ಸ್ಮಶಾನ ಅಧಿಪತಿ

ವಿಕಿಪೀಡಿಯ ಇಂದ
Jump to navigation Jump to search

ಸ್ಮಶಾನ ಅಧಿಪತಿ ಒಂದು ಹೆಸರು ಮತ್ತು ಇದನ್ನು ಸ್ಮಶಾನವನ್ನು ಆಳುವ ಒಬ್ಬ ದೇವತೆ (ಹೆಣ್ಣು ಅಥವಾ ಗಂಡು) ಜೊತೆಗೆ ಅವನ/ಅವಳ ಪತ್ನಿ/ಪತಿಗೆ ಕೊಡಲಾಗುತ್ತದೆ. ಸ್ಮಶಾನ ಅಧಿಪತಿ ಪದದ ಅಕ್ಷರಶಃ ಅರ್ಥ ಸ್ಮಶಾನದ ಒಡೆಯ ಎಂದು. ಹಿಂದೂ ಧರ್ಮದಲ್ಲಿ ಸ್ಮಶಾನ ಅಧಿಪತಿ ಹೆಸರನ್ನು ಭಿನ್ನ ದೇವತೆಗಳಿಗೆ ಕೊಡಲಾಗುತ್ತದೆ.

ಹಿಂದೂ ಧರ್ಮಗ್ರಂಥಗಳ ಪ್ರಕಾರ ಶಿವನನ್ನು ಸ್ಮಶಾನ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಸ್ಮಶಾನವಾಸಿನ್ ಶಿವನ ಒಂದು ಗುಣವಾಚಕವಾಗಿದೆ, ಇದರರ್ಥ ಸ್ಮಶಾನದ ನಿವಾಸಿ ಎಂದು.[೧] ಅವನ ಪತ್ನಿಯಾದ ಕಾಳಿ ಮತ್ತೊಂದು ಹೆಸರಾದ ಸ್ಮಶಾನ ಕಾಳಿಯಿಂದಲೂ ಪರಿಚಿತಳಾಗಿದ್ದಾಳೆ. ಕಪ್ಪು ಬಣ್ಣದ ಜೊತೆ ಕಾಳಿಯ ಸಂಬಂಧ ಅವಳ ಪತಿಯಾದ ಶಿವನಿಗೆ ವಿರುದ್ಧ ನಿಲ್ಲುತ್ತದೆ. ಶಿವನ ದೇಹ ಸ್ಮಶಾನದ ಬಿಳಿ ಬೂದಿಯಿಂದ ಆವೃತವಾಗಿದೆ. ಶಿವನು ಸ್ಮಶಾನದಲ್ಲಿಯೆ ಧ್ಯಾನ ಮಾಡುತ್ತಾನೆ. ಕಾಳಿ ರಕ್ಷಕಿ ಕೂಡ. ಅವಳು ದುಷ್ಟ ಶಕ್ತಿಗಳನ್ನು ದೂರ ಓಡಿಸುತ್ತಾಳೆಂದು ನಂಬಲಾಗಿದೆ.[೨] ಹಾಗಾಗಿ, ಹಿಂದೂ ಧರ್ಮದ ಪ್ರಕಾರ, ಶಿವ ಮತ್ತು ಕಾಳಿಯನ್ನು ಒಟ್ಟಾಗಿ ಸ್ಮಶಾನದೊಂದಿಗೆ ಸಂಬಂಧಿಸಲಾಗುತ್ತದೆ. ಜೊತೆಗೆ ಶಿವನ ಮತ್ತೊಂದು ಅಭಿವ್ಯಕ್ತಿಯಾದ ಭೈರವ ಮತ್ತು ಅವನ ಪತ್ನಿ ಭೈರವಿ ಸ್ಮಶಾನದಲ್ಲಿ ಇರುತ್ತಾರೆಂದು ಹೇಳಲಾಗಿದೆ. ಹಿಂದೂ ಮತ್ತು ತಾಂತ್ರಿಕ ಪಂಥದ ಪ್ರಸಿದ್ಧ ಮಹಾವಿದ್ಯಾ ಸ್ಮಶಾನವನ್ನು ಆಳುತ್ತಾರೆಂದು ಹೇಳಲಾಗಿದೆ.

ತಾಂತ್ರಿಕ ಪಂಥದಲ್ಲಿ, ಸ್ಮಶಾನವು ಶವ ಸಾಧನ ಎಂದು ಕರೆಯಲಾದ ಪ್ರಯೋಗಗಳಿಗೆ ಮುಖ್ಯ ಪ್ರದೇಶವಾಗಿ ಉದಯಿಸಿತು. ಅಘೋರಿಗಳು ಮತ್ತು ಕಾಪಾಲಿಕರು ಸ್ಮಶಾನದಲ್ಲಿ ಅಂತಹ ವಿಧಿಗಳಲ್ಲಿ ಪಾಲ್ಗೊಳ್ಳುವವರಲ್ಲಿ ಕೆಲವರು. ಅವರು ಕಾಳಿ, ತಾರಾ, ಯೋಗಿನಿ, ಡಾಕಿನಿ, ಭೈರವ, ಭೈರವಿ ಮತ್ತು ಬೇತಾಳ, ಪಿಶಾಚ, ಬ್ರಹ್ಮ ರಾಕ್ಷಸರಂತಹ ಪ್ರೇತಗಳನ್ನು ಆವಾಹಿಸಿ ಪೂಜೆ ಮಾಡುತ್ತಾರೆ, ಮತ್ತು ನಿಗೂಢ ಶಕ್ತಿಗಳನ್ನು ಪಡೆಯಲು ಸ್ಮಶಾನದಲ್ಲಿ ಅವರಿಗೆ ಬಲಿ ಕೊಡುತ್ತಾರೆ. ಈ ದೇವತೆಗಳನ್ನು ಅವರು ಸ್ಮಶಾನ ಅಧಿಪತಿ ಎಂದು ಪರಿಗಣಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. Chidbhavananda, p. 23.
  2. Shamshana Kali