ವಿಷಯಕ್ಕೆ ಹೋಗು

ಸೋದರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೋದರ ಎಂಬುದು ಒಂದು ನಾಮಪದ.


ಶಬ್ದ ವ್ಯುತ್ಪತ್ತಿ

[ಬದಲಾಯಿಸಿ]

ಸೋದರ ಪದವು ಸಂಸ್ಕೃತದ ‘ಸಹೋದರ’ ಪದದ ಕನ್ನಡ ರೂಪ. ‘ಸಹ’ ಮತ್ತು ‘ಉದರ’ ಎಂಬ ಎರಡು ಪದಗಳ ಜೋಡಣೆಯಿಂದ ‘ಸಹೋದರ’ ಪದ ಹುಟ್ಟಿದೆ.


ಸೋದರ ಎನ್ನುವದಕ್ಕೆ ’ಸಹೋದರ’ [೧],’ಒಡಹುಟ್ಟಿದವನು’ [೨] ಮತ್ತು ‘ಒಡಹುಟ್ಟುಗ’ [೩] ಎಂಬ ಅರ್ಥಗಳಿವೆ.


ಒಂದೇ ಉದರದಲ್ಲಿ ಅಥವಾ ಹೊಟ್ಟೆಯಲ್ಲಿ ಅಂದರೆ ಗರ್ಭದಲ್ಲಿ ಹುಟ್ಟಿದವರು ಸೋದರರು ಎಂದೆನ್ನಿಸಿಕೊಳ್ಳುತ್ತಾರೆ. ‘ಅಣ್ಣ’ ಎನ್ನುವದಕ್ಕೂ ‘ತಮ್ಮ’ ಎನ್ನುವದಕ್ಕೂ ‘ಸೋದರ’ ಪದವನ್ನು ಬಳಸಲಾಗುತ್ತದೆ. ಒಬ್ಬಳು ತಾಯಿಯ ಹೊಟ್ಟೆಯಲ್ಲಿ ಹುಟ್ಟಿದವನ ಬಳಿಕ ಅವಳಲ್ಲಿಯೇ ನಂತರ ಹುಟ್ಟಿದವನು ಸೋದರ ಅಂದರೆ ತಮ್ಮ ಆಗುತ್ತಾನೆ. ತಮ್ಮನನ್ನು ಉಲ್ಲೇಖಿಸಿದಾಗ ಅಣ್ಣನು ಅವನ ಸೋದರ ಆಗುತ್ತಾನೆ.


‘ಅಣ್ಣ’ ಮತ್ತು ‘ತಮ್ಮ’ ಎಂಬ ಎರಡೂ ಪದಗಳಿಗೆ ’ಸೋದರ’ ಎಂದೇ ಬಳಸಲಾಗುತ್ತದೆ. ಅಲ್ಲದೆ, ಸಾಮಾನ್ಯ ಪ್ರಯೋಗದಲ್ಲಿ ಮತ್ತು ವಿಶಾಲ ಅರ್ಥದಲ್ಲಿ ಸಮಾನ ವಯಸ್ಕರನ್ನು ಇಲ್ಲವೇ ಒಂದೇ ಗುಂಪಿನವರನ್ನು ‘ಸೋದರರು’ ಎಂದು ನಿರ್ದೇಶಿಸಲಾಗುತ್ತದೆ.


ಉಲ್ಲೇಖ

[ಬದಲಾಯಿಸಿ]
  1. ಸಂಕ್ಷಿಪ್ತ ಕನ್ನಡ ನಿಘಂಟು (ಕನ್ನಡ-ಕನ್ನಡ) - ಕನ್ನಡ ಸಾಹಿತ್ಯ ಪರಿಷತ್ತು
  2. ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) - ಪ್ರೊ. ಜಿ. ವೆಂಕಟಸುಬ್ಬಯ್ಯ ನಿಘಂಟು
  3. ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು - ಪ್ರೊ. ಡಿ. ಎನ್. ಶಂಕರ ಭಟ್
"https://kn.wikipedia.org/w/index.php?title=ಸೋದರ&oldid=1153065" ಇಂದ ಪಡೆಯಲ್ಪಟ್ಟಿದೆ