ಸುಶ್ಮಾ ವರ್ಮಾ

ವಿಕಿಪೀಡಿಯ ಇಂದ
Jump to navigation Jump to search
ಸುಶ್ಮಾ ವರ್ಮಾ

ಸುಶ್ಮಾ ವರ್ಮಾ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸಮಾನ್ ಹಾಗೂ ವಿಕೇಟ್ ಕೀಪರ್. ದೇಶಿ ಕ್ರಿಕೆಟ್‍ನಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ತಂಡಕ್ಕೆ ಆಡುತ್ತಾರೆ.[೧]


ಆರಂಭಿಕ ಜೀವನ[ಬದಲಾಯಿಸಿ]

ಸುಶ್ಮಾ ರವರು ನವಂಬರ್ ೦೩, ೧೯೯೭ರಂದು ಶಿಮ್ಲಾ ಹಿಮಾಚಲ ಪ್ರದೇಶದಲ್ಲಿ ಜನಿಸಿದರು. ಇವರ ತಂದೆ ಭೋಪಾಲ್ ಸಿಂಗ್ ವರ್ಮಾ ಸುಶ್ಮಾರವರು ಮನೆಗೆ ಸಮೀಪದಲ್ಲಿ ಉಳಿಯಲು ಬಯಸಿದ್ದರು. ಆದರೆ ಶಿಮ್ಲಾದಲ್ಲಿರುವ "ಪೋರ್ಟ್ಮೋರ್ಟ್ ಗವರ್ನಮೆಂಟ್ ಮಾಡೆಲ್" ಶಾಲೆಗೆ ಹೋಗಲು ಸುಷ್ಮಾ ನಿಸ್ಚಯಿಸಿದರು.ಇವರು ಕ್ರಿಕೆಟ್ ಅಷ್ಟೆ ಅಲ್ಲದೆ ವಾಲಿಬಾಲ್, ಹ್ಯಾಂಡ್ಬಾಲ್, ಮತ್ತು ಬ್ಯಾಡ್ಮಿಂಟನ್‍ ಆಡುತ್ತಾರೆ. ಈ ಆಟಗಳಲ್ಲಿ ಇವರು ರಾಜ್ಯಮಟ್ಟದ ಆಟಗಾರರಾಗಿದ್ದರೂ ಇವರು ಕ್ರಿಕೆಟ್‌ನ ಸಾಥ ಹಿಡಿದರು.[೨][೩][೪]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ಇವರು ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‍ಗಾಗಿ ಆಟವಾಡಿದ್ದಾರೆ. ಇವರ ನಾಯಕತ್ವದಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ತಂಡ ೨೦೧೧ರಲ್ಲಿ ಅಂಡರ್-೧೯ ಆಲ್-ಇಂಡಿಯಾ ಮಹಿಳೆಯರ ಪಂದ್ಯಾವಳಿಯಲ್ಲಿ ರನ್ನರ್-ಅಪ್ ಆಗಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಭಾರತವನ್ನು ಪ್ರತಿನಿಧಿಸಲು ಹಿಮಾಚಲ ಪ್ರದೇಶದಿಂದ ಆಯ್ಕೆಯಾದ ಮೊದಲ ಕ್ರಿಕೆಟಿಗರಾಗಿದ್ದಾರೆ.

ದೇಶೀ ಕ್ರಿಕೆಟ್‍ನಲ್ಲಿ ಕಡಿಮೆ ಅವಕಾಶಗಳನ್ನು ಪಡೆದ ಇವರು, ರೈಲ್ವೇಸ್‌ಗಾಗಿ ಆಟವಾಡಲು ಪ್ರಾರಂಭಿಸಿದರು. ಇವರು ಮಿಥಾಲಿ ರಾಜ್, ಹರ್ಮನ್ಪ್ರೀತ್ ಕೌರ್ ಮತ್ತು ಪುನಾಮ್ ರೌತ್ರೊಂದಿಗೆ ಆಟವಾಡಿದ್ದಾರೆ.[೫]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಏಪ್ರಿಲ‍್ ೦೫, ೨೦೧೩ರಲ್ಲಿ ವಡೋದರಾದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ದ ನಡೆದ ಮೂರನೇ ಟಿ-೨೦ ಪಂದ್ಯದ ಮೂಲಕ ಸುಶ್ಮಾ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ನವಂಬರ್ ೧೬, ೨೦೧೪ರಲ್ಲಿ ಮೈಸೂರಿನಲ್ಲಿ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ವಿರುದ್ಧ ನಡೆದ ಏಕೈಕ ಟೆಸ್ಟ್ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು. ನಂತರ ನವಂಬರ್ ೨೪, ೨೦೧೪ರಲ್ಲಿ ಬೆಂಗಳೂರಿನಲ್ಲಿ ದಕ್ಷಿಣ ಆಫ್ರಿಕ ಕ್ರಿಕೆಟ್ ತಂಡದ ವಿರುದ್ಧ ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್ನಲ್ಲಿ ಪಾದಾರ್ಪನೆ ಮಾಡಿದರು.[೬][೭][೮]


ಪಂದ್ಯಗಳು[ಬದಲಾಯಿಸಿ]

 • ಏಕದಿನ ಕ್ರಿಕೆಟ್ : ೩೮ ಪಂದ್ಯಗಳು[೯]
 • ಟಿ-೨೦ ಕ್ರಿಕೆಟ್ : ೧೯ ಪಂದ್ಯಗಳು
 • ಟೆಸ್ಟ್ ಕ್ರಿಕೆಟ್ : ೦೧ ಪಂದ್ಯಗಳು


ಉಲ್ಲೇಖಗಳು[ಬದಲಾಯಿಸಿ]

 1. https://www.cricket.com.au/players/sushma-verma/FmHHkUp0A0GYbHJr9MUbMA
 2. https://indianexpress.com/article/india/india-others/she-shunned-volleyball-shorts-for-white-flannels-is-first-hp-woman-in-indian-squad/
 3. https://www.cricbuzz.com/cricket-news/78783/icc-world-t20-2016-accidental-wicketkeeper-sushma-verma-the-india-womens-cricket-team-player-braces-for-dharamsala-homecoming
 4. http://www.espncricinfo.com/magazine/content/story/889913.html
 5. http://www.bcci.tv/player/3167/Sushma-Verma
 6. http://www.espncricinfo.com/series/12157/scorecard/625900/india-women-vs-bangladesh-women-3rd-t20i-bangladesh-women-tour-of-india-2012-13
 7. http://www.espncricinfo.com/series/11521/scorecard/797899/india-women-vs-south-africa-women-only-test-south-africa-women-tour-of-india-2014-15
 8. http://www.espncricinfo.com/series/8674/scorecard/797901/india-women-vs-south-africa-women-1st-odi-icc-womens-championship-2014-2016-17
 9. http://www.espncricinfo.com/india/content/player/597821.html