ಹೌಬರ ಕಾಡುಕೋಳಿ
ಹೌಬೊರ ಕಾಡುಕೋಳಿ ಇದು ಕಾಡು ಕೋಳಿಯಾ ಜಾತಿಯಲ್ಲಿ ಅತೀ ದೊಡ್ಡದಾದ ಪಕ್ಷಿ. ಹೌಬೊರ ಕಾಡುಕೋಳಿಯೂ ಚಿಕ್ಕದಿಂದ ದೊಡ್ಡ ಗಾತ್ರದವರೆಗೂ ಇರುತ್ತದೆ. ಅದರ ಗಾತ್ರ 55-65 ಸೆಂಟಿಮೀಟರ್ (22-26 ಇಂಚು) ಉದ್ದ, ಮತ್ತು 135-170 ಸೆಂಟಿಮೀಟರ್ ಅಗಲ. ಹೌಬೊರ ಕಾಡುಕೋಳಿ ಮೇಲಿನ ಬಾಗದಲ್ಲಿ ಕಂದು ಮತ್ತು ಕೆಳಗಿನ ಬಾಗದಲ್ಲಿ ಬಿಳಿ ಬಣ್ಣ ಹೊಂದಿದೆ.ಇದರ ಕತ್ತಿನ ಬಾಗದಲ್ಲಿ ಕಪ್ಪು ಗೆರೆಗಳಿರುತ್ತದೆ. ಹೌಬೊರ ಕಾಡುಕೋಳಿಯಾ ರೆಕ್ಕೆಗಳು ಉದ್ದವಾಗಿರುತ್ತದೆ. ಇದರ ರೆಕ್ಕೆಗಳು ಕಂದು ಮತ್ತು ಕಪ್ಪು ಬಣ್ಣಗಳಿಂದ ಕೂಡಿದೆ[೧]. ಗಂಡು ಮತ್ತು ಹೆಣ್ಣು ಹೌಬರ ಕಾಡುಕೋಳಿಗಳು ಒಂದೇ ರೀತಿ ಕಾಣುತ್ತದೆ. ಹೆಣ್ಣು ಹೌಬರ ಕಾಡುಕೋಳಿಗಿಂತ ಗಂಡು ಎತ್ತರವಾಗಿಯೂ ಮತ್ತು ಬೂದಿ ಬಣ್ಣ ಹೊಂದಿರುತ್ತದೆ. ಹೆಣ್ಣು ಹೌಬರ ಕಾಡುಕೋಳಿಯು ೬೬ಸೆಂಟಿಮೀಟರ್ ಉದ್ದ ೧-೧.೭ಕೆಜಿ ತೂಕ, ಹಾಗು ಗಂಡು ೭೭ಸೆಂಟಿಮೀಟರ್ ಉದ್ದ ೧.೧೫-೨.೪ ಕೆಜಿ ತೂಕ ಇರುತದೆ[೨].
ಟ್ಯಾಕ್ಸಾನಮಿ[ಬದಲಾಯಿಸಿ]
ಮಾಜಿ ಏಶಿಯನ್ ಉಪಜಾತಿ ಸಿ. ಉ. ಮೆಕ್ಕ್ವೀನಿಇ ಈಗ ಪುರಾಣ ಪ್ರಮಾಣದಲ್ಲಿ ವಿಭಜನೆಯಾಗಿದೆ ಮೈಕ್ ಕ್ವೀನ್ ಬಸ್ಟರ್ಡ್, ಕ್ಲ್ಯಾಮಿದೋಟಿಸ್ ಮ್ಯಾಕ್ ಕ್ವೀನಿಇ ಈ ಎರಡು ಜಾತಿಗಳೇ ಕ್ಲ್ಯಾಮಿದೋಟಿಸ್ ಕುಲದ ಸದಸ್ಯರು. ಕ್ಯಾನರಿಯನ್ ಕಾಡುಕೋಳಿ ಕ್ಲ್ಯಾಮಿದೋಟಿಸ್ ಉಂಡುಲತಾ ಫುಗ್ರ್ತವೆಂತುರಾಈಯ ಉಪಜಾತಿಯಾಗಿದೆ[೩].
ವಿತರಣೆ ಮತ್ತು ಆವಾಸಸ್ಥಾನ[ಬದಲಾಯಿಸಿ]
ಹೌಬರ ಕಾಡುಕೋಳಿಯೂ ಪಶ್ಚಿಮ ದೇಶಗಳಲ್ಲಿ ಅತಿಯಾಗಿ ಕಂಡುಬರುತ್ತದೆ ಉದಾಹರಣೆಗಾಗಿ ಉತ್ತರ ಆಫ್ರಿಕಾ, ಮಾರಿಟಾನಿಯನ ಸಹಾರ ಮರುಭೂಮಿ, ಮಾರಾಚೊ, ಆಲ್ಜೀರಿಯಾ, ಟುನೀಶಿಯ, ಲಿಬೆಯ್ ಮತ್ತು ಈಜಿಪ್ಟ್.ಕೆಲವು ಹಳೆಯ ದಾಖಲೆಗಳು ಸೂಡಾನ್ ನಲ್ಲಿ ಅಸ್ತಿತ್ವದಲ್ಲಿದೆ. ಸಣ್ಣ ಸಂಖ್ಯೆಯಲ್ಲಿ ಕ್ಯಾನರಿ ದ್ವೀಪಗಳಲ್ಲಿ ಕಂಡುಬರುತ್ತದೆ. ಏಷ್ಯನ್ ಹೌಬರ ಅಥವಾ ಮ್ಯಾಕ್ ಕ್ವೀನ್ ನ ಕಾಡುಕೋಳಿ ಈ ಜಾತಿಯಲ್ಲಿ ಸೇರಿಸಿಕೊಳ್ಳಲಾಯಿತು ಇದು ಪೂರ್ವ ಸಿನಾಯ್ ಪರ್ಯಾಯದ್ವೀಪ ಸಂಭಾವಿಸಿತ್ತು[೪].
ನಡವಳಿಕೆ[ಬದಲಾಯಿಸಿ]
ಇತರ ಹಕ್ಕಿಗಳು, ದಿನಕಳೆದಂತೆ ತಲೆ ಮತ್ತು ಕತ್ತಿನ ಬಿಳಿ ಗರಿಗಳು ಏರಿಸುವಿಕೆ ಮತ್ತು ತಲೆ ಬೈಠಕ್ ಹೊಂದಿದೆ. ಎರಡು ನಾಲ್ಕು ಮೊಟ್ಟೆಗಳು ನೆಲದ ಮೇಲೆ ಹಾಕುತ್ತದೆ.
ಆಹಾರ[ಬದಲಾಯಿಸಿ]
ಹೌಬರ ಕಾಡುಕೋಳಿಯೂ ಸರ್ವಭಕ್ಷಕ, ಅವು ಬೀಜಗಳು, ಕೀಟಗಳು ಮತ್ತು ಸಣ್ಣ ಜೀವಿಗಳನ್ನು ತಿನ್ನುತ್ತದೆ.
ಸ್ಥಿತಿ[ಬದಲಾಯಿಸಿ]
ಕ್ಯಾನರಿ ದ್ವೀಪಗಳಲ್ಲಿ ಉಪಜಾತಿಗಳು ಫುಗ್ರ್ತವೆಂತುರಾಈ ತೀರಾ ನಿರ್ಬಂಧಿತವಾಗಿತ್ತು ಮತ್ತು ಅಳಿವಿನಂಚಿನಲ್ಲಿತ್ತು. 1997 ಸಮೀಕ್ಷೆಯಲ್ಲಿ ಸುಮಾರು 500 ಪಕ್ಷಿಗಳ ಒಟ್ಟು ಸಂಖ್ಯೆ ಕಂಡುಬಂದಿದೆ.ಹೌಬರ ಕಾಡುಕೋಳಿಯೂ ಆಹಾರಾಕ್ಕಾಗಿಯೂ ಬೇಟೆಯಾಡುತ್ತಾರೆ. ಇದರಿಂದ ಇದರ ಸಂಖ್ಯೆ ಕಡಿಮೆಯಾಗುತ್ತ ಬಂದಿದೆ. ಏಶಿಯನ್ ಹೌಬರ ಸಂಖ್ಯೆಯು ಸಮೀಕ್ಷೆಯ ಪ್ರಕಾರ ಹೆಚ್ಚಾಗುತ್ತಿದೆ ಎಂದು ತಿಳುದುಬಂದಿದೆ. ಗಿಡುಗಗಳು ಹೌಬರ ಕಾಡುಕೋಳಿಯನ್ನು ಬೇಟೆಯಾಡುತ್ತದೆ, ಹಾಗು ಮಾನವರು ಸಹ ಬಂದೂಕಿನಿಂದ ಬೇಟೆಯಾಡುತ್ತಾರೆ. ಪಶ್ಚಿಮ ಏಷ್ಯಾ ಬಾಗಗಳಲ್ಲಿ ಬೇಟೆಯಾಡುವ ಸಂಖ್ಯೆ ಕಡಿಮೆ. ಅಂತರರಾಷ್ಟ್ರೀಯ ಸಂಸ್ಥೆಯಾದ ಇಂಟರ್ನ್ಯಾಷನಲ್ ಫೌಂಡೇಶನ್ ಫಾರ್ ಕನ್ಸರ್ವೇಷನ್ ಅಂಡ್ ಡೆವಲಪ್ಮೆಂಟ್ ಆ ವೈಲ್ಡ್ಲೈಫ್ ( ಇಫ್ಚ್ಡ್ಡಬ್ಲ್ಯೂ ) ಯು ಈ ಪಕ್ಷಿ ಸಂತತಿಯನ್ನು ಹೆಚ್ಚಿಸಲು ಮತ್ತು ಕಾಪಾಡಲು ಯೂಜೆಯನ್ನು ರೂಪಿಸಿದೆ. ಪ್ರಿನ್ಸ್ ಸುಲ್ತಾನ್ ಬಿನ್ ಅಬ್ದುಲ್ ಅಝೀಜ್ ಅಲ್ಸಕ್ಡ್ರರವರು ಈ ಯೋಜನೆಗೆ ಬಹಳಷ್ಟು ಅನುದಾನವನ್ನು ನೀಡಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್ ದೇಶಗಳಲ್ಲಿ ಕೃತಕ ಗರ್ಭಧಾರಣೆ ಸಹ ಕೈಗೊಳ್ಳಲಾಗುತ್ತದೆ[೫].