ವಿಷಯಕ್ಕೆ ಹೋಗು

ಸ್ಲೆಡ್ಜಿಂಗ್ (ಕ್ರಿಕೆಟ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸ್ಲೆಡ್ಜಿಂಗ್ ಎಂಬುದು ಕ್ರಿಕೆಟ್ ನಲ್ಲಿ ಬಳಸುವ ಪದವಾಗಿದ್ದು, ಇದನ್ನು ಆಟಗಾರರು ಅವರ ಪ್ರತಿಸ್ಪರ್ಧಿಗಳಿಗೆ ಅವಮಾನ ಮಾಡುವ (ಕೆಣಕುವ)ಅಥವಾ ಮಾತಿನಲ್ಲಿ ಬೆದರಿಕೆಹಾಕುವ ಮೂಲಕ ಲಾಭವನ್ನು ಗಳಿಸಲು ಬಯಸುವ, ಅಭ್ಯಾಸವನ್ನು ವಿವರಿಸಲು ಬಳಸಲಾಗುತ್ತದೆ. ಪ್ರತಿಸ್ಪರ್ಧಿಯ ಚಿತ್ತವನ್ನು ದುರ್ಬಲಗೊಳಿಸುವುದು , ಈ ಮೂಲಕ ಆತ ತಪ್ಪನ್ನು ಮಾಡುವಂತೆ ಅಥವಾ ಸರಿಯಾಗಿ ಪ್ರದರ್ಶಿಸದಂತೆ ಮಾಡುವುದು ಇದರ ಉದ್ದೇಶವಾಗಿದೆ. ಇದು ಪರಿಣಾಮಕಾರಿಯಾಗಬಲ್ಲದು ಏಕೆಂದರೆ ಬ್ಯಾಟ್ಸ್ ಮನ್ ಬೌಲರ್ ಮತ್ತು ಇತರ ಹತ್ತಿರದಲ್ಲಿರುವ ಕೆಲವು ಫೀಲ್ಡರ್ ಗಳಿಂದ ಕೆಳುವಷ್ಟು ದೂರದಲ್ಲಿ ನಿಂತಿರುತ್ತಾನೆ; ಮತ್ತು ಪ್ರತಿಕ್ರಮದಲ್ಲಿ ನಿಂತಿರುತ್ತಾರೆ. ಅವಮಾನವನ್ನು ನೇರವಾಗಿ ಕೇಳುವಂತೆ ಅಥವಾ ಫೀಲ್ಡರ್ ಗಳ ನಡುವಿನ ಮಾತುಕತೆಯಲ್ಲಿ ಒಳಗೊಂಡಿರುವಂತೆ ಮಾಡಲಾಗುತ್ತದೆ.

ಈ ಅಭ್ಯಾಸ ಕಳಪೆ ಕ್ರೀಡಾಪಟುತ್ವವನ್ನು ಪ್ರತಿನಿಧಿಸುತ್ತದೆಯೋ ಅಥವಾ ಉಲ್ಲಾಸ ಪ್ರವೃತ್ತಿಯ ಪರಿಹಾಸ್ಯವನ್ನು ಪ್ರತಿನಿಧಿಸುತ್ತದೆಯೋ ಎಂಬುದರ ಬಗ್ಗೆ ಕ್ರಿಕೆಟ್ ಪ್ರಪಂಚದಲ್ಲಿ ಚರ್ಚೆಯಿದೆ.[] ಸ್ಲೆಡ್ಜಿಂಗ್ ಅನ್ನು ಹೆಚ್ಚಾಗಿ ನಿಂದನೆ ಎಂದು ತಪ್ಪಾಗಿ ತಿಳಿದುಕೊಳ್ಳಲಾಗುತ್ತದೆ. ಆದರೆ ಒಂದು ವೇಳೆ ಸ್ಲೆಡ್ಜ್ ಅದರ ಎಲ್ಲೆಯನ್ನು ಮೀರಿ ವೈಯಕ್ತಿ ನಿಂದನೆಯಾಗಿ ಬಳಸಿದಲ್ಲಿ, ಇಂತಹ ಪ್ರಸಂಗದಲ್ಲಿ ಅದು ನಿದಂನೆಯೇ ಆಗುತ್ತದೆ. ಸ್ಲೆಡ್ಜಿಂಗ್ ಸಾಮಾನ್ಯವಾಗಿ ಹಾಸ್ಯವಾಗಿರುತ್ತದೆ, ಆದರೆ ಕೆಲವೊಮ್ಮೆ ಚಿತ್ತಭಂಗ ಮಾಡಲು ಮಾಡಿದ ಅವಮಾನ ಪ್ರಯತ್ನವಾಗಿರುತ್ತದೆ. ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಈ ಅಭ್ಯಾಸವನ್ನು 'ಮಾನಸಿಕ ವಿಯೋಜನೆ'ಯಂತೆ ಎಂದು ಕರೆಯುತ್ತಾರೆ.

ಹೆಸರಿನ ಮೂಲ

[ಬದಲಾಯಿಸಿ]

ಇಯಾನ್ ಚಾಪೆಲ್ ರ ಪ್ರಕಾರ "ಸ್ಲೆಡ್ಜಿಂಗ್" ಪದದ ಬಳಕೆ ಅಡಿಲೇಡ್ ಒವಲ್ ನಲ್ಲಿ ನಡೆದ ೧೯೬೩-೧೯೬೪ ರ ಅಥವಾ ೧೯೬೪-೧೯೬೫ ರ ಶೆಫೆಲ್ಡ್ ಶೀಲ್ಡ್ ನ ಸ್ಪರ್ಧೆಯಲ್ಲಿ ಹುಟ್ಟಿಕೊಂಡಿತು. ಮಹಿಳೆಯ ಉಪಸ್ಥಿತಿಯಲ್ಲಿ ಅಶ್ಲೀಲ ಮಾತುಗಳನ್ನಾಡಿದ ಒಬ್ಬ ಕ್ರಿಕೆಟ್ ಆಟಗಾರ, ಒಂದು ಘಟನೆಗೆ "ಸ್ಲೆಡ್ಜ್ ಹ್ಯಾಮರ್" ನಂತೆ ಪ್ರತಿಕ್ರಿಯಿಸಿದನು ಎಂದು ಚಾಲೆಪ್ ತಿಳಿಸಿದ್ದಾರೆ. ಇದರ ಫಲಿತಾಂಶವೆಂಬಂತೆ ಪ್ರತಿಸ್ಪರ್ಧಿಗಳಿಂದ ಬಂದಂತಹ ಅಶ್ಲೀಲ ಮಾತುಗಳು ಮತ್ತು ಅವಮಾನಗಳನ್ನು "ಸ್ಲೆಡ್ಜಿಂಗ್" ಎಂಡು ಕರೆಯಲಾಯಿತು.[] ಇತ್ತೀಚೆಗಷ್ಟೇ ಇದಕ್ಕೆ ಹೊಸ ಪದ ಸೃಷ್ಟಿಸಿರುವುದನ್ನು ಬಿಟ್ಟರೆ, ಈ ಅಭ್ಯಾಸ ಕ್ರಿಕೆಟ್ ನಷ್ಟೆ ಹಳೆಯದಾಗಿದೆ. ಇದರೊಂದಿಗೆ ಆಟಗಾರರ ನಡುವೆ ಈ ರೀತಿಯ ತಮಾಷೆ ಗೇಲಿಗಳು ಸಾಮಾನ್ಯವಾಗಿದ್ದವು ಎಂಬುದಕ್ಕೆ ಐತಿಹಾಸಿಕ ವಿವರಣೆಗಳಿವೆ.

BBCಯ ಪ್ಯಾಟ್ ಮುರ್ಫಿ ಯವರ ಪ್ರಕಾರ : “ ಇದು ಅರವತ್ತರ ಮಧ್ಯಾವಧಿಯಿಂದ ಬಂದಿದೆ ಎಂದು ನಾನು ತಿಳಿದಿದ್ದೇನೆ, ನ್ಯೂ ಸೌತ್ ವೇಲ್ಸ್ ಮತ್ತು ಆಸ್ಟ್ರೇಲಿಯಾದ ವಿರುದ್ಧ ಬೌಲಿಂಗ್ ಅನ್ನು ಆರಂಭಿಸಲು ಬಳಸುತ್ತಿದ್ದ ಗ್ರಾಹ್ಯಾಮ್ ಕೊರ್ಲಿಂಗ್ ಎಂಬ ಹುಡುಗ… ಈ ಹುಡುಗನ ಪತ್ನಿ ಮತ್ತೊಂದು ತಂಡದ ಆಟಗಾರ[ಸಂಬಂಧ ಹೊಂದಿದ್ದಳು]ನೊಂದಿಗೆ ಇದ್ದಳು. ಆ ಆಟಗಾರ ಬ್ಯಾಟಿಂಗ್ [ಫೀಲ್ಡಿಂಗ್ ತಂಡ] ಮಾಡಲು ಬಂದಾಗ ಈತ ವೆನ್ ಅ ಮ್ಯಾನ್ ಲವ್ಸ್ ಅ ವುಮೆನ್ ಎಂಬ ಹಾಡನ್ನು ಹಾಡಲು ಪ್ರಾರಂಭಿಸುತ್ತಿದ್ದ. ಇದು ಪರ್ಸಿ ಸ್ಲೆಡ್ಜ್ ರವರ ಹಳೆಯ ಹಾಡಾಗಿದೆ.”[]

ಕೆಲವು ಯೆಹೂದಿ ಕ್ರಿಕೆಟ್ ಆಟಗಾರರು ಅವರ ಕೆಲವು ಆಟಗಳ ಸಮಯದಲ್ಲಿ ಯೆಹೂದಿ-ವಿರೋಧಿ ಸ್ಲೆಡ್ಜಿಂಗ್ ಗೆ ಒಳಗಾಗಿದ್ದಾರೆ. ಜೂಲಿಯನ್ ವೈನರ್ ಮತ್ತು ಬೆವ್ ಲೈನ್ ಅವರಲ್ಲಿ ಪ್ರಮುಖಕರು.[]

WG ಗ್ರೇಸ್

[ಬದಲಾಯಿಸಿ]

ಇಂಗ್ಲೆಂಡ್ ನ 19 ನೇ ಶತಮಾನದ ಅತ್ಯುತ್ತಮ ಬ್ಯಾಟ್ಸ್ ಮನ್ ಆಗಿದ್ದಂತಹ ಮಾಜಿ ಇಂಗ್ಲೀಷ್ ಬ್ಯಾಟ್ಸ್ ಮನ್ ವಿಲಿಯಂ ಗಿಲ್ಬರ್ಟ್ ಗ್ರೇಸ್, ಅವರ ಹಾಸ್ಯಮಯ ವ್ಯಂಗ್ಯ ನುಡಿಗೆ ಕುಖ್ಯಾತರಾಗಿದ್ದಾರೆ. ಕ್ಲೀನ್ ಬೌಲ್ಡ್ ಆದಂತಹ ಒಂದು ಸಂದರ್ಭದಲ್ಲಿ ಅವರು ಬೇಲ್ ಅನ್ನು ಅದರ ಸ್ಥಾನದಲ್ಲಿ ಪುನಃ ಇರಿಸಿ ಹೀಗೆಂದು ಹೇಳಿದ್ದಾರೆ: "ಗಾಳಿಯು ಇಂದು ಜೋರಾಗಿ ಬೀಸುತ್ತಿದೆ, ಅಂಪೈರ್". ಇದಕ್ಕೆ ಅಂಪೈರ್ ಹೀಗೆಂದು ಪ್ರತಿಕ್ರಿಯಿಸಿದ್ದಾರೆ: "ಹೌದು, ಪೆವಿಲಿಯನ್ ಗೆ ಹೋಗುವಾಗ ನಿನ್ನ ಟೋಪಿಯ ಕಡೆಗೆ ಗಮನಕೊಡು".[]

ಮತ್ತೊಂದು ಸಂದರ್ಭದಲ್ಲಿ ಅವರು ಲೆಗ್ ಬಿಫೋರ್ ವಿಕೆಟ್ ಔಟ್ ಆದಾಗ, ಹೊರನಡೆಯಲು ನಿರಾಕರಿಸಿದರು ಹಾಗು ಹೀಗೆಂದು ಹೇಳಿದ್ದಾರೆ: "ಅವರು ನಾನು ಬ್ಯಾಟಿಂಗ್ ಮಾಡುವುದನ್ನು ನೋಡಲು ಬಂದಿದ್ದಾರೆಯೇ ಹೋರತು ನೀನು ಬೌಲ್ ಮಾಡುವುದನಲ್ಲ". ಗ್ರೇಸ್ ರನ್ನು ಕುರಿತು ಚಾರ್ಲ್ಸ್ ಕೋರ್ಟ್ ರೈಟ್ ರವರು ಮಾಡಿರುವ ಸ್ಲೆಡ್ಜಿಂಗ್ ಅತ್ಯುತ್ತಮ ಉದಾಹರಣೆಯಾಗಿದೆ. ಗ್ರೇಸ್ ರನ್ನು ಔಟ್ ಮಾಡಲು ಮತ್ತೆ ಮತ್ತೆ ಪ್ರಯತ್ನಿಸಿದರು ಕೂಡ ಅಂಪೈರ್ ಔಟ್ ಕೊಡದಿದ್ದಾಗ, ಅಂತಿಮವಾಗಿ ಅವರು ಗ್ರೇಸ್ ರ ಎರಡು ಸ್ಟಂಪ್ ಗಳನ್ನು ಉರುಳಿಸಿದರು. ಆಗ ಗ್ರೇಸ್ ಒಲ್ಲದ ಮನಸ್ಸಿನಿಂದ ಪೆವಿಲಿಯನ್ ಗೆ ಹಿಂದಿರುಗಲು ಹೊರಟಾಗ, ಕಾಟ್ ರೈಟ್ ಕೆಳಕಂಡ ಮಾತುಗಳನ್ನೇಳಿ ಅವರನ್ನು ಬೀಳ್ಕೊಟ್ಟರು: "ನೀನು ಖಂಡಿತವಾಗಿ ಹೋಗುತ್ತಿಲ್ಲ, ಡಾಕ್ಟರ್? ಒಂದು ಸ್ಟಂಪ್ ಇನ್ನೂ ನಿಂತಿದೆ."[]

ವಿವಿಯನ್‌ ರಿಚರ್ಡ್ಸ್‌

[ಬದಲಾಯಿಸಿ]

ವೆಸ್ಟ್ ಇಂಡಿಯನ್ ಬ್ಯಾಟ್ಸ್ ಮನ್ ವಿವಿಯನ್ ರಿಚರ್ಡ್ಸ್, ಅವರನ್ನು ಕೆಣಕುವ ಧೈರ್ಯಮಾಡಿದ ಬೌಲರ್ ಗಳನ್ನು ಸುಸ್ತುಬೀಳಿಸುವುದರಲ್ಲಿ ಕುಖ್ಯಾದರಾಗಿದ್ದಾರೆ. ಇದನ್ನು ವಿರೋಧಿಸುವ ಅನೇಕ ನಾಯಕರು ಅವರ ಆಟಗಾರರನ್ನು ಆಡದಂತೆ ಹೊರಹಾಕಿದ್ದಾರೆ. ಅದೇನೇ ಆದರೂ ಗ್ಲ್ಯಾಮೊರ್ಗನ್ ಕ್ಲಬ್ ನ ವಿರುದ್ಧ ಕೌಂಟಿ ಪಂದ್ಯದಲ್ಲಿ, ಅನೇಕ ಬಾಲ್ ಗಳಿಂದ ಜೌಟ್ ಆಗದೇ ತಪ್ಪಿಸಿಕೊಂಡ ಅವರು ಆಡಿದ ನಂತರ ಗ್ರೆಗ್ ಥಾಮಸ್ ಅವರನ್ನು ಕೆಣಕಲು ಪ್ರಯತ್ನಿಸಿದರು. ಅವರು ರಿಚರ್ಡ್ ಗೆ ಹೀಗೆಂದು ತಿಳಿಸಿದರು: "ಇದು ಕೆಂಪಾಗಿದೆ, ದುಂಡಗಿದೆ ಮತ್ತು ಸುಮಾರು ಐದು ಔನ್ಸ್ ಗಳಷ್ಟು ತೂಕವಾಗಿದೆ, ನೀನು ಬೆರಗಾಗಿದ್ದರೆ." ಇದಕ್ಕೆ ರಿಚರ್ಡ್ ಕ್ರಿಕೆಟ್ ಮೈದಾನದ ಹೊರಗೆ ಅಲ್ಲೆ ಸಮೀಪದಲ್ಲಿದ್ದ ನದಿಯ ಹತ್ತಿರಲ್ಲಿ ಪ್ರತ್ಯುತ್ತರವನ್ನು ನೀಡಿದರು. ಬೌಲರ್ ನ ಕಡೆಗೆ ತಿರುಗಿ ಹೀಗೆಂದಿದ್ದಾರೆ: ಗ್ರೆಗ್, ನಿನಗೆ ಗೊತ್ತು ಅದು ಹೇಗೆ ಕಾಣಿಸುತ್ತದೆ ಎಂದು, ಹೋಗು ಈಗ ಅದನ್ನು ಹುಡುಕು."[]

ಮರ್ವ್ ಹ್ಯೂಸ್

[ಬದಲಾಯಿಸಿ]

ಸ್ಲೆಡ್ಜಿಂಗ್ ಅಸ್ಟ್ರೇಲಿಯಾದ ಅಂತಿಮ ಮಟ್ಟದ ಆಟದಲ್ಲಿ ಸಾಮಾನ್ಯವಾಗಿರುತ್ತದೆ, ಆದರೆ ಸ್ಲೆಡ್ಜಿಂಗ್ ನಿಂದಾಗಿ ಪ್ರತ್ಯೇಕವಾದ ಹೆಸರುಗಳಿಸಿರುವ ಆಸ್ಟ್ರೇಲಿಯಾದ ಒಬ್ಬ ಆಟಗಾರನೆಂದರೆ ಮಾಜಿ ವೇಗದ ಬೌಲರ್ ಮರ್ವ್ ಹ್ಯೂಸ್ ಆಗಿದ್ದಾರೆ. ಅವರ ಬೆದರಿಸುವ ಮತ್ತು ಆಕ್ರಮಣಕಾರಿ ಬೌಲಿಂಗ್ ಶೈಲಿಯು ಸಾಮಾನ್ಯವಾಗಿ ಹಾಸ್ಯ ಚಾಟೂಕ್ತಿ ಮತ್ತು ಕಟುವಾದ ನಿಂದನೆಯ ಬೆರಕೆಯಿಂದ ಕೂಡಿರುತ್ತದೆ. ಕೆಲವೊಂದು ಸಂದರ್ಭಗಳಲ್ಲಿ ಅವರು ಸ್ಲೆಡ್ಜಿಂಗ್ ನಿಂದ ಅವಮಾನ ಮಾಡುವ ವರೆಗು ಎಲ್ಲೆಯನ್ನು ಮೀರುತ್ತಾರೆ. ಅದೇನೇ ಆದರೂ ಹ್ಯೂಸ್ ಅನೇಕ ಸಂದರ್ಭಗಳಲ್ಲಿ ಪ್ರಸಿದ್ಧವಾದ ಸ್ಲೈಡ್ಜ್ ಗಳನ್ನು ಹೇಳಿದ್ದಾರೆ.

ಇಂತಹದ್ದೇ ಒಂದು ಸಂದರ್ಭದಲ್ಲಿ ಹ್ಯೂಸ್, ಪಾಕಿಸ್ತಾನದ ಬ್ಯಾಟ್ಸ್ ಮನ್ ಜಾವೆದ್ ಮಿಯಾಂದಾದ್ ರ ವಿರುದ್ಧ ಬೌಲಿಂಗ್ ಮಾಡುತ್ತಿದ್ದರು. ಆಗ ಹ್ಯೂಸ್ ರನ್ನು ಕುರಿತು ಬ್ಯಾಟ್ಸ್ ಮನ್ "ದಡುತಿ ದೇಹದ ಬಸ್ ಕಂಡಕ್ಟರ್ "ನಂತೆ ಕಾಣುವ ಮಣಭಾರದ ಬೌಲರ್ ಎಂದು ಅವರನ್ನು ಕೆಣಕಿದ್ದರು. ಹ್ಯೂಸ್ ಅದರ ನಂತರದ ಬಾಲ್ ಅನ್ನು ಎಸೆದು ಮಿಯಾಂದಾದ್ ರವರನ್ನು ಬೌಲ್ಡ್ ಮಾಡಿ, ಅವರ ತಂಡದ ಸದಸ್ಯರೆಡೆಗೆ ಓಡುವಾಗ "ಟಿಕೆಟ್ಸ್ ಪ್ಲೀಸ್!" ಎಂದು ಚೀರುತ್ತ ಓಡಿದರು.

ಹರ್ಭಜನ್ – ಸೈಮಂಡ್ಸ್ ರ ಘಟನೆ (2007 - 2008)

[ಬದಲಾಯಿಸಿ]

2007-08 ರ ಇಂಡಿಯನ್ ಟೂರ್ ಆಫ್ ಆಸ್ಟ್ರೇಲಿಯಾದ ಸಂದರ್ಭದಲ್ಲಿ, ಹರ್ಭಜನ್ ಸಿಂಗ್ ಆಂಡ್ರೀವ್ ಸೈಮಂಡ್ಸ್ ರವರನ್ನು ಕುರಿತು ಮಾಡಿದ ಜನಾಂಗೀಯ ನಿಂದನೆಯಿಂದಾಗಿ ದೂಷಣೆಗೆ ಒಳಗಾದಾಗ ಸ್ಲೆಡ್ಜಿಂಗ್ ಮಾಧ್ಯಮದ ಬೆಳಕಿಗೆ ಬಂದಿತು.[] ಆಪಾದನೆಯು ಸಾಬೀತಾಗಲಿಲ್ಲ ಮತ್ತು ಹರ್ಭಜನ್ನರ ಮೇಲೆ ಹೇರಲಾಗಿದ್ದ ಮೂರು ಪಂದ್ಯಗಳ ನಿಷೇಧವನ್ನು ತೆಗೆದುಹಾಕಲಾಯಿತು.[] ಇದರ ಬದಲಿಗೆ ಅವರು ೨.೮ ಮಟ್ಟದ ಅಪರಾಧವನ್ನು ಮಾಡಿದ್ದಾರೆಂದು (ಜನಾಂಗೀಯತೆಯ ಮಟ್ಟದ ನಿಂದನೆ ಮತ್ತು ಅವಮಾನವಲ್ಲ) ಆರೋಪಿಸಲಾಯಿತು. ಇದಕ್ಕಾಗಿ ಅವರು ತಪ್ಪೊಪ್ಪಿಕೊಂಡರು ಹಾಗು ಅವರ ಪಂದ್ಯಗಳ ಶುಲ್ಕದ ೫೦ ಪ್ರತಿಶದಷ್ಟು ದಂಡ ವಿಧಿಸಲಾಯಿತು. ಅಪೀಲುಗಳ ಕಮಿಷನರ್ ಹರ್ಭಜನ್ನರ ಹಿಂದಿನ ದಾಖಲೆಗಳ ಬಗ್ಗೆ ಅನಂತರ ತಿಳಿದುಕೊಂಡರು, ಮೊದಲೆ ತಿಳಿದಿದ್ದರೆ ಒಂದು ಟೆಸ್ಟ್ ಪಂದ್ಯವನ್ನು ಆಡದಂತೆ ನಿಷೇದ ಹೇರುತ್ತಿದ್ದರೆಂದು ತಿಳಿದಿದ್ದಾರೆ.[] ಹರ್ಭಜನ್ ರವರು ಇಬ್ಬರು ಆಟಗಾರರ ಮಧ್ಯೆ ಅಸಹ್ಯವಾಗಿ ಮಾತನಾಡುವ ಮೂಲಕ ನಿಂದನೆಯನ್ನು ಆರಂಭಿಸಿದರು ಎಂದು ಸೈಮಂಡ್ ಒಪ್ಪಿಕೊಂಡಿದ್ದಾರೆ.[೧೦]

ಇತರ ಕ್ರೀಡೆಗಳು

[ಬದಲಾಯಿಸಿ]

ಮೌಖಿಕ ನಿಂದನೆಯ ಮೂಲಕ ಪ್ರತಿಸ್ಪರ್ಧಿಗಳ ಚಿತ್ತಭಂಗ ಮಾಡುವ ಅಭ್ಯಾಸವು ವಾಸ್ತವವಾಗಿ ಎಲ್ಲಾ ಕ್ರೀಡೆಗಳಲ್ಲು ಸಹಜವಾಗಿದೆ. ಆದರೆ "ಸ್ಲೆಡ್ಜಿಂಗ್" ಪರ್ ಸೆ ಕ್ರಿಕೆಟ್ ಗೆ ಸಂಬಂಧಿಸಿದೆ. ಇತರ ಕ್ರೀಡೆಗಳು ಮೌಖಿಕ ನಿಂದನೆಗೆ ಕೆಲವೊಮ್ಮೆ ಅವುಗಳದೇ ಆದಂತಹ ಪದಗಳನ್ನು ಹೊಂದಿರುತ್ತವೆ:ಉದಾಹರಣೆಗೆ, ಬಾಸ್ಕೆಟ್ ಬಾಲ್ ಇದನ್ನು ಟ್ರ್ಯಾಷ್ ಟಾಕ್ ಎಂದು ಕರೆದರೆ, ಐಸ್ ಹಾಕಿಯಲ್ಲಿ ಇದನ್ನು ಚರ್ಪಿಂಗ್ ಎಂದು ಕರೆಯಲಾಗುತ್ತದೆ.[೧೧] ಇದು ಬಾಕ್ಸಿಂಗ್ ನ ಅವಿಭಾಜ್ಯ ಭಾಗವು ಹೌದು. ಪೂರ್ವಭಾವಿಯಾಗಿ ಹೊಡೆದಾಡಲು ನಿಂತಾಗ ಮತ್ತು ಅವರವರೆ ಹೊಡೆದಾಡಿಕೊಳ್ಳುವಾಗ ಮೌಖಿಕ ನಿಂದನೆಯನ್ನು ಮಾಡುತ್ತಾರೆ ಮತ್ತು ಬೆದರಿಸುತ್ತಾರೆ. ಇದು ಜನ ಸಮೂಹ ಮತ್ತು ಮಾಧ್ಯಮವನ್ನು ಆಕರ್ಷಿಸಲು ಹೊಡೆದಾಟವನ್ನು ಪ್ರಚೋದಿಸುವ ಉದ್ದೇಶ ಹೊಂದಿರುತ್ತದೆ. ಮೊಹಮದ್ ಅಲಿ ಅವರ ಪ್ರತಿಸ್ಪರ್ಧಿಯನ್ನು ಸೋಲಿಸುವ ಸುತ್ತಿನಲ್ಲಿ ಜೋರಾಗಿ ಅರಚುತ್ತ ಹೊಡೆಯುವುದಕ್ಕೆ ಹೆಸರುವಾಸಿಯಾಗಿದ್ದಾರೆ, ಆದರೆ ಇವರ ಅತ್ಯಂತ ಜನಪ್ರಿಯ ಸ್ಲೆಡ್ಜಿಂಗ್ ಎಂದರೆ ಅತ್ಯಂತ ಸಿಟ್ಟಿನಲ್ಲಿ ಹೇಳಿದ "ನನ್ನ ಹೆಸರೇನು?" ಸೋಲುತ್ತಿದ್ದರು ಅವರನ್ನು ಕ್ಯಾಷಿಯಸ್ ಕ್ಲೆ ಎಂದು ಕರೆಯುವ ಧೈರ್ಯ ಮಾಡುವಂತಹ ಅವರ ಪ್ರತಿಸ್ಪರ್ಧಿಯ ವಿರುದ್ಧ ಮೇಲೆ ತಿಳಿಸಲಾದಂತೆ ಅರಚುತಿದ್ದರು.

ಇವನ್ನೂ ಗಮನಿಸಿ‌

[ಬದಲಾಯಿಸಿ]
  • ವಾಲ್ಫ್ ಟಿಕೆಟ್
  • ದಿ ಡಜನ್ಸ್
  • ಫೈಟಿಂಗ್ ವರ್ಡ್ಸ್
  • ಸ್ಮ್ಯಾಕ್ ಟಾಕ್
  • ಟ್ರ್ಯಾಷ್ ಟಾಕ್

ಉಲ್ಲೇಖಗಳು‌

[ಬದಲಾಯಿಸಿ]
  1. BBC ಸ್ಪೋರ್ಟ್ಸ್: ಇಂಡಿಯಾ ಬೋರ್ಡ್ ಪ್ರೋಸೆಸ್ ಸ್ಲೆಡ್ಜಿಂಗ್ ಬ್ಯಾನ್ . 2008 ರ ನವೆಂಬರ್‌ 2 ರಂದು ಪಡೆಯಲಾಗಿದೆ.
  2. ಗ್ರಾಮ್ ಸೀಲ್, ದಿ ಲಿಂಗೊ: ಲಿಸನಿಂಗ್ ಟು ಆಸ್ಟ್ರೇಲಿಯನ್ ಇಂಗ್ಲೀಷ್ (ಯುನಿವರ್ಸಿಟಿ ಆಫ್ ನ್ಯೂ ಸೌತ್ ವೇಲ್ಸ್ ಪ್ರೆಸ್, 1999, ISBN 086840-680-5): ಪುಟ 141.
  3. http://www.bbc.co.uk/iplayer/episode/b00lmytk/Yes_its_the_Ashes_11_07_2009 BBC ರೇಡಿಯೋ 5ಲೈವ್, ‘ಎಸ್ ಇಟ್ ಈಸ್ ಆಶಸ್’, 2009-07-11
  4. "ಆರ್ಕೈವ್ ನಕಲು". Archived from the original on 2011-10-05. Retrieved 2021-08-09. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  5. ೫.೦ ೫.೧ "Ah, the art of sledging for fun, not malice". The Sydney Morning Herald. 2005-06-12.
  6. http://news.bbc.co.uk/sport2/hi/funny_old_game/3068365.stm ಲೆಟೈರ್ ಎಕ್ಸಂಪಲ್ ಆಫ್ ಸ್ಲೆಡ್ಜಿಂಗ್ - BBC ಸ್ಪೋರ್ಟ್ಸ್
  7. "Harbhajan Singh - Andrew Symonds racism hearing". Cricketcircle.com. Retrieved 2008-11-02.
  8. Praverman, Frank (2008-01-29). "Harbhajan Singh cleared of making racist comments to Andrew Symonds". Timesoline. London. Archived from the original on 2008-07-27. Retrieved 2008-11-02.
  9. ಕ್ರಿಸಿನ್ಫೊ -ಹರ್ಭಜನ್ ರೇಸಿಸಮ್ ಚಾರ್ಜ್ ನಾಟ್ ಪ್ರೂವನ್ - ಹ್ಯಾನ್ ಸೆನ್
  10. "ICC ರಿಲೀಸ್". Archived from the original on 2008-08-27. Retrieved 2021-07-20.
  11. Silverman, Jason (Sep/Oct 1999). "The Art of Trash Talk". Psychology Today. {{cite journal}}: Check date values in: |date= (help)


ಮೂಲಗಳು

[ಬದಲಾಯಿಸಿ]