ವಿಷಯಕ್ಕೆ ಹೋಗು

ಸೈಕಲ್ ಸವಾರಿ ಮತ್ತು ಸ್ತ್ರೀವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಟಿವೊಲಿ ಅಡಿಹಾದಿ, ಲುಬ್ಲಾನ, ಸ್ಲೊವೆನಿಯದಲ್ಲಿ ಸೈಕಲ್ ಸವಾರಿ, ೨೦೧೬

ಬೈಸಿಕಲ್ (ಸೈಕಲ್) ಬಹುಪಾಲು ವಿಷಯಗಳಲ್ಲಿ ಮಹಿಳೆಯರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರಿತು. [] [] [] 1890 ರ ದಶಕದಲ್ಲಿ ಅಮೇರಿಕನ್ ಮತ್ತು ಯುರೋಪಿಯನ್ ಸಮಾಜವನ್ನು ಮುನ್ನಡೆಸಿದ ಬೈಸಿಕಲ್ ಕ್ರೇಜ್‌ನ (ಸೈಕಲ್ ಹುಚ್ಚು) ಸಮಯದಲ್ಲಿ ಬೈಸಿಕಲ್ ಮಹಿಳೆಯರ ಪಾತ್ರದ ಮೇಲೆ ಹೆಚ್ಚಿನ ಪರಿಣಾಮ ಬೀರಿತು. [] ಈ ಸಮಯದಲ್ಲಿ, ಮಹಿಳಾ ಚಳವಳಿಗೆ ಬೈಸಿಕಲ್‌ಗಳ ಕೊಡುಗೆಯೆಂದರೆ, ಅದು ಮಹಿಳೆಯರಿಗೆ ಹೆಚ್ಚಿನ ಪ್ರಮಾಣದ ಸಾಮಾಜಿಕ ಚಲನಶೀಲತೆಯನ್ನು ನೀಡಿತು. [] ಈ ಸಮಯದಲ್ಲಿ, ಸ್ತ್ರೀಸಮಾನತಾವಾದಿ ಅನ್ನಿ ಲಂಡನ್‌ಡೆರ್ರಿ ಮೊದಲ ಮಹಿಳೆಯಾಗಿ ಜಗತ್ತಿನಾದ್ಯಂತದ ಬೈಸಿಕಲ್ ಪ್ರವಾಸವನ್ನು ಸಾಧಿಸಿದಳು. [] [] [] ಅಮೇರಿಕನ್ ಬೈಸಿಕಲ್ ಕಂಪನಿಗಳು ನೀಡುವ ವೆಚ್ಚ ಮತ್ತು ವಿವಿಧ ಪಾವತಿ ಯೋಜನೆಗಳಿಂದಾಗಿ, ಬೈಸಿಕಲ್ ಸಮಾಜದ ಎಲ್ಲರಿಗೂ ಕೈಗೆಟುಕುವಂತಿತ್ತು. ಆದಾಗ್ಯೂ, ಬೈಸಿಕಲ್ ಉನ್ನತ ಮತ್ತು ಮಧ್ಯಮ ವರ್ಗದ ಶ್ವೇತವರ್ಣೀಯ ಮಹಿಳೆಯರ ಮೇಲೆ ಹೆಚ್ಚು ಪರಿಣಾಮ ಬೀರಿತು. ಇದು ಸಮಾಜದಲ್ಲಿ ಅವರ ಪಾತ್ರವನ್ನು ಖಾಸಗಿ ಅಥವಾ ದೇಶೀಯ ವಲಯದಲ್ಲಿ "ಆರೈಕೆದಾರರು, ಹೆಂಡತಿಯರು ಮತ್ತು ತಾಯಂದಿರಾಗಿ" ಉಳಿದುಕೊಳ್ಳುವುದರಿಂದ ಸಮುದಾಯದಲ್ಲಿ ಹೆಚ್ಚಿನ ಸಾರ್ವಜನಿಕ ಪಾತ್ರ ಮತ್ತು ಒಳಗೊಳ್ಳುವಿಕೆಗೆ ಪರಿವರ್ತಿಸಿತು. []

ಬೈಕ್ಸ್ ಇನ್ ಸ್ಪೇಸ್ ಬೈಸಿಕಲ್ ಮತ್ತು ಸ್ತ್ರೀವಾದದ ವಿಷಯದ ವೈಜ್ಞಾನಿಕ ಪುಸ್ತಕಗಳ ಸರಣಿಯಾಗಿದೆ. [೧೦]

ಬೈಸಿಕಲ್ ಕ್ರೇಜ್‌ಗೂ ಮುಂಚೆ

[ಬದಲಾಯಿಸಿ]

1890 ರ ಮೊದಲು, ಸೈಕಲ್ ಒಂದು ವಿಭಿನ್ನ ವಾಹನವಾಗಿತ್ತು ಮತ್ತು ಅದು ಅಷ್ಟೊಂದು ಜನಪ್ರಿಯವಾಗಿರಲಿಲ್ಲ. 1860 ಮತ್ತು 1880 ರ ದಶಕಗಳ ಮಧ್ಯದಲ್ಲಿ, ಬೈಸಿಕಲ್‌ಗಳು ಸಾಮಾನ್ಯ ಅಥವಾ ಹೈ ವೀಲರ್ (ಎತ್ತರದ ಚಕ್ರಗಳು) ಆಗಿದ್ದವು. ಅವುಗಳು ಕಲಿಯಲು ಕಷ್ಟ ಮತ್ತು ಬಳಸಲು ಅಪಾಯಕಾರಿಯಾಗಿದ್ದವು. ಸಾಮಾನ್ಯವಾದ ಸೈಕಲ್‌ ಅನ್ನು ಪುರುಷರು ಮಾತ್ರ ಬಳಸುತ್ತಿದ್ದರೆ, ಮಹಿಳೆಯರಿಗೆ ಎರಡು ಆಸನಗಳ ಬೆರೆಯುವ, ಟಂಡೆಮ್ ಮತ್ತು ಟ್ರೈಸಿಕಲ್ನಂತಹ (ಮೂರ್ಗಾಲಿ) ಸೈಕಲ್‌ಗಳನ್ನು ಬಳಸಲು ಅವಕಾಶವಿತ್ತು. 1860 ರ ದಶಕದ ಕೊನೆಯಲ್ಲಿ, ಜೋಡಿ ಸವಾರಿ ಮಹಿಳಾ-ಪುರುಷರಿಬ್ಬರಿಗೂ ನೆಚ್ಚಿನ ಸಾಮಾಜಿಕ ಚಟುವಟಿಕೆಯಾಯಿತು. ಈ ವಾಹನಗಳು ಪುರುಷರು ಮತ್ತು ಮಹಿಳೆಯರಿಗೆ ಸಮಾನ-ಸಮಾಜಿಕೀಕರಣದ ಹೊಸ ವಿಧಾನಗಳನ್ನು ಅಭಿವೃದ್ಧಿಪಡಿಸಲು ಅವಕಾಶ ಮಾಡಿಕೊಟ್ಟವು. ಆದಾಗ್ಯೂ, 1880 ರ ದಶಕದ ಮಧ್ಯಭಾಗದವರೆಗೆ, ಸೈಕ್ಲಿಂಗ್‌ನಲ್ಲಿ ಭಾಗವಹಿಸಲು ಮಹಿಳೆಯರು ಪ್ರಾಥಮಿಕವಾಗಿ ಪುರುಷರ ಮೇಲೆ ಅವಲಂಬಿತರಾಗಿದ್ದರು. ಒಬ್ಬ ಪುರುಷನ ಉಪಸ್ಥಿತಿಯು, ಮಹಿಳೆಯನ್ನು ಬೈಕು ಸವಾರಿ ಮಾಡುವ ಅಪಾಯಗಳಿಂದ ಸುರಕ್ಷಿತವಾಗಿರಿಸುತ್ತದೆ ಎಂದು ಭಾವಿಸಿ, ಆ ಮೂಲಕ ಪುರುಷರು ಅಧಿಕಾರ ಸಾಧಿಸುತ್ತಿದ್ದರು. ಆದ್ದರಿಂದ ಪುರುಷರು ಮತ್ತು ಮಹಿಳೆಯರ ನಡುವಿನ ಸಾಮಾಜಿಕತೆಯ ಬೆಳವಣಿಗೆಯಲ್ಲಿ ಸಹವರ್ತಿ ಸವಾರಿ ಕ್ರಾಂತಿಕಾರಕವಾಗಿದ್ದರೂ, ಆ ಪರಿಸ್ಥಿತಿಯಲ್ಲಿ ಪುರುಷನಿಗೆ ಬೈಸಿಕಲ್ ಮೇಲೆ ಅಧಿಕಾರವಿದೆ ಎಂದು ಪರೋಕ್ಷವಾಗಿ ಈ ಮೂಲಕ ಮಹಿಳೆಯರನ್ನು ಪುರುಷರಿಗಿಂತ ಕೆಳಮಟ್ಟದಲ್ಲಿಯೇ ಇರಿಸಿತು. [] [೧೧]

ಆಮ್ಸ್ಟರ್‌ಡ್ಯಾಮ್‌ನಲ್ಲಿ ಸೈಕಲ್ ಸವಾರಿ, 2014

ಉಡುಪು

[ಬದಲಾಯಿಸಿ]

1885 ಮತ್ತು 1895 ರ ನಡುವೆ, ಸಂಶೋಧಕರು ಮತ್ತು ಎಂಜಿನಿಯರ್‌ಗಳು ಹಿಂದಿನ ತಲೆಮಾರಿನ ಸಾಮಾನ್ಯ ಬೈಸಿಕಲ್ ಅನ್ನು ಸುಧಾರಿಸಿ, ಸುರಕ್ಷಿತ ಬೈಸಿಕಲ್ ಆಗಿ ಬದಲಾಯಿಸಿದರು. [] ಈ ಬೆಳವಣಿಗೆಗಳೊಂದಿಗೆ, ಮಹಿಳೆಯರ ಬಟ್ಟೆಗಳಿಗೆ ಸರಿಹೊಂದುವ ಸಲುವಾಗಿ, ಡ್ರಾಪ್ ಫ್ರೇಮ್‌‌ನೊಂದಿಗೆ(ಬಗ್ಗಿದ ಚೌಕಟ್ಟು) ಒಂದು ರೀತಿಯ ಸುರಕ್ಷತಾ ಬೈಸಿಕಲ್ ಅನ್ನು ವಿನ್ಯಾಸಗೊಳಿಸಲಾಯಿತು.

ಆದಾಗ್ಯೂ, ಈ ಕಾಲದ ಉದ್ದನೆಯ ಸ್ಕರ್ಟ್‌ಗಳು ಮತ್ತು ಬಿಗಿಯಾಗಿ ಜೋಡಿಸಲಾದ ರವಿಕೆಗಳು ಸೈಕ್ಲಿಂಗ್ ಅನ್ನು ಇನ್ನಷ್ಟು ದೊಡ್ಡ ಸವಾಲನ್ನಾಗಿ ಮಾಡಿತು. ಆದ್ದರಿಂದ, ಬೈಸಿಕಲ್‌ಗೆ ಅನುಕೂಲವಾಗುವಂತಹ ಹಲವಾರು ಮಾರ್ಪಡಿಸಿದ ಬಟ್ಟೆಗಳನ್ನು ಮಹಿಳೆಯರಿಗಾಗಿ ವಿನ್ಯಾಸ ಮಾಡಲಾಯಿತು.

ಮಾರ್ಪಡಿಸಿದ ಎರಡುಕಾಲಿನ ಲಂಗಗಳು, ಲಂಗಗಳನ್ನು ಮೊಣಕಾಲಿನ ಬಳಿ ಭದ್ರಗೊಳಿಸಲು ಸಾಧನಗಳು ಮತ್ತು ಬಿಗಿಯಾದ ಒಳ ಉಡುಪಿನೊಂದಿಗೆ ಸಡಿಲಾದ-ಭದ್ರವಾದ ಹೊರ‌ಉಡುಪು, ಹೀಗೆ ಹಲವಾರು ಮಾರ್ಪಾಡುಗಳು ಬೆಳಕಿಗೆ ಬಂದವು.

ಎಲ್ಲಾ ಬೈಸಿಕಲ್ ವೇಷಭೂಷಣಗಳಲ್ಲಿ, ಬ್ಲೂಮರ್ ಈ ಕಾಲಗಟ್ಟದ ಸೂಚಿಯಾಗಿ ನಮೂದಿಸಲ್ಪಡುತ್ತದೆ. ಇದನ್ನು ಪಾದದ ಬಳಿ ಸೇರುತ್ತಿದ್ದ ಪೂರ್ಣ ಪ್ಯಾಂಟ್, ತೊಡೆ-ಉದ್ದದ ಸ್ಕರ್ಟ್ನೊಂದಿಗೆ ಮತ್ತು ಫ್ಯಾಶನ್ ಜಾಕೆಟ್ನೊಂದಿಗೆ ಧರಿಸಲಾಗುತ್ತಿತ್ತು. [೧೧]

ಇಂತಹ ಬದಲಾವಣೆಗಳಿಗೆ ಮಿಶ್ರ ಪ್ರತಿಕ್ರಿಯೆ ದೊರಕಿತ್ತು. ಎಲಿಝಬೆತ್ ಕ್ಯಾಡಿ ಸ್ಟಾಂಟನ್ ಮಹಿಳೆಯರ ಸೈಕಲ್ ಸವಾರಿ ಸ್ವಾತಂತ್ರ್ಯದ ಪ್ರಶ್ನೆಬಗ್ಗೆ,

To sum up, I would say, let women ride…. If some prefer the [bulk] skirts flying in the wind exhausted in the wheels let them run the risk of their folly; If others prefer bloomers let them enjoy their choice- if others prefer knickerbockers, leave them in peace.[2]

ಅನುವಾದ: ಮಹಿಳೆಯರ ಸೈಕಲ್ ಸವಾರಿ ಸ್ವಾತಂತ್ರ್ಯದೊಟ್ಟಿಗೆ, ಅವರಿಚ್ಚೆಯ ಉಡುಗೆಯನ್ನೂ ಧರಿಸಲು ನಾವು ಬಿಡುವ.

ಬೈಸಿಕಲ್ ಸವಾರಿ ಮಾಡುವುದು ಹೇಗೆ ಎಂದು ಮಹಿಳೆಯರಿಗಾಗಿಯೇ ಬರೆದ ಪುಸ್ತಕಗಳಲ್ಲಿ, ಅನೇಕ ಲೇಖಕರು ಬೈಸಿಕಲ್ ವೇಷಭೂಷಣಗಳನ್ನು ಧರಿಸುವುದರಿಂದ ಸವಾರಿ ಮಾಡುವುದು ಸುಲಭವಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ.[೧೨] ಎರಡೂ ಸಂದರ್ಭಗಳಲ್ಲಿ, ಧರಿಸುವ ಬಟ್ಟೆಯ ಬಗೆಗಿನ ನಿರ್ಧಾರವು ಮಹಿಳೆಯ ವೈಯಕ್ತಿಕ ಆಯ್ಕೆಯಂತೆ ತೋರುತ್ತದೆ. ಈ ಆಯ್ಕೆಯನ್ನು ಮಾಡುವ ಮೂಲಕ, ಮಹಿಳೆಯರು ಸ್ವಲ್ಪ ಮಟ್ಟಿಗೆ ತಮ್ಮ ಜೀವನದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು. ಸಮಕಾಲೀನ ಧಿರಿಸು ಧರಿಸುವುದರಿಂದ ಸೈಕ್ಲಿಂಗ್ ಸವಾರರಿಗೆ ಹೆಚ್ಚು ಕಷ್ಟಕರವಾಗಬಹುದು ಎಂದು ಇಂತಹ ಧಿರಿಸುಗಳನ್ನು ಸಮರ್ಥಿಸಲಾಗಿತ್ತು. ಈ ಕಾರಣದಿಂದಾಗಿ ಈ ಬಟ್ಟೆಗಳನ್ನು ಧರಿಸುವ ನಿರ್ಧಾರವು ಬೈಸಿಕಲ್ ಸವಾರಿ ಮಾಡುವ ನಿರ್ಧಾರಕ್ಕೆ ನಿಕಟ ಸಂಬಂಧ ಹೊಂದಿದೆ. [೧೧]

ಮೇರಿ ಮತ್ತು ಅವಳ ಕುರಿಮರಿ, ಮೇರಿ ಬಾಸ್ಸೆಟ್ ರವರಿಂದ ಚಿತ್ರಿತ

ಬಹುಪಾಲು, ಪುರುಷರು ಬೈಸಿಕಲ್ ಉಡುಪು ಧರಿಸುವ ಮಹಿಳೆಯರ ಮುಖ್ಯ ವಿರೋಧಿಗಳಾಗಿದ್ದರು ಮತ್ತು ಅದರಲ್ಲೂ ನಿರ್ದಿಷ್ಟವಾಗಿ, ಬ್ಲೂಮೆರ್‌ಗಳ ವಿರೋಧಿಗಳಾಗಿದ್ದರು. ಈ ಕಾಲದ ಬಹಳಷ್ಟು ಹಾಡುಗಳಲ್ಲಿ ಇದನ್ನು ಕಾಣಬಹುದು. ಉದಾಹರಣೆಗೆ, ಸ್ಟಾನಿಸ್ಲಾಸ್ ಸ್ಟ್ಯಾಂಜ್ ಬರೆದ 1895 ರಿಂದ “ಮೇರಿ ಹ್ಯಾಡ್ ಎ ಲಿಟಲ್ ಲ್ಯಾಂಬ್” ನ ಒಂದು ಚಿತ್ರಣವು ಒಂದು ಪದ್ಯವನ್ನು ಹೊಂದಿದೆ:

“Dear Mary,” said the little lamb,“It gives me quite a fright To see the girls on bicycles, They’re such a novel sight.Why is it they all Bloomers wear?The sight my blood congeals.”Then Mary touched her forehead thus, And gently murmured: “Wheels.”

ಅನುವಾದ:

ಕುರಿಮರಿ ಮೇರಿಯನ್ನು "ಹುಡುಗಿಯರು ಸೈಕಲ್ ತುಳಿಯುವದನ್ನು ನೋಡಿದರೆ ನನಗೆ ಭಯವಾಗುತ್ತದೆ. ಇದೆಂತಹ ಕಾಲ್ಪನಿಕ ನೋಟ. ಅವರೆಲ್ಲ ಬ್ಲೂಮರ್‌ಗಳನ್ನು ಏಕೆ ಧರಿಸುತ್ತಾರೆ? ಈ ನೋಟ ನನ್ನ ಕಣ್ಣಿನ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ." ಎಂದು ಹೇಳಿದಾಗ, ಮೇರಿ ಮೆಲ್ಲಗೆ ಹಣೆ ಸವರಿ, "ಚಕ್ರಗಳು" ಎಂದು ಪಿಸುನುಡಿದಳು.
ಸಿಗಾರ್ ಪೆಟ್ಟಿಗೆಯ ಮೇಲಿನ ಮುಚ್ಚಳದ ಮೇಲೆ ಮುದ್ರಿಸಿದ ತೀವ್ರ ವಿಡಂಬನಾತ್ಮಕ, ಮಹಿಳೆಯರು ಬಹಳವೇ ಮುಂದುವರೆದು, ಪುರುಷರ ಸಮಾನವಾಗಿರುವುದನ್ನು ಬಿಂಬಿಸುವ ಚಿತ್ರ, 1890

ಈ ಸಂದರ್ಭದಲ್ಲಿ, ಬೈಸಿಕಲ್ ನ ಧಿರಿಸು ಮತ್ತು ಅದನ್ನು ಧರಿಸುವ ಮಹಿಳೆಯರ ಸಾಮರ್ಥ್ಯದ ಕಲ್ಪನೆಯು ಕೆಲವು ಪುರುಷರನ್ನು ತಳಮಳಗೊಳಿಸಿತು. ಅವರು ಈ ಧಿರಿಸುಗಳನ್ನು ಮತ್ತು ನಿರ್ದಿಷ್ಟವಾಗಿ ಬ್ಲೂಮೆರ್‌ಗಳನ್ನು ಕೊಳಕು ಅಥವಾ ನಾಚಿಕೆಗೇಡಿನಂತೆ ನೋಡಿದರು. ಈ ಬೈಸಿಕಲ್ ಧಿರಿಸುಗಳನ್ನು ದೈಹಿಕ ಪ್ರಾತಿನಿಧ್ಯದ ಮಹಿಳೆಯರಂತೆ ಪುರುಷರ ಗುಣಲಕ್ಷಣಗಳನ್ನು ಕಬಳಿಸುವ, ಇದರಿಂದಾಗಿ ಸ್ತ್ರೀತ್ವ ಮತ್ತು ಪುರುಷತ್ವದ ನಡುವಿನ ಗೆರೆಗಳನ್ನು ಮಸುಕಾಗಿಸುವ ಮಾಧ್ಯಮಗಳಂತೆ ಕಂಡರು. ಸ್ತ್ರೀ-ಪುರುಷರರಾಗಿ ಸಾಮಾಜಿಕವಾಗಿ ಸ್ವೀಕಾರಾರ್ಹವಾದ ಸಂಗತಿಗಳ ಬದಲಾವಣೆ ಸೂಚನೆಗಳು ಇವರಲ್ಲಿ ಭಯ ಭಿತ್ತಿತ್ತು . ಈ ಭಯವು ಬಹಿರಂಗಪಡಿಸುವ ಸಂಗತಿಯೆಂದರೆ, ಮಹಿಳೆಯರು ಹೆಚ್ಚಿನ ಸ್ವಾತಂತ್ರ್ಯ

ವನ್ನು ಅನುಭವಿಸುತ್ತಿದ್ದಾರೆ ಎಂಬ ವಾಸ್ತವಿಕ ಕಲ್ಪನೆಯಾಗಿದ್ದು, ಈ ಹಿಂದೆ ಇದನ್ನು ಪುಲ್ಲಿಂಗ ಎಂದು ನಿರೂಪಿಸಲಾಗಿದೆ. [] [೧೧]

19ನೇ ಶತಮಾನದಲ್ಲಿ ಆರೋಗ್ಯಕ್ಕಾಗಿ

[ಬದಲಾಯಿಸಿ]

ಹತ್ತೊಂಬತ್ತನೇ ಶತಮಾನದ ಕೊನೆಯಲ್ಲಿ, ವೈದ್ಯರು ಸಾರ್ವಜನಿಕವಾಗಿ ಎಲ್ಲರನ್ನೂ ಹೆಚ್ಚಾಗಿ ವ್ಯಾಯಾಮ ಮಾಡಲು ಪ್ರೋತ್ಸಾಹಿಸಲು ಪ್ರಾರಂಭಿಸಿದರು ಮತ್ತು ಸೈಕ್ಲಿಂಗ್ ಒಂದು ಜನಪ್ರಿಯ ಚಟುವಟಿಕೆಯಾಯಿತು. ಹಾಗಿದ್ದರೂ, ಅತಿಯಾದ ಸೈಕ್ಲಿಂಗ್ನ ಪರಿಣಾಮಗಳ ಬಗ್ಗೆ ವೈದ್ಯರು ಚಿಂತಿತರಾಗಿದ್ದರು, ವಿಶೇಷವಾಗಿ ಇದು ಮಹಿಳೆಯರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ. " ದಿ ಲಿಟರರಿ ಡೈಜೆಸ್ಟ್ " ನಲ್ಲಿನ 1895 ರ ಲೇಖನವು ಆ ಕಾಲದ ಸಾಹಿತ್ಯವನ್ನು ವಿಮರ್ಶಿಸಿತ್ತ, ಸೈಕಲ್ ಮುಖದ ಬಗ್ಗೆ ಚರ್ಚಿಸಿತು ಮತ್ತು "ದ ಸ್ಪ್ರಿಂಗ್‌ಫೀಲ್ಡ್ ರಿಪಬ್ಲಿಕನ್" ಪತ್ರಿಕೆಯು "ಮಹಿಳೆಯರು, ಹುಡುಗಿಯರು ಮತ್ತು ಮಧ್ಯವಯಸ್ಕ ಪುರುಷರ" ಅತಿಯಾದ ಸೈಕ್ಲಿಂಗ್ ವಿರುದ್ಧ ಎಚ್ಚರಿಕೆ ನೀಡಿತ್ತು ಎಂದು ಉಲ್ಲಖಿಸುತ್ತದೆ. [೧೩] ಸೈಕಲ್ ಮುಖವನ್ನು ಸಾಮಾನ್ಯವಾಗಿ ಕೆಂಪೇರಿದ ಮುಖ ಎಂದು ವಿವರಿಸಲಾಗಿದೆ, ಆದರೆ ಕೆಲವೊಮ್ಮೆ ಮಸುಕಾಗಿರುತ್ತದೆ. ಮತ್ತು ಕಣ್ಣುಗಳ ಕೆಳಗೆ ಕಪ್ಪು ನೆರೆಗಳ ಪ್ರಾರಂಭ, ಮತ್ತು ಯಾವಾಗಲೂ ದಣಿದಂತೆ ಕಾಣುವುದು ಸೈಕಲ್ ಮುಖದ ಗುಣಲಕ್ಷಣಗಳಾಗಿದ್ದವು. ಈ ಲೇಖನಗಳು ವಿಪರೀತ ಸೈಕ್ಲಿಂಗ್ ಮಹಿಳೆಯರನ್ನು ಮೆಡ್ಡಗಣ್ಣಿನ ಗಂಟಲುವಾಳ, ಕರುಳುವಾಳ ಮತ್ತು ಆಂತರಿಕ ಉರಿಯೂತದಂತಹ ಅನೇಕ ಕಾಯಿಲೆಗಳಿಗೆ ಗುರಿಯಾಗಿಸುತ್ತದೆ ಎಂಬ ನಂಬಿಕೆಯನ್ನು ಮುಂದಿಟ್ಟಿದ್ದವು. [೧೪] ಅವರ ಲೇಖನವನ್ನು ತರುವಾಯ ದ ಅಡ್ವರ್‌ಟಿಸರ್ನಲ್ಲಿ ಚರ್ಚಿಸಲಾಯಿತು ಮತ್ತು ವಿಶ್ಲೇಷಿಸಲಾಯಿತು. [೧೫] ಒಟ್ಟಾರೆಯಾಗಿ, ಈ ರೋಗನಿರ್ಣಯಗಳು ಈ ಅವಧಿಯಲ್ಲಿ ವೈದ್ಯರು ಮಹಿಳೆಯರನ್ನು ಮತ್ತು ಅವರ ದೇಹವನ್ನು ಹೇಗೆ ದುರ್ಬಲವಾಗಿ ನೋಡಿದ್ದಾರೆ ಎಂಬುದನ್ನು ಪ್ರತಿಫಲಿಸುತ್ತದೆ.

ಬೈಸಿಕಲ್ ಸವಾರಿ ಮಾಡುವ ಮಹಿಳೆಯರ ಬಗ್ಗೆ ವೈದ್ಯರು ಹೊಂದಿದ್ದ ಮತ್ತೊಂದು ಕಾಳಜಿ ಎಂದರೆ, ಅವರ ಲೈಂಗಿಕ ಆರೋಗ್ಯ. ಬೈಸಿಕಲ್ ಸೀಟ್, ಮಹಿಳೆಯರು ಮತ್ತು ಹುಡುಗಿಯರಿಗೆ ಹಸ್ತಮೈಥುನವನ್ನು ಕಲಿಸುತ್ತದೆ ಎಂದು ವೈದ್ಯರು ನಂಬಿದ್ದರು. ಯಾವುದನ್ನಾದರೂ ಎರಡೂ ಕಡೆ ಕಾಲು ಹಾಕಿ ಮಾಡುವ ಸವಾರಿ ಯಾವುದೇ ಮಹಿಳೆಗೂ ಸಹ ತುಂಬಾ ಪುರುಷತ್ವದ ಸಂಕೇತದಂತೆ ಕಾಣುತ್ತದೆ. ಹಸ್ತಮೈಥುನಕ್ಕೆ ಬೈಸಿಕಲ್ ಅನ್ನು ಹೇಗೆ ಬಳಸಬಹುದು ಎಂಬುದರ ಕುರಿತು ಈ ವೈದ್ಯರು ವೈದ್ಯಕೀಯ ನಿಯತಕಾಲಿಕಗಳಲ್ಲಿ ವಿವರವಾಗಿ ಬರೆದಿದ್ದಾರೆ:

ಆಮ್ಸ್ಟರ್‌ಡ್ಯಾಮ್‌ನಲ್ಲಿ ಸೈಕಲ್ ಸವಾರಿ, 2009
The saddle can be tilted in every bicycle as desired… In this way a girl… could, by carrying the front peak or pommel high, or by relaxing the stretched leather in order to let it form a deep, hammock-like concavity which would fit itself snugly over the entire vulva and reach up in front, bring about constant friction over the clitoris and labia. This pressure would be much increased by stooping forward and the warmth generated from vigorous exercise might further increase feeling.

ಅನುವಾದ:

ಸೈಕಲ್ ಕೂರುವ ಸೀಟ್‌ಅನ್ನು ಹೇಗೆ ಬೇಕೋ ಹಾಗೆ ತಿರುಗಿಸಬಹುದು .... ಇದನ್ನೇ ಉಪಯೋಗಿಸಿಕೊಂಡು, ಹುಡುಗಿಯರು... ಸೈಕಲ್ ಮೇಲೆ ನೇತಾಡುತ್ತ, ತಮ್ಮ ಚಂದ್ರನಾಡಿ ಮತ್ತು ಯೋನಿಯ ಮೇಲೆ ಉಜ್ಜಲು ಬಳಸುತ್ತಾರೆ.

ಈ ವೈದ್ಯರು ಲೈಂಗಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿರಲಿಲ್ಲ, ಬದಲಿಗೆ ಲೈಂಗಿಕ ನೈತಿಕತೆಯ ಬಗ್ಗೆ ಕಾಳಜಿ ವಹಿಸಿದ್ದರು. ಯುವತಿಯರು ಮಾನಸಿಕ ಮತ್ತು ದೈಹಿಕವಾಗಿ ಪರಿಶುದ್ಧರಾಗಿರಬೇಕು ಎಂಬ ನಿರೀಕ್ಷೆಯಿತ್ತು. ಅವರ ಲೈಂಗಿಕ ಮುಗ್ಧತೆಯನ್ನು ಕಾಪಾಡಲು ಅವರಿಗೆ ಚಿಕ್ಕ ವಯಸ್ಸಿನಿಂದಲೇ ತರಬೇತಿ ನೀಡಲಾಗುತ್ತಿತ್ತು. ಬೈಸಿಕಲ್ ಮಹಿಳೆಯರಲ್ಲಿ ಲೈಂಗಿಕ ಭಾವನೆಗಳನ್ನು ಜಾಗೃತಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬುದು ಅವರ ಲೈಂಗಿಕ ಶುದ್ಧತೆಗೆ ಧಕ್ಕೆ ತರುತ್ತದೆ ಮಾತ್ರವಲ್ಲದೆ ಲೈಂಗಿಕ ನೈತಿಕತೆಯ ಲಿಂಗ ವ್ಯಾಖ್ಯಾನಗಳನ್ನು ನಾಶಪಡಿಸುವ ಬೆದರಿಕೆಯನ್ನೂ ಹೊಂದಿತ್ತಾದ್ದರಿಂದ, ಬೈಸಿಕಲ್ ಅನ್ನು ಪುಲ್ಲಿಂಗ ಮತ್ತು ಸ್ತ್ರೀಲಿಂಗಗಳ ಗುಣಲಕ್ಷಣಗಳ ವ್ಯಾಖ್ಯಾನವನ್ನು ಮಸುಕುಗೊಳಿಸುವಂತೆ ನೋಡಲಾಗುತ್ತಿತ್ತು. []

ಬೈಸಿಕಲ್ ಧಿರಿಸಿನಲ್ಲಿರುವ ಮಹಿಳೆ ಮತ್ತು ಸ್ಕರ್ಟ್ ಮೇಲೆ ಬಟನ್ ಇದ್ದು ಅದನ್ನು ರೇನ್‌ಕೋಟ್‌ನಂತೆ ಬಳಸಬಹುದಾಗಿತ್ತು

ಪುರುಷ ವೈದ್ಯರು ಬೈಸಿಕಲ್‌ಗೆ ಸಂಬಂಧಿಸಿದಂತೆ ಮಹಿಳೆಯರ ಸಾಮರ್ಥ್ಯ ಮತ್ತು ಅವರ ದೇಹದ ದೌರ್ಬಲ್ಯವನ್ನು ಹೇಳುತ್ತಿದ್ದ ಅದೇ ಸಮಯದಲ್ಲಿ, ಮಹಿಳೆಯರು ತಮ್ಮ ದೇಹವು ಸಾಮರ್ಥ್ಯವಿರುವದನ್ನು ನಿಯತಕಾಲಿಕೆ ಲೇಖನಗಳ ಮೂಲಕ ವ್ಯಕ್ತಪಡಿಸಲು ಪ್ರಾರಂಭಿಸಿದರು. ಮೇರಿ ಬಿಸ್ಲ್ಯಾಂಡ್, ಮೇರಿ ಸಾರ್ಜೆಂಟ್ ಹಾಪ್ಕಿನ್ಸ್, ಮತ್ತು ಎಮ್ಮಾ ಮೊಫೆಟ್ ಟಿಂಗ್ ಅವರಂತಹ ಮಹಿಳೆಯರು ವೈದ್ಯಕೀಯ ಸ್ಥಳಗಳಲ್ಲಿ ಈ ವಿಷಯಗಳನ್ನು ಪ್ರಶ್ನಿಸಿದರು ಮತ್ತು ಹೊಸ ಆಲೋಚನೆಗಳನ್ನು ಉತ್ತೇಜಿಸಿದರು. ಈ ಮಹಿಳೆಯರು, ಸೈಕ್ಲಿಂಗ್ ದೀರ್ಘ-ನಿಷ್ಕ್ರಿಯ ಸ್ನಾಯುಗಳನ್ನು ಮತ್ತೆ ಕ್ರಿಯಾಶೀಲವಾಗಿಸುತ್ತದೆ ಮತ್ತು ಸವಾರರು ಭಾವನಾತ್ಮಕವಾಗಿ ಸಂತೋಷದಿಂದಿರಲು ಸಹಾಯ ಮಾಡುತ್ತದೆ ಮತ್ತು ಮಹಿಳೆಯರು ತಮ್ಮ ದೈಹಿಕ ಮಿತಿಗಳನ್ನು ತಾವೆ ನಿರ್ಧರಿಸಲು, ಬೈಸಿಕಲ್‌ ಬಳಸಲು ಪ್ರೋತ್ಸಾಹಿಸಿದರು. ಅಲ್ಲದೇ, ಮಹಿಳಾ ಸವಾರರಿಗೆ ಸಹಾಯ ಮಾಡುವ ಸಕಾರಾತ್ಮಕ ಅಂಶಗಳನ್ನು ಸಾರ್ವಜನಿಕರ ಗಮನಕ್ಕೆ ತಂದರು. ಬೈಸಿಕಲ್ ಅವರನ್ನು ಅಕ್ಷರಶಃ ಬಲಪಡಿಸುವುದಲ್ಲದೆ, ತಮ್ಮ ಸಾಮರ್ಥ್ಯಗಳಲ್ಲಿ ಹೆಚ್ಚು ವಿಶ್ವಾಸವನ್ನುಂಟು ಮಾಡುತ್ತದೆ. ಇದು ಮಹಿಳೆಯರಿಗೆ ತಮ್ಮ ದೇಹದ ಮೇಲೆ ಹೆಚ್ಚಿನ ಹಕ್ಕನ್ನು ನೀಡುವುದಲ್ಲದೆ, ಅವರ ಹಿಂದಿನ ಮನೆಯೊಳಗಿನ ಪಾತ್ರವನ್ನು ಮೀರಿ, ಸಾರ್ವಜನಿಕ ವಲಯದಲ್ಲಿ ಹೊಸ ಪಾತ್ರಗಳನ್ನು ಅನ್ವೇಷಿಸಲು ಮಾನಸಿಕವಾಗಿ ಅವರನ್ನು ಬಲಪಡಿಸುತ್ತದೆ. [೧೬]

ಬೈಸಿಕಲ್ ಉತ್ಸಾಹಿಗಳು ವೈದ್ಯಕೀಯ ಮೌಲ್ಯಮಾಪನವನ್ನು ಒಪ್ಪಲಿಲ್ಲ, ಒಬ್ಬರ ಆರೋಗ್ಯ ಮತ್ತು ಚೈತನ್ಯವನ್ನು ಸುಧಾರಿಸಲು ದೈಹಿಕ ಚಟುವಟಿಕೆ ಉತ್ತಮವಾಗಿದೆ ಎಂದೇ ಪ್ರತಿಪಾದಿಸಿದರು. [೧೭]

ಏಕವ್ಯಕ್ತಿ ಮಹಿಳಾ ಸೈಕಲ್ ಸವಾರರು

[ಬದಲಾಯಿಸಿ]

ಬೈಸಿಕಲ್ ಪ್ರವಾಸವು ಒಂದು ರೀತಿಯ ಸಾಹಸ ಪ್ರಯಾಣವಾಗಿದೆ, ಆ ಮೂಲಕ ಪ್ರಯಾಣಿಕನು ಬೈಸಿಕಲ್ ಅನ್ನು ಸಾರಿಗೆಯ ಪ್ರಮುಖ ಸಾಧನವಾಗಿ ಬಳಸುತ್ತಾನೆ. ಬೈಸಿಕಲ್ ಪ್ರಯಾಣಿಕನು ತನ್ನ ಸಾಧನಗಳನ್ನು ಸಾಗಿಸಲು ಬುಟ್ಟಿಗಳನ್ನೂ ಸಹ ಬಳಸಬಹುದು. ಟೆಂಟ್ ಉಪಕರಣಗಳು, ಅಡುಗೆ ಪರಿಕರಗಳು, ಪ್ರಥಮ ಚಿಕಿತ್ಸಾ ಔಷಧಿಗಳು, ದುರಸ್ತಿ ಸಾಧನಗಳು, ಅಡುಗೆ ಇಂಧನ, ನೀರಿನ ಪಾತ್ರೆಗಳು ಮತ್ತು ಅನೇಕ ದಿನಗಳ ಆಹಾರ ಸರಬರಾಜುಗಳನ್ನು ಒಳಗೊಂಡ ಅಂತಹ ಪ್ರಯಾಣವು ಸಂಪೂರ್ಣವಾಗಿ ಸ್ವಾವಲಂಬಿ ಮತ್ತು ಸ್ವಾಯತ್ತತೆಯನ್ನು ಹೊಂದಿರಬಹುದು. ವುಮೆನ್ ಸೈಕಲ್ ದಿ ವರ್ಲ್ಡ್ ಅಂತಹ ವೆಬ್‌ಸೈಟ್‌ಗಳಲ್ಲಿ ಒಂದಾಗಿದೆ, ಇದು ಏಕವ್ಯಕ್ತಿ ಮಹಿಳಾ ದೂರದ-ಸೈಕ್ಲಿಸ್ಟ್‌ಗಳನ್ನು ಮತ್ತು ಅವರ ಬ್ಲಾಗ್ ಅನ್ನು ನೀಡುತ್ತದೆ. [೧೮] ಉದಾಹರಣೆಗೆ, ರೆಬೆಕಾ ಲೋವೆ ಇರಾನ್ ದಾಟಿದರು, ಡೆರ್ಲಾ ಮರ್ಫಿ ಅಫ್ಘಾನಿಸ್ತಾನವನ್ನು ದಾಟಿದರು ಮತ್ತು ಹೆಲೆನ್ ಲಾಯ್ಡ್ ಆಫ್ರಿಕಾವನ್ನು ದಾಟಿದರು. [೧೯] [೨೦] ಏಕವ್ಯಕ್ತಿ ಮಹಿಳಾ ಸೈಕಲ್ ಸವಾರಳಾದ ಲೊರೆಟ್ಟಾ ಹೆಂಡರ್ಸನ್ ಬರೆದ ವಾವ್ - ವುಮೆನ್ ಆನ್ ವೀಲ್ಸ್ (WOW) ಪುಸ್ತಕವು ಜಾಗತಿಕವಾಗಿ 245 ಏಕವ್ಯಕ್ತಿ ಮಹಿಳಾ ಸೈಕಲ್ ಪ್ರಯಾಣಿಕರನ್ನು ವರದಿ ಮಾಡಿದೆ. [೨೧] 1894-95ರ ಹಿಂದೆಯೇ ವಿಶ್ವಕ್ಕೆ ಸೈಕ್ಲಿಂಗ್ ಮಾಡಿದ ಮೊದಲ ಮಹಿಳೆ, ಅನ್ನಿ ಲಂಡಂಡರಿ. []

ಏಕವ್ಯಕ್ತಿ ಸ್ತ್ರೀ ದೂರದ-ಸೈಕ್ಲಿಸ್ಟ್‌ಗಳಿಗೆ ಸುರಕ್ಷತೆ ಮತ್ತು ಸುರಕ್ಷತೆಯ ಸಮಸ್ಯೆಗಳನ್ನು ಮೊದಲ ಬಾರಿಗೆ ಭೇಟಿಯಾದವರು ಹೆಚ್ಚಾಗಿ ಎತ್ತುತ್ತಾರೆ. [೨೨] [೨೩] ರಸ್ತೆ ಮತ್ತು ಗಮ್ಯಸ್ಥಾನವನ್ನು ಸಂಶೋಧಿಸುವುದು, ರಸ್ತೆಯಲ್ಲಿ ಬೇರೆಲ್ಲ ವಾಹನ ಚಾಲಕರಿಗೆ ಗೋಚರಿಸುವುದು, ಮತ್ತು ಕ್ಯಾಂಪಿಂಗ್, ಹಾಸಿಗೆ ಮತ್ತು ಉಪಾಹಾರ ಮತ್ತು ಮುಂದೆ ಬೆಚ್ಚಗಿನ ಸ್ನಾನದಂತಹ ವಸತಿ ಆಯ್ಕೆಗಳನ್ನು ಯೋಜಿಸುವಂತಹ ಉತ್ತೇಜಕ ಮಾತುಗಳು ಮತ್ತು ಉಪಯುಕ್ತ ಸಲಹೆಗಳೊಂದಿಗೆ ಇಂತಹ ಮೂಲಗಳು ಆಗಾಗ್ಗೆ ಬರುತ್ತವೆ. [೨೪] [೨೫] [೨೬]

ಪ್ರಕಟಣೆಗಳು

[ಬದಲಾಯಿಸಿ]
"ಅ ವ್ಹೀಲ್ ವಿಥಿನ್ ಅ ವ್ಹೀಲ್" ಪುಸ್ತಕದ ಒಂದು ಪುಟ

1890 ರ ದಶಕದಲ್ಲಿ, ಅನೇಕ ಮಹಿಳೆಯರು ಮತ್ತು ಕೆಲವು ಪುರುಷರು ಬೈಸಿಕಲ್ ಸವಾರಿ ಮಾಡುವುದು ಹೇಗೆ ಎಂದು ತಿಳಿಯಲು ಮಹಿಳೆಯರಿಗೆ ಸಹಾಯ ಮಾಡುವ ಸಲುವಾಗಿ ಸ್ವ-ಸಹಾಯ ಪುಸ್ತಕಗಳನ್ನು ಬರೆದರು. ಈ ಪುಸ್ತಕಗಳಲ್ಲಿ, ಅವರು ತಮ್ಮ ಜೀವನದ ಮೇಲೆ ಬೈಸಿಕಲ್‌ನ ಪ್ರಭಾವದ ಬಗ್ಗೆ ಸಲಹೆಗಳು ಮತ್ತು ವೈಯಕ್ತಿಕ ಅಭಿಪ್ರಾಯಗಳನ್ನು ನೀಡಿದರು. ವುಮನ್ಸ್ ಕ್ರಿಶ್ಚಿಯನ್ ಟೆಂಪರೆನ್ಸ್ ಯೂನಿಯನ್ (ಡಬ್ಲ್ಯುಸಿಟಿಯು) ನ ರಾಷ್ಟ್ರೀಯ ಅಧ್ಯಕ್ಷ ಫ್ರಾನ್ಸಿಸ್ ಎಲಿಜಬೆತ್ ವಿಲ್ಲರ್ಡ್ ಅವರು “ಎ ವೀಲ್ ವಿಥಿನ್ ಎ ವೀಲ್” ಎಂಬ ಪುಸ್ತಕವನ್ನು ಬರೆದಿದ್ದಾರೆ, ಇದರಲ್ಲಿ ಅವರು ಸವಾರಿ ಮಾಡಲು ಕಲಿಯುವುದರ ಮೂಲಕ ತಾವು ಪಡೆದ ಸಂತೋಷ ಮತ್ತು ಆರೋಗ್ಯ ಪ್ರಯೋಜನಗಳನ್ನು ಚರ್ಚಿಸುತ್ತಾರೆ. ಹಾಗೇ, ಪುರುಷರು ಮತ್ತು ಮಹಿಳೆಯರು ಮದ್ಯಪಾನ ಕುಡಿಯುವುದನ್ನು ತಡೆಯಲು ಬಲವಾದ ಸಾಮಾಜಿಕ ಚಟುವಟಿಕೆಯಾಗಿ ಸೈಕ್ಲಿಂಗ್ ಅನ್ನು ಹೇಗೆ ಬಳಸಿದರು ಎಂದೂ ಬರೆಯುತ್ತಾರೆ. []

ಎಲಿಜಬೆತ್ ಕ್ಯಾಡಿ ಸ್ಟಾಂಟನ್ ಬೈಸಿಕಲ್ ಮಹಿಳೆಯರನ್ನು ಶಕ್ತಿಯನ್ನು ಪಡೆಯಲು ಮತ್ತು ಸಮಾಜದಲ್ಲಿ ಹೆಚ್ಚಿನ ಪಾತ್ರಗಳನ್ನು ತೆಗೆದುಕೊಳ್ಳಲು ಪ್ರೇರೇಪಿಸುವ ಒಂದು ಸಾಧನವಾಗಿದೆ ಎಂದು ಬರೆದಿದ್ದಾರೆ. [೨೭] ಸುಸಾನ್ ಬಿ. ಆಂಥೋನಿ 1896 ರಲ್ಲಿ: "ನಾನು ಸೈಕ್ಲಿಂಗ್ ಬಗ್ಗೆ ಏನು ಎಂದು ಯೋಚಿಸುತ್ತೇನೆಂದರೆ,.ಪ್ರಪಂಚದ ಎಲ್ಲಕ್ಕಿಂತ ಹೆಚ್ಚಾಗಿ ಮಹಿಳೆಯರನ್ನು ವಿಮೋಚನೆ ಮಾಡಲು ಸೈಕ್ಲಿಂಗ್ ಹೆಚ್ಚಿನ ಪ್ರಭಾವ ಬೀರಿದೆ ಎಂದು ನಾನು ಭಾವಿಸುತ್ತೇನೆ. ಮಹಿಳೆ ಚಕ್ರದ ಮೇಲೆ ಸವಾರಿ ಮಾಡುವುದನ್ನು ನೋಡಿದಾಗಲೆಲ್ಲಾ ನಾನು ಎದ್ದುನಿಂತು, ಬಹಳ ಸಂತೋಷ ಪಡುತ್ತೇನೆ. " ಎಂದು ಹೇಳಿದರು.

ಪ್ರಯಾಣ ಮತ್ತು ಸಾಹಸದ ಜೀವನಕ್ಕೆ ಮಾರುಹೋದ ಬೀಟ್ರಿಸ್ ಗ್ರಿಮ್‌ಶಾ, ವಿಕ್ಟೋರಿಯನ್ ಸ್ವಾಮ್ಯದ ಹೆಣ್ಣುಮಕ್ಕಳನ್ನು ಹೀಗೆಂದು ವಿವರಿಸುತ್ತಾಳೆ, "ದಂಗೆಕೋರ ಮಗಳು-ಆಗ ಅವರು ಅವರನ್ನು ಕರೆಯುತ್ತಿದ್ದದು. ನಾನು ಕಷ್ಟದಿಂದ ಬೈಸಿಕಲ್ ಖರೀದಿಸಿದೆ. ನಾನು ಅದನ್ನು ನಿಯಂತ್ರಿಸದೆ, ಹಲವು ಮೈಲುಗಳಷ್ಟು ದೂರದಲ್ಲಿ ಸವಾರಿ ಮಾಡುವ ಕುದುರೆಗಳಿಗೆ ಸಾಧ್ಯವಾದಷ್ಟು ಮಿತಿಗಳನ್ನು ಮೀರಿ ಸವಾರಿ ಮಾಡಿದೆ. ಜಗತ್ತು ನನ್ನ ಮುಂದೆ ತೆರೆದುಕೊಂಡಿತು. ಮತ್ತು ನನ್ನ ಇಪ್ಪತ್ತೊಂದನೇ ಹುಟ್ಟುಹಬ್ಬದ ಉದಯವಾದ ತಕ್ಷಣ, ದಂಗೆ ಎದ್ದ ಹೆಣ್ಣುಮಕ್ಕಳಿಗೆ ಜಗತ್ತು ಏನು ಕೊಡಬಹುದೆಂದು ನೋಡಲು ನಾನು ಮನೆಯಿಂದ ದೂರ ಹೋದೆ. " [೨೮]

ಈ ಎಲ್ಲ ಮಹಿಳೆಯರ ಅನುಭವಗಳ ಒಳಗೆ, ಪ್ರಪಂಚವು ಅವರಿಗೆ ತೆರೆದುಕೊಳ್ಳುವ ಇದೇ ರೀತಿಯ ಅನುಭವವನ್ನು ಸೂಚಿಸುತ್ತಾರೆ. ಅವರು ಖಾಸಗಿ ವಲಯವನ್ನು ಸಾರ್ವಜನಿಕ ವಲಯಕ್ಕೆ ಬಿಡಬಹುದು ಮತ್ತು ಹಾಗೆ ಮಾಡುವಾಗ ಮನೆಯಲ್ಲೇ ಜೀವನ ಸವೆಸುವುದರಿಂದ ಪಾರಾಗಬಹುದಾಗಿತ್ತು. ಅಂದಿನ ಸಾಮಾಜಿಕ ರೂಢಿಗಳು ಅವರನ್ನು ಮನೆಯಲ್ಲಿಯೇ ಜೈಲಿನಲ್ಲಿರಿಸಿದ್ದವು. ಮಹಿಳೆಯರು ತಮ್ಮ ಸಮುದಾಯದಲ್ಲಿ ಸಕ್ರಿಯ ಪಾತ್ರ ವಹಿಸುವ ಹೊಸ ಅವಕಾಶಗಳ ಸಾಮರ್ಥ್ಯವನ್ನು ಮಹಿಳೆಯರು ಮನಗೊಂಡರು. ಈ ವಾಚನಗೋಷ್ಠಿಗಳ ಮೂಲಕ ಮಹಿಳೆಯರು ಸಮಾಜದ ಸಕ್ರಿಯ ಮತ್ತು ಸ್ವತಂತ್ರ ಸದಸ್ಯರಾಗಿ ತಮ್ಮ ಸಾಮರ್ಥ್ಯವನ್ನು ನೋಡಲು ಪ್ರಾರಂಭಿಸುತ್ತಾರೆ. [೨೯] [೧೨] []

ಹೆಚ್ಚಿನ ಓದುವಿಕೆ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ Willard, Frances Elizabeth (1895). A Wheel Within a Wheel: How I Learned to Ride the Bicycle with Some Reflection By the Way. Fleming H. Revell Company. Retrieved March 23, 2019.
  2. Stanton, Elizabeth Cady. "Elizabeth Cady Stanton Papers: Speeches and Writings- 1902 Articles; Undated; "Shall Women Ride the Bicycle?" undated". Library of Congress. Library of Congress. Retrieved 23 March 2019.
  3. ೩.೦ ೩.೧ ೩.೨ ೩.೩ Harmond, Richard (1971). "Progress and Flight: An Interpretation of the American Cycle Craze of the 1890s". Journal of Social History. 5 (2): 235–257. doi:10.1353/jsh/5.2.235. JSTOR 3786413.
  4. Rubinstein, David (1977). "Cycling in the 1890s". Victorian Studies. 21 (1): 47–71. JSTOR 3825934.
  5. ೫.೦ ೫.೧ Hallenbeck, Sarah (2010). "Riding Out of Bounds: Women Bicyclists' Embodied Medical Authority". Rhetoric Review. 29 (4): 327–345. doi:10.1080/07350198.2010.510054. JSTOR 40997180.
  6. Blickenstaff, Brian (23 September 2016). "Annie Londonderry: the Self-Promoting Feminist Who Biked Around the World". Vice (in ಇಂಗ್ಲಿಷ್). Retrieved 1 March 2020.
  7. "10 Things you Didn't Know about Annie Londonderry". Total Women's Cycling. Archived from the original on 18 ಏಪ್ರಿಲ್ 2023. Retrieved 1 March 2020.
  8. ೮.೦ ೮.೧ "First woman to cycle the globe begins journey". Jewish Women's Archive. 25 June 1894. Retrieved September 21, 2016.
  9. Petty, Ross D. (2010). "Bicycling in Minneapolis in the Early 20th Century". Minnesota History. 62 (3): 66–101. JSTOR 25769527.
  10. "Bikes in Space | Taking the Lane". takingthelane.com (in ಅಮೆರಿಕನ್ ಇಂಗ್ಲಿಷ್). Retrieved 2018-08-14.
  11. ೧೧.೦ ೧೧.೧ ೧೧.೨ ೧೧.೩ Christie-Robin, J.; Ozada, B. T.; Lòpex-Gydosh, D. (2012). "From Bustles to Bloomers: Exploring the Bicycle's Influence on American Women's Fashion, 1880-1914". The Journal of American Culture. 35 (4). ಟೆಂಪ್ಲೇಟು:ProQuest.
  12. ೧೨.೦ ೧೨.೧ Brown, Herbert E. (1895). Betsey Jane on Wheels: A Tale of the Bicycle Craze. W. B. Conkey.
  13. "The 'Bicycle Face'". The Literary Digest. 11 (19): 8 (548). 7 September 1895.
  14. Shadwell, A. (1 February 1897). "The hidden dangers of cycling". National Review. Archived from the original on 2 ನವೆಂಬರ್ 2019. Retrieved 28 ಮಾರ್ಚ್ 2020.
  15. "The Intoxicating Bicycle". The Advertiser. Adelaide. 16 March 1897. p. 6.
  16. Garvey, Ellen Gruber (1995). "Reframing the Bicycle: Advertising-Supported Magazines and Scorching Women". American Quarterly. 47 (1): 66–101. doi:10.2307/2713325. JSTOR 2713325.
  17. Herlihy, David V. (2006). Bicycle: The History. Yale University Press. pp. 270–273. ISBN 978-0300120479.
  18. "About". Women Cycle The World. Archived from the original on 29 ಫೆಬ್ರವರಿ 2020. Retrieved 29 February 2020. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  19. "Is it foolish for a woman to cycle alone across the Middle East?". BBC News. 1 April 2017. Retrieved 29 February 2020.
  20. Lloyd, Helen (2013). Desert snow : one girl's take on Africa by bike. ISBN 9780957660601.
  21. Rosemary (14 October 2016). "WOW - Women on Wheels - a book for women cyclists". Women Travel The World.
  22. Buhring, Juliana. "Is It Safe For Women To Go Bicycle Touring Alone?". bicycletouringpro.com. Retrieved 29 February 2020.
  23. "Is It Safe For Women To Go Bicycle Touring Alone?". bicycletouringpro.com. Retrieved 29 February 2020.
  24. Lesley Reader; Lesley Ridout (2015). The Rough Guide to First-Time Asia. The Rough Guide.
  25. Sheelagh (2019). "7 Tips for a Safe Solo Bike Tour". sheelaghdaly.com.
  26. Anna Kitlar (2017). "Anna Kitlar ~ Bikexploring ~ Bikepacking". bicycletravellingwomen.com. Archived from the original on 2020-02-18. Retrieved 2020-03-28. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  27. Vivanco, Luis Antonio (2013). Reconsidering the Bicycle: An Anthropological Perspective on a New (old) Thing. Routledge. pp. 32–34. ISBN 978-0415503884.
  28. Grimshaw, Beatrice (April 1939). "How I found adventure". Retrieved 6 August 2016.
  29. Ward, Maria E. (1896). Bicycling For Ladies. Brentano's.