ಸುಲೋಚನಾ ಗಾಡ್ಗೀಳ್
ಸುಲೋಚನಾ ಗಾಡ್ಗೀಳ್ | |
---|---|
ಜನನ | ೧೯೪೪ |
ಕಾರ್ಯಕ್ಷೇತ್ರಗಳು | ಹವಮಾನಶಾಸ್ತ್ರ |
ಸಂಸ್ಥೆಗಳು | ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಟ್ರೊಪಿಕಲ್ ಮೆಟೀರ್ಯೊಲೊಜಿ |
ಅಭ್ಯಸಿಸಿದ ಸಂಸ್ಥೆ | ಪುಣೆ ವಿಶ್ವವಿದ್ಯಾಲಯ |
ಸುಲೋಚನಾ ಗಾಡ್ಗೀಳ್ ರವರು ಭಾರತದ ಬೆಂಗಳೂರಿನಲ್ಲಿರುವ ಅಟ್ಮಾಸ್ಪಿಯರ್ ಅಂಡ್ ಓಷಿಯಾನಿಕ್ಸ್ ಸೈನ್ಸ್(ಸಿಎಒಎಸ್)ಕೇಂದ್ರದಲ್ಲಿ ಭಾರತೀಯ ಹವಮಾನಶಾಸ್ತ್ರಜ್ಞರಾಗಿದ್ದಾರೆ. ಮಳೆಗಾಲದ ವ್ಯತ್ಯಾಸವನ್ನು ನಿಭಾಯಿಸಲು ಕೃಷಿ ತಂತ್ರಗಳು ಮತ್ತು ವಿಕಸನ ವಿದ್ಯಾಮಾನಗಳನ್ನು ಒಳಗೊಂಡಂತೆ ಮಾನ್ಸೂನ್ ಹೇಗೆ ಮತ್ತು ಏಕೆ ಎಂದು ಅವರು ಅಧ್ಯಯನ ಮಾಡಿದ್ದಾರೆ. ಅವರ ಸಂಶೋಧನೆಯ ಮಾನ್ಸೂನ್ ಕ್ಲೌಡ್ ಬ್ಯಾಂಡ್ಗ್ಳಲ್ಲಿನ ಉಪಕಾಲೋಚಿತ ಬದಲಾವಣೆಯ ಮೂಲ ಲಕ್ಷಣವನ್ನು ಕಂಡುಹಿಡಿಯಲು ಕಾರಣವಾಯಿತು. ಮಾನ್ಸೂನ್ ಧೈತ್ಯಾಕಾರದ ಭೂಮಿಯಲ್ಲಿ ಸಮುದ್ರದ ತಂಗಾಳಿ ಅದರ ಬದಲಾಗಿ ಮಾನ್ಸೂನ್ ಅಲ್ಲದ ಪ್ರದೇಶಗಳ ಮೇಲೆ ಕಂಡು ಬರುವ ಗ್ರಹಗಳ ಪ್ರಮಾಣದ ಕಾಲೋಚಿತ ವಲಸೆಯ ಅಭಿವ್ಯಕ್ತಿಯಾಗಿದೆ. ರೈತರ ಸಹಯೋಗದೊಂದಿಗೆ ಅವರು ಕೃಷಿ ತಂತ್ರಗಳನ್ನು ಪಡೆದರು. ಇದು ಭಾರತೀಯ ಪ್ರದೇಶದ ವಿವಿಧ ಪ್ರದೇಶಗಳ ಮಳೆ ವ್ಯತ್ಯಾಸಕ್ಕೆಅನುಗುಣವಾಗಿರುತ್ತದೆ. [೧]
ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಇವರು ೧೯೪೪ ಪುಣೆಯಲ್ಲಿ ಜನಿಸಿದರು. ಇವರ ತಂದೆ ಮತ್ತು ಅಜ್ಜ ಅವರ ಕಾಲದಲ್ಲಿ ಗೌರವಾನ್ವಿತ ಭೌತಶಾಸ್ತ್ರಜ್ಞರಾಗಿದ್ದರು. ಅದೇ ಸಮಯದಲ್ಲಿ ಅವರ ಅಜ್ಜ ಒಬ್ಬ ಸ್ವಾತಂತ್ರ್ಯ ಹೋರಾಟಗಾರರಾಗಿ ಹಲವಾರು ಸಂಘಟನೆಗಳಲ್ಲಿ ಭಾಗವಹಿಸಿದ್ದರು. ಇವರ ತಾಯಿ ಮರಾಟಿ ಬರಹಗಾರ್ತಿಯಾಗಿದ್ದರು. ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಪುಣೆಯ ಮರಾಠಿ ಮಾಧ್ಯಮದಲ್ಲಿ ಕಲಿತರು. ನಂತರ ತನ್ನ ಪ್ರೌಢ ಶಿಕ್ಷಣವನ್ನು ಆಂಧ್ರಪ್ರದೇಶದ ರಿಷಿವ್ಯಾಲಿ ಸ್ಕೂಲ್ ನಲ್ಲಿ ಆಂಗ್ಲಮಾಧ್ಯಮದಲ್ಲಿ ಮುಗಿಸಿದರು. ಮತ್ತೆ ತನ್ನ ಪದವಿ ಶಿಕ್ಷಣಕ್ಕಾಗಿ ಪುಣೆಗೆ ಬಂದು, ಅಲ್ಲಿ ಫರ್ಗ್ಯೂಸನ್ ಕಾಲೇಜಿನಲ್ಲಿ ರಸಾಯನ ಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರವನ್ನು ಕಲಿತರು. ಈ ಸಮಯದಲ್ಲಿ ಮಾಧವ ಗಾಡ್ಗಿಲ್ ಅವರೊಂದಿಗೆ ವಿವಾಹವಾದರು. ನಂತರ ಇಬ್ಬರು ವೈಜ್ಞಾನಿಕ ವೃತ್ತಿಯಲ್ಲಿ ಮುಂದುವರೆದರು.[೨]
ಮರಳಿ ಭಾರತಕ್ಕೆ
[ಬದಲಾಯಿಸಿ]೧೯೭೧ರಲ್ಲಿ ಶ್ರೀಮತಿ ಗಾಡ್ಗೀಳ್ ಅವರು ತನ್ನ ಪತಿಯೊಂದಿಗೆ ಮರಳಿ ಭಾರತಕ್ಕೆ ಬಂದರು. ಅವರು ಇಂಡಿಯನ್ ಇನ್ಸ್ಟಿಟ್ಯುಟ್ ಆಫ್ ಟ್ರೊಪಿಕಲ್ ಮೆಟೀರ್ಯೊಲೊಜಿಅಲ್ಲಿ ಸಿಎಸ್ಐಆರ್ ಅಧಿಕಾರಿಯಾಗಿ ಎರೆಡು ವರ್ಷ ಕಾರ್ಯನಿರ್ವಹಿಸಿದರು. ಅವರು ವಿಜ್ಞಾನಿಗಳಾದ ಆರ್.ಅನಂತಕ್ರಷ್ಣನ್ಮ ತ್ತು ಡಿ.ಆರ್.ಸಿಕ್ಕ ಇವರೊಂದಿಗೆ ಕೆಲಸ ಮಾಡಿದ್ದಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಪರಿಸರ ವಿಜ್ಞಾನಿಯಾದ ಮಾಧವ ಗಾಡ್ಗೀಳ್ ಅವರನ್ನು ವಿವಾಹವಾದರು. ನಂತರ ಮಗಳು ಮತ್ತು ಮಗ ಜನಿಸಿದರು. ಮಾಧವ್ ಗಾಡ್ಗೀಳ್. [೩]
ಉಲ್ಲೇಖಗಳು
[ಬದಲಾಯಿಸಿ]- ↑ https://web.archive.org/web/20140316230820/http://www.insaindia.org/detail.php?id=N95-1173
- ↑ "Bulletin". World Meteorological Organization (in ಇಂಗ್ಲಿಷ್). 21 September 2015. Archived from the original on 20 ಮಾರ್ಚ್ 2020. Retrieved 21 March 2020.
- ↑ https://journals.ametsoc.org/doi/pdf/10.1175/1520-0493%281980%29108%3C1840%3AOTMCZA%3E2.0.CO%3B2