ವಿಷಯಕ್ಕೆ ಹೋಗು

ಸಿ.ಕೆ.ವೆಂಕಟರಾಮಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಸಿ.ಕೆ.ವೆಂಕಟರಾಮಯ್ಯನವರು ಇಂದ ಪುನರ್ನಿರ್ದೇಶಿತ)

ಸಿ.ಕೆ.ವೆಂಕಟರಾಮಯ್ಯನವರು ಚನ್ನಪಟ್ಟಣ ತಾಲೂಕಿನ ಪೊಟ್ಳು ಗ್ರಾಮದಲ್ಲಿ ೧೮೯೬ ಡಿಶಂಬರ ೧೦ ರಂದು ಜನಿಸಿದರು. ತಂದೆ ಕೃಷ್ಣಪ್ಪ ; ತಾಯಿ ನಂಜಮ್ಮ. ಚನ್ನಪಟ್ಟಣದಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ. ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಬಿ.ಏ. ಪದವಿ ಪಡೆದು, ಮುಂಬಯಿಯಲ್ಲಿ ಎಮ್.ಏ. ಹಾಗು ಎಲ್.ಎಲ್.ಬಿ ಪದವಿಧರರಾದರು. ಮೊದಲು ಶ್ರೀರಂಗಪಟ್ಟಣದಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರು. ಬಳಿಕ ಮೈಸೂರು ಸರಕಾರದ ಭಾಷಾಂತರ ಇಲಾಖೆಯಲ್ಲಿ ಸೇವೆ ಸಲ್ಲಿಸಿದರು;ಕಾಲಾಂತರದಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಇಲಾಖೆಯ ಮೊದಲ ನಿರ್ದೇಶಕರಾದರು.

ವೆಂಕಟರಾಮಯ್ಯನವರ ಸಾಹಿತ್ಯ ರಚನೆ:

ಕಥಾಸಂಕಲನ: ಹಳ್ಳಿಯ ಕಥೆಗಳು, ತುರಾಯಿ

ನಾಟಕ: ಸುಂದರಿ, ನಚಿಕೇತ, ಮಂಡೋದರಿ, ನಮ್ಮ ಸಮಾಜ, ಬ್ರಹ್ಮವಾದಿ,

ವಿಮರ್ಶೆ: ಭಾಸ ಹಾಗು ಕಾಳಿದಾಸರ ಕೃತಿಗಳ ಬಗೆಗೆ.

ಜೀವನ ಚರಿತ್ರೆ: ಬುದ್ಧ, ಪೈಗಂಬರ, ಲಿಂಕನ್, ಹರ್ಷವರ್ಧನ

ಪುರಸ್ಕಾರಗಳು: ವೆಂಕಟರಾಮಯ್ಯನವರು ಸಲ್ಲಿಸಿದ ಸೇವೆಗಾಗಿ ಮೈಸೂರು ಸರಕಾರದಿಂದ ‘ರಾಜಸೇವಾಸಕ್ತ’ ಪುರಸ್ಕಾರವನ್ನು ಹಾಗು ಕೇಂದ್ರ ಸರಕಾರದಿಂದ ‘ ಪದ್ಮಶ್ರೀ’ ಪ್ರಶಸ್ತಿಯನ್ನು ಪಡೆದಿದ್ದಾರೆ.

೧೯೪೭ರಲ್ಲಿ ಹರಪನಹಳ್ಳಿಯಲ್ಲಿ ಜರುಗಿದ ೩೦ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.