ಸುಮಿತ್ರಾ ಹಲವಾಯಿ

ವಿಕಿಪೀಡಿಯ ಇಂದ
Jump to navigation Jump to search

ಸುಮಿತ್ರಾ ಹಲವಾಯಿ ಇವರು ಧಾರವಾಡದಲ್ಲಿ ನೆಲೆಸಿರುವ ಕನ್ನಡ ಲೇಖಕಿ.

ಚತುರ್ಭಾಷಾ ಲೇಖಕಿ ಸುಮಿತ್ರಾ ಮೋತಿಲಾಲ ಹಲವಾಯಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಇಂಗ್ಲಿಷ್ ಎಂ.ಎ. ಎಂ.ಮ್ಯೂಸಿಕ್ ಹಾಗೂ ಅಲಹಾಬಾದ್ ವಿಶ್ವವಿದ್ಯಾಲಯದಿಂದ ಹಿಂದಿ ಸಾಹಿತ್ಯ ರತ್ನ ಪದವಿಗಳನ್ನು ಪಡೆದಿದ್ದಾರೆ. ಕನ್ನಡ, ಇಂಗ್ಲಿಷ್, ಹಿಂದಿ, ಕೊಂಕಣಿ, ಸಂಸ್ಕೃತ ಭಾಷೆಗಳನ್ನು ಬಲ್ಲ ಇವರು ಕಥೆ, ಕವನ, ಹಾಸ್ಯ, ಕಾದಂಬರಿ, ಲಲಿತ ಪ್ರಬಂಧ ನಾಟಕಗಳ ೨೫ ಪುಸ್ತಕಗಳನ್ನು ಪ್ರಕಟಿಸಿ ರಾಜ್ಯ ರಾಷ್ಟ್ರಮಟ್ಟದ ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ನಂದಗಡದ ಎಂ.ಜಿ. ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿ, ನಂತರ ಹಿಂದಿ, ಸಂಸ್ಕೃತ, ಸಂಗೀತ ಶಿಕ್ಷಕಿಯಾಗಿ ಅಪಾರ ಜೀವನಾನುಭವ ಪಡೆದಿದ್ದಾರೆ. ಹತ್ತು ಸಾವಿರ ಮಕ್ಕಳಿಗೆ ೨೦ ಭಾಷೆಗಳಲ್ಲಿ ಸಮುದಾಯ ಗೀತೆ ತರಬೇತಿ ನೀಡಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ "ಸಂಗೀತದ ಮುಖಾಂತರ ರಾಷ್ಟ್ರೀಯ ಭಾವೈಕ್ಯ" ಕಾರ್ಯಕ್ರಮಕ್ಕಾಗಿ ಎನ್.ಸಿ.ಇ.ಆರ್.ಟಿ. ಡೆಲ್ಲಿಯಿಂದಲೂ, ಸೇಕ್ರೆಡ್ ಹಾರ್ಟ್ ಕಾನ್ವೆಂಟ್ ಹುಬ್ಬಳ್ಳಿಯಿಂದಲೂ ಚಿನ್ನದ ಪದಕ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದಲೂ ಚಿನ್ನದ ಪದಕ ಪಡೆದಿದ್ದಾರೆ. ಅಖಿಲ ಭಾರತ ಚತುರ್ಭಾಷಾ ಸಾಹಿತ್ಯ ಸಮ್ಮೇಳನಗಳಲ್ಲಿ ಭಾಗವಹಿಸಿರುವ ಇವರು ಧಾರವಾಡದ ಆಕಾಶವಾಣಿಯಲ್ಲಿ ೬ ವರ್ಷ ಲಘು ಸಂಗೀತ ಆಡಿಶನಲ್ ಪೆನಲ್ ನಿರ್ಣಾಯರಾಗಿದ್ದರು. Banaras Hindu University yinda Music nalli Doctorate Degree padediddare

ಕೃತಿಗಳು[ಬದಲಾಯಿಸಿ]

ಇವರ ಕೃತಿಗಳು ಇಂತಿವೆ:

ಕವನ ಸಂಕಲನ[ಬದಲಾಯಿಸಿ]

 • ಕಳೆದು ಹೋದ ಪದ್ಯಗಳು
 • ಮೊಲಾಯಿಸ್ ಮತ್ತು ಇತರ ಕವನಗಳು
 • ಶಬ್ದಾತೀತ
 • ಅರ್ಥ
 • ಸೂರ್ಯ
 • ಪಣ
 • ಇನ್ ದ ಡೆನ್ ಆಫ್ ದ ಡೆವಿಲ್ (ಇಂಗ್ಲಿಷ್ - ಕವನ ಸಂಕಲನ)
 • ಕನಸು
 • ಮೇರುವಿನ ಗುರಿ ಇರಲಿ
 • ಗೋಡ್ಸೆ ಕೊಂದಿಲ್ಲ
 • ಗನ್ನು ಕೊಡಿ ದಯವಿಟ್ಟು
 • ಭಾವಯಾನ
 • ನೂರು ದೋಣಿಗಳಲ್ಲಿ

ಹಾಸ್ಯ ಲೇಖನ[ಬದಲಾಯಿಸಿ]

 • ಹಲೋ ಮತ್ತೇನ್ರೀ ಆರಾಮಾ?
 • ಯಮಲೋಕಕ್ಕೊಂದು ಹ್ಯಾಪಿ ಜರ್ನಿ

ಕಥಾಸಂಕಲನ[ಬದಲಾಯಿಸಿ]

 • ಜೇಡ
 • ಕುಣಿಸಲು ನೀನು
 • ಅನಾಥನಾಥ
 • ಬಾವಿ ಕಳೆದಿದೆ

ಕಾದಂಬರಿ[ಬದಲಾಯಿಸಿ]

 • ಮೃಗಜಲ
 • ಪ್ರತೀಕಾರ

ಇಂಗ್ಲಿಷ್ ಕವಿತಾ ಸಂಕಲನ[ಬದಲಾಯಿಸಿ]

 • In the den of the devil

ಲಲಿತ ಪ್ರಬಂಧಗಳ ಸಂಕಲನ[ಬದಲಾಯಿಸಿ]

 • ಬೆಳಕಿನೆಡೆಗೆ

ಅನುವಾದ[ಬದಲಾಯಿಸಿ]

 • ಕನಸೆಂಬ ಊರುಗೋಲು (ಉರ್ದು - ಕನ್ನಡ)

ನಾಟಕಗಳು[ಬದಲಾಯಿಸಿ]

 • ಅಸಂಗತ
 • ತೋಳ
 • ಹನ್ನೆರಡು ಕುದುರಿ ಹನ್ನೊಂದುವರಿ ಸವಾರರು
 • ಬಲಿ

ಪ್ರಶಸ್ತಿ-ಪುರಸ್ಕಾರಗಳು[ಬದಲಾಯಿಸಿ]

ರಾಜ್ಯಮಟ್ಟದ ಪುರಸ್ಕಾರಗಳು[ಬದಲಾಯಿಸಿ]

 • ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪುರಸ್ಕಾರ
 • ಕನ್ನಡ ಸಾಹಿತ್ಯ ಪರಿಷತ್ ಪುರಸ್ಕಾರ
 • ಕನ್ನಡ ಸಾಹಿತ್ಯ ಪರಿಷತ್ ದತ್ತಿ ನಿಧಿ ಪುರಸ್ಕಾರ
 • ದು.ನಿಂ. ಬೆಳಗಲಿ ಸಾಹಿತ್ಯ ಪ್ರತಿಷ್ಥಾನ. ಬನಹಟ್ಟಿ. ಪುರಸ್ಕಾರ ಪ್ರಥಮ- "ಯಮಲೋಕಕ್ಕೊಂದು ಹ್ಯಾಪೀ ಜರ್ನಿ"
 • ಕವನ ಲೇಖನ ಸ್ಪರ್ಧೆ - ಪ್ರಥಮ - ಗದಗ
 • ಕಥಾ ಲೇಖನ ಸ್ಪರ್ಧೆ - ಪ್ರಥಮ - ಬಿಜಾಪುರ
 • ಸಂಕ್ರಮಣ ಕವನ ಸ್ಪರ್ಧೆ - ಪ್ರಥಮ . "ಏನಾಗಲಿ ?"
 • ಚಿನ್ನದ ಪದಕ - ಬಿ. ಮ್ಯೂಸಿಕ್ ಪ್ರಥಮ ಸ್ಥಾನ - ಕರ್ನಾಟಕ ಯುನಿವರ್ಸಿಟಿ ಧಾರವಾಡ
 • ಪಾರ್ವಾತಿ ದೇವಿ ಕೇಸರಿ ಪುರಸ್ಕಾರ
 • ಸೇಕ್ರೆಡ್ ಹಾರ್ಟ ಕಾನ್ವೆಂಟ ಹುಬ್ಬಳ್ಳಿ - ಚಿನ್ನದ ಪದಕ (ಸಂಗೀತ ಶಿಕ್ಷಕಿ)
 • ನುಗ್ಗೇ ಹಳ್ಳಿ ಪಂಕಜ ಪುರಸ್ಕಾರ
 • ಗೀತಾ ಕುಲಕರ್ಣಿ ದತ್ತ ನಿಧಿ ಪುರಸ್ಕಾರ (ವಿಮರ್ಶೆಗೆ)
 • ಪ್ರೇತಗಳು ನಾಟಕಕ್ಕೆ ಲಲಿತ ಕಲಾ ಅಕಾಡಮಿ ಪುರಸ್ಕಾರ
 • ಧಾರವಾಡ ಪೋಲೀಸ್ ಇಲಾಖೆಯಿಂದ ಪಂಚ್ಯುಯಾಲಿಟಿಗಾಗಿ ಪುರಸ್ಕಾರ
 • ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅನುವಾದ ಪುರಸ್ಕಾರ (ಬೆಂಗಳೂರು)

ರಾಷ್ಟ್ರಮಟ್ಟದ ಪುರಸ್ಕಾರಗಳು[ಬದಲಾಯಿಸಿ]

 • ಎನ್.ಸಿ.ಇ.ಆರ್.ಟಿ. ಡೆಲ್ಲಿ- ಚಿನ್ನದ ಪದಕ ಸಂಗೀತ
 • ಕರುಣಾ ಸಾಗರ ಪ್ರತಿಭಾ ಪುರಸ್ಕಾರ ಡೆಲ್ಲಿ
 • ವಿಜಯಶ್ರೀ ಪುರಸ್ಕಾರ ಡೆಲ್ಲಿ
 • ಭಾರತ ಜೋತಿ ಪುರಸ್ಕಾರ ಡೆಲ್ಲಿ