ಸ್ಮಿತಾ ರಾಜನ್
ಸ್ಮಿತಾ ರಾಜನ್ (ಜನನ ೧೯೬೯) | |
---|---|
ಹಿನ್ನೆಲೆ ಮಾಹಿತಿ | |
ಜನನ | ಕೇರಳ, ಭಾರತ |
ಸಂಗೀತ ಶೈಲಿ | ಮೋಹಿನಿಯಾಟ್ಟಂ, ಭರತನಾಟ್ಯ, ಕಥಕ್ಕಳಿ, ಕೂಚಿಪುಡಿ, ಪ್ರಕಾರಗಳು |
ಅಧೀಕೃತ ಜಾಲತಾಣ | http://www.smitharajan.com/ |
ಸ್ಮಿತಾ ರಾಜನ್ (ಜನನ ೧೯೬೯ ) ಕೇರಳದ ಭಾರತೀಯ ಮೋಹಿನಿಯಾಟ್ಟಂ ಕಲಾವಿದೆ. ಅವರು ಭಾರತೀಯ ಶಾಸ್ತ್ರೀಯ ನೃತ್ಯಗಾರ ದಂಪತಿಗಳಾದ ಪದ್ಮಶ್ರೀ ಕಲಾಮಂಡಲಂ ಕೃಷ್ಣನ್ ನಾಯರ್ ಮತ್ತು ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ ಅವರ ಮೊಮ್ಮಗಳು.
ಜೀವನಚರಿತ್ರೆ
[ಬದಲಾಯಿಸಿ]ಸ್ಮಿತಾ ರಾಜನ್ ಅವರು ಕೊಚ್ಚಿಯ ತ್ರಿಪುನಿಥುರಾದಲ್ಲಿರುವ ತಮ್ಮ ತಾಯಿಯ ಅಜ್ಜಿಯ ನಿವಾಸದಲ್ಲಿ ನೃತ್ಯ ತರಬೇತಿಯನ್ನು ಪ್ರಾರಂಭಿಸಿದರು. ಬಾಲ್ಯದಲ್ಲಿ ಸ್ಮಿತಾ ನೃತ್ಯ ಮತ್ತು ಸಂಗೀತದಿಂದ ಸುತ್ತುವರೆದಿದ್ದರು. ಸ್ಮಿತಾಳ ಚಿಕ್ಕಮ್ಮ, ಕಲಾ ವಿಜಯನ್ ( ಮೋಹಿನಿಯಾಟ್ಟಂಗಾಗಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು) ಯುವ ಸ್ಮಿತಾ ಅವರ ಪ್ರತಿಭೆಯನ್ನು ಮೊದಲು ಗಮನಿಸಿದರು. ತನ್ನ ಅಜ್ಜಿಯರ ಸಂಸ್ಥೆಯಾದ ತ್ರಿಪುನಿಥುರಾದ ಕೇರಳ ಕಲಾಲಯದಲ್ಲಿ ಮಾಸ್ಟರ್ ತರಗತಿಯ ಸಮಯದಲ್ಲಿ, ಆಕೆಯ ಚಿಕ್ಕಮ್ಮ ಸ್ಮಿತಾ ಅವರು ಹಿರಿಯ ವಿದ್ಯಾರ್ಥಿಗಳೊಂದಿಗೆ ಪೂರ್ಣ ಚೋಲ್ಕೆಟ್ಟು (ವಿಶಿಷ್ಟ ಮೋಹಿನಿಯಾಟ್ಟಂ ರೆಪರ್ಟರಿಯ ಮೊದಲ ವಸ್ತು) ಅನ್ನು ಪ್ರದರ್ಶಿಸಿದರು ಅಂದಿನಿಂದ ಗುರು ಕಲಾ ವಿಜಯನ್ ಅವರಿಗೆ ಭರತನಾಟ್ಯದಲ್ಲಿ ತರಬೇತಿ ನೀಡಲು ಪ್ರಾರಂಭಿಸಿದರು. ಸ್ಮಿತಾ ತಮ್ಮ ೪ ನೇ ವಯಸ್ಸಿನಲ್ಲಿ ಭರತನಾಟ್ಯದಲ್ಲಿ ತಮ್ಮ ರಂಗೇತ್ರವನ್ನು ಮಾಡಿದರು. ಆಕೆಯ ತಾಯಿ, ಗುರು ಶ್ರೀದೇವಿ ರಾಜನ್, ಸ್ಮಿತಾಗೆ ಮೋಹಿನಿಯಾಟ್ಟಂನಲ್ಲಿ ಮೊದಲ ಪಾಠಗಳನ್ನು ಕಲಿಸಿದರು ಮತ್ತು ಸ್ಮಿತಾ ತಮ್ಮ 6 ನೇ ವಯಸ್ಸಿನಲ್ಲಿ ಮೋಹಿನಿಯಾಟ್ಟಂನಲ್ಲಿ ತಮ್ಮ ರಂಗೇತ್ರಮ್ ಅನ್ನು ಪ್ರದರ್ಶಿಸಿದರು. ನಂತರ ಅಜ್ಜಿಯ ಮಾರ್ಗದರ್ಶನದಲ್ಲಿ ಮೋಹಿನಿಯಾಟ್ಟಂಅನ್ನು ಕರಗತ ಮಾಡಿಕೊಂಡರು.
ಅವರ ಅಜ್ಜ, ಗುರು ಕಲಾಮಂಡಲಂ ಕೃಷ್ಣನ್ ನಾಯರ್, ಅವರಿಗೆ ಕಥಕ್ಕಳಿ ಕಲಿಸಿದರು ಮತ್ತು ಅವರ ಮುಖಜಾಭಿನಯ (ಮುಖದ ಅಭಿವ್ಯಕ್ತಿಗಳು)ವನ್ನು ಉತ್ತಮಗೊಳಿಸಿದರು[೧]. ಸ್ಮಿತಾ ಅವರು ಪ್ರೊಫೆಸರ್ ಕಲ್ಯಾಣಸುಂದರಂ ಅವರ ಬಳಿ ಶಾಸ್ತ್ರೀಯ ಕರ್ನಾಟಕ ಸಂಗೀತದ ತರಬೇತಿಯನ್ನೂ ಪಡೆದಿದ್ದಾರೆ. ಅವರು ೧೯೮೩ ರಿಂದ ೧೯೯೦ ರವರೆಗೆ ತಮ್ಮ ಪೋಷಕರ ಸಂಸ್ಥೆಯಾದ ಕೇರಳ ಕಲಾಲಯದಲ್ಲಿ ಕಲಿಸಿದರು.
ಸ್ಮಿತಾ ಅವರು ಭರತನಾಟ್ಯ, ಒಡಿಸ್ಸಿ ಮತ್ತು ಕೂಚಿಪುಡಿಯಂತಹ ನೃತ್ಯ ಶೈಲಿಗಳಲ್ಲಿ ಭಾರತದ ಅನೇಕ ಶಾಸ್ತ್ರೀಯ ನೃತ್ಯಗಾರರೊಂದಿಗೆ ಪ್ರದರ್ಶನ ನೀಡಿದ್ದಾರೆ.[೨]
ಅವರು ೧೨ ನೇ ವಯಸ್ಸಿನಲ್ಲಿ ವೃತ್ತಿಪರ ನೃತ್ಯಗಾರ್ತಿಯಾಗಿ ಬದಲಾದರು. ೧೯೮೦ ರಲ್ಲಿ, ಭಾರತ ಮತ್ತು ಇತರ ದೇಶಗಳಲ್ಲಿ ಮೋಹಿನಿಯಾಟ್ಟಂ ಅನ್ನು ಜನಪ್ರಿಯಗೊಳಿಸಲು ಸ್ಮಿತಾ ತನ್ನ ಅಜ್ಜಿ, ತಾಯಿ ಮತ್ತು ಅವಳ ಚಿಕ್ಕಮ್ಮನ ಜೊತೆಗೂಡಿದರು. ಅವರು ೧೯೭೯ರಿಂದ ೧೯೯೨ ರವರೆಗೆ ಕೇರಳ ಕಲಾಲಯಂನ ಪ್ರಮುಖ ಪ್ರದರ್ಶಕರಾಗಿದ್ದರು. ಇಂದಿನ ಹಲವಾರು ಮೋಹಿನಿಯಾಟ್ಟಂ ಕಲಾವಿದರಿಗೆ ಮೋಹಿನಿಯಾಟ್ಟಂ ಕಲಿಸುವಲ್ಲಿ ಅವರು ತಮ್ಮ ತಾಯಿ, ಅಜ್ಜಿ ಮತ್ತು ಅವರ ಚಿಕ್ಕಮ್ಮನಿಗೆ ಸಹಾಯ ಮಾಡಿದ್ದಾರೆ. ೨೦೧೪ರಲ್ಲಿ, ಅವರು ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.[೩]
ಇಂದು, ಸ್ಮಿತಾ ಅವರು ತಮ್ಮ ಕುಟುಂಬದೊಂದಿಗೆ ಮಿಸೌರಿಯ ಸೇಂಟ್ ಲೂಯಿಸ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ನೃತ್ಯಕ್ಷೇತ್ರ "ಟೆಂಪಲ್ ಆಫ್ ಡ್ಯಾನ್ಸ್" ಸಂಸ್ಥೆಯ ಶಾಖೆಯನ್ನು ಗುರು ಶ್ರೀದೇವಿ ರಾಜನ್ ಅವರು ಕೊಚ್ಚಿಯಲ್ಲಿ ಪ್ರಾರಂಭಿಸಿದರು, ಮಾತೃ ಸಂಸ್ಥೆ ಕೇರಳದ ಸಹಯೋಗದೊಂದಿಗೆ ಸಂಸ್ಥೆಯನ್ನು ನಡೆಸುತ್ತಿದ್ದಾರೆ.[೪][೫]
ಅವರು ಡಾ ವಿನೋದ್ ಮಂಕರ ಅವರು ನಿರ್ದೇಶಿಸಿದ ಮದರ್ ಆಫ್ ಮೋಹಿನಿಯಾಟ್ಟಂ ಎಂಬ ಶೀರ್ಷಿಕೆಯ ೨೦೧೯ ರ ಕಲಾಮಂಡಲಂ ಕಲ್ಯಾಣಿಕುಟ್ಟಿ ಅಮ್ಮ ಅವರ ಸಾಕ್ಷ್ಯಚಿತ್ರವನ್ನು ನಿರ್ಮಿಸಿದರು ಮತ್ತು ಕಾಣಿಸಿಕೊಂಡರು.[೬]
ಉಲ್ಲೇಖಗಳು
[ಬದಲಾಯಿಸಿ]- ↑ http://www.narthaki.com/info/intervw/intrvw61.html
- ↑ https://www.thetalentedindian.com/smitha-rajan-the-internationally-acclaimed-mohiniyattam-dancer/
- ↑ http://www.keralaculture.org/dance-a-ksna/466
- ↑ https://www.nytimes.com/2014/08/15/arts/dance/indian-dance-and-music-at-the-drive-east-festival.html?_r=0
- ↑ https://smitharajan.com/
- ↑ https://www.thehindu.com/entertainment/movies/vinod-mankaras-mohinyattathinte-amma-on-kalamandalam-kalyanikutty-amma-chronicles-her-contributions-in-shaping-mohiniyattam/article30459809.ece