ವಿಷಯಕ್ಕೆ ಹೋಗು

ಸ್ಯಾಮ್‌ಸಂಗ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Samsung Group
ಸಂಸ್ಥೆಯ ಪ್ರಕಾರPublic (Korean: 삼성그룹)
ಸ್ಥಾಪನೆ1938
ಸಂಸ್ಥಾಪಕ(ರು)Lee Byung-chull
ಮುಖ್ಯ ಕಾರ್ಯಾಲಯSamsung Town, Seoul, South Korea
ವ್ಯಾಪ್ತಿ ಪ್ರದೇಶWorldwide
ಪ್ರಮುಖ ವ್ಯಕ್ತಿ(ಗಳು)Lee Kun-hee (Chairman and CEO)
Lee Soo-bin (President, CEO of Samsung Life Insurance)[]
ಉದ್ಯಮConglomerate
ಉತ್ಪನ್ನ
ಆದಾಯUS$ ೧೭೩.೪ billion (೨೦೦೮)[]
ನಿವ್ವಳ ಆದಾಯUS$ ೧೦.೭ billion (೨೦೦೮)[]
ಒಟ್ಟು ಆಸ್ತಿUS$ ೨೫೨.೫ billion (೨೦೦೮)[]
ಒಟ್ಟು ಪಾಲು ಬಂಡವಾಳUS$ ೯೦.೫ billion (೨೦೦೮)[]
ಉದ್ಯೋಗಿಗಳು೨೭೬,೦೦೦ (೨೦೦೯)[]
ಉಪಸಂಸ್ಥೆಗಳುSamsung Electronics
Samsung Life Insurance
Samsung Heavy Industries
Samsung C&T etc.
ಜಾಲತಾಣSamsung.com


This article contains Korean text. Without proper rendering support, you may see question marks, boxes, or other symbols instead of Hangul and hanja.

ಸ್ಯಾಮ್‌ಸಂಗ್‌ ಗ್ರೂಪ್‌ (ಕೊರಿಯನ್: 삼성그룹) ಒಂದು ಬಹುರಾಷ್ಟ್ರೀಯ ಸಂಘಟಿತ ವ್ಯಾಪಾರಿ ಸಂಸ್ಥೆಯಾಗಿದ್ದು, ದಕ್ಷಿಣ ಕೊರಿಯಾಸಿಯೋಲ್‌ನ ಸ್ಯಾಮ್‌ಸಂಗ್‌ ನಗರದಲ್ಲಿ ಅದರ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ದಕ್ಷಿಣ ಕೊರಿಯಾದ ಅತ್ಯಂತ ದೊಡ್ಡ ಚೇಬಾಲ್ ಮತ್ತು ಆದಾಯದಿಂದ[] ಪ್ರಪಂಚದ ಎರಡನೇ ಅತಿ ದೊಡ್ಡ ಸಂಘಟಿತ ವ್ಯಾಪಾರಿ ಸಂಸ್ಥೆಯಾಗಿದೆ, ೨೦೦೮ರಲ್ಲಿ ಇದರ ವಾರ್ಷಿಕ ಆದಾಯವು US $೧೭೩.೪ ಶತಕೋಟಿಯಾಗಿತ್ತು.[] ಸ್ಯಾಮ್‌ಸಂಗ್‌ ಗ್ರೂಪ್‌ ಹಲವಾರು ಅಂತಾರಾಷ್ಟ್ರೀಯ ಮಟ್ಟದ ವ್ಯವಹಾರಗಳನ್ನು ಒಳಗೊಂಡಿದೆ, ಅವುಗಳಲ್ಲಿ ಹೆಚ್ಚಿನವು ಸ್ಯಾಮ್‌ಸಂಗ್‌ ಬ್ರ್ಯಾಂಡ್‌ನಡಿಯಲ್ಲಿ ಸೇರಿವೆ, ಅವುಗಳೆಂದರೆ ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್, ಮಾರಾಟದಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ತಂತ್ರಜ್ಞಾನ ಕಂಪನಿಯಾಗಿದೆ;[][] ಸ್ಯಾಮ್‌ಸಂಗ್‌ ಹೆವಿ ಇಂಡಸ್ಟ್ರೀಸ್, ಪ್ರಪಂಚದ ಎರಡನೇ ಅತಿ ದೊಡ್ಡ ಹಡಗು-ನಿರ್ಮಾಣ-ಸಂಸ್ಥೆಯಾಗಿದೆ;[] U.S.ನ ಒಂದು ನಿರ್ಮಾಣ ಪತ್ರಿಕೆ ಇಂಜಿನಿಯರಿಂಗ್ ನ್ಯೂಸ್-ರೆಕಾರ್ಡ್ ನಡೆಸಿದ ೨೨೫ ಜಾಗತಿಕ ನಿರ್ಮಾಣ ಸಂಸ್ಥೆಗಳ ೨೦೦೯ರ ಶ್ರೇಣೀಕರಣದಲ್ಲಿ ಸ್ಯಾಮ್‌ಸಂಗ್‌ ಇಂಜಿನಿಯರಿಂಗ್ ೩೫ನೇ ಸ್ಥಾನವನ್ನು ಮತ್ತು ಸ್ಯಾಮ್‌ಸಂಗ್‌ C&T ೭೨ನೇ ಸ್ಥಾನವನ್ನು ಗಳಿಸಿದವು.[] ಸ್ಯಾಮ್‌ಸಂಗ್‌ ಲೈಫ್ ಇನ್ಶುರೆನ್ಸ್ ಫಾರ್ಚೂನ್ ಗ್ಲೋಬಲ್ ೫೦೦ ಇಂಡಸ್ಟ್ರೀಸ್‌ನ ೨೦೦೯ರ ಶ್ರೇಣೀಕರಣದಲ್ಲಿ ೧೪ನೇ ಸ್ಥಾನವನ್ನು ಪಡೆಯಿತು.[] ಸ್ಯಾಮ್‌ಸಂಗ್‌ ಎವರ್‌ಲ್ಯಾಂಡ್ ದಕ್ಷಿಣ ಕೊರಿಯಾದ ಮೊದಲ ವಿಷಯೋದ್ಯಾನವಾಗಿದ್ದು, ಇದು ೧೯೭೬ರಲ್ಲಿ ಯಾಂಗಿನ್ ಫಾರ್ಮ್‌ಲ್ಯಾಂಡ್ ಆಗಿ ತೆರೆದುಕೊಂಡಿತು. ಇದು ಎಪ್ಕಾಟ್, ಡಿಸ್ನಿ MGM ಮತ್ತು ಡಿಸ್ನಿಸ್ ಆನಿಮಲ್ ಕಿಂಗ್ಡಮ್ ಮೊದಲಾದವನ್ನು ಹಿಂದಿಕ್ಕಿ ಈಗ ಪ್ರಪಂಚದಲ್ಲೇ ಐದನೇ ಸುಪ್ರಸಿದ್ಧ ವಿಷಯೋದ್ಯಾನವಾಗಿದೆ.[] ಚೈಲ್ ವರ್ಲ್ಡ್‌ವೈಡ್ ಸ್ಯಾಮ್‌ಸಂಗ್‌ ಗ್ರೂಪ್‌ನ[೧೦] ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಇದು ೨೦೧೦ರಲ್ಲಿ ಆದಾಯದ ಆಧಾರದ "ಪ್ರಪಂಚದ ಪ್ರಮುಖ ೫೦ ಏಜೆನ್ಸಿ ಕಂಪನಿ"ಗಳ ಪಟ್ಟಿಯಲ್ಲಿ ೧೯ನೇ ಸ್ಥಾನವನ್ನು ಪಡೆದಿದೆ. [೧೧] ಶಿಲ್ಲಾ ಹೋಟೆಲ್ ಸಹ ಸ್ಯಾಮ್‌ಸಂಗ್‌ ಗ್ರೂಪ್‌ನ ಒಂದು ಅಂಗಸಂಸ್ಥೆಯಾಗಿದೆ. ಇದು ಪ್ರಸಿದ್ಧ ಅಂತಾರಾಷ್ಟ್ರೀಯ ವ್ಯವಹಾರ-ನಿಯತಕಾಲಿಕ ಇನ್‌ಸ್ಟಿಟ್ಯೂಶನಲ್ ಇನ್ವೆಸ್ಟರ್ ನಿರ್ವಹಿಸಿದ ವಾರ್ಷಿಕ ಓದುಗರ ಸಮೀಕ್ಷೆಯಲ್ಲಿ "೨೦೦೯ರ ಪ್ರಪಂಚದಲ್ಲೇ ಅತ್ಯುತ್ತಮವಾದ ಪ್ರಮುಖ ೧೦೦ ಹೋಟೆಲ್"‌ಗಳ ಪಟ್ಟಿಯಲ್ಲಿ ೫೮ನೇ ಸ್ಥಾನವನ್ನು ಗಳಿಸಿತು.[೧೨]

ಬೆಸ್ಟ್ ಓವರಾಲ್ ಜೆನರಲಿಸ್ಟ್ ಸೇಲ್ಸ್ ಫೋರ್ಸ್ ಸಮೀಕ್ಷೆಯು ಇನ್‌ಸ್ಟಿಟ್ಯೂಶನಲ್ ಇನ್ವೆಸ್ಟರ್‌ನ ೨೦೦೭ರ ಏಷ್ಯಾದಾದ್ಯಂತದ ಸಂಶೋಧನಾ ತಂಡದ ಸಮೀಕ್ಷೆಯಲ್ಲಿ ಭಾಗವಹಿಸಿದ ೨೨ ಸಂಸ್ಥೆಗಳನ್ನು ಶ್ರೇಣೀಕರಿಸಿತು. ಸ್ಯಾಮ್‌ಸಂಗ್‌ ಸೆಕ್ಯೂರಿಟೀಸ್ (ಬಂಡವಾಳ ಹೂಡಿಕೆ ಬ್ಯಾಂಕ್) ೨೦೦೭ರಲ್ಲಿ ಆದಾಯದ ಆಧಾರದಲ್ಲಿ "೨೦೦೭ ಆಲ್-ಏಷ್ಯಾ ಬೆಸ್ಟ್ ಓವರಾಲ್ ಜೆನರಲಿಸ್ಟ್ ಸೇಲ್ಸ್ ಫೋರ್ಸ್ ರ್ಯಾಂಕಿಂಗ್ಸ್"‌ನಲ್ಲಿ ೧೪ನೇ ಸ್ಥಾನವನ್ನು ಗಳಿಸಿತು.[೧೩]

ಗಾರ್ಟ್ನರ್‌ನ “ಮಾರ್ಕೆಟ್ ಷೇರ್ ಅನಾಲಿಸಿಸ್: ಟಾಪ್ ೧೦ ಕನ್ಸಲ್ಟಿಂಗ್ ಪ್ರೊವೈಡರ್ಸ್ ರೆವೆನ್ಯೂ, ಗ್ರೋತ್ ಆಂಡ್ ಮಾರ್ಕೆಟ್ ಷೇರ್, ವರ್ಲ್ಡ್‌ವೈಡ್ ಆಂಡ್ ರೀಜನಲ್ ೨೦೦೯”ಅನ್ನು ಸೇವಾ ಪೂರೈಕೆದಾರರಿಗೆ ಒಂದು ಸಾಧನವಾಗಿ ಉದ್ದೇಶಿಸಲಾಗಿದೆ. ಸ್ಯಾಮ್‌ಸಂಗ್‌ SDS ಏಷ್ಯಾ ಪೆಸಿಫಿಕ್‌ನಲ್ಲಿ ಎರಡನೇ ಸ್ಥಾನವನ್ನು ಹೊಂದಿದೆ, ಇದರಲ್ಲಿ IBM ಮೊದಲನೇ ಮತ್ತು ಆಕ್ಸೆಂಚರ್ ಮೂರನೇ ಸ್ಥಾನವನ್ನು ಪಡೆದಿವೆ.[೧೪]

ಸ್ಯಾಮ್‌ಸಂಗ್‌ ಗ್ರೂಪ್‌ ದಕ್ಷಿಣ ಕೊರಿಯಾದ ಒಟ್ಟು ರಫ್ತುಗಳಲ್ಲಿ ೨೦%ಗಿಂತಲೂ ಹೆಚ್ಚಿನ ಪ್ರಮಾಣಕ್ಕೆ ಕಾರಣವಾಗಿದೆ.[೧೫] ಹೆಚ್ಚಿನ ದೇಶೀಯ ಕೈಗಾರಿಕೆಗಳಲ್ಲಿ, ಸ್ಯಾಮ್‌ಸಂಗ್‌ ಗ್ರೂಪ್‌ ಒಂದು ಮಾರುಕಟ್ಟೆಯನ್ನು ಆವರಿಸಿರುವ ಏಕೈಕ ಏಕಸ್ವಾಮ್ಯವಾಗಿದೆ; ಅದರ ಆದಾಯವು ಕೆಲವು ರಾಷ್ಟ್ರಗಳ ಒಟ್ಟು GDPಯಷ್ಟು ಅಧಿಕವಾಗಿದೆ. ೨೦೦೬ರಲ್ಲಿ ಶ್ರೇಣೀಕರಿಸಿದ್ದರೆ ಸ್ಯಾಮ್‌ಸಂಗ್‌ ಗ್ರೂಪ್‌ ಪ್ರಪಂಚದಲ್ಲೇ ೩೫ನೇ ಅತ್ಯಂತ ಹೆಚ್ಚಿನ ಆರ್ಥಿಕ ಸ್ಥಿತಿಯಾಗುತ್ತಿತ್ತು, ಅರ್ಜೆಂಟೀನಕ್ಕಿಂತ ಹೆಚ್ಚಿನದಾಗುತ್ತಿತ್ತು.[೧೬] ಈ ಕಂಪನಿಯು ರಾಷ್ಟ್ರದ ಆರ್ಥಿಕ ಅಭಿವೃದ್ಧಿ, ರಾಜಕೀಯ, ಮಾಧ್ಯಮ ಮತ್ತು ಸಂಸ್ಕೃತಿ ಮೇಲೆ ಪ್ರಬಲ ಪ್ರಭಾವವನ್ನು ಹೊಂದಿದೆ ಹಾಗೂ ಇದು ಮಿರಾಕಲ್ ಆನ್ ದಿ ಹ್ಯಾನ್ ರಿವರ್‌ನ ಪ್ರಮುಖ ಚಾಲಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ. ಇಂದು ಹೆಚ್ಚಿನ ವ್ಯವಹಾರ ಸಂಸ್ಥೆಗಳು ಸ್ಯಾಮ್‌ಸಂಗ್‌‌ನ ಅಂತಾರಾಷ್ಟ್ರೀಯ ಯಶಸ್ಸನ್ನು ಅನುಕರಣೀಯ ಮಾದರಿಯಾಗಿ ಬಳಸಿಕೊಳ್ಳುತ್ತಿವೆ[ಸೂಕ್ತ ಉಲ್ಲೇಖನ ಬೇಕು]. ಸ್ಯಾಮ್‌ಸಂಗ್‌ ೨೦೧೦ರಲ್ಲಿ ಮಾಧ್ಯಮ ಸಮೂಹವನ್ನು ಖರೀದಿಸಿತು.

ಇತಿಹಾಸ

[ಬದಲಾಯಿಸಿ]
1930ರ ದಶಕದಲ್ಲಿ ದೇಗುವಿನಲ್ಲಿದ್ದ ಸ್ಯಾಮ್‌ಸಂಗ್‌ ಸ್ಯಾಂಘೋಯ್ ಕಟ್ಟಡ

೧೯೩೮ರಲ್ಲಿ ಉಯ್ರಿಯಾಂಗ್ ಕೌಂಟಿಯ ಭಾರಿ ಜಮೀನಿರುವ ಕುಟುಂಬದ ಲೀ ಬ್ಯಂಗ್-ಚಲ್ (೧೯೧೦–೧೯೮೭) ಹತ್ತಿರದ ದೇಗು ನಗರಕ್ಕೆ ಬಂದು ಸ್ಯಾಮ್‌ಸಂಗ್‌ ಸ್ಯಾಂಘೋಯ್ ಅನ್ನು (삼성상회) ಸ್ಥಾಪಿಸಿದರು. ಇದು ಸ್ಯು-ಡಾಂಗ್‌ನಲ್ಲಿದ್ದ (ಈಗಿನ ಇಂಗ್ಯೊ-ಡಾಂಗ್) ನಲ್ವತ್ತು ಉದ್ಯೋಗಿಗಳನ್ನು ಹೊಂದಿದ್ದ ಸಣ್ಣ ವ್ಯಾಪಾರಿ ಸಂಸ್ಥೆಯಾಗಿತ್ತು. ಇದು ನಗರದಲ್ಲಿ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ತಯಾರಿಸಲಾದ ಕಿರಾಣಿ ಸಾಮಾನುಗಳ ವ್ಯಾಪಾರ ಮಾಡುತ್ತಿತ್ತು ಹಾಗೂ ನೂಡಲ್‌ಗಳನ್ನೂ ಉತ್ಪತ್ತಿ ಮಾಡುತ್ತಿತ್ತು. ಈ ಕಂಪನಿಯು ಏಳಿಗೆ ಹೊಂದಿತು ಹಾಗೂ ಲೀ ೧೯೪೭ರಲ್ಲಿ ಇದರ ಪ್ರಧಾನ ಕಛೇರಿಯನ್ನು ಸಿಯೋಲ್‌ಗೆ ಸ್ಥಳಾಂತರಿಸಿದರು. ಆದರೆ ಕೊರಿಯನ್ ಕದನವು ಆರಂಭವಾದಾಗ ಅವರು ಸಿಯೋಲ್ಅನ್ನು ಬಿಡಬೇಕಾಯಿತು ಹಾಗೂ ಬೂಸಾನ್‌ನಲ್ಲಿ ಚೈಲ್ ಜೆದಾಂಗ್ ಹೆಸರಿನಲ್ಲಿ ಒಂದು ಸಕ್ಕರೆ ಸಂಸ್ಕರಣಾಗಾರವನ್ನು ಆರಂಭಿಸಿದರು. ಯುದ್ಧದ ನಂತರ ೧೯೫೪ರಲ್ಲಿ ಲೀ ಚೈಲ್ ಮೋಜಿಕ್ ಅನ್ನು ಸ್ಥಾಪಿಸಿದರು ಮತ್ತು ಕಾರ್ಖಾನೆಯನ್ನು ದೇಗುವಿನ ಚಿಮ್ಸಾನ್-ಡಾಂಗ್‌ನಲ್ಲಿ ನಿರ್ಮಿಸಿದರು. ಇದು ರಾಷ್ಟ್ರದಲ್ಲೇ ಅತಿ ದೊಡ್ಡ ಉಣ್ಣೆಯ ಕಾರ್ಖಾನೆಯಾಗಿತ್ತು ಹಾಗೂ ಈ ಕಂಪನಿಯು ಪ್ರಮುಖ ಕಂಪನಿಯ ರೀತಿಯಲ್ಲಿ ಕೆಲಸ ನಿರ್ವಹಿಸಿತು.

ಸ್ಯಾಮ್‌ಸಂಗ್‌ ಅನೇಕ ಕ್ಷೇತ್ರಗಳಾಗಿ ವೈವಿಧ್ಯಗೊಂಡಿತು ಮತ್ತು ಲೀ ಸ್ಯಾಮ್‌ಸಂಗ್‌ಅನ್ನು ವ್ಯವಹಾರಗಳ ವ್ಯಾಪಕ ವಲಯದಲ್ಲಿ ಪ್ರಮುಖ ಉದ್ಯಮವಾಗಿ ಸ್ಥಾಪಿಸಲು ಪ್ರಯತ್ನಿಸಿದರು, ವಿಮೆ, ಖಜಾನೆ-ಬ್ಯಾಂಕುಗಳು ಮತ್ತು ಚಿಲ್ಲರೆ ವ್ಯಾಪಾರಗಳಂತಹ ವ್ಯವಹಾರಗಳನ್ನು ಆರಂಭಿಸಿದರು. ಲೀ ಕೈಗಾರೀಕರಣದ ಬಗ್ಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿದರು ಮತ್ತು ತನ್ನ ಆರ್ಥಿಕ ಅಭಿವೃದ್ಧಿಯ ವ್ಯವಹಾರ ಕೌಶಲವನ್ನು ದೊಡ್ಡ ದೇಶೀಯ ಸಂಘಟಿತ ವ್ಯಾಪಾರಿ ಸಂಸ್ಥೆಗಳಿಗೆ ಕೇಂದ್ರೀಕರಿಸಿದರು, ಅವುಗಳನ್ನು ಪೈಪೋಟಿಯಿಂದ ರಕ್ಷಿಸಿ, ಹಣಕಾಸಿನ ಸಹಾಯವನ್ನು ಮಾಡಿದರು. ಅವರು ನಂತರ ಸ್ಯಾಮ್‌ಸಂಗ್‌ಅನ್ನು ವಿದೇಶಿ ಪೈಪೋಟಿಯಿಂದ ರಕ್ಷಿಸುವುದಕ್ಕಾಗಿ ದಕ್ಷಿಣ ಕೊರಿಯಾದಲ್ಲಿ ಗ್ರಾಹಕ ಎಲೆಕ್ಟ್ರಾನಿಕ್ ಸಾಧನಗಳನ್ನು ಮಾರಾಟ ಮಾಡದಂತೆ ಹಲವಾರು ವಿದೇಶ ಕಂಪನಿಗಳಿಗೆ ನಿಷೇಧವನ್ನು ಸೂಚಿಸಿದರು[ಸೂಕ್ತ ಉಲ್ಲೇಖನ ಬೇಕು].

೧೯೬೦ರ ಉತ್ತರಾರ್ಧದಲ್ಲಿ, ಸ್ಯಾಮ್‌ಸಂಗ್‌ ಗ್ರೂಪ್‌ ಎಲೆಕ್ಟ್ರಾನಿಕ್ ಉದ್ಯಮವನ್ನು ಆರಂಭಿಸಿತು. ಇದು ಎಲೆಕ್ಟ್ರಾನಿಕ್-ಸಂಬಂಧಿತ ಅನೇಕ ವಿಭಾಗಗಳನ್ನು ಸ್ಥಾಪಿಸಿತು, ಅವುಗಳೆಂದರೆ ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್ ಡಿವೈಸಸ್ ಕಂಪನಿ, ಸ್ಯಾಮ್‌ಸಂಗ್‌ ಎಲೆಕ್ಟ್ರೊ-ಮೆಕ್ಯಾನಿಕ್ಸ್ ಕಂಪನಿ, ಸ್ಯಾಮ್‌ಸಂಗ್‌ ಕಾರ್ನಿಂಗ್ ಕಂಪನಿ ಮತ್ತು ಸ್ಯಾಮ್‌ಸಂಗ್‌ ಸೆಮಿಕಂಡಕ್ಟರ್ ಆಂಡ್ ಟೆಲಿಕಮ್ಯೂನಿಕೇಶನ್ಸ್ ಕಂಪನಿ ಹಾಗೂ ಇದು ಸುವನ್‌ನಲ್ಲಿ ತನ್ನ ಕಾರ್ಯವನ್ನು ಆರಂಭಿಸಿತು. ಕಪ್ಪು-ಬಿಳುಪು ದೂರದರ್ಶನ ಸೆಟ್ಟು ಇದರ ಮೊದಲ ಉತ್ಪನ್ನವಾಗಿತ್ತು. ೧೯೮೦ರಲ್ಲಿ ಈ ಕಂಪನಿಯು ಗುಮಿಯಲ್ಲಿ ಹ್ಯಾಂಗುಕ್ ಜಿಯೋಂಜ ಟಾಂಗ್ಸಿನ್ ಅನ್ನು ಪಡೆಯಿತು ಮತ್ತು ದೂರಸಂಪರ್ಕ ವ್ಯವಸ್ಥೆಯ ಸಾಧನಗಳನ್ನು ತಯಾರಿಸಲು ಆರಂಭಿಸಿತು. ಇದರ ಆರಂಭಿಕ ಉತ್ಪನ್ನಗಳೆಂದರೆ ಸ್ವಿಚ್ ಬೋರ್ಡ್‌ಗಳು. ಇದರ ತಯಾರಿಕೆಯು ದೂರವಾಣಿ ಮತ್ತು ಫ್ಯಾಕ್ಸ್ ಉತ್ಪಾದನಾ ವ್ಯವಸ್ಥೆಗಳವರೆಗೆ ಅಭಿವೃದ್ಧಿ ಹೊಂದಿತು ಹಾಗೂ ಇದು ಸ್ಯಾಮ್‌ಸಂಗ್‌ನ ಮೊಬೈಲ್ ಫೋನ್ ತಯಾರಿಕೆಯ ಕೇಂದ್ರವಾಯಿತು. ಅವು ಇಂದಿನವರೆಗೆ ಸುಮಾರು ೮೦೦ ದಶಲಕ್ಷ ಮೊಬೈಲ್ ಫೋನ್‌ಗಳನ್ನು ತಯಾರಿಸಿವೆ.[೧೭] ಈ ಕಂಪನಿಯು ಅವುಗಳನ್ನೆಲ್ಲಾ ೧೯೮೦ರಲ್ಲಿ ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್ ಕಂಪನಿ ಲಿಮಿಟೆಡ್‌ನಡಿಯಲ್ಲಿ ಒಂದುಗೂಡಿಸಿತು.

ನ್ಯೂಯಾರ್ಕ್ ನಗರದ ಟೈಮ್ ವಾರ್ನರ್ ಸೆಂಟರ್‌ನ ಒಳಗಡೆ ಇರುವ ಸ್ಯಾಮ್‌ಸಂಗ್‌ ಲೋಗೋದ ಒಂದು ನೋಟ.

೧೯೮೦ರ ಉತ್ತರಾರ್ಧದಲ್ಲಿ ಮತ್ತು ೧೯೯೦ರ ಆರಂಭದಲ್ಲಿ, ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೆಚ್ಚಿನ ಬಂಡವಾಳವನ್ನು ಹೂಡಿತು. ಇದರ ಹೂಡಿಕೆಗಳು ಕಂಪನಿಯನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಉದ್ಯಮದ ಮುಂಭಾಗಕ್ಕೆ ಒಯ್ಯುವಲ್ಲಿ ಪ್ರಮುಖವಾಗಿದ್ದವು. ೧೯೮೨ರಲ್ಲಿ ಇದು ಪೋರ್ಚುಗಲ್‌ನಲ್ಲಿ ಒಂದು ದೂರದರ್ಶನ ಜೋಡಣೆ ಸ್ಥಾವರವನ್ನು ನಿರ್ಮಿಸಿತು; ೧೯೮೪ರಲ್ಲಿ ನ್ಯೂಯಾರ್ಕ್‌ನಲ್ಲೊಂದು ಸ್ಥಾವರ; ೧೯೮೫ರಲ್ಲಿ ಟೋಕಿಯೊದಲ್ಲಿ ಒಂದು ಸ್ಥಾವರ; ೧೯೮೭ರಲ್ಲಿ ಇಂಗ್ಲೆಂಡ್‌ನಲ್ಲಿ ಒಂದು ಸೌಕರ್ಯ; ಮತ್ತು ೧೯೯೬ರಲ್ಲಿ ಆಸ್ಟಿನ್‌ನಲ್ಲಿ ಒಂದು ಸೌಕರ್ಯವನ್ನು ರಚಿಸಿತು. ಒಟ್ಟಾಗಿ ಸ್ಯಾಮ್‌ಸಂಗ್‌ ಆಸ್ಟಿನ್ ಪ್ರದೇಶದಲ್ಲಿ ಸುಮಾರು $೫.೬ ಶತಕೋಟಿಯಷ್ಟು ಬಂಡವಾಳವನ್ನು ಹೂಡಿತು, ಇದು ಬಹುಮಟ್ಟಿಗೆ ಟೆಕ್ಸಾಸ್‌ನಲ್ಲೇ ಅತ್ಯಂತ ದೊಡ್ಡ ವಿದೇಶಿ ಹೂಡಿಕೆಯಾಗಿದೆ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅತಿ ದೊಡ್ಡ ಏಕೈಕ ವಿದೇಶಿ ಹೂಡಿಕೆಯಾಗಿದೆ. ಹೊಸ ಹೂಡಿಕೆಯು ಆಸ್ಟಿನ್‌ನಲ್ಲಿನ ಸ್ಯಾಮ್‌ಸಂಗ್‌ನ ಒಟ್ಟು ಹೂಡಿಕೆಯನ್ನು $೯ ಶತಕೋಟಿಗಿಂತಲೂ ಹೆಚ್ಚಿನ ಮೊತ್ತಕ್ಕೆ ಕೊಂಡೊಯ್ಯುತ್ತದೆ.[೧೮]

ಸ್ಯಾಮ್‌ಸಂಗ್‌ ೧೯೯೦ರ ದಶಕದಲ್ಲಿ ಒಂದು ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಬೆಳೆಯಲು ಆರಂಭವಾಯಿತು. ಸ್ಯಾಮ್‌ಸಂಗ್‌ನ ನಿರ್ಮಾಣ ವಿಭಾಗವು ಮಲೇಷಿಯಾದಲ್ಲಿ ಎರಡು ಪೆಟ್ರೊನಾಸ್ ಟವರ್ಸ್‌ನಲ್ಲಿ ಒಂದನ್ನು, ತೈವಾನ್‌ನಲ್ಲಿ ತೈಪೈ ೧೦೧ಅನ್ನು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬುರ್ಜ್ ಖಲೀಫವನ್ನು ನಿರ್ಮಿಸುವ ಗುತ್ತಿಗೆಯನ್ನು ನೀಡಿತು.[೧೯] ೧೯೯೩ರಲ್ಲಿ ಲೀ ಕುನ್-ಹೀ ಸ್ಯಾಮ್‌ಸಂಗ್‌ ಗ್ರೂಪ್‌ನ ಹತ್ತು ಅಂಗಸಂಸ್ಥೆಗಳನ್ನು ಮಾರಾಟ ಮಾಡಿದರು, ಕಂಪನಿಯನ್ನು ಸಣ್ಣದು ಮಾಡಿದರು ಮತ್ತು ಮೂರು ಉದ್ಯಮಗಳ ಮೇಲೆ ಗಮನ ಹರಿಸುವುದಕ್ಕಾಗಿ ಇತರ ಕಾರ್ಯಾಚರಣೆಗಳನ್ನು ಸೇರಿಸಿದರು: ಆ ಉದ್ಯಮಗಳೆಂದರೆ ಎಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್ ಮತ್ತು ರಾಸಾಯನಿಕ ವಸ್ತುಗಳು. ೧೯೯೬ರಲ್ಲಿ ಸ್ಯಾಮ್‌ಸಂಗ್‌ ಗ್ರೂಪ್‌ ಸಂಗ್‌ಕ್ಯುಂಕ್ವಾನ್ ವಿಶ್ವವಿದ್ಯಾನಿಲಯದ ಸ್ಥಾಪನೆಯನ್ನು ಪುನಃಪಡೆಯಿತು.

ಇತರ ಪ್ರಮುಖ ಕೊರಿಯನ್ ಕಂಪನಿಗಳಿಗೆ ಹೋಲಿಸಿದರೆ ಸ್ಯಾಮ್‌ಸಂಗ್‌ ೧೯೯೭ರ ಏಷ್ಯಾದ ಹಣಕಾಸಿನ ಬಿಕ್ಕಟ್ಟಿನಲ್ಲಿ ಹೆಚ್ಚುಕಡಿಮೆ ಹಾನಿಗೊಳಗಾಗದೆ ಉಳಿದುಕೊಂಡಿತು. ಆದರೆ ಸ್ಯಾಮ್‌ಸಂಗ್‌ ಮೋಟಾರ್ ರೆನಾಲ್ಟ್‌ಗೆ ಗಮನಾರ್ಹ ನಷ್ಟದಲ್ಲಿ ಮಾರಾಟವಾಯಿತು. ೨೦೧೦ರ ಹೊತ್ತಿಗೆ ರೆನಾಲ್ಟ್ ಸ್ಯಾಮ್‌ಸಂಗ್‌ ೮೦.೧ ಪ್ರತಿಶತದಷ್ಟು ರೆನಾಲ್ಟ್‌ನಿಂದ ಮತ್ತು ೧೯.೯ ಪ್ರತಿಶತದಷ್ಟು ಸ್ಯಾಮ್‌ಸಂಗ್‌ನಿಂದ ಮಾಲಿಕತ್ವವನ್ನು ಪಡೆಯಿತು. ಇದಕ್ಕೆ ಹೆಚ್ಚುವರಿಯಾಗಿ, ಸ್ಯಾಮ್‌ಸಂಗ್‌ ೧೯೮೦ರಿಂದ ೧೯೯೦ರವರೆಗೆ ವಿಮಾನದ ಭಾಗಗಳನ್ನು ತಯಾರಿಸಿತು. ಆ ಕಂಪನಿಯು ನಂತರ ೧೯೯೯ರಲ್ಲಿ ಕೊರಿಯಾ ಏರೋಸ್ಪೇಸ್ ಇಂಡಸ್ಟ್ರೀಸ್ (KAI) ಆಗಿ ಸ್ಥಾಪನೆಯಾಯಿತು, ಇದು ಸ್ಯಾಮ್‌ಸಂಗ್‌ ಏರೋಸ್ಪೇಸ್, ಡೈವೂ ಹೆವಿ ಇಂಡಸ್ಟ್ರೀಸ್ ಮತ್ತು ಹೈಯುಂದೈ ಸ್ಪೇಸ್ ಆಂಡ್ ಏರ್‌ಕ್ರಾಫ್ಟ್ ಕಂಪನಿ ಮೊದಲಾದ ಮೂರು ದೇಶೀಯ ಪ್ರಮುಖ ಅಂತರಿಕ್ಷ ವಿಭಾಗಗಳ ಒಟ್ಟುಗೂಡುವಿಕೆಯ ಪರಿಣಾಮವಾಗಿ ಹುಟ್ಟಿಕೊಂಡಿತು. ಸ್ಯಾಮ್‌ಸಂಗ್‌ ಈಗಲೂ ವಿಮಾನದ ಭಾಗಗಳನ್ನು ತಯಾರಿಸುತ್ತದೆ. [ಸೂಕ್ತ ಉಲ್ಲೇಖನ ಬೇಕು]


ಸ್ಯಾಮ್‌ಸಂಗ್‌ ೧೯೯೨ರಲ್ಲಿ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಮೆಮರಿ-ಚಿಪ್‌ಗಳ ಉತ್ಪಾದಕವಾಯಿತು ಹಾಗೂ ಇದು ಇಂಟೆಲ್ನ ನಂತರ ಪ್ರಪಂಚದ ಎರಡನೇ ಅತ್ಯಂತ ದೊಡ್ಡ ಚಿಪ್ ತಯಾರಕವಾಗಿದೆ (ವರ್ಲ್ಡ್‌ವೈಡ್ ಟಾಪ್ ೨೦ ಸೆಮಿಕಂಡಕ್ಟರ್ ಮಾರ್ಕೆಟ್ ಶೇರ್ ರ್ಯಾಂಕಿಂಗ್ ಯಿಯರ್ ಬೈ ಯಿಯರ್ಅನ್ನು ಗಮನಿಸಿ).[೨೦] ೧೯೯೫ರಲ್ಲಿ ಅದು ಅದರ ಮೊದಲ ದ್ರವ-ಸ್ಫಟಿಕ ಪ್ರದರ್ಶಿಸುವ ಪರದೆಯನ್ನು ತಯಾರಿಸಿತು. ಹತ್ತು ವರ್ಷಗಳ ನಂತರ ಸ್ಯಾಮ್‌ಸಂಗ್‌ ಪ್ರಪಂಚದ ದ್ರವ-ಸ್ಫಟಿಕ ಪ್ರದರ್ಶಿಸುವ ಫಲಕಗಳ ಅತ್ಯಂತ ದೊಡ್ಡ ತಯಾರಕವಾಗಿ ಬೆಳೆಯಿತು. ದೊಡ್ಡ ಗಾತ್ರದ TFT-LCDಗಳ ಮೇಲೆ ಬಂಡವಾಳ ಹೂಡದ ಸೋನಿಯು ಸ್ಯಾಮ್‌ಸಂಗ್ಅನ್ನು ಸಂಧಿಸಿ ‌ಸಹಕರಿಸುವಂತೆ ಕೇಳಿತು. ೨೦೦೬ರಲ್ಲಿ ಸ್ಯಾಮ್‌ಸಂಗ್‌ ಮತ್ತು ಸೋನಿಯ ಜಂಟಿ ಉದ್ಯಮದ ಫಲವಾಗಿ ಎರಡೂ ಕಂಪನಿಗಳಿಗೆ LCD ಫಲಕಗಳನ್ನು ಸ್ಥಿರವಾಗಿ ಪೂರೈಸುವುದಕ್ಕಾಗಿ S-LCDಅನ್ನು ಸ್ಥಾಪಿಸಲಾಯಿತು. S-LCDಅನ್ನು ಸ್ಯಾಮ್‌ಸಂಗ್‌ (೫೦% ಪ್ಲಸ್ ೧ ಷೇರು) ಮತ್ತು ಸೋನಿ (೫೦% ಮೈನಸ್ ೧ ಷೇರು) ಕಂಪನಿಗಳು ಸ್ವಂತವಾಗಿ ಹೊಂದಿವೆ ಹಾಗೂ ಅದರ ಕಾರ್ಖಾನೆಗಳು ಮತ್ತು ಸೌಕರ್ಯಗಳು ದಕ್ಷಿಣ ಕೊರಿಯಾದ ಟ್ಯಾಂಗ್‌ಜಂಗ್‌ನಲ್ಲಿವೆ.

ಸ್ಯಾಮ್‌ಸಂಗ್‌ ಎಲೆಕ್ಟ್ರಾನಿಕ್ಸ್ ೨೦೦೪ ಮತ್ತು ೨೦೦೫ರಲ್ಲಿ ಸೋನಿಯನ್ನು ಮೀರಿಸಿ ಪ್ರಪಂಚದ ಬಹು ಪ್ರಸಿದ್ಧ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್‌ ಎಂಬ ಹೆಸರು ಪಡೆಯಿತು ಹಾಗೂ ಇದು ಈಗ ಪ್ರಪಂಚದಲ್ಲೇ ೧೯ನೇ ಸ್ಥಾನವನ್ನು ಪಡೆದಿದೆ.[೨೧] ನೋಕಿಯಾದ ನಂತರ, ಸ್ಯಾಮ್‌ಸಂಗ್‌ ಪ್ರಪಂಚದ ಎರಡನೇ ಅತಿ ದೊಡ್ಡ ಸೆಲ್-ಫೋನ್‌ ತಯಾರಿಕಾ ಸಂಸ್ಥೆಯಾಗಿದೆ, ಇದು ಉತ್ತರ ಅಮೆರಿಕಾ ಮತ್ತು ಪಶ್ಚಿಮ ಯುರೋಪಿನಲ್ಲಿ ಒಂದು ಪ್ರಮುಖ ಮಾರುಕಟ್ಟೆ ಷೇರನ್ನು ಹೊಂದಿದೆ.[೨೨]

ಬೇರ್ಪಡುವಿಕೆ

[ಬದಲಾಯಿಸಿ]

CJ, ಹ್ಯಾನ್ಸಲ್, ಶಿನ್ಸೆಗೆ ಗ್ರೂಪ್ ಮೊದಲಾದವು ೧೯೯೦ರ ದಶಕದಲ್ಲಿ ಸ್ಯಾಮ್‌ಸಂಗ್‌ ಗ್ರೂಪ್‌ನಿಂದ ಬೇರ್ಪಟ್ಟ ಕಂಪನಿಗಳಾಗಿವೆ.[೨೩] ಶಿನ್ಸೆಗೆಯು (ರಿಯಾಯಿತಿ ಅಂಗಡಿ, ವಿವಿಧ ಸರಕಿನ ಮಳಿಗೆ) ಆರಂಭದಲ್ಲಿ ಸ್ಯಾಮ್‌ಸಂಗ್‌ ಗ್ರೂಪ್‌ನ ಭಾಗವಾಗಿತ್ತು, ನಂತರ ೧೯೯೦ರ ದಶಕದಲ್ಲಿ ಇದು CJ ಗ್ರೂಪ್ (ಆಹಾರ/ರಾಸಾಯನಿಕ ವಸ್ತು/ಮನರಂಜನೆ/ವ್ಯವಸ್ಥಾಪನ ತಂತ್ರ) ಮತ್ತು ಹ್ಯಾನ್ಸಲ್ ಗ್ರೂಪ್ (ಪೇಪರ್/ಟೆಲಿಕಾಂ) ಒಂದಿಗೆ ಸ್ಯಾಮ್‌ಸಂಗ್‌ ಗ್ರೂಪ್‌ನಿಂದ ಬೇರ್ಪಟ್ಟಿತು. ಹೊಸ-ಬ್ರ್ಯಾಂಡ್‌ನ ಶಿನ್ಸೆಗೆ ಸೆಂಟಮ್‌ಸಿಟಿ ಡಿಪಾರ್ಟ್ಮೆಂಟ್ ಸ್ಟೋರ್ ಈಗ ಗಿನ್ನಿಸ್ ವಿಶ್ವ ದಾಖಲೆಯಲ್ಲಿ ಪ್ರಪಂಚದ ಅತಿ ದೊಡ್ಡ ವಿವಿಧ-ಸರಕಿನ-ಮಳಿಗೆಯಾಗಿ ಅಧಿಕೃತವಾಗಿ ಗುರುತಿಸಿಕೊಂಡಿದೆ.[೨೪] ಇಂದಿನ ಈ ಬೇರ್ಪಟ್ಟ ಸಮೂಹಗಳು ಸ್ವತಂತ್ರ ಸಮೂಹಗಳಾಗಿವೆ ಮತ್ತು ಅವು ಸ್ಯಾಮ್‌ಸಂಗ್‌ ಗ್ರೂಪ್‌ನ ಭಾಗವಾಗಿಲ್ಲ ಅಥವಾ ಅದಕ್ಕೆ ಸಂಬಂಧಿಸಿಲ್ಲ.[೨೫] ಹ್ಯಾನ್ಸಲ್ ಗ್ರೂಪ್‌ನ ಒಬ್ಬ ಪ್ರತಿನಿಧಿಯು ಹೀಗೆಂದು ಹೇಳಿದನು - "ವ್ಯಾಪಾರ ಜಗತ್ತನ್ನು ಆಳುವ ನಿಯಮಗಳ ಬಗ್ಗೆ ಅರಿವಿಲ್ಲದವರು ಮಾತ್ರ ಅಸಂಬದ್ಧವಾದುದನ್ನು ನಂಬಬಹುದು", ಅವನು ಮತ್ತಷ್ಟು ಮುಂದುವರಿಸುತ್ತಾ "ಹ್ಯಾನ್ಸಲ್ ೧೯೯೧ರಲ್ಲಿ ಸ್ಯಾಮ್‌ಸಂಗ್‌ ಗ್ರೂಪ್‌ನಿಂದ ಬೇರ್ಪಡುವಾಗ ಅದು ಸ್ಯಾಮ್‌ಸಂಗ್‌ ಅಂಗಸಂಸ್ಥೆಗಳೊಂದಿಗಿನ ಎಲ್ಲಾ ಪಾವತಿ ಗ್ಯಾರಂಟಿ ಮತ್ತು ಷೇರು-ಹೊಂದುವ ಒಪ್ಪಂದಗಳನ್ನು ಅಂತ್ಯಗೊಳಿಸಿತು." ಹ್ಯಾನ್ಸಲ್ ಗ್ರೂಪ್ ಮೂಲದವನೊಬ್ಬ ಹೀಗೆಂದು ಒತ್ತಿಹೇಳಿದನು - "ಹ್ಯಾನ್ಸಲ್, ಶಿನ್ಸೆಗೆ ಮತ್ತು CJ ಮೊದಲಾದವು ಸ್ಯಾಮ್‌ಸಂಗ್‌ ಗ್ರೂಪ್‌ನಿಂದ ಬೇರ್ಪಟ್ಟಂದಿನಿಂದ ಸ್ವತಂತ್ರವಾಗಿ ನಿರ್ವಹಿಸಲ್ಪಡುತ್ತಿವೆ." ಶಿನ್ಸೆಗೆ ವಿವಿಧ ಸರಕಿನ ಮಳಿಗೆಯ ಕಾರ್ಯಕಾರಿ ನಿರ್ದೇಶಕನು ಹೀಗೆಂದು ಹೇಳಿದ್ದಾನೆ - "ಶಿನ್ಸೆಗೆಯು ಸ್ಯಾಮ್‌ಸಂಗ್‌ ಗ್ರೂಪ್ ಒಂದಿಗೆ ಯಾವುದೇ ಪಾವತಿ ಗ್ಯಾರಂಟಿಗಳನ್ನು ಹೊಂದಿಲ್ಲ‌."[೨೫]

ಉತ್ಪನ್ನಗಳು, ಗ್ರಾಹಕರು ಮತ್ತು ಸಾಂಸ್ಥಿಕ ರಚನೆ

[ಬದಲಾಯಿಸಿ]

ಗ್ರೂಪ್‌ನ ವಿಭಾಗಗಳು

[ಬದಲಾಯಿಸಿ]
2009ರಲ್ಲಿ ಫಿನ್‌ಲ್ಯಾಂಡ್‌ನ ಮುರೇಮ್‌ನ ವೇಲಿ ಹೈರಿಲೈನನ್ ಓಯ್‌ನಲ್ಲಿದ್ದ ಸ್ಯಾಮ್‌ಸಂಗ್‌ SE170 ರೋಡ್-ರೈಲ್ ಅಗೆಯುವ ಯಂತ್ರ
  • ಎಲೆಕ್ಟ್ರಾನಿಕ್ಸ್ ಉದ್ಯಮಗಳು
  • ಹಣಕಾಸು ಸೇವೆಗಳು
  • ರಾಸಾಯನಿಕ ಕೈಗಾರಿಕೆ
  • ಯಂತ್ರ ಸಾಧನಗಳು ಮತ್ತು ಉಪಕರಣಗಳ ಉದ್ಯಮಗಳು
  • ಇಂಜಿನಿಯರಿಂಗ್ ಮತ್ತು ನಿರ್ಮಾಣ
  • ಚಿಲ್ಲರೆ ವ್ಯಾಪಾರ ಮತ್ತು ಮನರಂಜನೆ
  • ಬಟ್ಟೆಬರೆ ಮತ್ತು ಜಾಹೀರಾತು
  • ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳು
  • ವ್ಯಾಪಾರ ಮತ್ತು ಸಂಪನ್ಮೂಲ ಅಭಿವೃದ್ಧಿ
  • ಆಹಾರ ಪೂರೈಕೆ ಮತ್ತು ಭದ್ರತೆ ಸೇವೆಗಳು

ಪ್ರಮುಖ ಗ್ರಾಹಕರು

[ಬದಲಾಯಿಸಿ]
  • ರಾಯಲ್ ಡಚ್ ಶೆಲ್

ಸ್ಯಾಮ್‌ಸಂಗ್‌ ಹೆವಿ ಇಂಡಸ್ಟ್ರೀಸ್ ಮುಂದಿನ ೧೫ ವರ್ಷಗಳಲ್ಲಿ ಸುಮಾರು US$೫೦ ಶತಕೋಟಿಯಷ್ಟು ಮೌಲ್ಯದ ದ್ರವೀಕರಿಸಿದ ನೈಸರ್ಗಿಕ ಅನಿಲವನ್ನು (LNG) ರಾಯಲ್ ಡಚ್ ಶೆಲ್‌ಗೆ ಒದಗಿಸಲಿರುವ ಏಕೈಕ ಪೂರೈಕೆದಾರವಾಗಿದೆ.[೨೬] [೨೭]

  • ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರ

ಸ್ಯಾಮ್‌ಸಂಗ್‌, ಕೊರಿಯ ಎಲೆಕ್ಟ್ರಿಕ್ ಪವರ್ ಕಾರ್ಪ್ ಮತ್ತು ಹೈಯುಂದೈ ಮೊದಲಾದವನ್ನು ಒಳಗೊಂಡ ದಕ್ಷಿಣ ಕೊರಿಯಾದ ಸಂಸ್ಥೆಗಳ ಒಕ್ಕೂಟವು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬೈಜಿಕ ವಿದ್ಯುಚ್ಛಕ್ತಿ ಸ್ಥಾವರವನ್ನು ನಿರ್ಮಿಸಲು ಸುಮಾರು ೪೦ ಶತಕೋಟಿ ಡಾಲರ್‌ಗಳಷ್ಟು ಮೌಲ್ಯದ ಒಪ್ಪಂದವೊಂದನ್ನು ಮಾಡಿತು.[೨೮]

  • ಕೆನಡಾದ ಒಂಟಾರಿಯೊ ಪ್ರಾಂತ್ಯದ ಸರ್ಕಾರ

ಕೆನಡಾದ ಒಂಟಾರಿಯೊ ಪ್ರಾಂತ್ಯದ ಸರ್ಕಾರವು ಪ್ರಪಂಚದ ಅತ್ಯಂತ ದೊಡ್ಡ ನವೀಕರಿಸಬಹುದಾದ ಶಕ್ತಿ ಯೋಜನೆಗೆ ಸಹಿಹಾಕಿತು, ಇದು ೨,೫೦೦MW ಸಾಮರ್ಥ್ಯದ ಗಾಳಿ ಮತ್ತು ಸೌರ ಶಕ್ತಿಯನ್ನು ಪಡೆಯುವ $೬.೬bn ಮೌಲ್ಯದ ಒಪ್ಪಂದವಾಗಿತ್ತು. ಸ್ಯಾಮ್‌ಸಂಗ್‌ ಮತ್ತು ಕೊರಿಯಾ ಎಲೆಕ್ಟ್ರಿಕ್ ಪವರ್ ನಿರ್ವಹಿಸಿದ ಒಕ್ಕೂಟದ ಒಪ್ಪಂದದಡಿಯಲ್ಲಿ ೨,೦೦೦MW ಸಾಮರ್ಥ್ಯದ ಗಾಳಿ ಕೇಂದ್ರಗಳ ಮತ್ತು ೫೦೦MWನಷ್ಟು ಸೌರ ಶಕ್ತಿಯ ಅಭಿವೃದ್ಧಿಯನ್ನು ಮಾಡಲಾಗುತ್ತದೆ, ಅಲ್ಲದೆ ಪ್ರಾಂತ್ಯದಲ್ಲಿ ಉತ್ಪಾದಕಾ ಪೂರೈಕೆಯ ಸರಪಣಿಯನ್ನೂ ರಚಿಸಲಾಗುತ್ತದೆ.[೨೯]

ಸ್ಯಾಮ್‌ಸಂಗ್‌ನ ಪ್ರಮುಖ ಗ್ರಾಹಕರು (Q1 2010)[೩೦]
ಶ್ರೇಣಿ/ಕಂಪನಿ ಭಾಗಗಳ ವಿವರಣೆ ಖರೀದಿ (ಏಕಮಾನ: ಟ್ರಿಲಿಯನ್ (ಒಂದು ಲಕ್ಷ ಕೋಟಿ KRW) ಒಟ್ಟು ಮಾರಾಟದ ಶೇಕಡಾವಾರು
೧ ಸೋನಿ DRAM, NAND ಫ್ಲ್ಯಾಶ್, LCD ಫಲಕ, ಇತ್ಯಾದಿ ೧.೨೮ ೩.೭
೨ ಆಪಲ್ ಇಂಕ್ AP(ಮೊಬೈಲ್ ಪ್ರಾಸೆಸರ್),DRAM, NAND ಫ್ಲ್ಯಾಶ್, ಇತ್ಯಾದಿ ೦.೯ ೨.೬
೩ ಡೆಲ್ DRAM, ಚಪ್ಪಟೆ ಫಲಕಗಳು, ಲೀಥಿಯಂ-ಅಯಾನು ಬ್ಯಾಟರಿ, ಇತ್ಯಾದಿ ೦.೮೭ ೨.೫
೪ HP DRAM, ಚಪ್ಪಟೆ-ಫಲಕಗಳು, ಲೀಥಿಯಂ-ಅಯಾನು ಬ್ಯಾಟರಿ, ಇತ್ಯಾದಿ ೦.೭೬ ೨.೨
೫ ವೆರಿಜಾನ್ ಕಮ್ಯುನಿಕೇಶನ್ಸ್ ಕೈಸೆಟ್ಟುಗಳು, ಇತ್ಯಾದಿ ೦.೫ ೧.೩
೬ AT&T ಕೈಸೆಟ್ಟುಗಳು, ಇತ್ಯಾದಿ ೦.೫ ೧.೩

ಸ್ಯಾಮ್‌ಸಂಗ್‌ ಮೆಡಿಕಲ್ ಸೆಂಟರ್

[ಬದಲಾಯಿಸಿ]

ಸ್ಯಾಮ್‌ಸಂಗ್‌ ಮೆಡಿಕಲ್ ಸೆಂಟರ್ ಒಂದು ಲಾಭೋದ್ದೇಶವಿಲ್ಲದ ವೈದ್ಯಕೀಯ ಸಂಘಟನೆಯಾಗಿದೆ. ಸ್ಯಾಮ್‌ಸಂಗ್‌ ಗ್ರೂಪ್‌ ವಾರ್ಷಿಕವಾಗಿ ಸುಮಾರು $೧೦೦ ದಶಲಕ್ಷದಷ್ಟು ಮೌಲ್ಯದ "ಕೊಡುಗೆ"ಯನ್ನು ವೈದ್ಯಕೀಯ ಕೇಂದ್ರಕ್ಕೆ ನೀಡುತ್ತದೆ.[೩೧] ಸ್ಯಾಮ್‌ಸಂಗ್‌ ಮೆಡಿಕಲ್ ಸೆಂಟರ್ (ಕೊರಿಯನ್: 삼성의료원) ಸ್ಯಾಮ್‌ಸಂಗ್‌ ಸಿಯೋಲ್ ಹಾಸ್ಪಿಟಲ್ (ಕೊರಿಯನ್: 삼성서울병원), Kangbook ಸ್ಯಾಮ್‌ಸಂಗ್‌ ಹಾಸ್ಪಿಟಲ್ (ಕೊರಿಯನ್: 강북삼성병원), ಸ್ಯಾಮ್‌ಸಂಗ್‌ ಚ್ಯಾಂಗ್ವನ್ ಹಾಸ್ಪಿಟಲ್ (ಕೊರಿಯನ್: 삼성창원병원), ಸ್ಯಾಮ್‌ಸಂಗ್‌ ಕ್ಯಾನ್ಸರ್ ಸೆಂಟರ್ (ಕೊರಿಯನ್:삼성암센터) ಮತ್ತು ಸ್ಯಾಮ್‌ಸಂಗ್‌ ಲೈಫ್ ಸೈನ್ಸಸ್ ರಿಸರ್ಚ್ ಸೆಂಟರ್ (ಕೊರಿಯನ್: 삼성생명과학연구소) ಮೊದಲಾದವನ್ನು ಒಳಗೊಂಡಿದೆ. ಸಿಯೋಲ್‌ನಲ್ಲಿರುವ ಸ್ಯಾಮ್‌ಸಂಗ್‌ ಕ್ಯಾನ್ಸರ್ ಸೆಂಟರ್ ಏಷ್ಯಾದಲ್ಲೇ ಅತ್ಯಂತ ದೊಡ್ಡ ಕ್ಯಾನ್ಸರ್ ಕೇಂದ್ರವಾಗಿದೆ, ಅಲ್ಲದೆ ಇದು ಕೊರಿಯಾದ ನ್ಯಾಷನಲ್ ಕ್ಯಾನ್ಸರ್ ಸೆಂಟರ್ ಮತ್ತು ಜಪಾನ್ ನ್ಯಾಷನಲ್ ಕ್ಯಾನ್ಸರ್ ಸೆಂಟರ್‌ಗಿಂತಲೂ ದೊಡ್ಡದಾಗಿದೆ.[೩೨] ಸ್ಯಾಮ್‌ಸಂಗ್‌ ಮೆಡಿಕಲ್ ಸೆಂಟರ್ ಮತ್ತು ಫಿಜರ್ ಹೆಪಟೊಸೆಲ್ಯುಲಾರ್ ಕಾರ್ಸಿನೋಮದಲ್ಲಿ ಪ್ರಾಯೋಗಿಕ ಫಲಿತಾಂಶಗಳನ್ನು ಪಡೆಯುವಲ್ಲಿ ಜೀನ್‌ಗಳ ಕ್ರಿಯೆಗಳ ಪಾತ್ರವನ್ನು ಕಂಡುಹಿಡಿಯುವ ಜಂಟಿ ಸಂಶೋಧನೆಯನ್ನು ಮಾಡುತ್ತಿವೆ.[೩೩] SMC ಸಂಪೂರ್ಣ AAHRPPಅನ್ನು (ಅಸೋಸಿಯೇಶನ್ ಫಾರ್ ದಿ ಅಕ್ರಿಡಿಟೇಶನ್ ಆಫ್ ಹ್ಯೂಮನ್ ರಿಸರ್ಚ್ ಪ್ರೊಟೆಕ್ಷನ್ ಪ್ರೋಗ್ರ್ಯಾಮ್ಸ್) ಪಡೆದ ಮೊದಲ US-ಅಲ್ಲದ ಸಂಸ್ಥೆಯಾಗಿದೆ.[೩೪]

ವ್ಯತ್ಪತ್ತಿಶಾಸ್ತ್ರ ಮತ್ತು ಲೋಗೋ ಇತಿಹಾಸ

[ಬದಲಾಯಿಸಿ]

ಕೊರಿಯನ್ ಹಾಂಜ ಪದ ಸ್ಯಾಮ್‌ಸಂಗ್‌ ‌ನ () ಅರ್ಥ "ಮೂರು ನಕ್ಷತ್ರಗಳು" ಎಂಬುದಾಗಿದೆ. "ಮೂರು" ಪದವು "ದೊಡ್ಡದು, ಅಸಂಖ್ಯಾತ ಮತ್ತು ಪ್ರಬಲ" ಎಂಬರ್ಥವನ್ನು ನೀಡುತ್ತದೆ; "ನಕ್ಷತ್ರಗಳು" ಅಂದರೆ ಅನಂತತೆ.(ಸ್ಯಾಮ್‌ಸಂಗ್‌ ಗ್ರೂಪ್‌ನ ಸ್ಥಾಪಕರ ಪ್ರಕಾರ).[೩೫]

The Samsung Byeolpyo noodles logo, used from late 1938 until replaced in 1950s.
The Samsung Byeolpyo noodles logo, used from late 1938 until replaced in 1950s. 
The Samsung Group logo, used from late 1969 until replaced in 1979
The Samsung Group logo, used from late 1969 until replaced in 1979 
The Samsung Group logo("three stars"), used from late 1980 until replaced in 1992
The Samsung Group logo("three stars"), used from late 1980 until replaced in 1992 
The Samsung Electronics logo, used from late 1980 until replaced in 1992
The Samsung Electronics logo, used from late 1980 until replaced in 1992 
Samsung's current logo used since 1993.[೩೬]
Samsung's current logo used since 1993.[೩೬] 

ವಿವಾದ

[ಬದಲಾಯಿಸಿ]

೧೯೯೯ರಿಂದ ೨೦೦೨ರವರೆಗಿನ ಅವಧಿಯಲ್ಲಿ, ಸ್ಯಾಮ್‌ಸಂಗ್‌ ಅಮೆರಿಕಾದ ಕಂಪ್ಯೂಟರ್ ತಯಾರಕರಿಗೆ ಮಾರುವ DRAM ಚಿಪ್‌ಗಳ ಬೆಲೆಯನ್ನು ಗೊತ್ತುಮಾಡುವುದಕ್ಕಾಗಿ ಹೈನಿಕ್ಸ್ ಸೆಮಿಕಂಡಕ್ಟರ್, ಇನ್ಫೈನಿಯಾನ್ ಟೆಕ್ನಾಲಜೀಸ್, ಎಲ್ಪಿಡ ಮೆಮರಿ (ಹಿಟಾಚಿ ಮತ್ತು NEC) ಮತ್ತು ಮೈಕ್ರಾನ್ ಟೆಕ್ನಾಲಜಿ ಮೊದಲಾದವುಗಳೊಂದಿಗೆ ಸೇರಿ ಒಳಸಂಚು ನಡೆಸಿತು. ೨೦೦೫ರಲ್ಲಿ ಸ್ಯಾಮ್‌ಸಂಗ್‌ ತಪ್ಪೊಪ್ಪಿಕೊಂಡಿತು ಮತ್ತು $೩೦೦ ದಶಲಕ್ಷ ದಂಡವನ್ನು ಪಾವತಿಸಿತು, ಇದು US ಇತಿಹಾಸದಲ್ಲೇ ಎರಡನೇ ಅತಿ ಹೆಚ್ಚಿನ ಅಪರಾಧ-ವಿರೋಧಿ ದಂಡವಾಗಿದೆ.[೩೭][೩೮][೩೯][೪೦]

೨೦೧೦ರ ಮೇಯಲ್ಲಿ EU ವಿರೋಧಿ ಕಾವಲು ಸಮಿತಿಯು ೮ ಇತರ ಮೆಮರಿ ಚಿಪ್ ತಯಾರಕರೊಂದಿಗೆ ಅಕ್ರಮವಾಗಿ ಬೆಲೆ ಗೊತ್ತುಮಾಡುವುದಕ್ಕಾಗಿ ಸ್ಯಾಮ್‌ಸಂಗ್‌ನ ವಿರುದ್ಧ ೧೪೫.೭೩ ದಶಲಕ್ಷ ಯೂರೊ ದಂಡವನ್ನು ವಿಧಿಸಿತು.[೪೧]

ಇವನ್ನೂ ಗಮನಿಸಿ

[ಬದಲಾಯಿಸಿ]
  • ಕೊರಿಯಾದ ಕಂಪನಿಗಳ ಪಟ್ಟಿ
  • ಕೊರಿಯಾ-ಸಂಬಂಧಿತ ವಿಷಯಗಳ ಪಟ್ಟಿ
  • ಸಿಯೋಚೊ ಸ್ಯಾಮ್‌ಸಂಗ್‌ ನಗರ
  • ದಕ್ಷಿಣ ಕೊರಿಯಾದ ಆರ್ಥಿಕಸ್ಥಿತಿ
  • ಹೊ-ಆಮ್ ಪ್ರೈಜ್

ಟಿಪ್ಪಣಿಗಳು ಮತ್ತು ಆಕರಗಳು

[ಬದಲಾಯಿಸಿ]
  1. Kelly Olsen (2008-04-22). "Samsung chairman resigns over scandal". Associated Press via Google News. Archived from the original on 2008-04-29. Retrieved 2008-04-22.
  2. ೨.೦ ೨.೧ ೨.೨ ೨.೩ ೨.೪ ೨.೫ "Samsung Profile 2009". Samsung.com. 2008-12-31. Retrieved 2010-11-11.
  3. ಆದಾಯದ ಆಧಾರದಿಂದ ಕಂಪನಿಗಳ ಪಟ್ಟಿಯನ್ನು ಗಮನಿಸಿ
  4. "/ Technology - Samsung beats HP to pole position". Ft.com. Retrieved 2010-09-04.
  5. Economist.com ಸಕ್ಸೆಶನ್ ಅಟ್ ಸ್ಯಾಮ್‌ಸಂಗ್‌ – ಕ್ರೋವ್ನಿಂಗ್ ಸಕ್ಸೆಸ್
  6. Park, Kyunghee (2009-07-28). "July 29 (Bloomberg) – Samsung Heavy Shares Gain on Shell's Platform Orders (Update1)". Bloomberg. Retrieved 2010-11-11.
  7. "The Top 225 International Contractors2010". Enr.construction.com. 2010-08-25. Retrieved 2010-11-11.
  8. "Global 500 2009: Industry: - FORTUNE on CNNMoney.com". Money.cnn.com. 2009-07-20. Retrieved 2010-09-04.
  9. "The World's Best Amusement Parks". Forbes.com. 2002-03-21. Archived from the original on 2012-03-29. Retrieved 2010-09-11.
  10. "CHEIL WORLDWIDE INC(030000:Korea SE)". businessweek.com. 2010-09-15. Retrieved 2010-09-16.
  11. "AGENCY FAMILY TREES 2010". Advertising Age. 2010-04-26. Retrieved 2010-09-16.
  12. "2009 World's Best Hotels". Institutional Investor. 2010-03-01. Retrieved 2010-09-11.
  13. "2007 All-Asia Best Overall Generalist Sales Force Rankings". Institutional Investor. 2007-06-01. Archived from the original on 2011-05-03. Retrieved 2010-09-16. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  14. "Deloitte Vol. 2 Article. 3" (PDF). deloitte.com. Archived from the original (PDF) on 2011-04-28. Retrieved 2011-01-20. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  15. "역사관 - 삼성그룹 사이트". Samsung.co.kr. Archived from the original on 2010-01-23. Retrieved 2010-09-04. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  16. "[초 국가기업] <上> 삼성 매출>싱가포르 GDP… 국가를 가르친다 – 조선닷컴". Chosun.com. Archived from the original on 2010-11-28. Retrieved 2010-11-11. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  17. (Korean) http://www.gumisamsung.com/jsp/gp/GPHistory03.jsp
  18. "Samsung Austin Semiconductor Begins $3.6B Expansion for Advanced Logic Chips" (PDF). Austinchamber.com. 2010-06-09. Retrieved 2010-09-13.
  19. "Dubai skyscraper symbol of S. Korea's global heights". CNN. October 19, 2009. Retrieved 2009-10-19.
  20. Cho, Kevin (2009-04-24). "Samsung Says Hopes of Recovery Are 'Premature' as Profit Falls". Bloomberg. Retrieved 2010-09-04.
  21. "Global Branding Consultancy". Interbrand. Archived from the original on 2010-06-26. Retrieved 2010-09-04.
  22. "INSIDE JoongAng Daily". Joongangdaily.joins.com. 2009-08-17. Retrieved 2010-09-04.
  23. "Samsung to celebrate 100th anniversary of late founder". koreaherald.com. 2010-03-29. Archived from the original on 2011-04-29. Retrieved 2011-01-21. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  24. "Largest Department Store". community.guinnessworldrecords.com. 2009-06-29. Archived from the original on 2011-09-23. Retrieved 201-01-21. {{cite web}}: Check date values in: |accessdate= (help); More than one of |archivedate= and |archive-date= specified (help); More than one of |archiveurl= and |archive-url= specified (help)
  25. ೨೫.೦ ೨೫.೧ ಹ್ಯಾನ್ಸಲ್, ಶಿನ್ಸೆಗೆ ಡಿನೈ ರಿಲೇಶನ್ಸ್ ವಿದ್ ಸೇಹಾನ್ ಮೇ ೨೪, ೨೦೦೦. ಜೂಂಗಾಂಗ್‌ಡೈಲಿ
  26. "Samsung Heavy Industries". www.forbes.com. 2009-09-23. Retrieved 2010-09-13.
  27. "Samsung Heavy Signs Deal with Shell to Build LNG Facilities". www.hellenicshippingnews.com. 2009-07-31. Archived from the original on 2016-05-17. Retrieved 2010-09-13.
  28. "Seoul wins 40-billion-dollar UAE nuclear power deal". www.france24.com. 2009-12-28. Archived from the original on 2009-12-31. Retrieved 2010-09-29.
  29. "Korean Companies Anchor Ontario's Green Economy - January 21, 2010". www.premier.gov.on.ca. 2010-01-21. Archived from the original on 2011-05-15. Retrieved 2010-09-13. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  30. "Sony, Apple, Dell are Samsung's big buyers". www.koreatimes.co.kr. 2010-06-16. Retrieved 2010-10-26.
  31. "기업의 사회공헌] 삼성그룹, 함께 가는 `창조 경영`… 봉사도 1등". www.dt.co.kr. Retrieved 2010-09-19.
  32. Roberts, Rob (2009-10-26). "AECOM Technology buys Ellerbe Becket". kansascity.bizjournals.com. Retrieved 2010-09-19.
  33. "Pfizer And Samsung Medical Center(SMC) Collaborate On Liver Cancer". www.pfizer.be. Retrieved 2010-09-19.
  34. "AAHRPP accredits the first international center". www.aahrpp.org. Archived from the original on 2006-10-09. Retrieved 2010-09-19. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  35. "한국 10대 그룹 이름과 로고의 의미". www.koreadaily.com. 2006-07-10. Archived from the original on 2011-04-29. Retrieved 2010-09-19.
  36. "Case: Samsung 1993". Archived from the original on 2012-05-21. Retrieved 2011-01-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  37. "Samsung Agrees to Plead Guilty and to Pay $300 Million Criminal Fine for Role in Price Fixing Conspiracy". U.S. Department of Justice. Archived from the original on 2009-06-01. Retrieved 2009-05-24.
  38. Pimentel, Benjamin (2005-10-14). "Samsung fixed chip prices. Korean manufacturer to pay $300 million fine for its role in scam". San Francisco Chronicle. Retrieved 2009-05-24.
  39. "Price-Fixing Costs Samsung $300M". InternetNews.com. 2005-10-13. Archived from the original on 2007-11-14. Retrieved 2009-05-24.
  40. Flynn, Laurie J. (2006-03-23). "3 to Plead Guilty in Samsung Price-Fixing Case". New York Times. Retrieved 2009-05-24.
  41. "EU fines Samsung Elec, others for chip price-fixing". Finanznachrichten.de. 2010-05-19. Retrieved 2010-11-11.


ಬಾಹ್ಯ ಕೊಂಡಿಗಳು

[ಬದಲಾಯಿಸಿ]