ಹಾಲವಾಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಾಲವಾಣ
ಹಾಲವಾಣಮರಕಲ್ಕತ್ತಾ, ಪಶ್ಚಿಮ ಬಂಗಾಳ, India.
Scientific classification
ಸಾಮ್ರಾಜ್ಯ:
plantae
Division:
ವರ್ಗ:
ಗಣ:
ಕುಟುಂಬ:
ಉಪಕುಟುಂಬ:
ಪಂಗಡ:
ಕುಲ:
ಪ್ರಜಾತಿ:
E. variegata
Binomial name
ಎರಿತ್ರ್ಹಿನ ವೆರಿಗಟ

ಹಾಲವಾಣ(Erythrina variegata)ಪರ್ಣಪಾತಿ ಮರ.ಉಷ್ಣವಲಯದಲ್ಲಿ ಬೆಳೆಯುವ ಮರ ಜಾತಿ.ಆಫ್ರಿಕ,ಏಷ್ಯಾ,ಆಸ್ಟ್ರೇಲಿಯ ಖಂಡಗಳಲ್ಲದೆ,ಹಿಂದೂ ಮಹಾಸಾಗರದ ಹಲವಾರು ದ್ವೀಪಸಮೂಹಗಳಲ್ಲಿ ಕಂಡುಬರುತ್ತದೆ.

ಸಸ್ಯಶಾಸ್ತ್ರೀಯ ವರ್ಗೀಕರಣ[ಬದಲಾಯಿಸಿ]

ಇದು ಫಬಾಸಿ (Fabaceae)ಕುಟುಂಬಕ್ಕೆ ಸೇರಿದ್ದು,ಎರಿತ್ರಿನ ವೆರಿಗಟ (Erythrina Variegata),ಎರಿತ್ರಿನ ಇಂಡಿಕ ಎಂದು ಸಸ್ಯಶಾಸ್ತ್ರೀಯ ಹೆಸರು ಇದೆ.

ಹಾಲವಾಣ ಹೂ[ಕಲ್ಕತ್ತಾ]

ಸಸ್ಯದ ಗುಣಲಕ್ಷಣಗಳು[ಬದಲಾಯಿಸಿ]

ಪರ್ಣಪಾತಿಮರ.ಹವಳಗೆಂಪು ಬಣ್ಣದ ಅಂದವಾದ ಹೂಗಳು.(ಚಿತ್ರ ನೋಡಿ).ಎಳೆಯ ಕೊಂಬೆಗಳು ಮುಳ್ಳಿನಿಂದ ಕೂಡಿವೆ.ದಾರುವು ಹಗುರವಾಗಿದ್ದು ಬಿಳಿ ಬಣ್ಣದ್ದಾಗಿರುತ್ತದೆ.

ಉಪಯೋಗಗಳು[ಬದಲಾಯಿಸಿ]

ಇದರ ದಾರುವು ಹಗುರವಾಗಿದ್ದು,ಬಿಳಿ ಬಣ್ಣದ್ದಾಗಿರುವುದರಿಂದ ಮಕ್ಕಳ ಆಟದ ಸಾಮಾನು,ಮುಖವಾಡ,ಡೋಲು ಮುಂತಾದ ವಸ್ತುಗಳನ್ನು ಮಾಡಲು ಉಪಯೋಗಿಸುತ್ತಾರೆ.ಅರಗಿನ ಮೆರಗುಕೊಟ್ಟು ಮಾಡುವ ಸಾಮಾನುಗಳನ್ನು ತಯಾರಿಸಲು ಬಳಸುತ್ತಾರೆ.ಬೆಂಕಿ ಕಡ್ಡಿ ಮಾಡಲು ಉಪಯೋಗಿಸಲ್ಪಡುತ್ತದೆ.

ಆಧಾರ ಗ್ರಂಥಗಳು[ಬದಲಾಯಿಸಿ]

೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ

"https://kn.wikipedia.org/w/index.php?title=ಹಾಲವಾಣ&oldid=1023114" ಇಂದ ಪಡೆಯಲ್ಪಟ್ಟಿದೆ