ಶಿವಾಲಿಕ ಪರ್ವತಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶಿವಾಲಿಕ ಪರ್ವತಗಳ ನಡುವೆ ಇರುವ ಸಿಕ್ಕಿಂನ ಕಾಲಿಂಪಾಂಗ್ ನಗರದ ಒಂದು ನೋಟ.

ಶಿವಾಲಿಕ ಪರ್ವತಗಳು ಹಿಮಾಲಯ ಪರ್ವತಶ್ರೇಣಿಗಳ ದಕ್ಷಿಣದಂಚಿನ ಬೆಟ್ಟಸಾಲುಗಳಾಗಿವೆ. ಪೂರ್ವ-ಪಶ್ಚಿಮಾಭಿಮುಖವಾಗಿ ಹಬ್ಬಿರುವ ಶಿವಾಲಿಕ ಪರ್ವತಗಳು ಭೂಗರ್ಭಶಾಸ್ತ್ರದ ಪ್ರಕಾರ ಇಡಿಯ ಹಿಮಾಲಯದಲ್ಲಿ ಅತಿ ಕಿರಿಯ ವಯಸ್ಸಿನವು. ಕೆಲವೊಮ್ಮೆ ಈ ಶ್ರೇಣಿಯನ್ನು ಹೊರಗಣ ಹಿಮಾಲಯ ಎಂದು ಸಹ ಕರೆಯಲಾಗುತ್ತದೆ. ಪೂರ್ವದ ಸಿಕ್ಕಿಂಟೀಸ್ಟಾ ನದಿಯಿಂದ ಆರಂಭವಾಗಿ ನೇಪಾಳ, ಉತ್ತರಾಖಂಡ, ಹಿಮಾಚಲ ಪ್ರದೇಶ ಹಾಗೂ ಕಾಶ್ಮೀರಗಳನ್ನು ಹಾದು ಪಾಕಿಸ್ತಾನದ ಉತ್ತರಭಾಗದಲ್ಲಿ ಕೊನೆಗೊಳ್ಳುವ ಶಿವಾಲಿಕ ಪರ್ವತಶ್ರೇಣಿಯ ಒಟ್ಟು ಉದ್ದ ಸುಮಾರು ೧೬೦೦ ಕಿ.ಮೀ. ಇವುಗಳ ಸರಾಸರಿ ಎತ್ತರ ೯೦೦ ರಿಂದ ೧೨೦೦ ಮೀಟರ್‌ಗಳಷ್ಟು.