ಸೂಜಿದಾರ (ಚಲನಚಿತ್ರ)
ಸೂಜಿದಾರ 2019 ರ ಕನ್ನಡ ಭಾಷೆಯ ಚಲನಚಿತ್ರವಾಗಿದ್ದು, ಮೌನೀಶ್ ಬಡಿಗೇರ್ ಬರೆದು ನಿರ್ದೇಶಿಸಿದ್ದಾರೆ, ಈ ಮೂಲಕ ಅವರು ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇದನ್ನು ಸಿನಿ ಸ್ನೇಹ ಟಾಕೀಸ್ ಬ್ಯಾನರ್ ಅಡಿಯಲ್ಲಿ ಸಚಿದ್ರನ್ ಆತ್ನಾಯಕ್ ಮತ್ತು ಅಭಿಜಿತ್ ಕೋಟೆಗಾರ್ ಜಂಟಿಯಾಗಿ ನಿರ್ಮಿಸಿದ್ದಾರೆ. ಇದರಲ್ಲಿ ಹರಿಪ್ರಿಯಾ ಮತ್ತು ಯಶವಂತ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ; ಯಶವಂತ್ ಚಿತ್ರದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಪೋಷಕ ಪಾತ್ರಗಳಲ್ಲಿ ಅಚ್ಯುತ್ ಕುಮಾರ್, ಸುಚೇಂದ್ರ ಪ್ರಸಾದ್ ಮತ್ತು ಚೈತ್ರಾ ಕೂತೂರ್ ಇದ್ದಾರೆ. ಚಿತ್ರದ ಹಿನ್ನೆಲೆ ಸಂಗೀತವನ್ನು ಎಸ್. ಪ್ರದೀಪ್ ವರ್ಮನ್ ರಚಿಸಿದ್ದಾರೆ ಮತ್ತು ಧ್ವನಿಪಥವನ್ನು ಭಿನ್ನ ಷಡ್ಜ ಸಂಯೋಜಿಸಿದ್ದಾರೆ ಮತ್ತು ಛಾಯಾಗ್ರಹಣವನ್ನು ಅಶೋಕ್ ವಿ. ರಾಮನ್ ಮತ್ತು ಸಂಕಲನವನ್ನು ಮೋಹನ್ ಎಲ್.ರಂಗಖಲೆ ಮಾಡಿದ್ದಾರೆ. [೧] [೨] [೩] [೪]
ಪಾತ್ರವರ್ಗ
[ಬದಲಾಯಿಸಿ]- ಪದ್ಮಶ್ರೀ ಪಾತ್ರದಲ್ಲಿ ಹರಿಪ್ರಿಯಾ [೫]
- ಯಶವಂತ ಶೆಟ್ಟಿ
- ಅಚ್ಯುತ್ ಕುಮಾರ್
- ಸುಚೇಂದ್ರ ಪ್ರಸಾದ್
- ಚೈತ್ರಾ ಕೂತೂರ್
- ಶ್ರೇಯಾ ಅಂಚನ್
ಹಿನ್ನೆಲೆಸಂಗೀತ
[ಬದಲಾಯಿಸಿ]ಚಿತ್ರದ ಹಿನ್ನೆಲೆ ಸಂಗೀತವನ್ನು ಎಸ್. ಪ್ರದೀಪ್ ವರ್ಮನ್ ಸಂಯೋಜಿಸಿದ್ದಾರೆ ಮತ್ತು ಧ್ವನಿಪಥವನ್ನು ಭಿನ್ನ ಸಡ್ಜಾ ಸಂಯೋಜಿಸಿದ್ದಾರೆ. ಸಂಗೀತದ ಹಕ್ಕುಗಳನ್ನು ಆನಂದ ಆಡಿಯೋ ಪಡೆದುಕೊಂಡಿದೆ.
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
1. | "ಜಾರುತಿರುವೆ" | ವಿಕ್ರಂ ಹತ್ವಾರ್ | ಮಿಥುನ್ ಈಶ್ವರ್ | 4:24 |
2. | "ಹುಣ್ಣಿಮೆ ರಾತ್ರಿಯಲ್ಲಿ" | ಚೈತ್ರಾ ಕೋಟೂರ್ | ಸ್ಪರ್ಶ ಆರ್. ಕೆ. | 4:08 |
3. | "ಸೂಜಿಯೇ" | ಸಂತ ಶಿಶುನಾಳ ಶರೀಫ | ತೇಜಸ್ವಿ ಹರಿದಾಸ | 4:20 |
4. | "ಈ ಸ್ಪರ್ಶ ಏಕಾಂತ" | ಮೌನೀಶ್ ಬಡಿಗೇರ್ | ನಾಗೇಂದ್ರನಾಥ್ ನಾಯಕ್ | 3:30 |
5. | "ಜಾರುತಿರುವೆ-Female" | ಮೌನೀಶ್ ಬಡಿಗೇರ್ , ವಿಕ್ರಂ ಹತ್ವಾರ್ | ಸಂಧ್ಯಾ ಪತಕಿ | 4:40 |
ಒಟ್ಟು ಸಮಯ: | 20:28 |
ಬಿಡುಗಡೆ
[ಬದಲಾಯಿಸಿ]ಈ ಚಿತ್ರವನ್ನು 10 ಮೇ 2019 ರಂದು ಕರ್ನಾಟಕದಾದ್ಯಂತ ಸುಮಾರು 180 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಯಿತು.
ಉಲ್ಲೇಖಗಳು
[ಬದಲಾಯಿಸಿ]- ↑ "Hariprriya goes de-glam for Sooji Dhaara - Times of India". The Times of India (in ಇಂಗ್ಲಿಷ್). Retrieved 2019-05-03.
- ↑ "Hariprriya: ಬೆಲ್ ಬಾಟಂ ಜೊತೆಗೆ 'ಸೂಜಿದಾರ'ಕ್ಕೂ ಕೈ ಹಾಕಿದ ಹರಿಪ್ರಿಯಾ! - actress hariprriya lead trailer sujidara released and created new trends". Vijaya Karnataka. Retrieved 2019-05-08.
- ↑ "Haripriya next, it is Sooji Daara-Kannada News". IndiaGlitz (in ಇಂಗ್ಲಿಷ್). Retrieved 2019-05-08.
- ↑ "Harirpriya's New Film Is Soojidaara - chitraloka.com | Kannada Movie News, Reviews | Image". www.chitraloka.com. Archived from the original on 2019-05-08. Retrieved 2019-05-08.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Haripriya has seven movies lined up for release this year - Times of India". The Times of India (in ಇಂಗ್ಲಿಷ್). Retrieved 2019-05-03.