ಸೇವಾಗ್ರಾಮ್
ಸೇವಾಗ್ರಾಮ್ (ಅಂದರೆ "ಸೇವೆಗಾಗಿ/ಒಂದು ಪಟ್ಟಣ") ಭಾರತದ ಮಹಾರಾಷ್ಟ್ರ ರಾಜ್ಯದ ಒಂದು ಪಟ್ಟಣವಾಗಿದೆ. ಇದು ಮಹಾತ್ಮ ಗಾಂಧಿಯವರ ಆಶ್ರಮದ ಸ್ಥಳ ಮತ್ತು ೧೯೩೬ ರಿಂದ ೧೯೪೮ರವರೆಗೆ ಅಂದರೆ ಅವರ ಮರಣದವರೆಗೆ ಅವರ ನಿವಾಸವಾಗಿತ್ತು [೧] ಸಬರಮತಿಯ ನಂತರ, ಮಹಾತ್ಮ ಗಾಂಧಿಯವರ ನಿವಾಸದಿಂದಾಗಿ ಸೇವಾಗ್ರಾಮ ಆಶ್ರಮವು ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. [೨]
ಅವಲೋಕನ
[ಬದಲಾಯಿಸಿ]ಸೇವಾಗ್ರಾಮ್, ಮೂಲತಃ ಸೆಗಾಂವ್, ವಾರ್ಧಾದಿಂದ ೮ ಕಿ.ಮೀ ದೂರದಲ್ಲಿರುವ ಒಂದು ಸಣ್ಣ ಹಳ್ಳಿ. ಗಾಂಧಿಯವರು ಹಳ್ಳಿಯ ಹೊರವಲಯದಲ್ಲಿ ಆಶ್ರಮವನ್ನು ಸ್ಥಾಪಿಸಿದ್ದರು. [೩] ಗಾಂಧಿಯವರ ಶಿಷ್ಯರಾದ ವಾರ್ಧಾದ ಸೇಠ್ ಜಮ್ನಾಲಾಲ್ ಬಜಾಜ್ ಅವರು ಸುಮಾರು ೩೦೦ ಎಕರೆ (೧.೨ ಕಿಮೀ) ಭೂಮಿ ಆಶ್ರಮಕ್ಕೆ ಲಭ್ಯವಾಗುವಂತೆ ಮಾಡಿದರು. [೪] ಆಶ್ರಮದ ಬಳಿ ಭಾರತದ ಸ್ವಾತಂತ್ರ್ಯ ಹೋರಾಟದ ಕಲಾಕೃತಿಗಳನ್ನು ಸಂರಕ್ಷಿಸುವ ವಸ್ತುಸಂಗ್ರಹಾಲಯವಿದೆ.
ಇತಿಹಾಸ
[ಬದಲಾಯಿಸಿ]೧೯೩೦ರಲ್ಲಿ ಸಬರಮತಿ ಆಶ್ರಮದಿಂದ ಅಹಮದಾಬಾದ್‌ಗೆ ಉಪ್ಪಿನ ಸತ್ಯಾಗ್ರಹಕ್ಕಾಗಿ ಗಾಂಧಿಯವರು ತಮ್ಮ ಪಾದಯಾತ್ರೆಯನ್ನು (ಪಾದಯಾತ್ರೆ) ಪ್ರಾರಂಭಿಸಿದಾಗ, ಅವರು ಭಾರತಕ್ಕೆ ಸ್ವಾತಂತ್ರ್ಯವನ್ನು ಸಾಧಿಸುವವರೆಗೆ ಸಾಬರಮತಿಗೆ ಹಿಂತಿರುಗದೆ ಇರಲು ನಿರ್ಧರಿಸಿದರು. ಗಾಂಧಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದರು. ಬಿಡುಗಡೆಯಾದ ನಂತರ ಅವರು ಭಾರತದಾದ್ಯಂತ ಪ್ರವಾಸ ಮಾಡಿದರು. ಅವರು ಮಧ್ಯ ಭಾರತದಲ್ಲಿನ ಒಂದು ಹಳ್ಳಿಯನ್ನು ತನ್ನ ಪ್ರಧಾನ ಕಛೇರಿಯನ್ನಾಗಿ ಮಾಡಲು ನಿರ್ಧರಿಸಿದರು. [೫] ಅವರು ೧೯೩೪ರಲ್ಲಿ ತಮ್ಮ ಅನುಯಾಯಿ ಮತ್ತು ಕೈಗಾರಿಕೋದ್ಯಮಿ ಜಮ್ನಾಲಾಲ್ ಬಜಾಜ್ ಅವರ ಆಹ್ವಾನದ ಮೇರೆಗೆ ವಾರ್ಧಾಗೆ ಬಂದರು ಮತ್ತು ವಾರ್ಧಾದಲ್ಲಿರುವ ಜಮ್ನಾಲಾಲ್ ಅವರ ಬಂಗಲೆ (ಬಜಾಜ್ವಾಡಿ) [೬] ಮತ್ತು ಮಹಿಳಾ ಆಶ್ರಮದ ಪ್ರಾರ್ಥನಾ ಮಂದಿರದಲ್ಲಿ ಸ್ವಲ್ಪ ಕಾಲ ಇದ್ದರು. [೭]
೧೯೩೬ರ ಏಪ್ರಿಲ್ ರಲ್ಲಿ, ಗಾಂಧೀಜಿ ವಾರ್ಧಾದ ಹೊರವಲಯದಲ್ಲಿರುವ ಸೆಗಾಂವ್ [೮] ಎಂಬ ಗ್ರಾಮದಲ್ಲಿ ತಮ್ಮ ನಿವಾಸವನ್ನು ಸ್ಥಾಪಿಸಿದರು, ಅದನ್ನು ಅವರು ಸೇವಾಗ್ರಾಮ್ ಎಂದು ಮರುನಾಮಕರಣ ಮಾಡಿದರು, ಅಂದರೆ 'ಸೇವೆಯ ಗ್ರಾಮ' ಎಂಬ ಅರ್ಥ ನೀದುತ್ತದೆ. ಸೇವಾಗ್ರಾಮಕ್ಕೆ ಬಂದಾಗ ಗಾಂಧೀಜಿಯವರಿಗೆ ೬೭ ವರ್ಷವಾಗಿತ್ತು. ಗಾಂಧಿ ಮತ್ತು ಕಸ್ತೂರಬಾ ಮತ್ತು ಅವರ ಅನುಯಾಯಿಗಳಿಗೆ ಆಶ್ರಮದಲ್ಲಿ ನಿರ್ಮಿಸಲಾದ ಸಣ್ಣ ಮನೆಗಳು ವಿಶಿಷ್ಟವಾದ ಹಳ್ಳಿಯ ಮನೆಗಳನ್ನು ಹೋಲುತ್ತವೆ. [೯] ಜಾತಿಯ ತಡೆಗೋಡೆಯನ್ನು ಮುರಿಯಲು ಆಶ್ರಮವು ಸಾಮಾನ್ಯ ಅಡುಗೆಮನೆಯಲ್ಲಿ ಕೆಲವು ಹರಿಜನರನ್ನು ನೇಮಿಸಿಕೊಂಡಿತು. ವಿನೋಬಾ ಭಾವೆಯವರ ಪರಮಧಾಮ ಆಶ್ರಮವು ಧಾಮ್ ನದಿಯ ದಡದಲ್ಲಿದೆ. ಸೇವಾಗ್ರಾಮದಲ್ಲಿ ಪ್ರಮುಖ ರಾಷ್ಟ್ರೀಯ ವಿಷಯಗಳು ಮತ್ತು ಚಳುವಳಿಗಳ ಕುರಿತು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ದೇಶದ ಅಂತರ್ಗತ ಶಕ್ತಿಗೆ ಸರಿಹೊಂದುವಂತೆ ಗಾಂಧೀಜಿ ರೂಪಿಸಿದ ರಾಷ್ಟ್ರ ನಿರ್ಮಾಣ ಚಟುವಟಿಕೆಗಳಿಗಾಗಿ ಹಲವಾರು ಸಂಸ್ಥೆಗಳಿಗೆ ಇದು ಕೇಂದ್ರ ಸ್ಥಳವಾಯಿತು.
ಸೇವಾಗ್ರಾಮ ಮಹಾರಾಷ್ಟ್ರದ ವಾರ್ಧಾ ಪಟ್ಟಣದಿಂದ ೮ ಕಿಮೀ ಮತ್ತು ೭೫ ನಾಗ್ಪುರದಿಂದ ಕಿ.ಮೀ ದೂರದಲ್ಲಿದೆ. ಅನೇಕ ಪ್ರಾಯೋಗಿಕ ತೊಂದರೆಗಳ ನಡುವೆಯೂ, ಗಾಂಧೀಜಿ ಇಲ್ಲಿ ನೆಲೆಸಲು ನಿರ್ಧರಿಸಿದರು. ಅವರ ಪತ್ನಿ ಕಸ್ತೂರಬಾ ಅವರನ್ನು ಹೊರತುಪಡಿಸಿ ಯಾರನ್ನೂ ತನ್ನೊಂದಿಗೆ ಇಟ್ಟುಕೊಳ್ಳುವ ಯಾವುದೇ ಉದ್ದೇಶವಿಲ್ಲದಿದ್ದರೂ, ಸೇವಾಗ್ರಾಮ ಆಶ್ರಮವು ಪೂರ್ಣ ಪ್ರಮಾಣದ ಸಂಸ್ಥೆಯಾಗುವವರೆಗೆ ಕೆಲಸದ ಒತ್ತಡವು ಅವರೊಂದಿಗೆ ಹೆಚ್ಚಿನ ಸಹೋದ್ಯೋಗಿಗಳ ಅಗತ್ಯವಿತ್ತು. ಸೇವಾಗ್ರಾಮದಲ್ಲಿ ಯಾವುದೇ ಸೌಲಭ್ಯಗಳಿರಲಿಲ್ಲ, ಅಂಚೆ ಅಥವಾ ಟೆಲಿಗ್ರಾಫ್ ಕಚೇರಿಯೂ ಇರಲಿಲ್ಲ. ಪತ್ರಗಳನ್ನು ವಾರ್ಧಾದಿಂದ ತರುತ್ತಿದ್ದರು. ಈ ಪ್ರದೇಶದಲ್ಲಿ ಶೇಗಾಂವ್ ಎಂಬ ಇನ್ನೊಂದು ಗ್ರಾಮವಿತ್ತು, ಇದು ಸಂತ ಗಜಾನನ ಮಹಾರಾಜರ ನಿವಾಸದಿಂದ ಪ್ರಸಿದ್ಧವಾಗಿದೆ. ಹಾಗಾಗಿ ಗಾಂಧೀಜಿಯವರ ಪತ್ರಗಳು ದಿಕ್ಕು ತಪ್ಪಿಸುತ್ತಿದ್ದವು. ಆದ್ದರಿಂದ, ಈ ಗ್ರಾಮವನ್ನು ಸೇವಾಗ್ರಾಮ [೧೦] ಅಥವಾ 'ಸೇವೆಯ ಗ್ರಾಮ' ಎಂದು ಮರುನಾಮಕರಣ ಮಾಡಲು ೧೯೪೦ರಲ್ಲಿ ನಿರ್ಧರಿಸಲಾಯಿತು. ಗಾಂಧೀಜಿಯವರು ಜನವರಿ ೧೯೩೫ರಲ್ಲಿ ಮಂಗನವಾಡಿಯಲ್ಲಿ ತಂಗಿದ್ದರು, ೩೦ ಏಪ್ರಿಲ್ ೧೯೩೬ ರಂದು ತಮ್ಮ ಮೊದಲ ಸೇವಾಗ್ರಾಮಕ್ಕೆ ಭೇಟಿ ನೀಡಿದರು [೧೧]
ಸಾರಿಗೆ
[ಬದಲಾಯಿಸಿ]ಸೇವಾಗ್ರಾಮವು ರೈಲು ಮತ್ತು ಬಸ್ಸುಗಳ ಮೂಲಕ ಉತ್ತಮ ಸಂಪರ್ಕವನ್ನು ಹೊಂದಿದೆ. ಸೇವಾಗ್ರಾಮ ರೈಲು ನಿಲ್ದಾಣಮುಖ್ಯ ಗ್ರಾಮದಿಂದ ೬ ಕಿ.ಮೀ ದೂರದಲ್ಲಿದೆ. ಹಿಂದೆ ಈ ನಿಲ್ದಾಣಕ್ಕೆ ವಾರ್ಧಾ ಪೂರ್ವ ರೈಲು ನಿಲ್ದಾಣ ಎಂದು ಹೆಸರಿಸಲಾಗಿತ್ತು. ಸೇವಾಗ್ರಾಮ್ ಹೌರಾ-ನಾಗ್ಪುರ-ಮುಂಬೈ ಮಾರ್ಗದಲ್ಲಿರುವ ಒಂದು ನಿಲ್ದಾಣವಾಗಿದೆ. ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಪಶ್ಚಿಮಕ್ಕೆ ಹೆಚ್ಚಿನ ರೈಲುಗಳು ಈ ಮಾರ್ಗದ ಮೂಲಕ ಹಾದು ಹೋಗುತ್ತವೆ. ವರುದ್ ನಿಲ್ದಾಣವು ಹತ್ತಿರದಲ್ಲಿದೆ ಆದರೆ ಕೆಲವು ರೈಲುಗಳು ಅಲ್ಲಿ ನಿಲ್ಲುತ್ತವೆ. ಹತ್ತಿರದ ವಿಮಾನ ನಿಲ್ದಾಣವೆಂದರೆ ನಾಗ್ಪುರ ವಿಮಾನ ನಿಲ್ದಾಣ. ಇದು ೫೫ ಕಿಮೀ ದೂರದಲ್ಲಿದೆ. ಬ್ರಿಟಿಷ್ ವೈಸರಾಯ್, ಲಾರ್ಡ್ ಲಿನ್ಲಿತ್ಗೋ (ಕಚೇರಿಯಲ್ಲಿ ೧೯೩೬-೧೯೪೩) ರವರು ಬಾಪು ಕುಟಿಯಲ್ಲಿ ಹಾಟ್‌ಲೈನ್ ಅನ್ನು ಸ್ಥಾಪಿಸಿದ್ದರು. ಇದಕ್ಕೆ ಬ್ರಿಟಿಷರು ಗಾಂಧೀಜಿಯವರೊಂದಿಗೆ ನಿರಂತರ ಸಂಪರ್ಕದಲ್ಲಿರಲು ಬಯಸಿದ್ದರು ಎಂಬ ಕಾರಣವನ್ನು ನೀಡಲಾಗಿದೆ. ಲಾರ್ಡ್ ಲಿನ್ಲಿತ್ಗೋ ಒಮ್ಮೆ ಗಾಂಧಿಯವರೊಂದಿಗೆ ಸೇವಾಗ್ರಾಮ ಆಶ್ರಮದಲ್ಲಿ ಒಂದು ರಾತ್ರಿ ಕಳೆದಿದ್ದರು. [೧೨]
ಶಿಕ್ಷಣ
[ಬದಲಾಯಿಸಿ]ಸೇವಾಗ್ರಾಮವು ಭಾರತದ ಮೊದಲ ಗ್ರಾಮೀಣ ವೈದ್ಯಕೀಯ ಕಾಲೇಜಾಗಿದೆ. ಮಹಾತ್ಮ ಗಾಂಧಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮತ್ತು ಎಂಜಿನಿಯರಿಂಗ್ ಕಾಲೇಜು, ಬಾಪುರಾವ್ ದೇಶಮುಖ್ ಕಾಲೇಜ್ ಆಫ್ ಇಂಜಿನಿಯರಿಂಗ್, ಇವುಗಳು ಗ್ರಾಮೀಣ ಟ್ರಸ್ಟ್‌ನಿಂದ ನಡೆಸಲ್ಪಡುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "The History of Sevagram Ashram". gandhiashramsevagram.org/. The Gandhi Ashram at Sevagram – Official website. Retrieved 17 June 2014.
- ↑ "Sevagram | Wardha". Jamnalal Bajaj Foundation. Retrieved 2022-09-15.
- ↑ Venugopal Maddipati, "Nothingness as Scaffolding for Being: Gandhi, Madeline Slade, Architecture and the Humanisation of Sacrifice's Massive Ecological Existence, Segaon, 1936–37" https://www.tandfonline.com/doi/abs/10.1080/00856401.2018.1433445
- ↑ "Paramdham Ashram". jamnalalbajajfoundation.org. The Jamnalal Bajaj Foundation. Archived from the original on 26 May 2014. Retrieved 17 June 2014.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Venugopal Maddipati, "An Architecture of Finitude," Gandhi and Architecture: A Time for Low-Cost Housing (Oxon: Routledge, 2020): https://www.academia.edu/42743173/Gandhi_and_Architecture_A_Time_for_Low_Cost_Housing_The_Philosophy_of_Finitude_Forthcoming_July_2020_
- ↑ "Bajajwadi". jamnalalbajajfoundation.org. The Jamnalal Bajaj Foundation. Retrieved 17 June 2014.
- ↑ Desai, Mahadev (1968). Day To Day With Gandhi. Wardha: Sarva Seva Sangh Prakashan. Retrieved 17 June 2014.
- ↑ "About Sevagram". jamnalalbajajfoundation.org. The Jamnalal Bajaj Foundation. Retrieved 17 June 2014.
- ↑ Venugopal Maddipati, "Architecture as Weak Thought: Gandhi Inhabits Nothingness," Marg volume on Gandhi and Aesthetics pp. 44-51 https://www.academia.edu/41833717/Architecture_as_Weak_Thought_Gandhi_Inhabits_Nothingness_Gandhi_and_Aesthetics
- ↑ Official website of Gandhiji in Sewagram, Sevagram and Mahatma Gandhi
- ↑ Bharath, ETV. "How Sevagram became the epicentre of India's freedom struggle". ETV Bharath. ETV Bharath. Retrieved 1 February 2022.Bharath, ETV. "How Sevagram became the epicentre of India's freedom struggle". ETV Bharath. ETV Bharath. Retrieved 1 February 2022.
- ↑ Sahu, Sahu. "At Sevagram Ashram, Bapu Found His Ideal Laboratory of Social Engineering". The wire. The wire. Retrieved 1 February 2022.