ವಿಷಯಕ್ಕೆ ಹೋಗು

ಹಳೇಹೆಗ್ಗುಡಿಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಚ್ ಡಿ ಕೋಟೆ ತಾಲ್ಲೂಕಿನ ಸರಗೂರಿನ ಪಕ್ಕದಲ್ಲಿರುವ ಒಂದು ಚಿಕ್ಕ ಗ್ರಾಮ ಈ ಗ್ರಾಮವು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು ಯಾರಿಗೂ ಈ ಗ್ರಾಮ ಅಷ್ಟಾಗಿ ಚಿರಪರಿಚಿತ ವಾಗಿರದೇ ಇದ್ದು ಈ ಹಳ್ಳಿಯಂತೆ ಹಲವಾರು ಗ್ರಾಮಗಳು ಎಲೆಮರೆಯ ಕಾಯಿಯಂತೆ ಇವೆ. ಇಂಥಹ ಹಲವಾರು ಗ್ರಾಮಗಳು ತಮ್ಮ ಐತಿಹಾಸಿಕ ಹಿನ್ನೆಲೆಯನ್ನು ಸಾರುವಷ್ಟು ಮಹತ್ವವನ್ನು ಹೊಂದಿವೆ ಈ ಗ್ರಾಮಗಳಲ್ಲಿ ಹಳೇಹೆಗ್ಗುಡಿಲು ಒಂದು.

ವಾಲ್ಮೀಕಿ ಜಯಂತಿ

ಐತಿಹಾಸಿಕ ಹಿನ್ನೆಲೆ

[ಬದಲಾಯಿಸಿ]
  • ಇದು ೧೯೫೩ ರಿಂದ ಆಚೆಗೆ ಇಂದಿನ ನುಗುನದಿಯ ದಡದಲ್ಲಿ ಈ ಗ್ರಾಮದ ಪೂರ್ವಿಕರು ವಾಸಿಸುತ್ತಿದ್ದರು ಇಲ್ಲಿ ನಾಯಕ ಹಾಗೂ ದಲಿತ ಸಮುದಾಯದವರು ಇದ್ದರು ಇದರ ಹಿಂದಿನ ಹೆಸರು ಹಳೆಯೂರು ಅಂದು ನಾಲ್ವಡಿ ಹಾಗೂ ಸರ್, ಎಮ್ ವಿಶ್ವೇಶ್ವರಯ್ಯರ ಮುಂದಾಲೋಚನೆ ಯಿಂದ ಇಂದಿನ ನುಗು ನದಿ ನೀರುಕೇರಳದಿಂದ ಈ ಹಳೇಯೂರು ಗ್ರಾಮದ ಅಂಚಿನಲ್ಲೇ ಅರಿದು ದೊಡ್ಡಕೆರೆ ನಿರ್ಮಾಣವಾಗಿತ್ತು.
  • ಆ ಸಮಯದಲ್ಲಿ ಇವರು ಇಲ್ಲಿ ನುಗು ನದಿ ನಿರ್ಮಾಣ ಮಾಡಲು ಮುಂದಾಗಿ ಇಲ್ಲಿನ ಹಳೆಯೂರಿನ ಜನರನ್ನು ಸುಮಾರು ನಾಲ್ಕು ಕಿಲೋಮೀಟರ್ ಅಂತರದಲ್ಲಿ ಹಳೇಹೆಗ್ಗುಡಿಲು ಎಂಬ ನಾಮಕರಣದೊಂದಿಗೆ ದಿನಾಂಕ:೨-೭- ೧೯೫೩ ರಲ್ಲಿ ಈ ಹಳ್ಳಿಯನ್ನು ಸ್ಥಾಪಿಸಲಾಯಿತು. ಈ ನುಗು ನದಿಯು ನೈಸರ್ಗಿಕ ಕಟ್ಟೆಯಂತೆ ಎರಡು ದೊಡ್ಡ ಬೆಟ್ಟಗಳನ್ನು ಹೊಂದಿದೆ ಇದರ ನಡುವೆ ಅಣೆಕಟ್ಟನ್ನು ನಿರ್ಮಾಣ ಮಾಡಿ ಇಂದು ಲಕ್ಷಾಂತರ ರೈತರಿಗೆ ಜೀವನದಿಯಾಗಿದೆ.
  • ಸ್ಥಳದ ಅಭಾವದಿಂದ ಉಳಿದ ಇನ್ನಷ್ಟುಜನರು ಹೊಸಹೆಗ್ಗುಡಿಲು ಎಂಬ ನಾಮಕರಣದೊಂದಿಗೆ ನುಗು ನದಿಯ ಪೂರ್ವಕ್ಕೆ ನೆಲೆನಿಂತರು. ಅದರಂತೆ ಹಳೇಹೆಗ್ಗುಡಿಲು ಜನರಿಗೆ ಅಂದಿನ ರಾಜ್ಯ ಸಮಿತಿಯು ಸುಮಾರು ೩೦೦ ಎಕರೆ ಜಮೀನನ್ನು ನೀಡಿ ಅಲ್ಲಿ ವಾಸ ಹಾಗೂ ವ್ಯವಸಾಯ ಯೋಗ್ಯ ಭೂಮಿಯನ್ನಾಗಿ ಮಾರ್ಪಾಡಿಸಿತು.
  • ಇಂದು ಈ ಊರು ಸುಮಾರು ೩೬ ಎಕರೆ ವಿಸ್ತೀರ್ಣ ಹೊಂದಿದ್ದು ೯೦೦ ಜನಸಂಖ್ಯೆಯನ್ನು ಹೊಂದಿದೆ ಅಂದಿನಿಂದ ಇಂದಿನವರೆಗೂ ಕಾಡಂಚಿನ ಗ್ರಾಮದಲ್ಲಿ ವಾಸಮಾಡುತ್ತ ತಮ್ಮ ಪೀಳಿಗೆಯನ್ನು ಸ್ವಲ್ಪ ಸ್ವಲ್ಫವಾಗಿಯೇ ಮುಂದುವರಿಸಿಕೊಂಡು ಬಂದಿದ್ದಾರೆ.
ಮಾಜಿ ಶಾಸಕ ಚಿಕ್ಕಣ್ಣ ರವರು ವಾಲ್ಮೀಕಿ ಜಯಂತಿ ಉದ್ಘಾಟನೆ ಮಾಡುತ್ತಿರುವುದು
ಅಂಬೇಡ್ಕರ್ ಜಯಂತಿಯ ಸಂಭ್ರಮ
ಉದ್ಘಾಟನ ಸಮಾರಂಭ

ಭೌಗೋಳಿಕ ಲಕ್ಷಣ

[ಬದಲಾಯಿಸಿ]
  • ಇಲ್ಲಿನ ಭೌಗೋಳಿಕ ಲಕ್ಷಣವು ಅಚ್ಚುಕಟ್ಟಿನಿಂದ ಕೂಡಿದ್ದು ಸುಮಾರು ೩೬ ಎಕರೆ ವಿಸ್ತೀರ್ಣವನ್ನು ಹೊಂದಿದ್ದು ಪ್ರತಿಯೊಬ್ಬರು ವಿಶಾಲವಾದ ಸ್ಥಳವನ್ನು ಹೊಂದಿದ್ದಾರೆ, ಈ ಊರಿನ ಪೂರ್ವಕ್ಕೆ ನುಗುನದಿ, ದಕ್ಷಿಣಕ್ಕೆ ದೊಡ್ಡಕಾಡು .ಉತ್ತರಕ್ಕೆ ಇಲ್ಲಿನ ಪ್ರಮುಖ ವಾಣಿಜ್ಯ ಕೇಂದ್ರವಾದ ಆರು ಕಿಲೋಮೀಟರ್ ಅಂತರದಲ್ಲಿ ಸರಗೂರನ್ನು ಒಳಗೊಂಡಿದ್ದು ಪಶ್ಚಿಮಕ್ಕೆ ಹಳೆಯೂರು, ಬೆದ್ದಲಪುರ, ದೇವಲಾಪುರ,ದಡದಹಳ್ಳಿಗಳನ್ನು ಒಳಗೊಂಡಿದೆ.
  • ಇಲ್ಲಿನ ಪ್ರಮುಖ ರಸ್ತೆಗಳು ಕಾಂಕ್ರಿಟ್ ನಿಂದ ಕೂಡಿದ್ದು ಪ್ರತಿಯೊಬ್ಬರಮನೆಯಲ್ಲೂ ಶೌಚಾಲಯ ಹೊಂದಿದ್ದು ಹಾಗೂ ಆಧುನಿಕ ರೀತಿಯ ಧನಧ ಕೊಟ್ಟಿಗೆ ನಿರ್ಮಾಣ ಮಾಡಿಕೊಂಡಿದ್ದು ಅಕ್ಕಪಕ್ಕದ ಊರುಗಳಿಗೆ ಇದೇ ಮಾದರಿ ಹಳ್ಳಿಯಂತೆ ರೂಪುಗೊಂಡಿದೆ. ಇಲ್ಲಿನ ಜನರು ಮಳೆಯಾಶ್ರಿತ ಬೇಸಾಯ ಕ್ರಮವನ್ನೇ ಆದರಿಸಿಕೊಂಡಿದ್ದು ಪ್ರಮುಖವಾಗಿ ಹತ್ತಿ, ರಾಗಿ, ಹೊಗೆಸೊಪ್ಪು, ಎಳ್ಳು, ಅವರೆ, ಅಲಸಂದೆ,ಉರುಳಿ ಮುಂತಾದ ಧಾನ್ಯ ಹಾಗೂ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ.
  • ಇಲ್ಲಿ ಐದಾರು ಮಂದಿ ರೈತರು ಮಾತ್ರ ತಮ್ಮ ಜಮೀನುಗಳಿಗೆ ಕೊಳವೆ ಭಾವಿಗಳನ್ನು ಹಾಕಿಸಿಕೊಂಡು ವ್ಯವಸಾಯ ಮಾಡುತ್ತಿದ್ದಾರೆ ಆದರೆ ದುರಾದ್ರುಷ್ಟಕರ ಎಂದರೆ ಇಲ್ಲಿ ಬೆಳೆದ ಹಲವಾರು ಬೆಳೆಗಳು ಕಾಡಿನ ಪ್ರಾಣೀಗಳಿಗೆ ಮೀಸಲಾಗಿದೆ ಆದರು ಇಲ್ಲಿನ

ರೈತರು ಕಾಡು ಪ್ರಾಣಿಗಳಿಗೆ ಯಾವುದೇ ರೀತಿಯ ಪ್ರಾಣ ಹಾನಿ ಮಾಡದೆ ಅವುಗಳನ್ನು ತಮ್ಮ ಜಮೀನುಗಳಿಗೆ ಬರದಂತೆ ಪ್ರತಿ ರಾತ್ರಿಯು ಕಾವಲು ಕಾಯುತ್ತಾರೆ.

ರಾಜಕೀಯ ಇತಿಹಾಸ $ ಅಭಿವೃದ್ಧಿ

[ಬದಲಾಯಿಸಿ]
  • ಇಂದು ಈ ಗ್ರಾಮ ಅಭಿವೃದ್ದಿ ಹೊಂದಲು ಕಾರಣ ರಾಜಕೀಯ ಪ್ರಭಾವ. ಪ್ರಸ್ತುತ ಶಿವಮ್ಮಸೋಮಣ್ಣ ರವರು ಸದಸ್ಯರಾಗಿದ್ದು ಈ ಊರಿನ ಎಲ್ಲಾ ರೀತಿಯ ಅಭಿವೃದ್ದಿಗೆ ಹಿಂದಿನ ಪ್ರಮುಖ ಗ್ರಾಮಪಂಚಾಯಿತಿ ಸದಸ್ಯರು ಹಾಕಿಕೊಂಡ ಯೋಜನೆಯನ್ನು ಜಾರಿಗೆತಂದು ಈಗ್ರಾಮವು ಸಂಪೂರ್ಣ ತನ್ನ ತನವನ್ನು ಉಳಿಸಿಕೊಂಡು ಇಂದು ಇತರೆ ಅಕ್ಕ ಪಕ್ಕದ ಗ್ರಾಮಗಳಿಗಿಂತ ಅಭಿವೃದ್ದಿಯಲ್ಲಿ ಮುಂಚೂಣಿಯಲ್ಲಿದೆ.
  • ಹಾಗೂ ಪ್ರತಿಯೊಬ್ಬರು ಕೂಡ ಜಮೀನನ್ನು ಹೊಂದಿದ್ದು ಬೇರೆ ಊರಿಗೆ ಹೋಗಿ ಕೆಲಸ ಮಾಡುವುದು ಹಾಗೂ ಜೀತವಿರುವುದನ್ನು ಇಲ್ಲಿ ಸಂಪೂರ್ಣ ವಾಗಿ ನಿಷೇದಿಸಲಾಗಿದೆ ಇಲ್ಲಿನ ಪ್ರತಿಯೊಬ್ಬರು ಪ್ರಜ್ಙಾವಂತರಾಗಿದ್ದು ಸರಿಯಾದ ಮುಖಂಡರನ್ನೇ ಆರಿಸುತ್ತಿದ್ದು ಊರಿನ ಬೆಳವಣೆಗೆಗೆ ಪ್ರಮುಖ ಪಾತ್ರರಾಗಿದ್ದಾರೆ.

ದೇವಾಲಯ ಹಾಗೂ ಬೆಟ್ಟಗಳು

[ಬದಲಾಯಿಸಿ]

ಇಲ್ಲಿ ಎರಡು ಪುರಾತನ ದೇವಾಲಯಗಳಿದ್ದು ಊರಿನ ಇತಿಹಾಸವನ್ನು ಹೇಳುತ್ತವೆ ಪ್ರತಿ ವರ್ಷವು ಈ ಊರಿನಲ್ಲಿನ ಎಲ್ಲ ಸಮುದಾಯದವರು ಒಂದಾಗಿ ಇಲ್ಲಿನ ದೇವರುಗಳಾದ ಊರಿನ ಮಾರಮ್ಮ ಮತ್ತು ಬಸವಣ್ಣ ದೇವರಿಗೆ ಹಬ್ಬ ಆಚರಣೆ ಮಾಡಲಾಗುತ್ತದೆ.

ಧಾರ್ಮಿಕ ಆಚರಣೆ ಹಾಗೂ ಹಬ್ಬಗಳು

[ಬದಲಾಯಿಸಿ]

ಎಲ್ಲಾ ಊರುಗಳಲ್ಲೂ ನಡೆಯುವಂತೆ ಇಲ್ಲಿಯೂ ವರ್ಷದಲ್ಲಿ ಹಲವಾರು ಹಬ್ಬಗಳನ್ನು ಆಚರಿಸಲಾಗುತ್ತದೆ.

  • ಮಾರಿ ಹಬ್ಬ
  • ದೀಪಾವಳಿ ಹಬ್ಬ
  • ದೊಡ್ಡಬ್ಬ ಊರಿನ ಹಬ್ಬ
  • ಸಂಕ್ರಾಂತಿ
  • ಯುಗಾದಿ
  • ನೂರಾಳೇಸ್ವರ ಜಾತ್ರೆ ಹಾಗೂ ಹಬ್ಬ ಆಚರಣೆ

ಜೀವನಶೈಲಿ

[ಬದಲಾಯಿಸಿ]

ಇಲ್ಲಿನ ಜನರ ಜೀವನ ಶೈಲಿಯು ಸಾಮಾನ್ಯ ವಾಗಿದ್ದು ವ್ಯವಸಾಯವನ್ನೇ ಪ್ರಮುಖ ಆಧಾರವಾಗಿರಿಸಿಕೊಂಡಿದ್ದಾರೆ. ಜಮೀನು ಇಲ್ಲದವರು ಇರುವವರ ಜಮೀನನ್ನು ಗುತ್ತಿಗೆಗೆ ಪಡೆದು ಆಹಾರ ಧಾನ್ಯಗಳನ್ನು ಬೆಳದು ಜೀವನ ಸಾಗಿಸುತ್ತಾರೆ. ಆದರೆ ಕಾಡಂಚಿನ ಗ್ರಾಮವಾದ ಕಾರಣ ಯಾವುದೋ ಪೂರ್ವ ಒಪ್ಪಂದ ಎಂಬಂತೆ ರಾಜಾರೋಷವಾಗಿ ಕಾಡಿನ ಪ್ರಾಣಿಗಳು ರೈತರ ಜಮೀನಿಗೆ ದಾಳಿ ಇಟ್ಟು ಬೆಳೆ ತಿಂದಿದ್ದಲ್ಲದೇ ನಾಶ ಮಾಡಿ ಹೋಗುತ್ತಿದೆ. ಈ ಒಂದು ಕಾರಣ ಇಲ್ಲಿನ ಜನ ಇನ್ನೂ ಆರ್ಥಿಕತೆಗೆ ಮುಖ ಮಾಡಲು ಸಾಧ್ಯವಾಗುತ್ತಿಲ್ಲ.

ಸಾಮಾಜಿಕ ಸ್ಥಿತಿ

[ಬದಲಾಯಿಸಿ]

ಸಾಮಾನ್ಯವಾಗಿ ಈ ಗ್ರಾಮದಲ್ಲಿ ನಾಯಕ ಹಾಗೂ ದಲಿತ ಜನಾಂಗದವರಿದ್ದು ಇದುವರೆಗೂ ಕೂಡ ಯಾವುದೆ ಕೋಮು ಗಲಬೆಗಳಾಗದೆ ಅನ್ಯೋನ್ನತೆಯಿಂದ ಜೀವನ ನಡೆಸುತ್ತಿದ್ದಾರೆ. ಮಾರಿಹಬ್ಬ ಹಾಗೆ ಯುಗಾದಿ ಹಬ್ಬಗಳ ಸಂದರ್ಭದಲ್ಲಿ ಎರಡು ಕುಲದವರು ಒಟ್ಟಿಗೆ ಸೇರಿ (ಒರಿ) ಹಣ ಹಾಕಿ ಹಲವಾರು ಹಬ್ಬ ಆಚರಣೆಗಳನ್ನು ಒಟ್ಟಾಗಿ ಆಚರಿಸಿ ಸಂಭ್ರಮ ಪಡುತ್ತಾರೆ. ಹಾಗೆ ಇನ್ನೂ ಕೂಡ ಗ್ರಾಮದಲ್ಲಿ ನ್ಯಾಯಾಂಗ ವ್ಯವಸ್ತೆ ವ್ಯವಸ್ತಿತವಾಗಿ ಅಸ್ತಿತ್ವದಲ್ಲಿದ್ದು ಯಾರೂ ಕೂಡ ಪೋಲೀಸ್ ಠಾಣೆ ಮೆಟ್ಟಿಲೇರುವುದಕ್ಕೆ ಬಿಡುವುದಿಲ್ಲ ಏನೇ ತೊಂದರೆ ಆದರೂ ಕೂಡ ಗ್ರಾಮದಲ್ಲೇ ಸರಿಯಾದ ರೀತಿಯಲ್ಲಿ ನ್ಯಾಯವನ್ನು ಕೂಡ ನೀಡಲಾಗುತ್ತದೆ. ಇದರಿಂದಾಗಿ ಈಗ್ರಾಮದಲ್ಲಿ ಹೆಚ್ಚಾಗಿ ಯಾವುದೇ ಅಹಿತಕರ ಘಟನೆಗಳು ಆಗುವುದಿಲ್ಲ. ಹಾಗೇ ಗ್ರಾಮದಲ್ಲಿ ಎರಡು ದೇವಾಲಯಗಳಿದ್ದು ಎರಡು ಜನಾಂಗದವರು ಕೂಡ ಒಟ್ಟಾಗಿ ಪೂಜೆ ಸಲ್ಲಿಸುವ ವ್ಯವಸ್ತೆ ಇದೆ.

ಸ್ಥಳಿಯರ ಆರ್ಥಿಕ ಪರಿಸ್ತಿತಿ

[ಬದಲಾಯಿಸಿ]
ಹಳೇಹೆಗ್ಗುಡಿಲು ಗ್ರಾಮದ ಒಳನೋಟ

ಈ ಗ್ರಾಮದಲ್ಲಿರುವವರೆಲ್ಲರು ಬೇಸಾಯವನ್ನೇ ಮೂಲ ಕಸುಬನ್ನಾಗಿಸಿಕೊಂಡಿದ್ದಾರೆ ಅದರಲ್ಲೂ ಪ್ರಮುಖವಾಗಿ ರಾಗಿ ಮತ್ತು ಹತ್ತಿ ಬೆಳೆಯನ್ನು ಸಾಮಾನ್ಯವಾಗಿ ಎಲ್ಲರೂ ಬೆಳೆಯುತ್ತಾರೆ, ಇದನ್ನೇ ತಮ್ಮ ಆರ್ಥಿಕತೆಯ ಬೆನ್ನೆಲುಬನ್ನಾಗಿಸಿಕೊಂಡು ಜೀವನ ನಡೆಸುತ್ತಾರೆ. ಅದರೊಂದಿಗೆ ವರ್ಷದಲ್ಲಿ ಎರಡು ತಿಂಗಳ ಮಟ್ಟಿಗೆ ಗ್ರಾಮದಲ್ಲಿ ಯಾವುದೇ ಬೇಸಾಯ ಚಟುವಟಿಕೆ ಇಲ್ಲದಿರುವ ಕಾರಣ ಕೊಡಗು, ಮೈಸೂರು ಹಾಗೂ ಇನ್ನಿತರ ಜಿಲ್ಲೆಗಳಿಗೆ ಗುಳೆ ಹೋಗುವ ಸಂಪ್ರದಾಯವು ಇದೆ. ಈ ಗ್ರಾಮದ ಪ್ರತಿಯೊಬ್ಬರ ಮನೆಯಲ್ಲೂ ಧನ. ಆಡು ಮತ್ತು ಕೋಳಿಗಳು ಸರ್ವೇ ಸಾಮಾನ್ಯ ವಾಗಿರುತ್ತವೆ. ಇವುಗಳು ಕೂಡ ಇಲ್ಲಿನ ಜನರಿಗೆ ಆರ್ಥಿಕವಾಗಿ ಸಹಾಯಕವಾಗಿವೆ.