ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್

Coordinates: 12°54′13″N 77°35′54″E / 12.90350°N 77.59840°E / 12.90350; 77.59840
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ (ಎಸ್. ವಿ.ವೈ.ಎಂ)
ಸ್ವಾಮಿ ವಿವೇಕಾನಂದ
ಸಂಸ್ಥಾಪಕಡಾ ಆರ್ ಬಾಲಸುಬ್ರಮಣ್ಯಂ
ಸ್ಥಳಮೈಸೂರು, ಕರ್ನಾಟಕ, ಭಾರತ
12°54′13″N 77°35′54″E / 12.90350°N 77.59840°E / 12.90350; 77.59840
ಜಾಲತಾಣhttp://www.svym.org/
Vivekanand Development, Mysore

ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ (ಎಸ್.ವಿ.ವೈ.ಎಂ) ಎಂಬುದು ಭಾರತದ ಕರ್ನಾಟಕ ರಾಜ್ಯದ ಮೈಸೂರು ಬಳಿಯ ಸರಗೂರು ಮೂಲದ ಡಾ ಆರ್ ಬಾಲಸುಬ್ರಮಣ್ಯಂ ನೇತೃತ್ವದ ವೈದ್ಯರ ಗುಂಪಿನಿಂದ ಸ್ಥಾಪಿಸಲ್ಪಟ್ಟ ಅಭಿವೃದ್ಧಿ ಸಂಸ್ಥೆಯಾಗಿದೆ. ಈ ಸಂಸ್ಥೆಯು ಭಾರತದಲ್ಲಿ ಆರೋಗ್ಯ, ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿಗಾಗಿ ನೀತಿ-ಮಟ್ಟದ ಕ್ರಮದ ಮೂಲಕ ಹೊಸ ನಾಗರಿಕ ಸಮಾಜವನ್ನು ನಿರ್ಮಿಸಲು ನಿರಂತರವಾಗಿ ತೊಡಗಿಸಿಕೊಂಡಿದೆ.[೧] ಈ ಸಂಸ್ಥೆಯ ದಣಿವಿಲ್ಲದ ಶ್ರಮಕ್ಕೆ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರಗಳಿಂದ ಹಿಡಿದು ಕರ್ನಾಟಕ ಹಾಗೂ ಬೇರೆ ರಾಜ್ಯಗಳಲ್ಲಿಯೂ ಗುರುತಿಸಿಕೊಂಡಿದೆ. ಏಡ್ಸ್ ತಡೆಗಟ್ಟುವಿಕೆಯ ಕ್ಷೇತ್ರದಲ್ಲಿ ಅವರ ಕೆಲಸವನ್ನು ಭಾರತ ಸರ್ಕಾರವು ಗುರುತಿಸಿದೆ. ಅವರ ಸಾಧನೆಗೆ ಭಾರತ ಸರ್ಕಾರದಿಂದ ರಾಷ್ಟ್ರೀಯ ಯುವ ಪ್ರಶಸ್ತಿ ಮತ್ತು ಮಹಾವೀರ್ ಪ್ರತಿಷ್ಠಾನದಿಂದ ಸಮುದಾಯ ಮತ್ತು ಸಮಾಜ ಸೇವೆಗಾಗಿ ಮಹಾವೀರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.[೨][೩] [೪]

ಇತಿಹಾಸ[ಬದಲಾಯಿಸಿ]

೧೯೮೪ ರಲ್ಲಿ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ಡಾ ಆರ್ ಬಾಲು ನೇತೃತ್ವದ ಯುವ ವೈದ್ಯಕೀಯ ವಿದ್ಯಾರ್ಥಿಗಳ ಗುಂಪು ಈ ಚಳುವಳಿಯನ್ನು ಪ್ರಾರಂಭಿಸಿತು.[೫]

ಅದರ ಪ್ರಾರಂಭದ ಉದ್ದೇಶ ವಿಚಾರಶಕ್ತಿಯುಳ್ಳ,ನೈತಿಕತೆ ಮತ್ತು ಮಿತವ್ಯಯದ ವೈದ್ಯಕೀಯ ಆರೈಕೆಯನ್ನು ಬಡ ರೋಗಿಗಳಿಗೆ ಒದಗಿಸುವುದಾಗಿತ್ತು. ಅವರು ಚಿಕ್ಕದಾಗಿ ವೈದ್ಯಕೀಯ ಔಷಧಿ ಮಾದರಿಗಳನ್ನು ಸಂಗ್ರಹಿಸಿ ಬಡರೋಗಿಗಳ ಆರೈಕೆಗಾಗಿ ಬಳಸುತಿದ್ದರು. ಸಂಘಟನಾ ರಕ್ತ ಶಿಬಿರವನ್ನು ಮತ್ತು ವಾರಕ್ಕೊಮ್ಮೆ ಮೈಸೂರು ಹತ್ತಿರದ ಗ್ರಾಮೀಣವಲಯದ ದವಾಖಾನೆಯಲ್ಲಿ ಚಿಕಿತ್ಸಾಲಯಗಳನ್ನು ಆಯೋಜಿಸಿದರು. ಅವರ ನಿಖರ ಗುರಿಯು ಹೆಗ್ಗಡ ದೇವನಕೋಟೆ ತಾಲೂಕಿನಲ್ಲಿ ನೆಲೆಯಾಗಿರುವ ಸ್ಥಳಾಂತರಿತ ಹಾಗೂ ಅರಣ್ಯಾಧಾರಿತ ಬುಡಕಟ್ಟು ಜನಾಂಗದ ಕಡೆ ನಡೆಯಿತು. ಅಲ್ಲಿಯ ಸ್ಥಳೀಯರು ಜೇನು ಕುರಬ, ಕಾಡು ಕುರುಬ, ಎರವ, ಪಣಿಯ ಮತ್ತು ಬುಂಡೆ ಸೋಲಿಗ ಜನಾಂಗದವರು. ಅಭಿವೃದ್ದಿ ಯೋಜನೆಗಳಾದ 'ಹುಲಿ ಯೋಜನೆ' ಮತ್ತು 'ಕಬಿನಿ ಜಲಾಶಯ ಯೋಜನೆಗಳ' ಅಭಿವೃದ್ದಿಗಾಗಿ ಬುಡಕಟ್ಟು ಜನಾಂಗವನ್ನು ತಮ್ಮ ನೈಸರ್ಗಿಕ ಆವಾಸಸ್ಥಾನದಿಂದ ಎರಡು ಬಾರಿ ಸ್ಥಳಾಂತರಿಸಲಾಗಿತ್ತು. ಹಾಗೂ ರಾಷ್ಟ್ರೀಯ ಉದ್ಯಾನದಲ್ಲಿ ಕಡುಬಡತನದಲ್ಲಿ ಬದುಕಲು ಒತ್ತಾಯಿಸಲಾಗಿತ್ತು.

ಮೈಸೂರು ಜಿಲ್ಲಾಡಳಿತದ ಸಹಾಯದಿಂದ ವೈದ್ಯರ ತಂಡವು ಮೈಸೂರಿನಿಂದ ೮೦ ಕಿ.ಮಿ. ದೂರವಿರುವ ಬ್ರಹ್ಮಗಿರಿ ಎಂಬ ಬುಡಕಟ್ಟು ಜನರ ಗುಡಿಸಲಲ್ಲಿ ಒಂದು ದವಾಖಾನೆಯನ್ನು ತೆರೆದರು. ವೈದ್ಯಕೀಯ ಸೇವೆಯೊಂದೆ ಸಾಲದು ಎಂಬುದನ್ನು ಅರಿತು ಶಿಕ್ಷಣವು ಮುಂದಿನ ಪೀಳಿಗೆಯ ಬೆಳವಣಿಗೆಗೆ ರಾಮ ಬಾಣದಂತಹ ಔಷದಿ ಎಂದು ತಿಳಿದು ಅನೌಪಚಾರಿಕ ಶಾಲೆಯೊಂದನ್ನು ಬ್ರಹ್ಮಗಿರಿಯ ಒಂದು ಹಸುವಿನ ಕೊಟ್ಟಿಗೆಯಲ್ಲಿ ತೆರೆದರು. ಸಾಮಾಜಿಕ ಮತ್ತು ಆರ್ಥಿಕ ಸಬಲೀಕರಣ ಚಟುವಟಿಕೆಗಳನ್ನು ಆರೋಗ್ಯ ಮತ್ತು ಶಿಕ್ಷಣಕ್ಕೆ ಸೇರಿಸಲಾಯಿತು. ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳಿಗೂ ಸಹ ಈ ಸೌಲಭ್ಯವನ್ನು ಕೊಡಲಾರಂಭಿಸಿದರು. ಈ ಸಂಸ್ಥೆಯು ಒದಗಿಸುವ ಅನುಕೂಲತೆಗಳ ಬಗ್ಗೆ ಮಾಹಿತಿ ಕೊಡಲಾರಂಭಿಸಿತು. ಸಣ್ಣದಾಗಿ ಹತ್ತು ಹಾಸಿಗೆಯುಳ್ಳ ಆಸ್ಪತ್ರೆಯನ್ನು ಜೊತೆಗೆ ದೊಡ್ಡಮಟ್ಟದ ಸಮುದಾಯದಾರಿತ ಕಾರ್ಯಕ್ರಮಗಳನ್ನು ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕೆಂಚನ ಹಳ್ಳಿಯಲ್ಲಿ ಆರಂಭಿಸಲಾಯಿತು. ವೈದ್ಯರು ತಮ್ಮ ವೈದ್ಯಕೀಯ ಸ್ನಾತಕೋತ್ತರ ಪದವಿಯನ್ನು ಮುಗಿಸಿದ ಬಳಿಕ ವಿವೇಕಾನಂದ ಮೆಮೋರಿಯಲ್ ಹಾಸ್ಪಿಟಲ್ ಅನ್ನು ಸರಗೂರಿನಲ್ಲಿ ಪ್ರಾರಂಭಿಸಿದರು. ೧೯೯೦ರ ನಂತರ ಸಂಸ್ಥೆಯು ಬೆಳೆಯುತ್ತಾ ಹಾಗೂ ವಿಸ್ತಾರವಾಗುತ್ತಾ ಹೋಯಿತು.

ಚಟುವಟಿಕೆ[ಬದಲಾಯಿಸಿ]

ಎಸ್.ವಿ.ವೈ.ಎಮ್ ನ ಮುಖ್ಯವಾದ ಕಾರ್ಯಕ್ಷೇತ್ರವು ಮೈಸೂರು ಜಿಲ್ಲೆಯಲ್ಲಿದೆ. ಇಲ್ಲಿ ಹಲವಾರು ಸಂಸ್ಥೆಯಾಧಾರಿತ ಮತ್ತು ಸಮುದಾಯ ಆಧಾರಿತ ಆರೋಗ್ಯ ಹಾಗೂ ಶಿಕ್ಷಣ ಯೋಜನೆಗಳನ್ನು ನಿರ್ವಹಿಸುತ್ತಾರೆ. ಮತ್ತು ಹಲವಾರು ಸಮುದಾಯಗಳ ಅಭಿವೃದ್ದಿ ಕಾರ್ಯಗಳನ್ನು ಕೈಗೊಂಡಿದೆ. ಈ ಸಂಸ್ಥೆಯು ೪,೦೦,೦೦೦ ಬುಡಕಟ್ಟು ಜನಾಂಗ ಹಾಗೂ ಗ್ರಾಮೀಣ ಜನಾಂಗಕ್ಕೆ ಆಧಾರವಾಗಿದೆ.

ಎಸ್.ವಿ.ವೈ.ಎಮ್ ಮೈಸೂರಿನಲ್ಲಿ ವಿವೇಕಾನಂದ ನಾಯಕತ್ವ ಅಭಿವೃದ್ದಿ ಕೇಂದ್ರ ಎಂಬ ಸುಸಜ್ಜಿತ ವ್ಯವಸ್ಥೆಯುಳ್ಳ ಕಾಲೇಜನ್ನು ಹೊಂದಿದೆ. ಅದಲ್ಲದೆ ಎಸ್.ವಿ.ವೈ.ಎಮ್ ನ ಹಲವು ನಗರಾಭಿವೃದ್ದಿ ಆಧಾರ ನೋಂದಾಯಿತ ಕಛೇರಿಗಳು ಕಾಲೇಜಿನ ಆವರಣದಲ್ಲಿಯೇ ಇದೆ. ಅವರು ನಿರ್ಧಿಷ್ಟವಾಗಿ ಅತ್ಯಂತ ಹಿಂದುಳಿದ ಪ್ರದೇಶಗಳಾದ ಉತ್ತರ ಕರ್ನಾಟಕದ ಬಿಜಾಪುರ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ. ಅದರ ಜೊತೆಗೆ ನೇರವಾಗಿ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮಧ್ಯಸ್ಥಿಕೆಯನ್ನು ವಹಿಸಿದೆ. ಬೆಂಗಳೂರಿನಲ್ಲಿ ಸಂಪೂರ್ಣ ಶಿಕ್ಷಣ ಯೋಜನೆಯನ್ನು ನಡೆಸುತ್ತಿದೆ. ಅವರ ತರಬೇತಿ,ಸಂಶೋದನೆ,ನಿರ್ವಹಣೆ ಮತ್ತು ಸಮಾಲೋಚನೆ ಚಟುವಟಿಕೆಗಳು ದೇಶದೆಲ್ಲೆಡೆ ಹೆಗ್ಗಳಿಕೆ ತಂದು ಕೊಟ್ಟಿದೆ.

ಹಾಸನ, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಎಸ್.ವಿ.ವೈ.ಎಮ್ ನ ಸದಸ್ಯರು ಸ್ಥಳೀಯ ಮತ್ತು ಸಾಂದರ್ಭಿಕ ಕೆಲಸಕ್ಕೆ ಸಂಬಂಧಿಸಿದ ಯೋಜನೆಗಳನ್ನು ಆಡಳಿತಾತ್ಮಕ ಕಛೇರಿಯ ಮಾರ್ಗದರ್ಶನದೊಂದಿಗೆ ನೆದೆಸುತ್ತಿದ್ದಾರೆ.

ಬುಡಕಟ್ಟು ಜನಾಂಗದವರಿಗೆ ಅವರು ಸಂಚಾರಿ ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳನ್ನು 'ವಿದ್ಯಾ ವಾಹಿನಿ' ಮತ್ತು 'ಶಿಕ್ಷಾ ವಾಹಿನಿ' ಯೋಜನೆಗಳಡಿಯಲ್ಲಿ ಮಾಡುತ್ತಿದೆ.[೬]

ಆರೋಗ್ಯ[ಬದಲಾಯಿಸಿ]

ಈ ಸಂಸ್ಥೆಯು ಸೇವಾಧಾರಿತ ಸಂಸ್ಥೆಯಾಗುದ್ದು ಸರಗೂರು ಮತ್ತು ಕೆಂಚನಹಳ್ಳಿಯಲ್ಲಿ ವಿವೇಕಾನಂದ ಸ್ಮಾರಕ ದವಾಖಾನೆಯ ಮೂಲಕ ಆರೋಗ್ಯ ಸೇವೆಯನ್ನು ಒದಗಿಸುತ್ತಿದೆ. ವಿವೇಕಾನಂದ ಸ್ಮಾರಕ ಆಸ್ಪತ್ರೆ ಸರಗೂರಿನಲ್ಲಿ ೯೦ ಹಾಸಿಗೆಯುಳ್ಳ ದ್ವಿತೀಯ ಚಿಕಿತ್ಸಾ ಸೌಲಭ್ಯಗಳನ್ನು ಗ್ರಾಮೀಣ ಮತ್ತು ಬುಡಕಟ್ಟು ಜನಾಂಗದವರಿಗೆ ಕೈಗೆಟಕುವ ರೀತಿಯಲ್ಲಿ ಒದಗಿಸುತ್ತಿದೆ. ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದೊಂದಿಗೆ ಜೊತೆಗೂಡಿ ಎಚ್ಐವಿ ಔಷದಿಯ ಬಗ್ಗೆ ಭಾರತದಲ್ಲಿ ಪ್ರಥಮಬಾರಿಗೆ ಸ್ನಾತಕೋತ್ತರ ಪದವಿಯ ತರಬೇತಿಯನ್ನು ವೈದ್ಯಕೀಯ ಮತ್ತು ದಂತ ವೈದ್ಯಕೀಯ ವೃತ್ತಿಪರರಿಗೆ ನೀಡಲಾಗುತ್ತಿದೆ. ಕೆಂಚನಹಳ್ಳಿಯ ವಿವೇಕಾನಂದ ಸ್ಮಾರಕ ದವಾಖಾನೆಯು ೧೦ ಹಾಸಿಗೆಗಳನ್ನು ಹೊಂದಿದ್ದು ಪ್ರಾಥಮಿಕ ಆರೋಗ್ಯ ಸೇವೆಯನ್ನು ಮತ್ತು ಅದರ ಜೊತೆಗೆ ಆಯುರ್ವೇದ ಚಿಕಿತ್ಸೆಯನ್ನು ನೀಡುತ್ತಿದೆ. ವಿವೇಕಾನಂದ ಸ್ಮಾರಕ ದವಾಖಾನೆಯು ವಿಸ್ತಾರವಾಗಿ ಆರೋಗ್ಯ ವೃತ್ತಿಪರರಿಗೆ ಸಾಮರ್ಥ್ಯ ನಿರ್ಮಾಣದ ತರಬೇತಿಯನ್ನು ನೀಡುತ್ತಿದೆ. ಇದು ತಜ್ಞರಿಂದ ಮೂಲಭೂತ ಕೆಲಸಗಾರರವರೆಗೂ ತರಬೇತಿ ನೀಡುವ ಮೂಲಕ ಹೆಸರುವಾಸಿಯಾಗಿದೆ.

ಈ ಸಂಸ್ಥೆಯು ಸಮುದಾಯ ಆಧಾರಿತ ಸಂಸ್ಥೆಯಾಗಿದ್ದು ಮೇಲೆ ತಿಳಿಸಲಾದ ಕ್ಷೇತ್ರಗಳಲ್ಲಿ ಪ್ರಮುಖ ಗಮನವನ್ನು ಹರಿಸುತ್ತದೆ. ಯೋಜನೆಗಳ ಮೂಲಕ ಮತ್ತು ಮೂಲಭೂತ ಹಂತದ ಕೆಲಸಗಾರರ ಮೂಲಕ ಜಾಲ ಬಂದಿಯನ್ನು ಕಲೆಹಾಕಲಾಗುತ್ತದೆ. ಅಲ್ಲಿಯ ಎಚ್ಐವಿ ನಿಯಂತ್ರಣ ಯೋಜನೆಯು ಸಮಗ್ರ, ಅಂತರ್ಗತ ಮತ್ತು ಕೊನೆಯ ಹಂತದ ಆರೋಗ್ಯ ರಕ್ಷಣೆಗೆ ಭಾರತದಲ್ಲಿಯೇ ಅತ್ತ್ಯುತ್ತಮ ಅಭ್ಯಾಸ ಮಾದರಿ ಸಂಸ್ಥೆಯೆಂದು ಯುಎನ್ಎಐಡಿಎಸ್ ಸಂಸ್ಥೆಯಿಂದ ಹೆಗ್ಗಳಿಕೆಗೆ ಪಾತ್ರವಾಗಿದೆ.

ಶಿಕ್ಷಣ ಮತ್ತು ಸಂಶೋಧನೆ[ಬದಲಾಯಿಸಿ]

ಎಸ್.ವಿ.ವೈ.ಎಂ ನ ಶೈಕ್ಷಣಿಕ ನೇತ್ರತ್ವದಲ್ಲಿ ಎರಡು ಶಾಲೆಗಳನ್ನು ಒಳಗೊಂಡಿದೆ. ಹೊಸಹಳ್ಳಿಯಲ್ಲಿರುವ ವಿವೇಕ ಟ್ರೈಬಲ್ ಸೆಂಟರ್ ಮತ್ತು ಸರಗೂರಿನಲ್ಲಿರುವ ಸಿಬಿಎಸ್ಸಿ ಸಂಯೋಜಿತ ವಿವೇಕ ಸ್ಕೂಲ್ ಆಫ್ ಎಕ್ಸಲೆನ್ಸ್. ಶಿಕ್ಷಣವಾಹಿನಿ, ಪ್ರೇರೇಪನ, ವಿದ್ಯಾಕಿರಣ ಮತ್ತು ಪ್ರೇಮವಿದ್ಯಾ ಎಂಬ ನಾಲ್ಕು ಸಮುದಾಯ ಆಧಾರಿತ ಉಪಕ್ರಮಗಳನ್ನು ನಿರ್ವಹಿಸುತ್ತದೆ.

ಟಿ.ಆರ್.ಎಸಿ ಸೇವೆಗಳನ್ನು ಮೂರು ಸಂಸ್ಥೆಗಳ ಮೂಲಕ ಒದಗಿಸಲಾಗುತ್ತದೆ . ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಶಿಪ್ ಡೆವಲಪ್‌ಮೆಂಟ್ (ವಿ-ಲೀಡ್), ವಿವೇಕಾನಂದ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ಮತ್ತು ಗ್ರಾಸ್‌ರೂಟ್ ರಿಸರ್ಚ್ ಮತ್ತು ಅಡ್ವೊಕಸಿ ಮೂವ್‌ಮೆಂಟ್.

ವಿವೇಕಾನಂದ ಇನ್‌ಸ್ಟಿಟ್ಯೂಟ್ ಫಾರ್ ಲೀಡರ್‌ಶಿಪ್ ಡೆವಲಪ್‌ಮೆಂಟ್ ಸಂಸ್ಥೆಯು ಮೈಸೂರು ವಿಶ್ವವಿದ್ಯಾನಿಲಯದಿಂದ ಗುರುತಿಸಲ್ಪಟ್ಟಿದೆ ಮತ್ತು ಅಭಿವೃದ್ಧಿ ನಿರ್ವಹಣೆಯಲ್ಲಿ ಸ್ನಾತಕೋತ್ತರ ಕಾರ್ಯಕ್ರಮವನ್ನು ನೀಡುತ್ತದೆ. ಮತ್ತೊಂದು ಪ್ರಮುಖ ಟಿ.ಆರ್.ಎಸಿ ಕಾರ್ಯಕ್ರಮ 'ಯೂತ್ ಫಾರ್ ಡೆವಲಪ್‌ಮೆಂಟ್' ಗ್ರಾಮೀಣ ಪ್ರದೇಶಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಲು ತರಬೇತಿ ಪಡೆದ ಬದ್ಧತೆಯಿರುವ ಯುವಕರ ಕಾರ್ಯಪಡೆಯನ್ನು ರಚಿಸುವ ಗುರಿಯನ್ನು ಹೊಂದಿದೆ. ಈ ಎರಡು ಕಾರ್ಯಕ್ರಮಗಳು ಭಾಗವಹಿಸುವವರಿಗೆ ಅಭಿವೃದ್ಧಿ ವಲಯದಲ್ಲಿ ವೃತ್ತಿ ಅವಕಾಶಗಳನ್ನು ಸೃಷ್ಟಿಸುತ್ತದೆ.

ಇದನ್ನು ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "HIV/ AIDS – 2009" (PDF). Archived from the original (PDF) on 2014-03-31. Retrieved 2024-04-07.
  2. Ltd., Design & Develop by Varun Sharma, Sugal Infotech Pvt. "WELCOME TO BHAGWAN MAHAVEER FOUNDATION". www.bmfawards.org. Archived from the original on 2018-08-06. Retrieved 2024-04-07.{{cite web}}: CS1 maint: multiple names: authors list (link)
  3. "HRD Newsletter" (PDF). Archived from the original (PDF) on 5 ಮಾರ್ಚ್ 2016. Retrieved 28 ಜೂನ್ 2014.
  4. Yuva Yodha Book by Vikas Chandak
  5. "Social Entrepreneurship SVYM". Archived from the original on 29 ಜುಲೈ 2013. Retrieved 20 May 2013.
  6. "விவேகானந்தரைக் கற்ற இளைஞர்கள் |". Archived from the original on 29 May 2016. Retrieved 31 August 2021.