ಹಿಂದೂ ಧರ್ಮದಲ್ಲಿ ಧ್ಯಾನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಧ್ಯಾನದಲ್ಲಿ ಮಗ್ನವಾಗಿರುವ ಯೋಗಿ

ಬಹುತೇಕ ನಂತರದ ಹಿಂದೂ ಸಂಪ್ರದಾಯಗಳಲ್ಲಿ, ಧ್ಯಾನವು ಪರಿಷ್ಕೃತ ಮನನಾಭ್ಯಾಸ, ಮನಸ್ಸಿನ ಹೆಚ್ಚು ಆಳವಾದ ಏಕಾಗ್ರತೆ. ಧ್ಯಾನವನ್ನು ಮೊದಲಿನ ಅಭ್ಯಾಸಗಳ ನಂತರ ಎತ್ತಿಕೊಳ್ಳಲಾಗುತ್ತದೆ ಮತ್ತು ಇದು ಸಮಾಧಿ ಹಾಗು ಆತ್ಮಜ್ಞಾನಕ್ಕೆ ದಾರಿತೋರುತ್ತದೆ, ಅಂತಿಮ ಗುರಿಯಾದ ಮೋಕ್ಷವನ್ನು ಸಾಧಿಸಲು ಸಹಾಯಮಾಡಲು ಮಾಯೆಯನ್ನು ವಾಸ್ತವದಿಂದ ಪ್ರತ್ಯೇಕಿಸುತ್ತದೆ. ಧ್ಯಾನ ಪದವನ್ನು ಸ್ವಲ್ಪ ವಿಭಿನ್ನ ಅರ್ಥಗಳೊಂದಿಗೆ ಜೈನ ಧರ್ಮ, ಬೌದ್ಧ ಧರ್ಮ ಮತ್ತು ಹಿಂದೂ ಧರ್ಮದಲ್ಲಿ ಬಳಸಲಾಗುತ್ತದೆ.