ಸುಸನ್ ಬೋಯ್ಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೂಸನ್ ಬೋಯ್ಲ್
Susan Boyle.jpg
ನವೆಂಬರ್ ೨೦೦೯ರಲ್ಲಿ ಸೂಸನ್ ಬೋಯ್ಲ್
ಹಿನ್ನೆಲೆ ಮಾಹಿತಿ
ಜನ್ಮ ನಾಮ ಸೂಸನ್ ಮ್ಯಾಗ್ಡಲೀನ್ ಬೋಯ್ಲ್[೧][೨][೩]
ಮೂಲಸ್ಥಳ Blackburn, West Lothian, ಸ್ಕಾಟ್ಲೆಂಡ್
ಶೈಲಿ/ಗಳು Pop[೪], classical
ವೃತ್ತಿಗಳು Singer
ವಾಧ್ಯಗಳು Vocals
ಸಕ್ರಿಯ ವರುಷಗಳು 2009–present
L‍abels Syco, Columbia
ಜಾಲತಾಣ Susanboylemusic.com

ಸುಸನ್ ಮ್ಯಾಗ್ಡಾಲೆನ್ ಬೊಯ್ಲ್ (1 ಏಪ್ರಿಲ್ 1961ರಲ್ಲಿ ಜನನ)[೧][೫][೬], ಇವರು ಸ್ಕಾಟ್ಲೆಂಡಿನ ಗಾಯಕಿ ಆಗಿದ್ದು ದೂರದರ್ಶನದ ರಿಯಾಲಿಟಿ ಶೋ ಬ್ರಿಟೆನ್ಸ್ ಗಾಟ್ ಟಾಲೆಂಟ್‌ ನಲ್ಲಿ 11 ಏಪ್ರಿಲ್ 2009ರಲ್ಲಿ ಒಬ್ಬ ಸ್ಪರ್ಧಿಯಾಗಿ ಕಾಣಿಸಿಕೊಂಡು ಆ ಕಾರ್ಯಕ್ರಮದಲ್ಲಿ Les Misérables ಇಂದ "ಐ ಡ್ರೀಮ್ಡ ಅ ಡ್ರೀಮ್" ಹಾಡು ಹಾಡಿದಾಗ ಅಂತರರಾಷ್ಟ್ರೀಯ ಸಾರ್ವಜನಿಕರ ಗಮನಕ್ಕೆ ಬಂದರು. ಅವರ ಮೊದಲನೆಯ ಧ್ವನಿಸುರುಳಿ ನವೆಂಬರ್ 2009ರಲ್ಲಿ ಬಿಡುಗಡೆಯಾಗಿ ಪ್ರಥಮ ಪ್ರವೇಶದಲ್ಲೇ ಜಗತ್ತಿನಾದ್ಯಂತ ಉತ್ತಮ-ಮಾರಾಟವಾಗುವ ಸಿಡಿ ಎಂದು ಮೊದಲನೆಯ ಸ್ಥಾನ ಪಡೆಯಿತು. ಅವರ ಪ್ರಭಾವಶಾಲಿ ಧ್ವನಿ ಹಾಗೂ ವೇದಿಕೆ ಮೇಲಿನ ಸರಳ ರೂಪದ ಅಭಿವ್ಯಕ್ತಿಯ ಕಾರಣದಿಂದ ಬೊಯೆಲ್‌ರತ್ತ ಜಗತ್ತಿನ ಆಸಕ್ತಿ ಗರಿಗೆದರಿತು.

ಅವರ ನಿರೂಪಣೆಯನ್ನು ನೋಡಿದ ಪ್ರೇಕ್ಷಕರ ಮೊದಲ ಅನಿಸಿಕೆ ಎಷ್ಟು ಪ್ರಭಾವಶಾಲಿಯಾಗಿತ್ತು ಎಂದರೆ, ಪ್ರೇಕ್ಷಕರು ಕಾರ್ಯಕ್ರಮ ನಡೆಯುವಾಗ ಹಾಗೂ ಮುಗಿದ ನಂತರ ಕೂಡ ನಿಂತು ಚಪ್ಪಾಳೆಯ ಮೂಲಕ ಶ್ಲಾಘಿಸಿದರು, ಈ ಪ್ರೇಕ್ಷಕರ ಸಂಭ್ರಮದ ಪ್ರತಿಕ್ರಿಯೆ ಅವರನ್ನು ಅಂತರರಾಷ್ಟ್ರೀಯ ಮಾಧ್ಯಮ ಹಾಗೂ ಅಂತರಜಾಲದಲ್ಲಿ ಅವರ ಕುರಿತು ಪ್ರತಿಕ್ರಿಯಿಸುವಂತೆ ಮಾಡಿತು. ಧ್ವನಿ ಪರೀಕ್ಷೆಯ ಒಂಬತ್ತು ದಿನಗಳ ಒಳಗೆ, ಬೊಯೆಲ್‌ರ ವೀಡಿಯೋಗಳನ್ನು - ಕಾರ್ಯಕ್ರಮದ ವೀಡಿಯೋ, ಹಲವು ಸಂದರ್ಶನಗಳ ವೀಡಿಯೋ ಹಾಗೂ ಅವರ 1999ರ "ಕ್ರೈ ಮಿ ಅ ರಿವರ್"‌ನ ಪ್ರದರ್ಶನದ ವೀಡಿಯೋ - 100 ಮಿಲಿಯನ್‌ಗಿಂತ ಹೆಚ್ಚು ಸಲ ವೀಕ್ಷಿಸಲಾಗಿತ್ತು.[೭] ಮಾಧ್ಯಮದ ಆಸಕ್ತಿಯುತ ಮನ್ನಣೆ ಪಡೆದರೂ ಸಹ ಅವರು ಕಾರ್ಯಕ್ರಮದ ಅಂತಿಮ ಹಂತದಲ್ಲಿ ಎರಡನೆಯ ಸ್ಥಾನ ಪಡೆದುಕೊಂಡರು ಮತ್ತು ನೃತ್ಯ ತಂಡ ಡೈವರ್ಸಿಟಿ ಮೊದಲನೆಯ ಸ್ಥಾನ ಪಡೆಯಿತು.

ಬೊಯೆಲ್‌ರ ಮೊದಲ ಆಲ್ಬಂ, ಐ ಡ್ರೀಮ್ಡ್ ಅ ಡ್ರೀಮ್ 23 ನವೆಂಬರ್ 2009ರಂದು ಬಿಡುಗಡೆ ಆಯಿತು ಹಾಗೂ ಅಮೆಜಾನ್‌ನ ಅತ್ಯುತ್ತಮವಾಗಿ-ಮಾರಾಟಗೊಳ್ಳುವ ಆಲ್ಬಂಗಳಲ್ಲಿ ಇದು ಒಂದಾಗಿದೆ.[೮][೯]

ಬಿಲ್‌ಬೋರ್ಡ್‌ ಪ್ರಕಾರ, "ಐ ಡ್ರೀಮ್ಡ್ ಅ ಡ್ರೀಮ್ ... ಆಗಮನವು, 1991ರಿಂದ ಸೌಂಡ್‌ಸ್ಕ್ಯಾನ್‌ 1991ರಿಂದ ಮಾರಾಟದ ಪಟ್ಟೀಕರಣ ಪ್ರಾರಂಭಿಸಿದಂದಿನಿಂದ ನೋಡಿದಾಗ ಇದು ಸ್ತ್ರೀ ಕಲಾವಿದೆಯೊಬ್ಬಳ ಪ್ರಾರಂಭಿಕ ಆಲ್ಬಂಗೆ ಅತ್ಯುತ್ತಮ ಪ್ರಾರಂಭಿಕ ವಾರವಾಗಿ ಮಾರ್ಪಟ್ಟಿತು".[೧೦] ಆಲ್ಬಂಯಿಂದ ಹೊರತೆಗೆದ ಮೊದಲ ಪ್ರತ್ಯೇಕ ಹಾಡು ಜಾಗರ್/ರಿಚರ್ಡ್ಸ್‌ ಅವರ "ವೈಲ್ಡ್ ಹಾರ್ಸಸ್" ಹಾಡಿನ ಹೂದಿಕೆಯದಾಗಿತ್ತು.[೯][೧೧] ಮಾರಾಟದ ಬರೀ ಆರು ವಾರಗಳಲ್ಲೇ, ಇದು 2009ರ ಜಗತ್ತಿನಲ್ಲೇ ಹೆಚ್ಚು ಮಾರಾಟವಾಗುವ ಆಲ್ಬಂ ಆಯಿತು.[೧೨]

ಆರಂಭಿಕ ಜೀವನ[ಬದಲಾಯಿಸಿ]

ಬೊಯೆಲ್‌ರವರು ಸ್ಕಾಟ್ಲೆಂಡ್‌ನ ಪಶ್ಚಿಮ ಲೊಥಿಯನ್‌ನಲ್ಲಿರುವ ಬ್ಲ್ಯಾಕ್‌ಬರ್ನ್‌ನಲ್ಲಿ,[೧೩] ಜನಿಸಿದ್ದರು. ಇವರ ತಂದೆ ಪ್ಯಾಟ್ರಿಕ್ ಬೊಯೆಲ್ ಒಬ್ಬ ಗಣಿಗಾರ, II ವಿಶ್ವ ಯುದ್ಧದಲ್ಲಿ ಯುದ್ಧದಲ್ಲಿದ್ದವ ಹಾಗೂ ಬಿಷಪ್‌ರ ಬ್ಲೇಜ್‌ನಲ್ಲಿ ಗಾಯಕ ಆಗಿದ್ದರು ಮತ್ತು ತಾಯಿ ಬ್ರಿಜೆಟ್ ಒಬ್ಬ ಸಂಕ್ಷಿಪ್ತ ಲಿಪಿ ಬೆರಳಚ್ಚುಗಾರರು ಆಗಿದ್ದರು.[೧೪] ಇವರಿಬ್ಬರೂ ಕೌಂಟಿ ಡೊನಗಲ್, ಐರ್‌‌ಲ್ಯಾಂಡ್‌ನಿಂದ ವಲಸೆಗಾರರಾಗಿ ಬಂದಿದ್ದರು.[೧೫] ನಾಲ್ಕು ಸಹೋದರರು ಹಾಗೂ ಆರು ಸಹೋದರಿಯರಲ್ಲಿ ಈಕೆ ಕಿರಿಯರಾಗಿದ್ದರು.[೧೩]

ತಮ್ಮ ತಾಯಿಯ 47ನೇಯ ವರ್ಷದಲ್ಲಿ ಜನಿಸಿದ[೧೬] ಬೊಯೆಲ್‌ರ ಜನನದ ಸಮಯದಲ್ಲಿ ಜಟಿಲತೆ ಉಂಟಾಗಿ ಸಂಕ್ಷೇಪವಾಗಿ ಅವರಿಗೆ ಆಮ್ಲಜನಕದ ಕೊರತೆ ಉಂಟಾಯಿತು ಮತ್ತು ನಂತರದ ಪರಿಶೀಲನೆಯ ಪ್ರಕಾರ ಅವರಿಗೆ ಅಧ್ಯಯನದಲ್ಲಿ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿದು ಬಂತು.[೧೭] ಬೊಯೆಲ್ಹೇಳುತ್ತಾರೆ ಚಿಕ್ಕಂದಿನಲ್ಲಿ ಅವರನ್ನು ಎಲ್ಲರೂ ಅಂಜಿಸುತಿದ್ದರು[೧೩][೧೮] ಹಾಗೂ ಶಾಲೆಯಲ್ಲಿ "ಸುಸಿ ಸಿಂಪಲ್" ಎಂದು ಅಡ್ಡ ಹೆಸರಿಟ್ಟಿದ್ದರು.[೧೯]

ಹೆಚ್ಚಿನ ವಿದ್ಯಾರ್ಹತೆಗಳೇನೂ ಇಲ್ಲದೇ ಶಾಲೆ ಬಿಟ್ಟ ಮೇಲೆ,[೧೩] ಆರು ತಿಂಗಳ ಕಾಲದವರೆಗೆ ವೆಸ್ಟ್ ಲೊಥಿಯನ್ ಕಾಲೇಜ್‌ನ ಪಾಕಶಾಲೆಯಲ್ಲಿ ಶಿಕ್ಷಾರ್ಥಿ ಅಡುಗೆಯವರಾಗಿ ಅವರು ತಮ್ಮ ಜೀವನಾವಧಿಯಲ್ಲೇ ಒಂದು ಬಾರಿಗೆ ನಿಯುಕ್ತರಾಗಿದ್ದರು,[೧೯] ಸರ್ಕಾರಿ ತರಬೇತಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು[೧೪] ಹಾಗೂ ಹಲವು ಸ್ಥಳಗಳಲ್ಲಿ ಕಾರ್ಯ ನಿರ್ವಹಿಸಿದರು.[೧೭]

ಗಾಯನದ ಆರಂಭ[ಬದಲಾಯಿಸಿ]

ಬೊಯೆಲ್‌ರವರು ಗಾಯನದ ಪಾಠಗಳನ್ನು ಧ್ವನಿ ಶಿಕ್ಷಕ ಫ್ರೆಡ್ ಓ’ನಿಲ್ ಅವರಿಂದ ಪಡೆದರು.[೧೩] ಅವರು ಎಡಿನಬರ್ಗ್ ನಟನೆಯ ಶಾಲೆಯಲ್ಲಿ ಕಲಿತು ಎಡಿನಬರ್ಗ್ ಫ್ರಿಂಜ್‌ನಲ್ಲಿ ಭಾಗವಹಿಸಿದ್ದರು.[೧೭] ಬ್ರಿಟೆನ್ಸ್ ಗಾಟ್ ಟಾಲೆಂಟ್‌ ನಲ್ಲಿ ಭಾಗವಹಿಸುವ ಮುಂಚೆ, ಅವರು ಸ್ಥಳಿಯ ಕ್ಯಾಥೊಲಿಕ್ ಚರ್ಚ್‌ ಅವರ್ ಲೇಡಿ ಆಫ್‌ ಲಾರ್ಡ್ಸ್ ನಲ್ಲಿ ಸ್ಥಳಿಯ ಗಾಯಕವೃಂದದೊಂದಿಗೆ ಹಾಡುತ್ತಿದ್ದರು ಮತ್ತು ಅವರ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಹೋಟೆಲ್‌‌ಗಳ ಕರೋಕೆ ನಿರ್ವಾಹಣೆಗಳಲ್ಲಿ ಹಾಡುವ ಅನುಭವ ಹೊಂದಿದ್ದರು. ಅವರು ಹಲವು ಬಾರಿ ಮೈ ಕೈಂಡ್ ಆಫ್‌ ಪೀಪಲ್‌ ಗೆ ಕೂಡ ಧ್ವನಿ ಪರೀಕ್ಷೆ ನೀಡಿದ್ದರು.[೨೦] ಐಯರ್‌ಲ್ಯಾಂಡ್‌‌ನ ಕೌಂಟಿ ಮಾಯೊದಲ್ಲಿರುವ ನೊಕ್ ಶ್ರೈನ್ ಗೆ ಚರ್ಚ್ ತೀರ್ಥಯಾತ್ರೆಗಳು ನಡೆದಾಗ ಕೂಡ ಅವರು ಹಲವು ಬಾರಿ ಭಾಗವಹಿಸಿ ಮೆರಿಯನ್ ಬಾಸಿಲಿಕಾದಲ್ಲಿ ಹಾಡಿದ್ದಾರೆ.[೨೧]

"ದ ವೆ ವಿ ವರ್" ಹಾಗೂ "ಐ ಡೊಂಟ್ ನೊ ಹೌ ಟು ಲವ್ ಹಿಮ್" ಅಂತಹ ಹಾಡುಗಳು ಅವರ ಪರಿಚಿತ ಕೃತಿ ಸಂಗ್ರಹದಲ್ಲಿ ಸೇರಿವೆ. ಬ್ರಿಟಿಷ್‌ ಟ್ಯಾಬ್ಲಾಯ್ಡ್ ಪತ್ರಿಕೆಗಳು ಅವರ ಪ್ರಾರಂಭಿಕ ಪ್ರದರ್ಶನಗಳ ಕೆಲವು ವೀಡಿಯೋ ತುಣುಕುಗಳನ್ನು "ತಾವು ಮಾತ್ರ" ಹೊಂದ್ದಿದ್ದಾಗಿ ಹೇಳಿಕೊಂಡವು.[೨೨][೨೩]

1995ರಲ್ಲಿ, ಮೈಕಲ್ ಬ್ಯಾರಿಮೊರೆಮೈ ಕೈಂಡ್ ಆಫ್‌ ಪೀಪಲ್‌ ಗೆ [೧೭] ಅವರು ಪೂರ್ವ ಕಿಲ್‌ಬ್ರೈಡ್‌ನ ಒಲಂಪಿಯಾ ವ್ಯಾಪಾರ ಕೇಂದ್ರದಲ್ಲಿ ಧ್ವನಿ ಪರೀಕ್ಷೆ ನೀಡಿದ್ದರು, ಇದನ್ನು ಚಿತ್ರೀಕರಿಸಲಾಗಿತ್ತು–. ಬ್ಯಾರಿಮೊರೆಯವರು ಬೊಯೆಲ್‌ರ ಗಾಯನದ ಸಾಮರ್ಥ್ಯೆವನ್ನು ಗಮನಿಸದೆ ಅವರನ್ನು ಅಪಹಾಸ್ಯ ಮಾಡುವುದರಲ್ಲಿ ಆಸಕ್ತರಿದ್ದರೆಂದು ಈ ಅಪ್ರೌಢ ವೀಡಿಯೋ ತೋರಿಸುತ್ತದೆ.[೨೪]

1999ರಲ್ಲಿ ಅವರು ವೆಸ್ಟ್ ಲೊಥಿಯನ್ ಶಾಲೆಯ ಮಿಲೇನಿಯಮ್‌[೧೩][೨೫] ಸ್ಮಾರಕೋತ್ಸವಕ್ಕಾಗಿ ಒಂದು ದರ್ಮಾರ್ಥ CDಗೆ ಹಾಡನ್ನು ಹಾಡಿದರು. ಮ್ಯೂಸಿಕ್ ಫಾರ್ ಅ ಮಿಲೇನಿಯಮ್ ಸೆಲೆಬ್ರೇಶನ್, ಸೌಂಡ್ಸ್ ಆಫ್ ವೆಸ್ಟ್ ಲೊಥಿಯನ್‌ ಎಂಬ CDಗಳ ಬರಿ 1,000 ಪ್ರತಿಗಳನ್ನು ಮುದ್ರಿಸಲಾಗಿತ್ತು.[೨೬] ವೆಸ್ಟ್ ಲೊಥಿಯನ್ & ಪೊಸ್ಟ್‌ ನ ಒಂದು ಆರಂಭದ ವಿಮರ್ಶೆ ಪ್ರಕಾರ, ಬೊಯಲ್‌ರ "ಕ್ರೈ ಮಿ ಅ ರಿವರ್"ನ ಗಾಯನ "ಹೃದಯ ಬಿರಿಯು"ವಂತಹುದ್ದಾಗಿದ್ದು "ಈ CD ದೊರಕಿದ ನಂತರ ನನ್ನ CD ಪ್ಲೇಯರ್‌ನಲ್ಲಿ ಪುನರಾವರ್ತಿಸಿ ಕೇಳುತ್ತಿದ್ದೇನೆ..."[೨೭][೨೮]

ನಂತರ ಅವರು ಮೊದಲ ಬಾರಿಗೆ ದೂರದರ್ಶನದಲ್ಲಿ ಕಾಣಿಸಿಕೊಂಡ ಮೇಲೆ ಈ ಮುದ್ರಣ ಅಂತರ್ಜಾಲದಲ್ಲಿ ಕಾಣಿಸಿಕೊಂಡಿತು ಮತ್ತು ನ್ಯೂ ಯೋರ್ಕ್ ಪೋಸ್ಟ್ ಬೊಯೆಲ್ ಬಗ್ಗೆ ಹೇಳಿತು, "ಅವರು ಬರೀ ತಂತ್ರಗಾರಿಕೆಯವರಲ್ಲ".[೨೯] ಹೆಲೋ! ಪ್ರಕಾರ, ಆಕೆಯ ಧ್ವನಿಮುದ್ರಣವು ಅವರನ್ನು ಗಾಯನ ತಾರೆಯಂತೆ "ಅವರ ಮಾನ್ಯತೆಯನ್ನು ಬಲಪಡಿಸಿತು".[೩೦]

1999ರಲ್ಲಿ, ಬೊಯೆಲ್ ತಮ್ಮ ಎಲ್ಲ ಉಳಿತಾಯವನ್ನು ಧ್ವನಿಮುದ್ರಣ ಮಾದರಿಯನ್ನು ವೃತ್ತಿಪರವಾಗಿ ರೂಪಿಸಲು ಬಳಸಿದರು, ಇದರ ಪ್ರತಿಗಳನ್ನು ಅವರು ನಂತರ ಧ್ವನಿಮುದ್ರಣ ಕಂಪನಿಗಳಿಗೆ, ರೇಡಿಯೋ ಪ್ರತಿಭಾ ಸ್ಪರ್ಧೆಗಳಿಗೆ, ಸ್ಥಳಿಯ ಹಾಗೂ ರಾಷ್ಟ್ರೀಯ ದೂರದರ್ಶನಗಳಿಗೆ ಕಳುಹಿಸಿದರು. ಈ ಧ್ವನಿಮುದ್ರಣ ಮಾದರಿಯಲ್ಲಿ ಅವರ "ಕ್ರೈ ಮಿ ಅ ರಿವರ್" ಹಾಗೂ "ಕಿಲ್ಲಿಂಗ್ ಮಿ ಸಾಫ್ಟಲಿ ವಿಥ್ ಹಿಸ್ ಸಾಂಗ್"‌ನ ಆವೃತ್ತಿಗಳು ಸೇರಿದ್ದವು; ಈ ಹಾಡುಗಳನ್ನು ಅವರ BGT ಧ್ವನಿ ಪರೀಕ್ಷೆಯ ನಂತರ ಅಂತರ್ಜಾಲದಲ್ಲಿ ಅಪ್‌ಲೋಡ್ ಮಾಡಲಾಗಿತ್ತು.[೩೧]

ಸ್ಥಳೀಯ ಗಾಯನದ ಸ್ಪರ್ಧೆಗಳನ್ನು ಗೆದ್ದ ನಂತರ, ಬೊಯೆಲ್‌ರ ತಾಯಿ ಅವರನ್ನು ಬ್ರಿಟಿಷ್‌ಸ್ ಗಾಟ್‌ ಟಾಲೆಂಟ್‌ ಗೆ ಪ್ರವೇಶಿಸಲು ಪ್ರೇರೇಪಿಸಿದರು ಹಾಗೂ ಅವರನ್ನು ಪಾದ್ರಿಯಾಡಳಿತ ಪ್ರದೇಶದ ಚರ್ಚ್‌ನ ಪ್ರೇಕ್ಷಕರಗಿಂತ ಹೆಚ್ಚಿನ ಸದಸ್ಯರ ಮುಂದೆ ಹಾಡುವ ಸಾಹಸ ಮಾಡಲು ಹುರಿದುಂಬಿಸಿದರು. ಬೊಯೆಲ್‌ ರು ದ X ಫಾಕ್ಟರ್ ಎಂಬ ಧ್ವನಿ ಪರೀಕ್ಷೆಯನ್ನು ತ್ಯಜಿಸಿದರು, ಕಾರಣ ಇದರಲ್ಲಿ ಸ್ಪರ್ಧಿಗಳನ್ನು ಅವರ ರೂಪದ ಅನುಗುಣವಾಗಿ ಆಯ್ಕೆ ಮಾಡುತ್ತಾರೆಂದು ಅವರಿಗೆ ಅನಿಸಿತ್ತು ಎಂದು ಮೊದಲಿನ ಶಿಕ್ಷಕ ಓ’ನೀಲ್‌ರು ಹೇಳಿದರು. ಅವರು ತುಂಬ ವಯಸ್ಕರೆಂದು ನಂಬಿ ಬ್ರಿಟೆನ್ಸ್ ಗಾಟ್ ಟಾಲೆಂಟ್‌ ನ್ನು ಕೂಡ ತ್ಯಜಿಸ ಬೇಕೆಂದಿದ್ದರು ಆದರೆ ಓ’ನೀಲ್‌ರು ಅವರನ್ನು ಧ್ವನಿ ಪರೀಕ್ಷೆಗೆ ಪ್ರೇರಿಸಿದರು.[೩೨]

ಬೊಯೆಲ್‌ರಿಗೆ ಪ್ರೇರಣೆಯಾಗಿದ್ದ ಅವರ ತಾಯಿಗೆ ಕಾಣಿಕೆ ಸಲ್ಲಿಸಲು ಅವರು ಸಂಗೀತದಲ್ಲಿಯೇ ವೃತ್ತಿಜೀವನನ್ನು ಕಂಡುಕೊಳ್ಳಬಯಸಿದ್ದಾಗಿ ಹೇಳಿದರು.[೧೩] ಅವರ ತಾಯಿ ತೀರಿಕೊಂಡಾದ ನಂತರ ಮೊದಲನೆಯ ಬಾರಿಗೆ ಅವರು ಸಾರ್ವಜನಿಕವಾಗಿ ಈ ಕಾರ್ಯಕ್ರಮದಲ್ಲಿ ಹಾಡಿದರು.[೩೩][೩೪]

ವೈಯಕ್ತಿಕ ಜೀವನ[ಬದಲಾಯಿಸಿ]

ಬೊಯೆಲ್‌ರು ಇನ್ನು ಕೂಡ ತಮ್ಮ ಪರಿವಾರದ ಮನೆಯಾದ ನಾಲ್ಕು-ಶಯನಗೃಹವುಳ್ಳ ಸ್ಥಳೀಯ ಮಂಡಳಿಯ ಆಡಳಿತದ ನಿವಾಸದಲ್ಲಿರುತ್ತಾರೆ, ಅವರ ಜೊತೆ 10-ವರ್ಷದ ಅವರ ಬೆಕ್ಕು ಪೆಬಲ್ಸ್ ಕೂಡ ಇದೆ.[೧೩] ಅವರ ತಂದೆ 1990ರಲ್ಲಿ ತೀರಿಕೊಂಡಿದ್ದರು ಹಾಗೂ ಅವರ ಒಡಹುಟ್ಟಿದವರು ಮನೆಯನ್ನು ತ್ಯಜಿಸಿದ್ದರು. ಬೊಯೆಲ್‌ರು ಮದುವೆಯಾಗಲಿಲ್ಲ ಹಾಗೂ ಅವರ ತಾಯಿಯು 91ನೇ ವಯಸ್ಸಿನಲ್ಲಿ 2007ರಲ್ಲಿ ತೀರಿಕೊಳ್ಳುವವರೆಗೂ ತಮ್ಮನ್ನು ತನ್ನ ತಾಯಿಯ ಆರೈಕೆಯಲ್ಲಿ ಸಮರ್ಪಿಸಿಕೊಂಡಿದ್ದರು. ಬೊಯೆಲ್‌ರು ತಮ್ಮ ನಮ್ರತೆ ಹಾಗೂ ಸಭ್ಯತೆಗೆ ಪ್ರಖ್ಯಾತಿ ಪಡೆದುಕೊಂಡಿದ್ದಾರೆ. ಅವರು ಮೊದಲನೆಯ ಬಾರಿ ಬ್ರಿಟೆನ್ಸ್ ಗಾಟ್ ಟಾಲೆಂಟ್‌ ನಲ್ಲಿ ಕಾಣಿಸಿಕೊಂಡಾಗ "ಎಂದೆಂದಿಗೂ ಮದುವೆ ಆಗಲಿಲ್ಲ, ಎಂದೆಂದಿಗೂ ಚುಂಬಿಸಲ್ಪಟ್ಟಿರಲಿಲ್ಲ" ಎಂದು ಒಪ್ಪಿಕೊಂಡಿದ್ದರು.[೧೬]

ಒಬ್ಬ ನೆರೆಯವರು ಹೇಳಿದಂತೆ ಬ್ರಿಡ್ಜೆಟ್ ಬೊಯೆಲ್‌ರ ಮರಣದ ನಂತರ, ಅವರ ಪುತ್ರಿ "ಮೂರು ಅಥವಾ ನಾಲ್ಕು ದಿನಗಳವರೆಗೆ ಹೊರಗೆ ಬರಲಿಲ್ಲ ಮತ್ತು ಫೋನ್ ಅಥವಾ ಬಾಗಿಲ ಸದ್ದಿಗೂ ಕೂಡ ಉತ್ತರಿಸಲಿಲ್ಲ".[೧೬] ಬೊಯೆಲ್ ಇನ್ನು ಕೂಡ ಬ್ಲ್ಯಾಕ್‌ಬರ್ನ್‌ನ ಅವರ್ ಲೇಡಿ ಆಫ್‌ ಲಾರ್ಡ್ಸ್ ಚರ್ಚ್‌ನಲ್ಲಿ ಸ್ವಯಂ ಸೇವಕಿಯಾಗಿ ಸಕ್ರಿಯರಾಗಿದ್ದಾರೆ, ಸಂಘದಲ್ಲಿನ ವೃದ್ಧ ಸದಸ್ಯರ ಮನೆಗಳಿಗೆ ಭೇಟಿ ನೀಡುತ್ತಿರುತ್ತಾರೆ.[೧೮] ಒಪ್ರಾ ವಿನ್‌ಫ್ರೇ ಪ್ರದರ್ಶನ ದ 2010ರ ಒಂದು ಸಂಚಿಕೆಯಲ್ಲಿ ಬೊಯೆಲ್ ತಮ್ಮ ಜೀವನದ ದಿನಚರಿಯನ್ನು ಸಂಕ್ಷೇಪಿಸಿದರು, ಆ ತಾರಾಪ್ರಪಂಚದ ಪೂರ್ವದಲ್ಲಿ "ಸರ್ವೇಸಾಮಾನ್ಯ"ವಾದ ಹಾಗೂ "ವಾಡಿಕೆಯ" ಜೀವನವಾಗಿತ್ತು ಎಂದು ವಿವರಿಸಿದರು.

ಬ್ರಿಟೆನ್ಸ್ ಗಾಟ್‌ ಟಾಲೆಂಟ್[ಬದಲಾಯಿಸಿ]

ಆಗಸ್ಟ್ 2008ರಲ್ಲಿ ಬೊಯೆಲ್ ಬ್ರಿಟೆನ್ಸ್ ಗಾಟ್ ಟಾಲೆಂಟ್‌ ನ ಮೂರನೆಯ ಸರಣಿಯ ಧ್ವನಿ ಪರೀಕ್ಷೆಗೆ ಮನವಿ ಸಲ್ಲಿಸಿದರು ಮತ್ತು ಗ್ಲಾಸ್‌ಗೌನಲ್ಲಿ ಪ್ರಾಥಮಿಕ ಧ್ವನಿ ಪರೀಕ್ಷೆಯ ನಂತರ ಅವರನ್ನು ಸ್ವೀಕರಿಸಲಾಯಿತು. ಬೊಯೆಲ್ ಮೊದಲ ಬಾರಿಗೆ ನಗರದ ಕ್ಲೈಡ್ ಸಭಾಂಗಣದಲ್ಲಿ ಬ್ರಿಟೆನ್ಸ್ ಗಾಟ್ ಟಾಲೆಂಟ್‌ ನಲ್ಲಿ ಕಾಣಿಸಿಕೊಂಡಾಗ, ಅವರು ಇಲೇನ್ ಪೇಜ್‌ ಅಂತಹ ಯಶಸ್ವಿ ಸಂಗೀತದ ರಂಗಭೂಮಿ ಗಾಯಕಿ ಆಗಬೇಕೆಂದು ಅಪೇಕ್ಷಿಸಿದರು ಎಂದು ಹೇಳಿದರು.[೩೫] ಬೊಯೆಲ್‌ರು ಲೆಸ್ ಮಿಜರೇಬಲ್ಸ್‌ ಯಿಂದ "ಐ ಡ್ರೀಮ್ಡ್ ಅ ಡ್ರೀಮ್" ಹಾಡನ್ನು ಬ್ರಿಟೆನ್ಸ್ ಗಾಟ್ ಟಾಲೆಂಟ್‌ ನ ಮೂರನೆ ಸರಣಿಯ ಪ್ರಥಮ ಸುತ್ತಿನಲ್ಲಿ ಹಾಡಿದರು, ಇದನ್ನು 11 ಏಪ್ರಿಲ್ 2009ರಲ್ಲಿ ಪ್ರಸರಿಸಿದಾಗ 10 ಮಿಲಿಯನ್‌ಗಿಂತ ಹೆಚ್ಚು ವೀಕ್ಷಕರು ವೀಕ್ಷಿಸಿದರು.[೩೬]

ಪ್ರೇಕ್ಷಕರ ಧೋರಣೆ ಆರಂಭದಲ್ಲಿ ಸಿನಿಕತೆಯಿಂದ ಕೂಡಿತ್ತು, ಆದರೆ ಅನಂತರದ "ಎಲ್ಲಾ ಕಾಲದ ಅತಿದೊಡ್ಡ ಎಚ್ಚರಗೊಳಿಸುವ ಕರೆ"ಯು ಬೊಯೆಲ್‌ರ ಗಾಯನವನ್ನು ಕೇಳಿದ ನಂತರ ಅವರನ್ನು ಎಚ್ಚರಿಸಿತು ಎಂದು ಅಮಾಂಡ ಹೊಲ್ಡನ್ ಹೇಳಿಕೆ ನೀಡಿದರು.[೩೭]

I know what they were thinking, but why should it matter as long as I can sing? It's not a beauty contest.

Susan Boyle, The Sunday Times[೧೩]

ಈ ಪ್ರದರ್ಶನದ ಪ್ರಚಾರವು ವ್ಯಾಪಕವಾಗಿ ಹರಡಿ ಮಿಲಿಯನ್‌ರಷ್ಟು ಜನರು ಈ ವೀಡಿಯೋವನ್ನು ಯುಟ್ಯೂಬ್‌ನಲ್ಲಿ ವೀಕ್ಷಿಸಿದರು.[೩೬] ಜನರ ಇಂತಹ ಪ್ರತಿಕ್ರಿಯೆಗಳನ್ನು ಕಂಡು ಬೊಯೆಲ್‌ರು "ಸಂಪೂರ್ಣವಾಗಿ ದಿಗಿಲುಪಟ್ಟರು".[೩೮]

ಬ್ರಿಟೆನ್ಸ್ ಗಾಟ್ ಟಾಲೆಂಟ್‌ ನ ಪ್ರೇಕ್ಷಕರು ಬೊಯೆಲ್‌ರ ರೂಪದ ಕಾರಣಕ್ಕಾಗಿ ಆಕೆಯ ಕುರಿತು ತಿರಸ್ಕಾರವನ್ನು ಹೊಂದಿದ್ದರು ಎಂಬುದು ಆಕೆಗೆ ಅರಿವಿತ್ತು, ಆದರೆ ಆಕೆ ತನ್ನ ರೂಪವನ್ನು ಬದಲಾಯಿಸಿಕೊಳ್ಳಲು ನಿರಾಕರಿಸಿದರು.[೧೩] ಅವರ ಈ ರೂಪವನ್ನು ಕಂಡು ಪೇಜ್‌ರವರು ಬೊಯೆಲ್‌ರ ಜೊತೆ ಒಂದು ಜೋಡಿಗೀತೆ ಹಾಡುವ ಆಸಕ್ತಿಯನ್ನು ವ್ಯಕ್ತಪಡಿಸಿದರು ಮತ್ತು[೩೫] ಬೊಯೆಲ್‌ರನ್ನು "ಕನಸು ಇರುವವರೆಲ್ಲರಿಗೂ ಒಬ್ಬ ಆದರ್ಶ ಮಾದರಿ" ಎಂದು ಕರೆದರು.[೩೯]

ಬೊಯೆಲ್‌ರ "ಐ ಡ್ರೀಮ್ಡ್ ಅ ಡ್ರೀಮ್"ನ ಪ್ರದರ್ಶನವು ವ್ಯಾನ್‌ಕೊವರ್ ನಿರ್ಮಾಣದ ಲೆಸ್ ಮಿಸರೇಬಲ್ಸ್‌ ನ ಟಿಕೆಟ್ ಬಿಕರಿಯಲ್ಲಿ ಒಂದು ಅಲೆಯನ್ನೆಬ್ಬಿಸಿದ ಮಾನ್ಯತೆಯನ್ನು ಪಡೆದಿದೆ.[೪೦][೪೧] ಲೆಸ್ ಮಿಸರೇಬಲ್ಸ್‌ ಸಂಗೀತದ ನಿರ್ಮಾಪಕರಾದ ಕ್ಯಾಮರೊನ್ ಮ್ಯಾಕಿನ್‌ತೋಷ್ ಅವರು ಕೂಡ ಈ ಪ್ರದರ್ಶನವನ್ನು "heart-touching, "ರೋಮಾಂಚಕ ಹಾಗೂ ಎತ್ತಿ ಹಿಡಿಯುವಂತಹದಾಗಿತ್ತು" ಎಂದು ಹೊಗಳಿದರು.[೩೬]

ಉಪಾಂತ್ಯ ಪಂದ್ಯಕ್ಕೆ ಆಯ್ಕೆಯಾದ 40 ಜನಗಳಲ್ಲಿ ಇವರು ಒಬ್ಬರಿದ್ದರು.[೪೨] 24 ಮೇ 2009ರಲ್ಲಿ ಮೊದಲ ಉಪಾಂತ್ಯ ಪಂದ್ಯದಲ್ಲಿ ಇವರು ಕೊನೆಯವರಾಗಿ ಕಾಣಿಸಿಕೊಂಡರು, ಮತ್ತು ಕ್ಯಾಟ್ಸ್‌ ನಿಂದ "ಮೆಮೋರಿ"ಯನ್ನು ಹಾಡಿದರು.[೪೩] ಸಾರ್ವಜನಿಕರ ಮತಗಣನೆಯಲ್ಲಿ ಅತ್ಯಧಿಕ ಮತಗಳು ದೊರಕಿ ಆವರು ಅಂತಿಮ ಪಂದ್ಯಕ್ಕೆ ತಲುಪಿದರು.[೪೪][೪೫] ಅವರು ಅಂತಿಮ ಪಂದ್ಯದಲ್ಲಿ ನಿಶ್ಚಯವಾಗಿ ಗೆಲ್ಲುವ ಎಲ್ಲರ ಅಚ್ಚುಮೆಚ್ಚಿನ ಸ್ಪರ್ಧಿಯಾಗಿದ್ದರು[೪೬]. ಆದರೆ ಡೈವರ್ಸಿಟಿಯವರು ಮೊದಲ ಸ್ಥಾನ ಪಡೆದು ಬೊಯೆಲ್‌ರು ಎರಡನೇಯ ಸ್ಥಾನ ಪಡೆದರು; ಅವಾಗ UK ಟಿವಿಯ ವೀಕ್ಷಕರ ಸಂಖ್ಯೆ 17.3 ದಾಖಲೆಯನ್ನು ಮಿಲಿಯನ್‌ರಷ್ಟು ಆಗಿತ್ತು.[೪೭]

ಪ್ರತಿಭೆ ಪ್ರಕಟಗೊಂಡ ನಂತರದಲ್ಲಿ[ಬದಲಾಯಿಸಿ]

ಆಸ್ಪತ್ರೆಯಲ್ಲಿ ವಾಸ ಹಾಗೂ BGT ಪ್ರವಾಸ[ಬದಲಾಯಿಸಿ]

I didn't pick up on any unduly troubling signs. She was nervous, yes, but no more nervous than Paul Potts had been before his live final two years previously. She understood the significance of the night.
Then, during the final show, at the crucial point when the dance group Diversity won, I looked over at her face and thought: 'Christ, she doesn't know how to deal with not winning.'

Simon Cowell, Daily Mail[೪೮]

ಬೊಯೆಲ್‌ರ ಅಸಹಜವಾದ ನಡತೆಯ ಹಾಗೂ ಅವರ ಮಾನಸಿಕ ಅವಸ್ಥೆಯ ಚಿಂತನದ ಬಗ್ಗೆ ವಾರ್ತಾಪತ್ರಿಕೆಗಳ ವರದಿಯ ಮೇಲೆ ಪ್ರೆಸ್ ಕಂಪ್ಲೆಂಟ್ಸ್ ಕಮಿಷನ್ (PCC) ಕಳವಳಗೊಂಡಿತು ಮತ್ತು ವಾರ್ತಾಪತ್ರಿಕೆಗಳ ನಿರ್ವಹಣೆ ನಿಯಮಾವಳಿಯ ಅಧಿನಿಯಮ 3 (ಗೌಪ್ಯತೆ)ಯನ್ನು ನೆನೆಸಿ ಸಂಪಾದಕರಿಗೆ ಪತ್ರ ಬರೆಯಿತು.[೪೬] ಅಂತಿಮ ಪಂದ್ಯದ ನಂತರದ ದಿನ ಬೊಯೆಲ್‌ರನ್ನು ಲಂಡನ್‌ನ ದ ಪ್ರೈಯರ್‌ ಎಂಬ ಒಂದು ಖಾಸಗಿ ಮನೋರೋಗ ಚಿಕಿತ್ಸಾಲಯದಲ್ಲಿ ಸೇರಿಸಲಾಯಿತು, "ಶನಿವಾರ ರಾತ್ರಿಯ ಪ್ರದರ್ಶನದ ನಂತರ,[೪೭] ಸುಸಾನ್ ತೀವ್ರ ದಣಿದಿದ್ದಾರೆ ಹಾಗೂ ಭಾವಾತ್ಮಕವಾಗಿ ಬರಿದಾಗಿ ಹೋಗಿದ್ದಾರೆ" ಎಂದು ಟಾಕ್‌ಬ್ಯಾಕ್‌ಥೇಮ್ಸ್‌ರು ವಿವರಿಸಿದರು. ಅವರ ಆಸ್ಪತ್ರೆಯಲ್ಲಿನ ವಾಸ ವ್ಯಾಪಕವಾಗಿ ಹಲವರ ಗಮನ ಸೆಳೆಯಿತು. ಪ್ರಧಾನ ಮಂತ್ರಿ ಜೋರ್ಡನ್ ಬ್ರೌನ್‌ರು ಕೂಡ ಅವರನ್ನು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.[೪೯]

ಬೊಯೆಲ್‌ರ ಕಾನೂನಿನ ನಿರ್ಬಂಧಗಳನ್ನು ಮನ್ನಾಮಾಡಿ ಅದರ ಪರಿಣಾಮವನ್ನು BGT ಪ್ರವಾಸದ ಮೇಲೆ ಆಗದಂತೆ ಗಮನವಹಿಸುವುದಾಗಿ ಕೊವೆಲ್‌ರು ಪ್ರಸ್ತಾಪ ನೀಡಿದರು. ಅವರ ಪರಿವಾರದವರು ಹೇಳಿದ್ದು, "ಅವರನ್ನು ಕಳೆದ ಏಳು ವಾರಗಳಿಂದ ಒಂದೇ ಸಮನೆ ಮಾನಸಿಕವಾಗಿ ಬಡಿಯಲಾಗುತ್ತಿದೆ ಹಾಗೂ ಅದರ ಪರಿಣಾಮವನ್ನು ಈಗ ಅವರು ಅನುಭವಿಸುತ್ತಿದ್ದಾರೆ (...ಆದರೆ...), ಅವರ ಕನಸುಗಳು ಬಹುವಾಗಿ ಜೀವಂತವಾಗಿವೆ" ಕಾರಣ ಅವರನ್ನು ಸ್ವಾತಂತ್ರ್ಯ ದಿನದ ಆಚರಣೆಗಳಿಗೆ ಶ್ವೇತ ಭವನಕ್ಕೆ ಆಮಂತ್ರಿಸಲಾಗಿತ್ತು.[೪೭] ಬೊಯೆಲ್‌ರು ಆಸ್ಪತ್ರೆಯನ್ನು ಪ್ರವೇಶಿಸಿದ ಐದು ದಿವಸಗಳ ನಂತರ ಹೊರಬಂದರು[೫೦] ಹಾಗೂ BGT ಪ್ರವಾಸದಲ್ಲಿ ಪಾಲ್ಗೊಳ್ಳುತ್ತೇನೆಂದು ಹೇಳಿದರು.

ಆರೋಗ್ಯದ ಚಿಂತನೆಗಳಿದ್ದರೂ ಸಹ ಅವರು 24ದಿನಗಳಲ್ಲಿ 20 ದಿನಗಳು ಪ್ರವಾಸದಲ್ಲಿ ಕಾಣಿಸಿಕೊಂಡರು[೫೧] ಮತ್ತು ಆಬರಡೀನ್,[೫೨] ಎಡಿನ್‌ಬರ್ಗ್,[೫೩] ಡಬ್ಲಿನ್,[೫೪] ಶೆಫೀಲ್ಡ್,[೫೫] ಕೊವೆಂಟ್ರಿ,[೫೬] ಬರ್ಮಿಂಗ್‌ಹ್ಯಾಮ್[೫೭] ಹಾಗೂ ಲಂಡನ್ ಅಂತಹ ಹಲವು ನಗರಗಳಲ್ಲಿ ಅವರನ್ನು ಆನಂದದಿಂದ ಬರಮಾಡಿಕೊಂಡರು.[೫೮] ಒತ್ತಡದಲ್ಲಿ ಮುಳುಗಿದ್ದಾರೆ ಎಂಬ ವರದಿ ಇದ್ದರೂ ಸಹ..., ಹಲವು ವರ್ಷಗಳಿಂದ ನಿರೂಪಿಸುತ್ತಿರುವ ಒಬ್ಬ ಪರಿಣತ ಗಾಯಕಿಯ ಆತ್ಮವಿಶ್ವಾಸದೊಂದಿಗೆ ಅವರು ನಿಧಾನವಾಗಿ ಹೊರಕ್ಕೆ ಹರಿದು ಬಂದರು..." ಎಂದು ಬೆಲ್ಫಾಸ್ಟ್ ಟೆಲೆಗ್ರಾಫ್ ಹೇಳಿತು.[೫೯]

ಆಲ್ಬಂ ಮತ್ತು ಪ್ರಚಾರ ಪ್ರವಾಸ[ಬದಲಾಯಿಸಿ]

ಬೊಯೆಲ್‌ರ ಮೊದಲ ಆಲ್ಬಂ ಐ ಡ್ರೀಮ್ಡ್ ಅ ಡ್ರೀಮ್ 23 ನವೆಂಬರ್ 2009ರಲ್ಲಿ ಬಿಡುಗಡೆ ಆಯಿತು.[೬೦] "ವೈಲ್ಡ್ ಹಾರ್ಸಸ್" (ಅವರ ನಿಗದಿಪಡಿಸಲಾದ ಮೊದಲ ಒಂಟಿ ಹಾಡು) ಹಾಗೂ "ಯು’ವಿಲ್ ಸೀ" ಅಲ್ಲದೇ "ಐ ಡ್ರೀಮ್ಡ್ ಅ ಡ್ರೀಮ್" ಹಾಗೂ "ಕ್ರೈ ಮಿ ಅ ರಿವರ್"‌ಗಳನ್ನು ಈ ಆಲ್ಬಂ ಒಳಗೊಂಡಿದೆ.[೬೧] ನಿಗದಿಪಡಿಸಿದ ದಿನಾಂಕದ ಮೂರು ತಿಂಗಳ ಮುಂಚಿತವಾಗಿ 4 ಸೆಪ್ಟೆಂಬರ್ 2009ರಲ್ಲಿ ಐ ಡ್ರೀಮ್ಡ್ ಅ ಡ್ರೀಮ್ Amazon.comನ ಉತ್ತಮ-ಬಿಕರಿಗೊಳ್ಳುವ ಆಲ್ಬಂ ಆಯಿತು.[೬೨]

ಬ್ರಿಟೆನ್‌ನಲ್ಲಿ ಸುಸಾನ್‌ನ ಪ್ರಾವೇಶಿಕ ಆಲ್ಬಂ UKಯ ಪ್ರಾವೇಶಿಕ ಆಲ್ಬಂಗಳಲ್ಲಿ ಅತಿ ವೇಗವಾಗಿ ಮಾರಾಟಗೊಳ್ಳುವ ಆಲ್ಬಂ ಎಂದು ಪರಿಗಣಿಸಲಾಗಿತ್ತು, ಇದರ 411,820 ಪ್ರತಿಗಳ ಮಾರಾಟ ಆಗಿ ಲಿಯೊನ ಲೆವಿಸ್‌ಸ್ಪಿರಿಟ್ ಎಂಬ ಹಿಂದಿನ ದಾಖಲೆಯನ್ನು ಮೀರಿಸಿತು.[೬೩] ಐ ಡ್ರೀಮ್ಡ್ ಅ ಡ್ರೀಮ್ ಮೊದಲನೆಯ ವಾರದಲ್ಲಿ ಟಾಪ್ 5 ರ ಉಳಿದ ಇತರ ಆಲ್ಬಂಗಳನ್ನು ಒಗ್ಗೂಡಿಸಿದಾಗ ಆಗುವ ಒಟ್ಟೂ ಗಳಿಕೆಯನ್ನೂ ಮೀರಿಸಿತು.[೬೪]

U.S. ನಲ್ಲಿ, ಈ ಆಲ್ಬಂ ಮೊದಲನೆಯ ವಾರದಲ್ಲಿ 701,000 ಪ್ರತಿಗಳ ಮಾರಾಟ ಮಾಡಿ, ಒಂದು ದಶಕದಲ್ಲಿಯೇ ಒಬ್ಬ ಪ್ರವೇಶಿಕ ಕಲಾಕಾರನಿಗೆ ದೊರಕಿಸಿಕೊಟ್ಟ ಅತ್ಯುತ್ತಮ ಪ್ರಾರಂಭಿಕ ವಾರ ಅನ್ನಿಸಿತು.[೬೫]. ಆರು ನೇರ ವಾರಗಳಿಗೆ ಇದು ಬಿಲ್‌ಬೋರ್ಡ್ ಪಟ್ಟಿಯ ಮೊದಲನೆಯ ಸ್ಥಾನದಲ್ಲಿತ್ತು. ಈ ಆಲ್ಬಂನ 3,104,000 ಪ್ರತಿಗಳು ಬಿಕರಿಯಾಗಿ ಟೇಲರ್ ಸ್ವಫ್ಟ್‌ಫಿಯರ್‌ಲೆಸ್‌ ನ 3,217,000 ಪ್ರತಿಗಳು ಬಿಕರಿ ಆದವು, ಹೀಗಾಗಿ ಸ್ವಲ್ಪದರಲ್ಲಿ ಅತಿ-ಹೆಚ್ಚು ಮಾರಾಟವಾಗುವ 2009ರ ಆಲ್ಬಂ ಎಂದು ಮನ್ನಣೆ ಪಡೆಯದಿದ್ದರೂ ಸಹ U.S.ನಲ್ಲಿ 3 ಮಿಲಿಯನ್‌ಗಿಂತ ಹೆಚ್ಚು ಬಿಕರಿಯಾದ ಎರಡರಲ್ಲಿ ಒಂದು ಆಲ್ಬಂ ಇದಾಗಿತ್ತು. ಬರಿ 86,000 ಬಿಕರಿಗಳು ಡಿಜಿಟಲ್ ಡೌನ್‌ಲೋಡ್ಸ್‌ನಿಂದ ಆಗಿದ್ದು, ಇದು "ವಾಸ್ತವಿಕವಾಗಿ" ಅತಿ ಹೆಚ್ಚು ಮಾರಾಟಗೊಂಡ 2009ರ ಆಲ್ಬಂ ಆಗಿತ್ತು.[೬೬] ಇದು ಇನ್ನು ಹೆಚ್ಚು ಮಾಧ್ಯಮಗಳ ಗಮನವನ್ನು ಶೇಖರಿಸಿದೆ ಎಂದು ಪೀಪಲ್ ಮ್ಯಾಗ್‌ಜೀನ್‌ ಉಲ್ಲೇಖಿಸಿದೆ.[೬೭]

ಇಟಲಿಯಲ್ಲಿ ಇದು ಮೊದಲ ಇಟೆಲಿಯನ್ ಅಲ್ಲದ ಕಲಾಕಾರರ #1 ಖಾತೆಯ ತಿಂಗಳ ಆಲ್ಬಂ ಆಗಿತ್ತು. ಒಂದೇ ವಾರದಲ್ಲಿ ಜಗತ್ತಿನಾದ್ಯಂತ ಇದರ 2 ಮಿಲಿಯನ್‌ಗಿಂತ ಹೆಚ್ಚು ಪ್ರತಿಗಳು ಮಾರಾಟಗೊಂಡು, ಅತಿ ವೇಗವಾಗಿ ಮಾರಾಟಗೊಂಡ ಮೊದಲ ಜಗತ್ತಿನ ಸ್ತ್ರೀ ಪ್ರಾವೇಶಿಕ ಆಲ್ಬಂ ಆಯಿತು.[೬೪] ವರ್ಷದ ಕೊನೆಯಲ್ಲಿ ಐ ಡ್ರೀಮ್ಡ್ ಅ ಡ್ರೀಮ್ 2009ರ ಜಗತ್ತಿನ ಹೆಚ್ಚು ಮಾರಾಟಗೊಂಡ ಆಲ್ಬಂ ಆಯಿತು.[೬೮]

ಆಲ್ಬಂ ಬಿಡುಗಡೆಯನ್ನು ಉಪಕ್ರಮಿಸಲು ಬೊಯೆಲ್‌ರು ಒಂದು U.S. ಗಾನಗೋಷ್ಟಿಯ ಪ್ರವಾಸವನ್ನು ನವೆಂಬರ್‌ನಲ್ಲಿ ನೀಡಿದರು.[೬೯] 13 ಡಿಸೆಂಬರ್ 2009ರಲ್ಲಿ ಬೊಯೆಲ್‌ರು ತಮ್ಮ ದೂರದರ್ಶನದ ವಿಶೇಷ ಕಾರ್ಯಕ್ರಮ "ಐ ಡ್ರೀಮ್ಡ್ ಅ ಡ್ರೀಮ್: ದ ಸುಸಾನ್ ಬೊಯೆಲ್ ಸ್ಟೋರಿ"ಯಲ್ಲಿ ಅವರ ಸಂಗೀತದ ನಟ ಎಲಿನ್ ಪೇಜ್‌ರ ಜೊತೆ ಯುಗಳ ಗೀತೆಯಲ್ಲಿ ಕಾಣಿಸಿಕೊಂಡರು.[೭೦] ಇದಕ್ಕೆ ಸಂಯುಕ್ತ ರಾಜ್ಯದಲ್ಲಿ 10 ಮಿಲಿಯನ್ ಪ್ರೇಕ್ಷಕರ ಮೌಲ್ಯಮಾಪನ ದೊರಕಿತು[೭೧] ಹಾಗೂ ಅಮೇರಿಕಾದಲ್ಲಿ TV ಗೈಡ್ ನೆಟ್ವರ್ಕ್‌ನ ಇತಿಹಾಸದಲ್ಲೇ ಅತಿ ಹೆಚ್ಚು ಮೌಲ್ಯಮಾಪನ ದೊರೆತ ದೂರದರ್ಶನದ ವಿಶೇಷವಾಗಿತ್ತು.[೭೨]

ನವೆಂಬರ್ 2009ರಲ್ಲಿ ಬೊಯೆಲ್‌ರ ಗಾಯನದ ’ಐ ಡ್ರೀಮ್ಡ್ ಅ ಡ್ರೀಮ್’, ಎನಿಮೆ ಚಲನಚಿತ್ರವಾದ ಈಗಲ್ ಟೆಲಾನ್ ದ ಮೂವಿ 3ಯ ಥೀಮ್ ಹಾಡಾಗಿ ಮಾಡಲಾಗುವುದೆಂದು ವರದಿ[೭೩]ಯಾಗಿತ್ತು. ಈ ಚಲನಚಿತ್ರವನ್ನು 16 ಜನವರಿ 2010ರಲ್ಲಿ ಜಪಾನಿನಲ್ಲಿ ಬಿಡುಗಡೆ ಮಾಡಲಾಯಿತು.[೭೪]

ಮಾಧ್ಯಮದ ಪ್ರಭಾವ[ಬದಲಾಯಿಸಿ]

ಯುಟ್ಯೂಬ್, ಫೇಸ್‌ಬುಕ್ ಹಾಗೂ ಟ್ವಿಟರ್ ಅಂತಹ ‌ಜಾಲತಾಣಗಳು ಬೊಯೆಲ್‌ರ ಕ್ಷಿಪ್ರ ಏಳಿಗೆಯ ದಾರಿಯನ್ನು ನಿರ್ಣಾಯಕವಾಗಿ ಸುಗಮವಾಗಿಸಿವೆ:[೧೭] ಅವರ ಪ್ರಾವೇಶಿಕ ಪರೀಕ್ಷೆಯ ವೀಡಿಯೋ ಸಲ್ಲಿಕೆ ಯುಟ್ಯೂಬ್‌ನಲ್ಲಿ ಅತಿ ಹೆಚ್ಚು ಜನಪ್ರಿಯವಾಗಿದ್ದು, ಸುಮಾರು 2.5 ಮಿಲಿಯನ್‌ರಷ್ಟು ವೀಕ್ಷಣೆಯನ್ನು ಮೊದಲ 72 ತಾಸುಗಳಲ್ಲಿ ಶೇಖರಿಸಿತು.[೭೫]

ಈ ಪ್ರದರ್ಶನದ ನಂತರದ ದಿನ ಯುಟ್ಯೂಬ್ ವೀಡಿಯೋವಿನ ಲೇಖನ Diggನಲ್ಲಿ ಅತಿ ಹೆಚ್ಚು ಜನಪ್ರಿಯವಾಗಿತ್ತು.[೭೬] ಇದೇ ವೀಡಿಯೋವನ್ನು ರೆಡಿಟ್‌ನಲ್ಲಿ ಜನಪ್ರಿಯ ಎಂದು ಪರಿಗಣಿಸಿ ಅದನ್ನು ತಾಣದ ಮುಖಪುಟದಲ್ಲಿ ಹಾಕಲಾಯಿತು.[೭೭] ಒಂದೇ ವಾರದಲ್ಲಿ ಪ್ರಾವೇಶಿಕ ಪರೀಕ್ಷೆಯ ಪ್ರದರ್ಶನವು ಆನ್‌ಲೈನ್ ದಾಖಲೇಯನ್ನಾಗಿಸಿ 66 ಮಿಲಿಯನ್‌ಗಿಂತ ಹೆಚ್ಚು ಸರತಿ ವೀಕ್ಷಿಸಲಾಗಿತ್ತು. ಅದೇ ಸಮಯದಲ್ಲಿ ವಿಕಿಪಿಡೀಯದಲ್ಲಿನ ಅವರ ಜೀವನ ಚರಿತ್ರೆಯ ಲೇಖನವು ಸುಮಾರು ಅರ್ಧ ಮಿಲಿಯನ್ ಪುಟ ವೀಕ್ಷಣೆಯನ್ನು ಆಕರ್ಷಿಸಿತು. ಒಂಬತ್ತು ದಿನಗಳಲ್ಲಿ ಒಟ್ಟು 103 ಮಿಲಿಯನ್ ವೀಡಿಯೋ ವಿಕ್ಷಣೆಗಳು 20 ವಿವಿಧ ಜಾಲತಾಣಗಳಿಂದ ತಲುಪಿದವು.[೭]

ಒಂದೇ ಚಿಕ್ಕ ತುಣುಕಿನಲ್ಲಿ ವಿಸ್ತಾರ ವ್ಯಾಪ್ತಿಯ ಭಾವಗಳನ್ನು ಹುದುಗಿಸಿದ ಆ ಗೀತೆಯ ದೃಶ್ಯವು "ಅಂತರ್ಜಾಲಕ್ಕೆ ಪರಿಪೂರ್ಣವಾ ಹೊಂದಿದೆ", ಇದು ಅವರ ಯುಟ್ಯೂಬ್‌ನಲ್ಲಿನ ಜನಪ್ರಿಯತೆಗೆ ಒಂದು ಕಾರಣವಾಗಿದೆ ಎಂದು ಲಾಸ್‌ಏಂಜಲೀಸ್ ಟೈಮ್ಸ್‌ ನಲ್ಲಿ ಬರೆಯಲಾಗಿತ್ತು.[೭೮] ಡಿಸೆಂಬರ್ 2009ರಲ್ಲಿ ಅವರ ಪ್ರಾವೇಶಿಕ ಪರೀಕ್ಷೆಯ ವೀಡಿಯೋವನ್ನು 120 ವೀಕ್ಷಣೆ ಮೀರಿದ ಕಾರಣ ಇದನ್ನು ಯುಟ್ಯೂಬ್‌ನ ವರ್ಷದ ಅತಿ ಹೆಚ್ಚು ವೀಕ್ಷಿಸಿದ ವೀಡಿಯೋ ಎಂದು ಹೆಸರಿಡಲಾಯಿತು. ಎರಡನೇಯ ಅತಿ ಜನಪ್ರಿಯ ವೀಡಿಯೋವಿನ ಮೂರು ಪಟ್ಟು ಹೆಚ್ಚು ವೀಕ್ಷಣೆಯನ್ನು ಇದು ಪಡೆಯಿತು.[೭೯]

ಜಗತ್ತಿನ ಹಲವು ವಾರ್ತಾಪತ್ರಿಕೆಗಳಲ್ಲಿ[೮೦][೮೧] (ಚೈನಾ,[೮೨] ಬ್ರಾಜಿಲ್[೮೩] ಹಾಗೂ ಮಧ್ಯ ಪೂರ್ವಗಳು[೮೪][೮೫] ಸೇರಿ) ಬೊಯೆಲ್‌ರ ಪ್ರದರ್ಶನದ ಬಗ್ಗೆ ಲೇಖನಗಳಿದ್ದವು.

ಮೊದಲನೆಯ ಸರಣಿಯ ವಿಜೇತರಾದ ಪೌಲಾ ಪೊಟ್ಸ್‌ರ ಹೋಲಿಕೆಯಲ್ಲಿ, ಬ್ರಿಟಿಷ್‌ ಟ್ಯಾಬ್ಲಾಯ್ಡ್ ದ ಸನ್ ಬೊಯೆಲ್‌ರನ್ನು "ಪೌಲಾ ಪೊಟ್ಸ್" ಎಂದು ಕರೆಯಿತು.[೮೬] ನಂತರ ಬ್ರಿಟಿಷ್‌ ಮಾಧ್ಯಮ ಅವರನ್ನು ’ಸುಬೊ’ ಎಂದು ಅವರ ಹೆಸರಿನ ಚಿಕ್ಕ-ರೂಪದ ಹೆಸರಿಂದ ಉಲ್ಲೇಖಿಸುತ್ತಿದ್ದರು.[೮೭] U.S. ನಲ್ಲಿ ಹಲವು ವಿಮರ್ಶಕರು ಬೊಯೆಲ್‌ರ ಹಾಗೂ ಪೊಟ್ಸ್‌ರ ಪ್ರದರ್ಶನದ ಮಧ್ಯೆ ಹೊಲಿಕೆಗಳನ್ನು ತಿಳಿಸಿದರು.[೮೮] ಎಬಿಸಿ ನ್ಯೂಸ್ ಅವರನ್ನು "ಬ್ರಿಟೆನಿನ ಹೊಸ ಪಾಪ್ ಸಂವೇದನೆ" ಎಂದು ಕರೆದು ಸ್ವಾಗತಿಸಿತು ಹಾಗೂ ಅದರ ಮನೋರಂಜನಾ ವಿಭಾಗದಲ್ಲಿ "ಸಿಮೊನ್ ಕೊವೆಲ್‌ರ ಬಾಯಿ ಮುಚ್ಚಿಸಿದ ಮಹಿಳೆ" ಎಂದು ಬೊಯೆಲ್‌ರ ಬಗ್ಗೆ ತಲೆಬರಹದ ಲೇಖನ ಪ್ರಕಟಿಸಿತು.[೮೯]

ಬ್ರಿಟೆನ್ಸ್ ಗಾಟ್ ಟಾಲೆಂಟ್‌ ನ ಪ್ರದರ್ಶನದ ಒಂದು ವಾರದಲ್ಲೇ ಬೊಯೆಲ್‌‌ರಿಗೆ STVಯ ಕಾರ್ಯಕ್ರಮ ದ ಫೈವ್ ಥಿರ್ಟಿ ಶೋ ನಲ್ಲಿ ಅತಿಥಿಯಾಗಿ ಕರೆಯಲಾಯಿತು.[೯೦] ಉಪಗ್ರಹದ ಮೂಲಕ ಅವರನ್ನು CBSಮೊದಲಿನ ಶೋ ,[೨೫] ಗುಡ್ ಮೋರ್ನಿಂಗ್ ಅಮೇರಿಕಾ ,[೯೧] NBCನ ಟುಡೆ, FOXನ ಅಮೇರಿಕಾಸ್ ನಿವ್ಸರೂಮ್ .[೯೧][೯೨] ಹಾಗೂ ದ ಒಪ್ರಾ ವಿನ್‌ಫ್ರೇ ಶೋ ಗಳಲ್ಲಿ ಸಂದರ್ಶಿಸಲಾಯಿತು. ಉಪಗ್ರಹದ ಮೂಲಕ ಲ್ಯಾರಿ ಕಿಂಗ್ ಲೈವ್‌ ನಲ್ಲಿ[೯೩] ಬೊಯೆಲ್‌ರು "ಮೈ ಹಾರ್ಟ್ ವಿಲ್ ಗೊ ಆನ್"‌ನ ಒಂದು ಕಪೆಲಾ ಆವೃತ್ತಿಯನ್ನು ಪ್ರದರ್ಶಿಸಿದರು.[೯೪] ಜೆ ಲೆನೊರವರ ಡ್ರೆಗ್ ಎಂಬ ಕಾರ್ಯಕ್ರಮದಲ್ಲಿ ಬೊಯಲ್‌ರಂತೆ ಉಡುಗೆ ಧರಿಸಿದ್ದರು, ಈ ಸಂದರ್ಭದಲ್ಲಿ ಲೆನೊ ಅವರು ಬೊಯೆಲ್‍ ತನ್ನ ತಾಯಿಯ ಸ್ಕಾಟ್‌ಲ್ಯಾಂಡ್‌ನ ಆನುವಂಶಿಕತೆಯಿಂದ ತನಗೆ ಸಂಬಂಧಿಯಾಗುತ್ತಾರೆ ಎಂದು ಹಾಸ್ಯ ಮಾಡಿದರು.[೯೫]

NHKಯ ನಿಮಂತ್ರಣಕ್ಕೆ ಬೊಯೆಲ್‌ರು ಅತಿಥಿ ಗಾಯಕರಾಗಿ ಕೊಹಾಕು ಉಟಾ ಗೆಸ್ಸನ್‌2009ರ ಸಂಚಿಕೆಯಲ್ಲಿ ಕಾಣಿಸಿಕೊಂಡರು, ಇದು 31 ಡಿಸೆಂಬರ್‌ರಲ್ಲಿ ಆಯೊಜಿಸಿದ್ದ ಒಂದು ವಾರ್ಷಿಕ ಗಾಯನ ಸಮಾರಂಭ ಆಗಿದ್ದು NHK ಸಾರ್ವಜನಿಕ ಸಭಾಂಗಣದಲ್ಲಿ ನೆರವೇರಿತು.[೯೬][೯೭] ಅವರನ್ನು MCಯವರಿಂದ ouen kashu (応援歌手 lit. "cheering singer"?) ಎಂದು ಪರಿಚಯಿಸಲಾಯಿತು ಹಾಗೂ ಟಕುಯ ಕಿಮುರ ಅವರಿಗೆ ಮೈಗಾವಲರಾಗಿ ವೇದಿಕೆಯ ಮೇಲೆ ಕಾಣಿಸಿಕೊಂಡರು ಮತ್ತು "ಐ ಡ್ರೀಮ್ಡ್ ಅ ಡ್ರೀಮ್" ಹಾಡನ್ನು ಹಾಡಿದರು.[೯೮]

2010ರ ಗ್ರೆಮಿ ಪ್ರಶಸ್ತಿಗೆ[೯೯] ಚುನಾಯಿತರಾಗದಿದ್ದರೂ, ಅದರ ನಿರೂಪಕ ಸ್ಟೀಫೆನ್ ಕೊಲ್‌ಬ್ರೆಟ್ ಸಮಾರಂಭದಲ್ಲಿ ಬೊಯೆಲ್‌ರ ಗೌರವಾರ್ಪಣೆ ಮಾಡಿದರು, "ನೀವು ಜಗತ್ತಿನಲ್ಲಿಯೇ ಸ್ವಸ್ಥ ಚಿತ್ತ ಉಳ್ಳವರಿರಬಹುದು, ಆದರೆ ಈ ವರ್ಷ ನಿಮ್ಮ ಉದ್ಯಮವನ್ನು ಒಂದು ಒಬ್ಬ 48 ವಯಸ್ಸಿನ ವಿವೇಚನೆಯುಳ್ಳ ಸ್ಕಾಟ್‌ಲ್ಯಾಂಡ್‌ನ ಮಹಿಳೆ ಉಳಿಸಿದ್ದಾರೆ."[೧೦೦] 2010ರ ಬ್ರಿಟ್ ಪ್ರಶಸ್ತಿಗಳ ಯಾವುದೇ ವಿಭಾಗದಲ್ಲಿ ಬೊಯೆಲ್‌ರ ಹೆಸರು ಸೂಚಿಸಲಾಗಿರಲಿಲ್ಲ ಎಂಬ ಕಾರಣದಿಂದಾಗಿ ಪ್ರಾರಂಭದಲ್ಲಿಯೇ ವಿವಾದಗಳಾಗಿದ್ದವು.[೧೦೧]

ಸಾಮಾಜಿಕ ವಿಶ್ಲೇಷಣೆ[ಬದಲಾಯಿಸಿ]

ರೂಪದ ಆಧಾರದ ಮೇಲೆ ತೀರ್ಪು[ಬದಲಾಯಿಸಿ]

ಈ ಆರಂಭದ ಪ್ರತಿಕ್ರಿಯೆಯನ್ನು ಹೆಚ್ಚಿಸುವ ರೀತಿಯಲ್ಲಿ ನಿರ್ಮಾಪಕರು ಬೊಯೆಲ್‌ರನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಿ, ಕಾರ್ಯಕ್ರಮದ ಈ ಕಥೆಯ ತಿರುವಿನನ ಸಾಮರ್ಥ್ಯವನ್ನು ನಿರೀಕ್ಷಿಸಿರಬಹುದು ಎಂದು ದ ಹಫಿಂಗ್‌ಟನ್ ಪೋಸ್ಟ್ ಬರೆಯಿತು.[೧೦೨] ದ ಹೆರಾಲ್ಡ್ ಬೊಯೆಲ್‌ರ ಕಥೆಯನ್ನು ಆಧುನಿಕ ನೀತಿಕಥೆ ಹಾಗೂ ಜನರ ಇತರರನ್ನು ಅವರ ದೈಹಿಕ ಕಾಣ್ಕೆಯ ಆಧಾರದ ಮೇಲೆ ತೀರ್ಮಾನಿಸುವ ಪ್ರವೃತ್ತಿಗೆ ಒಂದು ಛೀಮಾರಿ ಎಂದು ವಿವರಿಸಿದೆ.[೧೦೩] ಅದೇ ರೀತಿ ಎಂಟರ್‌ಟೇನ್‌ಮೆಂಟ್ ವೀಕ್ಲಿ ,

’ದೈಹಿಕ ಆಕರ್ಷಣೆ ಹಾಗೂ ಅಭಿನಯವನ್ನು ನಿರಂತರವಾಗಿ ಮಹತ್ವ ನೀಡುವ ಸಂಸ್ಕೃತಿಯಲ್ಲಿ ಬೊಯೆಲ್‌ರ ಪ್ರದರ್ಶನ ಪ್ರತಿಭೆಯ ಹಾಗೂ ನೈಪುಣ್ಯತೆಗೆ ಸಂದ ವಿಜಯವಾಗಿದೆ’ ಎಂದು ಹೇಳಿತು.[೧೦೪] ಅವರ ಆರಂಭದ ವರ್ತನೆ ಹಾಗೂ ಸರಳ ರೂಪ ತೀರ್ಪುಗಾರರನ್ನು ಹಾಗೂ ಪ್ರೇಕ್ಷಕರನ್ನು "ಅವರು ಬಾತುಕೋಳಿ ತರಹ ಕರ್ಕಶ ಕೂಗಿನ ಹಾಡನ್ನು ಹಾಡುತ್ತಾರೆಂದು" ಕಾಯುವಂತೆ ಮಾಡಿತು ಎಂದು ದ ವಾಷಿಂಗ್ಟನ್ ಪೋಸ್ಟ್ ನಂಬಿತ್ತು

Modern society is too quick to judge people on their appearances. [...] There is not much you can do about it; it is the way they think; it is the way they are. But maybe this could teach them a lesson, or set an example.

Susan Boyle, The Washington Post[೧೦೫]

.[೧೦೬]

ಒಬ್ಬ ದುರ್ಬಲ ವ್ಯಕ್ತಿ ಅಪಹಾಸ್ಯ ಅಥವಾ ಅವಮಾನಕ್ಕೆ ಈಡಾಗುತ್ತಿದ್ದು, ಅನಿರೀಕ್ಷಿತವಾಗಿ ಆ ವ್ಯಕ್ತಿ ಮಹತ್ಸಾಧನೆಯನ್ನು ಗಳಿಸುವುದು ಸಾಹಿತ್ಯ ಜಗತ್ತಿನಲ್ಲಿ ಒಂದು ಸಾಮಾನ್ಯ ತಿರುವಾಗಿದೆ, ಮತ್ತು ಪ್ರೇಕ್ಷಕರ ತಿರಸ್ಕಾರದ ಭಾವಕ್ಕೆ ವಿರುದ್ಧವಾಗಿ ಬೊಯೆಲ್‍ರ ಅತ್ಯುತ್ತಮ ಗುಣಮಟ್ಟದ ಗಾಯನವು ಅವರ ಪ್ರದರ್ಶನವನ್ನು ದೂರದರ್ಶನದ ಒಂದು ಅತ್ಯಂತ ಆಕರ್ಷಕ ಅಂಶವಾಗಿಸಿತು, ಎಂದು ನ್ಯೂಯಾರ್ಕ್‌ನ ಡೇಲಿ ನ್ಯೂಸ್‌ ಹೇಳಿತು.[೧೦೭]

ಸ್ತ್ರೀವಾದಿ ದೃಷ್ಟಿಕೋನ[ಬದಲಾಯಿಸಿ]

ದ ಗ್ಯಾದರಿಂಗ್ ನೋಟ್‌ ನ ಸಂಗೀತ ವಿಮರ್ಶಕರಾದ R.M. ಕ್ಯಾಂಪಬೆಲ್ಲ್‌ರು ಬೊಯೆಲ್‌ರನ್ನು ಎಲ್ಲಾ ಫಿಟ್ಜ್‌ಜೆರಾಲ್ಡ್‌ರಿಗೆ ಹೋಲಿಸಿದರು, ಅದರಲ್ಲೂ "[...ಅದು] ಮಹಿಳೆಯರು ಆಕರ್ಷಕವಾಗಿರದಿದ್ದರೆ ವೃತ್ತಿಜೀವನ ಸ್ಥಾಪಿಸುವುದು ನಿಜವಾಗಿಯೂ ಕಠಿಣ" ಎಂದು ಅವರು ಹೇಳಿದರು.[೧೦೮] ಲೆಟ್ಟಿ ಕೊಟಿನ್ ಪೊಗ್ರೆಬಿನ್ ಹಫಿಂಗ್‌ಟನ್ ಪೊಸ್ಟ್‌ ನಲ್ಲಿನ ಇನ್ನೊಂದು ಲೇಖನದಲ್ಲಿ, ಜನರು "ಕಳೆದ ವರ್ಷಗಳಲ್ಲಿ ವ್ಯಯವಾಗಿ ಹೋಗಿರುವ ಆಕೆಯ ಪ್ರತಿಭೆಯ ಕುರಿತಾಗಿ ಅತ್ತರೂ", ಬೊಯೆಲ್‌ರ ಆ ಪ್ರದರ್ಶನವು, ಆ ವಯಸ್ಸಿನವರನ್ನು ತಿರಸ್ಕರಿಸುವ ಯುವಜನರ ಸಂಸ್ಕೃತಿಯ ಮೇಲೆ "ಒಂದು ನಿರ್ಧಿಷ್ಟ ವಯಸ್ಸಿನ ಮಹಿಳೆಯರ" ಗೆಲುವು ಆಗಿತ್ತು, ಎಂದು ಬರೆದಿದ್ದಾರೆ.[೧೦೯]

ತಾನ್ಯಾ ಗೋಲ್ಡ್ ದ ಗಾರ್ಡಿಯನ್‌ ನಲ್ಲಿ, ಮೊದಲನೆಯ ಧ್ವನಿ ಪರೀಕ್ಷೆಯಲ್ಲಿ ಬೊಯೆಲ್‌ರ ಕುರಿತ ಪ್ರತಿಕೂಲತೆಯಿಂದ ಕೂಡಿದ ಸ್ವಾಗತ ಹಾಗೂ ಪೌಲ್ ಪೊಟ್ಸ್‌ರಿಗೆ ತೋರಿದ ಹೆಚ್ಚು ನಿರಾಸಕ್ತ ಪ್ರತಿಕ್ರಿಯೆಯಲ್ಲಿ ವ್ಯತ್ಯಾಸವು ಸಮಾಜವು ಮಹಿಳೆಯರು ಒಳ್ಳೆಯ-ರೂಪ ಹಾಗೂ ಪ್ರತಿಭೆ ಎರಡನ್ನೂ ಹೊಂದಿರಬೇಕು ಎಂಬ ನಿರೀಕ್ಷೆಯನ್ನು ಹೊಂದಿರುತ್ತದೆ, ಆದರೆ ಪುರುಷರ ಪ್ರತಿ ಇಂತಹ ಯಾವುದೇ ನಿರೀಕ್ಷೆ ಇರುವುದಿಲ್ಲ ಎಂದು ಪ್ರತಿಬಿಂಬಿಸಿತು ಎಂದು ಬರೆದಿದ್ದಾರೆ.[೧೧೦] "ಅವರು ಕೈಗೆ ಎಟುಕದ ಹಗಲುಗನಸಿನ ದೇವತೆ ಆಗದೇ ಒಬ್ಬ ಸಾಮಾನ್ಯ ಮಹಿಳೆ ಆದ್ದರಿಂದ ಜನರು ಅವರಿಗೆ ಪ್ರತಿಕ್ರಿಯಿಸುತ್ತಾರೆ" ಎಂದು ಲಾಸ್ ಆಂಜಲ್ಸ್‌ನ ಧ್ವನಿಯ ಶಿಕ್ಷಕ ಎರಿಕ್ ವೆಟ್ರೊ ಹೇಳಿದ್ದಾರೆ.[೧೧೧]

’ಅಮೆರಿಕನ್ ಡ್ರೀಮ್’[ಬದಲಾಯಿಸಿ]

ಹಲವು ಮಾಧ್ಯಮ ಸೂತ್ರಗಳ ಟಿಪ್ಪಣಿಯ ಅನುಸಾರ ಬೊಯೆಲ್‌ರ ಯಶಸ್ಸು ಸಂಯುಕ್ತ ರಾಷ್ಟ್ರದಲ್ಲಿ ಒಂದು ನಿರ್ಧಿಷ್ಟ ಅನುರಣನವನ್ನು ಉಂಟು ಮಾಡಿದೆ. ಒಬ್ಬ ಅಮೇರಿಕ ಮಾಧ್ಯಮದ ಸುದ್ದಿಗಾರನು, ಬೊಯೆಲ್‌ರ ಪ್ರತಿಭೆಯು ಪ್ರತಿಕೂಲ ಸ್ಥಿತಿ ಹಾಗೂ ಬಡತನವನ್ನು ಜಯಿಸಿದ ಕಥೆಯನ್ನು ಅಮೇರಿಕನ್ ಡ್ರೀಮ್ ಗೆ ಹೋಲಿಸಿರುವುದನ್ನು, ದ ಸ್ಕಾಟ್ಸ್‌ಮೆನ್‌ ನಲ್ಲಿ ಉಲ್ಲೇಖಿಸಲಾಗಿದೆ.[೧೧೨] ಅವರು ತನ್ನ ಸಾಮಾನ್ಯವಾದ ಜೀವನಶೈಲಿಯಲ್ಲಿ, ತನ್ನ ಊರಿನಲ್ಲಿಯೇ ಪಟ್ಟಣದ ಜೀವನದಿಂದ ದೂರವಿದ್ದು ಜೀವಿಸಿದ್ದನ್ನು ಅಸೋಶಿಯೇಟೆಡ್ ಪ್ರೆಸ್ ಬೊಯೆಲ್‌ರ "ಕಷ್ಟಕರ ಜೀವನೋಪಾಯದ ಕಥೆ" ಎಂದು ವಿವರಿಸಿದೆ.[೩೪]

ಅದೇ ರೀತಿ, ದ ಇಂಡಿಪೆಂಡೆಂಟ್ಸ್‌ ನ ನ್ಯೂಯಾರ್ಕ್‌‌ನ ಸುದ್ದಿಗಾರ ಡೆವಿಡ್ ಉಸ್ಬೋರ್ನ್, "ಶ್ರೀಕ್ ಟು ಮೈ ಫೆರ್ ಲೇಡಿ ಯಂತಹ ಕಿನ್ನರ ಕಥೆಗಳಲ್ಲಿ ಇರುವಂತೆ ಸಾಮಾನ್ಯ ಹೆಣ್ಣೊಬ್ಬಳು ತಕ್ಷಣವಾಗಿ ಸುಂದರ ಯುವತಿಯಾಗಿ ಬದಲಾಗುವ" ಕತೆಗಳಿಗೆ ಅಮೇರಿಕಾ ಸಂಯುಕ್ತ ಸಂಸ್ಥಾನವು ಯಾವಾಗಲೂ ಸ್ಪಂದಿಸುತ್ತದೆ, ಎಂದು ಬರೆದಿದ್ದಾರೆ.[೧೧೩]

ಸಾಂಸ್ಕೃತಿಕ ಉಲ್ಲೇಖಗಳು[ಬದಲಾಯಿಸಿ]

ಅಮೇರಿಕಾದ ಕಾರ್ಟೂನ್ ಕಾರ್ಯಕ್ರಮ ಸೌಥ್ ಪಾರ್ಕ್‌ ನ "ಫಾಟ್‌ಬೀಯರ್ಡ್" ಎಂಬ ಒಂದು ಸಂಚಿಕೆಯಲ್ಲಿ ಸುಸಾನ್ ಬೊಯೆಲ್‌ರ ಉಲ್ಲೇಖವನ್ನು 22 ಏಪ್ರಿಲ್ 2009ರಲ್ಲಿ ಪ್ರಸಾರ ಮಾಡಲಾಯಿತು;[೧೧೪][೧೧೫] ಲೇಟ್ ನೈಟ್ ವಿಥ್ ಜಿಮ್ಮಿ ಫಾಲೊನ್ ಕಾರ್ಯಕ್ರಮ ಒಂದು ಹಾಸ್ಯ ರೇಖಾಚಿತ್ರವನ್ನು ಪ್ರಸಾರ ಮಾಡಿತು, ಅದರಲ್ಲಿ ಸುಸಾನ್ ಬೊಯೆಲ್‌ರ ಪ್ರದರ್ಶನವು ಜನರ ಮೇಲೆ ಆದ "ಫಿಲ್ ಗುಡ್" ಪ್ರಭಾವವನ್ನು ತೋರಿಸಲಾಗಿತ್ತು;[೧೧೬]

ದ ಸಿಂಪ್‌ಸನ್ಸ್‌ ರು ಅದರ 20ನೇಯ ವಾರ್ಷಿಕೋತ್ಸವದ ಕಾರ್ಯಕ್ರಮ "ಸ್ಪ್ರಿಂಗ್‌ಫೀಲ್ಡ್ಸ್ ಗಾಟ್‌ ಟಾಲೆಂಟ್"‌ನ ಹೊಸ ಜಾಹಿರಾತನ್ನು ಪ್ರಸಾರ ಮಾಡಿತು, ಇದರಲ್ಲಿ ಹೊಮರ್ ಸಿಂಪ್‌ಸನ್ "ಬೊಯೆಲ್‌ರಂತಹ ದೊಡ್ಡ ಗಾಯಕಿ ಆಗಬೇಕೆಂದು" ತನ್ನ ಕನಸಿನ ಬಗ್ಗೆ ಮಾತಾಡಿದ್ದಾರೆ.[೧೧೭][೧೧೮] ದ ಸಿಮ್ಸ್ ಎಂಬ ವೀಡಿಯೋ ಗೆಮ್‌ನ ಒಂದು ಯುರೋಪಿಯನ್ ಟ್ರೇಲರ್‌ನಲ್ಲಿ ಬೊಯೆಲ್‌ರಂತೆ ನಟಿಸುವ ಒಂದು ಪಾತ್ರ ಸೇರಿದೆ.[೧೧೯] 

ಜೂನ್ 2009ರಲ್ಲಿ, BBC ಆಕಾಶವಾಣಿ 4 "ಐ ಡ್ರೀಮ್ಡ್ ಅ ಡ್ರೀಮ್" ಎಂಬ ಒಂದು ಚಿಕ್ಕ ಕಥೆಯನ್ನು ಪ್ರಸಾರ ಮಾಡಿತು, ಇದು ಬೊಯೆಲ್‌‍ರ ಬ್ರಿಟೆನ್ಸ್ ಗಾಟ್ ಟಾಲೆಂಟ್‌ ನಲ್ಲಿನ ರೂಪ ಹಾಗೂ ಗೊರ್ಡನ್ ಬ್ರೌನ್‌ರ ರಾಜಕೀಯ ಸಂಕಷ್ಟಗಳ ಸಂಯೋಜನೆಯ ಮೇಲೆ ಆಧಾರಿತವಾಗಿದೆ.[೧೨೦] 30 ರಾಕ್‌‍ ಕಾರ್ಯಕ್ರಮದ 5 ನವೆಂಬರ್ 2009ರ ಸಂಚಿಕೆಯಲ್ಲಿ ಕ್ಯಾತಿ ಗೆಯಸ್ (ಮಾರ್ಸಲಿನ್ ಹೊಗಟ್) ಪಾತ್ರವನ್ನು ಕೆಟ್ಟ ಉಡುಗೆಯಲ್ಲಿ, ಸುಸಾನ್ ಬೊಯೆಲ್‌ರಂತೆ ಹಾಡುವುದನ್ನು ಪ್ರದರ್ಶಿಸಲಾಯಿತು. ಈ ಕುರಿತು ಲಿಜ್ ಲೆಮನ್ ಹಾಗೂ ಜ್ಯಾಕ್ ಡೊನಾಘೆ ದೊಡ್ಡ ತಿರಸ್ಕಾರವನ್ನು ವ್ಯಕ್ತಪಡಿಸಿದರು.[೧೨೧]

ಧ್ವನಿಮುದ್ರಿಕೆ ಪಟ್ಟಿ[ಬದಲಾಯಿಸಿ]

ಸ್ಟುಡಿಯೋ ಆಲ್ಬಮ್‌ಗಳು[ಬದಲಾಯಿಸಿ]

ವರ್ಷ ಆಲ್ಬಂ ವಿವರಣೆಗಳು ಗರಿಷ್ಟ ಚಾರ್ಟಿನ ಸ್ಥಾನಗಳು ದೃಢೀಕರಣ
(ಬಿಕರಿಯ ಪ್ರವೇಶ)
ಮಾರಾಟಗಳು
UK
[೧೨೨]
IRE
[೧೨೩]
US
[೧೨೪]
GRE
[೧೨೫]
AUS
[೧೨೬]
NZ
[೧೨೭]
CAN
[೧೨೮]
SWI
[೧೨೯]
NL
[೧೨೯]
JPN
[೧೩೦]
GER
[೧೩೧]
2009 ಐ ಡ್ರೀಮ್ಡ್ ಅ ಡ್ರೀಮ್‌ 1 1 1 1 1 1 1 1 1 3 3 align="left"
 • NZ: 9x ಪ್ಲಾಟಿನಮ್
 • AUS: 8x ಪ್ಲಾಟಿನಮ್
 • UK: 7x ಪ್ಲಾಟಿನಮ್
 • US: 4x ಪ್ಲಾಟಿನಮ್
 • CAN: 4x ಪ್ಲಾಟಿನಮ್
 • FRA: ಪ್ಲಾಟಿನಮ್
 • JPN: ಗೋಲ್ಡ್‌
align="left"

ಏಕವ್ಯಕ್ತಿ[ಬದಲಾಯಿಸಿ]

ವರ್ಷ ಏಕ ಗರಿಷ್ಟ ಚಾರ್ಟಿನ ಸ್ಥಾನಗಳು ಆಲ್ಬಮ್‌ಗಳು
UK
[೧೩೩]
IRL
[೧೩೩]
SWI
[೧೩೪]
US
[೧೩೫]
CAN
[೧೩೫]
AUS NL BEL FRA
2009 "ವೈಲ್ಡ್ ಹಾರ್ಸಸ್‌" 9 11 98 95 93 99 31 ಐ ಡ್ರೀಮ್ಡ್ ಅ ಡ್ರೀಮ್‌
"ಐ ಡ್ರೀಮ್ಡ್ ಅ ಡ್ರೀಮ್‌" 37 20 43 62 65 66 27 37
ವಿಶೇಷ ಕಲಾವಿದೆಯಾಗಿ
2010 "ಎವರಿಬಡಿ ಹರ್ಟ್ಸ್"[೧೩೬]
(ಹೈಟಿಗೆ ಸಹಾಯಕ್ಕಾಗಿ)
align-"left"
"—" ಇದು ಧ್ವನಿಮುದ್ರಣದ ಚಾರ್ಟ್‌ ಅನ್ನು ಈ ಪ್ರದೇಶದಲ್ಲಿ ಇನ್ನೂ ರೂಪಿಸಿಲ್ಲ ಎಂಬುದನ್ನು ಸೂಚಿಸುತ್ತದೆ.

ವರ್ಷದ-ಕೊನೆಯ ಚಾರ್ಟ್‌ಗಳು[ಬದಲಾಯಿಸಿ]

ಆಲ್ಬಮ್‌ಗಳು Chart ಶ್ರೇಣಿ ಮಾರಾಟಗಳು
ಐ ಡ್ರೀಮ್ಡ್ ಅ ಡ್ರೀಮ್‌ ಯುಕೆ ಆಲ್ಬಂಸ್ ಚಾರ್ಟ್[೧೩೭] 1[೧೩೭] 1,632,732[೧೩೭]

ಆಕರಗಳು[ಬದಲಾಯಿಸಿ]

 1. ೧.೦ ೧.೧ ಸೂಸನ್ ರ ಸಹೋದರ ಜೆರ್ರಿ ಬೊಯೆಲ್ ರೊಂದಿಗೆ RadioLive NZ ನಲ್ಲಿ ಸಂದರ್ಶನ
 2. Susan Boyle: Albums, Songs, Bios, Photos from Amazon.com with middle name spelling 'Magdalane'.
 3. The Correct Spelling of Susan's Middle Name email from Gerry Boyle on forum.susan-boyle.com
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ಸ್ಕಾಟಿಷ್ ವಂಶಾನ್ವೇಷಕಿ ಕೆರೋಲಿನ್ ಜೆರಾರ್ಡ್ ಅವರು ಬೊಯಲ್‌ರ ಅಧಿಕೃತ ಜನ್ಮದಿನವನ್ನು ಎಡಿನ್‌ಬರ್ಗ್‌ನ ನ್ಯೂ ರಿಜಿಸ್ಟರ್ ಹೌಸ್‌ನಲ್ಲಿ ಕಂಡುಹಿಡಿದರು ಸೂಸನ್ ಬೊಯೆಲ್ ರ ಜನ್ಮಕುಂಡಲಿ
 6. ಬೊಯೆಲ್ "ಜಸ್ಟ್ ಟರ್ನ್ಡ್ 48". "ಸಡನ್ಲಿ ಸೂಸನ್!", ಪೀಪಲ್ , 4 ಮೇ 2009, p. 52. ನಿಯತಕಾಲಿಕೆಗಳ ಸಾಮಾನ್ಯ ಅಭ್ಯಾಸದಂತೆ, ಈ ಸಂಚಿಕೆಯು ಅದರ ಪ್ರಕಟಿತ ದಿನಾಂಕಕ್ಕಿಂತ ಹತ್ತು ದಿನಗಳು ಮೊದಲೇ ಪ್ರಕಟಗೊಂಡಿತು, ಇದು ಏಪ್ರಿಲ್ ೧೯೬೧ ರಲ್ಲಿಯೇ ಆಕೆಯ ಜನ್ಮದಿನ ಎಂಬುದನ್ನು ಸೂಚಿಸುತ್ತಿತ್ತು.
 7. ೭.೦ ೭.೧ Dobuzinskis, Alex (20 April 2009). "Susan Boyle breaks past 100 million online views". Reuters. 
 8. ಸೂಸನ್ ಬೊಯೆಲ್‌ರ ಪ್ರಾರಂಭದ ಆಲ್ಬಂ ನಂಬರ್ ಒನ್ ಸ್ಥಾನದಲ್ಲಿ - ಅದು ಬಿಡುಗಡೆಗೊಳ್ಳುವ ಮೂರು ತಿಂಗಳ ಮೊದಲು, ದ ಡೇಲಿ ಮಿರರ್ , 4 ಸೆಪ್ಟೆಂಬರ್ 2009.
 9. ೯.೦ ೯.೧ ಆ‍ಯ್‌೦ಡಿ ಪಿಂಬರ್ಟನ್, "ಸೂಸನ್ ಬೊಯೆಲ್ ಸ್ಟಿಕ್ಸ್ ಟು ನ್ಯಾಚುರಲ್ ಲುಕ್ಸ್ ಫಾರ್ ನ್ಯೂ ಆಲ್ಬಂ ಕವರ್," ಪ್ರಕಟಿಸಿ ದಿನಾಂಕ 14 ಅಕ್ಟೋಬರ್ 2009, ಮ್ಯೂಸಿಕ್‌ಟ್ಯೂಬ್‌ ನಲ್ಲಿ, ಯಾಹೂ ಮ್ಯೂಸಿಕ್‌ನಲ್ಲಿ ದೊರೆಯಿತು. (13 ಅಕ್ಟೋಬರ್ 2006ರಂದು ನೋಡಲಾಯಿತು)
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. ಸಿಮನ್ ಸೇಯ್ಸ್: 'ಬೊಯೆಲ್' ಈಸ್ ಎಕ್ಸ್‌‍ಟ್ರಾಆರ್ಡಿನರಿಲಿ ಗುಡ್', ಎಕ್ಸ್‌ಟ್ರಾ , 17 ಜುಲೈ 2009.
 12. ಆಲ್ಬಂ ಕೌಂಟ್‌ಡೌನ್ 2009, ಆನ್‌ಲೈನ್ ವರ್ಲ್ಡ್ ಚಾರ್ಟ್‌, 9 ಜನವರಿ 2010.
 13. ೧೩.೦ ೧೩.೧ ೧೩.೨ ೧೩.೩ ೧೩.೪ ೧೩.೫ ೧೩.೬ ೧೩.೭ ೧೩.೮ ೧೩.೯ Harris, Gillian (19 April 2009). "She who laughs last - songstress Susan Boyle". The Sunday Times. 
 14. ೧೪.೦ ೧೪.೧ "Profile: Susan Boyle - Britain's got the unlikeliest angel". The Sunday Times. 19 April 2009. 
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. ೧೬.೦ ೧೬.೧ ೧೬.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. ೧೭.೦ ೧೭.೧ ೧೭.೨ ೧೭.೩ ೧೭.೪ Holmwood, Leigh (18 April 2009). "Susan Boyle: a dream come true". The Guardian.  Cite error: Invalid <ref> tag; name "Holmwood" defined multiple times with different content
 18. ೧೮.೦ ೧೮.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. ೧೯.೦ ೧೯.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. "Video exclusive: Susan Boyle's earliest singing performance on film revealed". Daily Record. 30 April 2009. 
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. ೨೫.೦ ೨೫.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Parry, Chris (24 April 2009). "Susan Boyle charity CD auction price hits $2000 on eBay". Vancouver Sun. 
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. "Susan Boyle: No One-Trick Pony". New York Post. 17 April 2009. 
 30. "New recording cements Talent show sensation Susan's status". Hello!. 17 April 2009. 
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. McGinty, Stephen (20 April 2009). "Campbell has new spin on Susan Boyle phenomenon". The Scotsman. 
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. ೩೪.೦ ೩೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. ೩೫.೦ ೩೫.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. ೩೬.೦ ೩೬.೧ ೩೬.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. "Scottish singer 'gobsmacked' by overnight stardom". CNN. 17 April 2009. 
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Jackson, Bart (17 April 2009). "You tube sensation Susan Boyle sends ticket sales rocketing for Vancouver Les Misérables". Vancouver Sun. 
 41. "Susan Boyle sensation sends sales of Vancouver production of Les Miserables through the roof". Globe and Mail. 17 April 2009. 
 42. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. ೪೬.೦ ೪೬.೧ Brook, Stephen (3 June 2009). .guardian.co.uk/media/2009/jun/03/susan-boyle-britains-got-talent-press-warned "Susan Boyle: press warned to back off Britain's Got Talent star" Check |url= value (help). The Guardian. 
 47. ೪೭.೦ ೪೭.೧ ೪೭.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Cowell, Simon (20 June 2009). "After the Britain's Got Talent backlash, Simon Cowell finally admits: 'Sorry, I did make mistakes'". 
 49. "Talent star Boyle taken to clinic". BBC News. 1 June 2009. 
 50. "Susan Boyle leaves The Priory". Times Online. 5 June 2009. 
 51. "'TALENT' Star Susan Boyle Records First Song For Debut Album". Broadwayworld.com. 8 July 2009. 
 52. "Talent show stars wow Granite City audience". Press and Journal. 24 June 2009. 
 53. "Susan Boyle live performance". Edinburgh Evening News. 12 June 2009. 
 54. "'TALENT' Star Susan Boyle Records First Song For Debut Album". Irish Central. 30 June 2009. 
 55. "Touch and go as Boyle joins tour". BBC News. 13 June 2009. 
 56. "Britain's Got Talent stars wow Coventry's Ricoh Arena". The Coventry Telegraph. 26 June 2009. 
 57. "Susan Boyle on form on Britain's Got Talent tour in Birmingham". Birmingham Mail. 17 June 2009. 
 58. "Fans Hail Subo For Live Show". The Sun. 22 June 2009. 
 59. "No theatrics, just a spotlight and Susan Boyle's soaring voice". Belfast Telegraph. 2 July 2009. 
 60. "Susan Boyle (Britain's Got Talent)- I Dreamed A Dream". Play.com. 24 November 2009.  External link in |work= (help)
 61. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 62. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 63. "Leona Lewis's 'Spirit' becomes Britain's fastest-selling debut album". Highbeam.com. 17 November 2007.  External link in |work= (help)
 64. ೬೪.೦ ೬೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 65. "Susan Boyle, Top Seller, Shakes Up CD Trends". Nytines.com. 2 December 2009.  External link in |work= (help)
 66. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 67. http://www.people.com/people/article/0,,20331581,00.html
 68. ಆಲ್ಬಂ ಕೌಂಟ್‌ಡೌನ್ 2009, ಆನ್‌ಲೈನ್ ವರ್ಲ್ಡ್ ಚಾರ್ಟ್, 9 ಜನವರಿ 2010.
 69. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 70. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 71. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 72. Lua error in ಮಾಡ್ಯೂಲ್:Citation/CS1 at line 3472: bad argument #1 to 'pairs' (table expected, got nil).
 73. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 74. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 75. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 76. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 77. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 78. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 79. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 80. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 81. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 82. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 83. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 84. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 85. "Susan Boyle, stunned the world after the vote as a mockery of the public". Al Arabiya (in Arabic). 17 April 2009. 
 86. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 87. "Susan Boyle aims to turn celebrity into album sales". Reuters. 20 November 2009. 
 88. Ram, Vidya (17 April 2009). "Susan Boyle Could Make Millions". Forbes. 
 89. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 90. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 91. ೯೧.೦ ೯೧.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 92. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 93. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 94. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 95. Staff (21 April 2009). "Jay Leno performs in drag as Susan Boyle". Daily Telegraph. 
 96. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 97. ಯೊಮಿಯೂರಿ ಷಿಬುನ್2009-12-25, Ver.13S p.25
 98. 31 ಡಿಸೆಂಬರ್ 2009 ರಂದು ಟಿವಿ ಜಪಾನ್‌ನಲ್ಲಿ ಧ್ವನಿಮುದ್ರಿತ ಪ್ರಸಾರ
 99. staff (03 December 2009). "Grammy Nominations Poll Results: How Did We Do?". Billboard.  Check date values in: |date= (help)
 100. David Gunn (01 February 2010). "Grammys host pays tribute to Susan Boyle, 'the Scottish cat lady'". The Scotsman.  Check date values in: |date= (help)
 101. http://news.bbc.co.uk/1/hi/entertainment/8466868.stm
 102. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 103. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 104. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 105. Jordan, Mary. The Scot Heard Round the World, The Washington Post, 14 April 2009.
 106. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 107. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 108. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 109. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 110. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 111. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 112. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 113. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 114. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 115. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 116. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 117. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 118. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 119. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 120. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 121. '30 ರಾಕ್' ರೀಕ್ಯಾಪ್: ಡು ದ ರೋಬೋಟ್
 122. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 123. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 124. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 125. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 126. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 127. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 128. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 129. ೧೨೯.೦ ೧೨೯.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 130. (Japanese) Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 131. http://www.media-control.de/musik-charts.html
 132. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 133. ೧೩೩.೦ ೧೩೩.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 134. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 135. ೧೩೫.೦ ೧೩೫.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 136. http://www.dailymail.co.uk/tvshowbiz/article-1245139/Everybody-Hurts-Simon-Cowells-charity-Haiti-single--stars-line-part.html
 137. ೧೩೭.೦ ೧೩೭.೧ ೧೩೭.೨ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಹೊರಗಿನ ಕೊಂಡಿಗಳು[ಬದಲಾಯಿಸಿ]