ಸೈಂಟ್ ಮೇರೀಸ್ ದ್ವೀಪ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೈಂಟ್ ಮೇರೀಸ್ ದ್ವೀಪ.
ಸೈಂಟ್ ಮೇರೀಸ್ ದ್ವೀಪ. ನಗರದ ಪಕ್ಷಿನೋಟ
India-locator-map-blank.svg
Red pog.svg
ಸೈಂಟ್ ಮೇರೀಸ್ ದ್ವೀಪ.
ರಾಜ್ಯ
 - ಜಿಲ್ಲೆ
Karnataka
 - Udupi
ನಿರ್ದೇಶಾಂಕಗಳು 13.3795° N 74.6730° E
ವಿಸ್ತಾರ
 - ಎತ್ತರ
 km²
 - 10 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
Four Islands -Coconut Island, the North Island, the Daryabahadurgarh Island and the South Island

'ಸೈಂಟ್ ಮೇರೀಸ್ ದ್ವೀಪ ಕರ್ನಾಟಕ ರಾಜ್ಯದ ಉಡುಪಿ ಜಿಲ್ಲೆಯ ಮಲ್ಪೆಯ ಸಮುದ್ರ ಕಿನಾರೆಯಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ದ್ವೀಪ. ಸೈಂಟ್ ಮೇರೀಸ್ ದ್ವೀಪವನ್ನು Coconut Island ಎಂದು ಇನ್ನೊಂದು ಹೆಸರಿನ್ನಲ್ಲಿ ಕರೆಯುತ್ತಾರೆ. ಕಾಲೊಮ್ನಾರ್ ಬಾಲೆಸ್ಟಿಕ್ ಲಾವಾದಿಂದಾಗಿ ಈ ದ್ವೀಪ ಬಹಳ ಹೆಸರುವಾಸಿ ಯಾಗಿದೆ[೧]. ಕರ್ನಾಟಕ ರಾಜ್ಯದ ಕೇವಲ ೪ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಸೈಂಟ್ ಮೇರೀಸ್ ದ್ವೀಪವು ಒಂದು ಹಾಗು ದೇಶದ ೨೬ ಭೂವೈಜ್ಞಾನಿಕ ಸ್ಮಾರಕಗಳಲ್ಲಿ ಒಂದು ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣೆ ಇಲಾಖೆ ಘೋಷಿಸಿದೆ,

ಇತಿಹಾಸ[ಬದಲಾಯಿಸಿ]

ಇದರ ಮೊದಲ ಹೆಸರು "ತೋನ್ಸೆ ಪಾರ್"...ಇತಿಹಾಸದ ಪ್ರಕಾರ ೧೪೯೭ರಲ್ಲಿ ಪೋರ್ಚುಗೀಸ್‌ ಶೋಧಕ ವಾಸ್ಕೋ ಡ ಗಾಮ , ಯುರೋಪ್‌ನಿಂದ ಭಾರತದ ಕಡೆಗೆ ಸಾಗರ ಮಾರ್ಗದಲ್ಲಿ ಪ್ರಯಾಣಿಸುವಾಗ ಈ ದ್ವೀಪದಲ್ಲಿ ಇಳಿದನೆಂದು ಹಾಗು ಅಲ್ಲಿ ಯೆಸು ಕ್ರಿಸ್ತನ ಕ್ರೊಸ್ಅನ್ನು ನೆಟ್ಟು "El Padron de Santa Maria" ಅಂದರೆ "ತಾಯಿ ಮೇರಿಗಾಗಿ ಸಮರ್ಪಿಸಿದ ತಾಣ" ಎಂದು ಹೆಸರಿಟ್ಟ ಎಂದು ನಂಬಲಾಗಿದೆ. ಆದರಿಂದಾಗಿ ಈಗಿನ ಸೈಂಟ್ ಮೇರೀಸ್ ದ್ವೀಪ ಹೆಸರನ್ನು ಪಡೆಯಿತು ಎನ್ನಲಾಗಿದೆ[೨]."ನಮನ"

ಭೂವೈಜ್ಞಾನ ಹಾಗು ಸ್ಥಳವಿವರಣೆ[ಬದಲಾಯಿಸಿ]

ಸೈಂಟ್ ಮೇರೀಸ್ ದ್ವೀಪವು ೪ ದ್ವೀಪಗಳ ಸಮೂಹದಿಂದಾಗಿದೆ. ೪ ದ್ವೀಪಗಳಲ್ಲಿನ ಒಂದಾದ ಉತ್ತರದ ದ್ವೀಪ basaltic rockಗಳಿಂದಾಗಿ ರಚನೆಯಾಗಿ ಷಡ್ಭುಜ ಶಿಲಾಸ್ತರಗಳ ಸಮೂಹವಾಗಿದೆ. ಈ ಶಿಲಾಸ್ತರಗಳ ಸಮೂಹ ದೇಶದ ಏಕಮಾತ್ರ ಎನ್ನಲಾಗಿದೆ. ದ್ವೀಪದ ವಿಸ್ತಾರವು ೫೦೦ ಮೀ (೧,೬೪೦.೪ ಫೀ). ಉದ್ದಕ್ಕೀದ್ದು ಅಗಲವು ೧೦೦ ಮೀ ಇದೆ. ದ್ವೀಪದ ತುಂಬೆಲ್ಲಾ ತೆಂಗಿನ ಮರಗಳು ಇವೆ. ದ್ವೀಪದಲ್ಲಿ ಮನುಷ್ಯ ನೆಲೆ ಇಲ್ಲ[೩][೪]. ಉತ್ತರ-ದಕ್ಷಿಣ ಹೊಂದಾಣಿಕೆಯಲ್ಲಿರುವ ದ್ವೀಪವು ೪ ದೊಡ್ದ ದ್ವೀಪ ಸಮೂಹದಿಂದಾಗಿ ರಚನೆಯಾಗಿದೆ. ಈ ೪ ದೊಡ್ದ ದ್ವೀಪಗಳನ್ನು ೧. ಕೊಕೊನೆಟ್ ದ್ವೀಪ ೨. ಉತ್ತರ ದ್ವೀಪ ೩. ದೈರ್ಯಬಹಾದ್ದೂರ ದ್ವೀಪ ಹಾಗು ೪. ದಕ್ಷಿಣ ದ್ವೀಪ ಎಂದು ಕರೆಯಲಾಗುತ್ತದೆ.

ದ್ವೀಪದ ಛಾಯಾಚಿತ್ರಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  2. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
  4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.