ಹರ್ನಿಯೋರಫಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
 1. REDIRECT Template:Infobox interventions

ಹರ್ನಿಯೋರಫಿ ಯು (ಹರ್ನಿಯೋಪ್ಲಾಸ್ಟಿ, ಹರ್ನಿಯಾ ರಿಪೇರ್) ಹರ್ನಿಯಾವನ್ನು ಸರಿಪಡಿಸುವ ಒಂದು ಶಸ್ತ್ರಚಿಕಿತ್ಸಕ ಕ್ರಿಯೆಯಾಗಿದೆ. ಹರ್ನಿಯಾ ಎಂದರೆ ಆಂತರಿಕ ಅಂಗಗಳ ಅಥವಾ ಅಂಗಾಂಶಗಳ ಊದಿಕೊಳ್ಳುವಿಕೆಯಾಗಿದೆ, ಇದು ಸ್ನಾಯುವಿನ ಪೊರೆಯಲ್ಲಿ ಅಪಸಾಮಾನ್ಯ ಬಿರುಕಿನ ಮೂಲಕ ಮುಂಚಾಚಿಕೊಳ್ಳುತ್ತದೆ. ಹರ್ನಿಯಾಗಳು ಕಿಬ್ಬೊಟ್ಟೆಯಲ್ಲಿ, ತೊಡೆಸಂದುವಿನಲ್ಲಿ ಮತ್ತು ಹಿಂದೆ ಶಸ್ತ್ರಚಿಕಿತ್ಸೆಯಾದ ಜಾಗದಲ್ಲಿ ಕಂಡುಬರಬಹುದು.

ತೊಡೆಸಂದಿನ ನಾಳಕ್ಕೆ ಯಾವುದೇ ತೊಂದರೆಯನ್ನು ಉಂಟುಮಾಡದೆ ಹರ್ನಿಯಾ ಪೊರೆಯನ್ನು ತೆಗೆದುಹಾಕುವ ಶಸ್ತ್ರಚಿಕಿತ್ಸೆಯನ್ನು 'ಹರ್ನಿಯೋಟಮಿ' ಎಂದು ಕರೆಯಲಾಗುತ್ತದೆ.

ಹರ್ನಿಯೋಟಮಿಯು ಸ್ವಶರೀರಜನ್ಯ (ರೋಗಿಯ ಸ್ವಂತ ಅಂಗಾಂಶ) ಅಥವಾ ವೈವಿಧ್ಯವುಳ್ಳ (ಉಕ್ಕು ಅಥವಾ ಪ್ರೊಲೀನ್ ಮೆಶ್‌(ಜಾಲರಿ)ನಂತಹ) ವಸ್ತುಗಳಿಂದ ಹಿಂಭಾಗದ ತೊಡೆಸಂದಿನ ನಾಲೆಯ ಪೊರೆಯನ್ನು ಬಲವರ್ಧಿಸಿ ಸರಿಪಡಿಸುವುದರೊಂದಿಗೆ ಸಂಬಂಧಿಸಿದ್ದರೆ, ಅದನ್ನು ಹರ್ನಿಯೋಪ್ಲಾಸ್ಟಿ ಎಂದು ಕರೆಯಲಾಗುತ್ತದೆ. ಬಲವರ್ಧನೆಗೆ ಯಾವುದೇ ಸ್ವಶರೀರಜನ್ಯ ಅಥವಾ ವೈವಿಧ್ಯವುಳ್ಳ ವಸ್ತುಗಳನ್ನು ಬಳಸದ ಹರ್ನಿಯೋರಫಿಗೆ ಹರ್ನಿಯೋಪ್ಲಾಸ್ಟಿಯು ವಿರುದ್ಧವಾಗಿದೆ.

ವಿಧಾನಗಳು[ಬದಲಾಯಿಸಿ]

ತೊಡೆಸಂದಿನ ಹರ್ನಿಯಾ ಶಸ್ತ್ರಚಿಕಿತ್ಸೆಯ ನಂತರ ತೊಡೆಸಂದುವಿನ ಶಸ್ತ್ರಚಿಕಿತ್ಸಕ ಛೇದನ.

ಹರ್ನಿಯೋರಫಿ ಅಥವಾ ಹರ್ನಿಯೋಪ್ಲಾಸ್ಟಿಯನ್ನು USA ಯಲ್ಲಿ ಹೆಚ್ಚಾಗಿ ಒಂದು ಸಂಚಾರದ ಅಥವಾ 'ದಿನದ ಶಸ್ತ್ರಚಿಕಿತ್ಸೆ'ಯಾಗಿ ಮಾಡಲಾಗುತ್ತಿದೆ. ಇತರ ರಾಷ್ಟ್ರಗಳಲ್ಲಿ, ಇದಕ್ಕೆ ಸಾಮಾನ್ಯವಾಗಿ ೨-೩ ದಿನ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರತಿ ವರ್ಷ ಹೆಚ್ಚುಕಡಿಮೆ ೭೦೦,೦೦೦ ಮಂದಿ ಈ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ.[ಸೂಕ್ತ ಉಲ್ಲೇಖನ ಬೇಕು]

ಇದರ ವಿಧಾನಗಳನ್ನು ನಾಲ್ಕು ಗುಂಪುಗಳಾಗಿ ವಿಭಾಗಿಸಬಹುದು.[೧]

ಗುಂಪು ೧ ಮತ್ತು ೨: ತೆರೆದ "ಟೆನ್ಷನ್" ಸರಿಪಡಿಸುವಿಕೆ[ಬದಲಾಯಿಸಿ]

ಹರ್ನಿಯಾವನ್ನು ಸರಿಪಡಿಸುವ ಒಂದು ಕಾರ್ಯಸಾಧ್ಯ ವಿಧಾನವನ್ನು ಮೊದಲು ಬ್ಯಾಸ್ಸಿನಿ ೧೮೮೦ರಲ್ಲಿ ವಿವರಿಸಿದರು;[೨][೩] ಬ್ಯಾಸ್ಸಿನಿಯ ವಿಧಾನವನ್ನು 'ಟೆನ್ಷನ್' ರಿಪೇರಿಯೆಂದು ಕರೆಯಲಾಗುತ್ತದೆ, ಇದರಲ್ಲಿ ಊನಗೊಂಡ ಭಾಗದ ಅಂಚುಗಳನ್ನು ಯಾವುದೇ ಬಲವರ್ಧನೆ ಅಥವಾ ಕೃತಕಾಂಗವಿಲ್ಲದೆ ಹೊಲಿಯಲಾಗುತ್ತದೆ. ಬ್ಯಾಸ್ಸಿನಿ ವಿಧಾನದಲ್ಲಿ, ಒಂದುಗೂಡಿದ ಸ್ನಾಯುರಜ್ಜುವನ್ನು (ಟ್ರಾನ್ಸ್‌ವರ್ಸಸ್ ಸ್ನಾಯು ಮತ್ತು ಆಂತರಿಕ ಓರೆಯಾದ ಸ್ನಾಯುಯುವಿನ ಕೊನೆಯಲ್ಲಿರುವ ತುದಿಗಳಿಂದ ರಚಿಸಲ್ಪಟ್ಟಿರುತ್ತದೆ) ತೊಡೆಸಂದಿನ ಮೂಳೆಕಟ್ಟಿನ ಹತ್ತಿರಕ್ಕೆ ತರಲಾಗುತ್ತದೆ ಮತ್ತು ಮುಚ್ಚಲಾಗುತ್ತದೆ.[೪]

ಹಾರ್ನಿಯಾವು ಮತ್ತೊಮ್ಮೆ ಬರುವ ಹೆಚ್ಚಿನ ಸಂಭವವಿರುವುದರಿಂದ, ಚೇತರಿಸಿಕೊಳ್ಳಲು ದೀರ್ಘಕಾಲದ ತೆಗೆದುಕೊಳ್ಳುವುದರಿಂದ ಮತ್ತು ಶಸ್ತ್ರಚಿಕಿತ್ಸೆಯ ನಂತರ ನೋವಿರುವುದರಿಂದ 'ಟೆನ್ಷನ್' ರಿಪೇರಿಗಳು ಪ್ರಮಾಣಿತ ಚಿಕಿತ್ಸೆಯಲ್ಲ. ಆದರೂ ಕೆಲವು 'ಟೆನ್ಷನ್' ಸರಿಪಡಿಸುವಿಕೆಯು ಈಗಲೂ ಬಳಕೆಯಲ್ಲಿದೆ; ಅವುಗಳೆಂದರೆ ಶೋಲ್ಡಿಸ್ ಮತ್ತು ಕೂಪರ್‌ನ ಮೂಳೆಕಟ್ಟು/ಮ್ಯಾಕ್‌ವೇ ಸರಿಪಡಿಸುವಿಕೆ.[೫][೬]

ಶೋಲ್ಡಿಸ್ ವಿಧಾನವು ಒಂದು ಸಂಕೀರ್ಣ ನಾಲ್ಕು ಹಂತದ ಪುನಾರಚನೆಯಾಗಿದೆ; ಆದರೂ ಇದು ಕಡಿಮೆ ಪುನರಾವರ್ತಿಸುವ ಸಂಭವಗಳನ್ನು ಹೊಂದಿದೆ.[೭]

ಗುಂಪು ೩: ತೆರೆದ "ಟೆನ್ಷನ್-ಫ್ರೀ" ಸರಿಪಡಿಸುವಿಕೆ[ಬದಲಾಯಿಸಿ]

ಚಿತ್ರ:Inguinal Hernia Scars.JPG
ಮೆಶ್ಅನ್ನು ಅಳವಡಿಸಿ ಮಾಡುವ ದ್ವಿಪಾರ್ಶ್ವಕ ತೊಡೆಸಂದಿನ ಸರಿಪಡಿಸುವಿಕೆ ಶಸ್ತ್ರಚಿಕಿತ್ಸೆಯಾದ 7 ದಿನಗಳ ನಂತರ

ಇದುವರೆಗೆ ಮಾಡಿದ ಹೆಚ್ಚುಕಡಿಮೆ ಎಲ್ಲಾ ಸರಿಪಡಿಸುವಿಕೆಗಳು ತೆರೆದ "ಟೆನ್ಷನ್-ಫ್ರೀ" ಸರಿಪಡಿಸುವಿಕೆಗಳಾಗಿವೆ, ಇವುಗಳಲ್ಲಿ ತೊಡೆಸಂದಿನ ಭಾಗವನ್ನು ಬಲವರ್ಧಿಸಲು ಒಂದು ಕೃತದ ಮೆಶ್ಅನ್ನು ಇರಿಸಲಾಗುತ್ತದೆ; ಕೆಲವು ಪ್ರಸಿದ್ಧ ವಿಧಾನಗಳೆಂದರೆ ಲಿಚ್ಟೆಂಸ್ಟೈನ್ ಸರಿಪಡಿಸುವಿಕೆ (ಊನಗೊಂಡ ಭಾಗದ ಮೇಲೆ ಚಪ್ಪಟೆಯಾದ ಮೆಶ್ ತೇಪೆಯನ್ನು ಇರಿಸಲಾಗುತ್ತದೆ)[೮] ಪ್ಲಗ್ ಮತ್ತು ಪ್ಯಾಚ್ (ಊನಗೊಂಡ ಭಾಗದಲ್ಲಿ ಮೆಶ್ ಪ್ಲಗ್ಅನ್ನು ಇರಿಸಲಾಗುತ್ತದೆ ಮತ್ತು ಲಿಚ್ಟೆಂಸ್ಟೈನ್-ಪ್ರಕಾರದ ತೇಪೆಯಿಂದ ಆವರಿಸಲಾಗುತ್ತದೆ), ಕುಗೆಲ್ (ಮೆಶ್ ವಸ್ತುವನ್ನು ಊನಗೊಂಡ ಭಾಗದ ಹಿಂಭಾಗದಲ್ಲಿ ಇಡಲಾಗತ್ತದೆ) ಮತ್ತು ಪ್ರೊಲೀನ್ ಹರ್ನಿಯಾ ಸಿಸ್ಟಮ್ (ಊನಗೊಂಡ ಭಾಗದ ಹಿಂಭಾಗದಲ್ಲಿ ೨-ಪದರದ ಮೆಶ್ ವಸ್ತುವನ್ನು ಇಡಲಾಗುತ್ತದೆ). ಇದರ ಶಸ್ತ್ರಚಿಕಿತ್ಸೆಯನ್ನು 'ಹರ್ನಿಯೋಪ್ಲಾಸ್ಟಿ' ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಬಳಸುವ ಮೆಶ್‌ಗಳು ಪಾಲಿಪ್ರೊಪೈಲೀನ್ ಅಥವಾ ಪಾಲಿಸ್ಟರ್‌ನಿಂದ ಮಾಡಲ್ಪಟ್ಟಿರುತ್ತವೆ, ಆದರೂ ಕೆಲವು ಕಂಪನಿಗಳು ಟೆಫ್ಲಾನ್ ಮೆಶ್‌ಗಳು ಮತ್ತು ಭಾಗಶಃ ಹೀರಿಕೊಳ್ಳಬಲ್ಲ ಮೆಶ್‌ಗಳನ್ನೂ ಮಾರಾಟ ಮಾಡುತ್ತವೆ. ಈ ಶಸ್ತ್ರಚಿಕಿತ್ಸೆಯನ್ನು ಸ್ಥಳೀಯ ಅಸಂವೇದನತೆಯಡಿಯಲ್ಲಿ ಮಾಡಲಾಗುತ್ತದೆ, ಶಸ್ತ್ರಚಿಕಿತ್ಸೆ ಆದ ಕೆಲವು ಗಂಟೆಗಳೊಳಗಾಗಿ ರೋಗಿಗಳು ಮನೆಗೆ ಹೋಗಬಹುದು, ಇದಕ್ಕೆ ಹೆಚ್ಚಾಗಿ ಆಸ್ಪರಿನ್ ಅಥವಾ ಅಸೆಟಮಿನೋಫೆನ್ ಅಲ್ಲದೆ ಬೇರೆ ಔಷಧಿಯ ಅಗತ್ಯವಿರುವುದಿಲ್ಲ. ಶಸ್ತ್ರಚಿಕಿತ್ಸೆಯಾದ ನಂತರ ತಕ್ಷಣವೇ ರೋಗಿಗಳು ನಡೆಯಬಹುದು ಮತ್ತು ಸುತ್ತಲೂ ತಿರುಗಬಹುದು ಹಾಗೂ ಶಸ್ತ್ರಚಿಕಿತ್ಸೆ ನಂತರ ಒಂದು ಅಥವಾ ಎರಡು ವಾರದೊಳಗೆ ಅವರ ಎಲ್ಲಾ ರೂಢಿಯ ಚಟುವಟಿಕೆಗಳನ್ನು ಪ್ರಾರಂಭಿಸಬಹುದು. 'ಟೆನ್ಷನ್' ಸರಿಪಡಿಸುವಿಕೆಯಲ್ಲಿರುವ ೧೦% ನಷ್ಟು ಪುನರಾವರ್ತಿಸುವ ಸಂಭವಕ್ಕೆ ಹೋಲಿಸಿದರೆ, ಇದರಲ್ಲಿ ಒಂದು ಅಥವಾ ಅದಕ್ಕಿಂತ ಕಡಿಮೆ ಪ್ರತಿಶತದಷ್ಟು ಪುನರಾವರ್ತಿಸುವ ಸಂಭವವಿರುತ್ತದೆ. ತೊಡಕುಗಳ ಸಂಭವವು ಸಾಮಾನ್ಯವಾಗಿ ಕಡಿಮೆಯಾಗಿರುತ್ತದೆ ಆದರೆ ಅವು ಹೆಚ್ಚು ಗಂಭೀರವಾಗಿರಬಹುದು, ಅವುಗಳೆಂದರೆ ದೀರ್ಘಕಾಲದ ನೋವು, ರಕ್ತಕೊರತೆಯ ಆರ್ಕೈಟಿಸ್ ಮತ್ತು ವೃಷಣಯುಕ್ತ ನವೆತ.[೯][೧೦]

ಗುಂಪು ೪: ಲ್ಯಾಪರೊಸ್ಕೋಪಿಕ್ ಸರಿಪಡಿಸುವಿಕೆ[ಬದಲಾಯಿಸಿ]

ಇತ್ತೀಚೆಗೆ, ಶಸ್ತ್ರಚಿಕಿತ್ಸೆಯ ಇತರ ಕ್ಷೇತ್ರಗಳಲ್ಲಿರುವಂತೆ ತೊಡೆಸಂದಿನ ಹರ್ನಿಯಾದ ಲ್ಯಾಪರೊಸ್ಕೋಪಿಕ್ ಸರಿಪಡಿಸುವಿಕೆಯು ಒಂದು ಆಯ್ಕೆಯಾಗಿ ಕಂಡುಬಂದಿದೆ. "ಲ್ಯಾಪ್" ಸರಿಪಡಿಸುವಿಕೆಗಳೂ (ಕೆಲವೊಮ್ಮೆ 'ಕೀಹೋಲ್' ಶಸ್ತ್ರಚಿಕಿತ್ಸೆ ಅಥವಾ ಕಡಿಮೆ ಅತಿಕ್ರಮಿಸುವ ಶಸ್ತ್ರಚಿಕಿತ್ಸೆ ಎಂದು ಕರೆಯಲಾಗುತ್ತದೆ) ಸಹ ಟೆನ್ಷನ್-ಫ್ರೀ ಆಗಿವೆ. ಆದರೆ ಇದರಲ್ಲಿ ಮೆಶ್ಅನ್ನು ಊನಗೊಂಡ ಭಾಗದ ಹಿಂಭಾಗದಲ್ಲಿ ಪೆರಿಟೋನಿಯಮ್‌ನ ಮುಂಚಿನ ಜಾಗದಲ್ಲಿರಿಸಲಾಗುತ್ತದೆ. ತೆರೆದ ವಿಧಾನಕ್ಕಿಂತ ಈ ಲ್ಯಾಪ್‌ ವಿಧಾನದ ಪ್ರಯೋಜನಗಳೆಂದರೆ ರೋಗಿಗಳು ಬಲುಬೇಗನೆ ಚೇತರಿಸಿಕೊಳ್ಳುತ್ತಾರೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಹೆಚ್ಚಿನ ನೋವನ್ನು ಹೊಂದಿರುವುದಿಲ್ಲ.

ತೆರೆದ ವಿಧಾನದಂತೆ, ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯು ಹರ್ನಿಯಾದ ಗಾತ್ರ ಮತ್ತು ಸಂಬಂಧಿತ ಅಂಶಗಳ ಆಧಾರದಲ್ಲಿ ಸ್ಥಳೀಯ ಅಥವಾ ಸಾಮಾನ್ಯ ಅಸಂವೇದನತೆಯನ್ನು ಒಳಗೊಳ್ಳುತ್ತದೆ. ತೆರೆದ ಸರಿಪಡಿಸುವಿಕೆಗಿಂತ ಲ್ಯಾಪ್ ವಿಧಾನಕ್ಕೆ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಹೆಚ್ಚಿನ ಸಮಯ ಕಳೆಯುವುದು ಅಗತ್ಯವಾದುದರಿಂದ ಅದು ಸಾಮಾನ್ಯವಾಗಿ ಹೆಚ್ಚು ದುಬಾರಿಯಾಗಿದೆ, ಆದರೆ ಈ ವಿಧಾನದಲ್ಲಿ ರೋಗಿಗಳು ಸ್ವಲ್ಪ ಕಾಲ ಆಸ್ಪತ್ರೆಯಲ್ಲಿದ್ದರೆ ಸಾಕಾಗುತ್ತದೆ.

ತೆರೆದ 'ಟೆನ್ಷನ್-ಫ್ರೀ' ಸರಿಪಡಿಸುವಿಕೆಗಳಿಗೆ ಹೋಲಿಸಿದರೆ ಇದರ ತೊಡಕುಗಳ ಅಪಾಯ ಅಥವಾ ಪುನರಾವರ್ತಿಸುವ ಅಪಾಯದ ಸಂಭವಗಳ ಬಗ್ಗೆ ಯಾವುದೇ ನಿರ್ಣಾಯಕ ಒಮ್ಮತವಿಲ್ಲ.[ಸೂಕ್ತ ಉಲ್ಲೇಖನ ಬೇಕು] ಹೆಚ್ಚಿನ ಅಷ್ಟಾಗಿ-ಬೆಳೆದಿರದ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆಗಳು ಲ್ಯಾಪರೊಸ್ಕೋಪಿಕ್ ವಿಧಾನಗಳನ್ನು ಬಳಸುತ್ತಿವೆ, ಈ ವಿಧಾನದಲ್ಲಿ ಸಣ್ಣ ಗಾಯಗಳನ್ನು ಮಾಡಿ ಚಿಕಿತ್ಸೆ ನೀಡಲಾಗುವುದರಿಂದ ಕಡಿಮೆ ರಕ್ತವು ನಷ್ಟವಾಗುತ್ತದೆ, ಸೋಂಕಾಗುವ ಸಂಭವವು ಕಡಿಮೆಯಿರುತ್ತದೆ, ರೋಗಿಗಳು ಬಲುಬೇಗನೆ ಚೇತರಿಸಿಕೊಳ್ಳುತ್ತಾರೆ, ಸ್ವಲ್ಪ ಕಾಲ ಆಸ್ಪತ್ರೆಯಲ್ಲಿದ್ದರೆ ಸಾಕಾಗುತ್ತದೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಅಷ್ಟೊಂದು ನೋವಿರುವುದಿಲ್ಲ.[೧೧]

ಲ್ಯಾಪರೊಸ್ಕೋಪಿಕ್ ಸರಿಪಡಿಸುವಿಕೆಯ ಒಂದು ನಿರ್ದಿಷ್ಟ ವಿಧಾನವೆಂದರೆ ಟೋಟಲಿ ಎಕ್ಸ್‌ಟ್ರಾಪೆರಿಟೋನಿಯಲ್ (TEP ) ಸರಿಪಡಿಸುವಿಕೆ. ತೊಡೆಸಂದಿನ ಹರ್ನಿಯಾವು ಹೆಚ್ಚಾಗಿ ಪುನರಾವರ್ತಿಸುವ ಲಿಚ್ಟೆಂಸ್ಟೈನ್ ಸರಿಪಡಿಸುವಿಕೆಗಿಂತ, TEp ಸರಿಪಡಿಸುವಿಕೆಯು ಕಡಿಮೆ ತೊಡಕುಗಳನ್ನು ಹೊಂದಿದೆ ಮತ್ತು ಇದರಲ್ಲಿ ಗಮನಾರ್ಹವಾಗಿ ಶಸ್ತ್ರಚಿಕಿತ್ಸೆಯ ನಂತರ ಕಡಿಮೆ ಅವಧಿಯವರೆಗೆ ಮಾತ್ರ ನೋವಿರುತ್ತದೆ.[೧೨]

ಹೋಲಿಕೆಗಳು[ಬದಲಾಯಿಸಿ]

ಲ್ಯಾಪರೊಸ್ಕೋಪಿಕ್ ಹರ್ನಿಯೋರಫಿ ಅನ್ನು ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ
ಅನುಕೂಲಗಳು ಅನನುಕೂಲಗಳು
 • ಬಲುಬೇಗನೆ ಚೇತರಿಸಿಕೊಳ್ಳಬಹುದು[೧೩][೧೪]
 • ಆರಂಭದ ದಿನಗಳಲ್ಲಿ ಕಡಿಮೆ ನೋವಿರುತ್ತದೆ[೧೪]
 • ಶಸ್ತ್ರಚಿಕಿತ್ಸೆಯ ನಂತರ ಕಡಿಮೆ ತೊಡಕುಗಳಿರುತ್ತವೆ[೧೩]
ಉದಾ. ಸೋಂಕುಗಳು, ರಕ್ತಸೋರಿಕೆ ಮತ್ತು ಸಿರೋಮಗಳು[೧೪]
 • ದೀರ್ಘಕಾಲದ ನೋವಿನ ಸಂಭವವು ಕಡಿಮೆಯಿರುತ್ತದೆ[೧೪]
 • ಶಸ್ತ್ರಚಿಕಿತ್ಸೆ ಮಾಡಲು ದೀರ್ಘ ಕಾಲ ತೆಗೆದುಕೊಳ್ಳುತ್ತದೆ[೧೩]
 • ಪ್ರಾಥಮಿಕ ಹರ್ನಿಯಾಗಳು ಕಂಡುಬರುವ ಸಂಭವವು ಹೆಚ್ಚಿರುತ್ತದೆ[೧೩]

UK ಯಲ್ಲಿ NICE[೧೪] ಎಂಬ ಒಂದು ಸರ್ಕಾರಿ ಸಮಿತಿಯು ಲ್ಯಾಪರೊಸ್ಕೋಪಿಕ್ ಮತ್ತು ತೆರೆದ ಸರಿಪಡಿಸುವಿಕೆಯ ಬಗ್ಗೆ ಮಾಹಿತಿಯನ್ನು ಪುನರ್‌ಪರಿಶೀಲಿಸಿತು (೨೦೦೪). ಆ ಮಾಹಿತಿಗಳು ಖರ್ಚಿನಲ್ಲಿ ಯಾವುದೇ ವ್ಯತ್ಯಾಸಗಳಿಲ್ಲವೆಂಬುದನ್ನು ನಿರ್ಣಯಿಸಿದವು, ಏಕೆಂದರೆ ಶಸ್ತ್ರಚಿಕಿತ್ಸೆಗೆ ಉಂಟಾಗುವ ಹೆಚ್ಚಿನ ಖರ್ಚು ಕಡಿಮೆ ಚೇತರಿಸಿಕೊಳ್ಳುವ ಅವಧಿಯಿಂದ ಸರಿದೂಗುತ್ತದೆ. ಪುನರಾವರ್ತಿಸುವ ಸಂಭವಗಳ ದರವು ಅಭಿನ್ನವಾಗಿದೆಯೆಂಬ ನಿರ್ಧಾರವನ್ನು ನೀಡಿದವು, ಆದರೆ ಇದನ್ನು ಹೊಸ ಅಧ್ಯಯನಗಳು ಪ್ರಶ್ನಿಸಿವೆ. ಲ್ಯಾಪರೊಸ್ಕೋಪಿಕ್ ಸರಿಪಡಿಸುವಿಕೆಯು ರೋಗಿಗಳು ಬಲುಬೇಗನೆ ಚೇರಿಸಿಕೊಳ್ಳುವಂತೆ ಮತ್ತು ಮೊದಲ ಕೆಲವು ದಿನಗಳಲ್ಲಿ ಕಡಿಮೆ ನೋವಿರುವಂತೆ ಮಾಡುತ್ತವೆ ಎಂದು ಅವು ಸೂಚಿಸಿವೆ. ಲ್ಯಾಪ್ ಸರಿಪಡಿಸುವಿಕೆಯಲ್ಲಿ ಗಾಯದ ಸೋಂಕು ಉಂಟಾಗುವ ಸಂಭವವು ಕಡಿಮೆಯಿರುತ್ತದೆ, ಕಡಿಮೆ ರಕ್ತ ಸೋರಿಕೆಯಾಗುತ್ತದೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಹೆಚ್ಚು ಬಾತುಕೊಳ್ಳುವುದಿಲ್ಲ (ಸೆರೋಮ) ಎಂದೂ ಆ ಮಾಹಿತಿಗಳು ಕಂಡುಹಿಡಿದಿವೆ. ಅವು ಕಡಿಮೆ ದೀರ್ಘಕಾಲದ ನೋವನ್ನು ಉಂಟುಮಾಡುತ್ತವೆ, ನೋವು ಕೆಲವು ವರ್ಷಗಳವರೆಗೆ ಇರಬಹುದು ಮತ್ತು ೩೦ ರೋಗಿಗಳಲ್ಲಿ ಒಬ್ಬರಿಗೆ ತೀವ್ರವಾಗಿರಬಹುದು. ಲ್ಯಾಪ್ ಸರಿಪಡಿಸುವಿಕೆಯ ನಂತರ ಎರಡು ವರ್ಷಗಳೊಳಗೆ ಪುನರಾವರ್ತಿಸುವ ಸಂಭವವು ೧೦%ನಷ್ಟಿರುತ್ತದೆ, ಅದೇ ತೆರೆದ ಶಸ್ತ್ರಚಿಕಿತ್ಸೆಯ ನಂತರ ಆ ಪುನರಾವರ್ತನೆಯು ೪%ನಷ್ಟಿರುತ್ತದೆಂದು ಅಮೇರಿಕಾದ ಇತ್ತೀಚಿನ ದೊಡ್ಡ ಅಧ್ಯಯನವೊಂದು[೧೫] ಕಂಡುಹಿಡಿದಿದೆ. ಆದರೆ ಈ ಎರಡೂ ಫಲಿತಾಂಶಗಳನ್ನು ಅಂತಾರಾಷ್ಟ್ರೀಯ ಪ್ರಮಾಣಕಗಳು ಕಳಪೆ ಮಟ್ಟದವೆಂದು ಪರಿಗಣಿಸಿವೆ ಮತ್ತು ಶಸ್ತ್ರಚಿಕಿತ್ಸಕರು ಮುಖ್ಯವಾಗಿ ಲ್ಯಾಪ್ ಸರಿಪಡಿಸುವಿಕೆಯಲ್ಲಿ ಅನುಭವಸ್ಥರಲ್ಲವೆಂದು ಸೂಚಿಸಿವೆ.

'ಟೆನ್ಷನ್' ಸರಿಪಡಿಸುವಿಕೆಗಳಿಗೆ ಹೋಲಿಸಿದರೆ ಮೆಶ್ ಸರಿಪಡಿಸುವಿಕೆಗಳಲ್ಲಿ ಪುನರಾವರ್ತಿಸುವ ಸಂಭವವು ಕಡಿಮೆಯಿರುತ್ತದೆ ಅಥವಾ ರೋಗಿಗಳು ಬಲುಬೇಗನೆ ಚೇತರಿಸಿಕೊಳ್ಳುತ್ತಾರೆ. ಮೆಶ್ ಸರಿಪಡಿಸುವಿಕೆಯ ತೊಡಕುಗಳೆಂದರೆ ಸೋಂಕು, ಮೆಶ್‌ನ ಸ್ಥಾನಾಂತರಿಕೆ, ಊತದಿಂದ ಅಂಟಿಕೊಳ್ಳುವಿಕೆ, ಒಳ-ಪೆರಿಟೋನಿಯಮ್‌ ಅಂಗಗಳ ಸವೆತ ಮತ್ತು ದೀರ್ಘಕಾಲದ ನೋವು - ಇದು ಬಹುಶಃ ನರಗಳು, ರಕ್ತನಾಳಗಳು ಅಥವಾ ವಾಸ್ ಡೆಫೆರೆನ್ಸ್‌ನ ಪ್ರಚೋದನೆಯಿಂದ ಉಂಟಾಗಬಹುದು.[೧೬] ಅಂತಹ ತೊಂದರೆಗಳು ಶಸ್ತ್ರಚಿಕಿತ್ಸೆಯ ನಂತರ ಸಾಮಾನ್ಯವಾಗಿ ವಾರಗಳಿಂದ ಕೆಲವು ವರ್ಷಗಳವರೆಗೆ ಕಂಡುಬರಬಹುದು, ಬಾವು, ಫಿಸ್ಟುಲ(ಭಗಂದರ), ಅಥವಾ ಸಣ್ಣ ಕರುಳಿನ ನಿರೋಧವನ್ನು ಉಂಟುಮಾಡಬಹುದು.[೧೭][೧೮] ಮೆಶ್‌ಗೆ ಪ್ರತಿಯಾಗಿ ಫೈಬ್ರೊಬ್ಲಾಸ್ಟಿಕ್ ಕ್ರಿಯೆಯು ಸಂಭವಿಸುವುದರಿಂದ ವಾಸ್ ಡೆಫೆರೆನ್ಸ್‌ನ ನಿರೋಧವು ಕಂಡುಬರುವ ಬಗ್ಗೆ ಇತ್ತೀಚೆಗೆ ಹೆಚ್ಚಿನ ವಿವಾದಗಳು ಎದ್ದಿವೆ.[೧೯][೨೦]

ಉಲ್ಲೇಖಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 2. doctor/3213 at Who Named It?
 3. ಬ್ಯಾಸ್ಸಿನಿ ಇ., ನ್ಯೂವೊ ಮೆಟೊಡೊ ಆಪರೇಟಿವೊ ಪರ್ ಲಾ ಕ್ಯೂರ ಡೆಲ್‌ಅರ್ನಿಯಾ ಇಂಗ್ವಿನಲೆ. ಪಾಡ್ವ, ೧೮೮೯.
 4. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 5. Mittelstaedt WE, Rodrigues Júnior AJ, Duprat J, Bevilaqua RG, Birolini D (1999). "[Treatment of inguinal hernias. Is the Bassani's technique current yet? A prospective, randomized trial comparing three operative techniques: Bassini, Shouldice and McVay]". Revista da Associação Médica Brasileira (1992) (in Portuguese). 45 (2): 105–14. PMID 10413912. 
 6. editors, Michael W. Mulholland, Gerard M. Doherty. (2005). Complications in Surgery. Hagerstown, MD: Lippincott Williams & Wilkins. p. 533. ISBN 0-7817-5316-3. 
 7. Arlt G, Schumpelick V (2002). "[The Shouldice repair for inguinal hernia—technique and results]". Zentralblatt für Chirurgie (in German). 127 (7): 565–9. doi:10.1055/s-2002-32844. PMID 12122581. 
 8. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 9. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 10. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 11. http://www.mayoclinic.org/minimally-invasive-surgery
 12. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 13. ೧೩.೦ ೧೩.೧ ೧೩.೨ ೧೩.೩ Trudie A Goers; Washington University School of Medicine Department of Surgery; Klingensmith, Mary E; Li Ern Chen; Sean C Glasgow (2008). The Washington manual of surgery. Philadelphia: Wolters Kluwer Health/Lippincott Williams & Wilkins. ISBN 0-7817-7447-0. 
 14. ೧೪.೦ ೧೪.೧ ೧೪.೨ ೧೪.೩ ೧೪.೪ Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 15. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 16. Crespi G, Giannetta E, Mariani F, Floris F, Pretolesi F, Marino P (2004). "Imaging of early postoperative complications after polypropylene mesh repair of inguinal hernia". Radiol Med. 108 (1-2): 107–15. PMID 15269694. 
 17. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 18. Aguirre DA, Santosa AC, Casola G, Sirlin CB (2005). "Abdominal wall hernias: imaging features, complications, and diagnostic pitfalls at multi-detector row CT". Radiographics. 25 (6): 1501–20. doi:10.1148/rg.256055018. PMID 16284131. 
 19. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 20. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).

ಬಾಹ್ಯ ಕೊಂಡಿಗಳು‌[ಬದಲಾಯಿಸಿ]

 1. REDIRECT Template:Digestive system procedures