ಹಮಾಮ್ ಶಿವಪುರ
ಹಮಾಮ ಶಿವಪುರ | |
---|---|
ಗ್ರಾಮ | |
Country | ಭಾರತ |
State | ಕರ್ನಾಟಕ |
District | ಬೆಂಗಳೂರು ಗ್ರಾಮಾಂತರ |
Population (2011) | |
• Total | ೨,೫೦೦ |
Languages | |
• Official | ಕನ್ನಡ |
Time zone | UTC+5:30 (IST) |
PIN | 561 203 |
Telephone code | 08119 |
Vehicle registration | KA-43 |
ಹಮಾಮ ಶಿವಪುರ ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಗ್ರಾಮ. ದೊಡ್ಡಬಳ್ಳಾಪುರ ನಗರ ಬೆಂಗಳೂರು ರಾಜ್ಯ ರಾಜಧಾನಿಯಿಂದ ಸುಮಾರು 42 ಕಿ ಮಿ ದೂರದಲ್ಲಿದೆ. ಹಮಾಮ-ಶಿವಪುರದಿ೦ದ ಸುಮಾರು ೧೨ ಕಿ. ಮೀ ದೂರದಲ್ಲಿ ವಿಶ್ವ ವಿಖ್ಯಾತ ನಂದಿ ಬೆಟ್ಟವಿದೆ.
ಜಾತ್ರೆ-ಉತ್ಸವ
[ಬದಲಾಯಿಸಿ]ಹಮಾಮ-ಶಿವಪುರ ಗ್ರಾಮಗಳಲ್ಲಿ ಪ್ರಮುಖ ಜಾತ್ರೆಯಂದರೆ ಅರ್ಕಾವತಿ ನದಿಯ ದಡದಲ್ಲಿರುವ ಅರ್ಕಾವತಿ ಕ್ಷೇತ್ರದ ಜಾತ್ರೆಯು ತುಂಬಾ ಪ್ರಸಿದ್ಧವಾದ ಜಾತ್ರೆಯಾಗಿದೆ. ಹನುಮ ಜಯಂತಿ ಇಲ್ಲಿನ ಪ್ರಮುಖ ಉತ್ಸವವಾಗಿದೆ ಶಿವಪುರದ ಶ್ರೀ ಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ಬಸವೇಶ್ವರ ದೇವಾಲಯಗಳು ಪ್ರಮುಖವಾಗಿವೆ.
ಜಲಾನಯನ ಪ್ರದೇಶ
[ಬದಲಾಯಿಸಿ]ಹಮಾಮ ಶಿವಪುರ ಗ್ರಾಮಗಳು ಅರ್ಕಾವತಿ ನದಿಪಾತ್ರ ಗ್ರಾಮಗಳಾಗಿದ್ದು ಶಿವಪುರ ಗ್ರಾಮದಲ್ಲಿ ಕೆರೆ ಇದೆ.
ಪೌರಾಣಿಕ ನಾಟಕ
[ಬದಲಾಯಿಸಿ]ಹಮಾಮ-ಶಿವಪುರ ಗ್ರಾಮಗಳು ದೊಡ್ಡಬಳ್ಳಾಪುರ ನಗರಕ್ಕೆ ಹೊಂದಿಕೊಂಡಿದ್ದರು ಇಲ್ಲಿನ ಗ್ರಾಮಸ್ಥರ ಪ್ರಮುಖ ಕಸುಬು ವ್ಯವಸಾಯವಾಗಿರುವುದರಿಂದ ಇಲ್ಲಿನ ಮಣ್ಣಿನ ಮಕ್ಕಳು ವರ್ಷಪೂರ್ತಿ ಹೊಲದಲ್ಲಿ ದುಡಿದು ವರ್ಷಾಂತ್ಯದಲ್ಲಿ ಬೇಸಿಗೆ ಬಿಡುವಿನಲ್ಲಿ ಬಣ್ಣಹಚ್ಚುವುದು ರೂಡಿ. ಇಲ್ಲಿನ ಪ್ರದರ್ಶನಗೊಳ್ಳುವ ಪ್ರಮುಖ ನಾಟಕಗಳೆಂದರೆ
- ಶ್ರೀಕೃಷ್ಣ ಸಂಧಾನ / ಕುರುಕ್ಷೇತ್ರ
- ಭೀಮ ವಿಜಯ
- ಮೂರುವರೆ ವಜ್ರ
- ರಾಮಾಂಜನೇಯ ಯುದ್ಧ
- ರಾಮಾಯಣ
ಇವು ಪ್ರಮುಖವಾಗಿ ಪ್ರದರ್ಶನಗೊಳ್ಳುವ ನಾಟಕಗಳು.
ಶಿಕ್ಷಣ
[ಬದಲಾಯಿಸಿ]ಹಮಾಮ-ಶಿವಪುರ ಗ್ರಾಮಗಳಲ್ಲಿ ಸರ್ಕಾರಿ ಹಾಗೂ ಖಾಸಗಿ ಶಾಳೆಗಳಿವೆ ಅವುಗಳೆಂದರೆ
- ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ-ಹಮಾಮ್
- ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆ-ಶಿವಪುರ
- ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ-ಶಿವಪುರ
- ನವೋದಯ ಶಾಲೆ-ಶಿವಪುರ
ಅಂಚೆ ಕಛೇರಿ
[ಬದಲಾಯಿಸಿ]ಭಾರತೀಯ ಅಂಚೆ ಮತ್ತು ತಂತಿ ಇಲಾಖೆಯ ದೊಡ್ಡಬಳ್ಳಾಪುರ ಉಪವಿಭಾಗದ ವ್ಯಾಪ್ತಿಗೆ ಶಿವಪುರ ಶಾಖೆ ಅಂಚೆ ಕಛೇರಿ ಬರುತ್ತದೆ. ಅಂಚೆ ಪೆಟ್ಟಿಗೆ ಸಂಖ್ಯೆ-561203.
ಕಂದಾಯ ಇಲಾಖೆ
[ಬದಲಾಯಿಸಿ]ಕರ್ನಾಟಕ ಕಂದಾಯ ಇಲಾಖೆಯ ಗ್ರಾಮ ಲೇಕ್ಕಿಗರ ವೃತ್ತ ಕಛೇರಿಯು ಶೀವಪುರ ಗ್ರಾಮದಲ್ಲಿ ಇದ್ದು ಇಲ್ಲಿ ಗ್ರಾಮ ಲೇಕ್ಕಾಧಿಕಾರಿ ಹಾಗೂ ಜನನ-ಮರಣ ನೊಂದಣಾಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ.