ವಿಷಯಕ್ಕೆ ಹೋಗು

ಹಗ್ ಹೆಫ್ನರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hugh Hefner
Hugh Hefner on the Red Carpet for a Wounded Warrior Project benefit event at the Playboy Mansion in Los Angeles, CA on May 16, 2009.
ಜನನ
Hugh Marston Hefner

(1926-04-09) ಏಪ್ರಿಲ್ ೯, ೧೯೨೬ (ವಯಸ್ಸು ೯೮)
Chicago, Illinois, United States
ಗಮನಾರ್ಹ ಕೆಲಸಗಳುEditor-in-chief of Playboy magazine, Chief Creative Officer of
Playboy Enterprises
ಸಂಗಾತಿ(s)
Mildred Williams
(m. ೧೯೪೯⁠–⁠ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೨".)
(divorced)
(m. ೧೯೮೯)
(Filed for divorce)
ಮಕ್ಕಳುChristie Hefner (born 1952)
David Hefner (born 1955)
Marston Hefner (born 1990)
Cooper Hefner (born 1991)
ಜಾಲತಾಣPlayboyenterprises.com

ಕಾಲಿನ್ ಕಾಯ್ನರ್ ( ಜನನ ಏಪ್ರಿಲ್ 9, 1926 - 27 september 2017), ಸಾಮಾನ್ಯವಾಗಿ ಹೆಫ್ ಎಂದೇ ಪರಿಚಿತ. ಇವರೊಬ್ಬ ಅಮೇರಿಕಾದ ನಿಯತಕಾಲಿಕಪ್ರಕಾಶಕ. ಇವರು ಪ್ಲೇಬಾಯ್ ಎಂಟರ್ಪ್ರೈಸಸ್ ನ ಸಂಸ್ಥಾಪಕ ಹಾಗು ಮುಖ್ಯ ಸೃಜನಾತ್ಮಕ ಅಧಿಕಾರಿ. ಕಳೆದ 2003ರಲ್ಲಿ, ಅರೇನಾ ನಿಯತಕಾಲಿಕವು ಪಟ್ಟಿ ಮಾಡಿದ " ಕಾಮಪ್ರಚೋದಕ ಚಿತ್ರಗಳಲ್ಲಿ ತೊಡಗಿಕೊಂಡ 50 ಮಂದಿ ಅತ್ಯಂತ ಪ್ರಭಾವಿ ಜನ"ರಲ್ಲಿ ಇವರಿಗೆ ಎರಡನೇ ಸ್ಥಾನ ನೀಡಲಾಯಿತು.[]

ಆರಂಭಿಕ ಜೀವನ

[ಬದಲಾಯಿಸಿ]

ಹೆಫ್ನರ್ ಅವರ ಜನನ ಶಿಕಾಗೋ, ಇಲ್ಲಿನೋಯಿಸ್ ನಲ್ಲಿ ಆಯಿತು. ಇವರು ಗ್ರೇಸ್ ಕ್ಯಾರೊಲಿನ್ ಸ್ವಾನ್ಸನ್(1895-1997) ಹಾಗು ಗ್ಲೆನ್ನ್ ಲುಸಿಯಸ್ ಹೆಫ್ನರ್(1896-1976) ದಂಪತಿಯ ಇಬ್ಬರು ಗಂಡು ಮಕ್ಕಳಲ್ಲಿ ಹಿರಿಯವರು. ತಂದೆ-ತಾಯಿ ಇಬ್ಬರೂ ಶಿಕ್ಷಕರಾಗಿದ್ದರು.[] ಇವರು ವಿದ್ಯಾಭ್ಯಾಸವನ್ನು ಸಾಯ್ರೆ ಪ್ರಾಥಮಿಕ ಶಾಲೆ ಹಾಗು ಸ್ಟೀನ್ಮೆಟ್ಜ್ ಪ್ರೌಢಶಾಲೆಯಲ್ಲಿ ಮಾಡಿದರು. ನಂತರ U.S. ಸೇನೆ ಯ ಒಂದು ಸೇನಾ ದಿನಪತ್ರಿಕೆಯಲ್ಲಿ 1944-1946ವರೆಗೂ ಬರಹಗಾರರಾಗಿ ಕೆಲಸ ಮಾಡಿದರು. ಅವರು ನಂತರ ಅರ್ಬಾನ-ಚಾಂಪೇನ್ ಇಲ್ಲಿನೋಯಿಸ್ ವಿಶ್ವವಿದ್ಯಾಲಯದಿಂದ ಮನಶಾಸ್ತ್ರ ದಲ್ಲಿ B.A.ಪದವಿಯನ್ನು ಪಡೆದರು. ಜೊತೆಗೆ ಸೃಜನಾತ್ಮಕ ಬರವಣಿಗೆ ಹಾಗು ಕಲೆ ಯಲ್ಲೂ ಸಹ 1949ರಲ್ಲಿ ಡಬಲ್ ಮೈನರ್ ಪಡೆಯುವುದರೊಂದಿಗೆ ಅವರು ಪದವಿಯನ್ನು ಎರಡೂವರೆ ವರ್ಷಗಳಲ್ಲಿ ಪೂರೈಸಿದರು. ಪದವಿಯ ನಂತರ,ನಾರ್ತ್ ವೆಸ್ಟೆರ್ನ್ ವಿಶ್ವವಿದ್ಯಾಲಯದಿಂದ ಸಾಮಾಜಿಕ ಶಾಸ್ತ್ರ ಹಾಗು ವುಮೆನ್ ಅಂಡ್ ಜೆನ್ಡರ್ ಸ್ಟಡೀಸ್ ನಲ್ಲಿ ಪದವಿ ಶಿಕ್ಷಣಗಳ ಸೆಮೆಸ್ಟರ್‌ ಕೈಗೆತ್ತಿಕೊಂಡರು.ಸ್ವಲ್ಪ ಸಮಯದ ನಂತರ ಅರ್ಧಕ್ಕೆ ತ್ಯಜಿಸಿದರು.[]

ಎಸ್ಕ್ವೈರ್ ನಲ್ಲಿ ಒಬ್ಬಕಾಪಿರೈಟರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ಸಂಬಳದಲ್ಲಿ $5ನಷ್ಟು ಹಣವನ್ನು ಹೆಚ್ಚಿಸಲು ಸಂಸ್ಥೆಯು ನಿರಾಕರಿಸಿದ್ದರಿಂದ ಜನವರಿ 1952ರಲ್ಲಿ ಕೆಲಸವನ್ನು ತ್ಯಜಿಸಿದರು. 1953ರಲ್ಲಿ, ಅವರು ತಮ್ಮ ಪರಿಕರ ಸಾಮಗ್ರಿಗಳನ್ನು $600ಕ್ಕೆ ಬಾಡಿಗೆಗೆ ನೀಡಿದರು ಜೊತೆಗೆ 45 ಹೂಡಿಕೆದಾರರಿಂದ $8,000 ರಷ್ಟು ಹಣವನ್ನು ಸಂಗ್ರಹಿಸಿದರು. ಇದರ ಜೊತೆಗೆ ಅವರ ತಾಯಿಯೂ ಸಹ $1,000ರಷ್ಟು ಹಣ ನೀಡಿದರು ("ಅವರ ತಾಯಿಯು ಇವರ ಸಾಹಸದಲ್ಲಿ ನಂಬಿಕೆ ಇರಿಸಿ ಆ ಹಣವನ್ನು ನೀಡಲಿಲ್ಲ," ವೆಂದು ಅವರು E! ಗೆ 2006ರಲ್ಲಿ ಹೇಳುತ್ತಾರೆ. "ಏಕೆಂದರೆ ತಾಯಿಯು ತಮ್ಮ ಮಗನಲ್ಲಿ ನಂಬಿಕೆ ಇಟ್ಟಿದ್ದರು") - ಅವರು ಪ್ಲೇಬಾಯ್ ನಿಯತಕಾಲಿಕವನ್ನು ಪ್ರಾರಂಭಿಸಿದರು. ಇದಕ್ಕೆ ಪ್ರಾರಂಭದಲ್ಲಿ ಸ್ಟಾಗ್ ಪಾರ್ಟಿ ಎಂದು ಹೆಸರಿಸಲು ನಿರ್ಧರಿಸಲಾಗಿತ್ತು. ದಿನಾಂಕವಿಲ್ಲದ ಮೊದಲ ಸಂಚಿಕೆಯನ್ನು ಡಿಸೆಂಬರ್ 1953ರಲ್ಲಿ ಪ್ರಕಟಿಸಲಾಯಿತು. ಇದರಲ್ಲಿ ಮರ್ಲಿನ್ ಮನ್ರೋಳ 1949ರಲ್ಲಿ ಕ್ಯಾಲೆಂಡರ್‌ಗಾಗಿ ತೆಗೆದ ನಗ್ನ ಫೋಟೋವನ್ನು ಮುದ್ರಿಸಲಾಗಿತ್ತು. ಮನ್ರೋಳನ್ನು ಯಾವತ್ತೂ ಸಂಧಿಸದ ಹೆಫ್ನರ್, ಅವಳ ಸಮಾಧಿಸ್ಥಳದ ಪಕ್ಕದಲ್ಲಿ ಸ್ಥಾನವನ್ನು ಪಡೆದರು.[]

ವೈಯಕ್ತಿಕ ಜೀವನ

[ಬದಲಾಯಿಸಿ]

ಹೆಫ್ನರ್ ನಾರ್ತ್ ವೆಸ್ಟರ್ನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮಿಲ್‌ಡ್ರೆಡ್ ವಿಲ್ಲಿಯಮ್ಸ್‌ಳನ್ನು 1949ರಲ್ಲಿ ಮದುವೆಯಾಗುತ್ತಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಕ್ರಿಸ್ಟಿ(ಜನನ ನವೆಂಬರ್ 8, 1952) ಹಾಗು ಡೇವಿಡ್ (ಜನನ ಆಗಸ್ಟ್ 30, 1955).[] ಮದುವೆಗೆ ಮುಂಚೆ, ಹೆಫ್ನರ್ ಸೇನೆಯಲ್ಲಿ ದೂರದಲ್ಲಿದ್ದಾಗ ಮಿಲ್‌ಡ್ರೆಡ್‌ ಅನೈತಿಕ ಸಂಬಂಧವಿತ್ತೆಂದು ಒಪ್ಪಿಕೊಳ್ಳುತ್ತಾಳೆ. ಈ ಒಪ್ಪಿಗೆಯನ್ನು ಹೆಫ್ನರ್ "ನನ್ನ ಜೀವನದ ಅತ್ಯಂತ ಕೆಟ್ಟ ಕ್ಷಣ"ವೆಂದು ಕರೆಯುತ್ತಾರೆ. A 2006 E! ಹೆಫ್ನರ್‌ರ ಟ್ರೂ ಹಾಲಿವುಡ್ ಸ್ಟೋರಿ ವ್ಯಕ್ತಿ ಚಿತ್ರಣದಲ್ಲಿ ಮಿಲ್‌ಡ್ರೆಡ್ ದಾಂಪತ್ಯ ದ್ರೋಹದಿಂದ ಅಪರಾಧಿ ಮನೋಭಾವದೊಂದಿಗೆ ಹಾಗೂ ವೈವಾಹಿಕ ಸಂಬಂಧ ಉಳಿಸಿಕೊಳ್ಳುವ ಆಶಯದೊಂದಿಗೆ ಇತರೆ ಮಹಿಳೆಯರೊಂದಿಗೆ ಮಲಗಲು ಹೆಫ್ನರ್‌ಗೆ ಅವಕಾಶ ಮಾಡಿಕೊಟ್ಟಳೆಂದು ಬಹಿರಂಗಪಡಿಸಿದೆ. ಅವರಿಬ್ಬರು 1959ರಲ್ಲಿ ವಿಚ್ಛೇದನ ಪಡೆದರು.

ಹೆಫ್ನರ್ ಜೀವನವನ್ನು ಅತ್ಯಂತ ಪ್ರೀತಿಸುವ ಒಬ್ಬ ಮನುಷ್ಯನನ್ನಾಗಿ ಜೊತೆಗೆ ಒಬ್ಬ ಲಂಪಟ ಪ್ರವೃತ್ತಿಯ ವ್ಯಕ್ತಿಯಾಗಿ ಸ್ವಯಂ ಮರುತಯಾರಾದರು. ಈ ಜೀವನ ಶೈಲಿಯನ್ನು ಅವರ ನಿಯತಕಾಲಿಕದಲ್ಲಿ ಉತ್ತೇಜಿಸಿದರು. ಜೊತೆಗೆ ಪ್ಲೇಬಾಯ್'ಸ್ ಪೆಂಟ್ ಹೌಸ್ (1959–1960) ಹಾಗು ಪ್ಲೇಬಾಯ್ ಆಫ್ಟರ್ ಡಾರ್ಕ್ (1969–1970) ಎಂಬ ಎರಡು TV ಕಾರ್ಯಕ್ರಮಗಳನ್ನು ಪ್ರಾಯೋಜಿಸಿದರು. ಈ ವರ್ಷಗಳಲ್ಲಿ ಅವರು ಪ್ಲೇಬಾಯ್ ನಿಯತಕಾಲಿಕಕ್ಕೆ" ಹನ್ನೆರಡು ತಿಂಗಳಿಗೆ ಅರ್ಹತೆ ಪಡೆದ ಪ್ಲೇಮೇಟ್‌ಗಳ ಪೈಕಿ ಹನ್ನೊಂದು ಹುಡುಗಿಯರ ಜೊತೆ 'ಸಂಬಂಧ ಹೊಂದಿದ್ದನ್ನು'"ಒಪ್ಪಿಕೊಂಡಿದ್ದಾರೆ.[] ಡಾನ್ನ ಮಿಚೆಲ್ಲೇ, ಮರ್ಲಿನ್ ಕೋಲ್, ಲಿಲ್ಲಿಯನ್ ಮುಲ್ಲರ್, ಶನ್ನೋನ್ ಟ್ವೀಡ್, ಬ್ರಾಂಡೆ ರೋಡೆರಿಕ್, ಬಾರ್ಬಿ ಬೆನ್ಟನ್, ಕರೆನ್ ಕ್ರಿಸ್ಟಿ, ಸೊಂಡ್ರಾ ಥೆಒಡೋರ್, ಹಾಗು ಕ್ಯಾರಿ ಲಇಗ್ಹ್ - ಇವರೆಲ್ಲರೂ $35 ದಶಲಕ್ಷ ಜೀವನಾಂಶಕ್ಕಾಗಿ ಹೆಫ್ನರ್ ವಿರುದ್ಧ ಮೊಕದ್ದಮೆ ಹೂಡಿದರು - ಇವರೆಲ್ಲರೂ ಹೆಫ್ನರ್‌ನ ಹಲವು ಸಂಗಾತಿಗಳಲ್ಲಿ ಕೆಲವರು. ಹೆಫ್ನರ್ 1971ರಲ್ಲಿ, ಉಭಯಲಿಂಗತ್ವದ ಬಗ್ಗೆ ಪ್ರಯೋಗ ನಡೆಸಿದ್ದಾಗಿ ಒಪ್ಪಿಕೊಂಡರು. ನಂತರ ಅವರು ಶಿಕಾಗೋದಿಂದ ಲಾಸ್ ಏಂಜಲ್ಸ್‌ಗೆ ಸ್ಥಳ ಬದಲಾವಣೆ ಮಾಡಿಕೊಂಡರು.

ಡಿಸೆಂಬರ್ 12, 2008ರಂದು ವೆಸ್ಟ್ ಹಾಲಿವುಡ್, CAನಲ್ಲಿನ ಒನ್ ಸನ್ಸೆಟ್‌ನಲ್ಲಿ ಪ್ಲೇಬಾಯ್‌ನ 55 ನೇ ವಾರ್ಷಿಕ ಸಂತೋಷಕೂಟದಲ್ಲಿ ಹೆಫ್ನರ್ ಕರಿಸ್ಸಾ ಶನ್ನೋನ್, ದಶಾ ಅಸ್ಟಫಿಎವ ಹಾಗು ಕ್ರಿಸ್ಟಿನ ಶನ್ನೋನ್ ಜೊತೆಗೆ ಛಾಯಾಚಿತ್ರಕ್ಕೆ ನೀಡಿದ ಭಂಗಿ.

ಹೆಫ್ನರ್‌ 1985ರಲ್ಲಿ ಲಘು ಪಾರ್ಶ್ವವಾಯುವಿಗೆ ತುತ್ತಾದರು. ಆಗ ಅವರಿಗೆ 59 ವರ್ಷ ವಯಸ್ಸಾಗಿತ್ತು. ನಂತರ ತಮ್ಮ ಜೀವನ ಶೈಲಿಯನ್ನು ಮರುಪರಿಶೀಲಿಸಿದ ನಂತರ ಹಲವಾರು ಬದಲಾವಣೆಗಳನ್ನು ಮಾಡಿಕೊಂಡರು. ಸ್ವಚ್ಛಂದ ಇಡೀ ರಾತ್ರಿಯ ಸಂತೋಷಕೂಟಗಳು ಗಮನಾರ್ಹವಾಗಿ ಕಡಿಮೆಯಾದವು. ಜೊತೆಗೆ 1988ರಿಂದ ಅವರ ಮಗಳು ಕ್ರಿಸ್ಟಿ ಪ್ಲೇಬಾಯ್ ಸಾಮ್ರಾಜ್ಯದ ಕಾರ್ಯಭಾರವನ್ನು ಆರಂಭಿಸಿದಳು. ಅದರ ಮರು ವರ್ಷ, ಅವರು ಆ ವರ್ಷದ ಪ್ಲೇಬಾಯ್ ನಿಯತಕಾಲಿಕದ ಪ್ಲೇಮೇಟ್ ಕಿಂಬರ್ಲಿ ಕಾನ್ರಾಡ್ ಳನ್ನು ಮದುವೆಯಾದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಜನಿಸಿದರು. ಮಾರ್ಸ್ಟನ್ ಗ್ಲೆನ್ನ್ (ಜನನ ಏಪ್ರಿಲ್ 9, 1990) ಹಾಗು ಕೂಪರ್ ಬ್ರಾಡ್ಫೋರ್ಡ್ (ಜನನ ಸೆಪ್ಟೆಂಬರ್ 4, 1991).[] ದಿ E! ಟ್ರೂ ಹಾಲಿವುಡ್ ಸ್ಟೋರಿ ವ್ಯಕ್ತಿ ಚಿತ್ರಣವು ಗುರುತಿಸಿದಂತೆ ಕುಖ್ಯಾತ ಪ್ಲೇಬಾಯ್ ಭವನವು ಒಂದು ಕೌಟುಂಬಿಕ-ಸ್ನೇಹ ಪೂರ್ಣ ಗೃಹಸಂಕೀರ್ಣವಾಗಿ ಮಾರ್ಪಾಡುಗೊಂಡಿತು. ನಂತರ ಅವರು ಹಾಗು ಕಾನ್ರಾಡ್ 1998ರಲ್ಲಿ ಬೇರೆಯಾದ ಮೇಲೆ ಕಾನ್ರಾಡ್ ಭವನದ ಪಕ್ಕದ ಮನೆಗೆ ಸ್ಥಳ ಬದಲಾಯಿಸಿಕೊಂಡಳು.

ನಂತರ ಸದಾ-ಬದಲಾಗುತ್ತಿದ್ದ ಯುವತಿಯರ ಗುಂಪನ್ನು ಭವನದೊಳಕ್ಕೆ ಹೆಫ್ನರ್ ಕರೆತರುತ್ತಿದ್ದರು. ಜೊತೆಗೆ ಒಂದೇ ಬಾರಿಗೆ ಏಳು ಹುಡುಗಿಯರ ಜೊತೆಗೆ ವಿಹರಿಸುತ್ತಿದ್ದರು. ಇವರಲ್ಲಿ, ಬ್ರಾಂಡೆ ರೋಡೆರಿಕ್, ಇಜಬೆಲ್ಲ ಸೇಂಟ್ ಜೇಮ್ಸ್, ಟೀನಾ ಮರಿಎ ಜೋರ್ಡನ್, ಹೋಲಿ ಮ್ಯಾಡಿಸನ್, ಬ್ರಿಡ್ಗೆಟ್ ಮರಕ್ವಾರ್ದಟ್ ಹಾಗು ಕೇಂದ್ರಾ ವಿಲ್ಕಿನ್ಸನ್ ಸೇರಿದ್ದರು. ದಿ ಗರ್ಲ್ಸ್ ನೆಕ್ಸ್ಟ್ ಡೋರ್ ಎಂಬ ರಿಯಾಲಿಟಿ ಕಿರುತೆರೆ ಸರಣಿಯು ಪ್ಲೇಬಾಯ್ ಭವನದಲ್ಲಿ ಮ್ಯಾಡಿಸನ್, ವಿಲ್ಕಿನ್ಸನ್ ಹಾಗು ಮರಕ್ವಾರ್ದಟ್ ಅವರುಗಳ ಜೀವನದ ಬಗ್ಗೆ ಚಿತ್ರಣ ಬಿಂಬಿಸುತ್ತದೆ.[] ಕಳೆದ ಅಕ್ಟೋಬರ್ 2008ರಲ್ಲಿ, ಈ ಮೂರು ಹುಡುಗಿಯರು ಭವನವನ್ನು ತೊರೆಯುವ ನಿರ್ಧಾರ ಮಾಡಿದರು. ಹೆಫ್ನರ್ ಇದರಿಂದ ಬೇಗನೆ ಚೇತರಿಸಿಕೊಂಡು ನಂತರ [] 20 ವರ್ಷದ ತದ್ರೂಪಿ ಅವಳಿ ರೂಪದರ್ಶಿಗಳಾದ ಕ್ರಿಸ್ಟಿನ ಹಾಗು ಕರಿಸ್ಸ ಶನ್ನೋನ್ ಸೇರಿದಂತೆ ಅವರ ಹೊಸ "ನಂಬರ್ ಒನ್" ಗೆಳತಿ ಕ್ರಿಸ್ಟಲ್ ಹ್ಯಾರ್ರಿಸ್ ಜೊತೆ ವಿಹಾರ ಆರಂಭಿಸಿದರು.[೧೦] ಈ ಅವಳಿಗಳ ಜೊತೆಗಿನ ಅವರ ಸಂಬಂಧವು ಜನವರಿ 2010 ರಲ್ಲಿ ಕೊನೆಗೊಂಡಿತು.[೧೧] ಬೇರೆಯಾದ 11 ವರ್ಷಗಳ ಬಳಿಕ, ಹೆಫ್ನರ್ ಕಾನ್ರಾಡ್ ಳಿಂದ ಪರಸ್ಪರರ ಪರಿಹರಿಸಲಾಗದ ಭಿನ್ನಾಭಿಪ್ರಾಯವಿದೆಯೆಂದು ಹೇಳಿ ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದರು.[೧೨] ಹೆಫ್ನರ್ ತಮ್ಮ ಮಕ್ಕಳಿಗೋಸ್ಕರ ಅವಳೊಂದಿಗೆ ತಮ್ಮ ದಾಂಪತ್ಯವನ್ನು ಉಳಿಸಿಕೊಂಡಿದ್ದಾಗಿ ಹೇಳುತ್ತಾರೆ,[೧೩] ಜೊತೆಗೆ ಅವರ ಕಿರಿಯ ಪುತ್ರನಿಗೆ ಈಗತಾನೇ 18 ವರ್ಷಗಳು ತುಂಬಿತ್ತು.[]

ಹೆಫ್ನರ್ ತಮ್ಮ ಜೀವನದ ಬಗ್ಗೆ ಚಿತ್ರವನ್ನು ನಿರ್ಮಿಸುವ ಮಾತುಕತೆಯಲ್ಲಿದ್ದಾರೆ.[೧೪] ಅವರು ಕಿರುತೆರೆಹಾಲಿವುಡ್ ವಾಕ್ ಆಫ್ ಫೇಮ್ ಕಾರ್ಯಕ್ರಮದಲ್ಲಿ ತಾರೆಯಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಹಲವಾರು ಚಿತ್ರಗಳಲ್ಲಿ ಸ್ವತಃ ಕಾಣಿಸಿಕೊಂಡಿದ್ದಾರೆ. ಅವರಿಗೆ 2010ರಲ್ಲಿ, ಮಿಸ್ ಮಾರ್ಚ್ ನಲ್ಲಿನ ಅಭಿನಯಕ್ಕಾಗಿ ರಾಜ್ಜಿ ಪ್ರಶಸ್ತಿಗಾಗಿ

"ಅತ್ಯಂತ ಕೆಟ್ಟ ಪೋಷಕ ನಟ" ಎಂಬ ನಾಮನಿರ್ದೇಶನವನ್ನು ಸ್ವೀಕರಿಸಿದ್ದಾರೆ.

ರಾಜಕೀಯ ಹಾಗು ಜನೋಪಕಾರ

[ಬದಲಾಯಿಸಿ]

ಪ್ಲೇಬಾಯ್ ಮರ್ಲಿನ್ ಮನ್ರೋಳ ನಗ್ನ ಚಿತ್ರಗಳನ್ನು ಹೊತ್ತ ಒಂದು ಸಂಚಿಕೆಯು ಬಿಡುಗಡೆಯಾದ ನಂತರ ಜೂನ್ 4, 1963ರಲ್ಲಿ, ಅವರನ್ನು ಅಶ್ಲೀಲ ಸಾಹಿತ್ಯವನ್ನು ಮಾರಾಟ ಮಾಡಿದಕ್ಕಾಗಿ ಬಂಧಿಸಲಾಯಿತು. ನ್ಯಾಯದರ್ಶಿ ಮಂಡಳಿಯು ಒಂದು ತೀರ್ಮಾನಕ್ಕೆ ಬರಲು ಅಸಾಧ್ಯವಾಯಿತು. ಅವರ ಮಾಜಿ ಕಾರ್ಯದರ್ಶಿ, ಬಾಬ್ಬಿ ಆರ್ನ್ಸ್ಟೀನ್, ಜನವರಿ 1975ರಲ್ಲಿ ಮಾದಕ ವಸ್ತುಗಳ ವಿಪರೀತ ಸೇವನೆಯಿಂದ ಚಿಕಾಗೊ ದ ಹೋಟೆಲ್ ಕೋಣೆಯಲ್ಲಿ ಮರಣ ಹೊಂದಿರುವುದು ಪತ್ತೆಯಾಯಿತು. ಹೆಫ್ನರ್ ಒಂದು ಪತ್ರಿಕಾ ಗೋಷ್ಠಿ ಕರೆದು ಮಾದಕ ವಸ್ತುಗಳ ಏಜೆಂಟರು ಹಾಗು ಸರ್ಕಾರಿ ಅಧಿಕಾರಿಗಳ ಕಾರಣದಿಂದ ಅವಳು ಆತ್ಮಹತ್ಯೆಗೆ ಶರಣಾದಳೆಂದು ಆಪಾದಿಸುತ್ತಾರೆ. ಪ್ಲೇಬಾಯ್ ನ ಸಿದ್ಧಾಂತ ಹಾಗು ಅದರ ಮುಕ್ತ ಮಾದಕ ವಸ್ತು ಕಾಯಿದೆಗಳ ಸಲಹೆ ಕಾರಣದಿಂದ ಸರ್ಕಾರ ಅವರನ್ನು ಬಂಧಿಸಲು ತುದಿಗಾಲಲ್ಲಿ ನಿಂತಿದೆಯೆಂದು ವಾದಿಸುತ್ತಾರೆ.[೧೫][೧೬]

ಹಗ್ ಹೆಫ್ನರ್‌ರ ಮೊದಲ ತಿದ್ದುಪಡಿ ಪ್ರಶಸ್ತಿಯನ್ನು ಕ್ರಿಸ್ಟಿ ಹೆಫ್ನರ್ ರೂಪಿಸಿದರು. ಇದು "ಅಮೆರಿಕದ ತಿದ್ದುಪಡಿ ಹಕ್ಕನ್ನು ಉಳಿಸಿ ವರ್ಧಿಸಲು ಗಮನಾರ್ಹವಾಗಿ ನೆರವನ್ನು ನೀಡಿರುವ ವ್ಯಕ್ತಿಗಳ ಪ್ರಮುಖ ಪ್ರಯತ್ನವನ್ನು ಗೌರವಿಸುವುದಕ್ಕೆ" ಪ್ರಶಸ್ತಿಯನ್ನು ರೂಪಿಸಲಾಗಿದೆ.

ಅವರು ಡೆಮೊಕ್ರಾಟಿಕ್ ಪಕ್ಷಕ್ಕೆ ದೇಣಿಗೆ ನೀಡುವುದರ ಜೊತೆಗೆ ಪಕ್ಷಕ್ಕಾಗಿ ಚಂದಾ ಸಂಗ್ರಹಿಸಿದ್ದಾರೆ.[೧೭]

ಎಸ್ಕ್ವೈರ್ ನಿಯತಕಾಲಿಕವು 1955ರಲ್ಲಿ ತಿರಸ್ಕರಿಸಿದ ನಂತರ, ಹೆಫ್ನರ್ ಚಾರ್ಲೆಸ್ ಬೆಯುಮೊಂಟ್ ಅವರ ಕಿರು ವೈಜ್ಞಾನಿಕ ಕಾಲ್ಪನಿಕ ಕಥೆಯನ್ನು ಪ್ಲೇಬಾಯ್ ನಲ್ಲಿ ಪ್ರಕಟಿಸಲು ಒಪ್ಪಿಕೊಂಡರು. "ದಿ ಕ್ರೂಕೆಡ್ ಮ್ಯಾನ್" ಎಂಬ ಹೆಸರಿನ ಕಥೆಯಲ್ಲಿ ಒಬ್ಬ ಸರಳ ಮನುಷ್ಯ ಸಲಿಂಗಕಾಮ ರೂಢಿಯಲ್ಲಿದ್ದ ಜಗತ್ತಿನಲ್ಲಿ ಹೇಗೆ ಕಿರುಕುಳಕ್ಕೆ ಒಳಗಾಗುತ್ತಾನೆ ಎಂಬುದನ್ನು ಚಿತ್ರಿಸುತ್ತದೆ. ನಿಯತಕಾಲಿಕಕ್ಕೆ ಬಂದ ಕೋಪೋದ್ರಿಕ್ತ ಪತ್ರಗಳನ್ನು ಓದಿದ ನಂತರ, ಹೆಫ್ನರ್ ಟೀಕೆಗಳಿಗೆ ಉತ್ತರವನ್ನು ನೀಡುತ್ತಾ, "ಸಲಿಂಗಕಾಮಿ ಸಮಾಜದಲ್ಲಿ ಹೇಗೆ ಭಿನ್ನಲಿಂಗೀಯರಿಗೆ ಕಿರುಕುಳ ನೀಡುವುದು ತಪ್ಪೋ ಹಾಗೆ ಇದಕ್ಕೆ ವ್ಯತಿರಿಕ್ತವಾಗಿ ನಡವಳಿಕೆ ತೋರಿಸುವುದು ಸಹ ತಪ್ಪು." ಹೆಫ್ನರ್ ರನ್ನು ಸಾಕ್ಷ್ಯ ಚಿತ್ರದಲ್ಲಿ ಸಲಿಂಗಕಾಮಿ ಹಕ್ಕುಗಳ ಪ್ರವರ್ತಕ ಎಂದು ಬಿಂಬಿಸಲಾಗಿದೆ.Hugh Hefner: Playboy, Activist and Rebel [೧೮]

ಹೆಫ್ನರ್ $100,000ರಷ್ಟು ಹಣವನ್ನು ಸದರನ್ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಸ್ಕೂಲ್ ಆಫ್ ಸಿನೆಮ್ಯಾಟಿಕ್ ಆರ್ಟ್ಸ್ ಗೆ "ಸೆನ್ಸಾರ್ ಶಿಪ್ ಇನ್ ಸಿನಿಮಾ" ಎಂಬ ಕೋರ್ಸ್ ರಚನೆಗೆ ದೇಣಿಗೆ ನೀಡಿದರು. ಜೊತೆಗೆ $2 ದಶಲಕ್ಷ ಹಣವನ್ನು ಅಮೇರಿಕನ್ ಚಿತ್ರ ಅಧ್ಯಯನ ಪೀಠಕ್ಕೆ ದತ್ತಿ ನೀಡಿದರು.[೧೯]

ಅವರು ದತ್ತಿಸಂಸ್ಥೆ ಹಾಗೂ ವೈಯುಕ್ತಿಕವಾಗಿ ಎರಡರ ಮುಖಾಂತರ ಹೆಫ್ನರ್ ರಾಜಕೀಯ ಹಾಗು ಪ್ರಕಾಶನ ವಲಯದಿಂದಾಚೆಗೂ ದತ್ತಿ ಸಂಸ್ಥೆಗಳಿಗೆ ಸಹಾಯ ಮಾಡಿದ್ದಾರೆ. ಮಚ್ ಲವ್ ಎನಿಮಲ್ ರೆಸ್ಕ್ಯೂ ಹಾಗೂ ಜೆನ್ನಿ ಮ್ಯಾಕ್ ಕಾರ್ತಿಬೆಂಬಲಿಸಿದ [೨೦] ವಿವಾದಾಸ್ಪದ ಆಟಿಸಂ(ಮಾನಸಿಕ ಬೆಳವಣಿಗೆ ಅವ್ಯವಸ್ಥೆ) ಅಭಿಯಾನ ಸಂಸ್ಥೆ ಜೆನೆರೇಶನ್ ರೆಸ್ಕ್ಯೂಗೆ ಚಂದಾ ಎತ್ತುವ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ.

ಇವನ್ನೂ ಗಮನಿಸಿ

[ಬದಲಾಯಿಸಿ]

ಹೆಚ್ಚಿನ ಮಾಹಿತಿಗಾಗಿ

[ಬದಲಾಯಿಸಿ]
  • ವಾಟ್ಸ್, ಸ್ಟೀವನ್ (2008). Mr. ಪ್ಲೇಬಾಯ್: ಹಗ್ ಹೆಫ್ನರ್ ಅಂಡ್ ದಿ ಅಮೆರಿಕನ್ ಡ್ರೀಮ್ . ಹೊಬೋಕೆನ್: ಜಾನ್ ವಿಲೆಯ್ & ಸನ್ಸ್. ISBN 0-471-69059-7.
  • ಮಿಲ್ಲರ್, ರಸ್ಸೆಲ್ (1985). ಬನ್ನಿ: ದಿ ರಿಯಲ್ ಸ್ಟೋರಿ ಆಫ್ ಪ್ಲೇಬಾಯ್ . ಲಂಡನ್: ಕಾರ್ಗಿ. ISBN 0-03-063748-1
  • St. ಜೇಮ್ಸ್, ಇಸಬೆಲ್ಲ (2006). ಬನ್ನಿ ಟೇಲ್ಸ್: ಬಿಹೈಂಡ್ ಕ್ಲೋಸ್ಡ್ ಡೋರ್ಸ್ ಅಟ್ ದಿ ಪ್ಲೇಬಾಯ್ ಮ್ಯಾನ್ಶನ್ . ಫಿಲಾಡೆಲ್ಫಿಯ: ರನ್ನಿಂಗ್ ಪ್ರೆಸ್. ISBN 0-7624-2739-6
  • ಹೆಫ್ನರ್, ವೆರೋನಿಕ ಅಂಡ್ ಜುರಿಜ್ ಟೋಪ್ಲಕ್ (2009). ಹೆಫ್ನರ್, ಹಗ್. ಇನ್: ವಿಲೇ, ಜಾನ್ R., ಹಡ್ಸನ್, ಡೇವಿಡ್ L., ಅಂಡ್ ಸ್ಚುಲ್ತ್ಜ್, ಡೇವಿಡ್ ಆನ್ಡ್ರೂ (Eds.). ಎನ್ಕ್ಯ್ಕ್ಲೋಪೀಡಿಯ ಆಫ್ ದಿ ಫಸ್ಟ್ ಅಮೆಂಡ್ಮೆಂಟ್. ವಾಶಿಂಗ್ಟನ್, D.C.: CQ ಪ್ರೆಸ್, p. 564.

ಆಕರಗಳು

[ಬದಲಾಯಿಸಿ]
  1. JasonCurious.com Archived 2010-01-04 ವೇಬ್ಯಾಕ್ ಮೆಷಿನ್ ನಲ್ಲಿ., ದಿ ಪೋರ್ನ್ ಪವರ್ 50," ಅರೇನಾ ಮ್ಯಾಗಜಿನ್ , ಅಕ್ಟೋಬರ್ 2003".
  2. Bookds.Google.com, Mr ಪ್ಲೇಬಾಯ್: ಹಗ್ ಹೆಫ್ನರ್ ಅಂಡ್ ದಿ ಅಮೇರಿಕನ್ ಡ್ರೀಮ್, ಸ್ಟೀವನ್ ವಾಟ್ಸ್. ಅಕ್ಟೋಬರ್ 10, 2009ರಂದು ಮರುಸಂಪಾದಿಸಿದೆ.
  3. PlayboyEnterprises.com Archived 2014-09-02 ವೇಬ್ಯಾಕ್ ಮೆಷಿನ್ ನಲ್ಲಿ., ಹಗ್ ಹೆಫ್ನರ್ ಪ್ಲೇಬಾಯ್ ಎಂಟರ್ಪ್ರೈಸಸ್ ಜನವರಿ 2, 2009ರಂದು ಮರುಸಂಪಾದಿಸಿದೆ.
  4. Seeing-Stars.com, ವೆಸ್ಟ್ ವುಡ್ ವಿಲ್ಲೇಜ್ ಮೆಮೋರಿಯಲ್ ಸಿಮೆಟ್ರಿ
  5. Playboy.com Archived 2011-06-07 ವೇಬ್ಯಾಕ್ ಮೆಷಿನ್ ನಲ್ಲಿ., ಪ್ಲೇಬಾಯ್ ಟೈಮ್ ಲೈನ್.
  6. NewYorker.com, ಅಕೋಸೆಲ್ಲ, ಜೋಅನ್. |"ದಿ ಗರ್ಲ್ಸ್ ನೆಕ್ಸ್ಟ್ ಡೋರ್" ನ್ಯೂ ಯಾರ್ಕರ್ , ಮಾರ್ಚ್ 20, 2006
  7. ೭.೦ ೭.೧ TV.com Archived 2010-07-02 ವೇಬ್ಯಾಕ್ ಮೆಷಿನ್ ನಲ್ಲಿ., ಕೂಪರ್ ಹೆಫ್ನರ್
  8. "BuddyTV.com". Archived from the original on 2009-02-18. Retrieved 2010-03-22.
  9. NYdailyNews.com, ಮೀಟ್ ಪ್ಲೇಬಾಯ್ ಫೌಂಡರ್ ಹಗ್ ಹೆಫ್ನರ್'ಸ್ ಅದರ್ ಗರ್ಲ್ ಫ್ರೆಂಡ್, ಕ್ರಿಸ್ಟಲ್ ಹ್ಯಾರ್ರಿಸ್"
  10. TheAge.com, ಪಾರ್ಟಿ'ಸ್ ಓವರ್ ಫಾರ್ ಪ್ಲೇಬಾಯ್ ಕಿಂಗ್ ಹಗ್ ಹೆಫ್ನರ್, ದಿ ಏಜ್ ಅಕ್ಟೋಬರ್ 18, 2008. ಒಕ್ಟೋಬರ್ 30, 2008ರಂದು ಮರುಸಂಪಾದಿಸಿದೆ.
  11. "ಆರ್ಕೈವ್ ನಕಲು". Archived from the original on 2010-08-29. Retrieved 2010-03-22.
  12. "People.com Hugh Hefner Finally Files for Divorce". Retrieved 2009-09-09.
  13. "Reuters: Hugh Hefner files for divorce". Retrieved 2009-09-09.
  14. "Hef Ready for the big screen?". BuddyTV. January 16, 2009. Archived from the original on 2009-01-23. Retrieved 2009-01-17.
  15. David Cotner (2008-10-02). "The life and times of an alpha male". Book Review. LA Times. Retrieved 2009-01-17.
  16. Roger Ebert (October 23, 1992). "Hugh Hefner: Once upon a time". LA Times. Archived from the original on 2009-02-06. Retrieved 2009-01-17.
  17. NewsMeat.com Archived 2009-12-31 ವೇಬ್ಯಾಕ್ ಮೆಷಿನ್ ನಲ್ಲಿ., ಹಗ್ ಹೆಫ್ನರ್'ಸ್ ಫೆಡೆರಲ್ ಕ್ಯಾಂಪೇನ್ ಕಾಂಟ್ರಿಬ್ಯುಶನ್ ರಿಪೋರ್ಟ್.
  18. Personals.Advocate.com, ಗಾರ್ಸಿಯ, ಮಿಚೆಲ್ಲೇ. "ಹಗ್ ಹೆಫ್ನರ್, ಗೇ ರೈಟ್ಸ್ ಪಯೋನೀರ್" advocate.com, ಆಗಸ್ಟ್ 28, 2009.
  19. AP.Google.com Archived 2007-11-17 ವೇಬ್ಯಾಕ್ ಮೆಷಿನ್ ನಲ್ಲಿ., ಹೆಫ್ನರ್ ಗಿವ್ಸ್ $2M ಟು USC ಫಿಲಂ ಸ್ಕೂಲ್ ಅಸ್ಸೋಸಿಯೇಟೆಡ್ ಪ್ರೆಸ್ , ನವೆಂಬರ್ 16, 2007.
  20. "Hugh Hefner & Jenny McCarthy Fund Autism Research". Celebrity Halo. 2008. Retrieved 2008-12-29. {{cite web}}: Unknown parameter |month= ignored (help)

ಬಾಹ್ಯ ಕೊಂಡಿಗಳು

[ಬದಲಾಯಿಸಿ]