ಸೂಕ್ಷ್ಮಮಾಪಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
1.639 ± 0.005 ಮಿಮಿ ಸೂಚ್ಯಂಕವನ್ನು ಹೊಂದಿರುವ ಆಧುನಿಕ ಸೂಕ್ಷ್ಮಮಾಪಕ.

ಸೂಕ್ಷ್ಮಮಾಪಕವು ಅತ್ಯಂತ ಕಿರಿಯ ಅಂತರಗಳನ್ನು, ಕೋನಗಳನ್ನು ಅಥವಾ ಅತಿದೂರದಲ್ಲಿರುವ ಕಾಯಗಳ ನಡುವಿನ ಅಂತರವನ್ನು ನಿಷ್ಕೃಷ್ಟವಾಗಿ ಅಳೆಯುವ ಉಪಕರಣ (ಮೈಕ್ರೊಮೀಟರ್). ಇದು ಸೂಕ್ಷ್ಮದರ್ಶಕಕ್ಕೂ ದೂರದರ್ಶಕಕ್ಕೂ ಲಗತ್ತಾಗಿರುವುದು.

ಸೂಕ್ಷ್ಮಮಾಪಕಗಳು ಸಾಮಾನ್ಯವಾಗಿ (ಆದರೆ ಯಾವಾಗಲೂ ಅಲ್ಲ) ವ್ಯಾಸಮಾಪಿಗಳ ರೂಪದಲ್ಲಿರುತ್ತವೆ (ಚೌಕಟ್ಟಿನಿಂದ ಜೋಡಿಸಲ್ಪಟ್ಟಿರುವ ವಿರುದ್ಧ ತುದಿಗಳು). ಆಸರೆಗಂಬಿಯು ಬಹಳ ನಿಖರವಾಗಿ ಸಿದ್ಧಗೊಳಿಸಿದ ತಿರುಪು ಮೊಳೆಯಾಗಿರುತ್ತದೆ. ಅಳತೆ ಮಾಡಬೇಕಾದ ವಸ್ತುವನ್ನು ಆಸರೆಗಂಬಿ ಮತ್ತು ಸ್ಥೂಣದ ನಡುವೆ ಇರಿಸಲಾಗುತ್ತದೆ.

ಇವುಗಳಲ್ಲಿ ಇದು ಸೂಕ್ಷ್ಮದರ್ಶಕೀಯ ವಸ್ತುಗಳು ಅಥವಾ ಖಗೋಳ ಕಾಯಗಳ ಕಣ್ಣಿಗೆ ಕಾಣುವ ವ್ಯಾಸವನ್ನು ಅಳೆಯಲು ಬಳಸಲ್ಪಡುತ್ತದೆ. ದೂರದರ್ಶಕದೊಂದಿಗೆ ಬಳಸಲಾಗುವ ಸೂಕ್ಷ್ಮಮಾಪಕವನ್ನು ಸುಮಾರು ೧೬೩೮ರಲ್ಲಿ ಆಂಗ್ಲ ಖಗೋಳಶಾಸ್ತ್ರಜ್ಞನಾದ ವಿಲಿಯಂ ಗ್ಯಾಸಾಯ್ನ್ ಆವಿಷ್ಕರಿಸಿದನು.[೧]

ಉಲ್ಲೇಖಗಳು[ಬದಲಾಯಿಸಿ]

  1. "What is a Micrometer & How was it Developed Historically?". SGMicrometer.com. Archived from the original on 2018-02-15. Retrieved 2023-08-07.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: