ವಿಷಯಕ್ಕೆ ಹೋಗು

ಸಾಯಿ–ಸುಬ್ಬುಲಕ್ಷ್ಮೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಾಯಿ-ಸುಬ್ಬುಲಕ್ಷ್ಮೀ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಸಾಯಿ ಮತ್ತು ಸುಬ್ಬುಲಕ್ಷ್ಮೀ ಇಬ್ಬರು ಭಾರತೀಯ ಮಹಿಳಾ ಭರತನಾಟ್ಯ ನೃತ್ಯಗಾರ್ತಿಯರು. ಇವರು ದಕ್ಷಿಣ ಭಾರತ ಮತ್ತು ಹಿಂದಿ ಚಲನಚಿತ್ರಗಳಲ್ಲಿ ವೇದಿಕೆ ಪ್ರದರ್ಶನ ನೀಡಿದ್ದಾರೆ. ಇವರು ಅವಳಿ ನೃತ್ಯ ಜೋಡಿಯಾಗಿ ೧೯೫೦ ಮತ್ತು ೬೦ ರ ದಶಕದಲ್ಲಿ ಜನಪ್ರಿಯರಾಗಿದ್ದರು. [] ಅವರು ತಮ್ಮ ಏಕಕಾಲದಲ್ಲಿ ಒಂದೇ ರೀತಿ ನರ್ತಿಸುವ ನೃತ್ಯದಿಂದ ಗುರುತಿಸಲ್ಪಟ್ಟರು. ಅವರು ಕೆಲವು ಪ್ರಾದೇಶಿಕ ಭಾಷೆಯ ಚಲನಚಿತ್ರಗಳು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕಥಕ್ ಮತ್ತು ಜಾನಪದ ಶೈಲಿಯ ನೃತ್ಯಗಳನ್ನು ಪ್ರದರ್ಶಿಸಿದ್ದರು.

ಕುಟುಂಬ

[ಬದಲಾಯಿಸಿ]

ಇವರು ಬಹಳ ದೊಡ್ಡ ಕುಟುಂಬದಿಂದ ಬಂದವರು. ಇವರ ಕುಟುಂಬದವರೆಲ್ಲರೂ ಚಲನಚಿತ್ರದೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದರು. ಅವರು ಮದ್ರಾಸ್ ಸಿಸ್ಟರ್ಸ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಕರ್ನಾಟಕ ಗಾಯಕರಾದ ಪಿ.ಎ ರಾಜಮಣಿ ಮತ್ತು ಪಿ.ಎ ಪೆರಿಯನಾಯಕಿ ಅವರ ತಾಯಿ ಪನ್ರುಟ್ಟಿ ಆದಿಲಕ್ಷ್ಮಿಯವರ ವಂಶಸ್ಥರು. ಅವರು ತಮಿಳು ಚಿತ್ರಗಳಲ್ಲಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಪಿಎ ಪೆರಿಯನಾಯಕಿ ಅವರು ಹಿನ್ನೆಲೆ ಗಾಯಕರಾಗಿಯೂ ಗುರುತಿಸಿಕೊಂಡಿದ್ದರು. ೧೯೪೧ ರ ಹಾಸ್ಯ ಚಲನಚಿತ್ರ ಸಬಾಪತಿಯಲ್ಲಿ ಕಾಣಿಸಿಕೊಂಡ ಲಕ್ಸ್ ಸೋಪ್ ಬ್ಯೂಟಿ ಆರ್.ಪದ್ಮಾ, ಸಾಯಿಯವರ ಅತ್ತೆ. ಸಾಯಿಯವರು ಪಿ.ಎ ರಾಜಮಣಿಯ ಮಗಳು ಮತ್ತು ಸುಬ್ಬುಲಕ್ಷ್ಮೀ‌ಯವರು ಪಿ.ಎ.ರಾಜಮಣಿಯ ತಾಯಿಯ ಮೊದಲ ಸೋದರ ಸಂಬಂಧಿ.

( ಗಮನಿಸಿ: ಸಾಯಿಯವರು ಪಿ.ಎ ರಾಜಮಣಿಯ ಮಗಳು ಮತ್ತು ಅವರಿಗಿಂತ ೩ ವರ್ಷ ದೊಡ್ಡವಳಾದ ಸುಬ್ಬುಲಕ್ಷ್ಮೀ ಅವರ ಸೋದರಸಂಬಂಧಿ ಎಂದು ಹೇಳಲಾಗುತ್ತದೆ. ಇದನ್ನು ದೃಢೀಕರಿಸಲಾಗಲಿಲ್ಲ. ಆದರೆ, ಇಬ್ಬರೂ ನಿಕಟ ಸಂಬಂಧ ಹೊಂದಿದ್ದು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. )

ನೃತ್ಯ ತರಬೇತಿ

[ಬದಲಾಯಿಸಿ]

ಮುತ್ತುಸ್ವಾಮಿ ಪಿಳ್ಳೈ ಅವರು ನೃತ್ಯ ಶಿಕ್ಷಕರಾಗಿದ್ದು [] ಅವರು ೧೯೩೮ ರಿಂದ ಚಲನಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಪಿಎ ಪೆರಿಯನಾಯಕಿ ಅವರು ಸೇಲಂ ರತ್ನಾ ಸ್ಟುಡಿಯೋದಲ್ಲಿ ಇಂಬವಲ್ಲಿ ಚಿತ್ರದಲ್ಲಿ ಬಿಎಸ್ ಸರೋಜಾ ಅವರ ನೃತ್ಯಕ್ಕೆ ನೃತ್ಯ ಸಂಯೋಜನೆ ಮಾಡುವಾಗ ಮುತ್ತುಸ್ವಾಮಿ ಪಿಳ್ಳೈ ಅವರನ್ನು ಸಂಪರ್ಕಿಸಿದರು. ಅವರು ತಮ್ಮ ಸೊಸೆ ಸಾಯಿ ಮತ್ತು ಅವರ ಸೋದರಸಂಬಂಧಿ ಸುಬ್ಬುಲಕ್ಷ್ಮೀಗೆ ನೃತ್ಯದಲ್ಲಿ ತರಬೇತಿ ನೀಡುವಂತೆ ವಿನಂತಿಸಿದಳು. ಮುತ್ತುಸ್ವಾಮಿ ಪಿಳ್ಳೆ ಅವರನ್ನು ಸ್ವೀಕರಿಸಿದರು. ಇಬ್ಬರಿಗೂ ವಿಶೇಷ ತರಬೇತಿ ನೀಡುವಂತೆ ಕುಟುಂಬದವರ ಜತೆಯೇ ಉಳಿದುಕೊಂಡಿದ್ದರು. ಆಗ ಸಾಯಿಯವರಿಗೆ ಸುಮಾರು ೫ ವರ್ಷ ಮತ್ತು ಸುಬ್ಬುಲಕ್ಷ್ಮೀಯವರಿಗೆ ೩ ವರ್ಷ. ಅವರು ಕುಮಾರಿ ಕಮಲಾ ಅವರ ಎರಡೂ ನೃತ್ಯ ಪ್ರದರ್ಶನಗಳನ್ನು ನೀಡಿದ್ದರು.

ಇಬ್ಬರು ಹುಡುಗಿಯರೂ ಬೆಳಿಗ್ಗೆ ೩ ಗಂಟೆಗಳು ಮತ್ತು ಸಂಜೆ ೩ ಅಥವಾ ೪ ಗಂಟೆಗಳ ಕಠಿಣ ತರಬೇತಿಯನ್ನು ಪಡೆದರು. ಮುತ್ತುಸಾಮಿ ಪಿಳ್ಳೈ ಅವರು ತಮ್ಮ ಚಲನಚಿತ್ರ ಕಾರ್ಯಗಳ ನಡುವೆ ೭ ವರ್ಷಗಳ ಕಾಲ ಅವರಿಗೆ ತರಬೇತಿ ನೀಡಿದರು. ಊರಿನಲ್ಲಿದ್ದಾಗಲೆಲ್ಲ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು.

ಕಥಕ್ ನೃತ್ಯದಲ್ಲಿ ನರ್ತಕಿ ಮತ್ತು ಪ್ರಸಿದ್ಧ ಹಿಂದಿ ಚಲನಚಿತ್ರ ಝಣಕ್ ಝನಕ್ ಪಾಯಲ್ ಬಾಜೆಗೆ ನೃತ್ಯ ಸಂಯೋಜಕರಾಗಿದ್ದ ಗೋಪಿ ಕೃಷ್ಣ ಅವರಿಂದ ಸಾಯೀ ಮತ್ತು ಸುಬ್ಬುಲಕ್ಷ್ಮಿ ಅವರಿಗೆ ತರಬೇತಿ ನೀಡಲಾಯಿತು.

ರಂಗಕ್ಷೇತ್ರ ಮತ್ತು ಚಲನಚಿತ್ರಗಳ ಪರಿಚಯ

[ಬದಲಾಯಿಸಿ]

ಸಾಯಿ ಮತ್ತು ಸುಬ್ಬುಲಕ್ಷ್ಮಿ ಅವರು ೧೯೫೩ ರ ಸೆಪ್ಟೆಂಬರ್ ೧೪ ರಂದು ರಾಜಾ ಸರ್ ಎಂ‌ಎ ಮುತ್ತಯ್ಯ ಚೆಟ್ಟಿಯಾರ್ ಅವರ ಅಧ್ಯಕ್ಷತೆಯಲ್ಲಿ ಚೆನ್ನೈನ ಆರ್‌ಆರ್ ಸಭಾ ಹಾಲ್‌ನಲ್ಲಿ ತಮ್ಮ ರಂಗೇತ್ರವನ್ನು ಹೊಂದಿದ್ದರು.

ಒಂದು ವರ್ಷದೊಳಗೆ ಅವರು ತಮ್ಮ ಮೊದಲ ಅಭಿನಯವನ್ನು ೧೯೫೪ ರ ಚಲನಚಿತ್ರ ಮಲೈಕ್ಕಲ್ಲನ್ ನಲ್ಲಿ ಮಾಡಿದರು. ಈ ಚಲನಚಿತ್ರವನ್ನು ೬ ಭಾಷೆಗಳಲ್ಲಿ ನಿರ್ಮಿಸಲಾಯಿತು ಮತ್ತು ಈ ನೃತ್ಯ ಈ ಜೋಡಿಗೆ ಅವಕಾಶಗಳನ್ನು ತೆರೆಯಿತು.

ನೃತ್ಯದ ಹೊರತಾಗಿ, ಇವರು ಕೆಲವು ಚಲನಚಿತ್ರಗಳಲ್ಲಿ ಸಣ್ಣ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.

೧೯೫೪ ರಿಂದ, ಅವರು ಅನೇಕ ದಕ್ಷಿಣ ಭಾರತದ ಪ್ರಾದೇಶಿಕ ಚಲನಚಿತ್ರಗಳು ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅವರು ವೇದಿಕೆಯ ಪ್ರದರ್ಶನಗಳನ್ನು ಸಹ ನಡೆಸಿದರು. ಚೆನ್ನೈನ ತ್ಯಾಗರಾಯ ನಗರದಲ್ಲಿ ಶಿವಾಜಿ ಗಣೇಶನ್ ಅವರು ಅಣ್ಣೈ ಇಲ್ಲಂ ಎಂಬ ಹೊಸ ಮನೆಯನ್ನು ನಿರ್ಮಿಸಿದಾಗ, ಸ್ವಾಗತ ಸಮಯದಲ್ಲಿ ಸಾಯಿ ಮತ್ತು ಸುಬ್ಬುಲಕ್ಷ್ಮೀ ಅವರ ಭರತನಾಟ್ಯ ಪ್ರದರ್ಶನವು ಪ್ರಮುಖ ವಸ್ತುವಾಗಿತ್ತು.

ನೃತ್ಯದ ಶೈಲಿ

[ಬದಲಾಯಿಸಿ]

ಈ ಜೋಡಿಯನ್ನು ಎನ್ ಎಸ್ ಕೃಷ್ಣನ್ ಅವರು ಪಂಬಾರ ಸಹೋದರಿಗಳು (ಸ್ಪಿನ್ನಿಂಗ್ ಟಾಪ್ ಸಹೋದರಿಯರು) ಎಂದು ಗೌರವಿಸಿದರು. ವೇಗ, ನಿಖರತೆ, ನಮ್ಯತೆ, ಸಿಂಕ್ರೊನೈಸೇಶನ್ ಜೊತೆಗೆ ಸ್ಪ್ರಿಂಗ್ ಲೆಗ್ ಚಲನೆಗಳು ಅವರನ್ನು ಅನನ್ಯ ಜೋಡಿಯನ್ನಾಗಿ ಮಾಡಿತು.

ನೃತ್ಯ ಶಿಕ್ಷಕ

[ಬದಲಾಯಿಸಿ]

೧೯೬೦ ರ ದಶಕದ ನಂತರ, ಭಾರತೀಯ ಚಲನಚಿತ್ರಗಳಲ್ಲಿನ ಪ್ರವೃತ್ತಿಯು ಆಮೂಲಾಗ್ರ ಬದಲಾವಣೆಗೆ ಒಳಗಾಯಿತು ಮತ್ತು ಈ ಜೋಡಿಯು ಪ್ರದರ್ಶಿಸಿದ ನೃತ್ಯದ ಪ್ರಕಾರವು ಮುಖ್ಯ ಭೂಮಿಕೆಯಲ್ಲಿ ಕಾಣಿಸಲಿಲ್ಲ. ಸುಬ್ಬುಲಕ್ಷ್ಮೀ ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲಿಸಲು ಮುಂದಾದರು. ಶಿಕ್ಷಕಿಯಾಗಿ ಅವರು ಮಾಡಿದ ಸೇವೆಗಾಗಿ ೨೦೦೦ ರಲ್ಲಿ ಕಲೈಮಾಮಣಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ವೈಯಕ್ತಿಕ ಜೀವನ

[ಬದಲಾಯಿಸಿ]

ಸಾಯೀ ಅವರು ಲಕ್ಸ್ ಬ್ಯೂಟಿ ಆರ್. ಪದ್ಮಾ ಅವರ ಹಿರಿಯ ಪುತ್ರ ವಿ.ಎಸ್ ಶಾಂತಾರಾಮ್ ಅವರನ್ನು ವಿವಾಹವಾಗಿದ್ದರು. ಅವರಿಗೆ ಒಬ್ಬ ಮಗನಿದ್ದಾನೆ. ಸಾಯೀ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು ಮತ್ತು ೨೬ ಜನವರಿ ೨೦೧೦ ರಂದು ನಿಧನರಾದರು.

ಚಿತ್ರಕಥೆ

[ಬದಲಾಯಿಸಿ]
ವರ್ಷ ಚಿತ್ರ ಭಾಷೆ ಹಾಡು ಸಂಯೋಜಕ ಸಂಗೀತ ನಿರ್ದೇಶಕ ಹಾಡುಗಾರ/ರು
೧೯೫೪ ಮಲೈಕ್ಕಲ್ಲನ್ ತಮಿಳು "ನೀಲಿ ಮಗ ನೀ ಅಲ್ಲವಾ"

"ಓ ಅಮ್ಮಾ ಓ ಅಯ್ಯಾ"
ಮುತ್ತುಸ್ವಾಮಿ ಪಿಳ್ಳೈ ಎಸ್. ಎಂ. ಸುಬ್ಬಯ್ಯ ನಾಯ್ಡು ಪಿ.ಎ.ಪೆರಿಯನಾಯಕಿ
೧೯೫೪ ಅಗ್ಗಿ ರಾಮುಡು ತೆಲುಗು "ರಾರ ಯಶೋದಾ ನಂದನ"

"ಪಾಲಾವೆರಾಯ್"
ಮುತ್ತುಸ್ವಾಮಿ ಪಿಳ್ಳೈ ಎಸ್. ಎಂ. ಸುಬ್ಬಯ್ಯ ನಾಯ್ಡು ಪಿ.ಎ.ಪೆರಿಯನಾಯಕಿ
೧೯೫೪ ರಥ ಕಣ್ಣೀರು ತಮಿಳು "ಕಥವೈ ಸಾಥಡಿ" ಮುತ್ತುಸ್ವಾಮಿ ಪಿಳ್ಳೈ ಸಿ. ಎಸ್. ಜಯರಾಮನ್ ಎಂ.ಎಲ್.ವಸಂತಕುಮಾರಿ
೧೯೫೫ ಆಜಾದ್ ಹಿಂದಿ "ಅಪ್ಲಾಮ್ ಚಪ್ಲಾಮ್"

"ಓ ಬಲ್ಲಿಯೇ ಬಲ್ಲಿಯೇ"
ಹೀರಾಲಾಲ್ ಸಿ. ರಾಮಚಂದ್ರ ಲತಾ ಮಂಗೇಶ್ಕರ್ ಮತ್ತು ಉಷಾ ಮಂಗೇಶ್ಕರ್
೧೯೫೫ ಡಾಕ್ಟರ್ ಸಾವಿತ್ರಿ ತಮಿಳು "ನಾಯಕರ್ ಪಚ್ಚಮಡಿ" ಮುತ್ತುಸ್ವಾಮಿ ಪಿಳ್ಳೈ ಜಿ. ರಾಮನಾಥನ್ ಪಿ. ಎ. ಪೆರಿಯನಾಯಕಿ ಮತ್ತು ಎ. ಪಿ. ಕೋಮಲ
೧೯೫೫ ಗೋಮತಿಯನ್ ಕಾದಲನ್ ತಮಿಳು "" ಸೋಹನ್‌ಲಾಲ್

ಕೆ.ಎನ್.ದಂಡಾಯುಧಪಾಣಿ ಪಿಳ್ಳೈ
ಜಿ. ರಾಮನಾಥನ್ ಪಿ.ಎ.ಪೆರಿಯನಾಯಕಿ
೧೯೫೬ ಅಲಿಬಾಬಾವುಂ ೪೦ ತಿರುದರ್ಗಳುಂ ತಮಿಳು "ನಾಮ ಆಡುವದುಂ ಪಾಡುವದುಂ" ಕೆ.ಎನ್. ದಂಡಾಯುಧಪಾಣಿ ಪಿಳ್ಳೈ ಮತ್ತು ಎ.ಕೆ. ಚೋಪ್ರಾ ಎಸ್.ದಕ್ಷಿಣಾಮೂರ್ತಿ ಸ್ವರ್ಣಲತಾ ಮತ್ತು ಕೆ. ಜಮುನಾ ರಾಣಿ
೧೯೫೬ ಚೋರಿ ಚೋರಿ ಹಿಂದಿ "ಮನ್ ಭವನ್ ಕೆ ಘರ್" ಕೆ. ಎನ್. ದಂಡಾಯುಧಪಾಣಿ ಪಿಳ್ಳೈ ಮತ್ತು ಗೋಪಿ ಕೃಷ್ಣ ಶಂಕರ್ ಜೈಕಿಶನ್ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ
೧೯೫೬ ತೈಕುಪಿನ್ ತಾರಂ ತಮಿಳು "ನಾಡು ಸೇಳಿತಿದಾ" ಟಿ ಸಿ ತಂಗರಾಜ್ ಕೆ ವಿ ಮಹದೇವನ್ ಎಂ.ಎಲ್.ವಸಂತಕುಮಾರಿ
೧೯೫೭ ಕರ್ಪುಕ್ಕರಸಿ ತಮಿಳು "ವಿಳಿಯೊಡು ವಿಲೈಯಾಡುಂ" ಪಿ. ಎಸ್.ಗೋಪಾಲಕೃಷ್ಣನ್ ಜಿ. ರಾಮನಾಥನ್ ಎಂ.ಎಲ್.ವಸಂತಕುಮಾರಿ ಮತ್ತು ಪಿ. ಲೀಲಾ
೧೯೫೭ ಮಕ್ಕಲೈ ಪೇತ್ರ ಮಗರಾಸಿ ತಮಿಳು "ಮಲ್ಲಿಯಕ್ಕ ಮಲ್ಲಿಯಕ್ಕ ಎಂಗಡಿ ಪೋರ" ಹೀರಾಲಾಲ್ ಮತ್ತು ಪಿ.ವಿ.ಬಲರಾಮ್ ಕೆ. ವಿ.ಮಹದೇವನ್ ಜಿಕ್ಕಿ, ಕೆ. ಜಮುನಾ ರಾಣಿ ಮತ್ತು ಎ. ಜಿ. ರತ್ನಮಾಲಾ
೧೯೫೭ ಶಾರದ ಹಿಂದಿ "ಜೋರು ಕಾ ಗುಲಾಮ್" ಹೀರಾಲಾಲ್ ಮತ್ತು ಸತ್ಯನಾರಾಯಣ ಸಿ. ರಾಮಚಂದ್ರ ಆಶಾ ಭೋಂಸ್ಲೆ ಮತ್ತು ಶಂಶಾದ್ ಬೇಗಂ
೧೯೫೮ ಮಾಂಗಲ್ಯ ಭಾಗ್ಯಂ ತಮಿಳು "ನೆಂಜತ್ತಿಲೆ ಅಚ್ಚಂ" ಚಿನ್ನಿ-ಸಂಪತ್ ಜಿ. ರಾಮನಾಥನ್ ಎಂ.ಎಲ್.ವಸಂತಕುಮಾರಿ ಮತ್ತು ಪಿ. ಲೀಲಾ
೧೯೫೮ ಪೆರಿಯ ಕೋವಿಲ್ ತಮಿಳು "ಆಠಾಡಿ ತಲ್ಲದ ತಾತವೈ" ಪಿ. ಎಸ್.ಗೋಪಾಲಕೃಷ್ಣನ್ ಕೆ. ವಿ.ಮಹದೇವನ್ ಕೆ.ಜಮುನಾ ರಾಣಿ ಮತ್ತು ಎಲ್.ಆರ್.ಈಶ್ವರಿ
೧೯೫೯ ಕನ್ ತಿರಂಥತ್ತು ತಮಿಳು "ಪನಂ ಕಾಸು ಪಡೈಚಾಲೆ" ಮುತ್ತುಸಾಮಿ ಪಿಳ್ಳೈ

ಜಯರಾಮನ್
ಟಿ. ಆರ್.ರಾಜಗೋಪಾಲನ್ ಪಿ. ಸುಶೀಲ ಮತ್ತು ಎಸ್. ಜಾನಕಿ
೧೯೫೯ ಒರೇ ವಝಿ ತಮಿಳು "ಕಲ್ವಿ ಕಲ್ವಿ ಎಂಡ್ರು ಪಾಡು" ಕೆ. ಎನ್.ದಂಡಾಯುಧಪಾಣಿ ಪಿಳ್ಳೈ ಆರ್. ಗೋವರ್ಧನಂ ಎಂ.ಎಲ್.ವಸಂತಕುಮಾರಿ ಮತ್ತು ಪಿ. ಲೀಲಾ
೧೯೫೯ ಅಧ್ಯಕ್ಷ ಪಂಚಾಚಾರಂ ತಮಿಳು "ಒಲಿ ಪದೈತ ಕಣ್ಣಿನೈ" ಮುತ್ತುಸ್ವಾಮಿ ಪಿಳ್ಳೈ ಜಿ. ರಾಮನಾಥನ್ ಎಂ.ಎಲ್.ವಸಂತಕುಮಾರಿ ಮತ್ತು (ರಾಧಾ) ಜಯಲಕ್ಷ್ಮಿ
೧೯೫೯ ಶಿವಗಂಗೈ ಸೀಮೈ ತಮಿಳು "ಮುತ್ತು ಪುಗಜ್ ಪದೈತ್ತು" ಕೆ. ಎನ್.ದಂಡಾಯುಧಪಾಣಿ ಪಿಳ್ಳೈ ವಿಶ್ವನಾಥನ್-ರಾಮಮೂರ್ತಿ ಎಸ್. ವರಲಕ್ಷ್ಮಿ ಮತ್ತು (ರಾಧಾ) ಜಯಲಕ್ಷ್ಮಿ
೧೯೬೧ ಸತಿ ಸುಲೋಚನ ತೆಲುಗು "ಜೈ ಜೈ ಜೈ ಮೇಘನಾಧಾ" ವೆಂಪಟಿ ಚಿನ್ನ ಸತ್ಯಂ ಟಿ. ವಿ.ರಾಜು ಕೆ.ಜಮುನಾ ರಾಣಿ ಮತ್ತು ಎಸ್. ಜಾನಕಿ
೧೯೬೩ ಅರಿವಾಲಿ ತಮಿಳು "ವಾಝಿಯ ನೀಡೂಜಿ" ಪಿ. ಎಸ್.ಗೋಪಾಲಕೃಷ್ಣನ್ ಎಸ್. ವಿ.ವೆಂಕಟರಾಮನ್ (ರಾಧಾ) ಜಯಲಕ್ಷ್ಮಿ ಮತ್ತು ಪಿ. ಲೀಲಾ
೧೯೬೩ ಭರೋಸ ಹಿಂದಿ "ಧಡ್ಕಾ ಹೋ ದಿಲ್ ಧಡ್ಕಾ ಗುಜ್ರಾ ಗಲಿ ಸೆ" ಗೋಪಿ ಕೃಷ್ಣ ರವಿ ಲತಾ ಮಂಗೇಶ್ಕರ್ ಮತ್ತು ಆಶಾ ಭೋಂಸ್ಲೆ

ಉಲ್ಲೇಖಗಳು

[ಬದಲಾಯಿಸಿ]
  1. "Vintage Heritage Club to pay tributes to four legendary dancers". The Times of India. 20 June 2017. Archived from the original on 25 November 2017. Retrieved 25 November 2017.
  2. "Thirai Nadanam -Kaala Chulatchiyil Nadana Kalai" [Art of Dancing in changing times]. The Hindu (in Tamil). 27 January 2017. Retrieved 25 November 2017.{{cite web}}: CS1 maint: unrecognized language (link)

ಗ್ರಂಥಸೂಚಿ

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]