ವಿಷಯಕ್ಕೆ ಹೋಗು

ಹಳದಿ-ಕೊರಳಿನ ಪಿಕಳಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಳದಿ ಕೊರಳಿನ ಪಿಕಳಾರ
Conservation status
Scientific classification
ಸಾಮ್ರಾಜ್ಯ:
Animalia
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
P. xantholaemus
Binomial name
Pycnonotus xantholaemus
(Jerdon, 1845)
Synonyms

Ixos xantholaemus
Brachypus xantholaemus[][]

ಹಳದಿ ಕೊರಳಿನ ಪಿಕಳಾರ, ಭಾರತ ಪರ್ಯಾಯ ದ್ವೀಪದ ಸಾಧಾರಣ ಪಿಕಳಾರಗಳ ಜಾತಿಗೆ ಸೇರಿದ್ದು, ಇವು ಬಹಳ ಅಪರೂಪ. ಇವು ಬೆಟ್ಟ-ಗುಡ್ಡಗಳ ಕುರುಚಲು ಪ್ರದೇಶಗಳಲ್ಲಿ ವಾಸಿಸುತ್ತವೆ. ಇಂದು ಹೆಚ್ಚಾಗಿ ನಗರಗಳ ಬೆಳವಣಿಗೆಯಿಂದ ಬೆಟ್ಟಗಳನ್ನು ಕಡಿದು ಜೆಲ್ಲಿಕಲ್ಲಿನ ಕಾರ್ಖಾನೆಗಳಾಗಿ ಮಾಡುತ್ತಿರುವುದರಿಂದ ಇವುಗಳ ಸಂತತಿಗೆ ತೀವ್ರ ಏಟು ಬೀಳುತ್ತಿದೆ. ಮೇಲ್ನೋಟಕ್ಕೆ ಇವುಗಳ ವ್ಯಾಪ್ತಿ, ಕೂಗು (ಬಿಳಿ ಹುಬ್ಬಿನ ಪಿಕಳಾರ)ಗಳನ್ನು ಹೋಲುತ್ತವೆಯಾದರೂ ಇವುಗಳ ತಲೆ, ಕೊರಳು ಮತ್ತು ಬಾಲಗಳ ಮೇಲಿನ ಹಳದಿ ಬಣ್ಣಗಳಿಂದ ಹಳದಿ ಕೊರಳಿನ ಪಿಕಳಾರಗಳನ್ನು ನಿರ್ದಿಷ್ಟವಾಗಿ ಗುರುತಿಸಬಹುದು.[]

ಬೇರೆ ಪಿಕಳಾರಗಳಂತೆ ಕಿರೀಟದಲ್ಲಿ ಜುಟ್ಟಿಲ್ಲದ ಹಳದಿ ಕೊರಳಿನ ಪಿಕಳಾರಗಳು ಬೆನ್ನು ಬೂದಿಮಿಶ್ರಿತ ಹಳದಿಯಾಗಿದ್ದು, ಎದೆ ಹಾಗು ಹೊಟ್ಟೆ ಭಾಗಗಳು ಬೂದಿ ಬಣ್ಣವಾಗಿರುತ್ತದೆ. ಹೆಣ್ಣು ಮತ್ತು ಗಂಡು ಹಕ್ಕಿಗಳು ಬಣ್ಣ ಹಾಗು ರೂಪದಲ್ಲಿ ಒಂದಕ್ಕೊಂದು ಹೋಲುತ್ತವೆ.[]

ವ್ಯಾಪ್ತಿ ಮತ್ತು ವಸತಿ

[ಬದಲಾಯಿಸಿ]
ಪೊದೆಗಳಲ್ಲಿ ಹಳದಿ-ಕೊರಳಿನ ಪಿಕಳಾರ

ಬೆಟ್ಟ-ಗುಡ್ಡಗಳಲ್ಲಿನ ಕುರುಚಲು ಪೊದೆಗಳು. ಹಳದಿ ಕೊರಳಿನ ಪಿಕಳಾರಗಳ ಸಾಮಾನ್ಯ ಆವಾಸ, ಹಾಗಾಗಿ ಇವುಗಳು (ಪೂರ್ವಘಟ್ಟಗಳು), ಭಾರತ ಪರ್ಯಾಯ ದ್ವೀಪದ ಮಧ್ಯಭಾಗದಲ್ಲಿನ ಬೆಟ್ಟ-ಗುಡ್ಡಗಳಲ್ಲಿ ಮತ್ತು (ಪಶ್ಚಿಮಘಟ್ಟ)ಗಳ ಕೆಲವೆಡೆ ಕಂಡುಬರುತ್ತವೆ. ಇವುಗಳ ವ್ಯಾಪ್ತಿ ಹರಡದೆ ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿದೆ, ಹೀಗಾಗಿ ಬೆಟ್ಟ-ಗುಡ್ಡಗಳ ಸಂರಕ್ಷಣೆ ತೀವ್ರ ಅಗತ್ಯವಾಗಿದೆ. ಒಂದೆಡೆ ಜಲ್ಲಿಕಲ್ಲಿನ ಕಾರ್ಖಾನೆಗಳಿಂದ ಬೆಟ್ಟ-ಗುಡ್ಡಗಳು ಮಾಯವಾಗುತ್ತಿದ್ದರೆ - ಇನ್ನೊಂದೆಡೆ, ತನ್ನ ಸಾಕು ಪ್ರಾಣಿಗಳ ಮೇವಿಗೆ ಹುಲ್ಲು ಬೇಗ ಬೆಳೆಯಲೆಂದು ಪೊದೆಗಳಿಗೆ ಮಾನವ ಬೆಂಕಿ ಇಡುತ್ತಿರುವುದರಿಂದ ಹಳದಿ ಕೊರಳಿನ ಪಿಕಳಾರಗಳ ಸಂತತಿಗೆ ತೀವ್ರ ಕೇಡು ಬಂದೊದಗಿದೆ.[][]

ಇವುಗಳ ನೆಲೆ ಈಗ (ನಂದಿಬೆಟ್ಟ,[]) ಹಾಗು ಬಿಳಿಗಿರಿರಂಗನ ಬೆಟ್ಟಗಳು (ಕರ್ನಾಟಕ), ಹೋರ್ಸ್ಲಿ,( Horsley Hills,[] ) ( ಯರಚೂಡು[೧೦]), ನಲ್ಲಮಲ್ಲ ಹಾಗು (ಗಿಂಗೀ,[೧೧]) ಬೆಟ್ಟಗಳು (ಆಂದ್ರ), ಒರಿಸ್ಸಾದ ಪೂರ್ವ ಘಟ್ಟಗಳು ಹಾಗು ಪಶ್ಚಿಮಘಟ್ಟಗಳಲ್ಲಿ [೧೨][೧೩][೧೪][೧೫] ಕೆಲವೆಡೆಗೆ ಮಾತ್ರ ಸೀಮಿತವಾಗಿವೆ.

ವರ್ತನೆ ಹಾಗು ಪರಿಸರ

[ಬದಲಾಯಿಸಿ]
1847ರ ವರ್ಣಚಿತ್ರದಲ್ಲಿ, ಹಳದಿ ಕೊರಳಿನ ಪಿಕಳಾರ

ಹಳದಿ ಕೊರಳಿನ ಪಿಕಳಾರಗಳು ಬಹಳ ನಾಚಿಕೆ ಸ್ವಭಾವದ ಹಕ್ಕಿಗಳಾದ್ದರಿಂದ ಸಾಮಾನ್ಯವಾಗಿ ಪೊದೆಗಳಲ್ಲೇ ಅವಿತುಕುಳಿತಿರುತ್ತವೆ. ಇವುಗಳ ಕೂಗು, ಮಾತಿನಂತೆ ಮುರಿದ ಕರೆಗಳು. ಇವುಗಳ ಆಹಾರ ಸಾಮಾನ್ಯವಾಗಿ ಹಣ್ಣುಗಳಾದ ಆಲ, ಅತ್ತಿ, ಗೋಣಿ, ಲಂಟಣಾಗಳಂತಹ ಸಣ್ಣಪುಟ್ಟ ಹಣ್ಣುಗಳ ಜೊತೆಗೆ ಕೀಟಗಳನ್ನು ತಿನ್ನುತ್ತವೆ.

ಬೇಸಿಗೆ ಹಾಗು ಬಿಸಿಲಿನ ಸಮಯದಲ್ಲಿ ಇವು ನೀರಿನಲ್ಲಿ ಮೀಯುತ್ತವೆ.[೧೬]

ಜೂನ್ ನಿಂದ ಆಗಸ್ಟ್ ತಿಂಗಳಲ್ಲಿ ಸಂತಾನ ಅಭಿವೃದ್ಧಿ ಕ್ರಿಯೆಯಲ್ಲಿ ತೊಡಗುತ್ತವೆ, ಪೊದೆಗಳ ಅಥವಾ ಸಣ್ಣಮರಗಳ ಟೊಂಗೆಗಳಲ್ಲಿ ಚಿಕ್ಕ ಗೋಡುಕಟ್ಟಿ 2-3 ಮೊಟ್ಟೆ ಗಳಿಗೆ ಸುಮಾರು 20 ದಿನಗಳವರಿಗೂ ಕಾವುಕೊಟ್ಟು ಮರಿಮಾಡುತ್ತವೆ ಮತ್ತು ಮರಿಗಳಿಗೆ ನಂತರ 13 ದಿನಗಳಲ್ಲಿ ಪುಕ್ಕಗಳು ಬೆಳೆದು ಹಾರುವ ಹಂತ ತಲುಪುತ್ತವೆ.[][೧೭]

ಉಲ್ಲೇಖನಗಳು

[ಬದಲಾಯಿಸಿ]
  1. BirdLife International (2012). "Pycnonotus xantholaemus". IUCN Red List of Threatened Species. Version 2012.1. International Union for Conservation of Nature. Retrieved 16 July 2012. {{cite web}}: Invalid |ref=harv (help)
  2. Jerdon, TC (1844). Madras Journal of Literature and Science. 13 (2): 122. {{cite journal}}: Missing or empty |title= (help)
  3. Sharpe, RB (1881). Catalogue of the birds in the British Museum. Volume 6 Cichlomorphae: Part 3. p. 146.
  4. http://www.wikiwand.com/kn/%E0%B2%B9%E0%B2%B3%E0%B2%A6%E0%B2%BF-%E0%B2%95%E0%B3%8A%E0%B2%B0%E0%B2%B3%E0%B2%BF%E0%B2%A8_%E0%B2%AA%E0%B2%BF%E0%B2%95%E0%B2%B3%E0%B2%BE%E0%B2%B0
  5. Ali, S & S D Ripley (1996). Handbook of the birds of India and Pakistan. Vol. 6 (2 ed.). Oxford University Press. pp. 94–95. ISBN 0-19-562063-1.
  6. ೬.೦ ೬.೧ Subramanya, S.; JN Prasad & S. Karthikeyan (2006). "Status, habitat, habits and conservation of Yellow-throated Bulbul Pycnonotus xantholaemus (Jerdon) in South India". Journal of the Bombay Natural History Society. 103 (2–3): 215–226.{{cite journal}}: CS1 maint: multiple names: authors list (link)
  7. Subramanya,S; Karthikeyan,S; Prasad,JN; Srinivasa,TS; Arun,B (1990). "A trip to Thondebhavi in search of Yellowthroated Bulbul". Newsletter for Birdwatchers. 30 (11–12): 7.{{cite journal}}: CS1 maint: multiple names: authors list (link)
  8. Subramanya,S; Karthikeyan,S; Prasad,JN (1991). "Yellowthroated Bulbul at Nandi Hill". Newsletter for Birdwatchers. 31 (3&4): 7–8.{{cite journal}}: CS1 maint: multiple names: authors list (link)
  9. Allen,P Roscoe (1908). "Notes on the Yellow-throated Bulbul Pycnonotus xantholaemus". J. Bombay Nat. Hist. Soc. 18 (4): 905–907.
  10. Karthikeyan,S (1995). "Notes on the occurrence of the Yellowthroated Bulbul Pycnonotus xantholaemus (Jerdon) at Shevaroys, Tamil Nadu". J. Bombay Nat. Hist. Soc. 92 (2): 266–267.
  11. Rao,TK (1995). "Yellowthroated Bulbul - Pycnonotus xantholaemus (Jerdon) in Gingee". Blackbuck. 11 (1): 9–11.
  12. Narayanan, S. P., Boopal, A., Nanjan, S., Kurian, J., Dhanya, R., Gomahty, N., Dastidar, D. G., Rajamamannan, M. A., Venkitachalam, R., Mukherjee, D. & Eswaran, R. (2006). "New site for the Yellow-throated Bulbul Pycnonotus xantholaemus from Tamil Nadu" (PDF). Indian Birds. 2 (6): 151–153. Archived from the original (PDF) on 2010-11-05. Retrieved 2013-09-04. {{cite journal}}: line feed character in |author= at position 136 (help)CS1 maint: multiple names: authors list (link)
  13. Beisenherz, W. (2004). "Rediscovery of the Yellow-throated Bulbul Pycnonotus xantholaemus in the Anaimalai Hills, Western Ghats, South India". J. Bombay Nat. Hist. Soc. 101 (1): 160.
  14. Praveen J & L Namassivayan (2006). "Sighting of Yellow-throated Bulbul Pycnonotus xantholaemus from Chinnar Wildlife Sanctuary, Kerala, Southern India" (PDF). Zoos' Print Journal. 21 (4): 2228. Archived from the original (PDF) on 2018-06-03. Retrieved 2013-09-04.
  15. Davison, W (1888). "Letters". Ibis. 30 (1): 146–148. doi:10.1111/j.1474-919X.1888.tb07729.x. {{cite journal}}: Unknown parameter |DUPLICATE DATA: pages= ignored (help)
  16. Karthikeyan S (1991). "On birds frequenting water puddles". Newsletter for Birdwatchers. 31 (11&12): 8–9.
  17. Collar NJ, A.V. Andreev, S. Chan, M.J. Crosby, S. Subramanya, J.A. Tobias (2001). Threatened Birds of Asia (PDF). BirdLife International. pp. 1969–1973. Archived from the original (PDF) on 2012-02-16. Retrieved 2013-09-04. {{cite book}}: More than one of |accessdate= and |access-date= specified (help); More than one of |archivedate= and |archive-date= specified (help); More than one of |archiveurl= and |archive-url= specified (help)CS1 maint: multiple names: authors list (link)


ಬಾಹ್ಯ ಕೊಂಡಿಗಳು

[ಬದಲಾಯಿಸಿ]