ವಿಷಯಕ್ಕೆ ಹೋಗು

ಸ್ವರಾಜ್ ಶೆಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ವರಾಜ್ ಶೆಟ್ಟಿ
ಜನನ
ಅಶ್ವಿನ್ ಶೆಟ್ಟಿ

ಅಕ್ಟೋಬರ್ ೩೦,೧೯೯೦
ಪ್ರಸಿದ್ಧ ಕಲಾಶಾಲೆಅಧಿಯಮಾನ್ ಎಂಜಿನಿಯರಿಂಗ್ ಕಾಲೇಜು ಹೊಸುರು
ವೃತ್ತಿಗಳು
  • ನಟ
  • ರಂಗಭೂಮಿ ಕಲಾವಿದ
  • ಕಿರುತೆರೆ ನಟ
ಪತ್ನಿ/ಪತಿಆಶನಿ ಶೆಟ್ಟಿ

ಸ್ವರಾಜ್ ಶೆಟ್ಟಿ ಭಾರತೀಯ ನಟ, ರಂಗಭೂಮಿ ಕಲಾವಿದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತುಳು ಹಾಗೂ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲದೇ ನಾಟಕದಲ್ಲಿಯೂ ಅಭಿನಯಿಸುತ್ತಾರೆ. ತಮ್ಮ ವೃತ್ತಿ ಜೀವನವನ್ನು ಕಂಠದಾನ ಕಲಾವಿದರಾಗಿ ಹಾಗೂ ರಂಗಭೂಮಿ ಕಲಾವಿದರಾಗಿ ಪ್ರಾರಂಭಿಸಿದರು.

ವೆಯಕ್ತಿಕ ಜೀವನ

[ಬದಲಾಯಿಸಿ]

ಸ್ವರಾಜ್ ಶೆಟ್ಟಿಯವರು ದಕ್ಷಿಣ ಕನ್ನಡ ಜಲ್ಲೆಯ ಮಂಗಳೂರಿನಲ್ಲಿ ಅಕ್ಟೋಬರ್ ೩೦, ೧೯೯೦ ರಲ್ಲಿ ಅಶ್ವಿನ್ ಶೆಟ್ಟಿಯಾಗಿ ತಂದೆ ಅಶೋಕ.ಬಿ.ಶೆಟ್ಟಿ ತಾಯಿ ಪ್ರಮಿಳಾ.ಶೆಟ್ಟಿ ಮಗನಾಗಿ ಜನಿಸಿದರು. ೨೦೧೮,ಡಿಸೆಂಬರ್ ೩೧ ರಂದು ಆಶನಿ ಶೆಟ್ಟಿ ಅವರನ್ನು ಮದುವೆಯಾದರು.

ವಿದ್ಯಾಭ್ಯಾಸ

[ಬದಲಾಯಿಸಿ]

ತಮ್ಮ ಪ್ರಾಥಮಿಕ ಶಿಕ್ಷಣವನ್ನು ನಾರಾಯಣ ಗುರು ಶಾಲೆ ಮಂಗಳೂರಿನಲ್ಲಿ ಪೂರ್ಣಗೊಳಿಸಿದರು. ಆರ್.ವಿ.ಜಿ ಜನರಲ್ ಮಿಷಿನಿಸ್ಟ್ ಗ್ರೂಪ್ ಹೊಸುರು ತಮಿಳುನಾಡಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದರು. ೨೦೧೨ರಲ್ಲಿ ಪದವಿ ಶಿಕ್ಷಣ ಮೆಕ್ಯಾನಿಕಲ್ ಎಂಜಿನಿಯರಿಂಗ್ ಅನ್ನು ಅಧಿಯಮಾನ್ ಎಂಜಿನಿಯರಿಂಗ್ ಕಾಲೇಜು ಹೊಸುರು( ತಮಿಳುನಾಡು) ಮುಗಿಸಿದರು. ತಮ್ಮ ನಟನೆಯ ಮೇಲೆ ಹೆಚ್ಚಿನ ಒಲವನ್ನು ಹೊಂದಿದ್ದ, ಇವರು ತಮ್ಮ ಕಾಲೇಜು ದಿನಗಳಲ್ಲಿ ಹಲವಾರು ನಾಟಕಗಳನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೇ ೨೦೦೯ ರಲ್ಲಿ ಹೈದರಾಬಾದ್ ನಲ್ಲಿ ಮಿಸ್ಟರ್.ವಿಜ್ಞಾನ ಎಂಬ ಬಿರುದನ್ನು ಪಡೆದಿದ್ದಾರೆ. ಮುಂದೆ ಮನರಂಜನಾ ಮಾಧ್ಯಮದಲ್ಲಿ ತಮ್ಮ ಜೀವನವನ್ನು ಮುಂದುವರಿಸಲು ಮಂಗಳೂರಿಗೆ ಮರಳಿದರು.

ವೃತ್ತಿ ಜೀವನ

[ಬದಲಾಯಿಸಿ]

ಸ್ವರಾಜ್ ಶೆಟ್ಟಿ ತಮ್ಮ ವೃತ್ತಿ ಜೀವನವನ್ನು ೨೦೧೨ರಲ್ಲಿ ಮಾಮಿ ಎಂಬ ನಾಟಕದಲ್ಲಿ ಅಭಿನಯಿಸಿದರು. ೨೦೧೪ ರಲ್ಲಿ ಬರ್ಕೆ ಎಂಬ ತುಳು ಸಿನಿಮಾದಲ್ಲಿ ನಟಿಸಿದರು. ಸ್ವರಾಜ ಶೆಟ್ಟಿ ೮೫೦ ಕ್ಕಿಂತ ಹೆಚ್ಚಿನ ರಂಗ ಪದರ್ಶನವನ್ನು ನೀಡಿದ್ದಾರೆ. ಅವರು ರಾಜ್ ಬಿ. ಶೆಟ್ಟಿ ನಿರ್ದೇಶನದ ೫ ಲೆಟರ್ಸ್ ಎಂಬ ಸಿನಿಮಾದಲ್ಲಿ ನಟಿಸುವ ಮೂಲಕ ಡೈಜಿ ವರ್ಲ್ಡ ವತಿಯಿಂದ ಅತ್ಯುತ್ತಮ ನಟ ಎಂಬ ಪ್ರಶಸ್ತಿಯನ್ನು ಪಡೆದಿದ್ದಾರೆ. ಸ್ಟಾರ್ ಸುವರ್ಣ ವತಿಯಿಂದ ರಗಡ್ ಸ್ಟಾರ್ ಎಂಬ ಬಿರುದನ್ನು ಪಡೆದಿದ್ದಾರೆ. ವಿವಿಧ ಸಂಸ್ಥೆಗಳಿಂದ ರಂಗದರಸೆ ಮತ್ತು ಕಲಾರತ್ನ ಎಂಬ ಬಿರುದನ್ನು ಗಳಿಸಿದ್ದಾರೆ.

ಫಿಲ್ಮೋಗ್ರಾಫಿ

[ಬದಲಾಯಿಸಿ]
ವರ್ಷಚಲನಚಿತ್ರಗಳುಪಾತ್ರಭಾಷೆ
೨೦೧೪ಬರ್ಕೆಮುಖ್ಯಪಾತ್ರತುಳುಚೊಚ್ಚಲ ತುಳು ಸಿನಿಮಾ
೨೦೧೬೫ ಲೆಟರ್ಸ್ಮುಖ್ಯಪಾತ್ರಕನ್ನಡಕಿರುಚಿತ್ರ
೨೦೧೭ಒಂದು ಮೊಟ್ಟೆಯ ಕಥೆಅತಿಥಿ ಪಾತ್ರಕನ್ನಡಚೊಚ್ಚಲ ಕನ್ನಡ ಸಿನಿಮಾ
೨೦೧೮ಹುಚ್ಚ೨ಖಳನಾಯಕಕನ್ನಡ
೨೦೨೧ಟೂ & ಮಿಮುಖ್ಯಪಾತ್ರತುಳುನಟ,ನಿರ್ದೇಶಕ,ಬರಹಗಾರ
೨೦೨೨ಪೋಲಿಸ್ ಫೈಲ್ಸ್ಖಳನಾಯಕಕನ್ನಡ
ಕಾಂತಾರಗುರುವ ಪಂಜುರ್ಲಿಕನ್ನಡಅಂತಾರಾಷ್ಟ್ರೀಯ ಬಿಡುಗಡೆ
೨೦೨೩ಪಿಲಿಖಳನಾಯಕತುಳು
ಬೇರಪೋಷಕ ಪಾತ್ರಕನ್ನಡ
ಬಿರ್ದದ್ ಕಂಬುಲಮುಖ್ಯಪಾತ್ರಕನ್ನಡ, ತುಳು
ಪುಳಿ ಮುಂಚಿಖಳನಾಯಕತುಳು

ಧಾರಾವಾಹಿ

[ಬದಲಾಯಿಸಿ]
ವರ್ಷಹೆಸರುಪಾತ್ರಭಾಷೆ
೨೦೧೮ಕೃಷ್ಣ ತುಳಸಿಮುಖ್ಯಪಾತ್ರಕನ್ನಡಸ್ಟಾರ್ ಸುವರ್ಣ
೨೦೧೯ರಾಧಾ ಕಲ್ಯಾಣಖಳನಾಯಕಕನ್ನಡಝೀ ಕನ್ನಡ
೨೦೨೧ಅಣ್ಣ ತಂಗಿಖಳನಾಯಕಕನ್ನಡಉದಯ ಟಿ.ವಿ
೨೦೨೩ತ್ರಿಪುರ ಸುಂದರಿಅತಿಥಿ ಪಾತ್ರಕನ್ನಡಕಲರ್ಸ್ ಕನ್ನಡ
೧ಶಿವಧೂತ ಗುಳಿಗ
೨ಮಾಮಿ
೩ಒರಿಯಾರ್ದೊರಿ ಅಸಲ್
೪ಸೀತಾ ಟೀಚರ್
೫ಅಪ್ಪೆ ಮುಕಾಂಬಿಕಾ
೬ಮಣಿಕಂಠ ಮಹಿಮೆ
೭ಅಣ್ಣೆ ಬರ್ಪೆಗೆ

ಡಬ್ಬಿಂಗ್ ಕಲಾವಿದ

[ಬದಲಾಯಿಸಿ]

ಸ್ವರಾಜ್ ಶೆಟ್ಟಿ ಅವರು ತುಳು ಭಾಷೆಯಲ್ಲಿ ಬೀರಬಲ್, ಬದ್ಮಾಷ್, ಹವಳ, ಅಭಿಸಾರಿಕೆ, ಪಂಚತಂತ್ರ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಅಯೋಗ್ಯ ಸಿನಿಮಾಗಳಿಗೆ ಡಬ್ಬಿಂಗ್ ಮಾಡಿದ್ದಾರೆ

ಉಲ್ಲೇಖಗಳು

[ಬದಲಾಯಿಸಿ]

[೧][೨][೩][೪]

  1. ↑ "Swaraj Shetty Wiki, Age, Wife, Family, Biography & More - WikiBio". Retrieved 21 May 2023.
  2. ↑ "Tuesday Trivia: Did you know Kantara's Guruva aka Swaraj Shetty made his Kannada TV debut with the daily soap 'Krishna Tulasi'?". The Times of India. 24 January 2023. Retrieved 21 May 2023.
  3. ↑ "Swaraj Shetty Age, Wife, Family, Biography & More » StarsUnfolded". starsunfolded.com. Retrieved 21 May 2023.
  4. ↑ "Actor Prajwal Ravi replaces Swaraj Shetty in 'Anna Thangi'". The Times of India. 29 December 2021. Retrieved 21 May 2023.