ಸುಖನಾ ಸರೋವರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಭಾರತದ ಚಂಡೀಗಢದಲ್ಲಿರುವ ಸುಖನಾ ಸರೋವರವು ಹಿಮಾಲಯದ ತಪ್ಪಲಿನಲ್ಲಿರುವ (ಶಿವಾಲಿಕ್ ಬೆಟ್ಟಗಳು) ಒಂದು ಜಲಾಶಯವಾಗಿದೆ. ಶಿವಾಲಿಕ್ ಬೆಟ್ಟದಿಂದ ಕೆಳಗಿಳಿಯುವ ಕಾಲಿಕ ಹೊಳೆಯಾದ ಸುಖ್ನಾ ಚೋಕ್ಕೆ ಅಡ್ಡಲಾಗಿ ಅಣೆಕಟ್ಟು ಕಟ್ಟುವ ಮೂಲಕ ಈ 3 ಚದರ ಕಿ.ಮಿ. ಮಳೆಯಾಶ್ರಿತ ಸರೋವರವನ್ನು 1958 ರಲ್ಲಿ ಸೃಷ್ಟಿಸಲಾಯಿತು. ಮೂಲತಃ ಕಾಲಿಕ ಹರಿವು ಸರೋವರವನ್ನು ನೇರವಾಗಿ ಪ್ರವೇಶಿಸಿ ಭಾರೀ ಹೂಳಿಗೆ ಕಾರಣವಾಗುತ್ತಿತ್ತು. ಹೂಳಿನ ಒಳಹರಿವನ್ನು ತಡೆಯಲು, 25.42 ಚದರ ಕಿ.ಮಿ. ಜಮೀನನ್ನು ಜಲಾನಯನ ಪ್ರದೇಶದಲ್ಲಿ ಪಡೆದುಕೊಂಡು ಸಸ್ಯಗಳನ್ನು ಬೆಳೆಸಲಾಯಿತು.

ಭಾರತದ ಚಂಡೀಗಢದ ಸುಖನಾ ಸರೋವರದಲ್ಲಿ ಸೂರ್ಯಾಸ್ತದ ನೋಟ
ಚಿತ್ರ:Sukhna lake on a cloudy day.jpg
ಜಾಗಿಂಗ್ ಟ್ರ್ಯಾಕ್‌ನಿಂದ ಸುಖನಾ ಸರೋವರದ ನೋಟ
ಚಿತ್ರ:Sukhna Lake Ducks.jpg
ಸರೋವರದಲ್ಲಿ ಬಾತುಕೋಳಿಗಳು

ಈ ಸರೋವರವನ್ನು ಲೀ ಕೋರ್ಬೂಸಿಯೇ ಮತ್ತು ಮುಖ್ಯ ಅಭಿಯಂತರರಾದ ಪಿ ಎಲ್ ವರ್ಮಾ ರಚಿಸಿದರು. ಸರೋವರದ ದಕ್ಷಿಣದ ಅಂಚಿನಲ್ಲಿ ಗಾಲ್ಫ್ ಮೈದಾನ ಮತ್ತು ಪಶ್ಚಿಮದಲ್ಲಿ ನೆಕ್ ಚಂದ್‍ನ ಪ್ರಸಿದ್ಧ ರಾಕ್ ಗಾರ್ಡನ್ ಇದೆ.

ಸುಖನಾ ಹುಲ್ಲುಹಾಸುಗಳು, ಜಿಮ್, ಒಳಾಂಗಣ ಆಟಗಳು, ಈಜುಕೊಳ ಮತ್ತು ಕೃತಕ ಹಾಗೂ ಹುಲ್ಲು ಕೋರ್ಟ್‌ಗಳು ಎರಡೂ ಬಗೆಯ ಟೆನಿಸ್ ಕೋರ್ಟ್‌ಗಳಿರುವ ಸದಸ್ಯತ್ವ ಆಧಾರಿತ ಲೇಕ್ ಕ್ಲಬ್ ಅನ್ನು ಹೊಂದಿದೆ. ದೋಣಿ ವಿಹಾರ,[೧] ರೋಯಿಂಗ್, ಸ್ಕಲ್ಲಿಂಗ್, ನೌಕಾಯಾನ, ಕಯಾಕಿಂಗ್ ಮತ್ತು ವಾಟರ್ ಸ್ಕೀಯಿಂಗ್ ಅನ್ನು ವರ್ಷಪೂರ್ತಿ ಆನಂದಿಸಬಹುದು.

ಬೇಸಿಗೆಯಲ್ಲಿ, ಸುಮಾರು ಮೂರು ತಿಂಗಳ ಕಾಲ ಸರೋವರದ ತಳದಿಂದ ಹೂಳು ತೆಗೆಯಲು ಸ್ವಯಂಪ್ರೇರಿತ ಸೇವೆಯನ್ನು ನೀಡಲು ಎಲ್ಲ ವರ್ಗದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಬರುತ್ತಾರೆ. ಈ ವಾರ್ಷಿಕ ಆಚರಣೆಯು ಬಹಳ ಹಿಂದಿನಿಂದಲೂ ಒಂದು ಸಾಮಾನ್ಯ ಲಕ್ಷಣವಾಗಿದೆ.

ಸುಖನಾ ಸರೋವರವು ಅನೇಕ ಹಬ್ಬದ ಆಚರಣೆಗಳಿಗೆ ಒಂದು ಸ್ಥಳವಾಗಿದೆ. ಹೆಚ್ಚು ಜನಪ್ರಿಯವಾದ ಮಾವಿನ ಹಬ್ಬವನ್ನು ಮಳೆಗಾಲದಲ್ಲಿ ಆಯೋಜಿಸಲಾಗುತ್ತದೆ. ಆಗ ಹಲವಾರು ವಿಧದ ಮಾವಿನಹಣ್ಣುಗಳನ್ನು ಪ್ರದರ್ಶನಕ್ಕಿಡಲಾಗುತ್ತದೆ. ಕಾಲಕಾಲಕ್ಕೆ, ವಿವಿಧ ಭಾರತೀಯ ರಾಜ್ಯಗಳ ವಿಶೇಷತೆಗಳನ್ನು ಒಳಗೊಂಡ ಇತರ ಆಹಾರ ಉತ್ಸವಗಳು ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ಇಲ್ಲಿ ನಡೆಯುತ್ತವೆ.

ಬೆಳಿಗ್ಗೆಯ ಸಮಯದಲ್ಲಿ ಸುಖನಾ ಸರೋವರದ ವಿಸ್ತೃತ ದರ್ಶನ
ಚಂಡೀಗಢದ ಸುಖನಾ ಸರೋವರ

ಛಾಯಾಂಕಣ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "21 things to do at Sukhna Lake Chandigarh". Chandigarh Metro (in ಅಮೆರಿಕನ್ ಇಂಗ್ಲಿಷ್). Retrieved 2015-12-18.