ಹಂದಿಹುಂಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೯೭೦ರ ದಶಕದ ಹಂದಿಹುಂಡಿ

ಹಂದಿಹುಂಡಿ (ಗೋಲಕ) ಎಂದರೆ ಸಾಮಾನ್ಯವಾಗಿ ಮಕ್ಕಳು ನಾಣ್ಯಗಳನ್ನು ಸಂಗ್ರಹಿಸಿಡಲು ಬಳಸುವ ಧಾರಕ. ಈ ವಸ್ತುಗಳನ್ನು ಹಲವು ವೇಳೆ ಪ್ರಚಾರೋದ್ದೇಶಗಳಿಗಾಗಿ ಕಂಪನಿಗಳು ಕೂಡ ಬಳಸುತ್ತವೆ. 'ಹಂದಿಹುಂಡಿ' ಹೆಸರಿನ ಬಳಕೆಯು ಇದರ ವ್ಯಾಪಕವಾಗಿ ಗುರುತಿಸಲಾದ 'ಹಂದಿ' ಆಕಾರಕ್ಕೆ ಜನ್ಮನೀಡಿತು, ಮತ್ತು ಅನೇಕ ಹಣಕಾಸು ಸೇವಾ ಕಂಪನಿಗಳು ಹಂದಿಹುಂಡಿಗಳನ್ನು ತಮ್ಮ ಉಳಿತಾಯ ಉತ್ಪನ್ನಗಳಿಗೆ ಲಾಂಛನಗಳಾಗಿ ಬಳಸುತ್ತವೆ.

ಹಂದಿಹುಂಡಿಗಳನ್ನು ಸಾಮಾನ್ಯವಾಗಿ ಜೇಡಿಮಣ್ಣು ಅಥವಾ ಪಿಂಗಾಣಿಯಿಂದ ತಯರಿಸಲಾಗಿರುತ್ತದೆ.[೧] ಅವುಗಳಿಗೆ ಸಾಮಾನ್ಯವಾಗಿ ಬಣ್ಣಹಚ್ಚಲಾಗಿರುತ್ತದೆ ಮತ್ತು ಮಕ್ಕಳಿಗೆ ಮಿತವ್ಯಯ ಹಾಗೂ ಉಳಿತಾಯದ ಮೂಲತತ್ವಗಳನ್ನು ಕಲಿಸುವ ಒಂದು ಶೈಕ್ಷಣಿಕ ಸಾಧನವಾಗಿ ಕಾರ್ಯನಿರ್ವಹಿಸುತ್ತವೆ; ಹಣವನ್ನು ಸುಲಭವಾಗಿ ಒಳಹಾಕಬಹುದಾಗಿರುತ್ತದೆ. ಅನೇಕ ಹಂದಿಹುಂಡಿಗಳು ಕೆಳಭಾಗದಲ್ಲಿ ಸ್ಥಿತವಾಗಿರುವ ರಬ್ಬರ್ ಬೆಣೆಯನ್ನು ಹೊಂದಿರುತ್ತವೆ; ಇತರ ಹಂದಿಹುಂಡಿಗಳನ್ನು ವಿನೈಲ್‍ನಿಂದ ತಯಾರಿಸಲಾಗಿರುತ್ತದೆ ಮತ್ತು ಸರಾಗ ನಾಣ್ಯ ಪ್ರವೇಶಾವಕಾಶಕ್ಕೆ ತೆಗೆಯಬಲ್ಲ ಮೂಗನ್ನು ಹೊಂದಿರುತ್ತವೆ. ಕೆಲವು ಹಂದಿಹುಂಡಿಗಳು ವಿದ್ಯುನ್ಮಾನ ವ್ಯವಸ್ಥೆಗಳನ್ನು ಒಳಗೊಂಡಿದ್ದು ಶೇಖರಿಸಿಟ್ಟ ಹಣದ ಮೊತ್ತವನ್ನು ಲೆಕ್ಕಹಾಕುತ್ತವೆ.[೨]

ಉಲ್ಲೇಖಗಳು[ಬದಲಾಯಿಸಿ]

  1. Schroy, Ellen (2011). Warman's Americana & Collectibles. Krause Publications. p. 367. ISBN 1440228221.[ಶಾಶ್ವತವಾಗಿ ಮಡಿದ ಕೊಂಡಿ]
  2. "DigiBank Piggy and Panda Banks Learn to Count". Gizmodo. Retrieved 2008-11-09.