ಮಿತವ್ಯಯ
ಮಿತವ್ಯಯ ಎಂದರೆ ಆಹಾರ, ಸಮಯ ಅಥವಾ ಹಣದಂತಹ ಉಪಭೋಗ್ಯ ಸಂಪನ್ಮೂಲಗಳ ಬಳಕೆಯಲ್ಲಿ ಮಿತವಾಗಿರುವ (ಹಿಡಿತಹೊಂದಿರುವ), ಉಳಿಸುವ, ಹಾಳತವಾಗಿರುವ, ಜಾಗರೂಕವಾಗಿರುವ ಅಥವಾ ದುಂದುಮಾಡದಿರುವ ಮತ್ತು ದುಂದು ವೆಚ್ಚ, ಅದ್ದೂರಿತನ ಅಥವಾ ಪೋಲು ವೆಚ್ಚವನ್ನು ತಪ್ಪಿಸುವ ಗುಣ.
ಕಾರ್ಯತಂತ್ರಗಳು
[ಬದಲಾಯಿಸಿ]ಮಿತವ್ಯಯದ ಸಾಮಾನ್ಯ ಕಾರ್ಯತಂತ್ರಗಳಲ್ಲಿ ದುಂದು ವೆಚ್ಚದ ಕಡಿತ, ದುಬಾರಿ ರೂಢಿಗಳನ್ನು ತಗ್ಗಿಸುವುದು, ಹಣಕಾಸಿನ ಆತ್ಮಸಂಯಮದ ಮೂಲಕ ತ್ವರಿತ ಸಂತೃಪ್ತಿಯನ್ನು ನಿಗ್ರಹಿಸುವುದು, ದಕ್ಷತೆಯನ್ನು ಅರಸುವುದು, ಅಪಾಯದ ಪರಿಸ್ಥಿತಿಗಳನ್ನು ತಪ್ಪಿಸುವುದು, ದುಬಾರಿ ಸಾಮಾಜಿಕ ರೂಢಿಗಳನ್ನು ಧಿಕ್ಕರಿಸುವುದು, ದುರುಪಯೋಗದ ಜಾಹೀರಾತನ್ನು ತಪ್ಪಿಸುವುದು, ವೆಚ್ಚವಿರದ ಆಯ್ಕೆಗಳನ್ನು ಸ್ವೀಕರಿಸುವುದು, ವಸ್ತು ವಿನಿಮಯವನ್ನು ಬಳಸುವುದು, ಸ್ಥಳೀಯ ಪರಿಸ್ಥಿತಿಗಳು ಮತ್ತು ಮಾರುಕಟ್ಟೆ ಹಾಗೂ ಉತ್ಪನ್ನ/ಸೇವೆಯ ವಾಸ್ತವಗಳು ಎರಡರ ಬಗ್ಗೆ ಬಹುಶೃತವಾಗಿರುವುದು ಸೇರಿವೆ. ಮಿತವ್ಯಯದ ಜೀವನವನ್ನು ಮುಖ್ಯವಾಗಿ ವೆಚ್ಚಗಳನ್ನು ಕಡಿತಗೊಳಿಸುವ, ಹೆಚ್ಚು ಹಣವನ್ನು ಹೊಂದಿರುವ, ಮತ್ತು ತಮ್ಮ ಹಣದಿಂದ ಸಾಧ್ಯವಿದ್ದಷ್ಟು ಹೆಚ್ಚಿನದನ್ನು ಪಡೆಯುವ ಗುರಿಹೊಂದಿದವರು ಆಚರಿಸುತ್ತಾರೆ.[೧]
ಉಲ್ಲೇಖಗಳು
[ಬದಲಾಯಿಸಿ]- ↑ Gorman, C. The Frugal Mind: 1,479 Money Saving Tips for Surviving the 1990s. Nottingham Books, 1990