ಸದಸ್ಯ:Keerthana dn
ಗೋಚರ
ಕೀರ್ತನ ಡಿ.ಎನ್ | |
---|---|
ಜನನ | ೨/೭/೨೦೦೦ ಚಿಂತಾಮಣಿ ,ಚಿಕ್ಕಬಳ್ಳಾಪುರ ಜಿಲ್ಲೆ, ಕರ್ನಾಟಕ,ಭಾರತ. |
ವಿದ್ಯಾಭ್ಯಾಸ | ಬಿಕಾಂಮ್ ಕ್ರೈಸ್ಟ್ ಯುನಿವರ್ಸಿಟಿ. |
ಪೋಷಕ(ರು) | ನಾಗರಾಜ್, ರಾಜ್ಯಲಕ್ಷ್ಮಿ |
ಜನನ:
ನನ್ನ ಹೆಸರು ಕೀರ್ತನ ಡಿ.ಎನ್.ನಾನು ಜುಲೈ ೨,೨೦೦೦ ರಂದು ಚಿಕ್ಕಬಳ್ಳಾಪುರ ಜಿಲ್ಲೆಯ, ಪ್ರಮುಖ ವ್ಯಾಪಾರ ಕೇಂದ್ರವಾದ ಚಿಂತಾಮಣಿ ತಾಲ್ಲೂಕಿನಲ್ಲಿ ಜನಿಸಿದೆ.ನನ್ನ ತಂದೆಯ ಹೆಸರು ನಾಗರಾಜ ಮತ್ತು ತಾಯಿ ರಾಜ್ಯಲಕ್ಷ್ಮೀ .ನನ್ನ ತಂದೆ ತಾಯಿಯರಿಗೆ ಇಬ್ಬರು ಮಕ್ಕಳು, ನಾನು ಮತ್ತು ಅಣ್ಣ ವಿನಯ್.ನನ್ನ ತಂದೆಗೆ ಹೆಣ್ಣು ಮಕ್ಕಳೆಂದರೆ ತುಂಬಾ ಇಷ್ಟವಿರುವ ಕಾರಣದಿಂದ ನನ್ನನ್ನು ತುಂಬಾ ಪ್ರೀತಿಸುತ್ತಾರೆ.ನಮ್ಮ ಮನೆಯಲ್ಲಿ ಎಲ್ಲರೂ ನನ್ನನ್ನು ಮುದ್ದಿನಿಂದ ನೋಡಿಕೊಳ್ಳುತ್ತಾರೆ. ನನ್ನ ಬಾಲ್ಯವು,ನನ್ನ ಪ್ರೀತಿಯ ಅಣ್ಣನ ಜೊತೆ, ಅಕ್ಕಪಕ್ಕದ ಗೆಳತಿ,ಗೆಳೆಯರೊಂದಿಗೆ ಆಟವಾಡಿಕೊಂಡು ಸಂತೋಷದಿಂದ ಕಳೆದೆ.
ಹವ್ಯಾಸಗಳು:
ನನ್ನ ಹವ್ಯಾಸಗಳೆಂದರೆ,ಹಾಡುಗಳನ್ನು ಕೇಳುವುದು, ಕ್ರೀಡೆಗಳಲ್ಲಿ ಭಾಗಿಯಾಗುವುದು.ನನಗೆ ಚಿತ್ರಕಲೆಯಲ್ಲಿ ಆಸಕ್ತಿ ಇರುವ ಕಾರಣದಿಂದ,ಪ್ರತಿದಿನ ಚಿತ್ರಕಲೆಗಾಗಿ ಒಂದು ಗಂಟೆಯಕಾಲ ಮೀಸಲಿಡುತ್ತೇನೆ.ಇವೆರಡರ ಜೊತೆ ನನಗೆ ನೃತ್ಯವೆಂದರೆ ತುಂಬಾ ಇಷ್ಟ.ಕಾದಂಬರಿ ಮತ್ತು ಕಥೆಯ ಪುಸ್ತಕಗಳನ್ನು ಓದಲು ಇಚ್ಚಿಸುತ್ತೇನೆ.ಟಿವಿ ನೋಡುವುದು, ಚಿಕ್ಕಮಕ್ಕಳೊಂದಿಗೆ ಆಟವಾಡಿಕೊಂಡು ಅವರೊಂದಿಗೆ ಸಮಯವನ್ನು ಕಳೆಯುವುದೆಂದರೆ ಬಹಳ ಇಷ್ಟ.
ವಿದ್ಯಾಭ್ಯಾಸ:
ನಾನು ನನ್ನ ವಿದ್ಯಾಭ್ಯಾಸವನ್ನು ಚಿಂತಾಮಣಿಯ ಕಿಶೋರ ವಿದ್ಯಾ ಭವನದಲ್ಲಿ ಪ್ರಾರಂಭಿಸಿದೆ.ಅಲ್ಲಿ ನನ್ನ ಓದು ನಿರಂತರವಾಗಿ ಸಾಗಿ ತರಗತಿಯಲ್ಲಿಯೂ ಅಧಿಕ ಅಂಕಗಳನ್ನು, ಒಳ್ಳೆಯ ಹೆಸರನ್ನುಗಳಿಸುತ್ತಾ ಶಿಕ್ಷಕರ ಗಮನವನ್ನು ಸೆಳೆದ್ದಿದೆ.ನನಗೆ ಓದುವುದರ ಜೊತೆಗೆ ಸಿನಿಮಾಗಳನ್ನು ನೋಡುವ ಆಸಕ್ತಿ ತುಂಬಾ ಇತ್ತು, ಆದರೂ ಅದನ್ನು ನನ್ನ ಓದಿಗೆ ಅಡ್ಡಿಯಾಗದಂತೆ ನೋಡಿಕೊಳ್ಳುತ್ತಿದ್ದೆ.ನನ್ನಲ್ಲಿ ಗುಪ್ತವಾಗಿದ್ದ ಚಿತ್ರಕಲೆಗಳನ್ನು ಶಿಕ್ಷಕರು ಗುರುತಿಸಿ ಅದನ್ನು ಪ್ರೋತ್ಸಾಹಿಸಿದರು,ಅಂದಿನಿಂದ ನಾನು ನನ್ನ ಜೀವನದಲ್ಲಿ ಚಿತ್ರಕಲೆಯನ್ನು ಒಂದು ಭಾಗವನ್ನಾಗಿಸಿಕೊಂಡೆ.ಅನೇಕ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ,ಹಾಗೆಯೇ ಅನೇಕ ಬಹುಮಾನಗಳನೂ ಪಡೆದೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ, ನೃತ್ಯ ಪ್ರದರ್ಶನಗಳಲ್ಲಿ ನಮ್ಮ ಶಾಲೆಯ ಪರವಾಗಿ ಹೋಗಿ ನಮ್ಮ ಶಾಲೆಯನ್ನು ಪ್ರತಿನಿಧಿಸುತ್ತಿದೆ. ವರ್ಷದಿಂದಾ ವರ್ಷಕ್ಕೆ ನಾನು ಸಾಗಿದಂತೆ ಉತ್ತಮ ಸ್ನೇಹ ಬಳಗವೂ ಸಹ ದೊರೆಯಿತು. ಎಲ್ಲಾ ತರಗತಿಯಲ್ಲೂ ಉತ್ತಮ ಅಂಕಗಳನ್ನುಗಳಿಸುತ್ತಾ ತೇರ್ಗಡೆಯಾಗುತ್ತಾ ಬಂದೆ. ನಾನು ಚೆನ್ನಾಗಿ ಓದಿ ನನ್ನ ತಂದೆ ತಾಯಿಗೆ ಒಳ್ಳೆಯ ಹೆಸರು ತರಬೇಕು ಎಂಬುದನ್ನು ನನ್ನ ಜೀವನದ ಗುರಿಯನ್ನಾಗಿಸಿಕೊಂಡೆ,ಅದರ ಕಡೆಯೇ ನಾನು ಶ್ರಮಿಸಲು ಆರಂಭಿಸಿದೆ. ದಿನಗಳು ಕಳೆದಂತೆ ನನ್ನ ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆ ಕೂಡ ಬಂದುಬಿಟ್ಟಿತ್ತು.ನಾನು ಅಂದುಕೊಂಡ ಹಾಗೆ ಶೇ.೯೫ ರಷ್ಟು ಅಂಕಗಳನ್ನುಗಳಿಸಿ ನನ್ನ ತಂದೆ ತಾಯಿಯ ಮುಖದಲ್ಲಿ ನಗುವನ್ನು ಮೂಡಿಸಿದೆ,ಇದಕ್ಕೆ ಶಿಕ್ಷಕರ ಉತ್ತಮ ಬೋಧನೆ ಮತ್ತು ಅವರ ಉತ್ತಮ ಮಾರ್ಗದರ್ಶನ, ನನ್ನ ತಂದೆ ತಾಯಿಯ ಪ್ರೋತ್ಸಾಹ ಹಾಗು ಉತ್ತಮ ಸ್ನೇಹಿತರ ಒಡನಾಟವೇ ಕಾರಣ. ನಾನು ಮುಂದೆ ನನ್ನ ಜೀವನದಲ್ಲಿ ಸಿ.ಎ ಮಾಡುವ ಉದ್ದೇಶದಿಂದ ವಾಣಿಜ್ಯ ವಿಭಾಗವನ್ನು ಆಯ್ಕೆ ಮಾಡಿಕೊಂಡು ಪ್ರಗತಿ ಕಾಲೇಜಿಗೆ ಸೇರಿದೆ, ಅಲ್ಲಿಯೂ ನನಗೆ ಉತ್ತಮ ಗುಣಮಟ್ಟದ ಶಿಕ್ಷಣ ಹಾಗೂ ಶಿಕ್ಷಕರು ದೊರೆತರು,ಅವರ ಸಹಾಯದಿಂದ ನಾನು ವಾಣಿಜ್ಯ ವಿಭಾಗದಲ್ಲಿ ಶೇ.೯೭ರಷ್ಟು ಅಂಕಗಳನ್ನುಗಳಿಸಿ ಜಿಲ್ಲೆಗೆ ೩ನೇ ಸ್ಥಾನವನ್ನು ಪಡೆದೆ.ನನ್ನ ವಿದ್ಯಾಭ್ಯಾಸದಲ್ಲಿನ ಪ್ರಗತಿಯನ್ನು ನನ್ನ ಕುಟುಂಬವು ಗುರುತಿಸಿ ಅದನ್ನು ಪ್ರೋತ್ಸಾಹಿಸಿದರು. ಅವರ ಇಚ್ಛೆಯಂತೆ ನಾನು ನನ್ನ ಮುಂದಿನ ಉಜ್ವಲ ಭವಿಷ್ಯಕ್ಕಾಗಿ ಬೆಂಗಳೂರಿಗೆ ಕ್ರೈಸ್ಟ್ ಯೂನಿವರ್ಸಿಟಿಗೆ ಸೇರಿದೆ.ಕಾಲೇಜಿಗೆ ಬಂದ ಹೊಸತರಲ್ಲಿ ನಾನು ಇತರರ ಜೊತೆ ಹೊಂದು ಕೊಂಡು ಹೊಗುವೆನೋ ಇಲ್ಲವೋ ಎಂಬ ಭಯವಿತ್ತು,ಆದರೆ ನಾನು ಎಲ್ಲರೊಂದಿಗೆ ಬೇಗನೆ ಬೆರೆಯುತ್ತ ಹೋದೆ.ಈಗ ನಾನು ನನ್ನ ಸಹಪಾಠಿಗಳೊಂದಿಗೆ ತುಂಬಾ ಸಂತೋಷದಿಂದ ಇರುವೆ.ಇಂದಿಗೂ ಕೂಡ ನಾನು ಓದಿನ ಅದೇ ದಾರಿಯಲ್ಲಿ ಸಾಗುತ್ತಿದ್ದೇನೆ.ನನ್ನಲ್ಲಿರುವ ಪ್ರತಿಭೆಗಳೂ ಸಹ ನನ್ನನ್ನು ಹಿಂಬಾಲಿಸುತ್ತಿವೆ.
ಪ್ರವಾಸ:
ನನಗೆ ಹೊಸ ಸ್ಥಳಗಳಿಗೆ ಪ್ರವಾಸ ಮಾಡುವುದು, ಅದರ ಇತಿಹಾಸವನ್ನು ತಿಳಿದುಕೊಳ್ಳುವುದೆಂದರೆ ಬಹಳ ಆಸಕ್ತಿ. ಆದಕಾರಣ ನನ್ನ ಏಳನೇ ತರಗತಿಯ ಪ್ರವಾಸದ ದಿನಗಳನ್ನು ನಾನು ಮರೆಯಲು ಸಾಧ್ಯವೇ ಇಲ್ಲ. ನಾವು ಹಂಪೆ,ಶಿವಮೊಗ್ಗ, ಬಿಜಾಪುರ ಸೇರಿದಂತೆ ಇನ್ನೂ ಹಲವಾರು ಸ್ಥಳಗಳಿಗೆ ಭೇಟಿ ನೀಡಿದೆವು.ಅದೇ ನಾನು ನನ್ನ ಸ್ನೇಹಿತರ ಜೊತೆ ಹೋದ ಮೊದಲ ಪ್ರವಾಸ.ಪ್ರವಾಸಕ್ಕೆ ಹೋಗಿ ಬಂದ ಮೇಲಂತೂ ನಮ್ಮ ಸ್ನೇಹ ಗಾಢವಾಗಿತ್ತು.ಅಲ್ಲಿ ನನಗೆ ಹೊಸ ಸ್ನೇಹಿತರ ಪರಿಚಯವು ಆಯಿತು. ಪ್ರತಿ ವರ್ಷದ ಬೇಸಿಗೆ ರಜೆಯಲ್ಲಿ ನಾನು ನನ್ನ ತಂದೆ ತಾಯಿಯರೊಂದಿಗೆ ತಿರುಪತಿ, ಧರ್ಮಸ್ಧಳ,ಶಿರಡಿ ಮುಂತಾದ ತೀರ್ಥಸ್ಧಳಗಳಿಗೆ ಹೋಗುತ್ತಿರುತ್ತೇನೆ.