ಹುಬ್ಬಳ್ಳಿ ಧಾರವಾಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಬ್ಬಳ್ಳಿ ಧಾರವಾಡ ಕರ್ನಾಟಕ ರಾಜ್ಯದ ಅವಳಿ ನಗರ ಮತ್ತು ಕರ್ನಾಟಕದ ಎರಡನೇ ಅತಿದೊಡ್ಡ ನಗರವಾಗಿದೆ[೧] , ಧಾರವಾಡವು ಆಡಳಿತ ಮತ್ತು ಶೈಕ್ಷಣಿಕ ಕೇಂದ್ರವಾಗಿದ್ದರೆ, ಹುಬ್ಬಳ್ಳಿಯು ವಾಣಿಜ್ಯ ಕೇಂದ್ರವಾಗಿದೆ. ಹುಬ್ಬಳ್ಳಿ-ಧಾರವಾಡವು ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ವಾಣಿಜ್ಯ ಮತ್ತು ಸಾಂಸ್ಕೃತಿಕ ಎರಡರಲ್ಲೂ ತನ್ನ ಕೊಡುಗೆಗಳನ್ನು ನೀಡುತ್ತಿದೆ. ಅವಳಿ ನಗರಗಳು ರೈಲು ಮತ್ತು ರಸ್ತೆ ಎರಡರಿಂದಲೂ ಉತ್ತಮ ಸಂಪರ್ಕ ಹೊಂದಿವೆ. ಇದು ಕರ್ನಾಟಕದ ಏಕೈಕ BRTS (ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್) ಅನ್ನು ಹೊಂದಿದೆ.

ಹುಬ್ಬಳ್ಳಿ ಧಾರವಾಡ
ನಗರ
B.V. Bhoomaraddi College of Engineering and Technology.jpg
HDMC Corporate Office, Dharwad.jpg
HDMC Dharwad.jpg
Hubli railway.jpg
Chandramouleshware Temple.JPG
Two fort gates inner.JPG
Nickname(s): 
ಅವಳಿನಗರ
ದೇಶ ಭಾರತ
ರಾಜ್ಯ ಕರ್ನಾಟಕ
ಜಿಲ್ಲೆಧಾರವಾಡ
ಮಹಾನಗರ ರಚನೆ1962
ಸರ್ಕಾರ
 •  ಸಭಾಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ
ಜನಸಂಖ್ಯೆ
 (2011)
 • ಒಟ್ಟು೯,೪೩,೮೫೭
 • Rankಭಾರತ: 52
ಕರ್ನಾಟಕ: 2
ಭಾಷೆ
 • ಅಧಿಕೃತಕನ್ನಡ
ಜಾಲತಾಣwww.hdmc.mrc.gov.in/kn

ಜನಸಂಖ್ಯಾ[ಬದಲಾಯಿಸಿ]

2011 ರ ಜನಗಣತಿಯ ಪ್ರಕಾರ ಅವಳಿನಗರದ ಜನಸಂಖ್ಯೆ 943,857, ಹುಬ್ಬಳ್ಳಿ ಧಾರವಾಡ ಜನಸಂಖ್ಯೆಯು 1981 ಮತ್ತು 1991 ರ ನಡುವೆ ಶೇಕಡಾ 22.99% ರಷ್ಟು ಅಂದರೆ 5,27,108 ರಿಂದ 6,48,298ತನಕ ಏರಿಕೆಯಾಗಿದೆ. ಹಾಗೂ 1991 ರಿಂದ 2001 ರ ತನಕ ಶೇಕಡಾ 21.2% ರಷ್ಟು ಏರಿಕೆಯಾಗಿದೆ.[೨] ಹುಬ್ಬಳ್ಳಿ ಧಾರವಾಡದ ಸಾಕ್ಷರತೆ ಶೇಕಡಾ 87.28% .[೩][೪]

ಹುಬ್ಬಳ್ಳಿ-ಧಾರವಾಡದ ಜನಸಂಖ್ಯೆಯ ಬೆಳವಣಿಗೆ
YearPop.±%
1901೮೧,೧೪೩—    
1911೯೧,೦೩೧+12.2%
1921೧,೦೦,೯೯೨+10.9%
1931೧,೨೪,೩೯೮+23.2%
1941೧,೪೩,೫೦೪+15.4%
1951೧,೯೬,೧೮೦+36.7%
1961೨,೪೮,೪೮೯+26.7%
1971೩,೭೯,೧೬೬+52.6%
1981೫,೨೭,೧೦೮+39.0%
1991೬,೪೮,೨೯೮+23.0%
2001೭,೮೬,೧೯೫+21.3%
2011೯,೪೩,೮೫೭+20.1%
Source: 2011ರ ಜನಗಣತಿ[೫]
ಹುಬ್ಬಳ್ಳಿಯ ಜನಸಂಖ್ಯಾ ಬೆಳವಣಿಗೆ
YearPop.±%
1901೫೯,೯೧೩—    
1911೬೧,೪೪೦+2.5%
1921೬೬,೭೭೨+8.7%
1931೮೩,೪೯೪+25.0%
1941೯೫,೫೧೨+14.4%
1951೧,೨೯,೬೦೯+35.7%
1961೧,೭೧,೩೨೬+32.2%
2001೫,೩೩,೮೨೦+211.6%
Source: 2011ರ ಜನಗಣತಿ[೫][೬]
ಧಾರವಾಡದ ಜನಸಂಖ್ಯೆಯ ಬೆಳವಣಿಗೆ
YearPop.±%
1901೨೧,೨೩೦—    
1911೨೯,೫೯೧+39.4%
1921೩೪,೨೨೦+15.6%
1931೪೦,೯೦೪+19.5%
1941೪೭,೯೯೨+17.3%
1951೬೬,೫೭೧+38.7%
1961೭೭,೧೬೩+15.9%
2001೨,೫೨,೩೭೫+227.1%
Source: 2011ರ ಜನಗಣತಿ[೫][೬]

ಧರ್ಮ[ಬದಲಾಯಿಸಿ]

Religions in Hubli-Dharwad (2011)[೭]
ಧರ್ಮ ಶೇಕಡಾ
ಹಿಂದೂ
  
67.44%
ಇಸ್ಲಾಂ
  
27.15%
ಕ್ರಿಶ್ಚಿಯನ್
  
2.79%
ಜೈನ
  
1.61%
ಇತರೆ
  
1.01%

ಹುಬ್ಬಳ್ಳಿ-ಧಾರವಾಡ ಧಾರ್ಮಿಕವಾಗಿ ವೈವಿಧ್ಯಮಯ ಜನಸಂಖ್ಯೆಯನ್ನು ಹೊಂದಿದೆ. 2011 ರ ಜನಗಣತಿಯ ಪ್ರಕಾರ ಜನಸಂಖ್ಯೆಯ ಶೇಕಡಾ 67.44% ರಷ್ಟು ಹಿಂದೂ ಗಳು, ಶೇಕಡಾ 27.15% ರಷ್ಟು ಮುಸಲ್ಮಾನರು, ಶೇಕಡಾ 2.79% ರಷ್ಟು ಕ್ರಿಶ್ಚಿಯನ್, ಶೇಕಡಾ 1.61% ರಷ್ಟು ಜೈನರು, ಶೇಕಡಾ 1.01% ರಷ್ಟು ಇತರ ಧರ್ಮದವರು ನಗರದಲ್ಲಿ ವಾಸವಿದ್ದಾರೆ.

ಭಾಷೆ[ಬದಲಾಯಿಸಿ]

ಈ ನಗರದ ಆಡಳಿತ ಮತ್ತು ವ್ಯವಹಾರಿಕ ಭಾಷೆ ಕನ್ನಡವಾಗಿದೆ.

ಆಡಳಿತ[ಬದಲಾಯಿಸಿ]

 • ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯನ್ನು 1962ರಲ್ಲೀ ಹುಬ್ಬಳ್ಳಿ ಮತ್ತು ಧಾರವಾಡ ಎರಡು ನಗರವನ್ನು ಸೇರಿಸಿ ರಚಿಸಲಾಯಿತು. ಪಾಲಿಕೆಯ ವ್ಯಾಪ್ತಿಯು 181.66 km2 (70.14 sq mi) ಮತ್ತು 45 ಕಂದಾಯ ಹಳ್ಳಿಗಳನ್ನು ಒಳಗೊಂಡಿದೆ.

ಆರ್ಥಿಕತೆ[ಬದಲಾಯಿಸಿ]

ಕೈಗಾರಿಕಾ ಮತ್ತು ವ್ಯಾಪಾರ ಅಭಿವೃದ್ಧಿ[ಬದಲಾಯಿಸಿ]

ಹುಬ್ಬಳ್ಳಿ-ಧಾರವಾಡವು ಕರ್ನಾಟಕ ರಾಜ್ಯದ 2 ನೇ ಅತಿ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ ಮತ್ತು ರಾಜ್ಯ ರಾಜಧಾನಿಯ ನಂತರ ಕರ್ನಾಟಕದಲ್ಲಿ ಕೈಗಾರಿಕಾ ಕೇಂದ್ರವನ್ನು ಅಭಿವೃದ್ಧಿಪಡಿಸುತ್ತಿರವ ನಗರವಾಗಿದೆ,[೮] [೯] ಕೈಗಾರಿಕೆಗಳು, ಸಂಸ್ಥೆಗಳು ಮತ್ತು ವ್ಯವಹಾರಗಳ ಒಟ್ಟಾರೆ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸಲು, ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರಿ ಅನ್ನು ಸ್ಥಾಪಿಸಲಾಗಿದೆ.[೧೦] ಇದು ಹುಬ್ಬಳ್ಳಿ ಪ್ರದೇಶದಲ್ಲಿ ಸಂಭಾವ್ಯ ಬೆಳವಣಿಗೆ ಮತ್ತು ಸಮೃದ್ಧಿಯನ್ನು ಸಾಧಿಸುವಲ್ಲಿ ಸಹಕಾರಿಯಾಗಿದೆ.[೧೧] [೧೨][೧೩]

ಸಾರಿಗೆ[ಬದಲಾಯಿಸಿ]

ವಾಯು ಸಾರಿಗೆ[ಬದಲಾಯಿಸಿ]

ಹುಬ್ಬಳ್ಳಿ ವಿಮಾನ ನಿಲ್ದಾಣ

ಹುಬ್ಬಳ್ಳಿ ವಿಮಾನ ನಿಲ್ದಾಣ (IATA: HBXICAO: VOHB) ಇದು ಹುಬ್ಬಳ್ಳಿ ಧಾರವಾಡ ಮತ್ತು ಉತ್ತರಕರ್ನಾಟಕದ ಜಿಲ್ಲೆಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಉಪವಿಭಾಗಕ್ಕೆ ಸೇವೆ ನೀಡುವ ಪ್ರಾದೇಶಿಕ ವಿಮಾನ ನಿಲ್ದಾಣವಾಗಿದೆ. ಇದು ಹುಬ್ಬಳ್ಳಿಯಿಂದ 8 km (5.0 mi) ಅಂತರದಲ್ಲಿದೆ.ಮತ್ತು ಧಾರವಾಡದಿಂದ 20 km (12 mi) ಅಂತರದಲ್ಲಿ ಇದೆ. ಇದು ಕರ್ನಾಟಕದ 3ನೆ ಮತ್ತು ಭಾರತದ 45ನೆ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಮಾರ್ಚ್ 2020 ರಲ್ಲಿ, ಹುಬ್ಬಳ್ಳಿ ವಿಮಾನ ನಿಲ್ದಾಣವು ಭಾರತ ಸರ್ಕಾರದ ಪ್ರಾದೇಶಿಕ ಸಂಪರ್ಕ ಯೋಜನೆಯಡಿಯಲ್ಲಿ ಅತ್ಯುತ್ತಮ ವಿಮಾನ ನಿಲ್ದಾಣ ಪ್ರಶಸ್ತಿಯನ್ನು ಪಡೆದಿದೆ.[೧೪][೧೫][೧೬]

ರೈಲು[ಬದಲಾಯಿಸಿ]

South Western Railway headquarters, Hubli railway station

ನಗರವು ಪ್ರಸ್ತುತ ನಾಲ್ಕು ನಿಲ್ದಾಣಗಳನ್ನು ಮತ್ತು ಒಂದು ಜಂಕ್ಷನ್ ಅನ್ನು ಹೊಂದಿದೆ. ಹುಬ್ಬಳ್ಳಿ ಜಂಕ್ಷನ್ ರೈಲ್ವೇ ನಿಲ್ದಾಣ 161460 ಚ.ಅಡಿ ವಿಸ್ತೀರ್ಣವನ್ನು ಹೊಂದಿರುವ ನಗರದ ಪ್ರಮುಖ ರೈಲು ನಿಲ್ದಾಣವಾಗಿದೆ.[೧೭] ಇತರ ನಿಲ್ದಾಣಗಳೆಂದರೆ ಹುಬ್ಬಳ್ಳಿ ದಕ್ಷಿಣ, ಹುಬ್ಬಳ್ಳಿ ಪೂರ್ವ, ಉಣಕಲ್ ಮತ್ತು ಅಮರಗೋಳ. ಹುಬ್ಬಳ್ಳಿಯು ದಕ್ಷಿಣ ಪಶ್ಚಿಮ ರೈಲ್ವೇ ವಲದ ಪ್ರಧಾನ ಕಛೇರಿಯಾಗಿದೆ, ಇದನ್ನು ದಕ್ಷಿಣ ಮಧ್ಯ ರೈಲ್ವೆಯಿಂದ ವಿಭಜಿಸಿ ನೂತನ ವಲಯವಾಗಿ ರಚಿಸಲಾಗಿದೆ. ಇದು ಹುಬ್ಬಳ್ಳಿ ವಿಭಾಗದ ಕೇಂದ್ರವಾಗಿದೆ. ಹುಬ್ಬಳ್ಳಿ ವಿಭಾಗವು ಭಾರತದಲ್ಲಿ ಅತಿ ಹೆಚ್ಚು ಆದಾಯವನ್ನು ಗಳಿಸುವ ವಿಭಾಗಗಳಲ್ಲಿ ಒಂದಾಗಿದೆ. ಹುಬ್ಬಳ್ಳಿಯು ಭಾರತದಲ್ಲಿನ ಎಲ್ಲಾ ಪ್ರಮುಖ ನಗರಗಳ ಜೊತೆ ಉತ್ತಮ ರೈಲ್ವೆ ಸಂಪರ್ಕವನ್ನೂ ಹೊಂದಿದೆ. [೧೮] ನವೆಂಬರ್ 2019 ರಲ್ಲಿ, ಸರ್ಕಾರವು 90 ಕೋಟಿ ಅಂದಾಜು ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಅನ್ನು ವಿಸ್ತರಿಸುವ ಕೆಲಸವನ್ನು ಕೈಗೆತ್ತಿಕೊಂಡಿತು, ರೈಲ್ವೆ ಅಧಿಕಾರಿಗಳ ಪ್ರಕಾರ, ನವೀಕರಿಸಿದ ಪ್ಲಾಟ್‌ಫಾರ್ಮ್‌ನ ಉದ್ದವು 1,400 ಮೀಟರ್ ಎಂದು ಅಂದಾಜಿಸಲಾಗಿದೆ, ಇದು ವಿಶ್ವದ ಅತಿ ಉದ್ದವಾದ ರೈಲ್ವೆ ಫ್ಲಾಟ್ ಫಾರ್ಮ್ ಆಗಿದೆ. 2020ರ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.[೧೯] ಹುಬ್ಬಳ್ಳಿಯಲ್ಲಿ ಹೆರಿಟೇಜ್ ರೈಲ್ ಮ್ಯೂಸಿಯಂ ಕೂಡ ಇದೆ.[೨೦]

ರಸ್ತೆ ಸಾರಿಗೆ[ಬದಲಾಯಿಸಿ]

ಹುಬ್ಬಳ್ಳಿಯು "Golden Quadrilateral"ನ ಒಂದು ಪ್ರಮುಖ ನಗರವಾಗಿದೆ.ನಗರದಲ್ಲಿ ಏಷ್ಯನ್ ಹೆದ್ದಾರಿ 47, ರಾಷ್ಟ್ರೀಯ ಹೆದ್ದಾರಿ 63 ಮತ್ತು ರಾಷ್ಟ್ರೀಯ ಹೆದ್ದಾರಿ 218 ಹಾದು ಹೋಗುತ್ತದೆ, ಇದರಿಂದಾಗಿ ಹುಬ್ಬಳ್ಳಿಯ ಭಾರತದ ಪ್ರಮುಖ ನಗರಗಳ ಜೊತೆಗೆ ಸಂಪರ್ಕಿಸಲು ಸಹಾಯವಾಗಿದೆ. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಕಚೇರಿಯು ಹುಬ್ಬಳ್ಳಿ ನಗರದಲ್ಲಿ ಇದೆ.

ಹುಬ್ಬಳ್ಳಿ-ಧಾರವಾಡ BRTS[ಬದಲಾಯಿಸಿ]

Hdbrt2.jpg

HBBRTS ಇದು ಹುಬ್ಬಳ್ಳಿ ಮತ್ತು ಧಾರವಾಡ ಅವಳಿ ನಗರಗಳಿಗೆ ಸೇವೆ ನೀಡಲು ನಿರ್ಮಿಸಲಾದ ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆಯಾಗಿದೆ , ಹುಬ್ಬಳ್ಳಿ-ಧಾರವಾಡ BRTS ಯೋಜನೆಯು ಈ ಪ್ರದೇಶದಲ್ಲಿ ದೀರ್ಘಾವಧಿಯ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಕರ್ನಾಟಕ ಸರ್ಕಾರದ ಯೋಜನೆಯಾಗಿದೆ. ಈ ಯೋಜನೆಯು ಅವಳಿ ನಗರಗಳ ನಡುವೆ ವೇಗದ, ಸುರಕ್ಷಿತ, ಆರಾಮದಾಯಕ, ಅನುಕೂಲಕರ ಮತ್ತು ಕೈಗೆಟುಕುವ ಸಾರ್ವಜನಿಕ ಸಾರಿಗೆಯನ್ನು ನೀಡುತ್ತಿದೆ ಮತ್ತು ಪ್ರದೇಶದಲ್ಲಿ ವಾಹನ ದಟ್ಟಣೆ ಮತ್ತು ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. "Cities having population 1 lakh and above, Census 2011" (PDF). censusindia.gov.in. Retrieved 27 February 2021.
 2. "Census of India 2011 Provisional Population Totals" (PDF).
 3. "Hubli and Dharwad City Census 2011 (C korya)data". Census2011. Retrieved 29 September 2018.
 4. "Census of India 2011 Provisional Population Totals" (PDF).
 5. ೫.೦ ೫.೧ ೫.೨ "Provisional population totals, Census of India 2011". Retrieved 29 ನವೆಂಬರ್ 2011.
 6. ೬.೦ ೬.೧ "HDMC ABOUT TWIN CITY". Archived from the original on 20 April 2012.
 7. "C-1 Population By Religious Community". Census of India.
 8. "Gokul Road (Hubballi (Hubali))".
 9. "Google Maps". Google Maps.
 10. "Main building".
 11. "Karnatak Chamber of Commerce and Industry".
 12. "Agmarknet Mandi profile". Archived from the original on 16 July 2011. Retrieved 13 November 2012.
 13. "APMC - Hubballi (Hubali)". wikimapia.org.
 14. "Hubballi Airport bags award under Regional Connectivity Scheme | Hubballi News - Times of India". The Times of India. Retrieved 23 June 2020.
 15. Kattimani, Basavaraj (30 November 2018). "Get ready to fly abroad from Hubballi airport | Hubballi News - Times of India". The Times of India (in ಇಂಗ್ಲಿಷ್). Retrieved 7 December 2020.
 16. "Hubballi Is Best Choice for International Airport of N-Karnataka: Angadi". Hubballi Times (in ಅಮೆರಿಕನ್ ಇಂಗ್ಲಿಷ್). 10 March 2020. Archived from the original on 23 ಜುಲೈ 2020. Retrieved 23 July 2020.
 17. "Railway Station, Hubli | KAF Architects Bangalore". 12 January 2017.
 18. BS Reporter (12 September 2012). "Monorail proposed in Hubli-Dharwad". Business Standard India.
 19. "Karnataka's Hubballi to get world's longest railway platform | Cities News,The Indian Express". 5 June 2020. Retrieved 23 June 2020.
 20. Sharma, Karun (14 November 2019). "New Rail Heritage Museum coming up at Hubballi". www.thehansindia.com (in ಇಂಗ್ಲಿಷ್). Retrieved 23 July 2020.