ವಿಷಯಕ್ಕೆ ಹೋಗು

ಸುರೇಶ್ ಅಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ambigara Chouwdayya Jayanti procession Mp Suresh Angadi

ಸುರೇಶ್ ಚನ್ನಬಸಪ್ಪ ಅಂಗಡಿ (೦೧ಜೂನ್೧೯೫೫ - ೨೩ಸೆಪ್ಟೆಂಬರ್೨೦೨೦) ಒಬ್ಬ ಭಾರತೀಯ ರಾಜಕಾರಣಿ. ಕರ್ನಾಟಕದ ಬೆಳಗಾವಿ ಕ್ಷೇತ್ರದಿಂದ ಸಂಸದರಾಗಿ ಭಾರತೀಯ ಜನತಾ ಪಕ್ಷದಿಂದ[೧] ನಾಲ್ಕು ಬಾರಿ ಆಯ್ಕೆಯಾಗಿದ್ದವರು. ಮೇ ೨೦೧೯ರಿಂದ ಸೆಪ್ಟೆಂಬರ್೨೦೨೦ರಲ್ಲಿ ಅವರ ಮರಣದವರೆಗೂ ಭಾರತದ ರೈಲ್ವೆ ಖಾತೆಯ ರಾಜ್ಯ ಸಚಿವರಾಗಿದ್ದರು.

ಆರಂಭಿಕ ಜೀವನ[ಬದಲಾಯಿಸಿ]

ಸುರೇಶ್ ಅವರು ಬೆಳಗಾವಿ ಜಿಲ್ಲೆಯ ಬೆಳಗಾವಿ ತಾಲ್ಲೂಕಿನ ಕೆ.ಕೆ. ಕೊಪ್ಪಾ ಗ್ರಾಮದವರು. ಸೋಮವ್ವ ಮತ್ತು ಚೆನ್ನಬಸಪ್ಪ ಅಂಗಡಿ ದಂಪತಿಗೆಗ ಜನಿಸಿದರು. ಬೆಳಗಾವಿಯ ಎಸ್.ಎಸ್.ಎಸ್.ಸಮಿತಿ ಕಾಲೇಜ್ ಆಫ್ ಕಾಮರ್ಸ್ ನಿಂದ ಪದವಿಯನ್ನು ಪಡೆದರು. ನಂತರ ಬೆಳಗಾವಿಯ ಪ್ರತಿಷ್ಠಿತ ರಾಜ ಲಖಮ್ ಗೌಡ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದರು. ಸಾರ್ವಜನಿಕ ಜೀವನಕ್ಕೆ ಪ್ರವೇಶಿಸುವ ಮೊದಲು ಅವರು ತಮ್ಮದೇ ಆದ ಖಾಸಗಿ ವ್ಯವಹಾರವನ್ನು ನಡೆಸುತ್ತಿದ್ದರು. ವಾಸವದತ್ತ ಸಿಮೆಂಟ್ [ಪ್ರಸ್ತುತ ಬಿರ್ಲಾ ಶಕ್ತಿ ಸಿಮೆಂಟ್] ಅನ್ನು ಯಶಸ್ವಿಯಾಗಿ ಚಾಲನೆಗೆ ತಂದು ಬೆಳಗಾವಿಯಲ್ಲೇ ಪ್ರಥಮ ಸ್ಥಾನಕ್ಕೆ ಇವರು ತಂದರು.[೨] ಅವರಿಗೆ ಮದುವೆಯಾಗಿ ೨ ಹೆಣ್ಣು ಮಕ್ಕಳಿದ್ದಾರೆ.

ರಾಜಕೀಯ ಜೀವನ[ಬದಲಾಯಿಸಿ]

ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಅವರು ೧೯೯೬ರಲ್ಲಿ ಪಕ್ಷದ ಬೆಳಗಾವಿ ಜಿಲ್ಲಾ ಘಟಕದ ಉಪಾಧ್ಯಕ್ಷರಾದರು. ಅವರು ೧೯೯೯ರವರೆಗೆ ಆ ಕಚೇರಿಯಲ್ಲಿ ಮುಂದುವರೆದರು. ೨೦೦೧ರಲ್ಲಿ ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಯಿತು ಮತ್ತು ಅವರು ಆ ಹುದ್ದೆಯಲ್ಲಿ ಮುಂದುವರೆದರು. ೨೦೦೪ರಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎದುರಾಳಿಯನ್ನು ದೊಡ್ಡ ಅಂತರದಿಂದ ಸೋಲಿಸಿ ೧೪ನೇ ಲೋಕಸಭೆಯ ಸದಸ್ಯರಾಗಿ ಆಯ್ಕೆಯಾದರು. ೨೦೦೯ರ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಎರಡನೇ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾದರು. ಅವರು ೨೦೧೪ರಲ್ಲಿ ಸತತ ಮೂರನೇ ಬಾರಿಗೆ ಆಯ್ಕೆಯಾದ ಇವರು, ೨೦೧೯ರಲ್ಲಿ ೪ನೇ ಬಾರಿಗೆ ಸಂಸತ್ ಪ್ರವೇಶಿಸಿದರು.[೩] ಮೇ ೨೦೧೯ರಲ್ಲಿ ಅಂಗಡಿಯವರು ರೈಲ್ವೆ ಖಾತೆಯ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.[೪]

ನಿಧನ[ಬದಲಾಯಿಸಿ]

ಅಂಗಡಿಯವರು ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಫಲಿಸದೇ ೨೩ಸೆಪ್ಟೆಂಬರ್ ೨೦೨೦ ರಂದು ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾದರು.[೫] ಅವರಿಗೆ ೬೫ ವರ್ಷ ವಯಸ್ಸಾಗಿತ್ತು.

ಉಲ್ಲೇಖ[ಬದಲಾಯಿಸಿ]  1. https://www.livemint.com/politics/news/suresh-angadi-part-of-modi-2-0-1559229895744.html
  2. https://www.indiatoday.in/fyi/story/suresh-angadi-lok-sabha-mp-from-belgaum-lok-sabha-1538985-2019-05-30
  3. https://www.deccanherald.com/national/suresh-angadi-bjps-four-time-mp-from-belagavi-737329.html
  4. https://www.thenewsminute.com/article/karnataka-mp-suresh-angadi-appointed-junior-minister-railways-102743
  5. https://www.udayavani.com/news-section/national-news/minister-of-state-for-railways-and-member-of-parliament-from-karnataka-suresh-angadi-died-in-aims-today