ವಿಷಯಕ್ಕೆ ಹೋಗು

ಹಿಂಗ್ಲಾಜ್ ದೇವಸ್ಥಾನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಂಗ್ಲಾಜ್ ದೇವಿಯ ಮಂದಿರ


ಹಿಂಗ್ಲಾಜ್ ದೇವಸ್ಥಾನ

ಹೆಸರು: ಹಿಂಗ್ಲಾಜ್ ದೇವಸ್ಥಾನ

ಹಿಂಗ್ಲಾಜ್ ದೇವಿಯನ್ನು, ಹಿಂಗ್ಲಾಜ್ ಮಾತಾ, ಹಿಂಗುಳಾ ದೇವಿ ಮತ್ತು ನಾನಿ ಮಂದಿರ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ. ಹಿಂಗ್ಲಾಜ್ ದೇವಸ್ಥಾನವು ಪಾಕಿಸ್ತಾನದ, ಬಲೂಚಿಸ್ಥಾನ ರಾಜ್ಯದ ಲಸ್ಬೆಲ ಜಿಲ್ಲೆಯ ಹಿಂಗ್ಲಾಜ್ ಎಂಬ ಪ್ರಾಂತ್ಯದಲ್ಲಿದೆ.ಈ ದೇವಾಲಯ ಹಿಂಗೋಳ ನದಿಯ ತೀರದಲ್ಲಿ ಒಂದು ಬೆಟ್ಟದ ಗುಹೆಯಲ್ಲಿ ದುರ್ಗೆಯ ಅಥವ ದೇವಿಯ ರೂಪದಲ್ಲಿದೆ.ಹಿಂಗ್ಲಾಜ್ ದೇವಿಯ ದೇಗುಲ ೫೧ ಶಕ್ತಿಪೀಠಗಳಲ್ಲಿ ಒಂದು.ಹಿಂಗ್ಲಾಜ್ ದೇವಿಯು ಭಾರತದಲ್ಲಿಯೇ ಹಲವಾರು ಕ್ಷತ್ರಿಯರ ಹಾಗು ಇತರ ಸಮುದಾಯಗಳ ಕುಲದೇವತೆಯಾಗಿದ್ದಾಳೆ.

ಭೌಗೋಳಿಕಥೆ

[ಬದಲಾಯಿಸಿ]

ಪಾಕಿಸ್ತಾನ್ ದೇಶದ, ಬಲೂಚಿಸ್ಥಾನ್ ಎಂಬ ಪ್ರಾಂತ್ಯಕ್ಕೆ ಸೇರ್ಪಡೆ ಆಗುವ ಲ್ಯರಿ ತೆಹ್ಸಿಲ್ ಅನ್ನುವ ಬೆಟ್ಟದ ಪ್ರದೇಶದಲ್ಲಿ ಹಿಂಗ್ಲಾಜ್ ಮಾತ ಗುಹಾಲಯವಿದೆ.ಈ ಗುಹಾಲಯವೂ ಕರಾಚೀಯಿಂದ ಸುಮಾರು ೨೫೦ ಕಿ.ಮೀ.,ವಾಯುವ್ಯ ದಿಕ್ಕಿನಲ್ಲಿ ಇದೆ. ಅಷ್ಟೇ ಅಲ್ಲದೆ ಅರೆಬ್ಬಿ ಸಮುದ್ರದಿಂದ ೧೨ ಮೈಲಿ,ಹಾಗು ಇಂಡಸ್ನಾ ಪಶ್ಚಿಮ ದಿಕ್ಕಿನಿಂದ ಸುಮಾರು ೮೦ ಮೈಲಿ ಅಲ್ಲಿ ಕಾಣಲ್ ಸಿಗುತ್ತದೆ.ಖೀರ್ ಥಾರ್ ಬೆಟ್ಟ ಪ್ರದೇಶದ ಅಂತ್ಯದಿಂದ,ಮಕ್ರಾನ್ ಮರುಭೂಮಿ ಅಗಲಕ್ಕು,ಹಿಂಗೋಳ್ ನದಿಯ ಸುತ್ತಲು ವಿಸ್ತಾರಗೊಂಡಿದೆ.ಈ ಸ್ಥಳವು ಹಿಂಗೋಳ ರಾಷ್ಟ್ರೀಯ ಉದ್ಯಾನವನಕ್ಕೆ ಸೇರ್ಪಡೆಯಾಗಿದೆ.

ಧಾರ್ಮಿಕ ಪ್ರಾಮುಖ್ಯತೆ ಮತ್ತು ಪುರಾಣ:ಪ್ರಜಾಪತಿ ದಕ್ಷನ ಕುಮಾರಿ ಸತಿದೇವಿ, ತನ್ನ ಆಕಾಂಕ್ಷೆಗಳ ವಿರುದ್ಧವಾಗಿ ಶಿವನನ್ನು ಮದುವೆ ಮಾಡಿಕೊಂಡಲೆಂದು ಕೋಪದಿಂದ ಅವನು ಸಂಘಟಿಸಿದ ಬೃಹಸ್ಪತಿಯಾಗಕ್ಕೆ ಮಗಳು,ಅಳಿಯನನ್ನು ಆಹ್ವಾನಿಸಲಿಲ್ಲ.ಪ್ರಜಾಪತಿ ಕರೆಯದಿದ್ದರೂ ಸತಿದೇವಿ ಆ ಯಾಗಕ್ಕೆ ಹೋಗುತ್ತಾಳೆ, ಅಲ್ಲಿ ಅವಮಾನಕ್ಕೆ ಗುರಿಯಾಗುತ್ತಾಳೆ.ಮುಖ್ಯವಾಗಿ ಶಿವನಿಗೆ ಹೊರಿಸಿದ ಅಪವಾದವನ್ನು ಸಹಿಸಲಾರದೆ ಅಗ್ನಿಗೆ ಆಹುತಿಯಾಗುತ್ತಾಳೆ.ಅದನ್ನು ನೋಡಿದ ಶಿವ ತನ್ನ ಶಸ್ತ್ರಾಸ್ತ್ರಗಳಿಂದ ಯಾಗಶಾಲವನ್ನು ದ್ವಂಸಮಾಡುತ್ತಾನೆ.ಆದರೂ ಶಿವನು ಸತಿ ವಿಯೋಗದುಃಖವನ್ನು ತಾಳಲಾರದೆ ಅವಳ ಮೃತದೇಹದೊಡನೆ ಇಡೀ ವಿಶ್ವವನ್ನೇ ಅಲೆದಾಡುತ್ತಿರುತ್ತಾನೆ.ಇದೇ ಸಮಯದಲ್ಲಿ ಶಿವನು ತನ್ನ ಜಗದ್ರಕ್ಷಣಾಕಾರ್ಯವನ್ನು ಮರೆತುಹೋಗುವನು. ದೇವತೆಗಳ ಪ್ರಾರ್ಥನೆಯನ್ನು ಮಂಜೂರು ಮಾಡಿ ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಆ ದೇಹವನ್ನು ತುಂಡು ಮಾಡಿ ಶಿವನನ್ನು ಕರ್ತವ್ಯೋನ್ಮುಖನಾಗಿ ಮಾಡಿದನು. ಸತಿದೇವಿಯ ಶರೀರಭಾಗಗಳು ಬಿದ್ದಿರುವ ಸ್ಥಳಗಳು ಶಕ್ತಿಪೀಠಗಳಾಗಿ ಭಕ್ತರಿಗೆ,ಮುಖ್ಯವಾಗಿ ತಂತ್ರಸಾಧಕರಿಗೆ ಆರಾದನೆಯ ಸ್ಥಳಗಳಾಗಿವೆ.ಸತಿದೇವಿಯ ಶಿರಾಭಾಗವು(ತಲೆಭಾಗವು) ಈ ಹಿಂಗೋಳ ಪ್ರದೇಶದಲ್ಲಿ ಬಿದ್ದಿರುವುದಾಗಿ ಹೇಳುತ್ತಾರೆ.

ಮತ್ತೊಂದು ಸ್ಥಳದ ಪುರಾಣದ ಪ್ರಕಾರ ತ್ರೇತಾಯುಗದಲ್ಲಿ ವಿಚಿತ್ರ ಎಂಬ ಸೂರ್ಯವಂಶಕ್ಕೆ ಹೊಂದಿದ ಕ್ಷತ್ರಿಯ ರಾಜನಿಗೆ ಹಿಂಗೋಳನು ,ಸುಂದರನು ಎಂಬ ಇಬ್ಬರು ಮಕ್ಕಳು ಜನಿಸುತ್ತಾರೆ.ಇವರು ಪ್ರಜೆಗಳನ್ನು,ಋಷಿಗಳನ್ನು ಪೀಡಿಸಿ ಹಿಂಸಿಸುತ್ತಿರುತ್ತಾರೆ.ಆ ರಾಜಕುಮಾರನ ಹಿಂಸೆಯನ್ನು ತಾಳಲಾರದೆ ರಕ್ಷಣೆಗಾಗಿ ಶಿವನನ್ನು ಪ್ರಾರ್ಥಿಸುತ್ತಾರೆ. ಶಿವನ ಆಜ್ಞೆಯಿಂದ ಗಣಪತಿಯು ಸುಂದರನನ್ನು ಸಂಹಾರಿಸುತ್ತಾನೆ.ಆದ್ದರಿಂದ ರೊಚ್ಚಿಗೆದ್ದ ಹಿಂಗೋಳನು ಮತ್ತಷ್ಟು ವಿಜೃಂಭಣೆಯಿಂದ ಪ್ರಜೆಗಳ ಮೇಲೆ ಪ್ರತೀಕಾರವನ್ನು ತೀರಿಸಿಕೊಳ್ಳುತ್ತಾನೆ. ಇದರಿಂದ ಆ ಜನರು ಭಯದಿಂದ ಪರಾಶಕ್ತಿಯನ್ನು(ದೇವಿಯನ್ನು) ಆಶ್ರಯಿಸುತ್ತಾರೆ.ದೇವಿಯು ಹಿಂಗೋಳನನ್ನು ಹಿಂಬಾಲಿಸುತ್ತಾ ಈ ಗುಹೆಗಳಲ್ಲಿ ತನ್ನ ತ್ರಿಶೂಲದಿಂದ ಆತನನ್ನು ಸಂಹಾರಿಸುತ್ತಾಳೆ.ಮರಣ ಹೊಂದುವ ಮುನ್ನ ಹಿಂಗೋಳನಿಗೆ ಕೊಟ್ಟಿರುವ ವರದ ಪ್ರಕಾರ ಆ ಪ್ರಾಂತ್ಯದಲ್ಲಿ ನೆಲಸಿ ಆತನ ಹೆಸರಿಂದ ಹಿಂಗೋಳಾ ದೇವಿಯಾಗಿ ಪ್ರಸಿದ್ದಿ ಹೊಂದಿದ್ದಾಳೆ.

ಮತ್ತೊಂದು ಇತಿಹಾಸದ ಪ್ರಕಾರ ಪರಶುರಾಮನು ಕ್ಷತ್ರಿಯ ಸಂಹಾರ ಮಾಡುತ್ತಿರುವಾಗ, ಬ್ರಾಹ್ಮಣರು ೧೨ ಮಂದಿ ಕ್ಷತ್ರಿಯರಿಗೆ ಬ್ರಾಹ್ಮಣಾ ವೇಷವನ್ನು ಹಾಕಿ ಪರಶುರಾಮನಿಗೆ ಅವರು ಬ್ರಾಹ್ಮಣರು ಎಂದು ನಂಬಿಸಿ ಕಾಪಾಡುತ್ತಾರೆ.ಆ ಕ್ಷತ್ರಿಯರ ಸಂತತಿಯ ನಂತರ ಕಾಲದಲ್ಲಿ ಬ್ರಾಹ್ಮಣಕ್ಷತ್ರಿಯರಾಗಿ ಕರೆಯಲಾಗುತ್ತಿದ್ದಾರೆ.ಈ ಬ್ರಾಹ್ಮಣಕ್ಷತ್ರಿಯರ ಕುಲದೇವತೆ ಹಿಂಗೋಳಾ ದೇವಿ. ಮತ್ತೊಂದು ಕಥೆಯ ಪ್ರಕಾರ ದಧೀಚಿ ಮಹರ್ಷಿ ರತ್ನಸೇನ ಎನ್ನುವ ಸಿಂಧು ದೇಶದ ರಾಜನಿಗೆ ಪರಶುರಾಮನ ಹಿಡಿತದಿಂದ ರಕ್ಷಿಸಲು ಆಶ್ರಯ ನೀಡುತ್ತಾನೆ. ದಧೀಚಿ ಆಶ್ರಮದಲ್ಲಿರದ ಸಮಯವನ್ನು ನೋಡಿ ಪರಶುರಾಮನು ಅಲ್ಲಿಗೆ ಬಂದು ರತ್ನಸೇನನನ್ನು ಸಂಹಾರಿಸುತ್ತಾನೆ.ರತ್ನಸೇನನ ಕುಮಾರರನ್ನು ಬ್ರಾಹ್ಮಣರೆಂದು ಭಾವಿಸಿ ಅವರನ್ನು ಕೊಲ್ಲದೆ ಹಾಗೆಯೇ ಬಿಟ್ಟು ಬಿಡುತ್ತಾನೆ.ಬದುಕುಳಿದ ಮಕ್ಕಳಲ್ಲಿ ಜನಸೇನನು ಸಿಂಧು ರಾಜ್ಯಕ್ಕೆ ಮರಳಿ ಹೋಗಿ ಪರಿಪಾಲನೆ ಮಾಡುತ್ತಾನೆ. ಪರಶುರಾಮನು ಆತನನ್ನು ಸಂಹಾರಿಸಲು ಹೋದಾಗ ದಧೀಚಿ ಮಹರ್ಷಿ ಹೇಳಿಕೊಟ್ಟಿರುವ ಹಿಂಗುಳಾ ದೇವಿಯ ಮಂತ್ರದ ಪ್ರಭಾವದಿಂದ ಬದುಕಿಕೊಳ್ಳುತ್ತಾನೆ. ಈ ದೇವಿ ಜಯಸೇನನನ್ನು ಕಾಪಾಡುವುದರ ಜೊತೆಗೆ ಪರಶುರಾಮನಿಗೆ ಕ್ಷತ್ರಿಯ ಸಂಹಾರವನ್ನು ನಿಲ್ಲಿಸು ಎಂದು ಆಜ್ಞಾಪಿಸುತ್ತಾಳೆ.

ಸಾಮಾಜಿಕ ಮಹತ್ವ

[ಬದಲಾಯಿಸಿ]

ಪಾಕಿಸ್ತಾನಿ ಸರ್ಕಾರ ಮತ್ತು ಸಮಾಜಕ್ಕೆ ಸ್ವತಂತ್ರ ಸಿಕ್ಕಿದ ನಂತರವೂ ಹೆಚ್ಚುತ್ತಿರುವ ಇಸ್ಲಾಮಿಕ್ ನಿಲುವಿನ ಹೊರತಾಗಿಯೂ ಹಿಂಗ್ಲಾಜ್ ಬದುಕುಳಿದಿರುವುದಲ್ಲದೇ ಸ್ಥಳಿಯ ಮುಸ್ಲಿಮರ ಅದನ್ನು ಪೂಜಿಸುತ್ತಾರೆ ಹಾಗು ಆ ದೇವಲಯವನ್ನು "ನಾನಿ ಕಿ ಮಂದಿರ್" ಎಂದು ಕರೆಯುತ್ತರೆ. ಮುಸ್ಲಿಮರು ಕೊಡುಗೆಯ ರೂಪದಲ್ಲಿ ಕೆಂಪು ಮತ್ತು ಕೇಸರಿ ಬಣ್ಣದ ವಸ್ತ್ರ,ಸಾಂಬ್ರಾಣಿ,ಮೊಂಬತ್ತಿ ಹಾಗು ಸಿರಿಣಿ ಎಂಬ ಸಿಹಿಕಾದ್ಯವನ್ನು ದೇವರಿಗೆ ಅರ್ಪಿಸುತ್ತಾರೆ.

ಹಿಂಗುಳಾ ಎಂದರೆ ನೈಸರ್ಗಿಕ ರಸ ಸಿಂಧೂರ. ಈ ಸಿಂಧೂರವನ್ನು ಪ್ರಾಚೀನ ಭಾರತದವರು ಹಾವು ಕಡಿತ ಮತ್ತು ಇತರ ವಿಷದ ಪರಿಣಾಮಗಳನ್ನು ಗುಣಪಡಿಸಲು ಉಪಯೋಗಿಸುತ್ತಿದ್ದರು. ಇಂತಹ ಕಾಯಿಲೆಗಳನ್ನು ಗುಣಪಡಿಸುವ ಮಹತ್ವವಾದ ಶಕ್ತಿ ಹಿಂಗುಳಾಅ ದೇವಿಗೆ ಇದೆ ಎಂದು ಜನರು ನಂಬಿದ್ದಾರೆ.ಮುಸ್ಲಿಂ ಹೆಸರಿನ "ನಾನಿ"ಯ ಸಂಕ್ಷೇಪಣೆ "ನಾನೈಯಾ" ಎಂಬ ಪುರಾತನ ದೇವತೆಯ ಹೆಸರಿನಿಂದ ಬಂದಿದೆ.

ದೇವಾಲಯ

[ಬದಲಾಯಿಸಿ]

ಈ ದೇವಾಲಯವನ್ನು "ಮಹಾಲ್" ಎಂದೂ ಕರೆಯುತ್ತಾರೆ. ಈ ಪದವು ಅರಬ್ಬಿ ಭಾಷೆಯ ಮೂಲರೂಪವನ್ನು ಹೊಂದಿದ್ದು,ಅರಮನೆ ಎಂಬ ಅರ್ಥವನ್ನು ಪಡೆದಿದೆ.ಯಕ್ಷರು ನಿರ್ಮಿಸಿರುವ ಈ ದೇವಾಲಯವು ನೈಸರ್ಗಿಕ ಸೌಂದರ್ಯವನ್ನು ಹೊಂದಿದೆ.ಗುಹೆಯ ಗೋಡೆಗಳು ಹಾಗು ಛಾವಣಿಯು ವರ್ಣರಂಜಿತ ಕಲ್ಲುಗಳಿಂದ ಹಾಗು ಅಮೂಲ್ಯ ಸಿರೆಗಳಿಂದ ಲೇಪನಗೊಂಡಿದೆ.

ದೇವಾಲಯವು ಒಂದು ಸಣ್ಣ ನೈಸರ್ಗಿಕ ಗುಹೆಯಲ್ಲಿ ಇದೆ. ಅಲ್ಲಿ ಯಾವುದೇ ಮಾನವ ನಿರ್ಮಿತ ದೇವತೆಯ ಚಿತ್ರವಿಲ್ಲ. ಒಂದು ಸಣ್ಣ ಆಕಾರವಿಲ್ಲದ ಕಲ್ಲನ್ನು ಹಿಂಗ್ಲಾಜ್ ಮಾತೆಯೆಂದು ಪೂಜಿಸುತ್ತಾರೆ. ಕಲ್ಲಿಗೆ ಕುಂಕುಮವನ್ನು ಹಚ್ಚಲಾಗಿದೆ, ಅದರ ಸಂಸ್ಕೃತ ಹೆಸರು ಹಿಂಗುಳಾ. ಇದರಿಂದ ಹಿಂಗ್ಲಾಜ್ ಎಂಬ ಹೆಸರು ದೊರಕಲು ಒಂದು ಮೂಲವಾಗಿದೆ. ಗುಹೆಯ ಪ್ರವೇಶದ್ವಾರವು ಸುಮಾರು ೫೦ ಅಡಿ ಎತ್ತರವಿದೆ.ಗುಹೆಯ ಕೊನೆಯಲ್ಲಿ ಪವಿತ್ರವಾದ ಗರ್ಭಗುಡಿಯೊಳಗೆ ಪುಣ್ಯ ಸ್ಮಾರಕ ನೆಲೆಗೊಂಡಿದೆ.ಇದು ಕೆಂಪು ಬಟ್ಟೆ ಮತ್ತು ಕುಂಕುಮದಿಂದ ಆವರಿಸಿಗೊಂಡಿದೆ.ಗರ್ಭಗುಡಿಗೆ ಎರಡು ದ್ವಾರಗಳಿವೆ. ಭಕ್ತಾದಿಗಳು ಗರ್ಭಗುಡಿಯನ್ನು ಪ್ರವೇಶಿಸಲು ಅಂಬೆಗಾಲಾಕುತ್ತಾ ಹೋಗಿ ದೇವರ ದರ್ಶಣ ಪಡೆದು ಮತ್ತೊಂದು ದ್ವರದಿಂದ ಹೊರಬರುತ್ತಾರೆ.ಭಕ್ತಾದಿಗಳಿಗೆ ಪ್ರಸಾದವನ್ನು ಹಂಚಲಾಗುತ್ತದೆ ಹಾಗು ಅವರು ಆಕಾಶಗಂಗೆಯನ್ನು ರಾತ್ರಿಯ ವೇಳೆ ವೀಕ್ಷಿಸಿ ಹಿಂದಿರುಗುತ್ತಾರೆ.

ಹಿಂಗುಳಾ ದೇವಿಯ ಪೀಠಗಳು

[ಬದಲಾಯಿಸಿ]

ಹಿಂಗುಳ ದೇವಿಯ ದೇವಾಲಯವನ್ನು ಶಕ್ತಿ ಪೀಠವೆಂದು ಪರಿಗಣಿಸಲಾಗಿದೆ.ದೇವತೆ ಮೀಸಲಿರುವ ಇತರ ದೇವಾಲಯಗಳಲ್ಲಿ ಭಾರತ ಹಾಗು ಶ್ರೀಲಂಕಾ ಅಸ್ತಿತ್ವದಲ್ಲಿವೆ.ಮುಖ್ಯವಾದ ಗರ್ಭಗುಡಿಯೊಂದು ಭಾರತದ ಒರಿಸ್ಸಾ ರಾಜ್ಯದಿಂದ ೧೪ ಕಿಮೀ ದೂರದಲ್ಲಿರುವ ತಲ್ಚೇರ್ ಎಂಬ ಗ್ರಾಮದಲ್ಲಿದೆ. ಪಶ್ಚಿಮ ಭಾರತದಲ್ಲಿರುವ ವಿದರ್ಭ ಪ್ರದೇಶದ ನಳ ರಾಜನು ಹಿಂಗುಳ ದೇವಿಯ ಪರಮ ಭಕ್ತನಾಗಿದ್ದನು.ಪುರಿ ಪ್ರಾಂತ್ಯದ ರಾಜನು ಸಹಾಯಕ್ಕಾಗಿ ವಿದರ್ಭಕ್ಕೆ ಬಂದು, ಸ್ವಾಮಿ ಜಗನ್ನಾಥನೆಗೆ ಮಹಾಪ್ರಸಾದವನ್ನು ಮಾಡುವ ಸಲುವಾಗಿ ಪಾಕಶಾಲೆಯಲ್ಲಿ ಅಗ್ನಿಯನ್ನು ಪಡೆಯಲು ದೇವಿ ಹಿಂಗುಳವನ್ನು ಅಗ್ನಿಯನ್ನಾಗಿ ಸಂಗ್ರಹಿಸಲು ನಳ ರಾಜನ ಬಳಿ ಈ ವಿಷಯವನು ಹೇಳಿ, ಅಗ್ನಿಯಾಗಿ ದೇವಿ ಹಿಂಗುಳವನ್ನು ಪಡೆಯುವನು.ಆನಂತರ ಹಿಂಗುಳಾ ದೇವಿಯು ಅಗ್ನಿಯ ರೂಪದಲ್ಲಿ ಪುರಿಗೆ ಹೋಗುತ್ತಾಳೆ.

ಹಿಂಗ್ಲಾಜ್ ಸುತ್ತಾಮುತ್ತವಿರುವ ಇತರ ಪೂಜಾ ಸ್ಥಳಗಳು

[ಬದಲಾಯಿಸಿ]

ಗಣೇಶ ದೇವ, ಮಾತಾ ಕಾಳಿ, ಗುರುಗೊರಾಖನಾಥ ಡೋಣಿ, ಬ್ರಾಹಮ್ ಕುದ್, ತೀರ್ ಕುಂದ್,ಗುರುನಾನಕ್ ಖಾರಾವ್,ರಾಮ್ ಜರೋಖಾ ಬೇತಕ್, ಛೋರಾಸಿ ಬೆಟ್ಟದ ಮೇಲೆ ಅನೀಲ್ ಕುಂದ್, ಚಂದ್ರ ಗೂಪ, ಖಾರಿ ನದಿ ಮತ್ತು ಅಘೋರ ಪೂಜಾ.

ಜಾತರೆ

[ಬದಲಾಯಿಸಿ]

ಪ್ರತಿವರ್ಷ ಏಪ್ರಿಲ್ ತಿಂಗಳಲ್ಲಿ ನಾಲ್ಕು ದಿನಗಳ ಕಾಲ ಇಲ್ಲಿ ಉತ್ಸವಗಳನ್ನು ನಿರ್ವಹಿಸುತ್ತಾರೆ. ಇದೇ ಸಮಯದಲ್ಲಿ ಸಾದುಗಳು,ಹಠಯೋಗಿಗಳು ಈ ದೇವಿಯನ್ನು ಪೂಜಿಸುತ್ತಾರೆ. ಅನೇಕ ಭಕ್ತರು ಉತ್ಸವಗಳ ಸಂದರ್ಭವಾಗಿ ಈ ದೇವತೆಯನ್ನು ಪೂಜಿಸಿ ಹರಕೆಗಳನ್ನು ಈಡೇರಿಸಿಕೊಳ್ಳುತ್ತಾರೆ. ಸ್ಥಳಿಯ ಮುಸ್ಲಿಮರು ಈ ದೇವಿಯನ್ನು ಬೀಬೀ ನಾನೀಯನ್ನಾಗಿ ಪೂಜಿಸುತ್ತಾರೆ. ಈ ಉತ್ಸವಗಳನ್ನು ನಾನೀಕಿ ಹಾಜ್ ಎಂದು ಕರೆಯುತ್ತಾರೆ.

ಜನಪ್ರಿಯ ಮಾಧ್ಯಮ

[ಬದಲಾಯಿಸಿ]

ಹಿಂಗ್ಲಾಜ್ ದೇವಿಯ ಆಲಯವನ್ನು ಕಥಾನಂಶವಾಗಿ, ಟಿ.ಗೋಪಿಚಂದ್ ಕಥಾನಾಯಕನಾಗಿ ಸಾಹಸಂ ಎಂಬ ತೆಲುಗು ಚಿತ್ರ, ಚಂದ್ರಶೇಖರ್ ಯೇಲೇಟಿ ಅವರ ನಿರ್ದೇಶನದಲ್ಲಿ ಮೂಡಿಬಂದಿದೆ. ಭಾರತ-ಪಾಕಿಸ್ತಾನ್ ವಿಭಜನೆಯ ನಂತರ, ಭಾರತ ದೇಶಕ್ಕೆ ಆಗಮಿಸಿದ ಹಿಂದೂಗಳ ಕುಟುಂಬದಲ್ಲಿ ಹುಟ್ಟಿದ ಕಥಾನಾಯಕ, ತನ್ನ ಪಿತ್ರಾರ್ಜಿತ ಆಸ್ತಿಗಾಗಿ ಪಾಕಿಸ್ತಾನಕ್ಕೆ ಹೋಗುವ ಹಿನ್ನೆಲೆಯಲ್ಲಿ ಚಿತ್ರಕಥೆ ಸಾಗುತ್ತದೆ.

ಉಲ್ಲೇಖನಗಳು

[ಬದಲಾಯಿಸಿ]