆಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಪ್ರದೇಶವೊಂದರಲ್ಲಿನ ಒಂದು ಮುಖ್ಯ ಪಟ್ಟಣವು (ಒಂದು ವೇಳೆ ಅನ್ವಯಿಸಿದರೆ) ಆ ಪ್ರದೇಶಕ್ಕೆ ಸಂಬಂಧಿಸಿದ ಮೊದಲ ZIP ಸಂಕೇತಗಳನ್ನು ಅನೇಕವೇಳೆ ಪಡೆಯುತ್ತದೆ; ಇದಾದ ನಂತರ, ಸಂಖ್ಯಾತ್ಮಕ ಅನುಕ್ರಮವು ಅಕಾರಾದಿಯಾದ ಕ್ರಮವನ್ನು ಅನೇಕವೇಳೆ ಅನುಸರಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ಏಕೆಂದರೆ, ಸಮರ್ಥ ಅಂಚೆಯ ಬಟವಾಡೆಯ ಆಶಯವನ್ನಿಟ್ಟುಕೊಂಡು ZIP ಸಂಕೇತಗಳನ್ನು ಬಳಸಲಾಗುತ್ತಿರುವುದರಿಂದ, ZIP ಸಂಕೇತವೊಂದು ಸಂಸ್ಥಾನದ ಎಲ್ಲೆಗೆರೆಗಳನ್ನು ಅಡ್ಡಹಾಯುವ ಅಸಾಮಾನ್ಯ ನಿದರ್ಶನಗಳು ಕಂಡುಬಂದಿವೆ. ಅಂದರೆ, ಅನೇಕ ಸಂಸ್ಥಾನಗಳವರೆಗೆ ಅಥವಾ ಒಂದು ಸಂಸ್ಥಾನದ ದೂರದ ಪ್ರದೇಶಗಳವರೆಗೆ ವ್ಯಾಪಿಸಿರುವ ಒಂದು ಸೇನಾ ಸೌಕರ್ಯಕ್ಕೆ, ಒಂದು ಪಕ್ಕದ ಸಂಸ್ಥಾನದಿಂದ ಅತ್ಯಂತ ಸುಲಭವಾಗಿ ಸೇವೆಯನ್ನು ಒದಗಿಸುವುದು ಸಾಧ್ಯವಿದೆ.[example needed] ಸಾಮಾನ್ಯವಾಗಿ, ಪ್ರದೇಶವೊಂದಕ್ಕೆ ಸಂಬಂಧಿಸಿದ ಟಪಾಲು ವಿಂಗಡಿಸುವ ಮತ್ತು ವಿತರಣಾ ಕೇಂದ್ರವಾದ ಒಂದು ವಿಭಾಗೀಯ ಕೇಂದ್ರದ ಸೌಲಭ್ಯವನ್ನು ಮೊದಲ ಮೂರು ಅಂಕೆಗಳು ನಿರ್ದಿಷ್ಟವಾಗಿ ಸೂಚಿಸುತ್ತವೆ. ವಿಭಾಗೀಯ ಕೇಂದ್ರದ ಸೌಲಭ್ಯವೊಂದು ತನಗೆ ನಿಗದಿಮಾಡಲಾಗಿರುವ ಒಂದಕ್ಕಿಂತ ಹೆಚ್ಚು ಮೂರು-ಅಂಕೆಯ ಸಂಕೇತವನ್ನು ಹೊಂದಬಹುದಾಗಿದೆ. ಉದಾಹರಣೆಗೆ, ಮೆರ್ರಿಫೀಲ್ಡ್‌ನಲ್ಲಿರುವ ಉತ್ತರದ ವರ್ಜೀನಿಯಾ ವಿಭಾಗೀಯ ಕೇಂದ್ರದ ಸೌಲಭ್ಯಕ್ಕೆ 220, 221, 222 ಮತ್ತು 223 ಎಂಬ ಸಂಕೇತಗಳನ್ನು ನಿಗಡಿಪಡಿಸಲಾಗಿದೆ. ಕೆಲವೊಂದು ನಿದರ್ಶನಗಳಲ್ಲಿ, ವಿಭಾಗೀಯ ಕೇಂದ್ರದ ಸೌಲಭ್ಯವೊಂದು ಪಕ್ಕದ ಸಂಸ್ಥಾನವೊಂದರಲ್ಲಿನ ಒಂದು ಪ್ರದೇಶಕ್ಕೆ ತನ್ನ ಸೇವೆಯನ್ನು ವಿಸ್ತರಿಸಬೇಕಾಗಿ ಬರಬಹುದು; ಆ ಪ್ರದೇಶದಲ್ಲಿ ಒಂದು ಕೇಂದ್ರಕ್ಕೆ ಸಂಬಂಧಿಸಿದಂತೆ ಸೂಕ್ತವಾದ ತಾಣವೊಂದರ ಕೊರತೆಯಿರುವುದು ಇದರ ಹಿಂದಿನ ಸಾಮಾನ್ಯ ಕಾರಣವಾಗಿರುತ್ತದೆ. ಉದಾಹರಣೆಗೆ, ಓಕ್ಲಹಾಮಾದಲ್ಲಿರುವ 739ನ್ನು ಕನ್ಸಾಸ್‌ನ ಲಿಬರಲ್‌‌‌ಗೆ ನಿಗದಿಪಡಿಸಲಾಗಿದೆ; ಅರಿಝೋನಾದಲ್ಲಿನ 865ನ್ನು ನ್ಯೂ ಮೆಕ್ಸಿಕೋದ ಗ್ಯಾಲಪ್‌‌‌ಗೆ ನಿಗದಿಪಡಿಸಲಾಗಿದೆ; ಮತ್ತು ಕ್ಯಾಲಿಫೋರ್ನಿಯಾದಲ್ಲಿನ 961ನ್ನು ನೆವಡಾದ ರೆನೋಗೆ ನಿಗದಿಪಡಿಸಲಾಗಿದೆ. ಭೌಗೋಳಿಕವಾಗಿ ಹೇಳುವುದಾದರೆ, ಅತ್ಯಂತ ಕೆಳಗಿನ ZIP ಸಂಕೇತಗಳ ಪೈಕಿ ಅನೇಕವು ನ್ಯೂ ಇಂಗ್ಲಂಡ್‌ ಪ್ರದೇಶದಲ್ಲಿವೆ; ಅವು '0'ಯೊಂದಿಗೆ ಪ್ರಾರಂಭವಾಗುವುದೇ ಇದಕ್ಕೆ ಕಾರಣ. '0' ಪ್ರದೇಶದಲ್ಲಿ ಈ ಮುಂದಿನ ಪ್ರದೇಶಗಳೂ ಸೇರಿಕೊಂಡಿವೆ: ನ್ಯೂಜರ್ಸಿ ('0' ಪ್ರದೇಶದ ಉಳಿದ ಭಾಗದೊಂದಿಗೆ ಮಗ್ಗುಲಿನಲ್ಲಿಲ್ಲದ ಪ್ರದೇಶ), ಪೂರ್ಟೊ ರೊಕೋ, U.S. ವರ್ಜಿನ್‌ ಐಲೆಂಡ್ಸ್‌ ಮತ್ತು ಯುರೋಪ್‌, ಆಫ್ರಿಕಾ, ನೈಋತ್ಯ ಏಷ್ಯಾದಲ್ಲಿ ಹಾಗೂ ಆ ಭೂಪ್ರದೇಶಗಳಿಗೆ ಹೊಂದಿಕೊಂಡಂತಿರುವ ಜಲಭಾಗಗಳಲ್ಲಿ ಮೂಲವನ್ನು ಹೊಂದಿರುವ ವಿದೇಶದ ಹಡಗುಗಳಲ್ಲಿ ನೆಲೆಗೊಂಡಿರುವ ಸಿಬ್ಬಂದಿಗೆ ಸಂಬಂಧಿಸಿದ APO/FPO ಸೇನಾ ವಿಳಾಸಗಳು; APO/FPO ವಿಳಾಸಗಳು U.S. ರಾಜತಾಂತ್ರಿಕ ಮತ್ತು ದೂತಾವಾಸದ ಸೌಕರ್ಯಗಳಿಂದಲೂ ಬಳಸಲ್ಪಡುತ್ತಿವೆ. ಅತ್ಯಂತ ಕೆಳಗಿನ ZIP ಸಂಕೇತವು ನ್ಯೂಯಾರ್ಕ್‌ನ ಹೋಲ್ಟ್ಸ್‌‌ವಿಲ್ಲೆಯಲ್ಲಿದೆ (00501 ಎಂಬ ಈ ಒಂದು ZIP ಸಂಕೇತವು, ಅಲ್ಲಿನ U.S. ಆಂತರಿಕ ಕಂದಾಯ ಸೇವಾ‌ ಕೇಂದ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಮೀಸಲಾಗಿದೆ). ಇತರ ಕೆಳಗಿನ ZIP ಸಂಕೇತಗಳಲ್ಲಿ ಇವು ಸೇರಿವೆ: ಪೂರ್ಟೊ ರೊಕೋದ ಅಡ್ಜಂಟಾಸ್‌‌‌ಗೆ ಸಂಬಂಧಿಸಿರುವ 00601; ಮ್ಯಾಸಚೂಸೆಟ್ಸ್‌‌ನ ಅಗಾವ್ಯಾಂಗೆ ಸಂಬಂಧಿಸಿರುವ 01001; ಮತ್ತು ಮ್ಯಾಸಚೂಸೆಟ್ಸ್‌‌ನ ಆಮ್‌ಹರ್ಸ್ಟ್‌‌‌‌ಗೆ ಸಂಬಂಧಿಸಿರುವ 01002. 2001ನೇ ಇಸವಿಯವರೆಗೂ 00501ಕ್ಕಿಂತ ಕೆಳಗಿರುವ ಆರು ZIP ಸಂಕೇತಗಳಿದ್ದು, ಅವು 00210ರಿಂದ 00215ರವರೆಗಿನ (ನ್ಯೂಹ್ಯಾಂಪ್‌ಷೈರ್‌ನ ಪೋರ್ಟ್ಸ್‌ಮೌತ್‌‌‌‌ನಲ್ಲಿ ನೆಲೆಗೊಂಡಿರುವ) ಸಂಖ್ಯೆಗಳನ್ನು ಹೊಂದಿದ್ದವು ಮತ್ತು U.S.ಗೆ ಸೇರದ ನಾಗರಿಕರಿಂದ ಅರ್ಜಿಗಳನ್ನು ಸ್ವೀಕರಿಸಲು ಇರುವ ಬಹುರೂಪತೆಯ ವಲಸೆಗಾರ ವೀಸಾ ಕಾರ್ಯಸೂಚಿಯಿಂದ ಅವು ಬಳಸಲ್ಪಡುತ್ತಿದ್ದವು.[ಸೂಕ್ತ ಉಲ್ಲೇಖನ ಬೇಕು] ಈ ಸಂಖ್ಯೆಗಳು ದಕ್ಷಿಣದ ಕಡೆಗೆ ಹೊರಟು ಪೂರ್ವ ಕರಾವಳಿಯ ಉದ್ದಕ್ಕೂ ಸಾಗುತ್ತಾ ಹೆಚ್ಚಾಗುತ್ತಾ ಹೋಗುತ್ತವೆ. ಅದರ ನಿದರ್ಶನ ಹೀಗಿದೆ: 02115 (ಬಾಸ್ಟನ್‌), 10001 (ನ್ಯೂಯಾರ್ಕ್‌ ನಗರ), 19103 (ಫಿಲಡೆಲ್ಫಿಯಾ), 20008 (ವಾಷಿಂಗ್ಟನ್‌, D.C.), 30303 (ಅಟ್ಲಾಂಟಾ) ಮತ್ತು 33130 (ಮಿಯಾಮಿ) (ಇವು ಕೇವಲ ಉದಾಹರಣೆಗಳಾಗಿವೆ, ಏಕೆಂದರೆ ಈ ನಗರಗಳ ಪೈಕಿ ಪ್ರತಿಯೊಂದೂ ಅದೇ ವ್ಯಾಪ್ತಿಯಲ್ಲಿ ಹಲವಾರು ZIP ಸಂಕೇತಗಳನ್ನು ಹೊಂದಿವೆ). ಅಲ್ಲಿಂದ, ಆ ಸಂಖ್ಯೆಗಳು ಹೆಚ್ಚಾಗುತ್ತಾ ಪಶ್ಚಿಮದ ಕಡೆಗೆ ಮತ್ತು ಮಿಸ್ಸಿಸ್ಸಿಪ್ಪಿ ನದಿಯ ಉತ್ತರದ ಕಡೆಗಿನ ಪೂರ್ವಕ್ಕೆ, ಮಿಸ್ಸಿಸ್ಸಿಪ್ಪಿ ನದಿಯ ದಕ್ಷಿಣದ ಕಡೆಗಿನ ಪಶ್ಚಿಮಕ್ಕೆ, ಮತ್ತು ಪಶ್ಚಿಮ ಕರಾವಳಿಯ ಮೇಲೆ ಉತ್ತರದ ಕಡೆಗೆ ಸಾಗುತ್ತವೆ. ಉದಾಹರಣೆಗೆ, 40202 ಎಂಬುದು ಲೂಯಿಸ್‌ವಿಲ್ಲೆಯಲ್ಲಿದೆ, 50309 ಡೆಸ್‌ ಮೋಯಿನ್ಸ್‌‌‌ನಲ್ಲಿದೆ, 60601 ಚಿಕಾಗೊದಲ್ಲಿದೆ, 77063 ಹೂಸ್ಟನ್‌‌‌‌ನಲ್ಲಿದೆ, 80202 ಡೆನ್ವರ್‌‌ನಲ್ಲಿದೆ, 94111 ಸ್ಯಾನ್‌ ಫ್ರಾನ್ಸಿಸ್ಕೊನಲ್ಲಿದೆ, 98101 ಸಿಯಾಟಲ್‌‌‌ನಲ್ಲಿದೆ, ಮತ್ತು 99950 in ಅಲಾಸ್ಕಾದ ಕೆಟ್‌ಚಿಕಾನ್‌‌‌‌ನಲ್ಲಿದೆ (ಇದು ಅತ್ಯುನ್ನತ ZIP ಸಂಕೇತವಾಗಿದೆ).

ZIP ಸಂಕೇತದ ಮೊದಲ ಅಂಕೆಯನ್ನು ಈ ಕೆಳಕಂಡಂತೆ ಹಂಚಿಕೆ ಮಾಡಲಾಗಿದೆ:

  • 0 = ಕನೆಕ್ಟಿಕಟ್‌ (CT), ಮ್ಯಾಸಚೂಸೆಟ್ಸ್‌‌ (MA), ಮೈನೆ (ME), ನ್ಯೂಹ್ಯಾಂಪ್‌ಷೈರ್‌ (NH), ನ್ಯೂಜರ್ಸಿ (NJ), ಪೂರ್ಟೊ ರೊಕೋ (PR), ರೋಡ್‌ ಐಲೆಂಡ್‌ (RI), ವೆರ್ಮಾಂಟ್‌ (VT), ವರ್ಜಿನ್‌ ಐಲೆಂಡ್ಸ್‌ (VI), ಆರ್ಮಿ ಪೋಸ್ಟ್‌ ಆಫೀಸ್‌ ಯುರೋಪ್‌ (AE), ಫ್ಲೀಟ್‌ ಪೋಸ್ಟ್‌ ಆಫೀಸ್‌ ಯುರೋಪ್‌ (AE)
  • 1 = ಡೆಲಾವೇರ್‌‌ (DE), ನ್ಯೂಯಾರ್ಕ್‌ (NY), ಪೆನ್ಸಿಲ್ವೇನಿಯಾ (PA)
  • 2 = ಡಿಸ್ಟ್ರಿಕ್ಟ್‌ ಆಫ್‌ ಕೊಲಂಬಿಯಾ (DC), ಮೇರಿಲ್ಯಾಂಡ್‌ (MD), ನಾರ್ತ್‌ ಕರೊಲಿನಾ (NC), ಸೌತ್‌ ಕರೊಲಿನಾ (SC), ವರ್ಜೀನಿಯಾ (VA), ವೆಸ್ಟ್‌ ವರ್ಜೀನಿಯಾ (WV)
  • 3 = ಅಲಬಾಮಾ (AL), ಫ್ಲೋರಿಡಾ (FL), ಜಾರ್ಜಿಯಾ (GA), ಮಿಸ್ಸಿಸ್ಸಿಪ್ಪಿ (MS), ಟೆನೆಸ್ಸೀ (TN), ಆರ್ಮಿ ಪೋಸ್ಟ್‌ ಆಫೀಸ್‌ ಅಮೆರಿಕಾಸ್‌ (AA), ಫ್ಲೀಟ್‌ ಪೋಸ್ಟ್‌ ಆಫೀಸ್‌ ಅಮೆರಿಕಾಸ್‌ (AA)
  • 4 = ಇಂಡಿಯಾನಾ (IN), ಕೆಂಟುಕಿ (KY), ಮಿಚಿಗನ್‌ (MI), ಓಹಿಯೋ (OH)
  • 5 = ಐಯೊವಾ (IA), ಮಿನ್ನೆಸೊಟಾ (MN), ಮೊಂಟಾನಾ (MT), ನಾರ್ತ್‌ ಡಕೋಟಾ (ND), ಸೌತ್‌ ಡಕೋಟಾ (SD), ವಿಸ್ಕಾನ್ಸಿನ್‌ (WI)
  • 6 = ಇಲಿನಾಯ್ಸ್‌ (IL), ಕನ್ಸಾಸ್‌ (KS), ಮಿಸ್ಸೌರಿ (MO), ನೆಬ್ರಸ್ಕಾ (NE)
  • 7 = ಅರ್ಕನ್ಸಾಸ್‌ (AR), ಲೂಸಿಯಾನಾ (LA), ಓಕ್ಲಹಾಮಾ (OK), ಟೆಕ್ಸಾಸ್‌ (TX)
  • 8 = ಅರಿಝೋನಾ (AZ), ಕೊಲೊರೆಡೋ (CO), ಇದಾಹೊ (ID), ನ್ಯೂ ಮೆಕ್ಸಿಕೋ (NM), ನೆವಡಾ (NV), ಅಟಾಹ್‌ (UT), ವ್ಯೋಮಿಂಗ್‌‌ (WY)
  • 9 = ಅಲಾಸ್ಕಾ (AK), ಅಮೆರಿಕನ್‌ ಸಮೊಹಾ (AS), ಕ್ಯಾಲಿಫೋರ್ನಿಯಾ (CA), ಗುವಾಂ (GU), ಹವಾಯಿ (HI), ಮಾರ್ಷಲ್‌ ಐಲೆಂಡ್ಸ್‌ (MH), ಫೆಡರೇಟೆಡ್‌ ಸ್ಟೇಟ್ಸ್‌ ಆಫ್‌ ಮೈಕ್ರೊನೇಷ್ಯಾ (FM), ನಾರ್ದರ್ನ್‌ ಮರಿಯಾನಾ ಐಲೆಂಡ್ಸ್‌ (MP), ಓರೆಗಾಂವ್‌ (OR), ಪಲಾವು (PW), ವಾಷಿಂಗ್ಟನ್‌ (WA), ಆರ್ಮಿ ಪೋಸ್ಟ್‌ ಆಫೀಸ್‌ ಪೆಸಿಫಿಕ್‌ (AP), ಫ್ಲೀಟ್‌ ಪೋಸ್ಟ್‌ ಆಫೀಸ್‌ ಪೆಸಿಫಿಕ್‌ (AP)

ಮುಂದಿನ ಎರಡು ಅಂಕೆಗಳು ವಿಭಾಗೀಯ ಕೇಂದ್ರದ ಸೌಲಭ್ಯವನ್ನು ಪ್ರತಿನಿಧಿಸುತ್ತವೆ (ಉದಾಹರಣೆಗೆ 479xx = ಟಿಪ್ಪೆಕೆನೋವ್‌ ಜಿಲ್ಲೆ, IN), ಹಾಗೂ ನಾಲ್ಕನೇ ಮತ್ತು ಐದನೇ ಅಂಕೆಗಳು ನಗರದ ಪ್ರದೇಶವನ್ನು ಪ್ರತಿನಿಧಿಸುತ್ತವೆ (ಒಂದು ವೇಳೆ ಒಂದು ಮಹಾನಗರದ ಪ್ರದೇಶದಲ್ಲಿದ್ದರೆ), ಅಥವಾ ಒಂದು ಹಳ್ಳಿ/ಪಟ್ಟಣವನ್ನು (ಮೆಟ್ರೋ ಪ್ರದೇಶಗಳ ಹೊರಗಡೆಯದು) ಪ್ರತಿನಿಧಿಸುತ್ತವೆ: 47906 (4=ಇಂಡಿಯಾನಾ, 79=ಟಿಪ್ಪೆಕೆನೋವ್‌ ಜಿಲ್ಲೆ, 06=ಪರ್ಡ್ಯೂ ವಿಶ್ವವಿದ್ಯಾಲಯ ಪ್ರದೇಶ). ಒಂದು ವಿಭಾಗೀಯ ಕೇಂದ್ರದ ಸೌಲಭ್ಯದ ಪ್ರದೇಶವು ಸಂಸ್ಥಾನದ ಎಲ್ಲೆಗಳನ್ನು ದಾಟಿದಾಗ, ಆ ಸೌಕರ್ಯಕ್ಕೆ ಅದು ಸೇವೆ ಸಲ್ಲಿಸುವ ಸಂಸ್ಥಾನಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾದ ಮೂರು-ಅಂಕೆಯ ಪೂರ್ವಪ್ರತ್ಯಯಗಳನ್ನು ನಿಗದಿಗೊಳಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಬಹುತೇಕ ZIP ಸಂಕೇತಗಳ ಭೌಗೋಳಿಕ ವ್ಯುತ್ಪತ್ತಿಯ ಹೊರತಾಗಿಯೂ, ಈ ಸಂಕೇತಗಳು ಸ್ವತಃ ಭೌಗೋಳಿಕ ಪ್ರದೇಶಗಳನ್ನು ಪ್ರತಿನಿಧಿಸುವುದಿಲ್ಲ; ವಿಳಾಸ ಸಮೂಹಗಳು ಅಥವಾ ಬಟವಾಡೆ ಮಾಡುವ ಮಾರ್ಗಗಳಿಗೆ ಅವು ಸಾಮಾನ್ಯವಾಗಿ ಸಂಬಂಧಪಡುತ್ತವೆ. ಇದರ ಪರಿಣಾಮವಾಗಿ, ZIP ಸಂಕೇತದ "ಪ್ರದೇಶಗಳು" ಒಂದನ್ನೊಂದು ಅತಿಕ್ರಮಿಸಲು, ಪರಸ್ಪರರ ಉಪವರ್ಗಗಳಾಗಿ ಮಾರ್ಪಡಲು, ಅಥವಾ ಯಾವುದೇ ಭೌಗೋಳಿಕ ಪ್ರದೇಶವಿಲ್ಲದೆಯೇ ಕೃತಕ ರಚನೆಗಳಾಗಿ ಉಳಿಯಲು ಸಾಧ್ಯವಾಗುತ್ತದೆ (ಅಂದರೆ, ನೌಕಾಪಡೆಗೆ ಇರುವ ಟಪಾಲಿಗೆ ಸಂಬಂಧಿಸಿದ 095 ZIP ಸಂಕೇತದಂಥದು; ಇದು ಭೌಗೋಳಿಕವಾಗಿ ನಿಶ್ಚಿತವಾಗಿಲ್ಲ). ಅದೇ ರೀತಿಯಲ್ಲಿ, ಕ್ರಮಬದ್ಧವಾದ ಅಥವಾ ನಿಯತವಾದ ಅಂಚೆಯ ಮಾರ್ಗಗಳನ್ನು ಹೊಂದಿಲ್ಲದ ಪ್ರದೇಶಗಳಲ್ಲಿ (ಗ್ರಾಮೀಣ ಮಾರ್ಗದ ಪ್ರದೇಶಗಳು) ಅಥವಾ ಟಪಾಲು ಬಟವಾಡೆಯಿಲ್ಲದ ಪ್ರದೇಶಗಳಲ್ಲಿ (ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ), ZIP ಸಂಕೇತಗಳು ನಿಗದಿಪಡಿಸಲ್ಪಟ್ಟಿರುವುದಿಲ್ಲ ಅಥವಾ ನಿಬಿಡವಾಗಿಲ್ಲದ ಬಟವಾಡೆ ಮಾರ್ಗಗಳ ಮೇಲೆ ಅವು ಆಧರಿಸಿರುತ್ತವೆ; ಆದ್ದರಿಂದ ZIP ಸಂಕೇತ ಪ್ರದೇಶಗಳ ನಡುವಿನ ಎಲ್ಲೆಗೆರೆಯು ನಿರ್ಣಯಿಸದಿರುವ ಅಂಶವಾಗಿ ಉಳಿದಿದೆ. ಉದಾಹರಣೆಗೆ, ರಾಜಧಾನಿಯಲ್ಲಿ ಹಾಗೂ ಸುತ್ತಮುತ್ತಲಿರುವ U.S. ಸರ್ಕಾರಿ ಸಂಸ್ಥೆಗಳಿಗೆ 20200ರಿಂದ ಪ್ರಾರಂಭವಾಗಿ 20599ರವರೆಗಿರುವ ZIP ಸಂಕೇತಗಳು ನಿಗದಿಗೊಳಿಸಲ್ಪಟ್ಟಿವೆ. ಒಂದು ವೇಳೆ ಇವು ಸ್ವತಃ ವಾಷಿಂಗ್ಟನ್‌ನಲ್ಲಿ ನೆಲೆಗೊಂಡಿಲ್ಲದಿದ್ದರೂ, ಇವು ವಾಷಿಂಗ್ಟನ್‌, D.C.ಯ ZIP ಸಂಕೇತಗಳಾಗಿವೆ. ಶ್ವೇತ ಭವನವು ಸ್ವತಃ ZIP ಸಂಕೇತ 20006ರಲ್ಲಿ ನೆಲೆಗೊಂಡಿದ್ದರೂ, ಇದು ZIP ಸಂಕೇತ 20500ನ್ನು ಹೊಂದಿದೆ. ಪರಮಾಣು ನಿಯಂತ್ರಣಾ ಆಯೋಗವು ಮೇರಿಲ್ಯಾಂಡ್‌ನ ರಾಕ್‌ವಿಲ್ಲೆ‌ಯಲ್ಲಿ, ZIP ಸಂಕೇತ 20852ರಲ್ಲಿ ನೆಲೆಗೊಂಡಿದ್ದರೂ ಸಹ, ಅಂಚೆಯ ಸೇವೆಯಿಂದ ಅದಕ್ಕೆ "ವಾಷಿಂಗ್ಟನ್‌, DC 20555" ಎಂಬ ವಿಳಾಸವು ನಿಗದಿಗೊಳಿಸಲ್ಪಟ್ಟಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಸ್ವಾಮ್ಯದ ಸನ್ನದು ಹಾಗೂ ಸರಕುಮುದ್ರೆ ಕಚೇರಿಯು ವರ್ಜೀನಿಯಾದ ಕ್ರಿಸ್ಟಲ್‌ ಸಿಟಿಯಲ್ಲಿ ZIP ಸಂಕೇತ 22202ರಲ್ಲಿ ನೆಲೆಗೊಳ್ಳಬೇಕಿತ್ತಾದರೂ, ಅಂಚೆಯ ಸೇವೆಯಿಂದ ಅದಕ್ಕೆ "ವಾಷಿಂಗ್ಟನ್‌, DC 20231" ಎಂಬ ವಿಳಾಸವು ನಿಗದಿಗೊಳಿಸಲ್ಪಟ್ಟಿದೆ; ಆದಾಗ್ಯೂ, ವರ್ಜೀನಿಯಾದ ಅಲೆಕ್ಸಾಂಡ್ರಿಯಾಕ್ಕೆ ಇದರ ಬದಲಾವಣೆಯಾದ್ದರಿಂದ, ZIP+4 ಸಂಕೇತ 22313-1450ನ್ನು ಇದು ಬಳಸುತ್ತದೆ.[] ಅದೇ ರೀತಿಯಲ್ಲಿ, ಸಂಯುಕ್ತ ಕೂಟದ ರೀತಿಯಲ್ಲಿ-ವಿಶೇಷಾಧಿಕಾರ ನೀಡಲ್ಪಟ್ಟ ಒಂದು ಸ್ವತಂತ್ರ ಪ್ರಾಧಿಕಾರವಾದ ಮಹಾನಗರ ವಾಷಿಂಗ್ಟನ್‌ನ ವಿಮಾನನಿಲ್ದಾಣಗಳ ಪ್ರಾಧಿಕಾರಕ್ಕೆ ಸಂಬಂಧಿಸಿದ ZIP ಸಂಕೇತವು 20001-6000 ಆಗಿದ್ದರೂ, ಪ್ರಾಧಿಕಾರದ ಕಚೇರಿಯ ಭೌತಿಕ ವಿಳಾಸವು "1 ಏವಿಯೇಷನ್‌ ಸರ್ಕಲ್‌"[] ಎಂದಾಗಿದ್ದು, ಅದು ವರ್ಜೀನಿಯಾದ ಅರ್ಲಿಂಗ್ಟನ್‌‌‌ನಲ್ಲಿದೆ.[ಸೂಕ್ತ ಉಲ್ಲೇಖನ ಬೇಕು] ಅಪರೂಪಕ್ಕೆಂಬಂತೆ, ತಾಣವೊಂದಕ್ಕೆ ಒಂದು ZIP ಸಂಕೇತವನ್ನು ನಿಗದಿಪಡಿಸಲಾಗಿದ್ದು, ಅದು ಸಂಸ್ಥಾನದ ಉಳಿದ ತಾಣಗಳಿಗೆ ಹೊಂದಿಕೊಳ್ಳುವುದಿಲ್ಲ; ಇದನ್ನು ಬೇರೆಯ ರೀತಿಯಲ್ಲಿ ಹೇಳುವುದಾದರೆ, ಒಂದು ZIP ಸಂಕೇತವು ಸಂಸ್ಥಾನದ ಎಲ್ಲೆಗಳನ್ನು ದಾಟಬಹುದು. ಸಾಮಾನ್ಯವಾಗಿ, ಸದರಿ ತಾಣವು ಎಷ್ಟೊಂದು ಪ್ರತ್ಯೇಕಿಸಲ್ಪಟ್ಟಿರುತ್ತದೆಯೆಂದರೆ, ಮತ್ತೊಂದು ಸಂಸ್ಥಾನದಲ್ಲಿನ ಒಂದು ವಿಭಾಗೀಯ ಕೇಂದ್ರದಿಂದ ಅತ್ಯಂತ ಅನುಕೂಲಕರವಾಗಿ ಅದಕ್ಕೆ ಸೇವೆ ಸಲ್ಲಿಸಬಹುದಾಗಿರುತ್ತದೆ. ಉದಾಹರಣೆಗಳು:

  • ನ್ಯೂಯಾರ್ಕ್‌ನ ಫಿಷರ್ಸ್‌ ಐಲೆಂಡ್, ZIP ಸಂಕೇತ 06390ಯನ್ನು ಹೊಂದಿದೆ ಮತ್ತು ಇದಕ್ಕೆ ಕನೆಕ್ಟಿಕಟ್‌ನಿಂದ ಸೇವೆ ದೊರೆಯುತ್ತದೆ — ಇತರ ಎಲ್ಲಾ ನ್ಯೂಯಾರ್ಕ್‌ ZIP ಸಂಕೇತಗಳು (IRSಗೆ ಸಂಬಂಧಿಸಿರುವ ಹೋಲ್ಟ್ಸ್‌‌ವಿಲ್ಲೆಯಲ್ಲಿ ಇರುವಂಥವನ್ನು ಹೊರತುಪಡಿಸಿ) "1"ರಿಂದ ಪ್ರಾರಂಭವಾಗುತ್ತವೆ.
  • ಟೆಕ್ಸಾಸ್‌ನ ಕೆಲವೊಂದು ZIP ಸಂಕೇತಗಳು (ಅತ್ಯಂತ ಗಮನಾರ್ಹವಾಗಿ ಕೆಲವೊಂದು ಎಲ್‌ ಪಾಸೊ ZIP ಸಂಕೇತಗಳು) ನ್ಯೂ ಮೆಕ್ಸಿಕೋದಿಂದ ಸೇವೆಯನ್ನು ಪಡೆಯುತ್ತವೆ ಮತ್ತು ಹೀಗಾಗಿ "799"ರ ಬದಲಿಗೆ "885"ರಿಂದ ಪ್ರಾರಂಭವಾಗುವ ಸಂಕೇತಗಳನ್ನು ಅವು ಹೊಂದಿವೆ (870-884 NMನೊಂದಿಗೆ ಸಂಖ್ಯಾತ್ಮಕವಾಗಿ ತರುವಾಯದಲ್ಲಿ ಬರುತ್ತವೆ).
  • ಕೊಲಂಬಿಯಾ ಜಿಲ್ಲೆಯಿಂದ ಹಿಂತಿರುಗಿಸಲ್ಪಟ್ಟ ಸರ್ಕಾರಿ ಭಾಂಗಿಗಳು (ಪಾರ್ಸೆಲ್‌ಗಳು) "569"ರೊಂದಿಗೆ ಶುರುವಾಗುವ ZIP ಸಂಕೇತಗಳಿಗೆ ಕಳಿಸಲ್ಪಡುತ್ತವೆ, ಇದರಿಂದಾಗಿ ಹಿಂತಿರುಗಿಸಲ್ಪಟ್ಟ ಭಾಂಗಿಗಳು ಒಂದು ದೂರದ ಸೌಕರ್ಯದಲ್ಲಿ ಭದ್ರತಾ ತಪಾಸಣೆಗೆ ಒಳಗಾಗುತ್ತವೆ 2001ರ ಆಂಥ್ರಾಕ್ಸ್‌ ದಾಳಿಗಳ ನಂತರ ಇದು ಜಾರಿಗೆ ಬಂತು).
  • ಬುಲ್‌ ಷೊಲಾಸ್‌ ಸರೋವರದ ಉತ್ತರಕ್ಕಿರುವ ಕೆಲವೊಂದು ಅರ್ಕನ್ಸಾಸ್‌ ರಸ್ತೆಗಳನ್ನು ಮಿಸ್ಸೌರಿಯ ಪ್ರೋಟೆಮ್‌‌‌ನ ಬಟವಾಡೆ ಘಟಕದಿಂದ (ZIP ಸಂಕೇತ 65733) ಉತ್ತಮವಾಗಿ ಸಂಪರ್ಕಿಸಲು ಸಾಧ್ಯವಿದೆ.
  • ಫೋರ್ಟ್‌ ಕ್ಯಾಂಪ್‌ಬೆಲ್ (ZIP ಸಂಕೇತ 42223), ಪ್ರಧಾನವಾಗಿ ಕೆಂಟುಕಿಯಲ್ಲಿದ್ದು, ಟೆನೆಸ್ಸೀಯಲ್ಲಿರುವ ಕೆಲವೊಂದು ರಸ್ತೆಗಳನ್ನೂ ಹೊಂದಿದೆ.
  • ಸಿನ್ಸಿನ್ನಾಟಿ/ಉತ್ತರದ ಕೆಂಟುಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಕೆಂಟುಕಿಯ ಹೆಬ್ರಾನ್‌‌‌ನಲ್ಲಿರುವ ಸಿನ್ಸಿನ್ನಾಟಿಗೆ ಸೇರಿದ ಓಹಿಯೋ ನದಿಗೆ ಅಡ್ಡಲಾಗಿ ನೆಲೆಗೊಂಡಿದ್ದರೂ ಸಹ ZIP ಸಂಕೇತ 45275ವನ್ನು ಬಳಸುತ್ತದೆ.

ನಗರಗಳಿಗೆ ಕೇವಲ ವಿರಳವಾಗಿ ಬಂಧಿಸಲ್ಪಟ್ಟಿರುವ ZIP ಸಂಕೇತಗಳು

[ಬದಲಾಯಿಸಿ]

ಒಂದೇ ಸಾಲಿನಲ್ಲಿ ಒಂದು ZIP ಸಂಕೇತದ ವಿಳಾಸ ಮತ್ತು ನಗರದ ಹೆಸರನ್ನು ಬರೆದ ಮಾತ್ರಕ್ಕೆ, ಆ ವಿಳಾಸವು ಅದೇ ನಗರದೊಳಗಿದೆ ಎಂಬುದನ್ನು ಅದು ಅವಶ್ಯವಾಗಿ ಅರ್ಥೈಸುವುದಿಲ್ಲ. ಅಂಚೆಯ ಸೇವೆಯು ಪ್ರತಿಯೊಂದು ZIP ಸಂಕೇತಕ್ಕೆ ಸಂಬಂಧಿಸಿದಂತೆ ಒಂದು ಪೂರ್ವನಿಶ್ಚಿತ ಏಕ ಸ್ಥಳನಾಮವನ್ನು ನಿಗದಿಪಡಿಸುತ್ತದೆ. ಇದು ಒಂದು ವಾಸ್ತವಿಕವಾದ ಸಂಘಟಿತ ಪಟ್ಟಣ ಅಥವಾ ನಗರವಾಗಿರಬಹುದು, ಬೃಹತ್‌ ನಗರವೊಂದರ ಒಂದು ಉಪ-ಅಸ್ತಿತ್ವವಾಗಿರಬಹುದು ಅಥವಾ ಒಂದು ಸಂಘಟಿತವಾಗಿರದ, ಜನಗಣತಿಯಿಂದ-ನಿರ್ದಿಷ್ಟವಾಗಿ ಸೂಚಿಸಲ್ಪಟ್ಟ ಸ್ಥಳವಾಗಿರಬಹುದು. ಈ ಬಗೆಗಳ ಪೈಕಿಯ ಯಾವುದರದೇ ಹೆಚ್ಚುವರಿ ಸ್ಥಳನಾಮಗಳು ಕೂಡಾ, ಒಂದು ನಿರ್ದಿಷ್ಟ ZIP ಸಂಕೇತಕ್ಕೆ ಸಂಬಂಧಿಸಿದಂತೆ ಸ್ವೀಕಾರಾರ್ಹವಾಗಿ ಗುರುತಿಸಲ್ಪಟ್ಟಿದ್ದಾಗಿರಬಹುದು.

ಇಷ್ಟಾಗಿಯೂ ಇತರವು ಸ್ವೀಕಾರಾರ್ಹವಲ್ಲವೆಂದು ಭಾವಿಸಲ್ಪಟ್ಟಿವೆ, ಮತ್ತು ಒಂದು ವೇಳೆ ಅವನ್ನು ಬಳಸಿದ್ದೇ ಆದಲ್ಲಿ ಟಪಾಲು ಬಟವಾಡೆಯಲ್ಲಿನ ಒಂದು ವಿಳಂಬಕ್ಕೆ ಅವು ಕಾರಣವಾಗಬಹುದಾಗಿದೆ.

ಪೂರ್ವನಿಶ್ಚಿತ ಸ್ಥಳನಾಮಗಳು ವಿಶಿಷ್ಟವೆನಿಸುವಂತೆ ವಿಳಾಸವು ನೆಲೆಗೊಂಡಿರುವ ವಾಸ್ತವಿಕ ನಗರ ಅಥವಾ ಪಟ್ಟಣಗಳಾಗಿವೆ. ಆದಾಗ್ಯೂ, ZIP ಸಂಕೇತಗಳು ಪರಿಚಯಿಸಲ್ಪಟ್ಟಾಗಿನಿಂದ ಸಂಘಟಿತವಾಗಿರುವ ಅನೇಕ ನಗರಗಳಿಗೆ ಸಂಬಂಧಿಸಿದಂತೆ ವಾಸ್ತವಿಕವಾದ ನಗರದ ಹೆಸರು ಪೂರ್ವನಿಶ್ಚಿತ ಸ್ಥಳನಾಮವಾಗಿರುವುದಿಲ್ಲ. ಯಾವುದೇ ಸ್ವೀಕಾರಾರ್ಹ ಸ್ಥಳನಾಮಗಳಿಗೆ ಸಂಬಂಧವನ್ನು ಕಲ್ಪಿಸದೆಯೇ, ಒಂದು ZIP ಸಂಕೇತಕ್ಕೆ ಸಂಬಂಧಿಸಿದ ಪೂರ್ವನಿಶ್ಚಿತ ಸ್ಥಳನಾಮವನ್ನು ಅನೇಕ ದತ್ತಾಂಶ ಸಂಗ್ರಹಗಳು ಸ್ವಯಂಚಾಲಿತವಾಗಿ ನಿಗದಿಪಡಿಸುತ್ತವೆ. ಉದಾಹರಣೆಗೆ, ಕೊಲೊರೆಡೋದ ಸೆಂಟೆನ್ನಿಯಲ್‌ ಎಂಬುದು, ಔರೋರಾ, ಈಗಲ್‌ವುಡ್‌ ಅಥವಾ ಲಿಟ್ಲ್‌ಟನ್‌ ಎಂಬುದನ್ನು ತನ್ನ ಪೂರ್ವನಿಶ್ಚಿತ ಸ್ಥಳನಾಮಗಳಾಗಿ ನಿಗದಿಪಡಿಸಲ್ಪಟ್ಟಿರುವ ಏಳು ZIP ಸಂಕೇತಗಳ ಮಧ್ಯೆ ಹಂಚಲ್ಪಟ್ಟಿದೆ. ಹೀಗಾಗಿ, U.S. ಅಂಚೆಯ ಸೇವೆಯ ದೃಷ್ಟಿಕೋನದಿಂದ ಹೇಳುವುದಾದರೆ, ಸೆಂಟೆನ್ನಿಯಲ್‌ ನಗರವು ಅಸ್ತಿತ್ವಲ್ಲಿಲ್ಲ- ಅದು ಔರೋರಾ, ಈಗಲ್‌ವುಡ್‌ ಅಥವಾ ಲಿಟ್ಲ್‌ಟನ್‌ನ ಭಾಗವಾಗಿದೆ. ZIP-ಸಂಕೇತದ ನಿರ್ದೇಶಿಕೆಯಲ್ಲಿ, ಸೆಂಟೆನ್ನಿಯಲ್‌ ವಿಳಾಸಗಳು ಆ ಮೂರು ನಗರಗಳ ಅಡಿಯಲ್ಲಿ ಪಟ್ಟಿಮಾಡಲ್ಪಟ್ಟಿವೆ. ಮತ್ತು ಈ ಏಳು ZIP ಸಂಕೇತಗಳ ಪೈಕಿ ಯಾವುದಾದರೊಂದರ ಜೊತೆಯಲ್ಲಿ "ಸೆಂಟೆನ್ನಿಯಲ್‌"ನ್ನು ಬರೆಯುವುದು ಸ್ವೀಕಾರಾರ್ಹವಾಗಿರುವುದರಿಂದ, ಎಲ್ಲಿಯವರೆಗೆ "ಸೆಂಟೆನ್ನಿಯಲ್‌" ಹಂಚಿಕೊಳ್ಳಲ್ಪಟ್ಟಿರುವ ZIP ಸಂಕೇತಗಳ ಪೈಕಿ ಒಂದೆಂಬಂತೆ ಉಳಿದಿರುತ್ತದೋ ಅಲ್ಲಿಯವರೆಗೆ "ಸೆಂಟೆನ್ನಿಯಲ್‌"ನ್ನು ಔರೋರಾ, ಈಗಲ್‌ವುಡ್‌, ಅಥವಾ ಲಿಟ್ಲ್‌ಟನ್‌‌ನ್ನಲ್ಲಿ ವಾಸ್ತವವಾಗಿ ಇರುವ ಒಂದು ವಿಳಾಸದಲ್ಲಿ ಓರ್ವರು ಬರೆಯಬಹುದಾಗಿದೆ. ZIP-ಸಂಕೇತದ ಎಲ್ಲೆಗೆರೆಗಳು ಸ್ವೀಕಾರಾರ್ಹ ಸ್ಥಳನಾಮಗಳನ್ನು ಎರಡು ಅಥವಾ ಹೆಚ್ಚು ನಗರಗಳ ನಡುವೆ ವಿಭಜಿಸುವ ನಿದರ್ಶನಗಳಲ್ಲಿ, ಸೆಂಟೆನ್ನಿಯಲ್‌ನ ನಿದರ್ಶನದಲ್ಲಿರುವಂತೆ ಸ್ವೀಕಾರಾರ್ಹ ಸ್ಥಳನಾಮಗಳನ್ನು ಒಂದು ZIP ಸಂಕೇತಕ್ಕೆ ಅನೇಕವೇಳೆ ಸೇರ್ಪಡೆಮಾಡಲಾಗುತ್ತದೆ. ಆದಾಗ್ಯೂ, ಅನೇಕ ನಿದರ್ಶನಗಳಲ್ಲಿ, ZIP ಸಂಕೇತದಲ್ಲಿನ ಅನೇಕ ವಿಳಾಸಗಳು ಮತ್ತೊಂದು ನಗರದಲ್ಲಿದ್ದಾಗಲೂ ಸಹ ಕೇವಲ ಪೂರ್ವನಿಶ್ಚಿತ ಹೆಸರನ್ನು ಬಳಸಬಹುದಾಗಿದೆ. ಉದಾಹರಣೆಗೆ, ZIP ಸಂಕೇತ 85254ರಿಂದ ಸೇವೆಯನ್ನು ಪಡೆಯುತ್ತಿರುವ, ಅರಿಝೋನಾದ ಸ್ಕಾಟ್ಸ್‌ಡೇಲ್‌‌‌ ಎಂಬ ಸ್ಥಳನಾಮವು ನಿಗದಿಪಡಿಸಲ್ಪಟ್ಟಿರುವ ಸುಮಾರು 85%ನಷ್ಟು ಪ್ರದೇಶವು, ವಾಸ್ತವವಾಗಿ ನೆರೆಯ ಫೀನಿಕ್ಸ್‌ನ ನಗರದ-ವ್ಯಾಪ್ತಿಗಳ ಒಳಗಡೆಯಿದೆ. ಈ ಪ್ರದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಅಂಚೆ ಕಚೇರಿಯು ಸ್ಕಾಟ್ಸ್‌ಡೇಲ್‌ನಲ್ಲಿರುವುದೇ ಇದಕ್ಕೆ ಕಾರಣ. ಇದರಿಂದಾಗಿ, ಸದರಿ ZIP ಸಂಕೇತದ ವ್ಯಾಪ್ತಿಯ ಕೆಲವೊಂದು ನಿವಾಸಿಗಳು ವಾಸ್ತವವಾಗಿ ಫೀನಿಕ್ಸ್‌ನಲ್ಲಿ ವಾಸಿಸುತ್ತಿದ್ದರೂ ಸಹ, ತಾವು ಸ್ಕಾಟ್ಸ್‌ಡೇಲ್‌ನಲ್ಲಿ ವಾಸಿಸುತ್ತಿದ್ದೇವೆ ಎಂದು ಅವರು ಭಾವಿಸುವಂತಾಗಿದೆ. ಸ್ಕಾಟ್ಸ್‌ಡೇಲ್‌ ನಗರದ ಧನಾತ್ಮಕ ಮತ್ತು ಋಣಾತ್ಮಕ ಅಂಶಗಳನ್ನು ಪಟ್ಟಿಮಾಡಿರುವ ಸ್ಕಾಟ್ಸ್‌ಡೇಲ್‌ನ ಒಂದು ವೆಬ್‌ಸೈಟ್‌, 85254 ZIP ಸಂಕೇತವನ್ನು ಒಂದು ಧನಾತ್ಮಕ ಅಂಶವಾಗಿ ನಮೂದಿಸಿದೆ; ಏಕೆಂದರೆ, ಸ್ಕಾಟ್ಸ್‌ಡೇಲ್‌ ನಗರದ ಪರಿಮಿತಿಗಳಿಂದ ಹೊರಗಡೆ ನೆಲೆಗೊಂಡಿರುವ ವ್ಯವಹಾರದ ಅಸ್ತಿತ್ವಗಳಿಗೆ ಸಂಬಂಧಿಸಿದಂತೆ ಸ್ಕಾಟ್ಸ್‌ಡೇಲ್‌ ಹೆಸರು ಬಳಸಲ್ಪಡುತ್ತಿದೆ. ಇದರ ಪರಿಣಾಮವಾಗಿ, ಜನರು ಕೆಲವೊಮ್ಮೆ ತಮ್ಮದೇ ಆದ ನಗರಕ್ಕೆ ಬದಲಾಗಿ ಒಂದು ವಿಭಿನ್ನ ನಗರದ ಹೆಸರನ್ನು ಬಳಸಬೇಕಾಗುತ್ತದೆ. ಟೆಕ್ಸಾಸ್‌ನ ಮಿಸ್ಸೌರಿ ನಗರ ಇದಕ್ಕೊಂದು ಉದಾಹರಣೆಯಾಗಿದ್ದು, ಅದು ಹ್ಯಾರಿಸ್‌ ಮತ್ತು ಫೋರ್ಟ್‌ ಬೆಂಡ್‌ ಎಂಬ ಎರಡೂ ಜಿಲ್ಲೆಗಳಲ್ಲಿ ಬರುತ್ತದೆ ಹಾಗೂ ಅದು ಹೂಸ್ಟನ್‌‌‌ನ ಒಂದು ಉಪನಗರವಾಗಿದೆ. ಹ್ಯಾರಿಸ್‌ ಜಿಲ್ಲೆಯೊಳಗಡೆ ಬರುವ ಭಾಗವು ZIP ಸಂಕೇತ 77071ರೊಳಗೆ ಬರುತ್ತದೆ ಹಾಗೂ ಅದು ಮಿಸ್ಸೌರಿ ನಗರದ ಬದಲಿಗೆ ಹೂಸ್ಟನ್‌ ನಗರದ ಹೆಸರನ್ನು ಬಳಸಬೇಕಾಗುತ್ತದೆ. ಹೂಸ್ಟನ್‌ ನಗರದ ಒಂದು ಪುಟ್ಟ ಭಾಗವು ZIP ಸಂಕೇತ 77489ರಲ್ಲಿರುವ ಫೋರ್ಟ್‌ ಬೆಂಡ್‌ ಜಿಲ್ಲೆಯಲ್ಲಿದೆ ಮತ್ತು ಅಲ್ಲಿನ ನಿವಾಸಿಗಳು ಹೂಸ್ಟನ್‌ ನಗರದ ಪರಿಮಿತಿಗಳೊಳಗೆ ಇದ್ದಾರಾದರೂ, ತಮ್ಮ ವಿಳಾಸಕ್ಕೆ ಸಂಬಂಧಿಸಿದಂತೆ ಅವರು ಮಿಸ್ಸೌರಿ ನಗರವನ್ನು ತಮ್ಮ ನಗರವಾಗಿ ಬಳಸಬೇಕಾಗುತ್ತದೆ.

ಹೂಸ್ಟನ್‌ನಲ್ಲಿನ ಓರ್ವ ಹಿಂದಿನ ಮೇಯರ್‌ ಹಾಗೂ ಓರ್ವ ನಗರ ಪರಿಷತ್ತಿನ ಸದಸ್ಯ ಫೋರ್ಟ್‌ ಬೆಂಡ್‌ ಜಿಲ್ಲೆಯಲ್ಲಿ ವಾಸಿಸಿದ್ದರು ಮತ್ತು ಮಿಸ್ಸೌರಿ ನಗರದ ಒಂದು ವಿಳಾಸವನ್ನು ಅವರು ಹೊಂದಿದ್ದರಿಂದ ಹೂಸ್ಟನ್‌ನಲ್ಲಿ ವಾಸಿಸದೇ ಇದ್ದುದಕ್ಕೆ ಅವರು ಆಪಾದನೆಯನ್ನು ಎದುರಿಸಬೇಕಾಗಿ ಬಂತು.[ಸೂಕ್ತ ಉಲ್ಲೇಖನ ಬೇಕು]

ಈ ವಿದ್ಯಮಾನವು ದೇಶದಾದ್ಯಂತ ಪುನರಾವರ್ತಿಸಲ್ಪಟ್ಟಿದೆ. ಹಿಂದೆ ನಮೂದಿಸಲಾದ ಕೊಲೊರೆಡೋದ ಈಗಲ್‌ವುಡ್‌ ಒಂದು ಒಳಭಾಗದ-ವರ್ತುಲ ಉಪನಗರವಾಗಿದ್ದು, 1960ರ ದಶಕದಲ್ಲಿ ಅದು ನಿರ್ಮಿಸಲ್ಪಟ್ಟಿತು. ಇದರ ಅಂಚೆ ಕಚೇರಿಯು, ಈಗ ಡೆನ್ವರ್‌‌ ಮಹಾನಗರದ ಪ್ರದೇಶದ ಅತೀವ-ಬೆಳವಣಿಗೆಯ ದಕ್ಷಿಣದ ಹಂತವಾಗಿರುವ ಪ್ರದೇಶಕ್ಕೆ ಸೇವೆಯನ್ನು ಒದಗಿಸಿತು, ಮತ್ತು ಈ ಪ್ರದೇಶದಲ್ಲಿನ ZIP ಸಂಕೇತಗಳು ಈಗಲ್‌ವುಡ್‌ನ್ನು ಅವುಗಳ ಪೂರ್ವನಿಶ್ಚಿತ ಸ್ಥಳನಾಮವಾಗಿರುವಂತೆ ನಿಗದಿಪಡಿಸಲ್ಪಟ್ಟವು. ಮಧ್ಯಭಾಗದ ಡೆನ್ವರ್‌‌ನಷ್ಟು ಬೃಹತ್ತಾಗಿರುವ ಉದ್ಯೋಗ ಕೇಂದ್ರವೊಂದು ಈ ಪ್ರದೇಶದಲ್ಲಿ ಬೆಳೆದಿದೆ, ಮತ್ತು ಇದರ ಕಚೇರಿಯ ಪ್ರದೇಶಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಅನೇಕ ಸಂಸ್ಥೆಗಳಿಗೆ ಸಂಬಂಧಿಸಿದ ಕೇಂದ್ರಕಚೇರಿಗಳಾಗಿವೆ. ವಾಸ್ತವವಾಗಿ ಅವು ಇತರ ನಗರಗಳಲ್ಲಿ ನೆಲೆಗೊಂಡಿವೆಯಾದರೂ, ಅವು ಈಗಲ್‌ವುಡ್‌ನ್ನು ತಮ್ಮ ತಾಣವಾಗಿ ಸೂಚಿಸುತ್ತವೆ, ಏಕೆಂದರೆ ಇದು ಅಂಚೆಯ ಪೂರ್ವನಿಶ್ಚಿತ ಸ್ಥಳನಾಮವಾಗಿದೆ. ಇದರ ಒಂದು ಪರಿಣಾಮವಾಗಿ, ಅಲ್ಲಿ ನಿಜವಾಗಿಯೂ ಎರಡು ಈಗಲ್‌ವುಡ್‌‌ಗಳಿವೆ — ಮೊದಲನೆಯದು ವಾಸ್ತವಿಕ ನಗರವಾಗಿದ್ದು, ಸಣ್ಣ ಗಾತ್ರವನ್ನು ಹಾಗೂ ಒಂದು ಹೆಚ್ಚಿನ ಮಟ್ಟದಲ್ಲಿ ಕಾಯನಿರತ-ದರ್ಜೆಗೆ ಸೇರಿದ ಜನರೊಂದಿಗಿನ ವಾಸಯೋಗ್ಯ ತಾಣವನ್ನು ಒಳಗೊಂಡಿದೆ. ಎರಡನೆಯದು ಸಾಕಷ್ಟು ಮೈಲಿ ದೂರವಿರುವ ಅಂಚೆಯ ಈಗಲ್‌ವುಡ್‌ ಆಗಿದ್ದು, ಮೇಲ್ದರ್ಜೆಯ ಉಪವಿಭಾಗಗಳು ಹಾಗೂ ಕಚೇರಿ ಪ್ರದೇಶಗಳ ಒಂದು ವಿಶಾಲವಾದ ಉಪನಗರದ ಪ್ರದೇಶವೆನಿಸಿಕೊಂಡಿದೆ. ಈ ಉಪವಿಭಾಗಗಳು ಮತ್ತು ಕಚೇರಿ ಪ್ರದೇಶಗಳು ಈಗಲ್‌ವುಡ್‌ ನಗರದೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲವಾದರೂ, ಸಂಪೂರ್ಣವಾಗಿ ZIP ಸಂಕೇತಗಳ ಕಾರಣದಿಂದಾಗಿ ಅದರೊಂದಿಗೆ ಒಂದು ಒಡಕು ಗುರುತನ್ನು ಹಂಚಿಕೊಳ್ಳುತ್ತವೆ. ಈಗಲ್‌ವುಡ್‌ನಲ್ಲಿ ತಾವು ವಾಸಿಸುತ್ತಿರುವುದು ಅಥವಾ ಕೆಲಸ ಮಾಡುತ್ತಿರುವುದು ಎಂದು ಹೇಳುವ ಮತ್ತು ಅದರೊಂದಿಗೆ ನಿಕಟವಾಗಿ ಗುರುತಿಸಿಕೊಳ್ಳುವ ಜನರು, ಆ ಹೆಸರಿನ ವಾಸ್ತವಿಕ ನಗರವನ್ನು ಪ್ರವೇಶಿಸುವುದು ಅಪರೂಪವಾಗಿರಬಹುದು. ಇಂಡಿಯಾನಾದಲ್ಲಿ ಒಂದು ಪಟ್ಟಣಕ್ಕೆ ಸಂಬಂಧಿಸಿದ ZIP ಸಂಕೇತವು ಅದರ ಸಂಬಂಧಪಟ್ಟ ಉಪಜಿಲ್ಲೆಗಾಗಿರುವ ZIP ಸಂಕೇತವನ್ನು ಸಾಮಾನ್ಯವಾಗಿ ಸೂಚಿಸುತ್ತದೆ; ಏಕೆಂದರೆ, ಇಂಡಿಯಾನಾದ ಹೆಚ್ಚೂಕಮ್ಮಿ ಸಣ್ಣ ಪಟ್ಟಣದ ಅಂಚೆ ಕಚೇರಿಗಳ ಪೈಕಿ ಎಲ್ಲವೂ ಗ್ರಾಮೀಣ ಮಾರ್ಗಗಳನ್ನು ಹೊಂದಿವೆ.[ಸೂಕ್ತ ಉಲ್ಲೇಖನ ಬೇಕು] ಅನೇಕ ನಾಗರಿಕರು ತಾವು ವಾಸ್ತವವಾಗಿ ವಾಸಿಸುತ್ತಿರುವ ನಗರಸಭೆ ಪ್ರದೇಶಕ್ಕಿಂತ ಒಂದು ನಿರ್ದಿಷ್ಟವಾದ ನಗರ ಕೇಂದ್ರದೊಂದಿಗೆ ಹೆಚ್ಚು ದೃಢವಾಗಿ ಗುರುತಿಸಿಕೊಳ್ಳುವ ದೇಶದ ಪ್ರದೇಶಗಳಲ್ಲಿ ಸ್ವೀಕಾರಾರ್ಹ ಸ್ಥಳನಾಮಗಳೂ ಸಹ ಪಾತ್ರನಿರ್ವಹಿಸುತ್ತವೆ. ಉದಾಹರಣೆಗೆ, ಪೆನ್ಸಿಲ್ವೇನಿಯಾದ ಅಲ್ಲೆಘೆನಿ ಜಿಲ್ಲೆಯು 130 ವಿಭಿನ್ನ ನಗರಸಭೆಗಳನ್ನು ಹೊಂದಿದೆಯಾದರೂ, ಜಿಲ್ಲೆಯ ಅನೇಕ ನಿವಾಸಿಗಳು, ಮತ್ತು ಪಕ್ಕದ ಜಿಲ್ಲೆಗಳ ನಿವಾಸಿಗಳೂ ಕೂಡಾ ಪಿಟ್ಸ್‌ಬರ್ಗ್‌, PAಯನ್ನು ತಮ್ಮ ಅಂಚೆ ವಿಳಾಸವಾಗಿ ಸಾಮಾನ್ಯವಾಗಿ ಬಳಸುತ್ತಾರೆ. ಅದೇ ರೀತಿಯಲ್ಲಿ, ಹಾಲಿವುಡ್‌, CA ಎಂಬುದು ZIP ಸಂಕೇತ 90028ಕ್ಕೆ ಸಂಬಂಧಿಸಿದ ಒಂದು ಸ್ವೀಕಾರಾರ್ಹ ಸ್ಥಳನಾಮವಾಗಿದೆಯಾದರೂ, ಹಾಲಿವುಡ್‌ ಎಂಬುದು ಲಾಸ್‌ ಏಂಜಲೀಸ್‌ನ ಒಂದು ಜಿಲ್ಲೆಯಾಗಿದೆಯೇ ಹೊರತು, ಒಂದು ನಗರಸಭೆ ಅಥವಾ ಜನಗಣತಿಯಿಂದ-ನಿರ್ದಿಷ್ಟವಾಗಿ ಸೂಚಿಸಲ್ಪಟ್ಟ ಪ್ರದೇಶವಲ್ಲ ಎಂಬುದು ವಾಸ್ತವ ಸಂಗತಿಯಾಗಿದೆ (ಲಾಸ್‌ ಏಂಜಲೀಸ್‌, CA ಎಂಬುದು ಪೂರ್ವನಿಶ್ಚಿತ ಸ್ಥಳನಾಮವಾಗಿದೆ). ನಗರಸಭೆಗಳಲ್ಲದ ಹಳ್ಳಿಗಳು, ಜನಗಣತಿಯಿಂದ-ನಿರ್ದಿಷ್ಟವಾಗಿ ಸೂಚಿಸಲ್ಪಟ್ಟ ಸ್ಥಳಗಳು, ನಗರಗಳ ಭಾಗಗಳು, ಅಥವಾ ಇತರ ಅಸ್ತಿತ್ವಗಳಿಗೆ ಸಂಬಂಧಿಸಿದಂತೆ ಅನೇಕ ZIP ಸಂಕೇತಗಳಿವೆ. ಉದಾಹರಣೆಗೆ, ZIP ಸಂಕೇತ 03750 ಎಂಬುದು ನ್ಯೂಹ್ಯಾಂಪ್‌ಷೈರ್‌ನ ಎಟ್ನಾ‌ಗೆ ಸಂಬಂಧಿಸಿದೆಯಾದರೂ, ಎಟ್ನಾ ಎಂಬುದು ನಗರ ಅಥವಾ ಪಟ್ಟಣವಲ್ಲ; ಇದು ವಾಸ್ತವವಾಗಿ ಸ್ವತಃ ZIP ಸಂಕೇತ 03755ನ್ನು ನಿಗದಿಪಡಿಸಲ್ಪಟ್ಟಿರುವ ಹ್ಯಾನೋವರ್‌ ಪಟ್ಟಣದಲ್ಲಿನ ಒಂದು ಹಳ್ಳಿ ಜಿಲ್ಲೆಯಾಗಿದೆ. ZIP ಸಂಕೇತ 08043 ಎಂಬುದು ಮತ್ತೊಂದು ಉದಾಹರಣೆಯಾಗಿದ್ದು, ಇದು ನ್ಯೂಜರ್ಸಿಯ ಕಿರ್ಕ್‌ವುಡ್‌‌‌ ಎಂಬ ಜನಗಣತಿಯಿಂದ-ನಿರ್ದಿಷ್ಟವಾಗಿ ಸೂಚಿಸಲ್ಪಟ್ಟ ಸ್ಥಳಕ್ಕೆ ಸಂಬಂಧಪಡುತ್ತದೆಯಾದರೂ, 0}ವೂರ್‌ಹೀಸ್‌ ಉಪಜಿಲ್ಲೆಯ ಸಮಗ್ರತೆಗೆ ವಾಸ್ತವವಾಗಿ ಸೇವೆ ಸಲ್ಲಿಸುತ್ತದೆ. ಇದೇ ಬಗೆಯ ನಿದರ್ಶನವು ನ್ಯೂಯಾರ್ಕ್‌ನ ಲಾಗ್ರೇಂಜ್‌‌‌‌ನಲ್ಲಿಯೂ ಕಂಡುಬರುತ್ತದೆ; ಈ ಭಾಗವು ನೆರೆಹೊರೆಯ ಪೌಕೀಪ್ಸೀ ಪಟ್ಟಣದಲ್ಲಿ ನೆಲೆಯನ್ನು ಹೊಂದಿರುವ 12603 ZIP ಸಂಕೇತದಿಂದ ಸೇವೆಯನ್ನು ಪಡೆಯುತ್ತದೆ. ಲಾಗ್ರೇಂಜ್‌ನ ಉಳಿದ ಭಾಗಕ್ಕೆ ಲಾಗ್ರೇಂಜ್‌ವಿಲ್ಲೆ ಅಂಚೆ ಕಚೇರಿಯಿಂದ ಸೇವೆಯು ದೊರೆಯುತ್ತದೆ. ಲಾಗ್ರೇಂಜ್‌ವಿಲ್ಲೆ ಎಂಬುದು ಸ್ವತಃ ಒಂದು ಪಟ್ಟಣವೇ ಅಲ್ಲದಿದ್ದರೂ, ಅದು ಲಾಗ್ರೇಂಜ್‌ನ ಒಂದು ವಿಭಾಗವಾಗಿದೆ. 19090ರ ZIP ಸಂಕೇತದಿಂದ ಸೇವೆಯನ್ನು ಪಡೆಯುತ್ತಿರುವ ಪೆನ್ಸಿಲ್ವೇನಿಯಾದ ವಿಲ್ಲೋ ಗ್ರೂವ್‌‌‌ ಎಂಬುದು ಒಂದು ಹಳ್ಳಿಯಾಗಿದ್ದು, ಅಪ್ಪರ್‌ ಹೈಲೆಂಡ್‌ ಉಪಜಿಲ್ಲೆ ಹಾಗೂ ಅಬಿಂಗ್ಟನ್‌ ಉಪಜಿಲ್ಲೆಯ ಗಡಿಯ ಎರಡೂ ಕಡೆ ಅದು ವ್ಯಾಪಿಸುತ್ತದೆ, ಮತ್ತು ಆ ಅಂಚೆ ಕಚೇರಿಯು ಅಪ್ಪರ್‌ ಡಬ್ಲಿನ್‌ ಉಪಜಿಲ್ಲೆಯ ಒಂದು ಸಣ್ಣ ಭಾಗಕ್ಕೂ ಸೇವೆಸಲ್ಲಿಸುತ್ತದೆ. ಇಂಡಿಯಾನಾದ ವ್ಯಾಂಡರ್‌ಬರ್ಗ್‌ ಜಿಲ್ಲೆಯ ಆರ್ಮ್‌ಸ್ಟ್ರಾಂಗ್‌ ಉಪಜಿಲ್ಲೆಯು ಮತ್ತೊಂದು ಉದಾಹರಣೆಯಾಗಿದೆ. ಜಿಲ್ಲೆಯ ಉಳಿದ ಭಾಗವು 477 ಪೂರ್ವಪ್ರತ್ಯಯವನ್ನು ಬಳಸಿದರೆ, ಆರ್ಮ್‌ಸ್ಟ್ರಾಂಗ್‌ ಉಪಜಿಲ್ಲೆಯು ಯಾವುದೇ ಸಂಘಟಿತವಾಗಿರುವ ಪಟ್ಟಣವನ್ನು ಹೊಂದಿರದಿದ್ದರೂ ZIP ಸಂಕೇತ 47617ನ್ನು ಅದು ಬಳಸುತ್ತದೆ ಮತ್ತು ಸ್ವತಃ ಆರ್ಮ್‌ಸ್ಟ್ರಾಂಗ್‌, ಇಂಡಿಯಾನಾ ಎಂಬುದಾಗಿ ವಿಳಾಸವನ್ನು ಉಲ್ಲೇಖಿಸಿಕೊಳ್ಳುತ್ತದೆ. ಅಷ್ಟೇ ಅಲ್ಲದೇ, ನಗರಸಭೆಯದ್ದಲ್ಲದ ಸ್ಥಳನಾಮಗಳು ನಗರಸಭೆಯ ಸ್ಥಳನಾಮಗಳೊಂದಿಗೆ ZIP ಸಂಕೇತಗಳನ್ನು ಹಂಚಿಕೊಳ್ಳಬಹುದಾಗಿದೆ. ಉದಾಹರಣೆಗೆ, ನ್ಯೂಜರ್ಸಿಯ ವೆಸ್ಟ್‌ ವಿಂಡ್ಸರ್‌‌ ಉಪಜಿಲ್ಲೆಯು ಬಹುತೇಕ ಟಪಾಲುಗಾರಿಕೆಯ ದತ್ತಾಂಶ ಸಂಗ್ರಹಗಳಲ್ಲಿ ಪ್ರಿನ್ಸ್‌ಟನ್‌ ಜಂಕ್ಷನ್‌ ಎಂದು ಉಲ್ಲೇಖಿಸಲ್ಪಡುತ್ತದೆ; ಇದು ವೆಸ್ಟ್‌ ವಿಂಡ್ಸರ್‌‌ ಒಳಗಡೆಯಲ್ಲಿ ಬರುವ, ಜನಗಣತಿಯಿಂದ-ನಿಗದಿಪಡಿಸಲ್ಪಟ್ಟಿರುವ ಒಂದು ಸ್ಥಳವಾಗಿದೆ. ಸ್ಥಳನಾಮಗಳಿಗೆ ಸಂಬಂಧಿಸಿದ ಅಂಚೆಯ ಅಂಕಿತಗಳು ಅವುಗಳ ವಿಳಾಸಗಳಿಗೆ ಸಂಬಂಧಿಸಿದ ಕಾರ್ಯತಃ ತಾಣಗಳಾಗಿ ಮಾರ್ಪಡುತ್ತವೆ, ಮತ್ತು ಇದರ ಪರಿಣಾಮವಾಗಿ ನಿವಾಸಿಗಳು ಮತ್ತು ವ್ಯವಹಾರಗಳು ವಾಸ್ತವವಾಗಿ ಮತ್ತೊಂದು ನಗರ ಅಥವಾ ಪಟ್ಟಣದಲ್ಲಿ ನೆಲೆಗೊಂಡಿರುವುದು ಎಂಬುದನ್ನು, ಹಾಗೂ ಅವುಗಳ ZIP ಸಂಕೇತಗಳೊಂದಿಗೆ ಸಂಬಂಧವನ್ನು ಹೊಂದಿರುವ "ಪೂರ್ವನಿಶ್ಚಿತ" ಸ್ಥಳನಾಮದಿಂದ ಈ ನಗರ ಅಥವಾ ಪಟ್ಟಣವು ವಿಭಿನ್ನವಾಗಿದೆ ಎಂಬುದನ್ನು ಅವರಿಗೆ ಮನವರಿಕೆ ಮಾಡಿಕೊಡುವುದು ಕಷ್ಟವಾಗುತ್ತದೆ. ಈ ಸನ್ನಿವೇಶದಿಂದ ಸೃಷ್ಟಿಯಾಗಿರುವ ಗೊಂದಲ ಮತ್ತು ಗುರುತಿನ ಕೊರತೆಯ ಕಾರಣದಿಂದಾಗಿ, ಕ್ಯಾಲಿಫೋರ್ನಿಯಾದ ಸಿಗ್ನಲ್‌ ಹಿಲ್‌‌‌ನಂಥ ಕೆಲವು ನಗರಗಳು ಅಂಚೆಯ ಸೇವೆಗೆ ಯಶಸ್ವಿಯಾಗಿ ಮನವಿ ಸಲ್ಲಿಸಿ, ZIP-ಸಂಕೇತದ ಎಲ್ಲೆಗೆರೆಗಳನ್ನು ಬದಲಿಸುವಂತೆ ಅಥವಾ ಹೊಸ ZIP ಸಂಕೇತಗಳನ್ನು ಸೃಷ್ಟಿಸುವಂತೆ ಕೇಳಿಕೊಂಡಿವೆ; ಇದರಿಂದಾಗಿ ಅವುಗಳ ನಗರಗಳು ZIP ಸಂಕೇತದೊಳಗಡೆ ಬರುವ ವಿಳಾಸಗಳಿಗೆ ಸಂಬಂಧಿಸಿದಂತೆ ಪೂರ್ವನಿಶ್ಚಿತ ಸ್ಥಳನಾಮವಾಗಲು ಸಾಧ್ಯವಿದೆ ಎಂಬುದು ಈ ಮನವಿಯಲ್ಲಿ ವ್ಯಕ್ತವಾಗಿದೆ. ಈ ಗೊಂದಲವು ಸ್ಥಳೀಯ ಸರ್ಕಾರಗಳಿಗೆ ಸಂಬಂಧಿಸಿದಂತೆ ಹಣಕಾಸಿನ ಸೂಚನೆಗಳನ್ನೂ ಹೊಂದಲು ಸಾಧ್ಯವಿದೆ; ಏಕೆಂದರೆ, ದಶವಾರ್ಷಿಕ ಜನಗಣತಿ ಎಣಿಕೆಗಳ ನಡುವಿನ ಜನಸಂಖ್ಯೆಯ ಬದಲಾವಣೆಗಳನ್ನು ಅಂದಾಜಿಸಲು U.S. ಜನಗಣತಿ ವಿಭಾಗದಿಂದ ಬಳಸಲ್ಪಡುವ ಅಂಶಗಳಲ್ಲಿ ಟಪಾಲಿನ ಪ್ರಮಾಣವು ಸೇರಿದೆ.[ಸೂಕ್ತ ಉಲ್ಲೇಖನ ಬೇಕು] ಕೆಲವೊಮ್ಮೆ ಸಮುದಾಯವೊಂದರಲ್ಲಿನ ಸ್ಥಳೀಯ ಅಧಿಕಾರಿಗಳು, ಒಂದು ZIP ಸಂಕೇತಕ್ಕೆ ಸಂಬಂಧಿಸಿದಂತೆ ಸದರಿ ಸಮುದಾಯವು ಒಂದು ಪೂರ್ವನಿಶ್ಚಿತ ಸ್ಥಳನಾಮವಾಗಿರದೆ ಒಂದು ಸ್ವೀಕಾರಾರ್ಹ ಸ್ಥಳನಾಮವಾಗಿರುವ ಸಂದರ್ಭದಲ್ಲಿ, ಸಮುದಾಯದ ಹೆಸರನ್ನು ಯಾವಾಗಲೂ ಬಳಸಲು ಅಲ್ಲಿನ ನಿವಾಸಿಗಳಿಗೆ ಸಲಹೆ ನೀಡುತ್ತಾರೆ; ಏಕೆಂದರೆ, ಆ ಪಟ್ಟಣದ ಜನಸಂಖ್ಯೆಯ ಜನಗಣತಿಯ ಅಂದಾಜು ಕಡಿಮೆಯಾಗಿದ್ದರೆ, ಜನಸಂಖ್ಯೆಯ ಆಧಾರದ ಮೇಲೆ ಲೆಕ್ಕಾಚಾರ ಹಾಕಲ್ಪಡುವ ಸಂಸ್ಥಾನ ಹಾಗೂ ಒಕ್ಕೂಟದ ನಿಧಿಗಳನ್ನು ಅವು ಅಲ್ಪ ಪ್ರಮಾಣದಲ್ಲಿ ಪಡೆಯಬೇಕಾಗಿ ಬರುತ್ತದೆ. ವಿಸ್ಕಾನ್ಸಿನ್‌ನ ಪ್ಯಾಡಾಕ್‌ ಲೇಕ್ ಇದಕ್ಕೆ ಸಂಬಂಧಿಸಿದ ಒಂದು ಅತ್ಯಂತ ವಿಶಿಷ್ಟ ಉದಾಹರಣೆಯಾಗಿದ್ದು, ಸಲೇಮ್‌ ಎಂಬುದು ಇದರ ಪೂರ್ವನಿಶ್ಚಿತ ಸ್ಥಳನಾಮವಾಗಿದೆ. ಪ್ಯಾಡಾಕ್‌ ಲೇಕ್‌ ಎಂಬುದು ಸಲೇಮ್ ಪಟ್ಟಣದೊಳಗಡೆ ಬರುವ ಒಂದು ಹಳ್ಳಿಯಾಗಿ ಸಂಘಟಿತವಾಗಿದೆ; ಸಲೇಮ್ ಪಟ್ಟಣದ ಸಂಘಟಿತವಾಗಿರದ ಭಾಗಗಳಲ್ಲಿರುವ ಜನರಿಗಿಂತ ಪ್ಯಾಡಾಕ್‌ ಲೇಕ್‌ ಹಳ್ಳಿಯಲ್ಲಿ ಹೆಚ್ಚು ಜನರು ಇರುವರಾದರೂ ಅಲ್ಲಿ ಈ ಪರಿಸ್ಥಿತಿ ಕಂಡುಬರುತ್ತದೆ. ಮತ್ತಷ್ಟು ಗೊಂದಲ ಉಂಟಾಗಲು ಕಾರಣವೇನೆಂದರೆ, ವಿಸ್ಕಾನ್ಸಿನ್‌ನ ಸಿಲ್ವರ್‌ ಲೇಕ್‌ ಎಂಬುದೂ ಸಹ ಸಲೇಮ್‌ ಪಟ್ಟಣದಲ್ಲಿನ ಒಂದು ಹಳ್ಳಿಯಾಗಿದ್ದು, ಪ್ಯಾಡಾಕ್‌ ಲೇಕ್‌ಗೆ ಹೋಲುವಂತಿರುವ ಗಾತ್ರ ಮತ್ತು ಸ್ಥಾನಮಾನವನ್ನು ಅದು ಹೊಂದಿದೆ, ಮತ್ತು ತನ್ನದೇ ಆದ ZIP ಸಂಕೇತ ಹಾಗೂ ಅಂಚೆ ಕಚೇರಿಯನ್ನು ಹೊಂದಿದೆ. ಮತ್ತೊಂದು ನಿದರ್ಶನದಲ್ಲಿ, U.S. ಒಕ್ಕೂಟ ಸಂವಹನೆಗಳ ಆಯೋಗವು (ಫೆಡರಲ್‌ ಕಮ್ಯುನಿಕೇಷನ್ಸ್‌ ಕಮಿಷನ್‌-FCC) ಒಂದು ರೇಡಿಯೋ ಕೇಂದ್ರಕ್ಕೆ (ಈಗ WNNX FM) ಅದರ ಪರವಾನಗಿಯ ನಗರವನ್ನು ಜಾರ್ಜಿಯಾದ ಸ್ಯಾಂಡಿ ಸ್ಪ್ರಿಂಗ್ಸ್‌‌‌ಗೆ ಬದಲಾಯಿಸುವ ಒಂದು ಸ್ಥಳ ಬದಲಾವಣೆಯ ಕ್ರಮಕ್ಕೆ ನಿರಾಕರಿಸಿತು; ಅದು ಜನಸಂಖ್ಯೆಯ ಆಧಾರದ ಮೇಲೆ ಸಂಸ್ಥಾನದಲ್ಲಿನ ಏಳನೇ-ಅತ್ಯಂತ ದೊಡ್ಡ ಸ್ಥಳವಾಗಿತ್ತಾದರೂ ಸಹ, ಅದು ಒಂದು ನಗರವಾಗಿರದಿದ್ದುದು (2005ರ ಅಂತ್ಯದಲ್ಲಿ ನಗರಸಭೆಯ ಏಕೀಕರಣವಾಗುವವರೆಗೆ) ಇದಕ್ಕೆ ಪ್ರಮುಖ ಕಾರಣವಾಗಿತ್ತು. ಏಕೀಕರಣವು ಸೂಕ್ತವಾಗಿ ಜಾರಿಗೆ ಬರುವವರೆಗೂ 30328ಕ್ಕೆ ಸಂಬಂಧಿಸಿದಂತೆ ಅಟ್ಲಾಂಟಾ ಎಂಬುದನ್ನು ಬಳಸಲು ಸ್ಥಳೀಯ ಸಂಘಟನೆಗಳಿಗೆ USPS ಒತ್ತಾಯಿಸಿತಾದರೂ, ಸ್ಥಳೀಯ ಸಂಘಟನೆಗಳಿಂದ ಬರುವ ಬೆಂಬಲ ಪತ್ರಗಳ ಮೇಲೆ "ಅಟ್ಲಾಂಟಾ" ಎಂಬುದರ ಬಳಕೆಯನ್ನು FCC ಉಲ್ಲೇಖಿಸಿತು. ಈಗಲೂ ಸಹ, 30328ಕ್ಕೆ ಸಂಬಂಧಿಸಿದ ಯಾವೊಂದೂ ಅಟ್ಲಾಂಟಾದಲ್ಲಿ ಅಥವಾ ಸ್ಯಾಂಡಿ ಸ್ಪ್ರಿಂಗ್ಸ್‌ ನಗರದ ಪರಿಮಿತಿಯ ಹೊರಗಡೆಯೆಲ್ಲೂ ಇಲ್ಲದಿದ್ದರೂ ಕೂಡಾ, "ಸ್ಯಾಂಡಿ ಸ್ಪ್ರಿಂಗ್ಸ್‌" ಮಾತ್ರವೇ "ಸ್ವೀಕಾರಾರ್ಹ"ವಾಗಿದೆ. ಸ್ಯಾಂಡಿ ಸ್ಪ್ರಿಂಗ್ಸ್‌ ಮುಖ್ಯ ಅಂಚೆ ಕಚೇರಿಯಲ್ಲಿನ PO ಪೆಟ್ಟಿಗೆಗಳಿಗೆ ಸಂಬಂಧಿಸಿದಂತೆ ಮಾತ್ರವೇ ಬಳಕೆಯಾಗುವ ZIP ಸಂಕೇತಕ್ಕೂ ಇದು ಅನ್ವಯಿಸುತ್ತದೆ. ZIP ಸಂಕೇತಗಳು ಮತ್ತು ಅವುಗಳ ಸಂಬಂಧಿತ ಸ್ಥಳನಾಮಗಳು ಜಿಲ್ಲೆಯ ಎಲ್ಲೆಗಳನ್ನು ಉಪೇಕ್ಷಿಸುತ್ತವೆಯಾದ್ದರಿಂದ, ಬೀದಿ ವಿಳಾಸಗಳು ಅವು ಇರುವ ಜಿಲ್ಲೆಯ ಯಾವ ಚತುರ್ಥ ಪಾದದಲ್ಲಿವೆ ಎಂಬುದನ್ನು ಆಧರಿಸಿ ಇದು ಸಮಸ್ಯೆಗಳನ್ನೂ ಸೃಷ್ಟಿಸುತ್ತದೆ. ಉದಾಹರಣೆಗೆ, 30339 ಎಂಬುದು ಜಾರ್ಜಿಯಾದ ವಿನಿಂಗ್ಸ್‌‌ ಎಂಬುದಕ್ಕೆ ಸಂಬಂಧಿಸಿದ್ದು, ಇದು ಕಾಬ್‌ ಜಿಲ್ಲೆಯ ಅಗ್ನೇಯ ಭಾಗದಲ್ಲಿ ನೆಲೆಗೊಂಡಿದೆ; ಆದ್ದರಿಂದ ಪ್ರತಿಯೊಂದೂ ಸಹ SE ಎಂಬ ಹಣೆಪಟ್ಟಿಯೊಂದಿಗೆ ಬರುತ್ತದೆ, ಮತ್ತು ಆ ಜಿಲ್ಲೆಯ ಗೆರೆಜಾಲದ ಮೇಲಿನ ಒಂದು ಮನೆ ಸಂಖ್ಯೆಯನ್ನು ಅದು ಹೊಂದಿದೆ (ಜಿಲ್ಲಾ ಕ್ಷೇತ್ರದಲ್ಲಿನ ಪಟ್ಟಣ ಚೌಕದಿಂದ ಇರುವ ಅಂತರಕ್ಕೆ ಅನುಸಾರವಾಗಿ). ಆದಾಗ್ಯೂ, ಅಟ್ಲಾಂಟಾದ ಬಳಕೆಯ ಕುರಿತು USPS ಒತ್ತಾಯ ಮಾಡುತ್ತದೆಯಾದ್ದರಿಂದ, ವಿನಿಂಗ್ಸ್‌‌ ವಿಳಾಸಗಳು ವಾಸ್ತವವಾಗಿ ಅವಿರುವ ಎದುರಿನ (ಉತ್ತರಪಶ್ಚಿಮ ಮೆಟ್ರೋ ಅಟ್ಲಾಂಟಾ) ಪಾರ್ಶ್ವಕ್ಕೆ ಬದಲಿಗೆ ಅಗ್ನೇಯ ಅಟ್ಲಾಂಟಾದಲ್ಲಿರುವಂತೆ ಕಾಣಿಸುವ ಹಾಗೆ ಬರೆಯಲ್ಪಡುತ್ತವೆ. 9-1-1 ಘೋಷಕ ತಾಣದೊಂದಿಗೂ ಸಹ ಇದು ಸಮಸ್ಯೆಗಳನ್ನು ಉಂಟುಮಾಡಬಹುದು. ಜಾರ್ಜಿಯಾದ ಜಾನ್ಸ್‌ ಕ್ರೀಕ್‌‌‌‌ನಲ್ಲಿರುವ ಈ ತಾಣವು ವ್ಯಕ್ತಿಯೋರ್ವರ ಮರಣಕ್ಕೆ ಕಾರಣವಾಯಿತು; ಆಕೆಯ ಅಂಬುಲೆನ್ಸ್‌‌‌ನ್ನು ತುರ್ತು ರವಾನೆದಾರರು ತಪ್ಪು ವಿಳಾಸಕ್ಕೆ ಕಳಿಸಿದಾಗ ಈ ದುರ್ಘಟನೆ ಸಂಭವಿಸಿತು.

ZIP ಸಂಕೇತಗಳ ವಿಭಜನೆ ಮತ್ತು ಮರುಹಂಚಿಕೆ

[ಬದಲಾಯಿಸಿ]

ಪ್ರದೇಶ ಸಂಕೇತಗಳ ರೀತಿಯಲ್ಲಿಯೇ, ZIP ಸಂಕೇತಗಳನ್ನು ಕೆಲವೊಮ್ಮೆ ವಿಭಜಿಸಲಾಗುತ್ತದೆ ಮತ್ತು ಬದಲಾಯಿಸಲಾಗುತ್ತದೆ; ಗ್ರಾಮೀಣ ಪ್ರದೇಶವೊಂದು ಉಪನಗರದ ಪ್ರದೇಶವಾಗಿ ಮಾರ್ಪಟ್ಟಾಗ ಇದು ವಿಶೇಷವಾಗಿ ಸಂಭವಿಸುತ್ತದೆ. ವಿಶಿಷ್ಟವೆನಿಸುವಂತೆ, ಹೊಸ ಸಂಕೇತಗಳು ಒಮ್ಮೆ ಘೋಷಿಸಲ್ಪಟ್ಟ ನಂತರ ಜಾರಿಗೆ ಬರುತ್ತವೆ, ಮತ್ತು ಒಂದು ಕೃಪಾವಧಿ ಅಥವಾ ವಿನಾಯಿತಿ ಅವಧಿಯನ್ನು ಈ ಸಂದರ್ಭದಲ್ಲಿ ನೀಡಲಾಗುತ್ತದೆ (ಉದಾಹರಣೆಗೆ, ಒಂದು ವರ್ಷ). ಈ ಅವಧಿಯಲ್ಲಿ ಹೊಸ ಮತ್ತು ಹಳೆಯ ಸಂಕೇತಗಳನ್ನು ಏಕಕಾಲೀನವಾಗಿ ಬಳಸಲಾಗುತ್ತದೆ, ಇದರಿಂದಾಗಿ ಇದರ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿನ ಅಂಚೆಯ ಆಶ್ರಯದಾತರು ಬಾತ್ಮೀದಾರರಿಗೆ ಮಾಹಿತಿಯನ್ನು ನೀಡಲು, ಹೊಸ ಹೊಸ ಲೇಖನ ಸಾಮಗ್ರಿಯ ಸರಬರಾಜಿಗೆ ಆದೇಶ ನೀಡಲು ಸಾಧ್ಯವಾಗುತ್ತದೆ.[] ಅತ್ಯಂತ ಗಮನಾರ್ಹವಾಗಿ ಕಂಡುಬರುವುದೇನೆಂದರೆ, ಕ್ಷಿಪ್ರವಾಗಿ ಬೆಳೆಯುತ್ತಿರುವ ಸಮುದಾಯಗಳಲ್ಲಿ ಒಂದು ಹೊಸ ವಿಭಾಗೀಯ ಕೇಂದ್ರದ ಸೌಲಭ್ಯವನ್ನು ಪ್ರಾರಂಭಿಸುವುದು ಕೆಲವೊಮ್ಮೆ ಅಗತ್ಯವಾಗಿರುತ್ತದೆ. ನಂತರ ಆ ಕೇಂದ್ರಕ್ಕೆ ಅದರದ್ದೇ ಆದ ಮೂರು-ಅಂಕೆಯ ZIP-ಸಂಕೇತದ ಪೂರ್ವಪ್ರತ್ಯಯ ಅಥವಾ ಪೂರ್ವಪ್ರತ್ಯಯಗಳನ್ನು ಹಂಚಿಕೆ ಮಾಡಬೇಕಾಗುತ್ತದೆ. ಇಂಥ ಹಂಚಿಕೆಯನ್ನು ಹಲವಾರು ವಿಧಾನಗಳಲ್ಲಿ ಮಾಡಬಹುದು. ಉದಾಹರಣೆಗೆ, ವರ್ಜೀನಿಯಾದಲ್ಲಿನ ಡಲ್ಲೆಸ್‌ ವಿಮಾನ ನಿಲ್ದಾಣದಲ್ಲಿ ಒಂದು ಹೊಸ ವಿಭಾಗೀಯ ಕೇಂದ್ರದ ಸೌಲಭ್ಯವನ್ನು ಪ್ರಾರಂಭಿಸಿದಾಗ, ಆ ಸೌಕರ್ಯಕ್ಕೆ ಪೂರ್ವಪ್ರತ್ಯಯ 201ನ್ನು ಹಂಚಿಕೆ ಮಾಡಲಾಯಿತು; ಆದ್ದರಿಂದ, ಆ ವಿಭಾಗೀಯ ಕೇಂದ್ರದ ಸೌಲಭ್ಯದಿಂದ ಸೇವೆಗೆ ಒಳಪಡುವ ಎಲ್ಲಾ ಅಂಚೆ ಕಚೇರಿಗಳಿಗೆ ಸಂಬಂಧಿಸಿದಂತೆ ZIP ಸಂಕೇತವು 220 ಅಥವಾ 221ರಿಂದ ಪ್ರಾರಂಭವಾಗುವ ಒಂದು ಹಳೆಯ ಸಂಕೇತದಿಂದ 201ರಿಂದ ಪ್ರಾರಂಭವಾಗುವ ಒಂದು ಹೊಸ ಸಂಕೇತಕ್ಕೆ ಅಥವಾ ಸಂಕೇತಗಳಿಗೆ ಬದಲಾಯಿತು. ಆದಾಗ್ಯೂ, ಮೇರಿಲ್ಯಾಂಡ್‌ನ ಮಾಂಟ್‌ಗೋಮೆರಿ ಜಿಲ್ಲೆಗೆ ಸೇವೆಯನ್ನು ಒದಗಿಸಲು ಒಂದು ಹೊಸ ವಿಭಾಗೀಯ ಕೇಂದ್ರದ ಸೌಲಭ್ಯವನ್ನು ಪ್ರಾರಂಭಿಸಿದಾಗ, ಯಾವುದೇ ಹೊಸ ಪೂರ್ವಪ್ರತ್ಯಯವನ್ನು ನಿಗದಿಗೊಳಿಸಲಿಲ್ಲ. ಅದರ ಬದಲಿಗೆ, ಹಿಂದೆ ಅಕಾರಾದಿಯಾದ ಕ್ರಮದಲ್ಲಿ ನಿಗದಿಗೊಳಿಸಲಾಗಿದ್ದ 207 ಮತ್ತು 208ರ ವ್ಯಾಪ್ತಿಗಳಲ್ಲಿನ ZIP ಸಂಕೇತಗಳು ಪುನರ್‌‌ವ್ಯವಸ್ಥೆಗೊಳಿಸಲ್ಪಟ್ಟವು; ಇದರಿಂದಾಗಿ ಜಿಲ್ಲೆಯಲ್ಲಿನ 207xx ZIP ಸಂಕೇತಗಳು 208xx ಸಂಕೇತಗಳಿಗೆ ಬದಲಾದರೆ, ಆ ಜಿಲ್ಲೆಯ ಹೊರಗಡೆಯಿರುವ 208xx ಸಂಕೇತಗಳು 207xx ಸಂಕೇತಗಳಿಗೆ ಬದಲಾದವು. ಸಿಲ್ವರ್‌ ಸ್ಪ್ರಿಂಗ್‌ (ಇದರ ಅಂಚೆಯ ಪ್ರದೇಶವು ವೀಟನ್‌‌‌‌ನ್ನು ಒಳಗೊಂಡಿದೆ) ತನ್ನದೇ ಆದ 209 ಎಂಬ ಪೂರ್ವಪ್ರತ್ಯಯವನ್ನು ಹೊಂದಿರುವುದರಿಂದ, ಸಿಲ್ವರ್‌ ಸ್ಪ್ರಿಂಗ್‌ಗೆ ಮರುವ್ಯವಸ್ಥೆಗೊಳಿಸುವಿಕೆಯನ್ನು ಅನ್ವಯಿಸುವ ಅಗತ್ಯವು ಕಂಡುಬರಲಿಲ್ಲ; ಅದರ ಬದಲಿಗೆ, 209xx ZIP ಸಂಕೇತಗಳಿಗೆ ಹೋಗುತ್ತಿದ್ದ ಎಲ್ಲಾ ಟಪಾಲನ್ನೂ ಸರಳವಾಗಿ ಹೊಸ ವಿಭಾಗೀಯ ಕೇಂದ್ರದ ಸೌಲಭ್ಯಕ್ಕೆ ಮಾರ್ಗಬದಲಾವಣೆ ಮಾಡಲಾಯಿತು. ಮತ್ತೊಂದೆಡೆ, ಜನಸಂಖ್ಯೆಯ ಇಳಿತವು ಒಂದು ಅಂಚೆ ಕಚೇರಿಯ ಮುಚ್ಚುವಿಕೆಗೆ ಮತ್ತು ಅದರ ಸಂಬಂಧಿತ ZIP ಸಂಕೇತದ ಹಂಚಿಕೆಯು ರದ್ದತಿಯಾಗುವುದಕ್ಕೆ ಕಾರಣವಾಗಬಹುದು. ಉದಾಹರಣೆಗೆ, 2002ರಲ್ಲಿ ಪೆನ್ಸಿಲ್ವೇನಿಯಾದ ಸೆಂಟ್ರಲಿಯಾದ ZIP ಸಂಕೇತವಾದ 17927ನ್ನು ಹಿಂದೆಗೆದುಕೊಳ್ಳಲಾಯಿತು.[೧೦] ಅಂಚೆಯ ಎಲ್ಲೆಗೆರೆಗಳು ಮರುಜೋಡಿಸಲ್ಪಟ್ಟಾಗಲೂ ಸಹ ZIP ಸಂಕೇತಗಳು ಬದಲಾಗುತ್ತವೆ. ಉದಾಹರಣೆಗೆ, ಮೇಲೆ ನಮೂದಿಸಲಾದ ಬದಲಾವಣೆಯು ಮಾಂಟ್‌ಗೋಮೆರಿ ಜಿಲ್ಲೆಯಲ್ಲಿ ಸಂಭವಿಸಿದ ಸಮಯದಲ್ಲಿ ಹಾಗೂ ವಾಷಿಂಗ್ಟನ್‌ D.C.ಯ ಅಂದಿನ-ಮೇಯರ್‌ ಮೇರಿಯನ್‌ ಬ್ಯಾರಿ ಎಂಬಾತನಿಂದ ಬಂದ ಒತ್ತಡದ ಅಡಿಯಲ್ಲಿ, ವಾಸ್ತವಿಕ ಎಲ್ಲೆಗೆರೆಯನ್ನು ಹೊಂದಿಸುವ ಸಲುವಾಗಿ ಕೊಲಂಬಿಯಾ ಜಿಲ್ಲೆ ಹಾಗೂ ಮೇರಿಲ್ಯಾಂಡ್‌ ನಡುವಿನ ಅಂಚೆಯ ಎಲ್ಲೆಗೆರೆಗಳನ್ನು USPS ಮರುಜೋಡಿಸಿತು. ಹಿಂದೆ, ಬೆಥೆಸ್ಡಾ ಮತ್ತು ಟಾಕೊಮಾ ಪಾರ್ಕ್‌‌ನಂಥ ಒಳಭಾಗದ ಅನೇಕ ಉಪನಗರಗಳು ವಾಷಿಂಗ್ಟನ್‌, D.C. ಅಂಚೆಯ ಪ್ರದೇಶದಲ್ಲಿದ್ದವು. ಬದಲಾವಣೆಯ ಒಂದು ಪರಿಣಾಮವಾಗಿ, 200ರೊಂದಿಗೆ ಪ್ರಾರಂಭವಾಗುತ್ತಿದ್ದ ಮೇರಿಲ್ಯಾಂಡ್‌ನಲ್ಲಿನ ZIP ಸಂಕೇತಗಳು ತಮ್ಮ ತಾಣವನ್ನು ಅವಲಂಬಿಸಿ 207, 208 ಅಥವಾ 209ರೊಂದಿಗೆ ಪ್ರಾರಂಭವಾಗುವ ಹೊಸ ZIP ಸಂಕೇತಗಳಿಗೆ ಬದಲಾದವು, ಮತ್ತು D.C.-ಮೇರಿಲ್ಯಾಂಡ್‌ ರೇಖೆಯನ್ನು ಎರಡೂ ಕಡೆ ವ್ಯಾಪಿಸಿದ್ದ ZIP ಸಂಕೇತಗಳು ಒಡೆಯಲ್ಪಟ್ಟವು. ಉದಾಹರಣೆಗೆ, 20014 (ಬೆಥೆಸ್ಡಾ) 20814 ಆಗಿ ಮಾರ್ಪಟ್ಟರೆ, ಮೇರಿಲ್ಯಾಂಡ್‌ ಭಾಗದ 20012 (ಟಾಕೊಮಾ ಪಾರ್ಕ್‌) 20912 ಆಗಿ ಮಾರ್ಪಟ್ಟಿತು.

ಇತರ ಉಪಯೋಗಗಳು

[ಬದಲಾಯಿಸಿ]

ಬಟವಾಡೆಯ ಸೇವೆಗಳು

[ಬದಲಾಯಿಸಿ]

ಫೆಡ್‌ಎಕ್ಸ್‌, ಯುನೈಟೆಡ್‌ ಪಾರ್ಸೆಲ್‌ ಸರ್ವಿಸ್‌ ಮತ್ತು DHLನಂಥ USPSನ್ನು ಹೊರತುಪಡಿಸಿದ ಇತರ ಬಟವಾಡೆ ಸೇವೆಗಳು, ಕಟ್ಟು ಅಥವಾ ಪ್ಯಾಕೇಜ್‌ ಒಂದರ ಗರಿಷ್ಟ ಪ್ರಮಾಣದ ಆಂತರಿಕ ಮಾರ್ಗನಿರ್ದೇಶನಕ್ಕೆ ಸಂಬಂಧಿಸಿದಂತೆ ಒಂದು ZIP ಸಂಕೇತವನ್ನು ಬಯಸುತ್ತವೆ.

ಅಂಕಿಅಂಶಗಳು

[ಬದಲಾಯಿಸಿ]

ಟಪಾಲಿನ ಜಾಡನ್ನು ಪತ್ತೆಹಚ್ಚುವುದಕ್ಕೆ ಮಾತ್ರವೇ ಅಲ್ಲದೇ, ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿನ ಭೌಗೋಳಿಕ ಅಂಕಿ-ಅಂಶಗಳನ್ನು ಒಟ್ಟುಗೂಡಿಸಲೂ ಸಹ ZIP ಸಂಕೇತಗಳನ್ನು ಬಳಸಲಾಗುತ್ತದೆ. U.S. ಜನಗಣತಿ ವಿಭಾಗವು ZIP ಸಂಕೇತಗಳ ಪ್ರದೇಶಗಳ ಅಂದಾಜಿನ ಎಲ್ಲೆಗೆರೆಗಳನ್ನು ಲೆಕ್ಕಾಚಾರ ಹಾಕುತ್ತದೆ; ಇದನ್ನು ಸದರಿ ವಿಭಾಗವು ZIP ಸಂಕೇತ ಪಟ್ಟಿಮಾಡುವ ಪ್ರದೇಶಗಳು (ZIP ಕೋಡ್‌ ಟ್ಯಾಬ್ಯುಲೇಷನ್‌ ಏರಿಯಾಸ್‌-ZCTAಗಳು) ಎಂದು ಕರೆಯುತ್ತದೆ. ನಂತರ ಈ ಅಂದಾಜಿನ ಪ್ರದೇಶಗಳಿಗೆ ಸಂಬಂಧಿಸಿದಂತೆ ಅಂಕಿ-ಅಂಶೀಯ ಜನಗಣತಿ ದತ್ತಾಂಶವನ್ನು ಒದಗಿಸಲಾಗುತ್ತದೆ. ಈ ಪ್ರದೇಶಗಳಿಗೆ ಸಂಬಂಧಿಸಿದಂತೆ ಒದಗಿಸಲಾದ ಭೌಗೋಳಿಕ ದತ್ತಾಂಶವು, ZCTAಗಳ ಕೇಂದ್ರ-ಬಿಂದುವಿನ ಅಕ್ಷಾಂಶ ಮತ್ತು ರೇಖಾಂಶವನ್ನು ಒಳಗೊಳ್ಳುತ್ತದೆ. ZIP ಸಂಕೇತಗಳಿಗೆ ಸಂಬಂಧಿಸಿದಂತೆ ಜನಗಣತಿ ವಿಭಾಗವು ಅನೇಕ ಅಂಕಿ-ಅಂಶೀಯ ದತ್ತಾಂಶ ಸಂಗ್ರಹಗಳನ್ನು ಒದಗಿಸುತ್ತದೆಯಾದರೂ, ಎಲ್ಲಾ ZCTAಗಳ ಪರಿಷ್ಕೃತ ದತ್ತಾಂಶ ಸಂಗ್ರಹಗಳನ್ನು ಅದು ಇಟ್ಟುಕೊಳ್ಳುವುದಿಲ್ಲ. ಇದೇ ರೀತಿಯ ಒಂದು ಅಂದಾಜಿನ ಭೌಗೋಳಿಕ ವ್ಯಾಪ್ತಿಯನ್ನು ಒದಗಿಸುವ ಸಂಪೂರ್ಣ ದತ್ತಾಂಶ ಸಂಗ್ರಹಗಳು ವಾಣಿಜ್ಯ ಸ್ವರೂಪದಲ್ಲಿ ಲಭ್ಯವಿವೆ. ZIP ಸಂಕೇತಗಳು ಮೂಲಸ್ವರೂಪವಾಗಿ ವಿಭಿನ್ನವಾದ ದತ್ತಾಂಶ, ಅಥವಾ ಅಂಶಾಧಾರಿತ ದತ್ತಾಂಶವಾಗಿವೆ; ಏಕೆಂದರೆ, ಬಟವಾಡೆ ಮಾಡುವ ತಾಣದಲ್ಲಿ ಮಾತ್ರವೇ ಅವು ನಿಗದಿಪಡಿಸಲ್ಪಟ್ಟಿವೆಯೇ ಹೊರತು, ಬಟವಾಡೆ ಮಾಡುವ ಸ್ಥಳಗಳ ನಡುವಿನ ಸ್ಥಳಾವಕಾಶಕ್ಕೆ ಅಲ್ಲ. ಭೂಪಟ ರಚನೆ ಮತ್ತು ದತ್ತಾಂಶ ಪ್ರಸ್ತುತಿಗೆ ಸಂಬಂಧಿಸಿದಂತೆ ಬಳಕೆ ಮಾಡಲು ZIP ಸಂಕೇತದ ಅಂದಾಜಿನ ವ್ಯಾಪ್ತಿಯನ್ನು ಪ್ರತಿನಿಧಿಸುವ ಬಹುಭುಜಗಳು, ಅಥವಾ ಪ್ರದೇಶದ ಲಕ್ಷಣಗಳನ್ನು ಸೃಷ್ಟಿಸಲು, U.S. ಜನಗಣತಿ ವಿಭಾಗವು ಆಗ ಈ ವಿಭಿನ್ನವಾದ ದತ್ತಾಂಶವನ್ನು ನಡುವೆ ಸೇರಿಸುತ್ತದೆ. ZCTAಗಳನ್ನು ZIP ಸಂಕೇತಗಳೊಂದಿಗೆ ಸಮೀಕರಿಸಿ ಗೊಂದಲಕ್ಕೀಡಾಗುವ ಅಗತ್ಯವಿಲ್ಲ, ಮತ್ತು ZIP ಸಂಕೇತಗಳಂತೆ ಅವನ್ನು ಆಗಿಂದಾಗ್ಗೆ ಪರಿಷ್ಕರಿಸಲಾಗುವುದಿಲ್ಲ. ಆದಾಗ್ಯೂ, ಅನೇಕ ಸಂಶೋಧನೆ ಹಾಗೂ ಯೋಜನೆಯ ಉದ್ದೇಶಗಳಿಗೆ ಸಂಬಂಧಿಸಿದಂತೆ ಅವು ಅತ್ಯಂತ ಪ್ರಯೋಜನಕಾರಿಯಾಗಿವೆ ಮತ್ತು ಅವನ್ನು ZIP ಸಂಕೇತ ದತ್ತಾಂಶದೊಂದಿಗೆ ಬಳಸಬಹುದಾಗಿದೆ.

ಮಾರಾಟಗಾರಿಕೆ

[ಬದಲಾಯಿಸಿ]

ZIP-ಸಂಕೇತ ಮಾರಾಟಗಾರಿಕೆ ಎಂದು ಕರೆಯಲ್ಪಡುವ ಪ್ರಕ್ರಿಯೆಯೊಂದರಲ್ಲಿನ ನೇರ ಟಪಾಲು ಮಾರಾಟಗಾರಿಕೆಯ ಪ್ರಚಾರಗಳಲ್ಲಿ ಸದರಿ ದತ್ತಾಂಶವನ್ನು ಅನೇಕವೇಳೆ ಬಳಸಲಾಗುತ್ತದೆ.

ಮಾರಾಟದ ತಾಣದಲ್ಲಿನ ನಗದು ಗುಮಾಸ್ತರು ಕೆಲವೊಮ್ಮೆ ಬಳಕೆದಾರರನ್ನು ಅವರ ಮನೆಯ ZIP ಸಂಕೇತವನ್ನು ಕೇಳಬಹುದು. ಹೊಸ ವ್ಯವಹಾರ ಸಂಸ್ಥೆಗಳ ತಾಣವನ್ನು ನಿರ್ಣಯಿಸುವಲ್ಲಿ ಪ್ರಯೋಜನಕಾರಿಯಾಗಿರುವ ಖರೀದಿಗಾರಿಕೆ-ಮಾದರಿಯ ದತ್ತಾಂಶವನ್ನು ಒದಗಿಸುವುದರ ಜೊತೆಗೆ, ಓರ್ವ ಬಳಕೆದಾರನ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪಡೆದುಕೊಳ್ಳಲು ಕ್ರೆಡಿಟ್‌ ಕಾರ್ಡ್‌ ಒಂದರ ಮೇಲಿನ ಹೆಸರಿನೊಂದಿಗೆ ಈ ZIP ಸಂಕೇತವನ್ನು ಸಂಬಂಧ ಕಲ್ಪಿಸಲು ಚಿಲ್ಲರೆ ವ್ಯಾಪಾರಿಗಳು ನಿರ್ದೇಶಿಕೆಗಳನ್ನು ಬಳಸಲು ಸಾಧ್ಯವಿದೆ. ZIP-ಸಂಕೇತಿಸಲ್ಪಟ್ಟ ದತ್ತಾಂಶಗಳು ಅಪಾಯದಲ್ಲಿನ ಭೌಗೋಳಿಕ ಅಂಶಗಳನ್ನು ವಿಶ್ಲೇಷಿಸುವಲ್ಲಿಯೂ ಬಳಸಲಾಗುತ್ತದೆ; ಇದು ವಿಮೆ-ಉದ್ಯಮ ಹಾಗೂ ಬ್ಯಾಂಕಿಂಗ್‌‌ನ ಒಂದು ಪರಿಪಾಠವಾಗಿದ್ದು, ಹೀನಾರ್ಥಕವಾಗಿ ಅದನ್ನು ರೆಡ್‌ ಲೈನಿಂಗ್‌ ಎಂದು ಕರೆಯಲಾಗುತ್ತದೆ. ಒಂದು ಅತೀವವಾದ ಅಪರಾಧ ಪ್ರಮಾಣದ ಅಂಕಿ-ಅಂಶಗಳನ್ನು ಹೊಂದಿರುವ ಮತ್ತು ತನ್ನ ZIP ಸಂಕೇತವನ್ನು ಹಂಚಿಕೊಂಡಿರುವ ಪಟ್ಟಣವೊಂದರ ಸಮೀಪದಲ್ಲಿ ವಾಸಿಸುತ್ತಿರುವ ಜನರಿಗೆ ಸಂಬಂಧಿಸಿದಂತೆ ಇದು ಸಮಸ್ಯೆಗಳನ್ನು ಉಂಟುಮಾಡಬಹುದು (ಉದಾಹರಣೆಗೆ, ದುಬಾರಿ ವಿಮೆ); ಏಕೆಂದರೆ ಅವರು ಸ್ವತಃ ವಾಸ್ತವವಾಗಿ ಒಂದು ತುಲನಾತ್ಮಕವಾಗಿ ಅಪರಾಧ-ಮುಕ್ತವಾಗಿರುವ ಪಟ್ಟಣದಲ್ಲಿ ವಾಸಿಸುತ್ತಿರುತ್ತಾರೆ.

ವಿಧಾಯಕ ಜಿಲ್ಲೆಗಳು

[ಬದಲಾಯಿಸಿ]

ವಿಧಾಯಕ ಜಿಲ್ಲೆಗಳನ್ನು ಗುರುತಿಸಲು ZIP ಸಂಕೇತಗಳನ್ನು ಬಳಕೆಮಾಡಿಕೊಳ್ಳಬಹುದಾಗಿದೆ. ಉದಾಹರಣೆಗೆ, U.S. ಪ್ರತಿನಿಧಿಗಳ ಸದನ ದ ವೆಬ್‌ಸೈಟ್‌, ZIP ಸಂಕೇತವನ್ನು ಆಧರಿಸಿ ಮೇಲ್ಭಾಗದ ಎಡ ಮೂಲೆಯಲ್ಲಿ "ನಿಮ್ಮ ಪ್ರತಿನಿಧಿಯನ್ನು ಕಂಡುಕೊಳ್ಳಿ" ಎಂಬ ಒಂದು ಲಕ್ಷಣವನ್ನು ಹೊಂದಿದೆ.

ಅಂತರಜಾಲ

[ಬದಲಾಯಿಸಿ]

ZIP ಸಂಕೇತ ದತ್ತಾಂಶವು ಅನೇಕ ವೆಬ್‌ಸೈಟ್‌ಗಳಲ್ಲಿನ, ವಿಶೇಷವಾಗಿ ಬ್ರಿಕ್‌-ಅಂಡ್‌-ಕ್ಲಿಕ್‌ ವೆಬ್‌ಸೈಟ್‌ಗಳಲ್ಲಿನ ವ್ಯಾಪಾರಿ/ಅಂಗಡಿ ಪತ್ತೆಕಾರಕ ತಂತ್ರಾಂಶದ ಒಂದು ಅವಿಭಾಜ್ಯ ಭಾಗ ಅಂಗವಾಗಿದೆ. ಒಂದು ಬಳಕೆದಾರ-ಪ್ರದಾನಿತ ZIP ಸಂಕೇತವನ್ನು ಈ ತಂತ್ರಾಂಶವು ಸಂಸ್ಕರಿಸುತ್ತದೆ ಮತ್ತು ಮಳಿಗೆಗಳು ಅಥವಾ ವ್ಯವಹಾರ ತಾಣಗಳ ಒಂದು ಪಟ್ಟಿಯನ್ನು ಇದು ಹಿಂದಿರುಗಿಸುತ್ತದೆ; ಸಾಮಾನ್ಯವಾಗಿ ಇದು ಪ್ರದಾನಿತ ZIP ಸಂಕೇತದ ಕೇಂದ್ರಭಾಗದಿಂದ ಹೆಚ್ಚಾಗುತ್ತಾ ಹೋಗುವ ಅಂತರದ ಅನುಕ್ರಮದಲ್ಲಿ ಸಾಗುತ್ತದೆ. ZIP ಪದ್ಧತಿಯು US ಅಂಚೆಯ ಜಾಲಕ್ಕೆ ಸೀಮಿತಗೊಳಿಸಲ್ಪಟ್ಟಿರುವುದರಿಂದ, ZIP ಸಂಕೇತಗಳ ಅಗತ್ಯವಿರುವ ವೆಬ್‌ಸೈಟ್‌ಗಳು ಅಂತರರಾಷ್ಟ್ರೀಯ ಗ್ರಾಹಕರನ್ನು ನೋಂದಾಯಿಸಿಕೊಳ್ಳುವಂತಿಲ್ಲ [೧] Archived 2010-04-03 ವೇಬ್ಯಾಕ್ ಮೆಷಿನ್ ನಲ್ಲಿ.

ಇವನ್ನೂ ನೋಡಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. "International Paper - ZIP (Zone Improvement Plan) Code". International Paper Company. Archived from the original on ಏಪ್ರಿಲ್ 27, 2005. Retrieved July 10, 2009.
  2. "Latest Status Info". United States Patent and Trademark Office. Retrieved July 10, 2009.
  3. "ARCHIVED: How can I print routing bar codes on envelopes? - Knowledge Base". The Trustees of Indiana University. Archived from the original on ಮಾರ್ಚ್ 10, 2012. Retrieved July 10, 2009.
  4. "Insert a barcode into an Office document - Word - Microsoft Office Online". Microsoft Corporation. Retrieved July 10, 2009.
  5. "CASS Technical Guide" (PDF). United States Postal Service. 2009–2010 cycle. p. 40. Archived from the original (PDF) on ಏಪ್ರಿಲ್ 19, 2009. Retrieved July 10, 2009. {{cite web}}: Check date values in: |year= (help)CS1 maint: year (link)
  6. "FCIC – About Us". Federal Citizen Information Center of the U.S. General Services Administration. Retrieved July 10, 2009. For years, consumers have written to Pueblo, Colorado 81009 for timely, practical information they trust.
  7. "Mailing and Hand Carry Addresses for the United States Patent and Trademark Office". USPTO. Retrieved 6-May-2010. {{cite web}}: Check date values in: |accessdate= (help)
  8. "Contact Us". Metropolitan Washington Airports Authority. Archived from the original on ಜುಲೈ 27, 2009. Retrieved July 10, 2009.
  9. Roberts, Sam (March 21, 2007). "An Elite ZIP Code Becomes Harder to Crack". The New York Times. p. C15. Retrieved July 10, 2009. {{cite news}}: Italic or bold markup not allowed in: |publisher= (help)
  10. Wheary, Rob. "Centralia loses its ZIP". Archived from the original on 2012-04-24. Retrieved 2010-06-28.


ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ZIP_ಸಂಕೇತ&oldid=1272576" ಇಂದ ಪಡೆಯಲ್ಪಟ್ಟಿದೆ