ಹೊಸಬೆಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೊಸಬೆಟ್ಟು ಭಾರತದ ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಗ್ರಾಮ. ಇದು ಮೂಡುಬಿದಿರೆ ಮತ್ತು ಮಂಗಳೂರಿನ ಬಳಿ ಇದೆ.

ಜನಸಂಖ್ಯಾಶಾಸ್ತ್ರ[ಬದಲಾಯಿಸಿ]

2011 ರ ಭಾರತದ ಜನಗಣತಿಯ ಪ್ರಕಾರ, ಹೊಸಬೆಟ್ಟು 2,260 ಜನಸಂಖ್ಯೆಯನ್ನು ಹೊಂದಿತ್ತು. ಜನಸಂಖ್ಯೆಯಲ್ಲಿ ಪುರುಷರು 48.45% ಮತ್ತು ಮಹಿಳೆಯರು 51.55% ರಷ್ಟಿದ್ದಾರೆ. ಹೊಸಬೆಟ್ಟು ಗ್ರಾಮವು 1006.63 ಹೆಕ್ಟೇರ್ ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದ್ದು ಅದರಲ್ಲಿ 498 ಕುಟುಂಬಗಳು ವಾಸವಾಗಿವೆ. ಸರಾಸರಿ ಲಿಂಗ ಅನುಪಾತ 1064 ಆಗಿತ್ತು. ಹೊಸಬೆಟ್ಟು ಸರಾಸರಿ 90.3% ಸಾಕ್ಷರತೆಯನ್ನು ಹೊಂದಿದ್ದು, ರಾಷ್ಟ್ರೀಯ ಸರಾಸರಿ 74.04% ಗಿಂತ ಹೆಚ್ಚಾಗಿದೆ: ಪುರುಷರ ಸಾಕ್ಷರತೆ 94.3%, ಮತ್ತು ಮಹಿಳಾ ಸಾಕ್ಷರತೆ 86.6%. ಹೊಸಬೆಟ್ಟುವಿನಲ್ಲಿ ಶೇ.8ರಷ್ಟು ಮಂದಿ 6 ವರ್ಷದೊಳಗಿನವರು. ಇಲ್ಲಿನ ಭಾಷೆಗಳು ಪ್ರಾಥಮಿಕವಾಗಿ ತುಳು, ಕೊಂಕಣಿ ಮತ್ತು ಕನ್ನಡ .

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಸುರತ್ಕಲ್ ಬಳಿ ಹೊಸಬೆಟ್ಟು ಎಂಬ ಹೆಸರಿನ ಮತ್ತೊಂದು ಸ್ಥಳವಿದೆ. ಈ ಹೊಸಬೆಟ್ಟು ರಾಷ್ಟ್ರೀಯ ಹೆದ್ದಾರಿ 66 (ಹಿಂದೆ ಯೆನ್ ಹೇಚ್-17) ಪನ್ವೇಲ್ (ಮುಂಬೈ ನಗರದ ಹತ್ತಿರ) ನಿಂದ ಕೊಚ್ಚಿ (ಕೊಚ್ಚಿನ್) ಗೆ ಹೊಂದಿಕೊಂಡಿದೆ.

ಉಲ್ಲೇಖಗಳು[ಬದಲಾಯಿಸಿ]