ವಿಷಯಕ್ಕೆ ಹೋಗು

1ನೇ ಬ್ರಿಕ್ ಶೃಂಗಸಭೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
1ನೇ ಬ್ರಿಕ್ ಶೃಂಗಸಭೆ
ಅಧಿಕೃತ ಲಾಂಚನ (ಲೋಗೋ)
ಅತಿಥೇಯ ದೇಶರಷ್ಯಾ
ತಾರೀಕು16 ಜೂನ್ 2009
ನಗರ(ಗಳು)ಯೆಕ್ಟರಿನ್ಬರ್ಗ್
ಭಾಗವಹಿಸಿದವರುಬ್ರಿಕ್
ಮುಂಚಿನದು-
ನಂತರದ್ದು2ನೇ ಬ್ರಿಕ್ ಶೃಂಗಸಭೆ

1ನೇ ಬ್ರಿಕ್ ಶೃಂಗಸಭೆ ಬ್ರಿಕ್ ಸಂಘಟನೆಯ (ನಂತರದಲ್ಲಿ ಇದೇ ಬ್ರಿಕ್ಸ್ ಆಯಿತು) ಮೊದಲನೆಯ ಶೃಂಗಸಭೆ ಮತ್ತು ಇದು 16 ಜೂನ್ 2009ರಲ್ಲಿ ಯೆಕಟನ್ಬರ್ಗ್‌ನಲ್ಲಿ ನಡೆಯಿತು.[] ಗೋಲ್ಡ್‌ಮನ್ ಸ್ಯಾಕ್ಸ್‌ನ 2050ರ ವೇಳೆಗೆ ಬ್ರೆಜಿಲ್, ರಶಿಯ, ಭಾರತ ಮತ್ತು ಚೀನ ಪ್ರಮುಖ ಆರ್ಥಿಕತೆಗಳಾಗಿ ಹೊರಹೊಮ್ಮುತ್ತವೆ ಎಂಬ ಚಿಂತನೆಯ ಹಿನ್ನೆಲೆಯಲ್ಲಿ ಈ ಸಂಘಟನೆ ರೂಪಗೊಂಡಿತು.[]

ಭಾಗವಹಿಸಿದವರು

[ಬದಲಾಯಿಸಿ]
ಮೊದಲನೆಯ ಬ್ರಿಕ್ ಶೃಂಗಸಭೆಯ ನಾಯಕರು ಎಡದಿಂದ: ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಸಿಯೊ ಲುಲ ಡ ಸಿಲ್ವ, ರಷ್ಯಾದ ಅಧ್ಯಕ್ಷ ದಿಮಿತ್ರಿ ಮೆಡ್ವಡೇವ್, ಚೀನಾದ ಅಧ್ಯಕ್ಷ ಹು ಜಿಂಟಾವೊ ಮತ್ತು ಭಾರತದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್

ನಾಲ್ಕೂ ದೇಶದ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.[]

1ನೇ ಬ್ರಿಕ್ ಶೃಂಗಸಭೆಯಲ್ಲಿ ಹಾಜರಾದ ರಾಷ್ಟ್ರ ನಾಯಕರು
ಸದಸ್ಯರು ಪ್ರತಿನಿಧಿ ಹುದ್ಧೆ
Brazil ಬ್ರೆಜಿಲ್ ಲೂಯಿಜ್ ಇನಸಿಯೊ ಲುಲ ಡ ಸಿಲ್ವ ಅಧ್ಯಕ್ಷರು
Russia ರಶಿಯ ದಿಮಿತ್ರಿ ಮೆಡ್ವಡೇವ್ ಅಧ್ಯಕ್ಷರು
India ಭಾರತ ಮನಮೋಹನ್ ಸಿಂಗ್ ಪ್ರಧಾನ ಮಂತ್ರಿ
ಚೀನಾ ಚೀನಾ ಹು ಜಿಂಟಾವೊ ಅಧ್ಯಕ್ಷರು

ಚರ್ಚಾಂಶಗಳು

[ಬದಲಾಯಿಸಿ]

ಬ್ರಿಕ್ ನಾಯಕರು ಹೆಚ್ಚಿನ ಆರ್ಥಿಕ ಸುದಾರಣೆಗಳನ್ನು- "ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಗಳಲ್ಲಿ ಹೆಚ್ಚಿನ ಅಭಿಪ್ರಾಯಗಳನ್ನು ಕೊಡುವ ಹಕ್ಕುಗಳು ಮತ್ತು ಪ್ರಾತಿನಿದ್ಯವನ್ನೂ ಹಾಗೂ ಅವುಗಳ ಅಧಿಪತಿಗಳನ್ನು ಮತ್ತು ಹಿರಿಯ ನಾಯಕತ್ವವನ್ನು ನಿಯಮಿಸುವಾಗ ಹೆಚ್ಚಿನ ಮುಕ್ತತೆ, ಪಾರದರ್ಶಕತ್ವ ಮತ್ತು ಯೋಗ್ಯತೆಯನ್ನು ಆಧಾರಿವಾಗಿಸಿ ಕೊಳ್ಳ ಬೇಕು" ಎಂಬ ಬೇಡಿಕೆಗಳನ್ನು ಇಟ್ಟರು.[]

ಸಂಯುಕ್ತ ರಾಷ್ಟ್ರ ಸಂಸ್ಥೆಯ ಸುಧಾರಣೆಗಳ ಬಗೆಗೆ ನಾಯಕರು ಚರ್ಚಿಸಿದರು. "ನಾವು ಅಂತರರಾಷ್ಟ್ರೀಯ ವಿಚಾರಗಳಲ್ಲಿ ಭಾರತ ಮತ್ತು ಬ್ರೆಜಿಲ್‌ಗಳ ಪ್ರಾಮುಖ್ಯತೆಯ ಬಗೆಗೆ ಒತ್ತಿ ಹೇಳುತ್ತೇವೆ ಮತ್ತು ಅವು ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಹೆಚ್ಚಿನ ಪಾತ್ರ ವಹಿಸುವ ಆಸಕ್ತಿಯನ್ನು ಅರ್ಥ ಮಾಡಿಕೊಂಡು ಬೆಂಬಲಿಸುತ್ತೇವೆ" ಎಂದು ಈ ರಾಷ್ಟ್ರಗಳು ಹೇಳಿವೆ.[]

2007-2008ರ ಜಾಗತಿ ಆಹಾರ ಬೆಲೆಗಳ ಬಿಕ್ಕಟ್ಟು (ಜಾಗತಿಕ ಆಹಾರ ಬೆಲೆಗಳು 2007ರಲ್ಲಿ ಮತ್ತು 2008ರ ಮೊದಲ ಮತ್ತು ಎರಡನೆಯ ಕಾಲು ಭಾಗದಲ್ಲಿ ತೀವ್ರವಾಗಿ ಹೆಚ್ಚಾಗಿ ರಾಜಕೀಯ ಆರ್ಥಿಕ ಅಸ್ಥಿರತೆಗೆ ಕಾರಣವಾದವು) ಬಗೆಗಿನ ಹೇಳಿಕೆಯಲ್ಲಿ ಬ್ರಿಕ್ ರಾಷ್ಟ್ರಗಳು "ಎಲ್ಲಾ ಸರಕಾರಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಕ್ರಿಯಾಶೀಲವಾಗ ಬೇಕೆಂತಲೂ" ಮತ್ತು "ಈ ಸಮಸ್ಯೆಯಿಂದ ಹೊರಬರಲು ತನ್ನ ಕೊಡುಗೆಯ ಕೊಡುವ ಮೂಲಕ ಬದ್ಧತೆ ತೋರುತ್ತೇವೆ" ಎಂದು ಹೇಳಿದವು.[]

ಉಲ್ಲೇಖ

[ಬದಲಾಯಿಸಿ]
  1. First BRIC summit concludes Deutsche Welle. Retrieved on 2009-06-16. Archived 2009-06-19.
  2. "Goldman Sachs: The BRICs Dream: Web Tour" Archived 2011-09-24 ವೇಬ್ಯಾಕ್ ಮೆಷಿನ್ ನಲ್ಲಿ.. Archived from the original on 2009-06-19. Retrieved 2009-06-17.
  3. Developing world leaders show new power at summits Reuters. Retrieved on 2009-06-16.
  4. ೪.೦ ೪.೧ Joint Statement of the BRIC Countries’ Leaders Archived 2009-06-23 ವೇಬ್ಯಾಕ್ ಮೆಷಿನ್ ನಲ್ಲಿ. (ರಷ್ಯನ್‌ನಲ್ಲಿ) Kremlin.ru. Retrieved on 2009-06-17. Archived 2009-06-20.
  5. BRIC's Joint Statement on Global Food Security Archived 2009-06-22 ವೇಬ್ಯಾಕ್ ಮೆಷಿನ್ ನಲ್ಲಿ. (ರಷ್ಯನ್‌ನಲ್ಲಿ) Kremlin.ru. Retrieved on 2009-06-17.


ಆಧಾರ

Wikipedia English 1st BRIC Summit accessed on 2016-10-17 (ಉಲ್ಲೇಖಗಳು ಅಲ್ಲಿಯವೇ)